Tag: ಗ್ಯಾಂಗ್

  • ಒಬ್ಬಳ ಹಿಂದೆ ಬಿದ್ದ ಇಬ್ಬರು ಹುಡುಗ್ರು – ಪ್ರೀತಿ ವಿಚಾರಕ್ಕೆ ನಡೀತು ಎರಡು ಗ್ಯಾಂಗ್ ಮಧ್ಯೆ ಗುದ್ದಾಟ

    ಒಬ್ಬಳ ಹಿಂದೆ ಬಿದ್ದ ಇಬ್ಬರು ಹುಡುಗ್ರು – ಪ್ರೀತಿ ವಿಚಾರಕ್ಕೆ ನಡೀತು ಎರಡು ಗ್ಯಾಂಗ್ ಮಧ್ಯೆ ಗುದ್ದಾಟ

    ಚೆನ್ನೈ: ಪ್ರೀತಿ ವಿಚಾರಕ್ಕೆ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ತಮಿಳುನಾಡಿನ (Tamil Nadu) ಕಡಲೂರಿನಲ್ಲಿ (Cuddalore) ಖಾಸಗಿ ಕಾಲೇಜು ಒಂದರಲ್ಲಿ ನಡೆದಿದೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ವರುಣ್ ಮತ್ತು ಸುಧಾಕರ್ ಎಂಬಾತ ವಿರುಧಾಚಲಂ ಪಟ್ಟಣದ (Virudhachalam town) ಕಾಲೇಜು ಒಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇದೇ ಕಾಲೇಜಿನಲ್ಲಿ ಓದುತ್ತಿದ್ದ ಹುಡುಗಿಯೊಬ್ಬಳನ್ನು ಇಬ್ಬರು ಪ್ರೀತಿಸುತ್ತಿದ್ದರಿಂದ ಇಬ್ಬರ ನಡುವೆ ಸಮಸ್ಯೆ ಶುರುವಾಗಿದೆ. ಇದಕ್ಕಾಗಿ ವರುಣ್ ಒಂದು ಗ್ಯಾಂಗ್ ಕಟ್ಟಿದರೆ, ಸುಧಾಕರ್ ಮತ್ತೊಂದು ಸ್ನೇಹಿತರ ಗ್ಯಾಂಗ್ ಅನನು ಕಟ್ಟಿದ್ದನು. ಒಂದು ಗ್ಯಾಂಗ್ ವರುಣ್‍ಗೆ ಸಪೋರ್ಟ್ ಮಾಡಿದರೆ, ಮತ್ತೊಂದು ಗ್ಯಾಂಗ್ ಸುಧಾಕರ್‌ಗೆ ಬೆಂಬಲಿಸುತ್ತಿತ್ತು. ಇದೀಗ ಪ್ರೀತಿ ವಿಚಾರಕ್ಕೆ ಈ ಎರಡು ಗ್ಯಾಂಗ್ ನಡುವೆ ಹೊಡೆದಾಟ ನಡೆದಿದೆ.

    ಅಕ್ಟೋಬರ್ 28 ರಂದು ಕಾಲೇಜು ಬಸ್‍ಗಾಗಿ ಕಾಯುತ್ತಿದ್ದ ವೇಳೆ ವರುಣ್ ಮತ್ತು ಸುಧಾಕರ್ ನಡುವೆ ಹುಡುಗಿ ವಿಚಾರವಾಗಿ ವಾಗ್ವಾದ ನಡೆದಿದೆ. ಈ ವೇಳೆ ಇಬ್ಬರ ಸ್ನೇಹಿತರು ಸೇರಿಕೊಂಡು ಹೊಡೆದಾಡಿಕೊಂಡಿದ್ದಾರೆ. ನಂತರ ಪೊಲೀಸರು ಮಧ್ಯೆ ಪ್ರವೇಶಿ ಎರಡು ಗ್ಯಾಂಗ್ ಜಗಳ ಬಿಡಿಸಿದ್ದಾರೆ. ಇದೀಗ ಆರು ಮಂದಿ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಡು ರಸ್ತೆಯಲ್ಲೇ ಜಿ.ಪಂ. ಸದಸ್ಯನಿಗೆ ದೊಣ್ಣೆಯಿಂದ ಹಿಗ್ಗಾಮುಗ್ಗ ಥಳಿಸಿದ್ರು

    ನಡು ರಸ್ತೆಯಲ್ಲೇ ಜಿ.ಪಂ. ಸದಸ್ಯನಿಗೆ ದೊಣ್ಣೆಯಿಂದ ಹಿಗ್ಗಾಮುಗ್ಗ ಥಳಿಸಿದ್ರು

    ಭೋಪಾಲ್: ಹೊಸದಾಗಿ ಚುನಾಯಿತರಾದ ಜಿಲ್ಲಾ ಪಂಚಾಯತ್ ಸದಸ್ಯನ ಮೇಲೆ ಗ್ಯಾಂಗ್ ಒಂದು ದೊಣ್ಣೆಗಳಿಂದ ಹೊಡೆದು, ಒದ್ದು, ಗುದ್ದಿರುವ ಘಟನೆ ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

    ಜಿಲ್ಲಾ ಪಂಚಾಯತ್ ಚುನಾವಣೆಯ ಫಲಿತಾಂಶ ಬಂದ ನಂತರ ಈ ಘಟನೆ ನಡೆದಿದೆ. ರಾಕೇಶ್ ಲೋಧಿ ಅವರು ತಮ್ಮ ಕೆಲವು ಸಹಾಯಕರೊಂದಿಗೆ ನಿಂತಿದ್ದ ವೇಳೆ, ಐದು ಜನರಿದ್ದ ಮಹೇಶ್ ಲೋಧಿಯವರ ಗ್ಯಾಂಗ್ ದೊಣ್ಣೆಯನ್ನು ಹಿಡಿದುಕೊಂಡು ಬಂದು ಏಕಾಏಕಿ ಹಲ್ಲೆ ನಡೆಸಲು ಆರಂಭಿಸಿದ್ದಾರೆ. ಹಾಡಗಲಲ್ಲೇ ನಡು ರಸ್ತೆಯಲ್ಲಿ ಪಂಚ ರಾಕೇಶ್ ಲೋಧಿ ಮೇಲೆ ದೊಣ್ಣೆಯಿಂದ ಹೊಡೆದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಕಾಮನ್‍ವೆಲ್ತ್ ಗೇಮ್ಸ್ 2022: ಎರಡನೇ ದಿನ ಪದಕದ ನಿರೀಕ್ಷೆಯಲ್ಲಿ ಭಾರತ – ಲವ್ಲಿನಾ, ಮೀರಾಬಾಯಿ ಚಾನು ಕಣಕ್ಕೆ

