ಬೆಂಗಳೂರು: ರಾಜ್ಯಾದ್ಯಂತ ಇಂದು ಗೌರಿ ಗಣೇಶ ಹಬ್ಬವನ್ನು ಆಚರಿಸುತ್ತಿದ್ದಾರೆ. ಅಲ್ಲದೇ ಸ್ಟಾರ್ ನಟರು ಕೂಡ ಗೌರಿ ಗಣೇಶ ಹಬ್ಬವನ್ನು ಆಚರಿಸಿ ನಾಡಿನ ಸಮಸ್ತ ಜನರಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಸಮಸ್ತ ಕರುನಾಡ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ನಿಮ್ಮೆಲ್ಲ ಸಂಕಷ್ಟಗಳು ದೂರವಾಗಿ ಜೀವನದ ಎಲ್ಲಾ ಸುಖ ಸಂತೋಷ ನಿಮ್ಮದಾಗಲಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಣೇಶನ ಮುಂದೆ ಕೈ ಮುಗಿಯುತ್ತಿರುವ ಫೋಟೋ ಹಾಕಿ ಎಲ್ಲರಿಗೂ ಶುಭಾಶಯ ತಿಳಿಸಿದ್ದಾರೆ.
ಸಮಸ್ತ ಕನ್ನಡ ನಾಡಿನ ಜನತೆಗೆ ಗೌರಿ ಹಣೇಶ ಹಬ್ಬದ ಶುಭಾಶಯಗಳು. ಎಲ್ಲರೂ ಯಾವಾಗಲೂ ಖುಷಿಯಾಗಿರಿ, ಸಂತೋಷವಾಗಿರಿ ಹಾಗೂ ಖುಷಿಯನ್ನು ಹಂಚುತ್ತಿರಿ. ನಿಮ್ಮೆಲರಿಗೂ ನನ್ನ ಕಡೆಯಿಂದ ನಿಮ್ಮಗೆಲ್ಲ ಹೆಚ್ಚಿನ ಪ್ರೀತಿ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿ ರಾಜ್ಯದ ಜನರಿಗೆ ಶುಭಾಶಯ ತಿಳಿಸಿದ್ದಾರೆ.
ನನ್ನ ಉಸಿರಿನಲ್ಲಿ ಬೆರೆತ ಕನ್ನಡ ನಾಡಿನ ಸಮಸ್ತ ಬಂಧುಗಳಿಗೆ ಗೌರಿ ಗಣೇಶನ ಹಬ್ಬದ ಶುಭಾಶಯಗಳು. ನೂರೂ ಕಾಲ ಸುಖ ಸಂತೋಷದಿಂದ ನೆಮ್ಮದಿಯಾಗಿ ನಗುತ ಬಾಳಿ. ಶುಭದಿನ ಶುಭೋದಯ ಎಂದು ನವರಸನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ರೋರಿಂಗ್ ಸ್ಟಾರ್ ಮುರಳಿ ಕೂಡ ‘ಭರಾಟೆ’ ಚಿತ್ರತಂಡದಿಂದ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಎಲ್ಲರಿಗೂ ಶುಭಾಶಯ ತಿಳಿಸಿ ಎಲ್ಲರಿಗೂ ಗುಡ್ ಲಕ್ ಎಂದು ಟ್ವೀಟ್ ಮಾಡಿದ್ದಾರೆ.
ಗೌರಿ ಶಕ್ತಿ, ಶೌರ್ಯದ ಪ್ರತೀಕವಾದರೆ, ಗಣಪತಿಯು ವಿದ್ಯೆ, ಜ್ಞಾನದ ಪ್ರತೀಕ. ಪ್ರತಿಯೊಬ್ಬ ವ್ಯಕ್ತಿಗೂ ಈ ಎರಡೂ ಗುಣಗಳಿಂದಲೇ ವ್ಯಕ್ತಿತ್ವ ವಿಕಾಸವಾಗಲು ಸಾಧ್ಯ. ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಗೋಲ್ಡನ್ ಸ್ಟಾರ್ ಗಣೇಶ್ ಟ್ವೀಟ್ ಮಾಡಿದ್ದಾರೆ.
https://twitter.com/actressharshika/status/1039806642374823941
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv