Tag: ಗೌರಿ ಹತ್ಯೆ ಪ್ರಕರಣ

  • ಗೌರಿ ಹತ್ಯೆ ಪ್ರಕರಣ-ಮತ್ತೊಬ್ಬ ಹಿಂದೂ ಸಂಘಟನೆ ಕಾರ್ಯಕರ್ತನ ಬಂಧನ

    ಗೌರಿ ಹತ್ಯೆ ಪ್ರಕರಣ-ಮತ್ತೊಬ್ಬ ಹಿಂದೂ ಸಂಘಟನೆ ಕಾರ್ಯಕರ್ತನ ಬಂಧನ

    ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಯ ಮತ್ತೊಬ್ಬ ಕಾರ್ಯಕರ್ತನನ್ನು ಎಸ್‍ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಬೆಳಗಾವಿಯಲ್ಲಿ ಆರೋಪಿ ಭರತ್ ನನ್ನು ಬಂಧಿಸಿ, ಮತ್ತಿಬ್ಬರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಬಂಧಿತರು ಪರಶುರಾಮ್ ವಾಗ್ಮೋರೆಗೆ ಬೆಳಗಾವಿಯಲ್ಲಿ ಆಶ್ರಯ ಕೊಟ್ಟಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪರಶುರಾಮ್ ವಾಗ್ಮೋರೆ ನೀಡಿದ್ದ ಮಾಹಿತಿ ಆಧಾರದ ಮೇಲೆ ಭರತ್ ನನ್ನು ಎಸ್‍ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ತನಿಖೆಯನ್ನು ಚುರುಕುಗೊಳಿಸಿರುವ ಎಸ್‍ಐಟಿ ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 12 ಜನರನ್ನು ಬಂಧಿಸಿದ್ದು, ಅದರಲ್ಲಿ ಈಗ ಕೊನೆಯ ವ್ಯಕ್ತಿಯೇ ಭರತ್ ಆಗಿದ್ದಾರೆ.

    ಯಾರು ಈ ಪರಶುರಾಮ್ ವಾಗ್ಮೋರೆ?
    ವಿಜಯಪುರ ಜಿಲ್ಲೆಯ ಸಿಂಧಗಿ ಪಟ್ಟಣದ ನಿವಾಸಿ ಪರಶುರಾಮ್ ವಾಗ್ಮೋರೆ. ವಯಸ್ಸು 26. ಕಟ್ಟಾ ಹಿಂದೂವಾದಿಯಾಗಿದ್ದು, ಶ್ರೀರಾಮಸೇನೆ, ಹಿಂದೂ ಜಾಗೃತಿ ವೇದಿಕೆಯಲ್ಲೂ ಗುರುತಿಸಿಕೊಂಡಿದ್ದ. ಈ ಹಿಂದೆ ಸಿಂಧಗಿ ತಹಶೀಲ್ದಾರ್ ಕಚೇರಿ ಬಳಿ ಪಾಕ್ ಧ್ವಜ ಹಾರಿಸಿದ ಪ್ರಕರಣದಲ್ಲಿ ಪರಶುರಾಮ್ ಹೆಸರು ಕೇಳಿ ಬಂದಿತ್ತು. ಪರಶುರಾಮ್ ಒಬ್ಬ ಶಾರ್ಪ್ ಶೂಟರ್ ಆಗಿದ್ದು, ಅಮೋಲ್ ಕಾಳೆ, ಮನೋಹರ್ ಯವಡೆಗೆ ಎಂಬವರಿಗೆ ತರಬೇತಿ ನೀಡಿದ್ದ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ. ಸಂಬಂಧಿಕರ ಅಂಗಡಿಯಲ್ಲಿ ಪರಶುರಾಮ್ ಕೆಲಸ ಮಾಡಿಕೊಂಡಿದ್ದ.

