Tag: ಗೌರೀಶ್ ಅಕ್ಕಿ

  • Bigg Boss Kannada10: ಬಿಗ್ ಬಾಸ್ ವೇದಿಕೆಯಲ್ಲಿ ಗೌರೀಶ್ ಅಕ್ಕಿ ಪಾಸ್

    Bigg Boss Kannada10: ಬಿಗ್ ಬಾಸ್ ವೇದಿಕೆಯಲ್ಲಿ ಗೌರೀಶ್ ಅಕ್ಕಿ ಪಾಸ್

    ಪ್ರತಿ ಸೀಸನ್ ನಲ್ಲೂ ಪತ್ರಕರ್ತರಿಗೂ ಬಿಗ್ ಬಾಸ್ ಮನೆ ಒಳಗೆ ಹೋಗಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ಬಾರಿ ಗೌರೀಶ್ ಅಕ್ಕಿ (Gaurish Akki) ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಶೇಕಡಾ 82ರಷ್ಟು ಮತವನ್ನು ಪಡೆಯುವ ಮೂಲಕ ಬಿಗ್ ಬಾಸ್ ವೇದಿಕೆಯಲ್ಲಿ ಗೌರೀಶ್ ಪಾಸಾಗಿದ್ದಾರೆ. ಮನೆಯಲ್ಲಿ ಒಂದಷ್ಟನ್ನು ಕಲಿತುಕೊಳ್ಳಲು ಹೋಗುತ್ತಿರುವುದಾಗಿ ಗೌರೀಶ್ ತಮ್ಮ ಮಾತಿನಲ್ಲಿ ತಿಳಿಸಿದರು. ಬಿಗ್ ಬಾಸ್ ಮನೆ ಒಳಗೆ ಕಾಲಿಟ್ಟ 10ನೇ ಸ್ಪರ್ಧಿ ಇವರಾಗಿದ್ದಾರೆ.

    ಬಿಗ್‌ಬಾಸ್‌ ಅರ್ಥ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಬಂದಿದ್ದಾರೆ ಗೌರೀಶ ಅಕ್ಕಿ. ‘ಪಬ್ಲಿಕ್ ಲೈಫ್ ಮತ್ತು ಪರ್ಸನಲ್ ಲೈಫ್‌ಗಳ ನಡುವಿನ ಗೆರೆ ಬ್ಲರ್ ಆಗುವುದು ಬಿಗ್‌ಬಾಸ್‌ ಮನೆಯಲ್ಲಿ. ನನ್ನೊಳಗೆ ನಿಜವಾಗಲೂ ಹೇಗಿದ್ದೇನೋ ಅದು ಬಿಗ್‌ಬಾಸ್‌ ಮನೆಯಲ್ಲಿ ಹೊರಗೆ ಬರುತ್ತದೆ. ನನ್ನನ್ನು ನಾನು ಅರ್ಥಮಾಡಿಕೊಳ್ಳಲಿಕ್ಕೆ ಮತ್ತು ಜನರನ್ನು ಅರ್ಥಮಾಡಿಕೊಳ್ಳಲಿಕ್ಕೆ ಬಿಗ್‌ಬಾಸ್‌ ಮನೆಗಿಂತ ಒಳ್ಳೆಯ ವೇದಿಕೆ ಯಾವುದಿದೆ?’ ಎಂದು ಪ್ರಶ್ನಿಸುವ ಗೌರೀಶ ಅಕ್ಕಿ, ಮನೆಯೊಳಗಿನ ವಿಮರ್ಶೆಗಳಿಗೆ ಮಾನಸಿಕವಾಗಿ ಸಿದ್ಧರಾಗಿಯೇ ಇದ್ದಾರೆ.

    ‘ಒಂದು ತಿಂಗಳು ಮನೆಯೊಳಗಿದ್ದು ಬಿಗ್‌ಬಾಸ್‌ ಶೋ ದ ಎಸೆನ್ಸ್ ಅರ್ಥ ಮಾಡಿಕೊಳ್ಳಬೇಕು’ ಎನ್ನುವ ಆಸೆಯನ್ನು ಹೊತ್ತುಬಂದಿರುವ ಗೌರಿಶ ಅಕ್ಕಿ ಅವರಿಗೆ ಜನರು 82%ವೋಟ್ ಮಾಡಿ ಮನೆಯೊಳಗೆ ಕಳಿಸಿದ್ದಾರೆ. ಗೌರೀಶ್ ಅಕ್ಕಿಗೂ ಮುನ್ನ ದುಕು ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಭಾಗ್ಯಶ್ರೀ (Bhagyashree) ಬಿಗ್ ಬಾಸ್ ಕನ್ನಡ 10ನೇ ಸೀಸನ್ ನಲ್ಲಿ ದೊಡ್ಮನೆ ಒಳಗೆ ಕಾಲಿಟ್ಟಿದ್ದರು. ಬರೋಬ್ಬರಿ ಶೇಕಡಾ 81ರಷ್ಟು ಮತವನ್ನು ಪಡೆಯುವ ಮೂಲಕ ಅವರು ಬಿಗ್ ಬಾಸ್ ಮನೆ ಒಳಗೆ ಪ್ರವೇಶ ಮಾಡಿದ್ದರು.

    ದೊಡ್ಮನೆಗೆ ಹೋಗಲು ವಿಫಲ

    ದೇಹದಾರ್ಢ್ಯ ಎಂಬುದು ಪುರುಷರಿಗೆ ಮೀಸಲಾಗಿದ್ದಲ್ಲ ಎಂಬುದಕ್ಕೆ ಪುರಾವೆಯಂತಿರುವ ಚಿತ್ರಾಲ್ (Chitral), ಅದಕ್ಕೂ ಮೊದಲು ನಟಿಯಾಗಿಯೂ ಕಿರುತೆರೆ, ಹಿರಿತೆರೆಯಲ್ಲಿ ಗುರ್ತಿಸಿಕೊಂಡವರು.  ದಪ್ಪ ಇದ್ದೀಯಾ ಎನ್ನುವ ಕಾರಣಕ್ಕೆ ಅವಕಾಶಗಳನ್ನು ತಪ್ಪಿಸಿಕೊಳ್ಳತೊಡಗಿದಾಗ ಜಿಮ್‌ಗೆ ಎಡತಾಕಿದ ಚಿತ್ರಾಗೆ ವರ್ಕೌಟ್ ಎನ್ನುವುದು ಅಡಿಕ್ಟ್ ಆಗಿಬಿಟ್ಟಿತು. ಬಾಡಿಬಿಲ್ಡಿಂಗ್ ಅನ್ನು ಹವ್ಯಾಸಿಕೊಂಡು ಸ್ಪರ್ಧೆಗಳಲ್ಲಿಯೂ ಪಾಲ್ಗೊಳ್ಳತೊಡಗಿದರು.

     

    ನಟನೆಯಿಂದ ದೇಹದಾರ್ಢ್ಯ ಕ್ಷೇತ್ರಕ್ಕೆ ಬಂದು ಮಿಂಚುತ್ತಿರುವ ಚಿತ್ರಾ ಅವರಿಗೆ ಜನರು 38% ವೋಟ್ ನೀಡಿದ್ದಾರೆ. ಹೀಗಾಗಿ ಬಿಗ್‌ಬಾಸ್ (Bigg Boss Kannada) ಮನೆಯೊಳಗೆ ಹೋಗುವ ಅವಕಾಶದಿಂದ ಅವರು ವಂಚಿತರಾಗಿದ್ದಾರೆ. ಹಾಗಾಗಿ ಅವರು ಮನೆ ಒಳಗೆ ಹೋಗಲು ವಿಫಲರಾದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]