Tag: ಗೌರಿ ಖಾನ್

  • ಮಗ ಇಲ್ಲದೇ ಹುಟ್ಟುಹಬ್ಬ ಆಚರಿಸಲ್ಲ: ಶಾರೂಖ್ ಪತ್ನಿ ಗೌರಿ ಖಾನ್

    ಮಗ ಇಲ್ಲದೇ ಹುಟ್ಟುಹಬ್ಬ ಆಚರಿಸಲ್ಲ: ಶಾರೂಖ್ ಪತ್ನಿ ಗೌರಿ ಖಾನ್

    ಮುಂಬೈ: ಬಾಲಿವುಡ್‍ನಲ್ಲಿ ಸಂಚಲ ಹುಟ್ಟಿಸಿರುವ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಜೈಲುಪಾಲಾಗಿದ್ದಾನೆ. ಹೀಗಾಗಿ ಶಾರೂಖ್ ಪತ್ನಿ ಗೌರಿ ತಮ್ಮ ಹುಟ್ಟುಹಬ್ಬವನ್ನು ದುಃಖದಲ್ಲಿಯೇ ಕಳೆಯುವಂತಾಗಿದೆ.

    ಶಾರುಖ್ ಖಾನ್ ಹೆಂಡತಿ ಗೌರಿ ಖಾನ್‍ಗೆ ಇಂದು ಜನ್ಮದಿನ. 51 ವರ್ಷದ ಜನ್ಮದಿನಾಚರಣೆಯ ಸಂಭ್ರಮ ಆಚರಣೆಯಲ್ಲಿ ಇರಬೇಕಾದ ಕುಟುಂಬದಲ್ಲಿ ಈ ವರ್ಷ ಜನ್ಮದಿನ ಆಚರಿಸಿಕೊಳ್ಳಲು ಆಸಕ್ತಿ ಉಳಿದಿಲ್ಲ. ಮಗ ನ್ಯಾಯಾಂಗ ಬಂಧನದಲ್ಲಿರುವುದರಿಂದ ಗೌರಿ ಬರ್ತ್‍ಡೇ ಆಚರಿಸಿಕೊಂಡಿಲ್ಲ. ಇದನ್ನೂ ಓದಿ: ಉಪ ಚುನಾವಣೆ ಗೆಲ್ಲುವ ವಿಶ್ವಾಸ ಇದೆ: ದೇವೇಗೌಡ

     

    View this post on Instagram

     

    A post shared by Aryan Khan (@___aryan___)

    ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಶನಿವಾರ (ಅ.2) ರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿಯಲ್ಲಿ ಆರ್ಯನ್ ಭಾಗಿಯಾದ ಹಿನ್ನೆಲೆಯಲ್ಲಿ ಮಾದಕ ದ್ರವ್ಯ ನಿಯಂತ್ರಣ ಸಂಸ್ಥೆ (ಎನ್‍ಸಿಬಿ) ಬಂಧಿಸಿದೆ. ಇದನ್ನೂ ಓದಿ:  ನನಗೆ ಅಕ್ರಮ ಸಂಬಂಧ ಇಲ್ಲ- ಟ್ರೋಲಿಗರ ವಿರುದ್ಧ ಕುಟುಕಿದ ಸಮಂತಾ

