Tag: ಗೌರಿ ಲಂಕೆಶ್

  • ಗೌರಿ ಹತ್ಯೆ ಪ್ರಕರಣ-  ಸನಾತನ ವಿರುದ್ಧ ವದಂತಿ ತಡೆಗೆ ಕೋರ್ಟ್ ಮೊರೆ: ವಕ್ತಾರ ಚೇತನ್ ರಾಜಹನ್ಸ್

    ಗೌರಿ ಹತ್ಯೆ ಪ್ರಕರಣ- ಸನಾತನ ವಿರುದ್ಧ ವದಂತಿ ತಡೆಗೆ ಕೋರ್ಟ್ ಮೊರೆ: ವಕ್ತಾರ ಚೇತನ್ ರಾಜಹನ್ಸ್

    ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಮತ್ತು ನರೇಂದ್ರ ದಾಬೊಲ್ಕರ್ ಹತ್ಯೆ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಸನಾತನ ಸಂಸ್ಥೆ ಮತ್ತೆ ಸ್ಪಷ್ಟನೆ ನೀಡಿದ್ದು, ತಮ್ಮ ಸಂಸ್ಥೆಯ ವಿರುದ್ಧ ವದಂತಿ ಹರಡುವುದನ್ನು ತಡೆಯಲು ಕೋರ್ಟ್ ಮೊರೆ ಹೋಗುವುದಾಗಿ ಸನಾತನ ಸಂಸ್ಥೆ ವಕ್ತಾರ ಚೇತನ್ ರಾಜಹನ್ಸ್ ಹೇಳಿದ್ದಾರೆ.

    ಇತ್ತೀಚೆಗೆ ಬಂಧಿಸಲ್ಪಟ್ಟ ಒಂಬತ್ತು ಜನ ಸನಾತನ ಸಂಸ್ಥೆಗೆ ಸೇರಿದವರಲ್ಲ. ಈ ಪ್ರಕರಣದಲ್ಲಿ ಅನಗತ್ಯವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಒಂಬತ್ತು ಜನರ ಪೈಕಿ ಐವರ ಹೆಸರುಗಳನ್ನ ಮಾಧ್ಯಮಗಳ ಮೂಲಕ ಮಾತ್ರ ನಾವು ತಿಳಿದುಕೊಂಡಿದ್ದೇವೆ. ಬಂಧಿತರು ನಮ್ಮೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ. ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ಸಂಸ್ಥೆ ವಿರುದ್ಧ ವದಂತಿ ತಡೆಗೆ ಕೋರ್ಟ್ ಮೆಟ್ಟಿಲು ಹತ್ತುತ್ತೇವೆ ಎಂದು ಸನಾತನ ಸಂಸ್ಥೆ ವಕ್ತಾರ ಚೇತನ್ ತಿಳಿಸಿದ್ದಾರೆ.

    ಈ ನಡುವೆ ಅಗತ್ಯ ಬಿದ್ರೆ ಹಿಂದೂ ಬಲಪಂಥೀಯ ಸಂಘಟನೆ ಸನಾತನ ಸಂಸ್ಥೆಯನ್ನು ಶಾಶ್ವತವಾಗಿ ನಿಷೇಧಿಸಲಾಗುವುದು ಎಂದು ಕೇಂದ್ರ ಸಚಿವ ರಾಮ್ ದಾಸ್ ಅಠಾವಳೆ ತಿಳಿಸಿದ್ದಾರೆ. ಇದನ್ನೂ ಓದಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಹಿಂದೆ ಸನಾತನ ಸಂಸ್ಥೆ ಕೈವಾಡ?

    ಈ ಹಿಂದೆಯೂ 2017ರ ಸೆಪ್ಟೆಂಬರ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ ಸಂಸ್ಥೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಅಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಚೇತನ್, ಗೌರಿ ಹತ್ಯೆ ಕೇಸಿನಲ್ಲಿ ಬಲಪಂಥೀಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇತರೆ ಹಿಂದೂ ಸಂಘಟಕರ ಹತ್ಯೆಯ ಹಿಂದಿದ್ದಾರೆ ಎನ್ನುವ ಗಾಳಿಸುದ್ದಿಯೂ ಕೇಳಿಬರುತ್ತಿವೆ. ಸನಾತನ ಸಂಸ್ಥೆಯ ಆಶ್ರಮದ ಒಳಗೆ ಇದುವರೆಗೂ ಯಾರು ಬಂದಿಲ್ಲ. ಗೌರಿ ಹತ್ಯೆಗೂ, ನಮಗೂ, ಯಾವುದೇ ರೀತಿಯ ಸಂಬಂಧವಿಲ್ಲ ಎಂದು ತಿಳಿಸಿದ್ದರು.