    ವೀಡಿಯೋದಲ್ಲಿ ರಾಕೇಶ್ ಅವರ ಬೆನ್ನು, ಹೊಟ್ಟೆ ಮತ್ತು ತಲೆಯ ಮೇಲೆ ಹೊಡೆಯುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ, ದುಷ್ಕರ್ಮಿಗಳು ಬಿಡದೇ ಮನಬಂದಂತೆ ಥಳಿಸಿದ್ದಾರೆ. ಕೊನೆಗೆ ರಾಕೇಶ್ ಅನ್ನು ಆತನ ಸಹಾಯಕ ಸೋನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಇದನ್ನೂ ಓದಿ: ಶಾಸಕರು ತುಲಾಭಾರ ಮಾಡುವಷ್ಟು ಹಣ ಮಾಡ್ಕೊಂಡಿದ್ದಾರೆ, ಆದರೆ ಅವರಿಗೆ ಆಸ್ಪತ್ರೆ ಬೇಡ: ಚಕ್ರವರ್ತಿ ಸೂಲಿಬೆಲೆ

    Live Tv
    [brid partner=56869869 player=32851 video=960834 autoplay=true]

  • ದಯವಿಟ್ಟು ನನ್ನ ಹೆಂಡತಿಯನ್ನು ನನಗೆ ಕೊಡಿ- ಕಣ್ಣೀರು ಹಾಕಿದ ವರ

    ದಯವಿಟ್ಟು ನನ್ನ ಹೆಂಡತಿಯನ್ನು ನನಗೆ ಕೊಡಿ- ಕಣ್ಣೀರು ಹಾಕಿದ ವರ

    ನೆಲಮಂಗಲ: ದಂಪತಿ ಮದುವೆಯಾಗಿ ಕೇವಲ ಆರೇ ದಿನ ಆಗಿತ್ತು. ಬದುಕಿನ ಸುಂದರ ಕನಸುಗಳನ್ನು ಕಾಣುತ್ತಾ ಇದ್ದರು. ಆದರೆ ಎರಡು ವರ್ಷದ ಪ್ರೀತಿಗೆ ಕಡೆಗೂ ಮದುವೆಯ ಕಂಕಣ ಬಿತ್ತಲ್ಲ ಅನ್ನೋ ಖುಷಿಗಿಂತ ಭಯದಲ್ಲೇ ಇರುವಂತಾಗಿದೆ. ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ 30 ಜನರ ಗ್ಯಾಂಗ್‍ವೊಂದು ನವವಧುವನ್ನು ಕಿಡ್ನಾಪ್ ಮಾಡಿಕೊಂಡು ಹೋಗಿದೆ.

    ದಯವಿಟ್ಟು ನನ್ನ ಹೆಂಡತಿಯನ್ನು ನನಗೆ ಕೊಡಿ. ನನ್ನ ಪತ್ನಿಗೆ ಏನೂ ತೊಂದರೆ ಕೊಡಬೇಡಿ. ನನ್ನವಳನ್ನು ನನ್ನಿಂದ ದೂರ ಮಾಡಬೇಡಿ ಎಂದು ವರನು ತನ್ನ ಅಳಲು ತೊಡಿಕೊಂಡಿದ್ದಾನೆ.

    ಗಂಗಾಧರಯ್ಯ ಅಳಲು ತೋಡಿಕೊಂಡ ವರ. ಜಲಜಾ ಕಿಡ್ನಾಪ್ ಆದ ವಧು. ಇಬ್ಬರೂ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ವಧುವಿನ ಪೋಷಕರ ವಿರೋಧದ ನಡುವೆ ಕಳೆದ ಮೇ 25ರಂದು ತುಮಕೂರಿನ ಸಾಸಲು ಬಳಿಯ ದೇವಾಲಯದಲ್ಲಿ ಮದುವೆಯಾಗಿದ್ದರು. ಹೀಗಾಗಿ ಮದುವೆಗೆ ಯಾವುದೇ ತೊಂದರೆ ಆಗಲ್ಲ ಅಂತ ಈ ಜೋಡಿ ಅಂದುಕೊಂಡಿತ್ತು. ಆದರೆ ಯುವತಿಯ ಪೋಷಕರೇ ಪ್ರೇಮಿಗಳಿಗೆ ಅಡ್ಡಲಾಗಿದ್ದಾರೆ. ಇದನ್ನೂ ಓದಿ: ದೇಶದ ಒಳಿತಿಗಾಗಿ ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿದವರಿಗೆ ಕೊಡುವ ಬೆಲೆ ಇದೆಯೇ?: ಕೇಂದ್ರ ಸರ್ಕಾರಕ್ಕೆ ಡಿಕೆಶಿ ಪ್ರಶ್ನೆ

