Tag: ಗೌರಿಶಂಕರ

  • ‌’ನನ್ನರಸಿ ರಾಧೆ’ ನಟಿ ಕೌಸ್ತುಭ ಮಣಿ ಮದುವೆ ಡೇಟ್‌ ಫಿಕ್ಸ್

    ‌’ನನ್ನರಸಿ ರಾಧೆ’ ನಟಿ ಕೌಸ್ತುಭ ಮಣಿ ಮದುವೆ ಡೇಟ್‌ ಫಿಕ್ಸ್

    ಕಿರುತೆರೆ ಬ್ಯೂಟಿ ಕೌಸ್ತುಭ ಮಣಿ (Kaustubha Mani) ಅವರು ಇತ್ತೀಚೆಗೆ ಎಂಗೇಜ್‌ಮೆಂಟ್ ಮಾಡಿಕೊಳ್ಳುವ ಮೂಲಕ ಪಡ್ಡೆಹುಡುಗರಿಗೆ ಶಾಕ್ ಕೊಟ್ಟಿದ್ದರು. ಇದೀಗ ನಟಿಯ ಮದುವೆ (Wedding) ಡೇಟ್ ಫಿಕ್ಸ್ ಆಗಿದೆ. ಏಪ್ರಿಲ್‌ನಲ್ಲಿ ಸಿದ್ಧಾಂತ್ ಸತೀಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

    ತಮ್ಮ ಬದುಕಿನ ಹೊಸ ಜರ್ನಿ ಶುರು ಮಾಡಲು ‘ನನ್ನರಸಿ ರಾಧೆ’ ನಟಿ ಎದುರುನೋಡ್ತಿದ್ದಾರೆ. ಗುರುಹಿರಿಯರ ಸಮ್ಮತಿಯ ಮೇರೆಗೆ ಮುಂದಿನ ತಿಂಗಳು ಹಸೆಮಣೆ ಏರೋದಕ್ಕೆ ರೆಡಿಯಾಗಿದ್ದಾರೆ. ಈ ಮದುವೆಗೆ ತಮ್ಮ ಕುಟುಂಬದ ಜೊತೆ ಆಪ್ತರು, ಸ್ನೇಹಿತರಿಗಷ್ಟೇ ಆಹ್ವಾನವಿರಲಿದೆ. ಮಾರ್ಚ್ ಮೊದಲ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಆಗಿರುವ ಬಗ್ಗೆ ನಟಿ ಗುಡ್ ನ್ಯೂಸ್ ಹಂಚಿಕೊಂಡಿದ್ದರು.

    ಇತ್ತೀಚೆಗೆ ‘ಗೌರಿ ಶಂಕರ’ ಎಂಬ ಸೀರಿಯಲ್‌ನಲ್ಲಿ ನಟಿಸುತ್ತಿದ್ದರು. ಮದುವೆ ನಿಶ್ಚಯವಾಗಿದೆ ಎಂಬ ಕಾರಣಕ್ಕೆ ನಟಿ ಸೀರಿಯಲ್‌ನಿಂದ ಹೊರಬಂದಿದ್ದರು. ಈ ವಿಚಾರ ಫ್ಯಾನ್ಸ್‌ಗೆ ನಿರಾಸೆ ಮೂಡಿಸಿತ್ತು. ಇದನ್ನೂ ಓದಿ:ನಾಯಕಿಯ ಅಮ್ಮನ ಕಣ್ಣಲ್ಲಿ ಕಳೆಗಟ್ಟಿದ ಕೆರೆಬೇಟೆ!

    ‘ರಾಮಾಚಾರಿ 2.0’ ಸಿನಿಮಾದಲ್ಲಿ ನಾಯಕಿಯಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿಗೆ ಜೋಡಿಯಾಗಿ ನಟಿಸಿದ್ದಾರೆ. ಶಿವಣ್ಣ, ಉಪೇಂದ್ರ, ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಈ ಚಿತ್ರದ ರಿಲೀಸ್ ಬಗ್ಗೆ ಮಾಹಿತಿ ಸಿಗಲಿದೆ.

  • ‘ಗೌರಿಶಂಕರ’ ನಟಿ ಕೌಸ್ತುಭ ಕೈಬಿಟ್ಟ ಪಾತ್ರಕ್ಕೆ ದಿವ್ಯಾ ಎಂಟ್ರಿ

    ‘ಗೌರಿಶಂಕರ’ ನಟಿ ಕೌಸ್ತುಭ ಕೈಬಿಟ್ಟ ಪಾತ್ರಕ್ಕೆ ದಿವ್ಯಾ ಎಂಟ್ರಿ

    ಕಿರುತೆರೆಯ ಜನಪ್ರಿಯ ‘ಗೌರಿಶಂಕರ’ (Gowrishankara) ಸೀರಿಯಲ್‌ನಿಂದ ನಾಯಕಿ ಕೌಸ್ತುಭ ಮಣಿ ಹೊರಬರುವ ಮೂಲಕ ಅಭಿಮಾನಿಗಳಿಗೆ ಕಹಿಸುದ್ದಿ ನೀಡಿದ್ದರು. ಇದೀಗ ಅವರು ಕೈಬಿಟ್ಟ ಪಾತ್ರವನ್ನು ಯಾರು ನಟಿಸುತ್ತಾರೆ ಎಂದು ಚರ್ಚೆಯಾಗಿತ್ತು. ಇದೀಗ ನಾಯಕಿ ಗೌರಿ ಪಾತ್ರಕ್ಕೆ ದಿವ್ಯಾ ಎಂಟ್ರಿಯಾಗಿದೆ.

