Tag: ಗೌರಿ- ಗಣೇಶ ಹಬ್ಬ

  • ದರ್ಶನ್ ಜೊತೆಗಿನ ಫೋಟೋ ಪೋಸ್ಟ್ ಮಾಡಿರುವ ವಿಜಯಲಕ್ಷ್ಮಿ

    ದರ್ಶನ್ ಜೊತೆಗಿನ ಫೋಟೋ ಪೋಸ್ಟ್ ಮಾಡಿರುವ ವಿಜಯಲಕ್ಷ್ಮಿ

    ಲ್ಲವೂ ಸರಿಯಾಗಿದಿದ್ದಿದ್ರೆ ನಟ ದರ್ಶನ್ ಇಂದು ಗೌರಿ ಗಣೇಶ ಹಬ್ಬವನ್ನು ಮನೆಯಲ್ಲಿ ಆಚರಿಸುತ್ತಿದ್ರು. ಆದರೆ ಇದೀಗ ಜೈಲಲ್ಲಿ ಆಚರಿಸಿಬೇಕಾಗಿದೆ. ಸಾಮಾನ್ಯವಾಗಿ ನಟ ದರ್ಶನ್ ಹಬ್ಬಗಳಲ್ಲಿ ಶುಭಾಶಯ ಕೋರಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಪದ್ಧತಿ ಪಾಲಿಸಿಕೊಂಡು ಬಂದಿದ್ದರು. ಕಳೆದ ವರ್ಷವೂ ದರ್ಶನ್ ಪಾಲಿನ ಗೌರಿ ಗಣೇಶ ಹಬ್ಬ ಜೈಲಲ್ಲೇ ನಡೀತು, ಈ ವರ್ಷವೂ ಜೈಲೇ ಕಂಟಿನ್ಯೂ ಆಗಿದೆ. ಇಂಥಹ ವಿಪರ್ಯಾಸದಲ್ಲೂ ವಿಜಯಲಕ್ಷ್ಮಿ ಪತಿ ಜೊತೆ ಫೋಟೋ ಪೋಸ್ಟ್ ಮಾಡಿ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯ ಕೋರಿದ್ದಾರೆ.

    ಫಾರ್ಮ್ಹೌಸ್‌ನಲ್ಲಿ ಪೂಜಾ ಸಮಯವೊಂದರಲ್ಲಿ ತೆಗೆದಿರುವ ಫೋಟೋವನ್ನ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪೋಸ್ಟ್ ಮಾಡಿದ್ದಾರೆ. ಬಹುಶಃ ದರ್ಶನ್ ಹೊರಗಡೆ ಇದ್ದಿದ್ರೆ ಸಂಭ್ರಮದಿಂದ ಈ ಬಾರಿಯಾದರೂ ಗೌರಿ ಗಣೇಶ ಹಬ್ಬವನ್ನ ಆಚರಿಸುತ್ತಿದ್ದರೋ ಏನೋ, ಆದರೆ ಈ ಬಾರಿಯೂ ಪರಪ್ಪನ ಅಗ್ರಹಾರದಲ್ಲೇ ಗಣೇಶ ಪ್ರಸಾದ ಸವಿಯಬೇಕಾದ ಪರಿಸ್ಥಿತಿ ಬಂದಿದೆ.

    ಒಟ್ನಲ್ಲಿ ಎಲ್ಲಾ ದುಗುಡ ದುಮ್ಮಾನದ ನಡುವೆಯೂ ವಿಜಯಲಕ್ಷ್ಮಿ ಇನ್ಸ್‌ಸ್ಟಾಗ್ರಾಂನಲ್ಲಿ ದರ್ಶನ್‌ ಫೋಟೋ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ. ಟೀಕೆ ಟಿಪ್ಪಣಿಗೆ ಅವಕಾಶ ನೀಡಲೇಬಾರದು ಎಂದು ತೀರ್ಮಾನಿಸಿ ಕಾಮೆಂಟ್ಸ್ ಸೆಕ್ಷನ್‌ನ್ನು ಆಫ್ ಮಾಡಿದ್ದಾರೆ ವಿಜಯಲಕ್ಷ್ಮಿ ದರ್ಶನ್.

  • 2 ಸಾವಿರ ಮಕ್ಕಳಿಂದ ಗಣೇಶನ ಆಕೃತಿ – ಐನೂರು ಅಡಿ ಎತ್ತರದಿಂದ ಚಿತ್ರೀಕರಣ

    2 ಸಾವಿರ ಮಕ್ಕಳಿಂದ ಗಣೇಶನ ಆಕೃತಿ – ಐನೂರು ಅಡಿ ಎತ್ತರದಿಂದ ಚಿತ್ರೀಕರಣ

    ಕೊಪ್ಪಳ: ಗೌರಿ-ಗಣೇಶ ಹಬ್ಬದ (Gowri Ganesh Festival) ಪ್ರಯುಕ್ತ ಸುಮಾರು ಎರಡು ಸಾವಿರ ಮಕ್ಕಳು ಸಾಮೂಹಿಕವಾಗಿ ಸೇರಿ ಬೃಹತ್ ವಿನಾಯಕನ ಆಕೃತಿ ರಚನೆಯಲ್ಲಿ ಭಾಗಿಯಾಗುವ ಮೂಲಕ ಗಮನ ಸೆಳೆದಿದ್ದಾರೆ.

    ಜಿಲ್ಲೆಯ ಗಂಗಾವತಿ (Gangavati) ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ (Vidyaniketan Public School) ಗಣೇಶ ಹಬ್ಬದ ಪ್ರಯುಕ್ತ ಎರಡು ಸಾವಿರ ವಿದ್ಯಾರ್ಥಿಗಳಿಂದ ಬೃಹತ್ ವಿನಾಯಕನ ಆಕೃತಿ ರಚಿಸಲಾಯಿತು.ಇದನ್ನೂ ಓದಿ: ಅಶ್ಲೀಲ ವೀಡಿಯೋ ತೋರಿಸಿ ಹೀಗೆ ಸಹಕರಿಸು ಅಂತ ಗಂಡ ಟಾರ್ಚರ್ – ಪೆಟ್ರೋಲ್ ಸುರಿದುಕೊಂಡು ಮಹಿಳೆ ಆತ್ಮಹತ್ಯೆ

    ಮೂರು ಎಕರೆಯಷ್ಟಿರುವ ಶಾಲಾ ಮೈದಾನದಲ್ಲಿ ಎರಡು ಎಕರೆಯಷ್ಟು ಪ್ರದೇಶದಲ್ಲಿ ಶಾಲೆಯ ಕಲಾ ಶಿಕ್ಷಕ ವಿನೋದ್, ಗಣೇಶ ಆಕೃತಿಯ ಸ್ಕೆಚ್ ರಚಿಸಿದ್ದರು. ಅವರು ರಚಿಸಿದ ಸ್ಕೆಚ್‌ನಲ್ಲಿ ಮಕ್ಕಳು ಸಾಮೂಹಿಕವಾಗಿ ನಿಂತು ವಿನಾಯಕನ ಆಕೃತಿ ರಚನೆಯಲ್ಲಿ ಭಾಗಿಯಾಗಿದ್ದರು. ಈ ದೃಶ್ಯವನ್ನು ಸುಮಾರು ಐನೂರು ಅಡಿಗಳ ಎತ್ತರದಿಂದ ಡ್ರೋನ್ ಮೂಲಕ ಸೆರೆ ಹಿಡಿಯಲಾಯಿತು.

    ಬೃಹತ್ ಆಕಾರದ ಗಣೇಶನ ಆಕೃತಿಯ ಕೆಳಗೆ ಶಿಕ್ಷಣ ಸಂಸ್ಥೆಯ 25ಕ್ಕೂ ಹೆಚ್ಚು ವಾಹನಗಳನ್ನು ಬಳಸಿಕೊಂಡು ಶ್ರೀ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಎಂಬ ಶಾಲೆಯ ಸಂಕೇತಾಕ್ಷರಗಳು ಬರುವಂತೆ ನಿಲ್ಲಿಸಲಾಗಿತ್ತು. ಶಾಲಾ ಮಕ್ಕಳ ಈ ಸಾಹಸ ಸಾಮಾಜಿಕ ಜಾಲತಾಣದಲ್ಲಿ (Social Media) ಜನರ ಗಮನ ಸೆಳೆಯುತ್ತಿದೆ.ಇದನ್ನೂ ಓದಿ: ಕೊಲೆಗೂ ಮುನ್ನ ರೇಣುಕಾಸ್ವಾಮಿಯನ್ನು ದರೋಡೆ ಮಾಡಿತ್ತು ‘ಡಿ’ಗ್ಯಾಂಗ್!

    ಈ ಬಗ್ಗೆ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, ಗಣೇಶನ ಹಬ್ಬಕ್ಕೆ ಮಕ್ಕಳಿಂದ ವಿನಾಯಕ ಆಕೃತಿ ರಚಿಸುವ ಮೂಲಕ ಚಾಲನೆ ನೀಡಲಾಗಿದೆ. ಈ ಮೂಲಕ ಹಬ್ಬಕ್ಕೆ ಮೆರುಗು ನೀಡಲಾಗಿದೆ. ಇದಕ್ಕಾಗಿ ಮಕ್ಕಳು ಸುಮಾರು ಮೂರು ಗಂಟೆಗೂ ಅಧಿಕ ಸಮಯದ ತಾಲೀಮು ಮಾಡಿದ್ದಾರೆ ಎಂದರು.

  • ಗಣೇಶ ಚತುರ್ಥಿ: ಸಿನಿಮಾಗಳಲ್ಲಿ ಗಣಪನ ಗುಣ’ಗಾನ’

    ಗಣೇಶ ಚತುರ್ಥಿ: ಸಿನಿಮಾಗಳಲ್ಲಿ ಗಣಪನ ಗುಣ’ಗಾನ’

    ಣೇಶ ಮೋದಕ ಪ್ರಿಯನಾದರೂ, ನಾದಪ್ರಿಯನಂತೆ ಭಕ್ತರು ಗುಣಗಾನ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಸಿನಿಮಾ ರಂಗದಲ್ಲಿ ಗಣಪನಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಎಷ್ಟೋ ಥಿಯೇಟರ್‌ಗಳಲ್ಲಿ ‘ನಮೋ ಗಣೇಶ..’ ಹಾಡಿನ ಮೂಲಕವೇ ಚಿತ್ರಗಳನ್ನು ಶುರು ಮಾಡುವ ಪರಿಪಾಠವೂ ಇದೆ. ‘ಗೌರಿ ಗಣೇಶ’ (Gowri Ganesh Festival) ಹಬ್ಬವನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಗಣಪನ ಹಬ್ಬ ಬಂತಂದ್ರೆ ಕೆಲವು ಸಿನಿಮಾ ಹಾಡುಗಳು ನೆನಪಾಗುತ್ತೆ. ಎಷ್ಟೇ ಹೊಸ ಹೊಸ ಹಾಡುಗಳು (Kannada Songs) ಬಂದ್ರು ಈ ಹಾಡುಗಳನ್ನ ಮಾತ್ರ ಮರೆಯಲಾಗದು. ಇದನ್ನೂ ಓದಿ:ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡ ‘ಜಿಗ್ರಾ’ ನಟಿ ಆಲಿಯಾ ಭಟ್

    ಬೀದಿ ಬೀದಿಯಲ್ಲಿ, ಗಲ್ಲಿ ಗಲ್ಲಿಯಲ್ಲೂ ಈ ಹಾಡುಗಳನ್ನ ಕೇಳುತ್ತಿರುತ್ತಾರೆ. ಸಾಮಾನ್ಯ ದಿನಗಳಿಗಿಂತ ಗಣೇಶ ಹಬ್ಬಗಳಲ್ಲೇ ಈ ಹಾಡುಗಳನ್ನು ಹೆಚ್ಚಿಗೆ ನೆನಪಿಸಿಕೊಳ್ಳುತ್ತಾರೆ ಭಕ್ತಗಣ. ಹಾಗಾಗಿ ಗಣೇಶ ಹಬ್ಬದಲ್ಲಿ ಈ ಹಾಡುಗಳು ಟ್ರೆಂಡಿಂಗ್ ಆಗಿ ಬಿಡುತ್ತದೆ. ಹಾಗಿದ್ರೆ, ಗಣೇಶ ಚತುರ್ಥಿಯ ದಿನದಂದು ಚಾಲ್ತಿಯಲ್ಲಿರುವ ಸಿನಿಮಾ ಹಾಡುಗಳ ಲಿಸ್ಟ್ ಇಲ್ಲಿದೆ.

