Tag: ಗೌರಿ

  • ರವಿಚಂದ್ರನ್ ಸಿನಿಮಾಗಾಗಿ ಮತ್ತೋರ್ವ ಬಾಲಿವುಡ್ ಹೀರೋಯಿನ್ ಎಂಟ್ರಿ

    ರವಿಚಂದ್ರನ್ ಸಿನಿಮಾಗಾಗಿ ಮತ್ತೋರ್ವ ಬಾಲಿವುಡ್ ಹೀರೋಯಿನ್ ಎಂಟ್ರಿ

    ನ್ನಡ ಸಿನಿಮಾ ರಂಗಕ್ಕೆ ಅತೀ ಹೆಚ್ಚು ಬಾಲಿವುಡ್ ನಟಿಯರನ್ನು ಪರಿಚಯಿಸಿದ ಕೀರ್ತಿ ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ಸಲ್ಲುತ್ತದೆ. ಇದೀಗ ಮತ್ತೆ ರವಿಚಂದ್ರನ್ ಸಿನಿಮಾದಲ್ಲಿ ಹಿಂದಿ ನಟಿಯು ಕಾಣಿಸಿಕೊಂಡಿದ್ದು, ಇಂದು ನಡೆದ ಮುಹೂರ್ತ ಸಮಾರಂಭದಲ್ಲೂ ಅವರು ಹಾಜರಿದ್ದರು. ರವಿಚಂದ್ರನ್ ನಟನೆಯ ಗೌರಿ ಹೆಸರಿನ ಸಿನಿಮಾಗೆ ಇಂದು ಬೆಂಗಳೂರಿನಲ್ಲಿ ಮುಹೂರ್ತ ನಡೆದಿದ್ದು, ನಟಿ ಬರ್ಖಾ ಸೇನ್ ಗುಪ್ತಾ ಕೂಡ ಆಗಮಿಸಿದ್ದಾರೆ.

    ಅನೀಶ್ ಅನ್ನುವವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಕಡಿಮೆ ಪಾತ್ರಗಳ ಮೂಲಕ ಕಥೆಯನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರಂತೆ. ಕೇವಲ ಮೂರೇ ಮೂರು ಪ್ರಮುಖ ಪಾತ್ರಗಳು ಸಿನಿಮಾದಲ್ಲಿದ್ದು, ಪ್ರಾಣಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಹಾಗಾಗಿ ದಾಂಡೇಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಿದ್ದಾರೆ ನಿರ್ದೇಶಕರು. ಇದನ್ನೂ ಓದಿ: ಕರ್ನಾಟಕದ ಹುಡುಗಿಯ ಜೊತೆ ಸಲ್ಮಾನ್ ಖಾನ್‌ಗೆ ಪ್ಯಾರ್

    ಮುಹೂರ್ತದ ನಂತರ ಮಾತನಾಡಿದ ರವಿಚಂದ್ರನ್, ‘ಇದು ಹೊಸ ಕಾಲಘಟ್ಟ. ಹೊಸ ಹೊಸ ಕಥೆಗಳು ಬರುತ್ತಿವೆ. ಒಂದೊಳ್ಳೆ ಕಥೆ ಸಿಕ್ಕಾಗ ಇಲ್ಲ ಅನ್ನುವುದಕ್ಕೆ ಆಗಲಿಲ್ಲ. ಹೊಸ ವರ್ಷದ ಶುರುವಿನಲ್ಲೇ ಹೊಸ ರೀತಿಯ ಸಿನಿಮಾ ಸಿಕ್ಕಿದೆ. ಖುಷಿ ಆಗುತ್ತಿದೆ’ ಎಂದಿದ್ದಾರೆ. ಕ್ಲ್ಯಾಪ್ ಮಾಡುವ ಮೂಲಕ ಚಿತ್ರಕ್ಕೆ ಶಿವರಾಜ್ ಕುಮಾರ್ ಚಾಲನೆ ನೀಡಿದ್ದಾರೆ. ಮುಂದಿನ ವಾರದಿಂದ ಚಿತ್ರತಂಡ ಶೂಟಿಂಗ್ ಪ್ರಾರಂಭ ಮಾಡಲಿದೆ.