    ಪೋಷಕರ ವಿರೋಧದ ನಡುವೆ ನೆಲಮಂಗಲದಲ್ಲಿ ಮೇ 30ರಂದು ರಿಜಿಸ್ಟರ್ ಕೂಡ ಮಾಡಿಸಿದ್ದರು. ಊರಲ್ಲೆ ಇದ್ದರೆ ಸಮಸ್ಯೆ ಆಗುತ್ತೆ ಅಂತ ಭಯಗೊಂಡ ಜೋಡಿ, ಬೆಂಗಳೂರಿನ ಬ್ಯಾಡರಹಳ್ಳಿಯ ಅಕ್ಕನ ಮನೆಗೆ ಬಂದಿತ್ತು. ಆದರೆ ಮಧ್ಯರಾತ್ರಿ ಪೊಲೀಸರ ಸೋಗಿನಲ್ಲಿ ಬಂದು ಹಲ್ಲೆ ಮಾಡಿ ಯುವತಿಯನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾರೆ ಅಂತ ವರ ಆರೋಪಿಸಿದ್ದಾರೆ. ಇದನ್ನೂ ಓದಿ: ಸಚಿವ ಬಿ.ಸಿ ನಾಗೇಶ್ ಮನೆ ಮೇಲೆ NSUI ದಾಳಿ

    ಪ್ರೀತಿಸಿದ ಹೃದಯಗಳ ಜೊತೆ ಕೊನೆವರೆಗೂ ಖುಷಿಯಾಗಿರಬೇಕು ಅಂದುಕೊಂಡಿದ್ದ ಈ ಜೋಡಿಗೆ ಪೋಷಕರೇ ವಿಲನ್ ಆಗಿದ್ದಾರೆ. ಸದ್ಯ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

  • ಪುಷ್ಪ ಸಿನಿಮಾ ಮಾದರಿಯಲ್ಲಿ ರಕ್ತಚಂದನ ಸಾಗಾಟ- ಶ್ವಾನದೊಂದಿಗೆ ರೋಚಕ ಆಪರೇಷನ್

    ಪುಷ್ಪ ಸಿನಿಮಾ ಮಾದರಿಯಲ್ಲಿ ರಕ್ತಚಂದನ ಸಾಗಾಟ- ಶ್ವಾನದೊಂದಿಗೆ ರೋಚಕ ಆಪರೇಷನ್

    ಬೆಂಗಳೂರು: ಪುಷ್ಪ ಸಿನಿಮಾ ಮಾದರಿಯಲ್ಲಿ ಖತರ್ನಾಕ್ ಗ್ಯಾಂಗ್ ರಕ್ತಚಂದನ ಸಾಗಾಟ ನಡೆಸುತ್ತಿದ್ದ ವೇಳೆ ಅರಣ್ಯ ಇಲಾಖೆಯ ಶ್ವಾನವೊಂದು ಅವರ ಇಡೀ ಪ್ಲ್ಯಾನ್‍ನ್ನು ತಲೆಕೆಳಗೆ ಮಾಡಿಬಿಟ್ಟಿದೆ.

    ಪುಷ್ಪ ಸಿನಿಮಾದ ರಕ್ತಚಂದನದ ಕಳ್ಳತನದ ಸೀನ್ ಅನ್ನು ಈಗ ನಕಲು ಮಾಡಿಕೊಂಡು ಖತರ್ನಾಕ್ ಗ್ಯಾಂಗ್‍ಗಳು ಕಳ್ಳತನ ಮಾಡಲಾರಂಭಿಸಿದೆ. ಈಗ ಅಂಥದ್ದೇ ಗ್ಯಾಂಗ್‍ನಿಂದ 28 ಲಕ್ಷ ಮೌಲ್ಯದ ರಕ್ತಚಂದನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ರಾತ್ರಿ ವೇಳೆಯಲ್ಲಿ ಬೆಂಗಳೂರು ಗ್ರಾಮಾಂತರದ ಕಟ್ಟಿಗೇನಹಳ್ಳಿಯಲ್ಲಿ ತರಕಾರಿ ಕ್ರೇಟ್ ಹಾಕಿ ಕೆಳಭಾಗದಲ್ಲಿ ರಕ್ತಚಂದನ ಹಾಕಿ ಸಾಗಾಟ ಮಾಡುತ್ತಿದ್ದ ಗ್ಯಾಂಗ್‍ನ್ನು ಅರಣ್ಯ ಇಲಾಖೆಯ ಗಾರ್ಡ್ ಮಲ್ಲಿಕಾರ್ಜುನ್ ಚೇಸ್ ಮಾಡಿದ್ದಾರೆ. ಇದನ್ನೂ ಓದಿ: ದೇಶದ ಒಳಿತಿಗಾಗಿ ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿದವರಿಗೆ ಕೊಡುವ ಬೆಲೆ ಇದೆಯೇ?: ಕೇಂದ್ರ ಸರ್ಕಾರಕ್ಕೆ ಡಿಕೆಶಿ ಪ್ರಶ್ನೆ

    ಅವರ ಜೊತೆ ಇದ್ದ ಇಲಾಖೆ ಶ್ವಾನ ಸೀಸರ್ ಅಲಿಯಾಸ್ ಸ್ವೀಟಿ ಕೂಡ ಈ ಕಳ್ಳರನ್ನು ಚೇಸ್ ಮಾಡಿದೆ. ಗಾಬರಿಯಾಗಿ ಅಡ್ಡಾದಿಡ್ಡಿ ಗಾಡಿ ಚಲಾಯಿಸಿದ ಕಳ್ಳರು, ಬಯಲಿನಲ್ಲಿ ಗಾಡಿ ನಿಲ್ಲಿಸಿ ಗಾಡಿ ಲಾಕ್ ಮಾಡಿ ಕೀ ಸಮೇತ ಪರಾರಿಯಾಗಿದ್ದಾರೆ. ಸದ್ಯ 28 ಲಕ್ಷ ಮೌಲ್ಯದ 497 ಕೆಜಿ ರಕ್ತಚಂದನ ಮರದ ತುಂಡು, 61 ಕೆಜಿ ಚಿಕ್ಕ ಚಕ್ಕೆಯನ್ನು ಜಪ್ತಿಮಾಡಿದ್ದಾರೆ. ಅರಣ್ಯ ಇಲಾಖೆಯ ಹಿರಿಯ ಡಿಸಿಎಫ್ ಗಂಗಾಧರ್, ಸಿಬ್ಬಂದಿಯ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಸಚಿವ ಬಿ.ಸಿ ನಾಗೇಶ್ ಮನೆ ಮೇಲೆ NSUI ದಾಳಿ

    ಸದ್ಯ ಕಮ್ಮಗೊಂಡನಹಳ್ಳಿಯಲ್ಲಿ ರಕ್ತಚಂದನ ಇಡಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಬಲೆಬೀಸಲಾಗಿದೆ.

