Tag: ಗೌರಿ ಶಂಕರ್

  • ಸುರೇಶ್ ಗೌಡ ಕೊಲೆಗೆ ಸುಪಾರಿ ಆರೋಪ- 5 ಕೋಟಿ ಡೀಲ್ ನಡೆದಿದೆ ಎಂದ ಮಾಜಿ ಶಾಸಕ

    ಸುರೇಶ್ ಗೌಡ ಕೊಲೆಗೆ ಸುಪಾರಿ ಆರೋಪ- 5 ಕೋಟಿ ಡೀಲ್ ನಡೆದಿದೆ ಎಂದ ಮಾಜಿ ಶಾಸಕ

    ತುಮಕೂರು: ಗ್ರಾಮಾಂತರ ಕ್ಷೇತ್ರದಲ್ಲಿ ರಾಜಕೀಯ ಜಿದ್ದಾ ಜಿದ್ದಿ ತಾರಕಕ್ಕೇರಿದೆ. ಹಾಲಿ ಮತ್ತು ಮಾಜಿ ಶಾಸಕರುಗಳ ಆರೋಪ-ಪ್ರತ್ಯಾರೋಪಗಳು ಮಿತಿ ಮೀರಿದೆ. ಮಾಜಿ ಶಾಸಕ ಸುರೇಶ್ ಗೌಡರ ಕೊಲೆಗೆ ಹಾಲಿ ಜೆಡಿಎಸ್ (JDS) ಶಾಸಕ ಗೌರಿಶಂಕರ್ (Gauri shankar) ಸುಪಾರಿ ಕೊಟ್ಟಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಉಂಟುಮಾಡಿದೆ.

    ತುಮಕೂರು ಜಿಲ್ಲೆಯಲ್ಲೇ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ರಾಜಕೀಯ ಸೆಡ್ಡು, ಜಿದ್ದಾಜಿದ್ದಿಗೆ ಕುಖ್ಯಾತಿ. ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ (Suresh Gowda) ರು ತನ್ನದ್ದು ಶೇರು ಎಂದರೆ ಹಾಲಿ ಶಾಸಕ ಗೌರಿಶಂಕರ್ ತಾನೇನು ಕಡಿಮೆ ಇಲ್ಲ ತನ್ನದು ಸವಾಶೇರು ಎನ್ನುತ್ತಾರೆ. ಅಷ್ಟರ ಮಟ್ಟಿಗೆ ಪರಸ್ಪರ ರೋಶಾವೇಷ ಇದೆ. ಆದರೆ ಇದ್ದಕಿದ್ದ ಹಾಗೇ ಸುರೇಶ್ ಗೌಡರು ವೇದಿಕೆಯೊಂದರಲ್ಲಿ ಮಾತನಾಡುತ್ತಾ, ನನ್ನ ಕೊಲೆಗೆ ಗೌರಿಶಂಕರ್ ಸುಪಾರಿ ಕೊಟ್ಟಿದ್ದಾರೆ ಎಂದು ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಶಾಸಕ ಗೌರಿಶಂಕರ್‌ಗೆ ಥೈಲ್ಯಾಂಡ್ ಅಂದರೆ ಬಲು ಪ್ರೀತಿ, ಗೋವಾ ಅಂದರೆ ಮೋಜು, ಅಸೆಂಬ್ಲಿ ಅಂದರೆ ಅಲರ್ಜಿ: ಸುರೇಶ್ ಗೌಡ

    ಈ ಹೇಳಿಕೆ ಜಿಲ್ಲೆಯ ರಾಜಕಾರಣದಲ್ಲಿ ತೀವ್ರ ಸಂಚಲನ ಉಂಟು ಮಾಡಿದೆ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುರೇಶ್ ಗೌಡರು, ಸ್ಫೋಟಕ ವಿಚಾರ ಬಿಚ್ಚಿಟ್ಟಿದ್ದಾರೆ. ಜೈಲಿನಲ್ಲಿ ಇರುವ ವ್ಯಕ್ತಿಗಳ ಜೊತೆ ಶಾಸಕರ ಬಲಗೈ ಬಂಟ ಹಿರೇಹಳ್ಳಿ ಮಹೇಶ್ ನೇರಸಂಪರ್ಕದಲ್ಲಿ ಇದ್ದು 5 ಕೋಟಿ ರೂ ಗೆ ಸುಪಾರಿ ನೀಡಿದ್ದಾರೆ. ವಿಜಯ ದಶಮಿ ಹಬ್ಬದ ಹಿಂದಿನ ದಿನವೇ ನಾನು ಸಂಚನ್ನು ಸಿಎಂ ಹಾಗೂ ಗೃಹ ಸಚಿವರ ಗಮನಕ್ಕೆ ತಂದಿದ್ದೇನೆ. ಪೊಲೀಸ್ ಕಮಿಷನರ್‍ಗೂ ದೂರು ಕೊಟ್ಟಿದ್ದೇನೆ. ಕಳೆದ ನಾಲ್ಕು ತಿಂಗಳಿನಿಂದ ಕೊಲೆಗೆ ಸಂಚು ನಡೆಯುತಿದ್ದು, ನನಗೆ ಇಂಟಲಿಜೆನ್ಸಿಯಿಂದ ತಿಳಿದುಬಂದಿದೆ ಎಂದರು.