    ‘ಜೈ ಗಣೇಶʼ ಹಾಡು

    ರಿಯಲ್ ಸ್ಟಾರ್ ಉಪೇಂದ್ರ (Upendra) ನಟನೆಯ ‘ಕುಟುಂಬ’ (Kutumba) ಸಿನಿಮಾದಲ್ಲಿ ಗಣೇಶನ ಬಗ್ಗೆ ಹಾಡೊಂದಿದೆ. ಗಣೇಶ ಹಬ್ಬಕ್ಕೆ ಥಟ್ ಅಂತ ನೆನಪಾಗೋದೇ ಈ ಹಾಡು. ಕಾಡಿನಲ್ಲಿ ಮೀಸೆಯಿಟ್ಟೆ, ಮೀಸೆಯಲ್ಲಿ ದ್ವೇಷವಿಟ್ಟೆ. ನಾಡಿನಲ್ಲಿ ರೋಷವಿಟ್ಟೆ ಕಿಲಾಡಿ ಜೈ ಗಣೇಶ ಎಂಬ ಹಾಡು ಪದೇ ಪದೇ ಕೇಳಬೇಕು ಎನಿಸುತ್ತದೆ. ಇಂದಿಗೂ ಈ ಹಾಡನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಆರ್ಕೆಸ್ಟ್ರಾಗಳಲ್ಲಂತೂ ಈ ಹಾಡು ಸಖತ್ ಫೇಮಸ್.

    ‘ಗಣ ಗಣ ಗಣೇಶ’ ಹಾಡು

    ರಮ್ಯಾ ಕೃಷ್ಣ, ಅನುಪ್ರಭಾಕರ್ ನಟನೆಯ ‘ಶ್ರೀಕಾಳಿಕಾಂಬ’ (Shreekalikamba) ಚಿತ್ರದಲ್ಲೂ ಕೂಡ ಗಣೇಶನ ಬಗ್ಗೆ ವಿಶೇಷವಾದ ಹಾಡಿದೆ. ‘ಗಣೆ ಗಣೆ ಗಣೆ ಗಣೇಶ ಹೊಟ್ಟೆ, ಗಣೇಶ ಹೀರೋ’ ಎಂದು ಮೂಷಿಕವಾಹನನ ಬಗ್ಗೆ ಹಾಡು ಕೇಳಿರಬಹುದು. ಈ ಹಾಡು ನೆನಪಾಗುತ್ತೆ.

    ‘ನೀ ನಮ್ಮ ಗೆಲುವಾಗಿ ಬಾ’ ಹಾಡು

    ‘ಶಬರಿಮಲೈ ಸ್ವಾಮಿ ಅಯ್ಯಪ್ಪ’ ಚಿತ್ರದಲ್ಲಿ ಗಣೇಶನ ಬಗ್ಗೆ ಒಂದು ಭಕ್ತಿಗೀತೆ ಇದೆ. ಗಣೇಶನ ಬಗ್ಗೆ ಹಾಡುಗಳು ಅಂದರೆ ಈ ಹಾಡು ಕೂಡ ಥಟ್ ಅಂತ ನೆನಪಾಗುತ್ತದೆ. ನೀ ನಮ್ಮ ಗೆಲುವಾಗಿ ಬಾ ಗಜಮುಖನೇ ನೀ ನಮ್ಮ ಗೆಲುವಾಗಿ ಬಾ ಎಂಬ ಹಾಡು ಕೇಳಲು ಬಹಳ ಇಂಪಾಗಿದೆ.

    ‘ಗಣಪತಿ ಬಪ್ಪಾ ಮೋರಿಯಾ’ ಹಾಡು

    ಡಾ ವಿಷ್ಣುವರ್ಧನ್, ರಮೇಶ್ ಅರವಿಂದ್, ಪ್ರೇಮಾ ಅಭಿನಯದ ‘ಏಕದಂತ’ ಸಿನಿಮಾದಲ್ಲಿ ಗಣೇಶ ಮಹಿಮೆಯನ್ನ ಹೇಳುವ ಹಾಡಿದೆ. ‘ನಗುವ ನಮ್ಮೇಜಮಾನ, ನಗಿಸೋ ನಮ್ಮ ಜನನಾ….ಕಾಪಾಡೋ ಕಾಪಾಡೋ…ಗಣಪತಿ ಬಪ್ಪಾ ಮೋರಿಯಾ, ಹರಿಸೋ ನಮ್ಮ ಏರಿಯಾನ ಎಂದು ಹಾಡು ಕೇಳಿರಬಹುದು.

    ‘ಮಹಾ ಗಣಪತಿ’ ಹಾಡು

    ಶಿವರಾಜ್‌ಕುಮಾರ್, ದಾಮಿನಿ ನಟನೆಯ ‘ಅಸುರ’ ಮಹಾ ಗಣಪತಿ ಸಾಂಗ್ ಇಂದಿಗೂ ಸಿನಿಮಾ ಪ್ರಿಯರ ಅಚ್ಚುಮೆಚ್ಚಿನ ಗೀತೆಯಾಗಿದೆ. ಈ ಹಾಡಿನಲ್ಲಿ ರಾಘವ್ ಲಾರೆನ್ಸ್ ಹೆಜ್ಜೆ ಹಾಕಿದ್ದರು ಎಂಬುದು ವಿಶೇಷ.

  • ವಿಘ್ನೇಶ್ವರನ ಪೂಜೆಗೆ ಗರಿಕೆ ಯಾಕೆ ಬೇಕು? – ಇದರ ಹಿಂದಿದೆ ಐತಿಹಾಸಿಕ ಕಥೆ!

    ವಿಘ್ನೇಶ್ವರನ ಪೂಜೆಗೆ ಗರಿಕೆ ಯಾಕೆ ಬೇಕು? – ಇದರ ಹಿಂದಿದೆ ಐತಿಹಾಸಿಕ ಕಥೆ!

    ಯಾವುದೇ ಶುಭ ಕಾರ್ಯಗಳು ನಿರ್ವಿಘ್ನವಾಗಿ ಆಚರಣೆ ಮಾಡುವುದಕ್ಕಾಗಿಯೇ ಮೊದಲು ವಿಘ್ನೇಶ್ವರನ್ನು (Ganesha) ಪೂಜಿಸುತ್ತಾರೆ. ಆದ್ರೆ ಪೂಜಾ ಸಂದರ್ಭದಲ್ಲಿ ಗೋವಿನ ಸಗಣಿಯೊಂದಿಗೆ ಒಂದೆರಡು ಗರಿಕೆಗಳನ್ನೂ ಇಡುತ್ತಾರೆ. ಈ ಗರಿಕೆಯನ್ನು ಪೂಜಾ  ಕೈಂಕರ್ಯಕ್ಕೆ (Pooja Perfam) ಬಳಸುವುದಕ್ಕೂ ಒಂದು ಕಾರಣವಿದೆ. ಅದೇನು ಎಂದು ತಿಳಿಯಬೇಕೇ ಹಾಗಿದ್ದರೆ ಮುಂದೆ ಓದಿ…