  • ರಾಜಧಾನಿಯಲ್ಲಿ ಆಕ್ಟೀವ್ ಆದ ಗಡಾರಿ ಗ್ಯಾಂಗ್!

    ರಾಜಧಾನಿಯಲ್ಲಿ ಆಕ್ಟೀವ್ ಆದ ಗಡಾರಿ ಗ್ಯಾಂಗ್!

    ಬೆಂಗಳೂರು: ನೆಲಮಂಗಲದ ಗ್ರಾಮಾಂತರ ಪ್ರದೇಶಗಳಲ್ಲಿ ಗ್ಯಾಂಗ್‍ವೊಂದು ಸಣ್ಣದೊಂದು ಗಡಾರಿ ಮೂಲಕ ಯಾರಿಗೂ ಸಂಶಯಬಾರದಂತೆ ಅಂಗಡಿಗಳ ಶೆಟರ್ ಓಪನ್ ಮಾಡಿ ಕಳ್ಳತನ ಮಾಡಿದೆ.

    ನೆಲಮಂಗಲ ತಾಲೂಕಿನ ಬೂದಿಹಾಲ್ ಗ್ರಾಮದ ಸೋಮಣ್ಣ ಎಂಬುವವರ ಬೈಲಾಂಜನೇಯ ಪ್ರಾವಿಷನ್ ಸ್ಟೋರ್ ಶಟರ್ ಮುರಿದು, ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ. ಇನ್ನೂ ಮಧ್ಯರಾತ್ರಿ ಕಾರ್ಯಾಚರಣೆ ನಡೆಸುವ ಮೂವರು ಕಳ್ಳರು ಸಿಸಿ ಕ್ಯಾಮೆರಾ ನೋಡಿಕೊಂಡು ಯಾವುದೇ ಭಯವಿಲ್ಲದೆ ಕಳ್ಳತನ ಮಾಡಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಹಿಜಬ್ ಹೈಡ್ರಾಮಾ – ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಆರು ಯುವಕರು ವಶ

    ಪ್ರಾವಿಷನ್ ಸ್ಟೊರ್‍ನಲ್ಲಿದ್ದ ಹಣ, ತಂಬಾಕು ಉತ್ಪನ್ನ ಹಾಗೂ ಮೊಬೈಲ್ ದೋಚಿ ಕಳ್ಳರು ಪರಾರಿಯಾಗಿದ್ದರೆ. ಕಳ್ಳರ ಕರಾಮತ್ತಿನಿಂದ ಜನರು ಆತಂಕಕ್ಕೆ ಒಳಗಾಗಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಅನ್ಯಜಾತಿ ಹುಡುಗಿಯೊಂದಿಗೆ ಮಗ ಎಸ್ಕೇಪ್ – ತಾಯಿಯನ್ನು ಲೈಟ್ ಕಂಬಕ್ಕೆ ಕಟ್ಟಿ ಗ್ಯಾಂಗ್‍ನಿಂದ ಹಲ್ಲೆ

    ಅನ್ಯಜಾತಿ ಹುಡುಗಿಯೊಂದಿಗೆ ಮಗ ಎಸ್ಕೇಪ್ – ತಾಯಿಯನ್ನು ಲೈಟ್ ಕಂಬಕ್ಕೆ ಕಟ್ಟಿ ಗ್ಯಾಂಗ್‍ನಿಂದ ಹಲ್ಲೆ

    ಚೆನ್ನೈ: ಅನ್ಯ ಜಾತಿಯ ಹುಡುಗಿಯೊಂದಿಗೆ ಮಗ ಓಡಿಹೋಗಿದ್ದಕ್ಕೆ ಆತನ 45 ವರ್ಷದ ತಾಯಿಯನ್ನು ಲೈಟ್ ಕಂಬಕ್ಕೆ ಕಟ್ಟಿ ಗ್ಯಾಂಗ್‍ವೊಂದು ಹಲ್ಲೆ ನಡೆಸಿರುವ ಘಟನೆ ತಮಿಳುನಾಡಿನ ವಿರುದುನಗರ ಜಿಲ್ಲೆಯ ತಿರುಚುಲಿ ಬ್ಲಾಕ್‍ನ ಕೆ.ವಾಗೈಕುಲಂ ಗ್ರಾಮದಲ್ಲಿ ನಡೆದಿದೆ.

    ಸಂತ್ರಸ್ತೆಯನ್ನು ಮೀನಾಕ್ಷಿ ಎಂದು ಗುರುತಿಸಲಾಗಿದ್ದು, ಚಿಕಿತ್ಸೆಗಾಗಿ ಆಕೆಯನ್ನು ಅರುಪ್ಪುಕೊಟ್ಟೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಡುಗಿಯ ತಾಯಿ ಸೇರಿದಂತೆ 14 ಮಂದಿ ತಮ್ಮ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಮೀನಾಕ್ಷಿ ತಾಯಿ ದೂರು ನೀಡಿದ್ದು, ಈ ದೂರಿನ್ವಯ ಪರಾಳಚಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    POLICE JEEP

    ಜನವರಿ 22ರಂದು ಮೀನಾಕ್ಷಿ ಅವರ ಮಗ ಅದೇ ಗ್ರಾಮದ ಬೇರೆ ಜಾತಿ ಹುಡುಗಿಯೊಂದಿಗೆ ಓಡಿಹೋಗಿ, ಇಬ್ಬರು ವಿವಾಹವಾಗಿದ್ದಾರೆ. ಅಲ್ಲದೇ ಆಶ್ರಯ ಕೋರಿ ಅರುಪ್ಪುಕೊಟ್ಟೈ ಎಲ್ಲಾ ಮಹಿಳಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದಾರೆ. ಇದನ್ನೂ ಓದಿ: ಮಗಳ ದಾಂಪತ್ಯ ಸರಿಪಡಿಸಲು ರಜನಿಕಾಂತ್ ಸರ್ಕಸ್