    ನಿನ್ನೆ ನಡೆದಿದ್ದ ವಿಚಾರಣೆಯಲ್ಲಿ ನ್ಯಾಯಾಲಯವು ಆರ್ಯನ್ ಖಾನ್‍ಗೆ ಎನ್‍ಸಿಬಿ ಕಸ್ಟಡಿಯನ್ನು ವಿಸ್ತರಿಸಲು ನಿರಾಕರಿಸಿತ್ತು. ಈಗಾಗಲೇ ಅಗತ್ಯವಿದ್ದಷ್ಟು ಸಮಯವನ್ನು ಎನ್‍ಸಿಬಿಗೆ ನೀಡಲಾಗಿದೆ ಎಂದು ಹೆಚ್ಚುವರಿ ಮೆಟ್ರೋಪಾಲಿಟನ್ ನ್ಯಾಯಾಧೀಶರಾದ ಆರ್.ಎಂ.ನಿರ್ಲೇಕರ್ ಅಭಿಪ್ರಾಯ ವ್ಯಕ್ತಪಡಿಸಿ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರು. ಇದನ್ನೂ ಓದಿ: ತನ್ನ ವಿರುದ್ಧ ಟೀಕೆ ಮಾಡುತ್ತಿರೋರಿಗೆ ಸ್ಟ್ರಾಂಗ್ ಉತ್ತರ ಕೊಟ್ಟ ಸಮಂತಾ

  • ಶಾರೂಖ್, ಗೌರಿ ಖಾನ್ ಬೆಂಬಲಕ್ಕೆ ನಿಂತ ಹೃತಿಕ್ ಮಾಜಿ ಪತ್ನಿ, ಮಿಕಾ ಸಿಂಗ್!

    ಶಾರೂಖ್, ಗೌರಿ ಖಾನ್ ಬೆಂಬಲಕ್ಕೆ ನಿಂತ ಹೃತಿಕ್ ಮಾಜಿ ಪತ್ನಿ, ಮಿಕಾ ಸಿಂಗ್!

    ಮುಂಬೈ: ಮಾದಕ ದ್ರವ್ಯ ಪ್ರಕರಣದಲ್ಲಿ ಪುತ್ರ ಆರ್ಯನ್ ಖಾನ್ ಬಂಧನಕ್ಕೊಳಗಾದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಶಾರೂಖ್ ಮತ್ತು ಗೌರಿ ಖಾನ್ ಬೆಂಬಲಕ್ಕೆ ಸುಸಾನೆ ಖಾನ್ ಮತ್ತು ಮಿಕಾ ಸಿಂಗ್ ನಿಂತಿದ್ದಾರೆ.

    ಶನಿವಾರ ರಾತ್ರಿ(ಅ.2) ನಡೆದ ಕಾರ್ಡೆಲಿಯಾ ಕ್ರೂಸ್ ಎಕ್ಸ್ ಪ್ರೆಸ್  ಹಡಗಿನಲ್ಲಿ ಮಾದಕದ್ರವ್ಯದ ದಂಧೆಯ ನಂತರ ಅಕ್ಟೋಬರ್ 3 ರಂದು ಆರ್ಯನ್ ನನ್ನು ಬಂಧಿಸಲಾಯಿತು. ನಿನ್ನೆ ಆರ್ಯನ್ ಕಸ್ಟಡಿಯನ್ನು ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಯಿತು. ಈ ಹಿನ್ನೆಲೆ ಬಾಲಿವುಡ್ ಸೆಲೆಬ್ರಿಟಿಗಳಾದ ಸುಸ್ಸಾನೆ ಮತ್ತು ಮಿಕಾ ಅವರು ‘ಸ್ಟಾರ್ ಕಿಡ್’ ನ ಬಂಧನವನ್ನು ಪ್ರಶ್ನಿಸಿದ್ದಾರೆ. ಇದನ್ನೂ ಓದಿ:  ಪಕ್ಷಿಗಳಿಗೆ ಪುನರ್ಜನ್ಮ ನೀಡುತ್ತಿರುವ ರಾಯಚೂರಿನ ಪಕ್ಷಿಪ್ರೇಮಿ ಸಲ್ಲಾವುದ್ದೀನ್

    ಆರ್ಯನ್ ಖಾನ್ ಒಳ್ಳೆಯ ಮಗು!

    ಮುಂಬೈ ಕೋರ್ಟ್ ಸೋಮವಾರ ಆರ್ಯನ್ ಖಾನ್ ನ ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್‍ಸಿಬಿ) ಕಸ್ಟಡಿಯನ್ನು ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಯಿತು. ಈ ಹಿನ್ನೆಲೆ ಬಾಲಿವುಡ್ ನಟ ಹೃತಿಕ್ ರೋಷನ್ ಮಾಜಿ ಪತ್ನಿ ಸುಸಾನೆ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ಬಾಲಿವುಡ್ ಮಂದಿ ತಮಗೆ ತೋಚಿದಂತೆ ಹೇಳಿಕೊಳ್ಳುತ್ತಿದ್ದಾರೆ. ಆರ್ಯನ್ ಖಾನ್ ಒಳ್ಳೆಯ ಮಗು, ಆದರೆ ದುರದೃಷ್ಟವಶಾತ್ ಅವರು ಕೆಟ್ಟ ಸಮಯದಲ್ಲಿ, ತಪ್ಪಾದ ಸ್ಥಳದಲ್ಲಿದ್ದರು. ಇದನ್ನು ಬಳಸಿಕೊಂಡು ಅವರನ್ನು ಬಾಲಿವುಡ್‍ನ ಕೆಲವರು ತಮ್ಮದೇ ಶೈಲಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆರ್ಯನ್ ಒಳ್ಳೆಯ ಮಗುವಾಗಿದ್ದರಿಂದ ಇದು ಅನ್ಯಾಯವಾಗಿದೆ. ನಾನು ಗೌರಿ ಮತ್ತು ಶಾರೂಖ್ ಪರವಾಗಿ ನಿಲ್ಲುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.

    ಸುಸಾನೆ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಲೇಖಕಿ ಶೋಭಾ ಡಿ, ಆರ್ಯನ್ ಬಂಧನವು ಅವರ ಪೋಷಕರಿಗೆ ಎಚ್ಚರಿಕೆಯ ಗಂಟೆಯಾಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

    ಆ ಜಾಗಕ್ಕೆ ನಾನು ಹೋಗಬೇಕಿತ್ತು..!

    ಸಿಂಗರ್ ಮಿಕಾ ಸಿಂಗ್ ಕೂಡ ಈ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ್ದು, ಆರ್ಯನ್ ಬಿಟ್ಟರೇ ಬೇರೆ ಯಾರೂ ಆ ಹಡಗಿನಲ್ಲಿ ಇರಲಿಲ್ಲವಾ ಎಂದು ಪ್ರಶ್ನಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ವಾವ್ ಎಂತಹ ಸುಂದರವಾದ ಕಾರ್ಡೆಲಿಯಾ ಕ್ರೂಸ್. ಅಲ್ಲಿಗೆ ನಾನು ಭೇಟಿ ಕೊಡಬೇಕಿತ್ತು. ಅಲ್ಲಿ ಬಹಳಷ್ಟು ಜನರಿದ್ದಾರೆ, ಆದರೆ ಆರ್ಯನ್ ನನಗೆ ಕಾಣಿಸುತ್ತಿಲ್ಲ. ಆದರೆ ಇವರಿಗೆ ಮಾತ್ರ ಈ ದೊಡ್ಡ ಹಡಗಿನಲ್ಲಿ ಆರ್ಯನ್ ಮಾತ್ರ ಕಾಣಿಸುತ್ತಿದ್ದಾನೆ ಎಂದು ವ್ಯಂಗ್ಯವಾಗಿ ಬರೆದು ಶುಭೋದಯ ಅದ್ಭುತ ದಿನ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ಯಾರೂ ನನ್ನನ್ನು ಕೈಹಿಡಿದಿಲ್ಲ: ರಣವೀರ್ ಸಿಂಗ್

    ಈ ಹಿಂದೆ ಬಾಲಿವುಡ್ ಸೆಲೆಬ್ರಿಟಿಗಳಾದ ಸುನೀಲ್ ಶೆಟ್ಟಿ, ಸುಚಿತ್ರಾ ಕೃಷ್ಣಮೂರ್ತಿ, ಹಂಸಲ್ ಮೆಹ್ತಾ ಮತ್ತು ಪೂಜಾ ಭಟ್ ಇತರರು ಶಾರುಖ್ ಖಾನ್ ಪರವಾಗಿ ಮಾತನಾಡಿದರು. ಸಲ್ಮಾನ್ ಖಾನ್ ಅವರು ತಮ್ಮ ಬೆಂಬಲವನ್ನು ಸೂಚಿಸಲು ಎಸ್‌ಆರ್‌ಕೆ  ಅವರ ಮನೆ ಮನ್ನತ್‍ಗೆ ಭೇಟಿ ನೀಡಿದರು.