    ಒಂದು ಸಾರಿ ಯಮಲೋಕದಲ್ಲಿ ಉತ್ಸವ ನಡೆದಿತ್ತು. ಉತ್ಸವದಲ್ಲಿ ಅಪ್ಸರೆಯರು ಮತ್ತು ನರ್ತಕಿಯರು ನೃತ್ಯ ಮಾಡುತ್ತಿದ್ದರು. ತಿಲೋತ್ತೆಮೆ ನೃತ್ಯ ಕಂಡ ಯಮ ಮೋಹಿತನಾದನು. ಯಮ ಅನುರಕ್ತನಾದ ಪರಿಣಾಮ ತಿಲೋತ್ತಮೆಯ ಗರ್ಭದಲ್ಲಿ ಭಯಂಕರ, ಕ್ರೂರ ಮತ್ತು ವಿಕಾರವಾದ ಅನಲಾಸುರ ಎಂಬ ರಾಕ್ಷಸ ಹುಟ್ಟಿಕೊಂಡನು. ಅನಲಾಸುರ ಹೋದ ಸ್ಥಳದಲ್ಲಿ ಅಗ್ನಿ ನಿರ್ಮಾಣವಾಗಿ ಎಲ್ಲವೂ ಭಸ್ಮವಾಗುತಿತ್ತು. ಇಂತಹ ಭಯಂಕರ ರಾಕ್ಷಸ ದೇವತೆಗಳನ್ನು ಬೆನ್ನಟ್ಟಲು ಆರಂಭಿಸಿದನು.

    ಅನಲಾಸುರನಿಂದ ಭಯಭೀತರಾದ ದೇವತೆಗಳು ಗಜಾನನ್ನು ಪ್ರಾರ್ಥಿಸಲು ಆರಂಭಿಸಿದರು. ಆಗ ಗಜಾನನ ಬಾಲ ರೂಪದಲ್ಲಿ ದೇವತೆಗಳ ಮುಂದೆ ಪ್ರತ್ಯಕ್ಷನಾಗಿ ಅನಲಾಸುರನನ್ನು ವಧೆ ಮಾಡಲಾಗುವುದು ಎಂದು ಭರವಸೆ ನೀಡಿದನು. ಅಷ್ಟರಲ್ಲಿ ದಶ ದಿಕ್ಕುಗಳನ್ನು ಭಸ್ಮ ಮಾಡುತ್ತ ಅನಲಾಸುರ ದೇವತೆಗಳ ಬಳಿ ಬಂದನು. ಎಲ್ಲ ದೇವತೆಗಳು ಭಯಗೊಂಡು ಅತ್ತಿತ್ತ ಓಡಾಡ ತೊಡಗಿದರು.

    ಬಾಲಗಣೇಶ ಮಾತ್ರ ನಿಂತಲ್ಲಿಯೇ ನಿಂತಿದ್ದನು. ಗಜಾನನ ಬಳಿ ಬಂದ ಅನಲಾಸುರ ಬಾಲಗಣೇಶನನ್ನು ನುಂಗಲು ಮುಂದೆ ಬಂದನು. ಅಷ್ಟರಲ್ಲಿಯೇ ಬಾಲ ಗಣೇಶ ದೈತ್ಯ ರೂಪ ತಾಳಿ ಅನಲಾಸುರನ್ನು ನುಂಗಿ ಬಿಟ್ಟನು. ಸಾಕ್ಷಾತ್ ಅಗ್ನಿ ಸ್ವರೂಪನಾದ ಅನಲಾಸುರನನ್ನು ನುಂಗಿದ್ದರಿಂದ ಗಜಾನನ ಶರೀರದಲ್ಲಿ ದಾಹ ಉದ್ಭವಿಸಿತು.

    ಗಣೇಶನ ಬಳಿ ಬಂದ ಸರ್ವ ದೇವತೆಗಳು ಆತನ ದಾಹವನ್ನು ಉಪಶಮನಿಸಲು ವಿವಿಧ ಉಪಾಯಗಳನ್ನು ಮಾಡಿದರು. ಇಂದ್ರದೇವ ಶೀತಲ ಚಂದ್ರ ಮತ್ತು ಅಮೃತವನ್ನು ಗಜಾನನ ತಲೆಯ ಮೇಲಿಟ್ಟರೂ ದಾಹ ಕಡಿಮೆಯಾಗಲಿಲ್ಲ. ಬ್ರಹ್ಮ ಸಿದ್ಧಿ ಮತ್ತು ಬುದ್ಧಿ ಎಂಬ ಮಾನಸ ಕನ್ಯೆಗಳನ್ನು ನೀಡಿದರೆ, ವಿಷ್ಣು ತನ್ನ ಕೈಯಲ್ಲಿದ್ದ ತಂಪಾದ ಕಮಲ ನೀಡಿದ. ವರುಣ ದೇವ ತಂಪಾದ ಜಲಾಭಿಷೇಕ ಮಾಡಿದ. ಪರಮೇಶ್ವರ ತನ್ನ ಶೇಷನಾಗನನ್ನು ಗಣೇಶನ ಹೊಟ್ಟೆಯ ಮೇಲೆ ಸುತ್ತಿದ. ದೇವತೆಗಳು ಎಲ್ಲಾ ರೀತಿಯಿಂದಲೂ ಉಪಾಯ ಮಾಡಿದರೂ ಗಜಾನನ ದಾಹ ಮಾತ್ರ ಕಡಿಮೆಯಾಗಲಿಲ್ಲ.

    ಕೊನೆಗೆ 88 ಸಹಸ್ರ ಮುನಿಗಳು 21 ಹಚ್ಚ ಹಸಿರಾದ ದ್ರುವ (ಗರಿಕೆ) ಗಣೇಶನ ಮಸ್ತಕದ ಮೇಲೆ ಸುರಿದರು. ಆಗ ಗಜಾನನ ದಾಹ ಕಡಿಮೆ ಆಯ್ತು. ಇದರಿಂದ ಗಣೇಶ ಪ್ರಸನ್ನಗೊಂಡು, ಅನೇಕ ಉಪಾಯದಿಂದ ನನ್ನ ಅಂಗದ ದಾಹ ಕಡಿಮೆ ಆಗಲಿಲ್ಲ. ದ್ರುವದಿಂದ ಮಾತ್ರ ನನ್ನ ಅಂಗದ ದಾಹ ಕಡಿಮೆ ಆಯ್ತು. ಇನ್ನ್ಮುಂದೆ ನನಗೆ ದ್ರುವ ಅರ್ಪಣೆ ಮಾಡುವವರಿಗೆ ಸಾವಿರಾರು ಯಜ್ಞ, ವ್ರತ, ತೀರ್ಥಯಾತ್ರೆ ಮತ್ತು ದಾನ ಮಾಡಿದ ಪುಣ್ಯ ಲಭಿಸಲಿದೆ ಎಂದು ಹೇಳಿದ. ಹೀಗಾಗಿ ಈಗಲೂ ಗಣಪತಿಗೆ ಗರಿಕೆಯನ್ನು ಇಟ್ಟು ಪೂಜೆ ಮಾಡಲಾಗುತ್ತದೆ. ಹೀಗೆ ಮಾಡಿದ್ರೆ ಪುಣ್ಯ ಲಭಿಸುತ್ತದೆ ಎಂಬುದು ಭಕ್ತರ ನಂಬಿಕೆ.