    ಇದಾದ ಮೂರು ದಿನಗಳ ನಂತರ ಅಂದರೆ ಜನವರಿ 25 ರಂದು ಹುಡುಗಿಯ ಸಂಬಂಧಿಕರು ಮತ್ತು ಇತರರು ಮೀನಾಕ್ಷಿ ಅವರ ಮನೆಗೆ ನುಗ್ಗಿ ಅವಳನ್ನು ಹೊರಗೆಳೆದು, ಲೈಟ್ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ನನ್ನ ಟ್ವಿಟ್ಟರ್ ರೀಚ್ ಇದ್ದಕ್ಕಿದ್ದಂತೆ ಕಡಿಮೆಯಾಗಿದೆ – ದಾಖಲೆ ಮುಂದಿಟ್ಟು ಪರಾಗ್‍ಗೆ ರಾಹುಲ್ ಪತ್ರ

  • ಅತ್ಯಾಚಾರ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಗ್ಯಾಂಗ್ ಅರೆಸ್ಟ್

    ಅಮರಾವತಿ: 30 ಕ್ಕೂ ಹೆಚ್ಚು ಅತ್ಯಾಚಾರ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗ್ಯಾಂಗ್‍ವೊಂದನ್ನು ನಾಲ್ಕು ತಿಂಗಳ ಸುದೀರ್ಘ ತನಿಖೆಯ ನಂತರ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪೊಲೀಸರು ಬಂಧಿಸಿ ಯಶಸ್ವಿಯಾಗಿದ್ದಾರೆ.

    ಕಳೆದ ಕೆಲ ದಿನಗಳಿಂದ ಗುಂಟೂರಿನಲ್ಲಿ ಬೀಡುಬಿಟ್ಟಿದ್ದ ಗ್ಯಾಂಗ್‍ವೊಂದು ಸರಗಳ್ಳತನ, ಅತ್ಯಾಚಾರ ಎಸಗುತ್ತಿತ್ತು. ಸೆಪ್ಟೆಂಬರ್‍ನಲ್ಲಿ ಈ ಗ್ಯಾಂಗ್ ದಂಪತಿ ಮೇಲೆ ದಾಳಿ ನಡೆಸಿದ್ದು, ಪತಿ ಮೇಲೆ ಹಲ್ಲೆ ನಡೆಸಿ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಇದೇ ತರಹದ ಘಟನೆಗಳಲ್ಲಿ ಇಬ್ಬರು ದಂಪತಿ ಮೇಲೆ ಈ ರೀತಿ ದಾಳಿ ಮಾಡಿ ದರೋಡೆ ಮಾಡಿದ್ದರು. ಈ ಹಿಂದೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಓರ್ವ ಯುವಕನ ಮೇಲೆ ಇವರು ಹಲ್ಲೆ ನಡೆಸಿದ್ದು, ಅವನ ತಾಯಿಯ ಮೇಲೆ ಅತ್ಯಾಚಾರವೆಸಗಿದ್ದರು. ಇದನ್ನೂ ಓದಿ: ರೈತ ಗೀತೆ ಮೂಲಕ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್‌ ಚಾಲನೆ

    ಪೊಲೀಸರು ಬೆರಳಚ್ಚುಗಳ ಆಧಾರದ ಮೇಲೆ ಗ್ಯಾಂಗ್‍ನಲ್ಲಿರುವವರನ್ನು ಗುರುತಿಸಿದ್ದು, ಅವರನ್ನು ಕರ್ನೂಲ್‍ನ ಪಾಣ್ಯಂ ಪ್ರದೇಶದಲ್ಲಿ ಪತ್ತೆ ಮಾಡಲಾಯಿತು. ಇದುವರೆಗೆ ಯಾವುದೇ ಸುಳಿವುಗಳಿಲ್ಲದ ಕಠಿಣ ಪ್ರಕರಣವಾಗಿದ್ದು, ನಾವು ಎಡ್ಲಪಾಡು ದರೋಡೆ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದೇವೆ. ಮೆಡಿಕೊಂಡೂರು ನಗರ ಜಿಲ್ಲೆಯ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಭೇದಿಸಲು ಇದು ಸಾಧ್ಯವಾಗಿದೆ. ಗ್ಯಾಂಗ್‍ನ ಆರು ಜನ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಇಬ್ಬರು ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ಗುಂಟೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ವಿಶಾಲ್ ಗುನ್ನಿ ತಿಳಿಸಿದರು. ಇದನ್ನೂ ಓದಿ: ರಾಜ್ಯದ ಕೋವಿಡ್ ವಾರ್ ರೂಮ್​ಗೆ ರಾಷ್ಟ್ರ ಪ್ರಶಸ್ತಿ

  • ನಡುರಸ್ತೆಯಲ್ಲಿ ಅಮ್ಮ, ಮಗಳಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ಯಾಂಗ್

    ನಡುರಸ್ತೆಯಲ್ಲಿ ಅಮ್ಮ, ಮಗಳಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ಯಾಂಗ್

    ನವದೆಹಲಿ: 38 ವರ್ಷದ ಮಹಿಳೆ ಹಾಗೂ ಅವರ ಪುತ್ರಿ ಮೇಲೆ ನಡುರಸ್ತೆಯಲ್ಲಿ ಗ್ಯಾಂಗ್‍ವೊಂದು ದಾಳಿ ಮಾಡಿರುವ ಘಟನೆ ದೆಹಲಿಯ ಶಾಲಿಮಾರ್ ಬಾಗ್ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ನವೆಂಬರ್ 19ರಂದು ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೀಡಿಯೋದಲ್ಲಿ ಮಹಿಳೆ ಕಾರನ್ನು ಪಾರ್ಕ್ ಮಾಡಿದಾಗ ಅವರ ಮಗಳು ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ಏಕಾಏಕಿ ಇಬ್ಬರು ಮಹಿಳೆಯರು ಸೇರಿದಂತೆ ಇಬ್ಬರು ಪುರುಷರು ಮಹಿಳೆಯ ಪುತ್ರಿ ಮೇಲೆ ದೈಹಿಕವಾಗಿ ಹಲ್ಲೆ ಮಾಡಲು ಆರಂಭಿಸುತ್ತಾರೆ. ಈ ವೇಳೆ ಮಗಳನ್ನು ರಕ್ಷಿಸಲು ಮುಂದಾದ ತಾಯಿಗೂ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪಾರ್ಕಿಂಗ್ ಪ್ರದೇಶದಲ್ಲಿ ಈ ಗ್ಯಾಂಗ್ ದೊಣ್ಣೆಯಿಂದ ಹೊಡೆಯುವುದು, ಕಾಲಿನಿಂದ ತೀವ್ರವಾಗಿ ಒದೆಯುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಮುಖ್ಯಮಂತ್ರಿ ತೀರ್ಮಾನಕ್ಕೆ ಬದ್ಧ: ಎಸ್.ಆರ್ ವಿಶ್ವನಾಥ್

    ಘಟನೆ ಬಳಿಕ ಮಹಿಳೆ ಹಾಗೂ ಆಕೆಯ ಪುತ್ರಿ ಆಸ್ಪತ್ರೆಗೆ ದಾಖಲಿಸಲಾಗಿ ಇದೀಗ ಚೇತರಿಸಿಕೊಂಡು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡು ಬಂದ ಇಬ್ಬರು ಆರೋಪಿ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದು, ಮತ್ತಿಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ನನ್ನ ಸೇವೆಯನ್ನು ಸಹಿಸಲಾಗದೆ ಕೊಲೆಗೆ ಸಂಚು: ಎಸ್.ಆರ್ ವಿಶ್ವನಾಥ್

    ಹಲ್ಲೆ ನಡೆಸಿರುವ ಆರೋಪಿಗಳು ಎಎಪಿ ಶಾಸಕಿ ಬಂದಾನ ಕುಮಾರಿ ಅವರ ಬೆಂಬಲಿಗಾರಾಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಆದರೆ ಈ ಆರೋಪ ಕುರಿತಂತೆ ಪ್ರತಿಕ್ರಿಯಿಸಿರು ಬಂದಾನ ಕುಮಾರಿ ಅವರು, ಮಹಿಳೆ ನನ್ನ ನೆರೆ ಮನೆಯಲ್ಲಿ ವಾಸಿಸುತ್ತಾಳೆ. ಆಕೆ ಯಾವಾಗಲೂ ನನ್ನ ಮೇಲೆ ಆರೋಪ ಮಾಡುತ್ತಲೇ ಇರುತ್ತಾಳೆ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

  • ನಕಲಿ ನೋಟುಗಳನ್ನು ಜೆರಾಕ್ಸ್ ಮಾಡಿ ವಂಚನೆ ಮಾಡುತ್ತಿದ್ದ ಗ್ಯಾಂಗ್ ಅಂದರ್

    ನಕಲಿ ನೋಟುಗಳನ್ನು ಜೆರಾಕ್ಸ್ ಮಾಡಿ ವಂಚನೆ ಮಾಡುತ್ತಿದ್ದ ಗ್ಯಾಂಗ್ ಅಂದರ್

    – 6 ಕೋಟಿ ಮೌಲ್ಯದ ನಕಲಿ ನೋಟುಗಳು ವಶಕ್ಕೆ

    ಬೆಂಗಳೂರು: ನಿಷೇಧಗೊಂಡಿರುವ ನೋಟುಗಳ ಬದಲಾವಣೆ ಮಾಡುತ್ತೇವೆಂದು ಬ್ಲಾಕ್ ಅಂಡ್ ವೈಟ್ ದಂಧೆ ನಡೆಸುತ್ತಿದ್ದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 6 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಮೊದಲಿಗೆ 35 ಲಕ್ಷ ಅಸಲಿ ನೋಟುಗಳನ್ನು ತಂದು ಬ್ಲಾಕ್ ಅಂಡ್ ವೈಟ್ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, 1 ಸಾವಿರ 500 ಮುಖಬೆಲೆಯ 70 ಲಕ್ಷ ಅಸಲಿ ನೋಟುಗಳ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಮತ್ತಷ್ಟು ಹಣ ಕಾಸರಗೋಡಿನಲ್ಲಿದೆ ಎಂದು ಬಹಿರಂಗಪಡಿಸಿದ್ದಾರೆ. ಹೀಗಾಗಿ ಕಾಸರಗೋಡಿಗೆ ಹೊರಟ ಪೊಲೀಸರಿಗೆ 6 ಕೋಟಿ ಜೆರಾಕ್ಸ್ ನೋಟುಗಳು ಪತ್ತೆಯಾಗಿದೆ. ಜೊತೆಗೆ 16 ಮೂಟೆ ಪೇಪರ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಮಾರ್ಚ್ ಅಂತ್ಯದ ವೇಳೆಗೆ ಹುಬ್ಬಳ್ಳಿ ಸೇರಿ 13 ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಸಿದ್ಧತೆ

    ಈ ಪ್ರಕರಣ ಕುರಿತಂತೆ ಮಂಜುನಾಥ್, ದಯಾನಂದ ಸೇರಿ 7 ಮಂದಿ ಆರೋಪಿಗಳನ್ನು ಬಂಧಿಸಿ ಗೋವಿಂದಪುರ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇವರಲ್ಲಿ ಮತ್ತೋರ್ವ ಆರೋಪಿ ವೆಂಕಟೇಶ್ ಬಿಬಿಎಂಪಿಯಲ್ಲಿ ಸಬ್ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಎಂಬ ವಿಚಾರ ತಿಳಿದು ಬಂದಿದೆ. ಇದನ್ನೂ ಓದಿ: BJP, RSS ವಿರುದ್ಧ ಹೋರಾಡಲು ಪಕ್ಷದಲ್ಲಿ ಏಕತೆ ಇರಬೇಕು: ಸೋನಿಯಾ ಗಾಂಧಿ

  • ಫ್ಲೈಟ್‍ನಲ್ಲಿ ಬಂದು ಸರಗಳ್ಳತನ, ಟ್ರೈನ್‌ನಲ್ಲಿ ಪರಾರಿ- ಖತರ್ನಾಕ್ ಖದೀಮರು ಅಂದರ್

    ಫ್ಲೈಟ್‍ನಲ್ಲಿ ಬಂದು ಸರಗಳ್ಳತನ, ಟ್ರೈನ್‌ನಲ್ಲಿ ಪರಾರಿ- ಖತರ್ನಾಕ್ ಖದೀಮರು ಅಂದರ್

    – 3 ವರ್ಷಕ್ಕೊಮ್ಮೆ ಒಂದೊಂದು ರಾಜಧಾನಿಗೆ ಎಂಟ್ರಿ
    – ಇರಾನಿ, ಬವೇರಿಯಾ ಅಲ್ಲ, ಉತ್ತರ ಪ್ರದೇಶದ ಶಾಮ್ಲಿ ಗ್ಯಾಂಗ್

    ಬೆಂಗಳೂರು: ಮೂರು ವರ್ಷಕ್ಕೊಮ್ಮೆ ಒಂದೊಂದು ರಾಜಧಾನಿಗೆ ಎಂಟ್ರಿ ಕೊಟ್ಟು ಈ ಗ್ಯಾಂಗ್ ಸರಗಳ್ಳತನ ಮಾಡುತ್ತದೆ. ಫ್ಲೈಟ್ ನಲ್ಲಿ ಬಂದು ಕಳ್ಳತನ ಮಾಡಿ ಮರಳಿ ರೈಲಿನಲ್ಲಿ ಈ ಗ್ಯಾಂಗ್ ತೆರಳುತ್ತಿತ್ತು. ಈ ಮೂಲಕ ಫುಲ್ ಐಷಾರಾಮಿ ಜೀವನ ನಡೆಸುತ್ತಿದ್ದರು. ಪೊಲೀಸರೂ ಎಷ್ಟೇ ಪ್ರಯತ್ನಿಸಿದರೂ ಈ ಗ್ಯಾಂಗ್ ಸಿಕ್ಕಿರಲಿಲ್ಲ. ಇದೀಗ ಪೊಲೀಸರು ಕೊನೆಗೂ ಉತ್ತರ ಪ್ರದೇಶದಲ್ಲಿ ಬಂಧಿಸಿದ್ದಾರೆ.

    ಬ್ಲ್ಯಾಕ್ ಪಲ್ಸರ್ ನಲ್ಲಿ ಬಂದಿದ್ದ ಖದೀಮರನ್ನು ಕಡೆಗೂ ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ. ಅರ್ಜುನ್ ಕುಮಾರ್ ಮತ್ತು ರಾಥೋಡ್ ಬಂಧಿತ ಆರೋಪಿಗಳು. ಕೆಜಿಗಟ್ಟಲೆ ಚಿನ್ನಾಭರಣ ಕದ್ದು ಊರಲ್ಲಿ ಮಾರಾಟ ಮಾಡಿ ಮನೆಗೆ ವಾಷಿಂಗ್ ಮಷೀನ್, ಫ್ರಿಡ್ಜ್ ಸೇರಿ ಗೃಹ ಉಪಯೋಗಿ ವಸ್ತುಗಳನ್ನ ತಂದಿದ್ದರು. ಉಳಿದ ಹಣದಲ್ಲಿ ದಿಲ್ದಾರ್ ಜೀವನ ನಡೆಸುತ್ತಿದ್ದರು.

    ಬೆಂಗಳೂರು ಗ್ರಾಮಾಂತರ ಪೊಲೀಸರ ನಿದ್ದೆಗೆಡಿಸಿದ್ದ ಐನಾತಿಗಳು ಕೊನೆಗೂ ಬಲೆಗೆ ಬಿದ್ದಿದ್ದಾರೆ. ಬರೋಬ್ಬರಿ 19 ಕಡೆ ಸರಗಳ್ಳತನ ಮಾಡಿ ಪೊಲೀಸರಿಗೆ ಈ ಗ್ಯಾಂಗ್ ಚೆಳ್ಳೆಹಣ್ಣು ತಿನ್ನಿಸಿತ್ತು. ಇದು ಇರಾನಿ, ಬವೇರಿಯಾ ಗ್ಯಾಂಗ್ ಅಲ್ಲ, ಬದಲಿಗೆ ಇದು ಉತ್ತರ ಪ್ರದೇಶದ ಶಾಮ್ಲಿ ಗ್ಯಾಂಗ್. ಉತ್ತರ ಪ್ರದೇಶ, ಪಂಜಾಬ್ ನಲ್ಲಿ ಈ ಶಾಮ್ಲಿ ಗ್ಯಾಂಗ್‍ನದ್ದೇ ಹವಾ. ಇಡೀ ಊರಿಗೆ ಊರೇ ಕಳ್ಳತನದ ಕಸಬು. ಪೊಲೀಸರ ಚಲನವಲನ ಅಬ್ಸರ್ವ್ ಮಾಡಿ ಈ ಗ್ಯಾಂಗ್ ಸರಗಳ್ಳತನ ಮಾಡುತ್ತಿತ್ತು.

    ಜೂನ್ 30ರಂದು ಸಿಎಂ ಕಾರ್ಯಕ್ರಮ, ಸಿಎಂ ಕಾರ್ಯಕ್ರಮದ ಬಂದೋಬಸ್ತ್ ನಲ್ಲಿ ಪೊಲೀಸರು ಬ್ಯುಸಿಯಾಗಿದ್ದರು. ಈ ಸಮಯವನ್ನೇ ಬಳಸಿಕೊಂಡು ಹೊರವಲಯದಲ್ಲಿ ಒಂದೇ ದಿನ 19 ಕಡೆ ಸರಗಳ್ಳತನ ಮಾಡಿದ್ದರು. ಸರ್ಜಾಪುರ, ಅನುಗೊಂಡನಹಳ್ಳಿ, ಸೂಲಿಬೆಲೆ, ತಿರುಮಲಶೆಟ್ಟಿಹಳ್ಳಿ, ಹೊಸಕೋಟೆ, ದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿದ್ದರು.

