Tag: ಗೌರಿ ಖಾನ್

  • ಜವಾನ್ ಪೈರಸಿ: ಪೊಲೀಸ್ ಠಾಣೆ ಮೆಟ್ಟಿಲು ಏರಿದ ನಟ ಶಾರುಖ್

    ಜವಾನ್ ಪೈರಸಿ: ಪೊಲೀಸ್ ಠಾಣೆ ಮೆಟ್ಟಿಲು ಏರಿದ ನಟ ಶಾರುಖ್

    ಬಾಕ್ಸ್ ಆಫೀಸಿನಲ್ಲಿ ಭಾರೀ ಕಮಾಲ್ ಮಾಡುತ್ತಿರುವ ಜವಾನ್ ಚಿತ್ರಕ್ಕೆ ಪೈರಸಿ (Piracy) ಕಾಟ ಶುರುವಾಗಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲೇ ಥಿಯೇಟರ್ ನಲ್ಲಿ ಶೂಟ್ ಮಾಡಲಾದ ಜವಾನ್ ಸಿನಿಮಾವನ್ನು ದುರುಳರು ರಿಲೀಸ್ ಮಾಡಿದ್ದು, ಅದು ಸೋಷಿಯಲ್ ಮೀಡಿಯಾದಲ್ಲೂ ಶೇರ್ ಆಗಿದೆ. ಈ ಲಿಂಕ್ ಅನ್ನು ಹಂಚಿಕೊಳ್ಳುವವರ ವಿರುದ್ಧ ಸಮರಕ್ಕೆ ಮುಂದಾಗಿದ್ದಾರೆ ಶಾರುಖ್ ಖಾನ್.

    ಸ್ವತಃ ಶಾರುಖ್ ಖಾನ್ (Shah Rukh Khan) ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇವರ ಪತ್ನಿ ಗೌರಿ ಖಾನ್ ಇದರ ನಿರ್ಮಾಪಕರು. ಹಾಗಾಗಿ ಪೈರಸಿ ಮಾಡುವವರ ವಿರುದ‍್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಈ ಕುರಿತಾಗಿ ಈಗಾಗಲೇ ಅವರು ಮುಂಬೈನ ಸಾಂತಾಕ್ರೂಜ್ ವೆಸ್ಟ್ ಪೊಲೀಸ್ ಠಾಣೆಗೆ ದೂರು (Police Complaint) ನೀಡಿದ್ದಾರೆ. ಜೊತೆಗೆ ಪೈರಸಿ ಪತ್ತೆ ಹಚ್ಚುವಂತಹ ಏಜೆನ್ಸಿಗಳನ್ನೂ ಅವರು ನೇಮಿಸಿಕೊಂಡಿದ್ದಾರೆ. ಇದನ್ನೂ ಓದಿ:‘ಕಂಬಳ’ ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಅನುಷ್ಕಾ ಶೆಟ್ಟಿ

    ‘ಜವಾನ್’ (Jawan) ಸಿನಿಮಾ ಚಿತ್ರಮಂದಿರಲ್ಲಿ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಈ ನಡುವೆಯೇ ಜವಾನ್ 2 (Jawan 2) ಬರುವ ಬಗ್ಗೆ ಗುಡ್ ನ್ಯೂಸ್ ಸಿಕ್ಕಿದೆ. ಶಾರುಖ್- ವಿಜಯ್ ಸೇತುಪತಿ (Vijay Sethupathi) ಜುಗಲ್‌ಬಂದಿ ಜವಾನ್ ಸಿನಿಮಾದಲ್ಲಿ ವರ್ಕೌಟ್ ಆಗಿದೆ. ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ಶಾರುಖ್‌ಗೆ ‘ಜವಾನ್’ ಚಿತ್ರದ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಅವರ ಉತ್ತರ ಜವಾನ್ 2 ಬರುವ ಬಗ್ಗೆ ಸೂಚನೆ ಕೊಟ್ಟಿದೆ.

    ಅಭಿಮಾನಿಯೊಬ್ಬರು, ಸರ್, ನೀವೇಕೆ ಕಾಳಿ ವಿಜಯ್ ಸೇತುಪತಿ ಜೊತೆಗೆ ಡೀಲ್ ಮಾಡಿಕೊಳ್ಳಲಿಲ್ಲ? ನಾನು ವಿಜಯ್ ಸೇತುಪತಿ ಸರ್‌ಗೆ ದೊಡ್ಡ ಅಭಿಮಾನಿ ಎಂದು ಟ್ವೀಟ್ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಶಾರುಖ್ ಖಾನ್, ನಾನು ಕೂಡ ವಿಜಯ್ ಸರ್‌ಗೆ ದೊಡ್ಡ ಅಭಿಮಾನಿ. ನಾನು ಈಗಾಗಲೇ ಕಾಳಿಯ ಕಪ್ಪು ಹಣವನ್ನು ತೆಗೆದುಕೊಂಡು ಬಂದಿದ್ದೇನೆ. ಈಗ ಬೇರೆಯವರ ಕಪ್ಪು ಹಣವನ್ನು ಹೊರ ತೆಗೆಯುವುದಕ್ಕೆ ಕಾಯುತ್ತಿದ್ದೇನೆ. ವೀಸಾಗಾಗಿ ಕಾಯುತ್ತಿದ್ದೇನೆ ಎಂದು ಟ್ಟೀಟ್ ಮಾಡಿದ್ದಾರೆ. ಈ ಟ್ವೀಟ್ ಜವಾನ್ 2 ಬರುವ ಬಗ್ಗೆ ಸೂಚನೆ ನೀಡುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.

     

    ಜವಾನ್‌ನಲ್ಲಿ ಕ್ಲೈಮ್ಯಾಕ್ಸ್‌ನಲ್ಲಿ ಮುಗಿದ ಮೇಲೆ ಪಾರ್ಟ್ 2 ಬರುವ ರೀತಿಯಲ್ಲಿ ಒಂದು ಸೀನ್ ಇಡಲಾಗಿದೆ. ಅದಕ್ಕೆ ತಕ್ಕಂತೆ ಶಾರುಖ್ ಟ್ವೀಟ್ ಕೂಡ ಹೋಲಿಕೆಯಾಗುತ್ತಿದೆ. ಜವಾನ್ ಸೀಕ್ವೆಲ್ ಬಂದೇ ಬರುತ್ತೆ ಅಂತಾ ಫ್ಯಾನ್ಸ್ ಸಂಭ್ರಮದಲ್ಲಿದ್ದಾರೆ. ‘ಜವಾನ್ 2’ ಬರುವ ಬಗ್ಗೆ ಈ ಮೂಲಕ ನಟ ಸುಳಿವು ನೀಡಿದ್ರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಜವಾನ್’ ಚಿತ್ರದಲ್ಲಿ 6 ಹೆಸರಾಂತ ಸಾಹಸ ನಿರ್ದೇಶಕರು

    ‘ಜವಾನ್’ ಚಿತ್ರದಲ್ಲಿ 6 ಹೆಸರಾಂತ ಸಾಹಸ ನಿರ್ದೇಶಕರು

    ಶಾರುಖ್ ಖಾನ್ (Shah Rukh Khan) ಅಭಿನಯದ ‘ಜವಾನ್’ (Jawaan) ಚಿತ್ರವು ಮುಂದಿನ ತಿಂಗಳು ಮೊದಲ ವಾರದಲ್ಲಿ ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಜಗತ್ತಿನ ಆರು ಅತ್ಯುತ್ತಮ ಮತ್ತು ಜನಪ್ರಿಯ ನಿರ್ದೇಶಕರು ಈ ಚಿತ್ರಕ್ಕಾಗಿ ಸಾಹಸ ಸಂಯೋಜನೆ ಮಾಡಿದ್ದಾರೆ.

    ಮೂಲಗಳ ಪ್ರಕಾರ ಅಂತಾರಾಷ್ಟ್ರೀಯ ಮಟ್ಟದ ಸಾಹಸ (Fights) ನಿರ್ದೇಶಕರಾದ ಸ್ಪೈರೋ ರಾಝಾಟೋಸ್, ಯಾನಿಕ್ ಬೆನ್, ಕ್ರೇಗ್ ಮೆಕ್ರೆ, ಕೆಚಾ ಕೆಂಪಾಕ್ಡಿ, ಸುನೀಲ್ ರಾಡ್ರಿಗ್ಸ್ ಮತ್ತು ಅನಲ್ ಅರಸ್ ಅವರು ‘ಜವಾನ್’ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದಲ್ಲಿ ಫೈಟ್, ಚೇಸ್, ಪಾರ್ಕರ್  ಸೇರಿದಂತೆ ವಿಭಿನ್ನ ರೀತಿಯ ಸಾಹಸ ದೃಶ್ಯಗಳಿದ್ದು, ಆ ಪ್ರಕಾರದಲ್ಲಿ ಪರಿಣಿತಿ ಹೊಂದಿರುವ ಒಬ್ಬೊಬ್ಬ ಸಾಹಸ ನಿರ್ದೇಶಕರು ಈ ಚಿತ್ರಕ್ಕೆ ಕೆಲಸ ಮಾಡಿರುವುದು ವಿಶೇಷ. ಇದನ್ನೂ ಓದಿ:ಎಲ್ಲೆಲ್ಲೂ ‘ಜೈಲರ್’ ಚಿತ್ರದ ಹವಾ, ನಿಲ್ಲುತ್ತಿಲ್ಲ ರಜನಿ ತಾಕತ್ತು

    ಈ ಸಾಹಸ ನಿರ್ದೇಶಕರು ಬರೀ ಹಾಲಿವುಡ್ ಅಷ್ಟೇ ಅಲ್ಲ, ಹಲವು ಅಂತಾರಾಷ್ಟ್ರೀಯ ಸಿನಿಮಾಗಳಿಗೆ ಕೆಲಸ ಮಾಡಿ ತಮ್ಮ ಛಾಪನ್ನೊತ್ತಿದ್ದಾರೆ. ಒಬ್ಬೊಬ್ಬರು ಒಂದೊಂದು ವಿಭಾಗದಲ್ಲಿ ಪರಿಣಿತಿ ಹೊಂದಿದ್ದಾರೆ. ಜಗತ್ತಿನ ಜನಪ್ರಿಯ ಆಕ್ಷನ್ ಚಿತ್ರಗಳಲ್ಲಿ ಮೈ ಜುಂ ಎನಿಸುವಂತಹ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ.

    ಈ ಪೈಕಿ ಸ್ಪೈರೋ ರಾಝಾಟೋಸ್, ‘ಫಾಸ್ಟ್ ಅಂಡ್ ಫ್ಯೂರಿಯಸ್’, ‘ಕ್ಯಾಪ್ಟೇನ್ ಅಮೇರಿಕಾ’ ಮುಂತಾದ ಚಿತ್ರಗಳಿಗೆ ಕೆಲಸ ಮಾಡಿದ್ದರು. ಈ ಹಿಂದೆ, ಶಾರುಖ್ ಅಭಿನಯದ ‘ರಾ ಒನ್’ ಚಿತ್ರಕ್ಕೂ ಅವರು ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದರು. ಯಾನಿಕ್ ಬೆನ್ ಅವರು ಪಾರ್ಕರ್ ದೃಶ್ಯಗಳನ್ನು ಸೆರೆಹಿಡಿಯುವುದರಲ್ಲಿ ಜನಪ್ರಿಯರು. ಇನ್ನು, ಸುನೀಲ್ ರಾಡ್ರಿಗ್ಸ್, ಅನಲ್ ಅರಸು ಮುಂತಾದವರು ಭಾರತದ ಬೇರೆಬೇರೆ ಭಾಷೆಯ ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡುವ ಮೂಲಕ ಖ್ಯಾತಿ ಗಳಿಸಿದವರು.

    ಈ ಸಾಹಸ ದೃಶ್ಯಗಳನ್ನು ಸಾಕಷ್ಟು ಅಧ್ಯಯನ ನಡೆಸುವುದಷ್ಟೇ ಅಲ್ಲ, ರೋಚಕವಾಗಿ ಸೆರೆಹಿಡಿಯಲಾಗಿದ್ದು, ಒಟ್ಟಾರೆ ಸಾಹಸ ಭಾಗವೇ ಚಿತ್ರವನ್ನು ಇನ್ನೊಂದು ಮಟ್ಟಕ್ಕೆ ಕರೆದೊಯ್ಯಲಿದೆ ಎಂದು ಹೇಳಲಾಗುತ್ತಿದೆ. ಈ ದೃಶ್ಯಗಳು ಕಥೆಗೆ ಪೂರಕವಾಗಿರುವುದಷ್ಟೇ ಅಲ್ಲ, ನೈಜವಾಗಿ ಮೂಡಿಬಂದಿದ್ದು, ಚಿತ್ರದ ಬಗೆಗಿನ ಪ್ರೇಕ್ಷಕರ ಕುತೂಹಲ ಮತ್ತು ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಾಗಿಸಿದೆ.

     

    ‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ನಡಿ ಗೌರಿ ಖಾನ್ (Gauri Khan) ನಿರ್ಮಿಸಿದರೆ, ಗೌರವ್ ವರ್ಮ ಸಹ ನಿರ್ಮಾಪಕರಾಗಿದ್ದಾರೆ. ಅಟ್ಲಿ (Atlee) ನಿರ್ದೇಶಿಸಿರುವ ಈ ಚಿತ್ರವು ಜಗತ್ತಿನಾದ್ಯಂತ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫ್ಯಾಮಿಲಿ ಫೋಟೋ ಹಂಚಿಕೊಂಡ ಶಾರುಖ್ ಪತ್ನಿ ಗೌರಿ ಖಾನ್

    ಫ್ಯಾಮಿಲಿ ಫೋಟೋ ಹಂಚಿಕೊಂಡ ಶಾರುಖ್ ಪತ್ನಿ ಗೌರಿ ಖಾನ್

    ಬಾಲಿವುಡ್ (Bollywood) ಬಾದಷಾ ಶಾರುಖ್ ಖಾನ್ (Sharukh Khan) ಸದ್ಯ ‘ಪಠಾಣ್’ (Pathaan) ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಶಾರುಖ್ ಪತ್ನಿ ಬಿಟೌನ್ ನಿರ್ಮಾಪಕಿ- ಬ್ಯುಸಿನೆಸ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಗೌರಿ ಖಾನ್ (Gauri Khan) ತಮ್ಮ ಕುಟುಂಬದ ಸುಂದರ ಫೋಟೋವನ್ನ ಹಂಚಿಕೊಂಡಿದ್ದಾರೆ.

    ಶಾರುಖ್‌ಗೆ ಶಕ್ತಿಯಾಗಿ ಪತ್ನಿ ಗೌರಿ ಖಾನ್ ಕೂಡ ತಮ್ಮದೇ ಶೈಲಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇತ್ತೀಚಿಗೆ ‘ಮೈ ಲೈಫ್ ಇಸ್ ಡಿಸೈನ್’ ಎಂಬ ಪುಸ್ತಕವನ್ನು ಗೌರಿ ಘೋಷಿಸಿದ್ದರು. ಈಗ ಕುಟುಂಬದ ಸುಂದರ ಫೋಟೋವನ್ನ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Gauri Khan (@gaurikhan)

    ಶಾರುಖ್- ಪತ್ನಿ ಗೌರಿ ಖಾನ್ ಮೂವರು ಮಕ್ಕಳು ಕಪ್ಪು ಉಡುಗೆಯಲ್ಲಿ ಮಿಂಚಿದ್ದಾರೆ. ಐವರು ಕ್ಯಾಮೆರಾ ಕಣ್ಣಿಗೆ ಚೆಂದದ ಪೋಸ್ ನೀಡಿದ್ದಾರೆ. ಈ ಫೋಟೋ ಶೇರ್ ಆಗ್ತಿದಂತೆ ಅಭಿಮಾನಿಗಳು ಪೋಸ್ಟ್ ನೋಡಿ ಖುಷಿಪಟ್ಟಿದ್ದಾರೆ.

    ಇನ್ನೂ ‘ಪಠಾಣ್’ ಸಕ್ಸಸ್ ನಂತರ ಶಾರುಖ್ ‘ಜವಾನ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

  • ಮಗ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಬಗ್ಗೆ ಮೌನ ಮುರಿದ ಶಾರುಖ್ ಖಾನ್ ಪತ್ನಿ

    ಮಗ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಬಗ್ಗೆ ಮೌನ ಮುರಿದ ಶಾರುಖ್ ಖಾನ್ ಪತ್ನಿ

    ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಸೀಸನ್ 7(Coffe With Karan) ಶೋ ಮೂಲಕ ಸದ್ದು ಮಾಡುತ್ತಿದ್ದಾರೆ. ಈ ಶೋನಲ್ಲಿ ತಾರೆಯರ ಬ್ರೇಕಪ್, ಗಾಸಿಪ್, ಸೆಕ್ಸ್, ಡೇಟಿಂಗ್, ವಿಚಾರ ಕೇಳುವ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದೀಗ ಈ ಶೋನಲ್ಲಿ ಶಾರುಖ್ ಪತ್ನಿ ಗೌರಿ ಖಾನ್(Gowri Khan) ಕೂಡ ಭಾಗವಹಿಸಿದ್ದಾರೆ. ಅಷ್ಟೇ ಅಲ್ಲ, ಮೊದಲ ಬಾರಿಗೆ ಮಗ ಆರ್ಯನ್ ಖಾನ್ (Aryan Khan) ಬಗ್ಗೆ ಮೌನ ಮುರಿದಿದ್ದಾರೆ.

    ಈಗಾಗಲೇ ಕಾಫಿ ವಿ ಕರಣ್ ಸೀಸನ್ 7ರಲ್ಲಿ ಸಾಕಷ್ಟು ಸಿನಿತಾರೆಯರು ಭಾಗವಹಿಸಿದ್ದಾರೆ.  ಕರಣ್ ನಿರೂಪಣೆಯ ಶೋ ಕೂಡ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಇದೀಗ ಕಾರ್ಯಕ್ರಮದಲ್ಲಿ ಶಾರುಖ್ ಪತ್ನಿ ಗೌರಿ ಖಾನ್, ಸಂಜಯ್ ಕಪೂರ್ ಪತ್ನಿ ಮಹೀಪ್, ಚಂಕಿ ಪಾಂಡೆ ಪತ್ನಿ ಭಾವನಾ ಪಾಂಡೆ ಭಾಗವಹಿಸಿದ್ದಾರೆ. ಈ ಮೂವರು ತಮ್ಮ ಕುಟುಂಬ ಬಗ್ಗೆ ಸಾಕಷ್ಟು ವಿಚಾರವನ್ನ ರಿವೀಲ್ ಮಾಡಿದ್ದಾರೆ. ಜೊತೆಗೆ ಶಾರುಖ್ ಪತ್ನಿ ಗೌರಿ ಕೂಡ ಮೊದಲ ಬಾರಿಗೆ ಮಗನ ಡ್ರಗ್ಸ್ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.

