Tag: ಗೌರಿ ಶಂಕರ

  • ಹಾಸನದ ಸೊಗಡಿನ ‘ಗೌರಿ ಶಂಕರ’: ಧಾರಾವಾಹಿಯಲ್ಲಿದೆ ಬೆಂಕಿ ಬಿರುಗಾಳಿಯ ಕಥೆ

    ಹಾಸನದ ಸೊಗಡಿನ ‘ಗೌರಿ ಶಂಕರ’: ಧಾರಾವಾಹಿಯಲ್ಲಿದೆ ಬೆಂಕಿ ಬಿರುಗಾಳಿಯ ಕಥೆ

    ನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ವಿಭಿನ್ನ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಪ್ರಸ್ತುತ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಕಾರ್ಯಕ್ರಮಗಳು ಪ್ರೇಕ್ಷಕರ ಮನಗೆದ್ದು ಮನೆಮಾತಾಗಿದೆ. ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಹೊಸ ಕಥೆ ಗೌರಿಶಂಕರ.

    ಕರ್ನಾಟಕದ ಸುಂದರ ತಾಣ ಹಾಸನಾಂಬೆಯ ತವರೂರಾದ ಹಾಸನದಲ್ಲಿ ಈ ಕತೆಯು ಕೇಂದ್ರೀಕೃತವಾಗಿರುತ್ತದೆ. ಈ ಧಾರಾವಾಹಿಯ ನಾಯಕಿ ‘ಗೌರಿ’ ಸಮಾಜದಲ್ಲಿ ಘನತೆ ಗೌರವವನ್ನು ಹೊಂದಿರುವ ಪರಿವಾರದಲ್ಲಿ ಬೆಳೆದಿರುವ ಈಕೆ ಯಾರನ್ನೂ ನೋಯಿಸದ ಮುಗ್ದ ಮನಸ್ಸಿನ ಕಣ್ಮಣಿ. ಆದರೆ ಸಮಯ ಬಂದರೆ ತನ್ನ ನಿಲುವನ್ನು ಸ್ಪಷ್ಟವಾಗಿ ಮಾತನಾಡಬಲ್ಲ ಧೈರ್ಯವಂತೆ ಕೂಡ. ಜೊತೆಗೆ ತಂದೆಯಂತೆ ತಾನು ಪ್ರೊಫೆಸರ್ ಆಗಬೇಕೆಂಬ ಕನಸನ್ನು ಹೊತ್ತಿರೋಳು. ಇನ್ನು ಕಥಾ ನಾಯಕ ‘ಶಂಕರ’ ಅಲಿಯಾಸ್ ಜೋಗಿ, ಹೆಣ್ಣು ಮಕ್ಳು ಅಂದ್ರೆ ನಾಲ್ಕುಗೋಡೆ ಮಧ್ಯೆ ಇರ್ಬೇಕು ಅಂತ ನಂಬಿರೋ ಮನೆತನದಲ್ಲಿ ಬೆಳೆದವ. ಈತ ನೋಡೋಕೆ ರಫ್‌ ಆದ್ರೆ ಮಗುವಿನಂತ ಮನಸ್ಸು. ತನಗನಿಸಿದ್ದನ್ನು ಮಾಡಲೇಬೇಕು ಅನ್ನೋ ಹಠವಾದಿ.

    ಒಂದು ಕಡೆ ಶಾಂತಿ, ಸಹನೆ, ತಾಳ್ಮೆಯಿಂದ ಕೂಡಿದ ಗೌರಿ ಪರಿವಾರ. ಮತ್ತೊಂದೆಡೆ ಅಧಿಕಾರ, ದರ್ಪ, ಹಣ ತುಂಬಿರೋ ಶಂಕರನ ಪರಿವಾರ. ಈ ಎರಡೂ ತದ್ವಿರುದ್ಧ ಭಾವಗಳನ್ನು ಹೊಂದಿರುವ ಇವರಿಬ್ಬರ ನಡುವೆ ನಡೆಯುವ ಘರ್ಷಣೆ, ಸಂಧಾನ, ಪ್ರೇಮಾಂಕುರವೇ ಈ ಧಾರಾವಾಹಿಯ ಮುಖ್ಯಕಥಾ ಹಂದರ.

    ಗೌರಿಶಂಕರ (Gauri Shankar) ಧಾರಾವಾಹಿಯಲ್ಲಿ ನಾಯಕನಾಗಿ ಯಶವಂತ್ (Yashwant), ನಾಯಕಿಯಾಗಿ ಕೌಸ್ತುಭಮಣಿ (Kaustubhamani) ನಟಿಸುತ್ತಿದ್ದಾರೆ. ಜೊತೆಗೆ ಜನಪ್ರಿಯ ಕಲಾವಿದರಾದ ವಿದ್ಯಾಮೂರ್ತಿ, ಮೋಹನ್ (Mohan), ಕೀರ್ತಿ ಭಾನು ಸೇರಿದಂತೆ ಇನ್ನು ಹಲವಾರು ಕಲಾವಿದರು ಅಭಿನಯಿಸುತ್ತಿದ್ದಾರೆ. ನವೆಂಬರ್ 13, ಸೋಮವಾರದಿಂದ ರಾತ್ರಿ 7 ಗಂಟೆಗೆ ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಪ್ರಸಾರವಾಗಲಿದೆ.