    ‘ಗೌರಿಶಂಕರ’ ಸೀರಿಯಲ್‌ಗೆ ಹೊಸ ಗೌರಿಯ ಆಗಮನವಾಗಿದೆ. ಈ ಹಿಂದೆ, ಮಾಂಗಲ್ಯಂ ತಂತು ನಾನೇನಾ, ‘ಮರಳಿ ಮನಸಾಗಿದೆ’ ಎಂಬ ಸೀರಿಯಲ್‌ನಲ್ಲಿ ನಟಿಸಿದ್ದ ದಿವ್ಯಾ ಅವರು ಗೌರಿ ಪಾತ್ರಕ್ಕೆ ಜೀವ ತುಂಬಲು ಎಂಟ್ರಿ ಕೊಟ್ಟಿದ್ದಾರೆ.

    ‘ಗೌರಿಶಂಕರ’ ಸೀರಿಯಲ್‌ನಲ್ಲಿ ಇತ್ತೀಚಿಗೆ ಮದುವೆ ಎಪಿಸೋಡ್‌ಗಳು ಅದ್ಧೂರಿಯಾಗಿ ನೆರವೇರಿತ್ತು. ಈಗ ಮದುವೆ ಎಪಿಸೋಡ್ ಮುಗಿದ್ಮೇಲೆ ಸೊಸೆ ಮನೆಗೆ ಕಾಲಿಡುವ ಕಾರ್ಯಕ್ರಮದ ದೃಶ್ಯದಿಂದ ದಿವ್ಯಾ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:‘ಮಾದೇವ’ನ ಮಾಸ್ ಟೀಸರ್- ಭರ್ಜರಿ ಆ್ಯಕ್ಷನ್ ಮೂಲಕ ಮರಿ ಟೈಗರ್ ಎಂಟ್ರಿ

    ಇನ್ನೂ ಕೌಸ್ತುಭ ಮಣಿ ಸೋಷಿಯಲ್ ಮೀಡಿಯಾ ಮೂಲಕ ಸೀರಿಯಲ್‌ನಿಂದ ಹೊರಬಂದಿರೋದಾಗಿ ತಿಳಿಸಿದ್ದರು. ತಾವು ಧಾರಾವಾಹಿಯಿಂದ ಹೊರಬರುತ್ತಿರುವ ವಿಚಾರವನ್ನು ಸ್ವತಃ ಕೌಸ್ತಭ ಮಣಿ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಯ್, ನಾನು ನಿಮ್ಮ ಪ್ರೀತಿಯ ಗೌರಿ. ಕೆಲವೊಂದು ವೈಯಕ್ತಿಕ ಕಾರಣಗಳಿಂದ ಇನ್ನು ಮುಂದೆ ನಾನು ‘ಗೌರಿಶಂಕರ’ ಧಾರಾವಾಹಿಯಲ್ಲಿ ನಟಿಸುವುದಕ್ಕೆ ಆಗುತ್ತಿಲ್ಲ. ನನ್ನ ಜಾಗಕ್ಕೆ ಹೊಸ ಗೌರಿ ಬರುತ್ತಿದ್ದಾಳೆ. ನನಗೆ ಕೊಟ್ಟಷ್ಟೇ ಪ್ರೀತಿ ಅವಳಿಗೂ ಕೊಟ್ಟು ಸಪೋರ್ಟ್ ಮಾಡಿ, ಹರಸಿ, ಹಾರೈಸಿ. ಥ್ಯಾಂಕ್ಯೂ ಎಂದು ನಟಿ ಹೇಳಿಕೊಂಡಿದ್ದರು.

    ‘ಗೌರಿ’ (Gowri) ಪಾತ್ರಕ್ಕಾಗಿ ದಿವ್ಯಾ ಎಂಟ್ರಿ ಕೊಟ್ಟಿದ್ದು, ಈ ಹಿಂದಿನ ಗೌರಿ ಪಾತ್ರಧಾರಿಯನ್ನು ಮರೆಸುತ್ತಾರಾ? ದಿವ್ಯಾರನ್ನು ಅಭಿಮಾನಿಗಳು ಅಪ್ಪಿ ಒಪ್ಪಿಕೊಳ್ತಾರಾ ಎಂದು ಕಾಯಬೇಕಿದೆ.