  • ಬೆಂಗಳೂರಿನಲ್ಲಿ ಗಣೇಶನನ್ನು ಕೂರಿಸ್ತೀರಾ – ಪೊಲೀಸರ ಮಾರ್ಗಸೂಚಿಯಲ್ಲಿ ಏನಿದೆ?

    ಬೆಂಗಳೂರಿನಲ್ಲಿ ಗಣೇಶನನ್ನು ಕೂರಿಸ್ತೀರಾ – ಪೊಲೀಸರ ಮಾರ್ಗಸೂಚಿಯಲ್ಲಿ ಏನಿದೆ?

    ಬೆಂಗಳೂರು: ಗೌರಿ ಗಣೇಶ ಹಬ್ಬದ (Gowri Ganesha Festival)  ಹಿನ್ನೆಲೆ ನಗರದ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಹಬ್ಬ ಆಚರಿಸುವವರಿಗೆ ಹಾಗೂ ಸಾರ್ವಜನಿಕರಿಗೆ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಿದ್ದಾರೆ.

    ಈ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಿರುವ ಪೊಲೀಸ್ ಇಲಾಖೆ, ಪ್ರತಿಷ್ಠಾಪನೆಗೂ ಮುನ್ನ ಸಂಬಂಧಪಟ್ಟವರ ಅನುಮತಿ ಪಡೆಯಬೇಕು. ಸಾರ್ವಜನಿಕರಿಗೆ ವಾಹನ ಸವಾರರಿಗೆ ತೊಂದರೆಯಾಗಬಾರದು. 63 ಜನ ನೋಡಲ್ ಅಧಿಕಾರಿಗಳು ನಗರದಾದ್ಯಂತ ಕಾರ್ಯನಿರ್ವಹಿಸಲಿದ್ದಾರೆ. ಬಲವಂತವಾಗಿ ಚಂದ ಎತ್ತುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಸಾರ್ವಜನಿಕರ ಗಮನಕ್ಕೆ ಬಂದರೆ ನಮ್ಮ ಗಮನಕ್ಕೆ ತರಬೇಕು ಎಂದು ತಿಳಿಸಿದೆ. ಇದನ್ನೂ ಓದಿ: ಸುಪ್ರೀಂ ಛೀಮಾರಿ ಹಾಕಿದ ಬೆನ್ನಲ್ಲೇ ಕ್ಷಮೆಯಾಚಿಸಿದ ರೇವಂತ್ ರೆಡ್ಡಿ

    ಮಾರ್ಗಸೂಚಿಯಲ್ಲಿ ಏನಿದೆ?
    ಗಣೇಶ ಪ್ರತಿಷ್ಠಾಪನೆಗೆ ಶಾಮಿಯಾನ ಹಾಕಲು ಬಿಬಿಎಂಪಿ (BBMP) ಅನುಮತಿ ಪಡೆಯುವುದು ಕಡ್ಡಾಯ. ವಿವಾದಿತ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವಂತಿಲ್ಲ. ಫ್ಲೆಕ್ಸ್ ಮತ್ತು ಬ್ಯಾನರ್ ಸಂಬಂಧಿಸಿದಂತೆ ಹೈಕೋರ್ಟ್ ಮತ್ತು ಬಿಬಿಎಂಪಿ ನಿಯಮ ಪಾಲಿಸಬೇಕು. ಪಿಒಪಿ ಗಣೇಶ ಸಂಬಂಧಿಸಿದಂತೆ ನಿಯಮಗಳನ್ನು ಪಾಲಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಮಾಲಿನ್ಯ ನಿಯಂತ್ರಣ ಮಂಡಳಿಯವರು ಕ್ರಮ ತೆಗೆದುಕೊಳ್ಳುತ್ತಾರೆ. ಇಬ್ಬರು ಆಯೋಜಕರು ಗಣೇಶ ಕೂರಿಸುವ ಸ್ಥಳದಲ್ಲಿ ಇರಬೇಕು.

    ಅಗ್ನಿಶಾಮಕ ದಳದವರ ಸಹಾಯ ಪಡೆಯಬೇಕು ಮತ್ತು ಬೆಳಕಿನ ವ್ಯವಸ್ಥೆ ಇರಬೇಕು. ಯಾವುದೇ ರೀತಿಯ ನೂಕು ನುಗ್ಗಲಿಗೆ ಅವಕಾಶ ಮಾಡಿಕೊಡಬಾರದು. ಮನರಂಜನೆ ಕಾರ್ಯಕ್ರಮಕ್ಕೆ ಮೊದಲೇ ಅನುಮತಿ ಪಡೆಯಬೇಕು. ಮನರಂಜನಾ ಕಾರ್ಯಕ್ರಮಕ್ಕೆ ರಾತ್ರಿ 10ರ ವರೆಗೆ ಮಾತ್ರ ಅವಕಾಶ. ಧ್ವನಿವರ್ಧಕಗಳಿಗೆ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಅವಕಾಶ. ಯಾವುದೇ ಡಿಜೆ ಸೌಂಡ್ ಸಿಸ್ಟಮ್‌ಗೆ ಯಾವ ಸಮಯದಲ್ಲೂ ಅವಕಾಶ ಇಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಕಿತ್ತೂರು ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯನ ಕಿಡ್ನ್ಯಾಪ್ – ಕಾಂಗ್ರೆಸ್ ಶಾಸಕನ ಆಪ್ತರ ವಿರುದ್ಧ ದೂರು

    ಸಂಚಾರ ಒತ್ತಡವಿರುವ ರಸ್ತೆಗಳಲ್ಲಿ ಗಣೇಶ ಪ್ರತಿಷ್ಠಾಪಿಸುವಂತಿಲ್ಲ. ನಿಗದಿ ಪಡಿಸಿದ ಮಾರ್ಗದಲ್ಲೇ ಗಣೇಶ ವಿಸರ್ಜನಾ ಮೆರವಣಿಗೆ ತೆರಳಬೇಕು. ಪೂರ್ವನಿಯೋಜಿತ ವಿಸರ್ಜನಾ ಸ್ಥಳದಲ್ಲೇ ಗಣೇಶ ವಿಸರ್ಜಿಸಬೇಕು. 21 ರಂದು ನಡೆದ ಸಭೆಯಲ್ಲಿ ಈ ಎಲ್ಲಾ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಇಲಾಖೆಯ ಗೈಡ್‌ಲೈನ್ ನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ದ್ವೇಷದ ಪೋಸ್ಟ್‌ – ವಿಜಯೇಂದ್ರ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