  • ರವಿಚಂದ್ರನ್ ಸಿನಿಮಾದ ಹೆಸರು ಮತ್ತು ನಾಯಕಿ ಬದಲು

    ರವಿಚಂದ್ರನ್ ಸಿನಿಮಾದ ಹೆಸರು ಮತ್ತು ನಾಯಕಿ ಬದಲು

    ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಹೊಸ ಸಿನಿಮಾ ಮೊನ್ನೆಯಷ್ಟೇ ಮುಹೂರ್ತವಾಗಿತ್ತು. ಈ ಸಿನಿಮಾಗೆ ಗೌರಿ ಎಂದು ಹೆಸರಿಡಲಾಗಿತ್ತು. ಅಲ್ಲದೇ, ಈ ಸಿನಿಮಾದ ಮೂಲಕ ರೂಪದರ್ಶಿ, ನಟಿ ಬರ್ಖಾ ಸೇನ್ ಗುಪ್ತಾ ಸ್ಯಾಂಡಲ್ ವುಡ್ ಗೆ ಪ್ರವೇಶ ಕೂಡ ಮಾಡಿದ್ದರು. ಇದೀಗ ಈ ಸಿನಿಮಾದಲ್ಲಿ ಭಾರೀ ಬದಲಾವಣೆಯನ್ನು ಮಾಡಿಕೊಂಡಿದ್ದಾರೆ ನಿರ್ದೇಶಕ ಅನೀಸ್. ಚಿತ್ರಕ್ಕೆ ಹೆಸರು ಹಾಗೂ ನಾಯಕಿಯನ್ನೇ ಬದಲಾಯಿಸಿದ್ದಾರೆ.

    ಈ ಬದಲಾವಣೆಗೆ ಕಾರಣವನ್ನು ಅವರು ತಿಳಿಸದೇ ಇದ್ದರೂ, ಗೌರಿ ಅಂತಿಟ್ಟಿದ್ದ ಹೆಸರನ್ನು ಗೌರಿ ಶಂಕರ ಎಂದು ಬದಲಾಯಿಸಿದ್ದಾರೆ. ಬರ್ಖಾ ಸೇನ್ ಗುಪ್ತಾ ಜಾಗಕ್ಕೆ ಕನ್ನಡದ್ದೇ ಹುಡುಗಿ ಅಪೂರ್ವ ಅವರನ್ನು ಕರೆತಂದಿದ್ದಾರೆ. ಈ ಹಿಂದೆ ರವಿಚಂದ್ರನ್ ನಟನೆಯ ಅಪೂರ್ವ ಸಿನಿಮಾಗೆ ನಾಯಕಿಯಾಗಿದ್ದ ಈ ಹುಡುಗಿಯೇ ಮತ್ತೊಮ್ಮೆ ರವಿಚಂದ್ರನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅಪೂರ್ವ ಅಂತ ಈ ನಟಿಗೆ ಹೆಸರಿಟ್ಟಿದ್ದೇ ರವಿಚಂದ್ರನ್ ಎನ್ನುವುದು ಮತ್ತೊಂದು ವಿಶೇಷ. ಇದನ್ನೂ ಓದಿ: ತಂದೆಯ ಹುಟ್ಟುಹಬ್ಬಕ್ಕೆ ವಿಶೇಷ ಫೋಟೋ ಹಂಚಿಕೊಂಡ ನಟಿ ರಾಧಿಕಾ ಪಂಡಿತ್

    ಅಪೂರ್ವ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾಗಿದ್ದ ಈ ನಟಿ ಶರಣ್ ಜೊತೆ ವಿಕ್ಟರಿ 2 ಸಿನಿಮಾದಲ್ಲೂ ನಟಿಸಿದ್ದರು. ಈಗ ಮತ್ತೆ ರವಿಚಂದ್ರನ್ ಅವರಿಗೆ ಜೊತೆಯಾಗಿದ್ದಾರೆ. ಇದೇ ಜನವರಿ 22 ರಿಂದ ನಡೆಯಲಿರುವ ಚಿತ್ರೀಕರಣದಲ್ಲಿ ನಟಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಜ.22 ರಂದು ದಾಂಡೇಲಿಯಲ್ಲಿ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ರವಿಚಂದ್ರನ್, ಅಪೂರ್ವ ಜೊತೆ ಕ್ಯಾಡಬೊಮ್ ಹೇಡರ್ ಹೆಸರಿನ ನಾಯಿ ಕೂಡ ಪ್ರಧಾನ ಪಾತ್ರ ನಿರ್ವಹಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k