    ಎಸ್‍ಐಟಿ ಅಧಿಕಾರಿಗಳ ತಂಡ ಆಶ್ರಮದೊಳಗೆ ಹೋಗಿದೆ ಎನ್ನುವ ಸುದ್ದಿ ಪ್ರಕಟವಾಗಿದೆ. ಆದರೆ ಯಾರೂ ಇದೂವರೆಗೆ ಬಂದಿಲ್ಲ. ಅನಾವಶ್ಯಕವಾಗಿ ಬಲಪಂಥೀಯರನ್ನು ಸುಮ್ಮನೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದ ಅವರು, ದಾಬೋಲ್ಕರ್, ಪನ್ಸಾರೆ ಹತ್ಯೆ ಪ್ರಕರಣಗಳು ನ್ಯಾಯ ರೀತಿಯಲ್ಲಿ ತನಿಖೆಯಾಗುತ್ತಿಲ್ಲ. ರಾಜಕೀಯ ಒತ್ತಡದಿಂದ ಸನಾತನ ಸಂಸ್ಥೆ ಮೇಲೆ ಅನುಮಾನ ವ್ಯಕ್ತವಾಗುವಂತೆ ಮಾಡಲಾಗುತ್ತಿದೆ. ಪ್ರಶಾಂತ್ ಪೂಜಾರಿ ಕೊಲೆಯಾದಾಗ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ ಎಸ್‍ಐಟಿ ಮಾಡಲಿಲ್ಲ, ಗೌರಿ ಹತ್ಯೆ ಆದಾಗ ಮಾತ್ರ ಯಾಕೆ ಎಂದು ಪ್ರಶ್ನಿಸಿದರು. ನಾವು ತನಿಖೆಗೆ ಸಂಪೂರ್ಣವಾಗಿ ಸಹಕರಿಸಲು ಸಿದ್ಧರಿದ್ದೇವೆ ಎಂದು ಚೇತನ್ ಹೇಳಿದ್ದರು.

    ಕುಣಿಗಲ್ ಗಿರಿ ರೀತಿ ಪ್ರಚಾರಕ್ಕಾಗಿ ನಾವು ಎಸ್‍ಐಟಿ ಮುಂದೆ ಹೋಗಲು ನಾವು ಸಿದ್ಧರಿಲ್ಲ. ಎಸ್‍ಐಟಿ ಅಧಿಕಾರಿಗಳು ಯಾವುದೇ ರೀತಿಯಲ್ಲಿ ನಮ್ಮನ್ನು ಪ್ರಶ್ನಿಸಿಲ್ಲ. ಸನಾತನ ಸಂಸ್ಥೆಯ ಕಾರ್ಯಕರ್ತರ ತನಿಖೆ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿವೆ. ಗೌರಿ ಕೊಲೆಗೂ ಸನಾತನ ಸಂಸ್ಥೆಗೂ ಸಂಬಂಧವಿಲ್ಲ. ನಮ್ಮಿಂದ ಯಾವುದೇ ಸಹಾಯ ಕೇಳಿದರೆ ಹೇಳಲು ಸಂಸ್ಥೆ ಸಿದ್ಧವಿದೆ. ಅಗತ್ಯಬಿದ್ದಲ್ಲಿ ಕಾನೂನಿನ ಹೋರಾಟಕ್ಕೂ ಸಿದ್ಧವಿದ್ದೇವೆ ಎಂದು ಇದೇ ವೇಳೆ ಅಮೃತೇಶ್ ಹೇಳಿಕೆ ನೀಡಿದ್ದರು. ಅಂದು ಸನಾತನ ಸಂಸ್ಥೆ ಸುದ್ದಿಗೋಷ್ಠಿಯ ನಡೆಸುವ ವಿಚಾರ ತಿಳಿದು ಎಸ್‍ಐಟಿಯ 8 ಮಂದಿ ಸದಸ್ಯರು ಪ್ರೆಸ್ ಕ್ಲಬ್‍ಗೆ ಬಂದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಾಡಿಗೆಮನೆ ಖಾಲಿ ಮಾಡಿದವ್ರ ವಿವರ ನೀಡಿ – ಆರ್‍ಆರ್ ನಗರದಲ್ಲಿ ಕರಪತ್ರ ಹಂಚಿದ ಎಸ್‍ಐಟಿ