  • ‘ಗೌರಿಶಂಕರ’ ಸೀರಿಯಲ್‌ಗೆ ಗುಡ್‌ ಬೈ ಹೇಳಿದ ಕೌಸ್ತುಭ ಮಣಿ

    ‘ಗೌರಿಶಂಕರ’ ಸೀರಿಯಲ್‌ಗೆ ಗುಡ್‌ ಬೈ ಹೇಳಿದ ಕೌಸ್ತುಭ ಮಣಿ

    ಕಿರುತೆರೆ ರಾಧೆ ಕೌಸ್ತುಭ ಮಣಿ (Kaustubha Mani) ಅಭಿಮಾನಿಗಳಿಗೆ ಕಹಿ ಸುದ್ದಿ ಸಿಕ್ಕಿದೆ. ವೀಕ್ಷಕರ ಗಮನ ಸೆಳೆದ ‘ಗೌರಿಶಂಕರ’ (Gowrishankara) ಸೀರಿಯಲ್‌ನಿಂದ ನಾಯಕಿ ಕೌಸ್ತುಭ ಹೊರನಡೆದಿದ್ದಾರೆ. ಈ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:`ಚೌ ಚೌ ಬಾತ್’ ಟ್ರೈಲರ್ ಬಿಡುಗಡೆ: ಅನೇಕ ಮೊದಲಗಳ ಸಾಕ್ಷಿಯಾಗಿ ಬರಲಿದೆ ಚಿತ್ರ

    ‘ನನ್ನರಸಿ ರಾಧೆ’ (Nannarasi Radhe) ಸೀರಿಯಲ್ ಮೂಲಕ ಬಣ್ಣದ ಬದುಕು ಪ್ರಾರಂಭಿಸಿದ ಕೌಸ್ತುಭ ಮಣಿ ಅವರು ಗ್ಯಾಪ್ ನಂತರ ಗೌರಿಶಂಕರ ಸೀರಿಯಲ್‌ನ ನಾಯಕಿ ಗೌರಿಯಾಗಿ ಎಂಟ್ರಿ ಕೊಟ್ಟಿದ್ದರು. ಇದೀಗ ಈ ಸೀರಿಯಲ್‌ನ ನಟಿ ಕೈಬಿಟ್ಟಿದ್ದಾರೆ.

    ತಾವು ಧಾರಾವಾಹಿಯಿಂದ ಹೊರಬರುತ್ತಿರುವ ವಿಚಾರವನ್ನು ಸ್ವತಃ ಕೌಸ್ತಭ ಮಣಿ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಯ್, ನಾನು ನಿಮ್ಮ ಪ್ರೀತಿಯ ಗೌರಿ. ಕೆಲವೊಂದು ವೈಯಕ್ತಿಕ ಕಾರಣಗಳಿಂದ ಇನ್ನು ಮುಂದೆ ನಾನು ‘ಗೌರಿಶಂಕರ’ ಧಾರಾವಾಹಿಯಲ್ಲಿ ನಟಿಸುವುದಕ್ಕೆ ಆಗುತ್ತಿಲ್ಲ. ನನ್ನ ಜಾಗಕ್ಕೆ ಹೊಸ ಗೌರಿ ಬರುತ್ತಿದ್ದಾಳೆ. ನನಗೆ ಕೊಟ್ಟಷ್ಟೇ ಪ್ರೀತಿ ಅವಳಿಗೂ ಕೊಟ್ಟು ಸಪೋರ್ಟ್ ಮಾಡಿ, ಹರಸಿ, ಹಾರೈಸಿ. ಥ್ಯಾಂಕ್ಯೂ ಎಂದು ಆಕೆ ಹೇಳಿಕೊಂಡಿದ್ದಾರೆ.

    ಗೌರಿ ಪಾತ್ರಕ್ಕೆ ನಟಿ ಗುಡ್ ಬೈ ಹೇಳಿರೋದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಸಿನಿಮಾ ಇರುವ ಕಾರಣ, ಕಿರುತೆರೆಯಲ್ಲಿ ನಟಿಸಲು ಬ್ರೇಕ್ ಹಾಕಿದ್ರಾ ಎಂಬ ಅನುಮಾನ ಪ್ರೇಕ್ಷಕರಲ್ಲಿ ಮೂಡಿದೆ. ಮತ್ತೆ ಟಿವಿ ಪರದೆಗೆ ಬರುತ್ತಾರಾ ಕಾಯಬೇಕಿದೆ. ಇದನ್ನೂ ಓದಿ:ಸ್ನೇಹಿತ್ ಜೊತೆ ಫ್ರೆಂಡ್‌ಶಿಪ್ ಕಂಟಿನ್ಯೂ ಮಾಡ್ತಾರಾ? ನಮ್ರತಾ ಸ್ಪಷ್ಟನೆ

    ಕೌಸ್ತುಭ ಮಣಿ ಸದ್ಯ ಅರ್ಜುನ್ ಜನ್ಯ ನಿರ್ದೇಶನದ ’45’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಅವರ ಜೊತೆ ತೆರೆಹಂಚಿಕೊಂಡಿದ್ದಾರೆ.