  • ಪದವಿ ಪಡೆದ ಶಾರೂಕ್ ಪುತ್ರ ಆರ್ಯನ್ – ಫೋಟೋ ವೈರಲ್

    ಪದವಿ ಪಡೆದ ಶಾರೂಕ್ ಪುತ್ರ ಆರ್ಯನ್ – ಫೋಟೋ ವೈರಲ್

    ಮುಂಬೈ: ಬಾಲಿವುಡ್ ಬಾದ್ ಶಾ ನಟ ಶಾರೂಕ್ ಖಾನ್‍ರವರ ಪುತ್ರ ಆರ್ಯನ್ ಖಾನ್ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆರ್ಯನ್ ಖಾನ್‍ರವರು ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದು, ಸಮಾರಂಭದ ಉಡುಪು ಧರಿಸಿ ಕೈನಲ್ಲಿ ಸರ್ಟಿಫಿಕೇಟ್ ಹಿಡಿದುಕೊಂಡಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ.

    ಸೋಶಿಯಲ್ ಮೀಡಿಯಾದಲ್ಲಿ ಆರ್ಯನ್ ಅಷ್ಟಾಗಿ ಆಕ್ಟೀವ್ ಆಗಿಲ್ಲ. ಆದರೆ ಅವರ ಅಭಿಮಾನಿಗಳು ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇತ್ತೀಚೆಗಷ್ಟೇ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಪದವಿ ಪ್ರಧಾನ ಕಾರ್ಯಕ್ರಮ ನಡೆದಿದ್ದು, ವಿದ್ಯಾರ್ಥಿಗಳನ್ನು ದೂರ ದೂರ ಕೂರಿಸಿ ಪದವಿ ಪ್ರಧಾನ ಸಮಾರಂಭ ನಡೆಸಲಾಗಿದೆ. ಈ ಸಮಾರಂಭದಲ್ಲಿ ಶಾರೂಕ್ ಪುತ್ರ ಆರ್ಯನ್ ಕೂಡ ಭಾಗಿಯಾಗಿದ್ದರು.

     

    View this post on Instagram

     

    A post shared by ???????????????? (@devoted2srk65)

    ಆರ್ಯನ್ ಖಾನ್ 2020ರ ಬ್ಯಾಚ್‍ನ ಬ್ಯಾಚುಲರ್ ಆಫ್ ಫೈನ್ ಆಟ್ರ್ಸ್, ಸಿನಿಮ್ಯಾಟಿಕ್ ಆಟ್ರ್ಸ್, ಫಿಲ್ಮ್ ಅಂಡ್ ಟೆಲಿವಿಷನ್ ಪ್ರೊಡಕ್ಷನ್, ಸ್ಕೂಲ್ ಆಫ್ ಸಿನಿಮ್ಯಾಟಿಕ್ ಆಟ್ರ್ಸ್ ನಲ್ಲಿ ಪದವಿ ಪಡೆದಿದ್ದಾರೆ. ಸದ್ಯ ಆರ್ಯನ್‍ನ ಈ ಫೋಟೋವನ್ನು ಅಭಿಮಾನಿಗಳು ಶೇರ್ ಮಾಡಿಕೊಳ್ಳುವ ಮೂಲಕ ವಿಶ್ ಮಾಡುತ್ತಿದ್ದಾರೆ.

     

    View this post on Instagram

     

    A post shared by kiara ♡ (@aryankhanforever)

    ಆರ್ಯನ್ ಖಾನ್ ಹಾಗೂ ಗೌರಿ ಖಾನ್ ಏಪ್ರಿಲ್‍ನಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ತಾಯಿ-ಮಗ ವಿದೇಶಕ್ಕೆ ಹಾರಿದ್ದಾರೆ ಎಂದು ನೆಟ್ಟಿಗರು ಟೀಕಿಸಿದ್ದರು. ಆದರೆ ಗೌರಿ ಖಾನ್ ಮಗನ ಪದವಿ ಪ್ರಧಾನ ಕಾರ್ಯಕ್ರಮಕ್ಕೆ ತೆರಳಿದ್ದರು. ಶಾರೂಖ್ ಪುತ್ರಿ ಸುಹಾನಖಾನ್ ಕೂಡ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

  • ‘ಮೂರು ಮದುವೆ’ಯಾಗಿದ್ದರ ಕುರಿತು ಕಿಂಗ್ ಖಾನ್ ಮಾತು

    ‘ಮೂರು ಮದುವೆ’ಯಾಗಿದ್ದರ ಕುರಿತು ಕಿಂಗ್ ಖಾನ್ ಮಾತು

    ನವದೆಹಲಿ: ಹಲವರಿಗೆ ತಮ್ಮ ನೆಚ್ಚಿನ ನಟ, ನಟಿಯರ ಮದುವೆ ಕುರಿತು ತಿಳಿದುಕೊಳ್ಳುವ ಕುತೂಹಲವಿರುತ್ತದೆ. ಅದರಲ್ಲೂ ಬಾಲಿವುಡ್ ಕಿಂಗ್ ಖಾನ್ ಅವರ ವಿವಾಹ ವಿಭಿನ್ನ ಇತರರಿಗೆ ಮಾದರಿ ಎಂಬುದು ತಿಳಿದೇ ಇದೆ. ಆದರೆ ಅವರ ವಿವಾಹದ ಕುರಿತು ಶಾರುಖ್ ಖಾನ್ ಇನ್ನೂ ಅಚ್ಚರಿಯ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

    ಶಾರುಖ್ ಖಾನ್ ಅವರ ವೈಯಕ್ತಿಕ ಜೀವನ ಹಲವರಿಗೆ ಮಾದರಿ ಎಂಬುದರಲ್ಲಿ ಅನುಮಾನವಿಲ್ಲ. ಅವರು ಸಮಾಜ ಹಾಗೂ ಧರ್ಮವನ್ನು ಮೀರಿ ಪ್ರೇಮ ವಿವಾಹವಾಗಿದ್ದು, ಅದೇ ರೀತಿ ಇತರರಿಗೆ ಮಾದರಿ ಎಂಬಂತೆ ತಮ್ಮ ಸಂಸಾರ ನೌಕೆಯನ್ನು ನಡೆಸುತ್ತಿದ್ದಾರೆ. ಅಂತರ್ ಧರ್ಮೀಯ ವಿವಾಹವಾದ ಕಾರಣ ಕಿಂಗ್ ಖಾನ್ ವಿವಾಹದ ಕುರಿತು ಈ ಹಿಂದೆ ಸಾಕಷ್ಟು ಚರ್ಚೆಗಳಾಗುತ್ತಿದ್ದವು. ಹೀಗಾಗಿ ಅವರ ಪ್ರೀತಿ ಹಾಗೂ ಮದುವೆ ಬಗ್ಗೆ ತಿಳಿಯಲು ಅಭಿಮಾನಿಗಳಲ್ಲಿ ಕುತೂಹಲವಿತ್ತು. ಈಗಲೂ ಸಮಯ ಸಿಕ್ಕಾಗಲೆಲ್ಲ ಈ ಕರಿತು ಪ್ರಶ್ನಿಸುತ್ತಲೇ ಇರುತ್ತಾರೆ.