    Live Tv
    [brid partner=56869869 player=32851 video=960834 autoplay=true]

  • ಗೌರಿ ಕೂರಿಸುವ ವಿಚಾರವಾಗಿ ಗಲಾಟೆ – ತಂಗಿ ಗೌರಿ ತಂದಿದ್ದಕ್ಕೆ ಮನನೊಂದು ಅಕ್ಕ ಆತ್ಮಹತ್ಯೆ

    ಗೌರಿ ಕೂರಿಸುವ ವಿಚಾರವಾಗಿ ಗಲಾಟೆ – ತಂಗಿ ಗೌರಿ ತಂದಿದ್ದಕ್ಕೆ ಮನನೊಂದು ಅಕ್ಕ ಆತ್ಮಹತ್ಯೆ

    ಚಿಕ್ಕೋಡಿ: ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಹಿನ್ನೆಲೆಯಲ್ಲಿ ಮನೆಗೆ ಗೌರಿ ತರುವ ವಿಚಾರವಾಗಿ ಅಕ್ಕ ತಂಗಿಯ ಮಧ್ಯೆ ಗಲಾಟೆ ನಡೆದು ಅಕ್ಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯನಕನಮರಡಿ ಗ್ರಾಮದಲ್ಲಿ ನಡೆದಿದೆ.

    ಮನೆಯಲ್ಲಿ ಗೌರಿ ಕೂರಿಸುವ ವಿಚಾರಕ್ಕೆ ಮನನೊಂದು ಮೃತಪಟ್ಟ ಬಾಲಕಿಯನ್ನು ರುಕ್ಮಿಣಿ ತೊಗರೆ ಎಂದು ಗುರುತಿಸಲಾಗಿದೆ. ಪ್ರತಿವರ್ಷ ಮನೆಗೆ ಗೌರಿಯನ್ನು ಅಕ್ಕ ರುಕ್ಮಿಣಿ ತರುತ್ತಾಳೆ. ಪ್ರತಿ ಬಾರಿ ಅಕ್ಕನೇ ಏಕೆ ಗೌರಿ ಮನೆಗೆ ತರಬೇಕು ಈ ಬಾರಿ ನಾನೂ ತರುತ್ತೇನೆ ಎಂದು ತಂಗಿ ಸರಿತಾಳ ನಡುವೆ ವಾಗ್ವಾದ ನಡೆದಿತ್ತು. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಟಾಟಾ ಸನ್ಸ್‌ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ದುರ್ಮರಣ

    ಬಳಿಕ ಸರಿತಾ ಗೌರಿಯನ್ನು ಮನೆಗೆ ತಂದಿದ್ದಾಳೆ. ಇದನ್ನು ಕಂಡು ಮನನೊಂದು ರುಕ್ಮಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: BPL ಕಾರ್ಡ್‌ ಹೊಂದಿರುವ ಎಸ್‌ಸಿ, ಎಸ್‌ಟಿಗಳಿಗೆ ಗೃಹ ಬಳಕೆಗೆ 75 ಯುನಿಟ್‌ ಉಚಿತ ವಿದ್ಯುತ್ – ಆದೇಶ ಹಿಂಪಡೆದ ಸರ್ಕಾರ

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿ ಇನ್ನೂ 4 ದಿನ ಮಳೆ ಅಬ್ಬರ – ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

    ರಾಜ್ಯದಲ್ಲಿ ಇನ್ನೂ 4 ದಿನ ಮಳೆ ಅಬ್ಬರ – ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ರಾತ್ರಿ ಮಳೆ ತನ್ನ ಆರ್ಭಟ ನಡೆಸಿದೆ. ರಾತ್ರಿಯಿಡೀ ಸುರಿದ ಮಳೆಗೆ ಸಿಲಿಕಾನ್ ಸಿಟಿ ಮಂದಿ ಹೈರಾಣಾಗಿದ್ದಾರೆ.