    ಕಳೆದ ಮೂರು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಒಂದೇ ದಿನ ಕೆಜಿಗಟ್ಟಲೆ ಚಿನ್ನಾಭರಣ ಕಳ್ಳತನ ಮಾಡಿದ್ದರು. ಇದಕ್ಕೂ ಮೊದಲು ರಾಜಾಜಿನಗರ ಹಾಗೂ ಚಂದ್ರಾ ಲೇಔಟ್ ನಲ್ಲಿ ಕಳ್ಳತನ ಮಾಡಿದ್ದರು. ಒಮ್ಮೆ ಸರ ಕಳ್ಳತನ ಮಾಡಿಕೊಂಡು ಹೋದರೆ ಮತ್ತೆ ಮೂರು ವರ್ಷಕ್ಕೆ ಈ ಗ್ಯಾಂಗ್ ಎಂಟ್ರಿ ಕೊಡುತ್ತೆ. ಎಲ್ಲೇ ಹೋಗಲಿ ಫ್ಲೈಟ್ ನಲ್ಲೇ ಓಡಾಟ, ಕಳ್ಳತನದ ಬಳಿಕ ಚಿನ್ನವನ್ನು ಫ್ಲೈಟ್ ನಲ್ಲಿ ಸಾಗಿಸುವುದು ಕಷ್ಟ ಎಂದು ರೈಲಿನಲ್ಲಿ ಹೋಗುತ್ತಿದ್ದರು.

    ಪ್ಲ್ಯಾನ್ ಹೇಗೆ ಮಾಡ್ತಿದ್ರು?
    ಅರ್ಜುನ್ ಕುಮಾರ್ ಈ ಗ್ಯಾಂಗ್ ನ ಮಾಸ್ಟರ್ ಮೈಂಡ್ ಆಗಿದ್ದು, ಗ್ಯಾಂಗ್ ನಲ್ಲಿ ಕೇವಲ ಇಬ್ಬರಿಂದಲೇ ಕೃತ್ಯ ನಡೀತಿತ್ತು. ಸರಗಳ್ಳತನಕ್ಕೆ ಪ್ಲಾನಿಂಗ್ ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತೆ. ಜೂನ್ ತಿಂಗಳಲ್ಲೇ ರಾಜಧಾನಿಗೆ ಎಂಟ್ರಿ ಕೊಟ್ಟಿದ್ದ ಈ ಸರಗಳ್ಳರು, ಸರ್ಜಾಪುರದ ಬಳಿ ಬೈಕ್ ಕದ್ದು ಸ್ನೇಹಿತನೊಬ್ಬನ ರೂಮ್ ನಲ್ಲಿ ಠಿಕಾಣಿ ಹೂಡಿದ್ದರು. 220 ಪಲ್ಸರ್ ಬೈಕ್ ಕದ್ದು ನಗರದ ಹೊರವಲಯ ಪೂರ್ತಿ ರೌಂಡ್ಸ್ ಹಾಕಿದ್ದರು. ಇದೇ ಸಮಯದಲ್ಲಿ ಸ್ನೇಹಿತನ ಮೂಲಕ ಸಿಎಂ ಕಾರ್ಯಕ್ರಮ, ಪೊಲೀಸ್ ಬಂದೋಬಸ್ತ್ ಬಗ್ಗೆ ಮಾಹಿತಿ ಪಡೆದಿದ್ದರು. ಜೂನ್ ಮೂವತ್ತರಂದೇ ಬೆಳಗ್ಗೆ ಎರಡು ಹೆಲ್ಮೆಟ್ ಗಳನ್ನು ಕದ್ದು ಕಾರ್ಯಾಚರಣೆ ನಡೆಸಿದ್ದರು.

    ಅರೆಸ್ಟ್ ಆಗಿದ್ದು ಹೇಗೆ?
    ಮೊದಲೇ ಮ್ಯಾಪಿಂಗ್ ಮಾಡಿದ್ದ ಆರೋಪಿಗಳು, ಅದರಂತೆ ಕಾರ್ಯಾಚರಣೆಗೆ ಇಳಿದಿದ್ದರು. ಕೊನೆಗೆ ಸರಗಳ್ಳತನ ಮಾಡಿ ಸಂಜೆ ವೇಳೆಗೆ ಮತ್ತೆ ಸರ್ಜಾಪುರದ ರೂಮ್ ಗೆ ಎಂಟ್ರಿಯಾಗಿದ್ದರು. ಬಳಿಕ ಚಿನ್ನಾಭರಣ ಎತ್ತಿಕೊಂಡು ಬೈಕ್ ನ್ನು ಮಾರ್ಗಮಧ್ಯೆ ಬಿಟ್ಟು ಅಂದೇ ರಾತ್ರಿಯೇ ರೈಲಿನಲ್ಲಿ ಎಸ್ಕೇಪ್ ಆಗಿದ್ದರು. ಮೊದಲಿಗೆ ಆಶ್ರಯ ಕೊಟ್ಟವನನ್ನು ಪತ್ತೆಮಾಡಿ, ಬಳಿಕ ಪಂಜಾಬ್ ಗೆ ಕರೆದೊಯ್ದು, ವೀಡಿಯೋ ಕಾಲ್ ಮಾಡಿಸಿ, ಆರೋಪಿಗಳನ್ನು ಬಂಧಿಸಿ ಕರೆತರಲಾಗಿದೆ. ಸದ್ಯ ಆರೋಪಿಗಳಿಂದ ಕದ್ದ ಚಿನ್ನವನ್ನು ವಶಪಡಿಸಿಕೊಳ್ಳಲು ಪೊಲೀಸರು ಯತ್ನಿಸುತ್ತಿದ್ದಾರೆ.