    ಅದರಂತೆ ಇದೀಗ ಸಂದರ್ಶನವೊಂದರಲ್ಲಿ ಕಿಂಗ್ ಖಾನ್ ಅವರ ವಿವಾಹದ ಕುರಿತು ಪ್ರಶ್ನೆ ಎದ್ದಿದ್ದು, ಈ ವೇಳೆ ಅವರು ತಾವು ಮೂರು ಬಾರಿ ವಿವಾಹವಾಗಿರುವುದರ ಕುರಿತು ವಿವರಿಸಿದ್ದಾರೆ. ಶಾರುಖ್ ಖಾನ್ ಹಾಗೂ ಗೌರಿ ಖಾನ್ ಜೋಡಿ 1991ರಲ್ಲಿ ಪ್ರೇಮ ವಿವಾಹವಾದರು. ಈ ಜೋಡಿ ಮದುವೆಯಾಗಿ 29 ವರ್ಷಗಳು ಕಳೆದಿವೆ. ಇಷ್ಟು ವರ್ಷಗಳಾದರೂ ಯಾವುದೇ ಕಲಹವಿಲ್ಲದೆ ಸೊಗಸಾಗಿ ಜೀವನ ಸಾಗಿಸುತ್ತಿದ್ದಾರೆ.

    ಇದೀಗ ಶಾರುಖ್ ಮೂರು ಬಾರಿ ಮದುವೆಯಾಗಿರುವ ಕುರಿತು ವಿವರಿಸಿದ್ದಾರೆ. ಬಹುತೇಕರಿಗೆ ಕಿಂಗ್ ಖಾನ್-ಗೌರಿ ಜೋಡಿ ಮೂರು ಬಾರಿ ವಿವಾಹವಾಗಿರುವುದು ತಿಳಿದಿಲ್ಲ. ಇದೀಗ ಈ ವಿಚಾರವನ್ನು ಅವರೇ ತಿಳಿಸಿದ್ದಾರೆ. ಶಾರುಖ್ ಖಾನ್ ಅವರು ದೆಹಲಿಯಲ್ಲಿದ್ದಾಗ ಗೌರಿ ಖಾನ್ ಅವರೊಂದಿಗೆ ಸ್ನೇಹವಾಯಿತು. ನಂತರದ ದಿನಗಳಲ್ಲಿ ಅವರಿಬ್ಬರ ಸ್ನೇಹ ಪ್ರೇಮವಾಗಿ ಬದಲಾಯಿತು. ಬಳಿಕ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಅದೇ ರೀತಿ ಮೂರು ಬಾರಿ ಮದುವೆಯಾದರು.

    ಅದ್ಹೇಗೆ ಅಂತೀರಾ ಇಲ್ಲಿದೆ ನೋಡಿ, 25 ಅಕ್ಟೋಬರ್ 1991ರಂದು ಮೊದಲು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಇದಾದ ಬಳಿಕ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದರು. ನಂತರ ಕೊನೆಯದಾಗಿ ಸಾಂಪ್ರದಾಯಿಕ ಹಿಂದೂ ಪದ್ಧತಿಯಲ್ಲಿ ವಿವಾಹವಾದರು. ಶಾರುಖ್ ಖಾನ್ ಮುಸ್ಲಿಂ, ಅವರ ಪತ್ನಿ ಗೌರಿ ಖಾನ್ ಪಂಜಾಬಿ ಹಿಂದೂ. ಹೀಗಾಗಿ ಎರಡೂ ಧರ್ಮಗಳ ಶಾಸ್ತ್ರದ ಪ್ರಕಾರ ಮದುವೆಯಾಗಬೇಕೆಂದು 3 ಬಾರಿ ವಿವಾಹವಾದರಂತೆ.