  • ಗೌರಿಹಬ್ಬದಂದು ಸಂಪ್ರದಾಯಿಕ ಉಡುಗೆಯಲ್ಲಿ ಮಿರ, ಮಿರ ಮಿಂಚಿದ ಸ್ಯಾಂಡಲ್‍ವುಡ್ ನಟಿಯರು

    ಗೌರಿಹಬ್ಬದಂದು ಸಂಪ್ರದಾಯಿಕ ಉಡುಗೆಯಲ್ಲಿ ಮಿರ, ಮಿರ ಮಿಂಚಿದ ಸ್ಯಾಂಡಲ್‍ವುಡ್ ನಟಿಯರು

    ಬೆಂಗಳೂರು: ಇಂದು ರಾಜ್ಯಾದ್ಯಂತ ಗೌರಿ ಹಾಗೂ ಗಣೇಶ ಹಬ್ಬವನ್ನು ಅದ್ದುರಿಯಾಗಿ ಆಚರಿಸಲಾಗುತ್ತಿದೆ. ಈ ವಿಶೇಷ ದಿನದಂದು ಸ್ಯಾಂಡಲ್‍ವುಡ್ ನಟಿಯರು ಸೀರೆ ಹಾಗೂ ಸಂಪ್ರದಾಯಿಕ ಉಡುಗೆಯಲ್ಲಿ ಮಿರಮಿರ ಮಿಂಚಿದ್ದಾರೆ.

    ಇತ್ತೀಚೆಗಷ್ಟೇ ಕಡಲ ತೀರದಲ್ಲಿ ತುಂಡು ಉಡುಗೆ ತೊಟ್ಟ ಫೋಟೋಗೆ ಪೋಸ್ ನೀಡಿದ್ದ ನಟಿ ಶ್ವೇತಾ ಶ್ರಿವತ್ಸವ್ ಮಗಳೊಂದಿಗಿರುವ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಅಮ್ಮ ಸೀರೆಯುಟ್ಟಿದ್ದರೆ, ಮಗಳು ಶ್ಮಿತಾ ಶ್ರೀವಾತ್ಸವ್ ಲಂಗ ದವಣಿ ತೊಟ್ಟು ಕರುವಿಗೆ ಸಿಹಿತಿಂಡಿಯನ್ನು ತಿನ್ನಿಸಿದ್ದಾಳೆ. ಈ ವೀಡಿಯೋ ನೋಡಲು ಸಖತ್ ಕ್ಯೂಟ್ ಆಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ಮೊದಲು ಕಾಂಗ್ರೆಸ್ಸನ್ನು ತೊಡೆದು ಹಾಕಿ ಬಿಜೆಪಿಯನ್ನು ಧ್ವಂಸ ಮಾಡಬೇಕು: ಚೇತನ್

     

    View this post on Instagram

     

    A post shared by Shwetha Srivatsav (@shwethasrivatsav)

    ಇದಲ್ಲದೇ ಬಿಗ್‍ಬಾಸ್ ಸೀಸನ್-8ರ ಕಾರ್ಯಕ್ರಮದ ಬಳಿಕ ಚಿನ್ನಿಬಾಂಬ್ ಜೊತೆ ಟ್ರಿಪ್ ಹೊಡೆಯುತ್ತಾ ಎಂಜಾಯ್ ಮಾಡುತ್ತಿರುವ ಶುಭಾ ಪೂಂಜಾ, ವೀಡಿಯೋವೊಂದನ್ನು ಮಾಡುವ ಮೂಲಕ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯ. ನಿಮ್ಮೆಲ್ಲರ ಜೀವನದಲ್ಲಿ ಸದಾ ಖುಷಿ ಹಾಗೂ ನಗು ಇರಲಿ. ನಾವು ಇಂದು ಗಣೇಶನ ಬಳಿ ಬೇಡಿಕೊಳ್ಳೋಣ. ಎಲ್ಲರ ಜೀವನದಲ್ಲಿ ಸದಾ ಸಂತೋಷ ಇರಲಿ. ಚೆನ್ನಾಗಿ ತಿನ್ನಿ, ಮಜಾ ಮಾಡಿ ಎಂದು ವಿಶ್ ಮಾಡಿದ್ದಾರೆ. ಇದನ್ನೂ ಓದಿ: ಚಂದನವನದ ಹಿರಿಯ ನಿರ್ಮಾಪಕ ಸಿ.ಜಯರಾಮ್ ಇನ್ನಿಲ್ಲ

     

    View this post on Instagram

     

    A post shared by shubha Poonja . (@shubhapoonja)

    ಬಿಗ್‍ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಕೂಡ ಪಿಂಕ್ ಹಾಗೂ ಹಸಿರು ಬಣ್ಣದ ಲೆಹೆಂಗಾ ತೊಟ್ಟಿರುವ ಫೋಟೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.

     

  • ಬಾಗಿನ ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡ ಪತ್ನಿ, ಪುತ್ರಿ ಕಣ್ಣೀರು

    ಬಾಗಿನ ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡ ಪತ್ನಿ, ಪುತ್ರಿ ಕಣ್ಣೀರು

    ಮಂಡ್ಯ: ಜಿಲ್ಲೆಯಲ್ಲಿ ಮಹಿಳೆಯರಿಗೆ ಬಾಗಿನ ಸಮರ್ಪಣೆ ಮಾಡುವ ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡರವರ ಪತ್ನಿ ಹಾಗೂ ಪುತ್ರಿ ಕಣ್ಣೀರು ಹಾಕಿದ್ದಾರೆ.

    Narayana Gowda

    ಮಂಡ್ಯದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ನನ್ನ ಸಾಧನೆಗೆ ಪತ್ನಿ, ಪುತ್ರಿಯರ ಶಕ್ತಿಯೇ ಕಾರಣ. ಅವರ ಆಸೆಯಂತೆ ಇಂದು ಸಹೋದರಿಯರಿಗೆ ಬಾಗಿನ ಸಮರ್ಪಣೆ ಮಾಡುತ್ತಿದ್ದೇನೆ. ಪತ್ನಿ, ಪುತ್ರಿಯರ ತ್ಯಾಗ, ಶಕ್ತಿಯೇ ನನ್ನ ಈ ಸಾಧನೆಗೆ ಕಾರಣವಾಗಿದೆ. ನನ್ನ ಅಮ್ಮನ ಬಳಿಕ ಪತ್ನಿ, ಪುತ್ರಿಯರ ಕಾಳಜಿಯನ್ನು ನಾನು ಯಾವತ್ತು ಮರೆಯುವುದಿಲ್ಲ ಎಂದು ಭಾವುಕರಾಗಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿದ್ದ ನಾರಾಯಣಗೌಡ ಅವರ ಪತ್ನಿ ದೇವಕಿ, ಪುತ್ರಿ ಲೀನಾ ನಾರಾಯಣಗೌಡ ಅವರ ಮಾತುಗಳನ್ನು ಕೇಳಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:  ಮಳೆಗಾಗಿ ಹುಡುಗಿಯರ ಬೆತ್ತಲ ಮೆರವಣಿಗೆ