    ವೃತ್ತಿಪರವಾಗಿ ಮಾತ್ರವಲ್ಲದೇ ಇತ್ತೀಚೆಗೆ ಕೌಟುಂಬಿಕ ವಿಚಾರವಾಗಿ ತುಂಬಾ ಕಠಿಣ ಸಮಯವನ್ನ ಎದುರಿಸಿದ್ದೀರಿ ಈ ಬಗ್ಗೆ ಹೇಳಿ ಎಂದು ಕರಣ್ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಗೌರಿ ಖಾನ್ ತಾಯಿಯಾಗಿ, ಪೋಷಕರಾಗಿ ನಾವು ಆಗ ಅನುಭವಿಸಿದ್ದಕ್ಕಿಂತ ಮತ್ತೊಂದಿಲ್ಲ. ಕುಟುಂಬವಾಗಿ ನಿಂತಾಗ ಇಂದು ನಾವು ದೊಡ್ಡ ಜಾಗದಲ್ಲಿದ್ದೇವೆ. ನಮ್ಮ ಎಲ್ಲಾ ಸ್ನೇಹಿತರು, ಪ್ರೀತಿ ತೋರಿದ ಎಲ್ಲರಿಗೂ ಧನ್ಯವಾದವನ್ನ ತಿಳಿಸುತ್ತೇನೆ ಎಂದು ಗೌರಿ ಖಾನ್ ಮನಬಿಚ್ಚಿ ಮಾತನಾಡಿದ್ದಾರೆ. ಇದನ್ನೂ ಓದಿ:ತಮ್ಮ ‘ಕೊನೆ ಆಸೆ’ ತಿಳಿಸಿದ ಸೋನು ಶ್ರೀನಿವಾಸ್ ಗೌಡ: ಅವನಿಗೆ ಹೃದಯ ಪೂರ್ವಕ ಹಾರೈಕೆ

    ಈ ವೇಳೆ ಸುಹಾನ್ ಖಾನ್‌ಗೆ ಡೇಟಿಂಗ್ ಬಗ್ಗೆ ಎನು ಸಲಹೆ ಕೊಡುತ್ತೀರಾ ಎಂದು ಕರಣ್ ಗೌರಿ ಖಾನ್‌ಗೆ ಕೇಳಿದ್ದಾರೆ. ಒಟ್ಟಿಗೆ ಇಬ್ಬರು ಹುಡುಗರ ಜತೆ ಡೇಟ್ ಮಾಡಬೇಡ ಎಂದು ಹೇಳಿದ್ದಾರೆ. ಗೌರಿ ಖಾನ್ ಬೋಲ್ಡ್ ಮಾತು ನೋಡುಗರಿಗೆ ಅಚ್ಚರಿ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಇಬ್ಬರು ಹುಡುಗರ ಜೊತೆ ಡೇಟ್ ಬೇಡ: ಮಗಳಿಗೆ ಶಾರುಖ್ ಪತ್ನಿಯ ಪಾಠ

    ಇಬ್ಬರು ಹುಡುಗರ ಜೊತೆ ಡೇಟ್ ಬೇಡ: ಮಗಳಿಗೆ ಶಾರುಖ್ ಪತ್ನಿಯ ಪಾಠ

    ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಮತ್ತು ಗೌರಿ ಖಾನ್ (Gauri Khan) ದಂಪತಿಯ ಮುದ್ದಿನ ಮಗಳು ಸುಹಾನಾ ಖಾನ್. ಸಖತ್ ಬೋಲ್ಡ್ ಆಗಿರುವಂತಹ ಹುಡುಗಿ. ಅಪ್ಪ ಅಮ್ಮನ ಬಗ್ಗೆ ಸಿಕ್ಕಾಪಟ್ಟೆ ಗೌರವ ಹೊಂದಿರುವ ಹುಡುಗಿ ಕೂಡ. ಇಂತಹ ಹುಡುಗಿಗೆ ಸ್ವತಃ ಅಮ್ಮನೇ ಡೇಟಿಂಗ್ ಪಾಠ ಮಾಡಿದ್ದಾರೆ. ಅದು ಕರಣ್ ಜೋಹಾರ್ ನಡೆಸಿ ಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಎನ್ನುವುದು ವಿಶೇಷ. ಮಗಳಿಗೆ ಹೀಗೂ ಸಲಹೆ ಕೊಡಬಹುದಾ? ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

    ಕರಣ್ ಜೋಹಾರ್ (Karan Johar) ನಡೆಸಿಕೊಡುವ ಕಾಫಿ ವಿತ್ ಕರಣ ಶೋ ನಲ್ಲಿ ಡೇಟಿಂಗ್, ಲವ್, ಸೆಕ್ಸ್, ಬ್ರೇಕ್ ಅಪ್, ಬಾಯ್ ಫ್ರೆಂಡ್ ಇಂಥದ್ದೇ ವಿಷಯವನ್ನು ಹೆಚ್ಚಾಗಿ ಕೇಳುತ್ತಾರೆ ಕರಣ್. ಯಾವುದೇ ಮುಜುಗರವಿಲ್ಲದೇ ಬಂದಂತಹ ಅತಿಥಿಗಳು ಉತ್ತರ ಕೊಡುತ್ತಾರೆ. ಅಲ್ಲದೇ, ಸ್ವತಃ ಕರಣ್ ಗೂ ಕಾಲೆಳೆಯುವ ಪ್ರಸಂಗಗಳು ಕೂಡ ಎದುರಾಗಿವೆ. ಇಂತಹ ಶೋಗೆ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಬಂದಿದ್ದರು. ಅವರಿಗೆ ಕರಣ್ ಪ್ರಶ್ನೆಯೊಂದನ್ನು ಕೇಳಿದರು. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಅನುಭವ ಬಿಚ್ಚಿಟ್ಟ ನಟಿ ಶಮಾ ಸಿಕಂದರ್