    ಗೌರಿ ಖಾನ್ ಅವರ ಮೂಲ ಹೆಸರು ಗೌರಿ ಚಿಬ್ಬರ್. ಗೌರಿಯವರು ಮದುವೆಯ ನಂತರವೂ ಹಿಂದೂ ಮತ್ತು ಮುಸ್ಲಿಂ ಧರ್ಮಗಳನ್ನು ಅನುಸರಿಸುತ್ತಿದ್ದಾರೆ. ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರು ಮೂವರು ಮಕ್ಕಳ ಪೋಷಕರಾಗಿದ್ದು, ಹಿರಿಯ ಮಗ ಆರ್ಯನ್ ಖಾನ್, ಮಗಳು ಸುಹಾನಾ ಖಾನ್ ಮತ್ತು ನಂತರ 2013 ರಲ್ಲಿ ಇಬ್ಬರೂ ಬಾಡಿಗೆ ತಾಯಿಯ ಮೂಲಕ ಮಗ ಅಬ್ರಾಮ್‍ಗೆ ಜನ್ಮ ನೀಡಿದ್ದಾರೆ. ಈಗಲೂ ಎರಡೂ ಧರ್ಮದ ಸಂಪ್ರದಾಯವನ್ನು ಈ ಕುಟುಂಬ ಪಾಲಿಸುತ್ತೆ.

  • ಕೋವಿಡ್-19 ವಿರುದ್ಧ ಹೋರಾಟಕ್ಕೆ ಕಿಂಗ್‍ಖಾನ್ ಸಾಥ್ – ಸಾಲು ಸಾಲು ನೆರವು ಘೋಷಿಸಿ ಟೀಕೆಗಳಿಗೆ ಬ್ರೇಕ್

    ಕೋವಿಡ್-19 ವಿರುದ್ಧ ಹೋರಾಟಕ್ಕೆ ಕಿಂಗ್‍ಖಾನ್ ಸಾಥ್ – ಸಾಲು ಸಾಲು ನೆರವು ಘೋಷಿಸಿ ಟೀಕೆಗಳಿಗೆ ಬ್ರೇಕ್

    ಮುಂಬೈ: ಭಾರತದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದೆ. ಅಷ್ಟೇ ಅಲ್ಲದೇ ಮಹಾಮಾರಿ ವಿರುದ್ಧ ಹೋರಾಟ ನಡೆಸುತ್ತಿದೆ. ಲಾಕ್‍ಡೌನ್ ಹಿನ್ನೆಲೆ ದೇಶದ ಆರ್ಥಿಕತೆ ಕುಸಿದಿದ್ದು, ಎಲ್ಲರೂ ಕೊರೊನಾ ಹೋರಾಟಕ್ಕೆ ಸರ್ಕಾರದ ಜೊತೆ ಕೈ ಜೋಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಳಿಕೊಂಡಿದ್ದರು. ಹೀಗಾಗಿ ಅನೇಕ ಕ್ರೀಡಾಪಟುಗಳು, ಸಿನಿಮಾ ತಾರೆಯರು ಸರ್ಕಾರಕ್ಕೆ ದೇಣಿಗೆ ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದರು. ಆದರೆ ಬಾಲಿವುಡ್ ಬಾದ್‍ಷಾ ಶಾರೂಖ್ ಖಾನ್ ಸಂಕಷ್ಟದ ಪರಿಸ್ಥಿತಿಯಲ್ಲಿ ದೇಶದ ನೆರವಿಗೆ ಮುಂದೆ ಬಂದಿಲ್ಲ ಎಂಬ ಟೀಕೆಗಳು ಕೇಳಿಬಂದಿತ್ತು.

    ಈಗ ಈ ಟೀಕೆಗಳಿಗೆ ಶಾರೂಖ್ ಬ್ರೇಕ್ ಹಾಕಿದ್ದು, ಸಾಲು ಸಾಲು ನೆರವುಗಳನ್ನು ಘೋಷಿಸುವ ಮೂಲಕ ಟೀಕೆಗಾರರ ಬಾಯಿ ಮುಚ್ಚಿಸಿದ್ದಾರೆ. ತಮ್ಮ ವಿವಿಧ ಫೌಂಡೇಷನ್‍ಗಳು, ಫ್ರಾಂಚೈಸಿಗಳ ಮೂಲಕ ದೇಶಕ್ಕೆ ಸಹಾಯ ಮಾಡುವುದಾಗಿ ಕಿಂಗ್‍ಖಾನ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರಧಾನಿ ಹಾಗೂ ಮಹಾರಾಷ್ಟ್ರ ಸಿಎಂ ಪರಿಹಾರ ನಿಧಿಗಳಿಗೂ ದೇಣಿಗೆ ನೀಡುವುದಾಗಿ ಹೇಳಿಕೊಂಡಿದ್ದಾರೆ.