  • ಸಿಎಂ ಇಬ್ರಾಹಿಂ ಐಎಸ್‍ಐ ಏಜೆಂಟ್ – ನಾನು ಹೀಗಂತ ಆರೋಪಿಸಿದ್ರೆ ಹೇಗಿರುತ್ತೆ : ಪ್ರಮೋದ್ ಮುತಾಲಿಕ್ ಟಾಂಗ್

    ಸಿಎಂ ಇಬ್ರಾಹಿಂ ಐಎಸ್‍ಐ ಏಜೆಂಟ್ – ನಾನು ಹೀಗಂತ ಆರೋಪಿಸಿದ್ರೆ ಹೇಗಿರುತ್ತೆ : ಪ್ರಮೋದ್ ಮುತಾಲಿಕ್ ಟಾಂಗ್

    ಬೆಂಗಳೂರು: ಗೌರಿ ಹತ್ಯೆ ಪ್ರಕರಣದಲ್ಲಿ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಪಾತ್ರವಿದ್ದು, ಮೊದಲು ಅವರನ್ನು ತನಿಖೆಗೆ ಒಳಪಡಿಸಬೇಕು ಅಂತಾ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಹೇಳಿಕೆಗೆ ತಿರುಗೇಟು ನೀಡಿರುವ ಮುತಾಲಿಕ್, ಸಿಎಂ ಇಬ್ರಾಹಿಂ ಐಎಸ್‍ಐ ಏಜೆಂಟ್ ಎಂದು ಆರೋಪಿಸಿದರೆ ಹೇಗಿರುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಮುತಾಲಿಕ್, ಒಬ್ಬ ಜವಾಬ್ದಾರಿ ಇರುವ ವ್ಯಕ್ತಿ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಸಿಎಂ ಇಬ್ರಾಹಿಂ ನೀವು ಕೂಡ ಐಎಸ್‍ಐ ಏಜೆಂಟ್, ಪಾಕಿಸ್ತಾನದ ಸಂಪರ್ಕ ಹೊಂದಿರುವ ವ್ಯಕ್ತಿ ಎಂದು ನಾನು ಹೇಳಿದ್ರೆ ಹೇಗಿರುತ್ತೆ? ನಮ್ಮ ವಿರುದ್ಧ ಸಾಕ್ಷಿ ಇದ್ದರೆ ಎಸ್‍ಐಟಿಗೆ ಕೊಡಿ. ಮಾತನಾಡುವ ಮುನ್ನ ಯೋಚನೆ ಮಾಡಿ ಮಾತನಾಡಿ. ನಮ್ಮ ಸಂಘಟನೆ ಶ್ರೀ ರಾಮಸೇನೆ ಬಹಳ ಒಳ್ಳೆಯ ಕೆಲಸ ಮಾಡುತ್ತಿದೆ. ಕೊಲೆ, ಸುಲಿಗೆ ಮಾಡುವ ಸೈನ್ಯ ಅಲ್ಲ. ರಾಜಕೀಯದವರ ತರ ಮಾತನಾಡಬೇಡಿ ಎಂದು ವಾಗ್ದಾಳಿ ನಡೆಸಿದರು.

    ಇದೇ ವೇಳೆ ಗೌರಿ ಪ್ರಕರಣದಲ್ಲಿ ಬಂಧಿತವಾಗಿರುವ ಪರಶುರಾಮ ವಾಗ್ಮೋರೆ ನಮ್ಮ ಸಂಘಟನೆಯ ವ್ಯಕ್ತಿ ಅಲ್ಲ. ಆತ ಯಾರೂ ಎಂದು ನನಗೆ ಗೊತ್ತಿಲ್ಲ. ಅದರ ವಿಷಯದ ಬಗ್ಗೆ ನಾನು ಏನೂ ಹೇಳುವುದಿಲ್ಲ. ಪರಶುರಾಮ ತಪ್ಪು ಮಾಡಿದರೆ ಶಿಕ್ಷೆ ಆಗಲಿ. ಗೌರಿ ಲಂಕೇಶ್ ಗೆ ನಿರಂತರ ನಕ್ಸಲ್ ಜೊತೆ ಸಂಪರ್ಕ ಹೊಂದಿದ್ದರು. ಗೌರಿ ಲಂಕೇಶ್ ಪತ್ರಿಕೆಯಲ್ಲಿಯೂ ನಕ್ಸಲ್ ಬಗ್ಗೆ ಬರೆದಿದ್ದರೂ. ಅ ಗುಂಪಿನವರೇ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.