    ಶಾಸಕ ಗೌರಿಶಂಕರ್, ಹಿರೇಹಳ್ಳಿ ಮಹೇಶ್ ಜೊತೆಗೆ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕನ ಹೆಸರನ್ನೂ ಸುರೇಶ್ ಗೌಡರು ತಗ್ಲಾಕಿದ್ದಾರೆ. ಕಂಪನಿ ಮಾಲೀಕ ಬಾಬು ತುಮಕೂರು ನಗರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ. ಇವರು ಗೌರಿಶಂಕರ್ ಆಪ್ತರೂ ಕೂಡ ಹೌದು. ಇವರು ಮೂರು ಜನ ಸೇರಿಕೊಂಡು ಮಾಜಿ ಮೇಯರ್ ಹತ್ಯೆ ಮಾಡಿ ಜೈಲಿನಲ್ಲಿದ್ದ ಆರೋಪಿಗಳನ್ನು ಸಂಪರ್ಕಿಸಿ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ ಎಂದು ಸುರೇಶ್ ಗೌಡ ಗಂಭೀರಾತಿಗಂಭೀರ ಆರೋಪ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕುಮಾರಸ್ವಾಮಿ ಸಿಎಂ ಆಗಿದ್ದಾಗ ರೈತರು ನೆಮ್ಮದಿಯಲ್ಲಿದ್ದರು – ಶಾಸಕ ಗೌರಿಶಂಕರ್

    ಕುಮಾರಸ್ವಾಮಿ ಸಿಎಂ ಆಗಿದ್ದಾಗ ರೈತರು ನೆಮ್ಮದಿಯಲ್ಲಿದ್ದರು – ಶಾಸಕ ಗೌರಿಶಂಕರ್

    ತುಮಕೂರು: ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ರಾಸುಗಳ ವಿತರಣೆಗೆ ಅತೀ ಹೆಚ್ಚು ಫಲಾನುಭವಿಗಳನ್ನು ಆಯ್ಕೆ ಮಾಡಲು ಅವಕಾಶವಿತ್ತು. ಆದರೆ ಈ ವರ್ಷ ಕೇವಲ 57 ಫಲಾನುಭವಿಗಳ ಆಯ್ಕೆಗೆ ಅವಕಾಶ ಕೊಟ್ಟಿದ್ದಾರೆ ಇದು ನೋವಿನ ಸಂಗತಿ ಎಂದು ಶಾಸಕ ಡಿ.ಸಿ.ಗೌರಿಶಂಕರ್ ಬೇಸರ ವ್ಯಕ್ತಪಡಿಸಿದ್ದಾರೆ.

    ತಾಲೂಕಿನ ಊರ್ಡಿಗೆರೆ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಹಮ್ಮಿಕೊಂಡಿದ್ದ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಹಾಗೂ ಬರಡು ರಾಸುಗಳ ತಪಾಸಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಗ್ರಾಮಾಂತರದಲ್ಲಿ ಜಾನುವಾರುಗಳನ್ನು ವಿತರಿಸಲು 345 ಫಲಾನುಭವಿಗಳನ್ನು ಆಯ್ಕೆ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಸೌಲಭ್ಯ ವಿತರಿಸಲು ಕೇವಲ 47 ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಆದೇಶ ಕಳುಹಿಸಿದ್ದಾರೆ. ಜಿಲ್ಲೆಗೆ ಬಹಳ ದೊಡ್ಡದಿರುವ ಕ್ಷೇತ್ರ ಹಾಗೂ ಹೆಚ್ಚು ಕೂಲಿ ಕಾರ್ಮಿಕರು ಹಾಗೂ ರೈತ ಸಮುದಾಯದವರು ವಾಸಿಸುತ್ತಿರುವ ಕ್ಷೇತ್ರದಲ್ಲಿ ಕಡಿಮೆ ಫಲಾನುಭವಿಗಳನ್ನು ಆಯ್ಕೆ ಮಾಡಲು ತಾಕೀತು ಮಾಡಿರುವುದು ನೋವಿನ ಸಂಗತಿ ಎಂದರು.

    ಕುಮಾರಸ್ವಾಮಿಯವರು ರಾಜ್ಯದ ರೈತರ ಕಷ್ಟಗಳನ್ನು ನೋಡಿ ಸಾಲ ಮನ್ನಾ ಯೋಜನೆ ಜಾರಿಗೆ ತಂದರು. ಇದರಿಂದ ರಾಜ್ಯದ ಹಲವಾರು ಬಡ ರೈತರು ಸುಸ್ತು ಬಡ್ಡಿ ಹಾಗೂ ಸಾಲದಿಂದ ಋಣಮುಕ್ತರಾದರು. ನಮ್ಮ ಗ್ರಾಮಾಂತರದಲ್ಲಿ 12,613 ರೈತರ ಸುಮಾರು 68 ಕೋಟಿ ರೂ.ಗಳ ಸಾಲ ಮನ್ನಾವಗಿದೆ. ನಿಜಕ್ಕೂ ಈ ಕ್ಷೇತ್ರದ ಜನ ಕುಮಾರಸ್ವಾಮಿಯವರಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಹೇಳಿದರು.