    ಬಾಡಿಗೆಮನೆ ಖಾಲಿ ಮಾಡಿದವ್ರ ವಿವರ ನೀಡಿ – ಆರ್‍ಆರ್ ನಗರದಲ್ಲಿ ಕರಪತ್ರ ಹಂಚಿದ ಎಸ್‍ಐಟಿ

    ಬೆಂಗಳೂರು: ವಿಚಾರವಾದಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ(ವಿಶೇಷ ತನಿಖಾ ತಂಡ) ಈಗಾಗಲೇ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ.

    ರಾಜರಾಜೇಶ್ವರಿನಗರದಲ್ಲಿ ಬಾಡಿಗೆದಾರರ ವಿವರ ಕಲೆಹಾಕುತ್ತಿದ್ದು, ಗೌರಿ ಲಂಕೇಶ್ ಹತ್ಯೆಯ ಬಳಿಕ ಮನೆ ಖಾಲಿ ಮಾಡಿದವರ ಹಾಗೂ ಲಾಡ್ಜ್ ಗಳಲ್ಲಿ ವಾಸ್ತವ್ಯ ಹೂಡಿದ್ದವರ ವಿವರಗಳನ್ನು ಸಂಗ್ರಹಿಸುತ್ತಿದೆ. ಇದಕ್ಕಾಗಿ ಕರಪತ್ರ ಮುದ್ರಿಸಿ ಹಾಗೂ ದಿನಪತ್ರಿಕೆಗಳ ಮೂಲಕ ಮನೆ ಮಾಲೀಕರಿಗೆ, ಲಾಡ್ಜ್ ಮಾಲೀಕರಿಗೆ ವಿವರ ನೀಡುವಂತೆ ಸೂಚಿಸಿದೆ.

    ಅಲ್ಲದೇ ಇ-ಮೇಲ್, ಮೊಬೈಲ್ ಸಂಖ್ಯೆ ಇರುವ ಕರಪತ್ರ ಮುದ್ರಿಸಿರುವ ಎಸ್‍ಐಟಿ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಿದೆ. ಪೊಲೀಸ್ ಸೂಚನೆ ಅಂತ ಸುಮಾರು 22 ಸಾವಿರ ಪಾಂಪ್ಲೆಟ್ ಮುದ್ರಿಸಿ ಹಂಚಿರುವ ಪೊಲೀಸರು ಅಪಾರ್ಟ್‍ಮೆಂಟ್‍ಗಳು, ಬಾಡಿಗೆ ಮನೆಗಳು, ಹೋಟೆಲ್, ಲಾಡ್ಜ್, ಪಿಜಿಗಳು, ಹಾಸ್ಟೆಲ್, ರೆಸಾರ್ಟ್, ದೇವಾಲಗಳ ವಸತಿ ಗೃಹಗಳು ಹಾಗೂ ಯಾವುದೇ ಧಾರ್ಮಿಕ ವಸತಿ ಗೃಹಗಳು ಇತ್ಯಾದಿಗಳಲ್ಲಿ ಖಾಲಿ ಮಾಡಿಕೊಂಡು ಹೋಗಿರುವವರ ಮಾಹಿತಿ ನೀಡಲು ಸೂಚನೆ ನೀಡಿದೆ.

     

  • ಗೌರಿ ಲಂಕೇಶ್ ಹಂತಕರನ್ನು ಕೂಡಲೇ ಬಂಧಿಸಿ: ಸಮಾವೇಶದಲ್ಲಿ ಕೈಗೊಂಡ 3 ಹಕ್ಕೊತ್ತಾಯ ಏನು?

    ಗೌರಿ ಲಂಕೇಶ್ ಹಂತಕರನ್ನು ಕೂಡಲೇ ಬಂಧಿಸಿ: ಸಮಾವೇಶದಲ್ಲಿ ಕೈಗೊಂಡ 3 ಹಕ್ಕೊತ್ತಾಯ ಏನು?

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಬೆಂಗಳೂರಲ್ಲಿ ಮಂಗಳವಾರ ಬೃಹತ್ ರ‍್ಯಾಲಿ ಹಾಗೂ ಸಮಾವೇಶ ನಡೆಯಿತು. ನಾನೂ ಗೌರಿ ಹೆಸರಿನ ಬೃಹತ್ ಪ್ರತಿರೋಧ ಸಮಾವೇಶದಲ್ಲಿ ವಿವಿಧ ಸಾಮಾಜಿಕ ಹೋರಾಟಗಾರರು, ಚಿಂತಕರು, ಪ್ರಗತಿಪರರು, ವಿಚಾರವಾದಿಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

    ಬಿಜೆಪಿ ಹಾಗೂ ಆರ್‍ಎಸ್‍ಎಸ್ ಕಡೆ ಬೊಟ್ಟು ಮಾಡಿದ ಇವರು ಹಿಂಸೆಯನ್ನು ವಿರೋಧಿಸಿದ ದಾಬೋಲ್ಕರ್, ಪನ್ಸಾರೆ, ಕಲಬುರ್ಗಿ, ಮಾದರಿಯಲ್ಲೇ ಗೌರಿ ಲಂಕೇಶ್ ಹತ್ಯೆಯಾಗಿದೆ. ದಾಬೋಲ್ಕರ್‍ರಿಂದ ಗೌರಿ ತನಕ ನಡೆದ ಹತ್ಯೆಗಳಲ್ಲಿ ಗೋವಾದ ಸನಾತನ ಸಂಸ್ಥೆಯಂತ ಮೂಲಭೂತವಾದಿಗಳ ಕೈವಾಡವಿದೆ ಎಂದು ಆರೋಪಿಸಿದ್ರು. ಭಾಷಣದ ವೇಳೆ ಕೆಲವರು ಕಣ್ಣೀರಿಟ್ಟರು.

    ಬೇಟಿ ಬಚಾವ್-ಬೇಟಿ ಪಡಾವ್ ಅಂತಾ ಘೋಷಣೆ ಮಾಡ್ತಾರೆ. ಆದರೆ ಆಕೆ ಹೆಚ್ಚು ಮಾತನಾಡಿದರೆ ಗುಂಡಿಟ್ಟು ಹೊಡೆದು ಉರುಳಿಸ್ತಾರೆ ಅಂತಾ ಕೇಂದ್ರದ ವಿರುದ್ಧ ಹರಿಹಾಯ್ದರು. ರ‍್ಯಾಲಿಯಲ್ಲಿ ಮಾತಾಡಿದ ಪ್ರಗತಿಪರರರು, ಚಿಂತಕರ ಹತ್ಯೆ ಬಗ್ಗೆ ವಿಶ್ವಸಂಸ್ಥೆಗೆ ದೂರು ನೀಡೋದಾಗಿ ಹೇಳಿದರು. ವಿಶೇಷ ಅಂದರೆ ಗೌರಿ ಲಂಕೇಶ್ ಮಾಜಿ ಪತಿ ಚಿದಾನಂದ ರಾಜಘಟ್ಟ ತಮ್ಮ ವಿದೇಶಿ ಪತ್ನಿ ಜೊತೆ ಸಮಾವೇಶಕ್ಕೆ ಬಂದಿದ್ದರು.

    ನನಗೆ 99 ವರ್ಷ ವಯಸ್ಸು, ಈ ವಯಸ್ಸಿನಲ್ಲೂ ನನಗೆ ಹೋರಾಡುವ ಕಿಚ್ಚಿದೆ. ಆದ್ರೆ, ನಿಮ್ಮಲ್ಲಿ ಯಾಕೆ ಇಲ್ಲ ಕಿಚ್ಚು? ದ್ವೇಷ ಪ್ರಚೋದಿಸುವ ಧರ್ಮವನ್ನ ನಾವು ಒಪ್ಪಲ್ಲ. ಬದಲಾವಣೆಗೆ ಈ ಹೋರಾಟ ಅನಿವಾರ್ಯ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಕಿರಿಯರನ್ನು ಪ್ರಶ್ನಿಸಿದರು.

    ಅನೇಕ ಗೌರಿಯರಿಗೆ ನಮಸ್ಕಾರ ಎಂದು ಕಣ್ಣೀರು ಸುರಿಸುತ್ತಾ ಮಾತು ಆರಂಭಿಸಿದ ಗೌರಿ ಲಂಕೇಶ್ ತಾಯಿ ಇಂದಿರಾ ಲಂಕೇಶ್ ನೀವೆಲ್ಲಾ ನನ್ನ ಗೌರಿಯರು ಎಂದರು. ಸಾಹಿತಿ ಚಂಪಾ, ಸತ್ತವರು ಎಲ್ಲಿ ಹೋಗುತ್ತಾರೆ, ನೆನಪಿನಾಳದಲ್ಲಿ ಪ್ರತಿಭಟನೆ ಕಾವು ಕೊಡುತ್ತಲೇ ಇರುತ್ತಾರೆ ಎಂದು ಕವನ ವಾಚನ ಮಾಡಿದರು.

    ಕೇಂದ್ರ ರೈಲ್ವೇ ನಿಲ್ದಾಣದಿಂದ ಶುರುವಾದ ನಾನು ಗೌರಿ ಬೃಹತ್ ರ‍್ಯಾಲಿ, ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮುಕ್ತಾಯಗೊಂಡಿತು. ನಗಾರಿ ಬಾರಿಸುವ ಮೂಲಕ ಪ್ರತಿರೋಧ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ದೊರೆಸ್ವಾಮಿಯವರು ಲಂಕೇಶ್ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಗೌರಿಗೆ ಪೆರಿಯಾರ್ ಪ್ರಶಸ್ತಿ ಘೋಷಣೆ ಆಯ್ತು. ಶೀಘ್ರ ಕ್ರಮಕ್ಕೆ ಹಕ್ಕೋತ್ತಾಯ ಮಾಡಲಾಯ್ತು.

    ಪ್ರತಿರೋಧ ಸಮಾವೇಶಕ್ಕೆ ಸ್ವಯಂಪ್ರೇರಿತವಾಗಿ ಸಾವಿರಾರು ಮಂದಿ ಬಂದಿದ್ದರು. ವಿಶೇಷ ಎಂದರೆ ಸಚಿವರಾದ ಖಾದರ್, ಹೆಚ್‍ಎಂ ರೇವಣ್ಣ, ಸಿಪಿಎಂ ನಾಯಕ ಸೀತಾರಂ ಯೆಚೂರಿ, ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್, ಸಾಹಿತಿ ದೇವನೂರು ಮಹಾದೇವ, ಪತ್ರಕರ್ತ ಪಿ. ಸಾಯಿನಾಥ್, ತೀಸ್ತಾ ಸೆಟಲ್ವಾಡ್, ಮುರುಘಾಶ್ರೀಗಳು, ಸ್ವಾಮಿ ಅಗ್ನಿವೇಶ್, ಸ್ವರಾಜ್ ಇಂಡಿಯಾ ಮುಖಂಡರಾದ ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್, ಕವಿತಾ ಕೃಷ್ಣನ್, ಜಿಗ್ನೆಶ್ ಮೇವಾನಿ ನಟ ಪ್ರಕಾಶ್ ರೈ ಸೇರಿದಂತೆ ಹಲವು ಪ್ರಗತಿ ಪರ ಚಿಂತಕರು ಭಾಗವಹಿಸಿದ್ದರು.

    ಸಮಾವೇಶದಲ್ಲಿ ಕೈಗೊಂಡ 3 ಹಕ್ಕೊತ್ತಾಯಗಳು:

    1. ಗೌರಿ ಲಂಕೇಶ್ ಹತ್ಯೆಯ ತನಿಖೆಯನ್ನು ರಾಜ್ಯ ಸರ್ಕಾರ ರಚಿಸಿರುವ ಎಸ್‍ಐಟಿ ಮುಖಾಂತರ ತೀವ್ರಗೊಳಿಸಿ, ಕಾಲನಿಗದಿತವಾಗಿ ಮುಗಿಸಿ ಹಂತಕರನ್ನು ಹಾಗೂ ಅವರ ಹಿಂದೆ ಇರುವ ಶಕ್ತಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಬೇಕು.

    2. ಗೌರಿ ಲಂಕೇಶ್‍ರು ಕಳೆದ ಒಂದೂವರೆ ದಶಕಗಳಿಂದ ಕೆಲವು ಸಂವಿಧಾನ ವಿರೋಧಿ ಹಾಗೂ ಮಾನವತೆಯ ವಿರೋಧಿಗಳನ್ನು ಖಂಡಿಸುತ್ತಾ ಚಿಂತನೆ ಹಾಗೂ ಹೋರಾಟವನ್ನು ನಡೆಸಿದ್ದರು. ಅವರು ಮಾತ್ರವಲ್ಲದೇ, ಈ ದೇಶದಲ್ಲಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ವಿಚಾರವಾದಿಗಳ ಸರಣಿ ಕೊಲೆಗಳು ಇನ್ನೂ ಹಲವಡೆ ನಡೆಯುತ್ತಿದೆ. ಹಾಗಾಗಿ ಈ ಆಯಾಮಗಳನ್ನು ವಿಶೇಷವಾಗಿ ಪರಿಗಣಿಸಿ ತನಿಖೆಯನ್ನು ಚುರುಕುಗೊಳಿಸಬೇಕೆಂದು ಈ ಸಮಾವೇಶವು ಒತ್ತಾಯಿಸುತ್ತದೆ.

    3. ಆರ್‍ಎಸ್‍ಎಸ್, ಹಿಂದೂ ಜಾಗರಣ ವೇದಿಕೆ, ವಿಎಚ್‍ಪಿ, ಭಜರಂಗದಳ, ಶ್ರೀರಾಮಸೇನೆ, ಸನತನ ಸಂಸ್ಥೆ ಇತ್ಯಾದಿ ಆರೆಸ್ಸೆಸ್‍ನ ಅಂಗಸಂಘಟನೆಗಳ ಸದಸ್ಯರು/ಬೆಂಬಲಿಗರು ಈ ಹತ್ಯೆಯನ್ನು ಸಂಭ್ರಮಿಸಿದ ದುರಂತವು ಈ ನಾಡಿನಲ್ಲಿ ನಡೆದುದಕ್ಕೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ. ಹಾಗೆಯೇ ಬಿಜೆಪಿಯ ನಾಯಕರುಗಳು ಹತ್ಯೆಗೆ ಪರೋಕ್ಷ ಸಮರ್ಥನೆ ನೀಡಿ ಮಾತಾಡಿದ್ದನ್ನೂ ಈ ನಾಡು ನೋಡಿದೆ. ಯಾವುದೇ ಧರ್ಮದ ಬೋಧನೆಗಳಿಗೂ ವಿರುದ್ಧವಾದ ಇಂತಹ ಅಮಾನವೀಯ ನಡವಳಿಕೆಗಳನ್ನು ಸಮಾವೇಶವು ಖಂಡಿಸುತ್ತದೆ. ಈ ಬಗೆಯ ಮನಸ್ಥಿಯನ್ನು ಇಲ್ಲವಾಗಿಸಲು ಪ್ರಯತ್ನ ಪಡುವುದು ನಾಗರಿಕ ಸಮಾಜದ ಸರ್ಕಾರಗಳ ಕರ್ತವ್ಯವಾಗಿದೆ. ಆ ಒಟ್ಟಿನಲ್ಲಿ ಕರ್ನಟಕ ಸರ್ಕರವು ಪರಿಣಾಮಕಾರಿ ಕ್ರಮಗಳನ್ನು ತಗೆದುಕೊಳ್ಳಬೇಕೆಂದು ಆಗ್ರಹಿಸಿಸುತ್ತೇವೆ.

    https://youtu.be/SrOsUvt0IkA