    ಗೌರಿ-ಗಣೇಶ ಹಬ್ಬಕ್ಕೆ ಮಳೆರಾಯ ಅಡ್ಡಿ ಪಡಿಸಲಿದ್ದಾನೆ. ಭಾರೀ ಮಳೆಗೆ ಶಾಪಿಂಗ್ ಹಾಟ್‍ಸ್ಪಾಟ್ ಮಲ್ಲೇಶ್ವರಂನಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದಿದೆ. ಮಳೆಗೆ ಶಿವಾನಂದ ಸರ್ಕಲ್ ಕೆರೆಯಂತಾಗಿದೆ. ಮಾರ್ಕೆಟ್ ಸಂಪೂರ್ಣ ಮಳೆ ನೀರಿನಿಂದ ಮುಳುಗಡೆಯಾಗಿದೆ. ಚಂದ್ರಲೇಔಟ್, ಸುಲ್ತಾನ್‍ಪೇಟೆ, ಕೆಂಗೇರಿ, ಕಗ್ಗಲೀಪುರ, ಟೌನ್‍ಹಾಲ್‍ನಲ್ಲಿ ಮಳೆ ಅವಾಂತರವಾಗಿದೆ. ಅನುಗ್ರಹ ಲೇಔಟ್‍ನಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಜಲಾವೃತವಾಗಿದೆ.

    ಸ್ಮಾರ್ಟ್ ಸಿಟಿ ಯೋಜನೆ ಅಡಿ ನಿರ್ಮಿಸಿರುವ ರಿಚ್ಮಂಡ್ ರಸ್ತೆಯಲ್ಲಿಯ ತುಂಬೆಲ್ಲಾ ಮಳೆ ನೀರು ತುಂಬಿ ಹರಿಯುತ್ತಿತ್ತು. ಅವೈಜ್ಞಾನಿಕವಾಗಿ ಕಾಲುವೆಗೆ ನೀರು ಹೋಗದ ರೀತಿ ರಸ್ತೆ ನಿರ್ಮಿಸಿದ್ದೇ ಇದಕ್ಕೆ ಕಾರಣವಾಗಿದೆ. ಯಶವಂತಪುರದಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದೆ. ವಾಹನ ಸಂಚಾರ ಇಲ್ಲದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ. ಇದನ್ನೂ ಓದಿ: ಕೋಲಾರ ಗಣೇಶೋತ್ಸವ – ರಾತ್ರಿ 10 ಗಂಟೆ ಬಳಿಕ ಮನರಂಜನಾ ಕಾರ್ಯಕ್ರಮಕ್ಕೆ ಅವಕಾಶವಿಲ್ಲ

    ಮತ್ತೊಂದೆಡೆ ಕಾರವಾರ ಭಾಗದಲ್ಲಿ ಮಳೆ ಮುಂದುವರಿದಿದ್ದು ಮತ್ತೆ ಅಣಶಿ ಘಟ್ಟದಲ್ಲಿ ಗುಡ್ಡ ಕುಸಿತ ಮುಂದುವರಿದಿದೆ. ಭಾರೀ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ಅನುವು ಮಾಡಲಾಗಿದೆ. ಇದನ್ನೂ ಓದಿ: ತಮ್ಮ ನಾಯಕರು ಬ್ಲೂಫಿಲಂ ನೋಡ್ತಿದ್ದಾಗ ಬಿಜೆಪಿ ಮಹಿಳೆಯರು ಎಲ್ಲಿದ್ರು – ಮಹಿಳಾ ಕಾಂಗ್ರೆಸ್ ತಿರುಗೇಟು

    ಇನ್ನೂ ಕೊಡಗಿನಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ವಿವಿಧೆಡೆ ರಸ್ತೆ ಹಾಗೂ ಸೇತುವೆ ಸಂಪರ್ಕ ಕಡಿತಗೊಂಡಿದೆ ಮತ್ತು ಚಾಮರಾಜನಗರದಲ್ಲಿ ವರುಣಾರ್ಭಟ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಕಲ್ಯಾಣ ಮಂಟಪ, ಬಂಕ್, ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟವುಂಟಾಗಿದೆ. ಉಳಿದಂತೆ ರಾಯಚೂರಿನಲ್ಲಿ ಭಾರಿ ಮಳೆ ಜಿಲ್ಲೆಯ ರೈತರನ್ನ ಕಂಗೆಡಿಸಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳು ನೀರುಪಾಲಾಗಿವೆ. ಶಾಲಾ ಆವರಣ ಕೆರೆಯಂತಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನೆಟ್ಟಿಗರಲ್ಲಿ ಶ್ರುತಿ ಮಗಳು ಗೌರಿ ಮನವಿ