    ಡೇಟಿಂಗ್ (Dating) ವಿಷಯದಲ್ಲಿ ಮಗಳು ಸುಹಾನಿಗೆ (Suhana Khan) ನೀವು ಕೊಡುವ ಸಲಹೆ ಏನು ಅಂತ ಗೌರಿ ಖಾನ್ ಗೆ ಕರಣ್ ಜೋಹಾರ್ ಕೇಳುತ್ತಾರೆ. ತಕ್ಷಣವೇ ಉತ್ತರಿಸುವ ಗೌರಿ ಖಾನ್, ‘ಯಾವುದೇ ಕಾರಣಕ್ಕೂ ಇಬ್ಬರು ಹುಡುಗರೊಂದಿಗೆ ಒಂದೇ ಸಲ ಡೇಟ್ ಮಾಡಬೇಡ’ ಎಂದು ಸಲಹೆ ಕೊಡುತ್ತಾರೆ ಗೌರಿ ಖಾನ್. ಇದನ್ನು ಕೇಳಿದ ನೆಟ್ಟಿಗರು ಗೌರಿ ಖಾನ್ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ. ಡೇಟ್ ಬೇಡ ಎಂದು ಹೇಳುತ್ತಾರೆ ಅಂದುಕೊಂಡಿದ್ದ ಅಭಿಮಾನಿಗಳಿಗೆ ಗೌರಿ ಮಾತು ಅಚ್ಚರಿ ಮೂಡಿಸಿವೆ.

    Live Tv
    [brid partner=56869869 player=32851 video=960834 autoplay=true]

  • ಗೌರಿ ಖಾನ್ ಹೊಸ ಪ್ರಾಜೆಕ್ಟ್‌ನಲ್ಲಿ ನಟಿ ಕತ್ರಿನಾ ಕೈಫ್

    ಗೌರಿ ಖಾನ್ ಹೊಸ ಪ್ರಾಜೆಕ್ಟ್‌ನಲ್ಲಿ ನಟಿ ಕತ್ರಿನಾ ಕೈಫ್

    ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಚಿತ್ರರಂಗದಲ್ಲಿ ಆಕ್ಟೀವ್ ಆಗಿರುವ ನಟಿ. ಮದುವೆ ಆದ್ಮೇಲೂ ಕೂಡ ಈ ನಟಿಯ ಮೇಲಿರುವ ಕ್ರೇಜ್ ಕಡಿಮೆಯಾಗಿಲ್ಲ. ಇದೀಗ ಶಾರುಖ್ ಪತ್ನಿ ಗೌರಿ ಖಾನ್ ಅವರ ಹೊಸ ಪ್ರಾಜೆಕ್ಟ್ಗೆ ಕತ್ರಿನಾ ಕೈಫ್ ಸಾಥ್ ನೀಡಿದ್ದಾರೆ.

    ಬಿಟೌನ್‌ನಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ಕತ್ರಿನಾ ಕೈಫ್ ಕೈಯಲ್ಲಿ ಸ್ಟಾರ್ ನಟರ ಸಾಲು ಸಾಲು ಸಿನಿಮಾಗಳಿಗೆ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಇದೀಗ ಹೊಸ ಪ್ರಾಜೆಕ್ಟ್‌ವೊಂದು ಕತ್ರಿನಾರನ್ನ ಅರಸಿ ಬಂದಿದೆ. ಬಾದಷಾ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಪ್ರಾಜೆಕ್ಟ್‌ನಲ್ಲಿ ಕತ್ರಿನಾ ಕೈಫ್ ಮಿಂಚಲಿದ್ದಾರೆ. ಈ ಕುರಿತು ನಟಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್‌ಗೆ ಯಾಕೆ ಹೋಗಬಾರದು? ನವ್ಯಶ್ರೀ ರಾವ್ ಪ್ರಶ್ನೆ

     

    View this post on Instagram

     

    A post shared by Katrina Kaif (@katrinakaif)

    ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ ಗುರುತಿಸಿಕೊಂಡಿರುವ ಗೌರಿ ಖಾನ್ ಈಗ ಕತ್ರಿನಾಗೆ ಸಾಥ್ ನೀಡಲಿದ್ದಾರೆ. ಈ ಕುರಿತು ಹೆಚ್ಚಿನ ಅಪ್‌ಡೇಟ್‌ಗಾಗಿ ಮುಂದಿನ ದಿನಗಳವರೆಗೆ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಆರ್ಯನ್ ಖಾನ್ ಡ್ರಗ್ಸ್ ಕೇಸ್‌ನಲ್ಲಿ ಮೌನ ಮುರಿದ ಶಾರುಖ್ ಖಾನ್ ಪತ್ನಿ

    ಆರ್ಯನ್ ಖಾನ್ ಡ್ರಗ್ಸ್ ಕೇಸ್‌ನಲ್ಲಿ ಮೌನ ಮುರಿದ ಶಾರುಖ್ ಖಾನ್ ಪತ್ನಿ

    ಬಾಲಿವುಡ್‌ನ ನಂಬರ್ ಒನ್ ಶೋ `ಕಾಫಿ ವಿತ್ ಕರಣ್’ ಸಖತ್ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಆಲಿಯಾ ಭಟ್ ಮತ್ತು ರಣ್‌ವೀರ್ ಸಿಂಗ್ ಈ ಶೋನಲ್ಲಿ ಕಾಣಿಸಿಕೊಂಡು ಮನಬಿಚ್ಚಿ ಮಾತನಾಡಿದ್ದರು. ಶಾರುಖ್ ಪತ್ನಿ ಗೌರಿ ಖಾನ್ ಕೂಡ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.