    ತುಮಕೂರು ಗ್ರಾಮಾಂತರದ ಪ್ರತಿ ಹೋಬಳಿಯಲ್ಲೂ ರಾಸುಗಳ ಪ್ರದರ್ಶನ ಹಾಗೂ ಬರಡು ರಾಸುಗಳಿಗೆ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ತಪಾಸಣೆ ಹಮ್ಮಿಕೊಳ್ಳುವಂತೆ ಪಶುಪಾಲನಾ ಇಲಾಖೆಯ ಅಧಿಕಾರಿ ಡಾ.ಸಂಜೀವರಾಯ್ ಅವರಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಯಿತು. ಕೋಳಿ ಸಾಕಾಣಿಕೆಯ 30 ಫಲಾನುಭವಿಗಳಿಗೆ ನಾಟಿ ಕೋಳಿ ಮರಿ ಮತ್ತು ಹಾಲು ಉತ್ಪಾದಕರಿಗೆ ಹಾಲಿನ ಕ್ಯಾನ್‍ಗಳನ್ನು ವಿತರಿಸಲಾಯಿತು.

  • ಪೊಲೀಸ್ರು ಕತ್ತೆ ಕಾಯ್ತಾ ಇದ್ದಾರಾ? – ಖಾಕಿ ವಿರುದ್ಧ ಗೌರಿ ಶಂಕರ್ ಕಿಡಿ

    ಪೊಲೀಸ್ರು ಕತ್ತೆ ಕಾಯ್ತಾ ಇದ್ದಾರಾ? – ಖಾಕಿ ವಿರುದ್ಧ ಗೌರಿ ಶಂಕರ್ ಕಿಡಿ

    ತುಮಕೂರು: ಜಿಲ್ಲೆಯಾ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳು, ಕೊಲೆ ಸುಲಿಗೆಗಳು ಮಿತಿ ಮೀರಿದ್ದು ಪೊಲೀಸರು ಕತ್ತೆ ಕಾಯ್ತಾ ಇದ್ದಾರಾ ಎಂದು ಗ್ರಾಮಾಂತರ ಶಾಸಕ ಗೌರಿ ಶಂಕರ್ ಖಾಕಿಗಳ ವಿರುದ್ಧ ಹರಿಹಾಯ್ದಿದ್ದಾರೆ.

    ಎಸ್ಪಿ, ಎಎಸ್ಪಿ, ಡಿವೈಎಸ್ಪಿ ಹೊರತುಪಡಿಸಿದರೆ ಇನ್ಯಾವ ಪೊಲೀಸ್ ಅಧಿಕಾರಿಗಳು ಕೂಡ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಇತ್ತೀಚೆಗೆ ಬೆಳಗುಂಬದ ಬಸ್ ನಿಲ್ದಾಣದಲ್ಲಿ ನಡೆದಿದ್ದ ರೌಡಿಶೀಟರ್ ಕೊಲೆ ಹಿಂದೆ ರಾಜಕೀಯ ವ್ಯಕ್ತಿಗಳು ಇದ್ದಾರೆ. ಅಂಥವರನ್ನು ಹಿಡಿಯುವ ಬದಲು ಟೆಂಪರ್ ರಾಜಾ ಎಂಬವರ ಮೇಲೆ ಪೊಲೀಸರು ನಕಲಿ ಫೈರಿಂಗ್ ನಡೆಸಿದ್ದಾರೆ ಎಂದು ಗೌರಿಶಂಕರ್ ಆರೋಪಿಸಿದ್ದಾರೆ.

    ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಟ್ಕಾ, ಇಸ್ಪೀಟ್ ದಂಧೆ ಮಿತಿಮೀರಿದ್ದು, ಇವುಗಳೆಲ್ಲ ಪೊಲೀಸ್ ನೆರಳಿನಲ್ಲೇ ನಡೆಯುತ್ತಿದೆ. ತಾನು ಶಾಸಕನಾದರೂ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ. ಮಾಜಿ ಶಾಸಕರೊಬ್ಬರು ಪೊಲೀಸ್ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಸುತ್ತಿದ್ದು ಡಿವೈಎಸ್ಪಿಗಿಂತ ಕೆಳಹಂತದ ಪೊಲೀಸ್ ಅಧಿಕಾರಿಗಳು ಆ ಮಾಜಿ ಶಾಸಕನ ಕೈಗೊಂಬೆಯಾಗಿದ್ದಾರೆ ಎಂದು ಹೆಸರು ಹೇಳದೆ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡರ ವಿರುದ್ಧ ಗುಡುಗಿದ್ದಾರೆ.