    ನೆಟ್ಟಿಗರಲ್ಲಿ ಶ್ರುತಿ ಮಗಳು ಗೌರಿ ಮನವಿ

    ಬೆಂಗಳೂರು: ನಟಿ ಶ್ರುತಿ ಮಗಳು ಗೌರಿ ತಂದೆಯ ಬಗ್ಗೆ ಬರೆದು ಒಂದು ಭಾವನಾತ್ಮಕ ಪೋಸ್ಟ್ ಹಾಕಿದ್ದರು. ಇದರಿಂದ ನೆಟ್ಟಿಗರು ಶ್ರುತಿ ವಿರುದ್ಧ ಕಾಮೆಂಟ್ಸ್ ಮಾಡುತ್ತಿದ್ದರು. ಇದನ್ನು ನೋಡಿದ ಗೌರಿ ‘ಇನ್ನೊಬ್ಬರ ಜೀವನದ ಬಗ್ಗೆ ಸುಮ್ಮನೆ ಕಾಮೆಂಟ್ಸ್ ಮಾಡಬೇಡಿ’ ಎಂದು ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಈ ಬಗ್ಗೆ ಇನ್‍ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಗೌರಿ, “ಇತ್ತೀಚಿಗೆ ನಾನು ಅಪ್ಪನ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಒಂದು ಪೋಸ್ಟ್ ಹಾಕಿದ್ದೆ. ಆದರೆ ಆ ಪೋಸ್ಟ್ ಗೆ ಅಮ್ಮನ ವಿರುದ್ಧ ಕಾಮೆಂಟ್ ಮಾಡುತ್ತಿದ್ದಾರೆ. ಅದನ್ನು ನೋಡಿ ನನಗೆ ಬೇಸರವಾಗಿದೆ. ಅಪ್ಪನಿಗೆ ಫೋನ್ ಮಾಡಲು, ಅವರನ್ನು ಭೇಟಿ ಮಾಡಲು ಅಮ್ಮನೇ ಕಳುಹಿಸುವುದು. ನಾನು ಮಾಡಿದ್ದ ಪೋಸ್ಟ್ ಅಪ್ಪನ ಬಗ್ಗೆ ಇದ್ದ ಪ್ರೀತಿಯನ್ನು ತಿಳಿಸುತ್ತದೆ ಹೊರತು ಅಮ್ಮನ ಬಗ್ಗೆ ಇರುವ ಬೇಸರವಲ್ಲ. ಹೀಗಾಗಿ ದಯವಿಟ್ಟು ಅಮ್ಮನ ಬಗ್ಗೆ ಕಾಮೆಂಟ್ಸ್ ಮಾಡಬೇಡಿ” ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.

    “ನನ್ನ ಹುಟ್ಟಿಗೆ ಅಪ್ಪ ಮಾತ್ರ ಕಾರಣರಾಗಿದ್ದಾರೆ. ಆದರೆ ಅಂದಿನಿಂದ ಪ್ರೀತಿಯಿಂದ ನನ್ನನ್ನು ನೋಡಿಕೊಳ್ಳುತ್ತಿರುವುದು ಅಮ್ಮ. ಅವರ ಬಗ್ಗೆ ಗೊತ್ತಿಲ್ಲದೆ ಮಾತನಾಡುವುದು ತಪ್ಪು. ನಾನು ಅವರಿಬ್ಬರನ್ನು ಸಮಾನವಾಗಿ ಪ್ರೀತಿಸುತ್ತೇನೆ. ನಿಮಗೆ ಸತ್ಯ ತಿಳಿಯದೆ ಮಾತನಾಡುವುದು ಸರಿಯಿಲ್ಲ. ಇನ್ನೊಬ್ಬರ ಜೀವನದ ಬಗ್ಗೆ ಸುಮ್ಮನೆ ಕಾಮೆಂಟ್ಸ್ ಗಳನ್ನು ಮಾಡಬೇಡಿ ಧನ್ಯವಾದಗಳು” ಎಂದು ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಅಪ್ಪನ ಬಗ್ಗೆ ಪೋಸ್ಟ್:
    “ಹುಟ್ಟುಹಬ್ಬದ ಶುಭಾಶಯಗಳು ಅಪ್ಪ. ನೀವು ನನ್ನ ಮೊದಲ ಪ್ರೀತಿ ಮತ್ತು ನನ್ನ ನೆಚ್ಚಿನ ನಾಯಕನಾಗಿದ್ದೀರಿ. ನಿಮ್ಮ ಮೇಲಿನ ಪ್ರೀತಿ ಹಾಗೂ ನಮ್ಮಿಬ್ಬರ ನಡುವಿನ ಬಾಂಧವ್ಯವನ್ನು ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಆದರೆ ನಿಮ್ಮ ಜೊತೆ ಅತೀ ಶೀಘ್ರದಲ್ಲೇ ಕಾಲ ಕಳೆಯಲು ಕಾಯುತ್ತಿದ್ದೀನಿ” ಎಂದು ಪ್ರೀತಿಯಿಂದ ಬರೆದು ಪೋಸ್ಟ್ ಮಾಡಿದ್ದರು. ಜೊತೆಗೆ ತಮ್ಮ ತಂದೆ ಜೊತೆಗಿದ್ದ ಫೋಟೋವನ್ನು ಕೂಡ ಶೇರ್ ಮಾಡಿಕೊಂಡಿದ್ದರು.