    ಕಾಫಿ ವಿತ್ ಕರಣ್ ಸೀಸನ್ 7 ಸದ್ಯ ಓಟಿಟಿನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಆಲಿಯಾ ಮತ್ತು ರಣ್‌ವೀರ್ ಸಂದರ್ಶನದ ಬೆನ್ನಲ್ಲೇ ಗೌರಿ ಖಾನ್ ಕೂಡ ಮಹೀರ್ ಕಪೂರ್ ಮತ್ತು ಭಾವನಾ ಪಾಂಡೆ ಜತೆ ಕಾಣಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಗೌರಿ ಖಾನ್, ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್ ಬಗ್ಗೆ ಮಾತನಾಡಿದ್ದಾರೆ. ಆ ಸಮಯದಲ್ಲಿ ಎದುರಿಸಿದ ಸವಾಲಿನ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ʻಬಿಗ್ ಬಾಸ್’ ಮನೆಗೆ ಇವರಿಗಿದೆಯಂತೆ ಎಂಟ್ರಿ: ಸಂಭವನೀಯ ಪಟ್ಟಿ ರಿಲೀಸ್

    ಕಳೆದ ವರ್ಷ ಡ್ರಗ್ಸ್ ಕೇಸ್‌ನಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಅರೆಸ್ಟ್ ಆಗಿದ್ದರು. ಕಾನೂನು ಹೋರಾಟದ ನಂತರ ಎನ್‌ಸಿಬಿ ಕ್ಲಿನ್ ಚೀಟ್ ನೀಡಿತ್ತು. ಇಷ್ಟೇಲ್ಲಾ ಆರ್ಯನ್ ಖಾನ್‌ನ ಡ್ರಗ್ಸ್ ಕೇಸ್‌ನಲ್ಲಿ ಅವಾಂತರ ಆಗಿತ್ತು. ಈ ಕುರಿತು ಶಾರುಖ್ ದಂಪತಿ ಯಾವುದೇ ರಿಯಾಕ್ಷನ್ ಕೊಟ್ಟಿರಲಿಲ್ಲ. ಆರ್ಯನ್ ಕೇಸ್‌ನ ವಿಚಾರದಲ್ಲಿ ಮೌನ ವಹಿಸಿದ್ದರು. ಈಗ `ಕಾಫಿ ವಿತ್ ಕರಣ್’ ಶೋನಲ್ಲಿ ಈ ಕುರಿತು ಗೌರಿ ಖಾನ್ ಮನಬಿಚ್ಚಿ ಮಾತನಾಡಿದ್ದಾರಂತೆ. ಅಷ್ಟಕ್ಕೂ ಈ ವಿಚಾರ ನಿಜಾನಾ ಅಂತಾ ಶೋ ತೆರೆಯ ಮೇಲೆ ಬರುವವೆರೆಗೂ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಶಾರೂಖ್ ಜೊತೆ ಪ್ರಾರ್ಥನೆ ಮಾಡಿದ್ದು ಪತ್ನಿ ಗೌರಿ ಖಾನ್ ಅಲ್ಲ

    ಶಾರೂಖ್ ಜೊತೆ ಪ್ರಾರ್ಥನೆ ಮಾಡಿದ್ದು ಪತ್ನಿ ಗೌರಿ ಖಾನ್ ಅಲ್ಲ

    ಮುಂಬೈ: ಮಹಾನ್ ಗಾಯಕಿ ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರವನ್ನು ನೋಡಲು ನಟ, ನಟಿಯರು, ರಾಜಕೀಯ ವ್ಯಕ್ತಿಗಳು, ಗಣ್ಯರು ಬಂದಿದ್ದರು. ಆದರೆ ಈ ವೇಳೆ ಬಾಲಿವುಡ್ ನಟ ಶಾರೂಖ್ ಅವರ ಫೋಟೋವೊಂದು ಶೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುವುದರ ಜೊತೆಗೆ ವಿವಾದನ್ನು ಹುಟ್ಟುಹಾಕಿತ್ತು.

    ಲತಾ ಮಂಗೇಶ್ಕರ್ ಅವರ ಅಂತಿಮ ದರ್ಶನ ವೇಳೆ ಶಾರೂಖ್ ಖಾನ್ ಪ್ರಾರ್ಥನೆ ಸಲ್ಲಿಸಿದ ರೀತಿ ಸೋಶಿಯಲ್ ಮೀಡಿಯಾದಲ್ಲಿ ತುಂಬ ಹೈಲೈಟ್ ಆಗಿದೆ. ಶಾರುಖ್ ಜೊತೆ ನಿಂತಿರುವ ಮಹಿಳೆಯನ್ನು ಗೌರಿ ಖಾನ್ ಎಂದು ನೆಟ್ಟಿಗರು ಭಾವಿಸಿದ್ದಾರೆ. ಆದರೆ ಅದು ಗೌರಿ ಖಾನ್ ಅಲ್ಲ.  ಇದನ್ನೂ ಓದಿ: ಕನ್ನಡಕ್ಕೂ ದನಿಗೂಡಿಸಿದ್ದ ಲತಾ ಮಂಗೇಶ್ಕರ್

    ಶಾರೂಖ್ ಖಾನ್ ಅವರು ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರದ ಮುಂದೆ ನಿಂತು ಮುಸ್ಲಿಂ ಧರ್ಮದ ಪದ್ಧತಿಯಂತೆ ಪ್ರಾರ್ಥನೆ (ದುವಾ) ಸಲ್ಲಿಸಿದರು. ಅವರ ಪಕ್ಕದಲ್ಲಿ ಇದ್ದಿದ್ದ ಮ್ಯಾನೇಜರ್ ಪೂಜಾ ದದ್ಲಾನಿ ಹಿಂದೂ ಧರ್ಮದವರಾದ ಅವರು ಹಿಂದೂ ಪದ್ಧತಿಯಂತೆ ಕೈ ಮುಗಿದು ಪ್ರಾರ್ಥಿಸಿದರು. ಹಿಂದು, ಮುಸ್ಲಿಂ ಭಾವೈಕ್ಯತೆ ಒಂದೇ ಪ್ರೇಮ್‍ನಲ್ಲಿ ನೋಡಿದ ಅಭಿಮಾನಿಗಳು ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಮ್ಯಾನೇಜರ್ ಪೂಜಾ ದದ್ಲಾನಿ ಅವರನ್ನು ನೋಡಿದ ಅಭಿಮಾನಿಗಳು ಶಾರೂಖ್ ಅವರ ಪತ್ನಿ ಗೌರಿ ಖಾನ್ ಎಂದು ಭಾವಿಸಿದ್ದರು.

    ವೀಡಿಯೋದಲ್ಲಿ ಏನಿದೆ?: ಲತಾ ಮಂಗೇಶ್ಕರ್ ಅವರ ಮೃತದೇಹದ ಎದುರಿನಲ್ಲಿ ನಿಂತು ಪ್ರಾರ್ಥನೆ ಮಾಡುವಾಗ ಶಾರೂಖ್ ಖಾನ್ ಅವರು ಮಾಸ್ಕ್ ಧರಿಸಿದ್ದರು. ಗಾಯಕಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಪ್ರಾರ್ಥನೆ ಮಾಡಿದರು. ಬಳಿಕ ಮಾಸ್ಕ್ ತೆಗೆದು ಪಾರ್ಥಿವ ಶರೀರದ ಕಡೆಗೆ ಗಾಳಿ ಊದಿದರು. ಮುಸ್ಲಿಂ ಸಮುದಾಯದಲ್ಲಿ ಈ ರೀತಿ ಮಾಡುವ ಪದ್ಧತಿ ಇದೆ. ಆದರೆ ಅವರು ಗಾಳಿ ಊದಿದ್ದನ್ನು ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ. ಲತಾಜೀ ಪಾರ್ಥಿವ ಶರೀರಕ್ಕೆ ಶಾರೂಖ್ ಖಾನ್ ಉಗಿದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್ ಅವರನ್ನು ಸಚಿನ್ ತೆಂಡೂಲ್ಕರ್ ಏನೆಂದು ಕರೆಯುತ್ತಿದ್ದರು ಗೊತ್ತಾ?

    ಶಾರೂಖ್ ಖಾನ್ ಅನೇಕ ಸಿನಿಮಾಗಳ ಅನೇಕ ಗೀತೆಗಳಿಗೆ ಲತಾ ಮಂಗೇಶ್ಕರ್ ಧ್ವನಿ ಆಗಿದ್ದರು. ಲತಾ ಬಗ್ಗೆ ಬಾಲಿವುಡ್‍ನ ಎಲ್ಲ ತಾರೆಯರಿಗೂ ಅಪಾರ ಗೌರವ, ಅಭಿಮಾನ. ಆ ಕಾರಣದಿಂದ ಶಾರುಖ್ ಖಾನ್ ಕೂಡ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

  • ಆರ್ಯನ್‍ಗೆ ಜಾಮೀನು ಸಿಗುವವರೆಗೂ ಸಿಹಿ ಅಡುಗೆ ಮಾಡ್ಬೇಡಿ – ಸಿಬ್ಬಂದಿಗೆ ಗೌರಿ ಸೂಚನೆ

    ಆರ್ಯನ್‍ಗೆ ಜಾಮೀನು ಸಿಗುವವರೆಗೂ ಸಿಹಿ ಅಡುಗೆ ಮಾಡ್ಬೇಡಿ – ಸಿಬ್ಬಂದಿಗೆ ಗೌರಿ ಸೂಚನೆ

    ಮುಂಬೈ:  ಡ್ರಗ್ಸ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಎನ್‍ಸಿಬಿ (NCB) ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಆರ್ಯನ್ ಖಾನ್ ಜಾಮೀನು ಪಡೆದು ಜೈಲಿನಿಂದ ಹೊರ ಬರುವವರೆಗೂ ಮನೆಯಲ್ಲಿ ಸಿಹಿ ತಿನಿಸು ಮಾಡದಂತೆ ಅಡುಗೆ ಸಿಬ್ಬಂದಿಗೆ ತಾಯಿ ಗೌರಿ ಖಾನ್ ಸೂಚನೆ ನೀಡಿದ್ದಾರೆ.

    ದಸರಾ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವ ಮನ್ನತ್ ನಿವಾಸದಲ್ಲಿ ಖೀರ್ ಮಾಡಲಾಗುತ್ತಿತ್ತು. ಇದನ್ನು ಶಾರೂಖ್ ಖಾನ್ ಪತ್ನಿ ಗೌರಿ ಗಮನಿಸಿದ್ದಾರೆ. ಅಲ್ಲದೆ ಅಡುಗೆ ಸಿಬ್ಬಂದಿಗೆ ಆರ್ಯನ್ ಖಾನ್ ಜಾಮೀನು ಪಡೆದು ಜೈಲಿನಿಂದ ಹೊರ ಬರುವವರೆಗೂ ಸಿಹಿ ತಿನಿಸು ಮಾಡದಂತೆ ಹೇಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಇನ್ಮುಂದೆ ತಪ್ಪು ಮಾಡಲ್ಲ, ಬಡವರಿಗೆ ನೆರವಾಗುತ್ತೇನೆ: ಆರ್ಯನ್ ಖಾನ್

    ಆರ್ಯನ್ ಖಾನ್ ಜೈಲು ಸೇರಿದ ಮೇಲೆ ಮನ್ನತ್ ನಲ್ಲಿ ಖುಷಿಯ ವಾತಾವರಣ ಇಲ್ಲ. ಅವರು ಯಾರನ್ನೂ ಭೇಟಿಯಾಗಲು ಬಯಸುತ್ತಿಲ್ಲ ಎಂದು ಆಪ್ತ ಮೂಲಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ಗೌರಿ ಹಬ್ಬದ ದಿನಗಳಲ್ಲೂ ಸಿಹಿ ತಿನಿಸು ಮಾಡದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.  ಇದನ್ನೂ ಓದಿ: ಜೈಲೂಟ ತಿನ್ನಲು ಆರ್ಯನ್ ಪರದಾಟ – ಕ್ಯಾಂಟೀನ್ ಊಟಕ್ಕೆ ಮನಿ ಆರ್ಡರ್ ಕಳುಹಿಸಿದ ಶಾರೂಖ್

    ಅಕ್ಟೋಬರ್ 2 ರಂದು ಮುಂಬೈನಿಂದ ಗೋವಾಗೆ ಹೊರಟಿದ್ದ ಐಷರಾಮಿ ಹಡಗಿನಲ್ಲಿ ರೇವ್ ಪಾರ್ಟಿ ನಡೆಸಲಾಗಿತ್ತಿತ್ತು. ಈ ಪಾರ್ಟಿಯಲ್ಲಿ ಸ್ನೇಹಿತರ ಜೊತೆಗೆ ಭಾಗಿಯಾಗಿದ್ದ ಆರ್ಯನ್ ಖಾನ್ ಡ್ರಗ್ ಸೇವನೆ ಮಾಡಿದ್ದರು ಎಂದು ಆರೋಪಿಸಿ ಎನ್‍ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರ್ಯನ್ ಖಾನ್ ಜಾಮೀನು ಅರ್ಜಿ ಆದೇಶ ಅಕ್ಟೋಬರ್ 20 ರಂದು ಪ್ರಕಟವಾಗಲಿದೆ.

  • ಮಗನ ಆರೋಗ್ಯ ವಿಚಾರಿಸುತ್ತಾ ರಾತ್ರಿಯಿಡೀ ನಿದ್ದೆಗೆಟ್ಟ ಶಾರೂಖ್ ದಂಪತಿ!

    ಮಗನ ಆರೋಗ್ಯ ವಿಚಾರಿಸುತ್ತಾ ರಾತ್ರಿಯಿಡೀ ನಿದ್ದೆಗೆಟ್ಟ ಶಾರೂಖ್ ದಂಪತಿ!

    ಮುಂಬೈ: ಡ್ರಗ್ಸ್ ಪ್ರಕರಣ ಸಂಬಂಧ ಜೈಲುವಾಸಿಯಾಗಿರುವ ಆರ್ಯನ್ ಖಾನ್ ಆರೋಗ್ಯದ ಬಗ್ಗೆ ಎನ್‍ಸಿಬಿ ಅಧಿಕಾರಿಗಳ ಬಳಿ ವಿಚಾರಿಸುತ್ತಾ ಕಿಂಗ್ ಖಾನ್ ದಂಪತಿ ರಾತ್ರಿಯಿಡೀ ನಿದ್ದೆಗೆಟ್ಟು ಕುಳಿತಿದ್ದಾರೆ.

    ಹೌದು. ಆರ್ಯನ್ ಜೈಲು ಸೇರಿದಾಗಿನಿಂದ ಶಾರೂಖ್ ಮನಸ್ಸಲ್ಲಿ ತಳಮಳ ಶುರುವಾಗಿದೆ. ಮಗ ಜೈಲಿನಲ್ಲಿ ಹೇಗೆ ದಿನಗಳನ್ನು ಕಳೆಯುತ್ತಿದ್ದಾನೋ ಎಂಬ ಚಿಂತೆ ಆರ್ಯನ್ ಪೋಷಕರಿಗೆ ಶುರುವಾಗಿದೆ. ಹೀಗಾಗಿ ದಂಪತಿ ಮಗನ ಬಗ್ಗೆ ಯೋಚನೆ ಮಾಡುತ್ತಾ ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಊಟ- ತಿಂಡಿಯೂ ಇಲ್ಲದಾಗಿದೆ. ಅಲ್ಲದೆ ಪದೇ ಪದೇ ಎನ್‍ಸಿಬಿ ಅಧಿಕಾರಿಗಳಿಗೆ ಕರೆ ಮಾಡಿ ಮಗನ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದಾರೆ ಎಂದು ಎಸ್‍ಆರ್ ಕೆ ಆಪ್ತರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ – ಇನ್ನೆರಡು ದಿನ ಜೈಲೇ ಗತಿ

    ಅಕ್ಟೋಬರ್ 3 ರಂದು ಡ್ರಗ್ಸ್ ಪ್ರಕರಣ ಸಂಬಂಧ ಆರ್ಯನ್ ಖಾನ್ ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಆರ್ಯನ್ ಖಾನ್ ಬಂಧನದ ಬಳಿಕ ಶಾರುಖ್ ಖಾನ್ ಮತ್ತು ಗೌರಿ ಖಾನ್ ತುಂಬಾ ಬೇಸರಗೊಂಡಿದ್ದಾರೆ. ಈ ಪ್ರಕರಣ ಇಷ್ಟೊಂದು ದೊಡ್ಡದಾಗುತ್ತೆ ಎಂದು ಅವರು ಅಂದುಕೊಂಡಿರಲಿಲ್ಲವಂತೆ. ಅಲ್ಲದೆ ಇದೀಗ ಹೇಗಾದರೂ ಮಾಡಿ ಮಗನನ್ನು ಹೊಗಡೆ ಕರೆತರಬೇಕೆಂದು ಶಾರೂಖ್ ದಂಪತಿ ಒದ್ದಾಡುತ್ತಿದ್ದಾರೆ. ಒಟ್ಟಿನಲ್ಲಿ ಪೋಷಕರು ತಮ್ಮ ಮಗನಿಗಾಗಿ ಹಂಬಲಿಸುತ್ತಿದ್ದಾರೆ. ಇದನ್ನೂ ಓದಿ: ಮಗ ಇಲ್ಲದೇ ಹುಟ್ಟುಹಬ್ಬ ಆಚರಿಸಲ್ಲ: ಶಾರೂಖ್ ಪತ್ನಿ ಗೌರಿ ಖಾನ್

    ನಿನ್ನೆ ಆರ್ಯನ್ ಖಾನ್ ಮತ್ತು ಇತರರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸುವುದಾಗಿ ಮುಂಬೈ ಸೆಷನ್ಸ್ ಕೋರ್ಟ್ ಹೇಳಿದೆ. ಬುಧವಾರ ಮಧ್ಯಾಹ್ನದ ಬಳಿಕ ಸುದೀರ್ಘ ವಿಚಾರಣೆ ನಡೆಯಲಿದೆ. ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡ ಬಳಿಕ ಸೆಷನ್ಸ್ ಕೋರ್ಟಿಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿತ್ತು. ಹೀಗಾಗಿ ನಿನ್ನೆ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ.ವಿ.ವಿ ಪಾಟೀಲ್ ತನಿಖಾ ವರದಿ ಸಲ್ಲಿಸಲು ಎನ್‍ಸಿಬಿ(NCB) ಕಾಲಾವಕಾಶ ಕೇಳಿದ ಹಿನ್ನೆಲೆ ವಿಚಾರಣೆ ಮುಂದೂಡಿತು. ಇದನ್ನೂ ಓದಿ: ಶಾರೂಖ್ ಮಗನ ಅರೆಸ್ಟ್ ಹಿಂದೆ ಬಿಜೆಪಿ ಉಪಾಧ್ಯಕ್ಷ – NCB ಅಧಿಕಾರಿಗಳಿಂದ್ಲೇ ಪಿತೂರಿ ಆರೋಪ