    ಮಹಾರಾಷ್ಟ್ರದ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡುವುದರ ಜೊತೆಗೆ ಮುಂಬೈ ನಗರದಲ್ಲಿನ ಬಡವರಿಗೆ ಸಹಾಯ ಮಾಡುವುದಾಗಿ ಕಿಂಗ್‍ಖಾನ್ ತಿಳಿಸಿದ್ದಾರೆ. ಶಾರೂಖ್ ಅವರ ಈ ನೆರವಿಗಾಗಿ ಮಹಾರಾಷ್ಟ್ರ ಸಿಎಂ, ಶಾರೂಖ್ ಖಾನ್ ಮತ್ತು ಗೌರಿ ಖಾನ್ ಅವರಿಗೆ ಧನ್ಯವಾದ ತಿಳಿಸಿದ್ದರು.

    ಪ್ರಧಾನ ಮಂತ್ರಿ, ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಶಾರೂಖ್ ದೇಣಿಗೆ ನೀಡುವುದಾಗಿ ಘೋಷಿಸಿಕೊಂಡಿದ್ದಾರೆ. ಕೆಕೆಆರ್ ಮತ್ತು ಮೀರ್ ಫೌಂಡೇಷನ್ ವತಿಯಿಂದ 50,000 ಆರೋಗ್ಯ ಕಿಟ್, ರೋಟಿ ಫೌಂಡೇಷನ್, ಮೀರ್ ಫೌಂಡೇಷನ್ ಕಡೆಯಿಂದ 3 ಲಕ್ಷ ಊಟದ ಕಿಟ್ ನೀಡಲಾಗುತ್ತಿದೆ. ಅಷ್ಟೇ ಅಲ್ಲದೇ ಅರ್ಥ್ ಫೌಂಡೇಷನ್, ಮೀರ್ ಫೌಂಡೇಷನ್ ಮೂಲಕ ಮುಂಬೈ ಒಂದರಲ್ಲಿಯೇ 5,500 ಮಂದಿಗೆ ಒಂದು ತಿಂಗಳ ಆಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ. ಪ್ರತಿದಿನ 2000 ಜನರಿಗೆ ಆಹಾರ ಸರಬರಾಜು ಮಾಡಲಾಗುತ್ತಿದೆ ಎಂದು ಕಿಂಗ್‍ಖಾನ್ ಮಾಹಿತಿ ನೀಡಿದ್ದಾರೆ.

    ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಕೈಜೋಡಿಸುವಂತೆ ಪ್ರಧಾನಿ ನೀಡಿದ ಕರೆಗೆ ನಟ ಅಕ್ಷಯ್ ಕುಮಾರ್, ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಸಚಿನ್, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ಕುಸ್ತಿಪಟು ಭಜರಂಗ್ ಪೂನಿಯಾ ಸೇರಿದಂತೆ ಅನೇಕರು ಭಾರೀ ಮೊತ್ತ ದೇಣಿಗೆ ನೀಡುವ ಮೂಲಕ ಕೈಜೋಡಿಸಿದ್ದಾರೆ. ಇತ್ತ ಸಲ್ಮಾನ್ ಖಾನ್ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೀಡಾದ 25 ಸಾವಿರ ಸಿನಿಮಾ ಕಾರ್ಮಿಕರ ನೆರವಿಗೆ ನಿಂತಿದ್ದಾರೆ.