  • ನಟಿ ಶ್ರುತಿ ಮಗಳಿಂದ ತಂದೆಗೆ ಭಾವನಾತ್ಮಕ ಪೋಸ್ಟ್

    ನಟಿ ಶ್ರುತಿ ಮಗಳಿಂದ ತಂದೆಗೆ ಭಾವನಾತ್ಮಕ ಪೋಸ್ಟ್

    ಬೆಂಗಳೂರು: ಹಿರಿಯ ನಟಿ ಶ್ರುತಿ ಅವರ ಮಗಳು ಗೌರಿ ತಮ್ಮ ತಂದೆಯನ್ನು ನೆನಪಿಸಿಕೊಂಡು ಒಂದು ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.

    ಎರಡು ದಿನಗಳ ಹಿಂದೆ ಗೌರಿ ಅಪ್ಪ ಎಸ್.ಮಹೇಂದರ್ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆಯಲ್ಲಿ ತಂದೆಯನ್ನು ನೆನಪಿಸಿಕೊಂಡು ಅವರ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಬರೆದುಕೊಂಡಿದ್ದಾರೆ.

    “ಹುಟ್ಟುಹಬ್ಬದ ಶುಭಾಶಯಗಳು ಅಪ್ಪ. ನೀವು ನನ್ನ ಮೊದಲ ಪ್ರೀತಿ ಮತ್ತು ನನ್ನ ನೆಚ್ಚಿನ ನಾಯಕನಾಗಿದ್ದೀರಿ. ನಿಮ್ಮ ಮೇಲಿನ ಪ್ರೀತಿ ಹಾಗೂ ನಮ್ಮಿಬ್ಬರ ನಡುವಿನ ಬಾಂಧವ್ಯವನ್ನು ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಆದರೆ ನಿಮ್ಮ ಜೊತೆ ಕಾಲ ಕಳೆಯಲು ಕಾಯುತ್ತೀದ್ದೀನಿ” ಎಂದು ಪ್ರೀತಿಯಿಂದ ಬರೆದು ಪೋಸ್ಟ್ ಮಾಡಿದ್ದಾರೆ.

    ಜೊತೆಗೆ ತಮ್ಮ ತಂದೆ ಜೊತೆಗಿದ್ದ ಫೋಟೋವನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ.

    ಶ್ರುತಿ ಅವರು 1998ರಲ್ಲಿ ನಿರ್ದೇಶಕ ಎಸ್.ಮಹೇಂದರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಕೌಟುಂಬಿಕ ಕಾರಣದಿಂದ 2009ರಲ್ಲಿ ಶ್ರುತಿ ಮತ್ತು ಎಸ್.ಮಹೇಂದರ್ ಇಬ್ಬರು ವಿಚ್ಛೇದನ ಪಡೆದುಕೊಂಡಿದ್ದಾರೆ. ಅಂದಿನಿಂದ ತಮ್ಮ ಮಗಳು ಗೌರಿ ಜೊತೆ ಶ್ರುತಿ ಜೀವನ ನಡೆಸುತ್ತಿದ್ದು, ಇತ್ತ ವಿಚ್ಛೇದನದ ಬಳಿಕ ಎಸ್.ಮಹೇಂದರ್ ಅವರು ಮೈಸೂರು ಮೂಲದ ಯಶೋದ ಅವರನ್ನು ಎರಡನೇ ಮದುವೆಯಾಗಿದ್ದಾರೆ.

    https://www.instagram.com/p/ByI0-YKguO-/