    Narayana Gowda

    ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ನೆಲೆಯೂರುವ ಸಲುವಾಗಿ ನಾರಾಯಣಗೌಡ ಪ್ರತಿ ಬಾರಿಯೂ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದಾರೆ. ಪಕ್ಷ ಸಂಘಟನೆ ಜೊತೆಗೆ ಸಂಪ್ರದಾಯ ಪಾಲನೆಗಾಗಿ, ಇಂದು 500ಕ್ಕೂ ಹೆಚ್ಚು ಮಹಿಳೆಯರಿಗೆ ಬಾಗಿನ ಸಮರ್ಪಣೆ ಮಾಡಿದ್ದಾರೆ. ಸೀರೆ ಜೊತೆಗೆ ಅರಿಶಿನ ಕುಂಕುಮ, ಹೂ ಮತ್ತು ಬಾಗಿನ ನೀಡಿ ಮಹಿಳೆಯರಿಗೆ ಗೌರಿ-ಗಣೇಶ ಹಬ್ಬದ ಶುಭಾಷಯಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಡೆಂಗ್ಯೂ, ವೈರಲ್ ಫಿವರ್‌ನಿಂದ ಮಕ್ಕಳನ್ನು ರಕ್ಷಿಸಿ: ಯುಪಿ ಸರ್ಕಾರದ ವಿರುದ್ಧ ಅಖಿಲೇಶ್ ಕಿಡಿ

  • ಗೌರಿ ಗಣೇಶ ಹಬ್ಬಕ್ಕೆ ತವರಿಗೆ ಕಳುಹಿಸದಕ್ಕೆ ಗೃಹಿಣಿ ಆತ್ಮಹತ್ಯೆ

    ಗೌರಿ ಗಣೇಶ ಹಬ್ಬಕ್ಕೆ ತವರಿಗೆ ಕಳುಹಿಸದಕ್ಕೆ ಗೃಹಿಣಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ : ಗೌರಿ ಗಣೇಶ ಹಬ್ಬಕ್ಕೆ ತವರು ಮನೆಗೆ ಗಂಡ ಕಳುಹಿಸದಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಪ್ರಭಾಕರ ಬಡಾವಣೆಯಲ್ಲಿ ನಡೆದಿದೆ.

    38 ವರ್ಷದ ನಿಂಗಮ್ಮ ಮೃತ ಗೃಹಿಣಿ. ಬಾಗಲಕೋಟೆ ಮೂಲದ ಸಂಗಮೇಶ್ ಕೆಎಸ್‍ಆರ್ ಟಿಸಿ ಡ್ರೈವರ್ ಕಂ ಕಂಡಕ್ಟರ್ ಆಗಿ ಚಿಂತಾಮಣಿ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ನಗರದ ಪ್ರಭಾಕರ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಗೌರಿ ಗಣೇಶ ಹಬ್ಬಕ್ಕೆ ತಾನು ತವರು ಮನೆ ಬಾಗಲಕೋಟೆಗೆ ಹೋಗೋದಾಗಿ ಗಂಡನ ಬಳಿ ಕೇಳಿದ್ದಾರೆ. ಗಂಡ ತವರು ಮೆನೆಗೆ ಹೋಗೋದು ಬೇಡ ಅಂತ ಹೇಳಿದ್ದು, ಈ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ಸಂಬಂಧ ನೊಂದ ಪತ್ನಿ ನಿಂಗಮ್ಮ ಸೋಮವಾರ ತಡರಾತ್ರಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಚಿಂತಾಮಣಿ ನಗರ ಠಾಣೆಯಲ್ಲಿ ಮೃತಳ ಪೋಷಕರು ಸಂಗಮೇಶ್ ವಿರುದ್ಧ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನಿಡಿದ ಆರೋಪದಡಿ ದೂರು ನೀಡಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಸಂಗಮೇಶ್‍ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ದಂಪತಿಗೆ ಮೂವರು ಮಕ್ಕಳಿದ್ದು, ತಾಯಿ ಆತ್ಮಹತ್ಯೆಯಿಂದ ಮಕ್ಕಳು ತಬ್ಬಲಿಗಳಾಗುವಂತಾಗಿದೆ. ಇನ್ನೂ ತವರು ಮನೆಗೆ ಕರೆ ಮಾಡಿದ್ದ ಮೃತ ನಿಂಗಮ್ಮ, ನನಗೆ ಗಂಡ ಸಂಗಮೇಶ್ ಹೊಡೆಯೋದು ಬಡಿಯೋದು ಮಾಡ್ತಿದ್ದು, ಸಾಕಷ್ಟು ಕಿರುಕುಳ ಕೊಡ್ತಿದ್ದಾನೆ ಅಂತ ಹೇಳಿದ್ದಳು ಅಂತ ಮೃತಳ ಅಕ್ಕ ತಿಳಿಸಿದ್ದಾರೆ.

  • ಭರ್ಜರಿ ಮಳೆಯಲ್ಲೇ ಗೌರಿ ಪೂಜೆ ಸಂಭ್ರಮ

    ಭರ್ಜರಿ ಮಳೆಯಲ್ಲೇ ಗೌರಿ ಪೂಜೆ ಸಂಭ್ರಮ

    ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದೊಂದು ವಾರದಿಂದ ಬಿಡುವು ನೀಡಿದ್ದ ಮಳೆರಾಯ, ಇಂದು ಬೆಳಗ್ಗೆಯಿಂದ ಮತ್ತೆ ಶುರುವಿಟ್ಟಿದ್ದಾನೆ. ವಾರದ ನಂತರ ಇದ್ದಕ್ಕಿದ್ದಂತೆ ಮಳೆಯಾಗಿರುವುದು ಜನರನ್ನು ಪರದಾಡುವಂತೆ ಮಾಡಿದೆ. ಇದು ಗೌರಿ ಹಬ್ಬಕ್ಕೂ ತಟ್ಟಿದ್ದು, ಮಹಿಳೆಯರು ಮಳೆಯನ್ನೂ ಲೆಕ್ಕಿಸದೆ ಪೂಜೆ ನೆರವೇರಿಸಿದ್ದಾರೆ.

    ಜಿಲ್ಲಾದ್ಯಂತ ಮೋಡಕವಿದ ವಾತಾವರಣವಿದ್ದು, ಹಲವೆಡೆ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ. ಸುರಿಯುತ್ತಿರೋ ಮಳೆಯಲ್ಲೇ ಗೌರಿ ಹಬ್ಬಕ್ಕೆ ಮುಂದಾಗಿರೋ ಮಲೆನಾಡಿಗರು, ವರುಣನ ಅಬ್ಬರದ ನಡುವೆಯೇ ಗೌರಿಯನ್ನು ಪೂಜೆ ಮಾಡಿ ಮನೆಗೆ ಬರಮಾಡಿಕೊಂಡಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್, ಬಾಳೂರು, ಬಣಕಲ್, ದಾರದಹಳ್ಳಿ ಭಾಗದಲ್ಲಿ ಭಾರೀ ಮಳೆಯಾಗಿದ್ದು, ಕೊರೊನಾ ನಡುವಿನ ಗೌರಿ ಹಬ್ಬಕ್ಕೆ ವರುಣ ಸಹ ಅಡ್ಡಿಪಡಿಸಿದಂತಾಗಿದೆ. ಭಾರೀ ಮಳೆಯಿಂದ ಮೂಡಿಗೆರೆ ತಾಲೂಕಿನ ಹಲವು ಭಾಗಗಳಲ್ಲಿ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಇಷ್ಟಾದರೂ ಮಹಿಳೆಯರು ಗೌರಿ ಪೂಜೆ ನೆರವೇರಿಸಿ ಮನೆಗೆ ಬರಮಾಡಿಕೊಂಡಿದ್ದಾರೆ.

    ಆಗಸ್ಟ್ ಮೊದಲ ವಾರದಲ್ಲಿ ಸುರಿದ ಒಂದೇ ವಾರದ ಮಳೆಯ ಅವಾಂತರಗಳಿಂದ ಜನ ರೋಸಿ ಹೋಗಿದ್ದಾರೆ. ಅಲ್ಲದೆ ಕಳೆದ ವರ್ಷದ ಮಳೆಯಿಂದಾದ ಹಾನಿ ಸಹ ಇನ್ನೂ ಸರಿ ಆಗಿಲ್ಲ. ಹೀಗಿರುವಾಗ ಈಗ ಮತ್ತೆ ಮಳೆ ಶುರುವಾಗಿದೆ. ಹೀಗಾಗಿ ಜನರಲ್ಲಿ ಭಯ ಆವರಿಸಿದೆ.

  • ಕೊರೊನಾ ನಡುವೆ ಗೌರಿ, ಗಣೇಶ ಹಬ್ಬ – ಮಾರ್ಕೆಟ್‍ನಲ್ಲಿ ಭರ್ಜರಿ ವ್ಯಾಪಾರ

    ಕೊರೊನಾ ನಡುವೆ ಗೌರಿ, ಗಣೇಶ ಹಬ್ಬ – ಮಾರ್ಕೆಟ್‍ನಲ್ಲಿ ಭರ್ಜರಿ ವ್ಯಾಪಾರ

    ಬೆಂಗಳೂರು: ಕೊರೊನಾದ ಮಧ್ಯೆ ಜನರು ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಹಬ್ಬದ ಸಂಭ್ರಮದಲ್ಲಿ ಜನರು ಕೊರೊನಾ ಆತಂಕವನ್ನ ಮರೆತಿದ್ದಾರೆ ಎನ್ನುವಂತಿದೆ. ಬೆಳ್ಳಂಬೆಳ್ಳಗ್ಗೆ ಜನರು ಮಾರ್ಕೆಟ್‍ನಲ್ಲಿ ಹಬ್ಬದ ವಸ್ತುಗಳನ್ನ ಖರೀದಿ ಮಾಡಲು ಗುಂಪು ಗೂಡಿದ್ದಾರೆ.

    ಇವತ್ತು ಗೌರಿ ಹಬ್ಬ, ನಾಳೆ ಗಣೇಶ ಚತುರ್ಥಿ. ಆದರೆ ಈ ಬಾರಿ ಗೌರಿ ಗಣೇಶ ಹಬ್ಬಕ್ಕೆ ಕೊರೊನಾ ಕವಿದಿದೆ. ಸಾಮಾಜಿಕ ಅಂತರವನ್ನು ಮರೆತು, ಮಾಸ್ಕ್ ಹಾಕಿಕೊಳ್ಳದೆ ಅಗತ್ಯ ವಸ್ತುಗಳನ್ನ ಖರೀದಿ ಮಾಡುವುದರಲ್ಲಿ ಜನರು ಬ್ಯುಸಿಯಾಗಿದ್ದಾರೆ. ಬಸವನಗುಡಿಯ ಗಾಂಧಿ ಬಜಾರ್‌ನಲ್ಲಿ  ಜನ ಕೊರೊನಾ ಆತಂಕವನ್ನು ಮರೆತು ಅಜಾಗೃತರಾಗಿ ವ್ಯಾಪಾರ ಮಾಡುತ್ತಿದ್ದಾರೆ.

    ಹಬ್ಬಕ್ಕೆ ಹೂ, ಹಣ್ಣು, ಬಾಳೆ ಕಂದಿನ, ಮಾರಾಟ ಬೆಂಗಳೂರಿನಲ್ಲಿ ಜೋರಾಗಿ ಆಗುತ್ತಿದೆ. ಕೊರೊನಾದ ನಡುವೆ ಗಣೇಶ ಹಬ್ಬವನ್ನ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಬಂದ್ ಆಗಿದೆ. ಹೀಗಾಗಿ ಹೂವಿನ ವ್ಯಾಪಾರಿಗಳು ತಾತ್ಕಾಲಿಕವಾಗಿ ಕೆ.ಆರ್ ರೋಡ್‍ನಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಿಕೊಂಡಿದ್ದಾರೆ.

    ಇತ್ತ ಯಶವಂತಪುರ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಭರ್ಜರಿಯಾಗಿ ವ್ಯಾಪಾರ ಮಾಡುತ್ತಿದ್ದಾರೆ. ಹೌಸಿಂಗ್ ಬೋಡಿನಲ್ಲಿ ಸಂತೆ ಮಾರುಕಟ್ಟೆಗೆ ಹಬ್ಬದ ಅಗತ್ಯ ವಸ್ತುಗಳ ಖರೀದಿ ಮಾಡಲು ಅಪಾರ ಜನರು ಬಂದಿದ್ದಾರೆ. ಸಾಮಾಜಿಕ ಅಂತರ ಇಲ್ಲದೆ ಮಾಸ್ಕ್ ಧರಿಸದೆ ಜನರು ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ.