Tag: ಗೌರಿ

  • ಮಾಜಿ ಪತ್ನಿ ಮನೆಗೆ ಗೆಳತಿಯೊಂದಿಗೆ ಬಂದ ಆಮೀರ್ ಖಾನ್

    ಮಾಜಿ ಪತ್ನಿ ಮನೆಗೆ ಗೆಳತಿಯೊಂದಿಗೆ ಬಂದ ಆಮೀರ್ ಖಾನ್

    ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಅವರು ನಿನ್ನೆ (ಏ.27) ಗೆಳತಿ ಗೌರಿಯೊಂದಿಗೆ (Gauri Spratt) ಮಾಜಿ ಪತ್ನಿ ರೀನಾ ದತ್ತಾ ಮನೆಗೆ ಭೇಟಿ ನೀಡಿದ್ದಾರೆ. ಭೇಟಿ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದನ್ನೂ ಓದಿ:ಬೆಂಗಳೂರಿನ ಬೆಡಗಿ ಜೊತೆ ಡೇಟಿಂಗ್ ಮಾಡ್ತಿದ್ದೀನಿ: ಪಾರ್ಟಿಯಲ್ಲಿ ಗೆಳತಿ ಬಗ್ಗೆ ಆಮೀರ್ ಮಾತು

    ಆಮೀರ್ ಮತ್ತು ಗೆಳತಿ ಗೌರಿ ಭಾನುವಾರದ ವಿಶೇಷವಾಗಿ ಮಾಜಿ ಪತ್ನಿ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ, ಆಮೀರ್ ಪುತ್ರ ಜುನೈದ್ ಖಾನ್ ಕೂಡ ಜೊತೆಗಿದ್ದಾರೆ. ಆಮೀರ್ ಖಾನ್ ಗೆಳತಿಯನ್ನು ಮಗನ ಮುಂದೆಯೇ ಮೊದಲ ಪತ್ನಿಯ ಮನೆಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯವನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್ ಉಗ್ರರ ದಾಳಿ: ಅಮಾಯಕರ ಹತ್ಯೆಯಿಂದ ಆಘಾತವಾಗಿದೆ ಎಂದ ಆಮೀರ್ ಖಾನ್

     

    View this post on Instagram

     

    A post shared by Viral Bhayani (@viralbhayani)

    ಅಂದಹಾಗೆ, ಆಮೀರ್ ಖಾನ್ 60ನೇ ವರ್ಷದ ಹುಟ್ಟುಹಬ್ಬ ಆಚರಿಸಿದ ಸಂದರ್ಭದಲ್ಲಿ ಮಾಧ್ಯಮಕ್ಕೆ ಡೇಟಿಂಗ್ ಬಗ್ಗೆ ಅಧಿಕೃತವಾಗಿ ತಿಳಿಸಿದ್ದರು. ಗೌರಿ ಜೊತೆ 1 ವರ್ಷದಿಂದ ಡೇಟಿಂಗ್ ಮಾಡುತ್ತಿದ್ದೇನೆ. ಅವರನ್ನು ಕಳೆದ 25 ವರ್ಷಗಳಿಗಿಂತ ಹೆಚ್ಚಿನ ಕಾಲದಿಂದ ಪರಿಚಿತರು ಎಂದಿದ್ದರು. ಗೌರಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ತಮ್ಮದೇ ನಿರ್ಮಾಣದ ಸಂಸ್ಥೆಯಡಿಯಲ್ಲಿ ಕೆಲಸ ಮಾಡುತ್ತಿರೋದಾಗಿ ಆಮೀರ್ ಮಾಹಿತಿ ನೀಡಿದ್ದರು. ಗೌರಿಗೆ 6 ವರ್ಷದ ಮಗನಿದ್ದು, ನಾನು ಅವರೊಂದಿಗೆ ವಾಸಿಸುತ್ತಿದ್ದೇನೆ. ನಮ್ಮ ಕುಟುಂಬಸ್ಥರನ್ನು ಆಕೆ ಭೇಟಿಯಾಗಿದ್ದಾರೆ. ನಮ್ಮ ಸಂಬಂಧದ ಬಗ್ಗೆ ಮನೆಯವರಿಗೂ ಖುಷಿಯಿದೆ ಎಂದು ಹಂಚಿಕೊಂಡಿದ್ದರು.

    2021ರಲ್ಲಿ ಕಿರಣ್ ರಾವ್‌ಗೆ ಆಮೀರ್ ಡಿವೋರ್ಸ್ ನೀಡಿದರು. ಇದಕ್ಕೂ ಮುನ್ನ ರೀನಾ ದತ್‌ಗೆ 2002ರಲ್ಲಿ ಡಿವೋರ್ಸ್ ಆಗಿತ್ತು. ಈಗ ಮತ್ತೆ ಹೊಸ ಬಾಳಿಗೆ ಕಾಲಿಡಲು ಆಮೀರ್ ರೆಡಿಯಾಗಿದ್ದಾರೆ.

  • ಆಧುನಿಕ ಭಗೀರಥೆ – ಗಂಗೆ ತರಿಸಿದ ಗೌರಿಗೆ ನಾರಿ ನಾರಾಯಣಿ ಸನ್ಮಾನ

    ಆಧುನಿಕ ಭಗೀರಥೆ – ಗಂಗೆ ತರಿಸಿದ ಗೌರಿಗೆ ನಾರಿ ನಾರಾಯಣಿ ಸನ್ಮಾನ

    ಅಪರೂಪದಲ್ಲಿ ಅಪರೂಪದ ಸಾಧನೆ. ಅಂಗನವಾಡಿ ಮಕ್ಕಳಿಗಾಗಿ ಸಾಕಷ್ಟು ವಿರೋಧ ಕಟ್ಟಿಕೊಂಡು ತಾನೇ ಬಾವಿಯನ್ನು ತೋಡಿ, ನೀರು ಹರಿಸಿದ್ದಾರೆ ಕಾರವಾರದ ವಿಶಿಷ್ಟ ಸಾಧಕಿ ಗೌರಿ.

    ಅತ್ಯಂತ ಕಡು ಬಡತನದ ಕುಟುಂಬದಿಂದ ಬಂದವರು ಗೌರಿ. ಅಂಗನವಾಡಿ ಮಕ್ಕಳು, ಊರವರು ಕುಡಿಯುವ ನೀರಿಗೆ ಪರದಾಟ ಪಡುವುದನ್ನು ನೋಡಲು ಆಗದೇ ತಾವೇ ಬಾವಿ ತೋಡುವ ನಿರ್ಧಾರ ಮಾಡಿದರು. ಕೆಲಸದವರಿಗೆ ಕೊಡಲು ದುಡ್ಡಿಲ್ಲದೇ ಇರುವುದರಿಂದ ತಾವೇ ಶ್ರಮ ಪಟ್ಟು ಬಾವಿ ತೋಡಿದರು. ಆದರೆ ಜಿಲ್ಲಾಡಳಿತ ವಿನಾಕಾರಣ ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಮಾಧ್ಯಮದ ಸಹಾಯದೊಂದಿಗೆ ಹೋರಾಟಕ್ಕಿಳಿದರು. ಪಬ್ಲಿಕ್ ಟಿವಿ ಕೂಡ ಗೌರಿಯ ಬೆನ್ನಿಗೆ ನಿಂತು ಬೆಂಬಲ ನೀಡಿತು. ಗೌರಿಯ ಹಠ ಛಲದ ಮುಂದೆ ದೊಡ್ಡವರ ದೊಡ್ಡಾಟ, ಪಾಲಿಟಿಕ್ಸ್ ನಡೆಯಲಿಲ್ಲ. ಕೊನೆಗೂ ಮಕ್ಕಳಿಗೆ ನೀರುಣಿಸಿದರು.

    ಕುಂಭಮೇಳಕ್ಕೆ ಹೋಗಲು ಹಣವಿಲ್ಲದ ಗೌರಿ ಈಗ ಮತ್ತೆ ಮಹಾಕುಂಭಮೇಳದ ನೆನಪಿನಲ್ಲಿ 2 ತಿಂಗಳು ಶ್ರಮ ಪಟ್ಟು 40 ಅಡಿ ಬಾವಿ ತೋಡಿ ಮಗದೊಂದು ಸಾಧನೆ ಮಾಡಿದ್ದಾರೆ.

    ಗೌರಿಗಾಗಿ ಗಂಗೆಯೂ ಉಕ್ಕಿ ಬಂದು ಊರಿನನವರ, ಅಂಗನವಾಡಿ ಮಕ್ಕಳ ದಾಹ ತೀರಿಸುತ್ತಿದ್ದಾಳೆ. ಈ ಅಪರೂಪದ ಸಾಧಕಿಗೆ ಪಬ್ಲಿಕ್ ಟಿವಿ ನಾರಿ ನಾರಾಯಣಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

  • ‘ಗೌರಿ’ ರಿಲೀಸ್ ಡೇಟ್ ಅನೌನ್ಸ್: ವಿಶೇಷ ದಿನದಂದು ತೆರೆಗೆ ಬರುತ್ತಿದೆ ಸಿನಿಮಾ

    ‘ಗೌರಿ’ ರಿಲೀಸ್ ಡೇಟ್ ಅನೌನ್ಸ್: ವಿಶೇಷ ದಿನದಂದು ತೆರೆಗೆ ಬರುತ್ತಿದೆ ಸಿನಿಮಾ

    ಕೊನೆಗೂ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ ಗೌರಿ.  ಸ್ವಾತಂತ್ರ್ಯಾ ದಿನಾಚರಣೆಗೆ ತೆರೆಗೆ ಬರುತ್ತಿದೆ ಸಮರ್ಜಿತ್ ಲಂಕೇಶ್ ಮೊದಲ ಸಿನಿಮಾ. ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಗೌರಿ ಸಿನಿಮಾ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ. ಇವಾಗಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ಈ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂದು ಚಿತ್ರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಅದರೀಗ ಆ ಕುತುಹಲಕ್ಕೆ ತೆರೆ ಬಿದ್ದಿದೆ. ಇಂದ್ರಜಿತ್ ಲಂಕೇಶ್ ನಿರ್ದೇಶನದ ಅವರ ಪುತ್ರ ಸಮರ್ಜಿತ್ ಮತ್ತು ನಟಿ ಸಾನಿಯಾ ಅಭಿನಯದ ಮೊದಲ ಸಿನಿಮಾವಿದು. ಇಂದಿ ಸಿನಿಮಾ ತಂಡ  ಮಾಧ್ಯಮದ ಮುಂದೆ ಹಾಜರಾಗುವ ಮೂಲಕ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಗೌರಿ ಸಿನಿಮಾ ವಿಶೇಷ ದಿನದಂದು ತೆರೆಗೆ ಬರಲಿದೆ ಎಂದು ಹೇಳಿದರು.

    ಹೌದು ‘ಗೌರಿ’ (Gowri) ಸಿನಿಮಾ ಆಗಸ್ಟ್ 15 ಸ್ವಾತಂತ್ರ್ಯಾ ದಿನಾಚರಣೆಗೆ ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ. ಗೌರಿ ತಂಡ ಇಂದು ಕಾಲೇಜಿನಲ್ಲಿ ಕಾರ್ಯಕ್ರಮ ಮಾಡುವ‌ ಮೂಲಕ ಅದ್ದೂರಿಯಾಗಿ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಬೆಂಗಳೂರಿನ MES ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿನಿಮಾತಂಡ ‘ಗೌರಿ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ಕಾಲೇಜಿನ ವಿದ್ಯಾರ್ಥಿಗಳ ಜೊತೆ ಕುಣಿದು ಕುಪ್ಪಳಿಸಿದ್ದ ಸಿನಿಮಾ ತಂಡ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್ ‘ಕನ್ನಡದ ಯುವ ಪ್ರತಿಭೆಗಳನ್ನು ಬೆಳಸಿ. ಆಗಸ್ಟ್ 15 ಒಳ್ಳೆಯ ದಿನ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನ ಇದು. ಎಲ್ಲಾ ಸಿನಿಮಾಗಳು ಕನ್ನಡ ಸಿನಿಮಾಗಳೇ ಪ್ರೋತ್ಸಾಹಿಸಬೇಕು’ಎಂದರು. ಕನಸು ನನಸಾದ ಸಮಯಚಿದು. ನನ್ನ ಮೊದಲ ಸಿನಿಮಾವನ್ನು ಎಲ್ಲರೂ ನೋಡಿ ಎಂದರು.

    ಈಗಾಗಲೇ ಸಿನಿಮಾದಿಂದ ವೈರಲ್ ಆಗಿರುವ ‘ಟೈಮ್ ಬರುತ್ತೆ…’ ಮತ್ತು ಧೂಳ್ ಎಬ್ಬಿಸಾವ…ಹಾಡಿಗೆ ವಿದ್ಯಾರ್ಥಿಗಳ ಜೊತೆ ಸಮರ್ಥಿಜ್ ಲಂಕೇಶ್ ಮತ್ತು ನಾಯಕಿ ಸಾನ್ಯಾ ಅಯ್ಯರ್ ಡಾನ್ಸ್ ಮಾಡಿ ಸಂಭ್ರಮಿಸಿದರು.  ನಿಮ್ಮ ತಂಡದ ಖುಷಿಗೆ ಮತ್ತಷ್ಟು ಜೊಷ್ ತುಂಬಿದರು ವಿದ್ಯಾರ್ಥಿಗಳು.

  • ದಕ್ಷಿಣದ ಸಿನಿಮಾಗಳ ಮುಂದೆ ‘ಗೌರಿ’ ಸಾಂಗ್ ಸಖತ್ ಟ್ರೆಂಡಿಂಗ್

    ದಕ್ಷಿಣದ ಸಿನಿಮಾಗಳ ಮುಂದೆ ‘ಗೌರಿ’ ಸಾಂಗ್ ಸಖತ್ ಟ್ರೆಂಡಿಂಗ್

    ಇಂದ್ರಜಿತ್ ಲಂಕೇಶ್ (Indrajit Lankesh) ನಿರ್ದೇಶನದ ಸಮರ್ಜಿತ್ (Samarjit Lankesh), ಸಾನ್ಯಾ ಅಯ್ಯರ್ ಅಭಿನಯದ `ಗೌರಿ’ (Gowri) ಚಿತ್ರದ ಹುಬ್ಬಳ್ಳಿ ಜವಾರಿ ಶೈಲಿಯ `ಧೂಳ್ ಎಬ್ಬಿಸಾವ..’ ಹಾಡು ಬಿಡುಗಡೆ ಆಗಿದ್ದು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡಿಂಗ್ ನಲ್ಲಿದೆ…ಎಲ್ಲೆಲ್ಲೂ ಕೇಳಿ ಬರುತ್ತಿರೋ ಧೂಳ್ ಎಬ್ಬಿಸಾವ ಹಾಡು ಈಗ ಹೊಸ ಇತಿಹಾಸ ಬರೆದಿದೆ.

    ಧೂಳ್ ಎಬ್ಬಿಸಾವ ಸಾಂಗ್ ಆಲ್ ಇಂಡಿಯಾ ಲೆವೆಲ್ ನಲ್ಲಿ ಟ್ರೆಂಡ್ ಸೃಷ್ಟಿಸುವ ಮೂಲಕ ರೆಕಾರ್ಡ್ ಮಾಡಿದೆ.ಶಿವುಬೆರ್ಗಿ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿರುವ ಈ ಹಾಡನ್ನು ಅನಿರುದ್ಧ್ ಶಾಸ್ತ್ರೀ  ಮತ್ತು ಅನನ್ಯಾ ಭಟ್ ಅವರ ಸುಂದರ ಕಂಠದಲ್ಲಿ ಮೂಡಿಬಂದಿದೆ. `ಗೌರಿ’ ಚಿತ್ರದ ನಾಯಕ ಸಮರ್ಜಿತ್ ಲಂಕೇಶ್ ಮತ್ತು ಖ್ಯಾತ ನಟಿ ಸಂಜನಾ ಆನಂದ್ ಈ ಹಾಡಿಗೆ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ. ಭಜರಂಗಿ ಮೋಹನ್ ಈ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ…

    ಇನ್ಸ್ಟಾಗ್ರಾಂ ಮತ್ತು ಯೂಟ್ಯೂಬ್ ನಲ್ಲಿ ಟಾಪ್ 5 ಟ್ರೆಂಡಿಂಗ್ ನಲ್ಲಿರುವ ಈ ಹಾಡಿಗೆ ನಾಡಿನ ಲಕ್ಷಾಂತರ ಮಂದಿ ರೀಲ್ಸ್ ಮಾಡುತ್ತಿದ್ದಾರೆ. ಒಂದೊಂದು  ರೀಲ್ಸ್ ಲಕ್ಷಾಂತರ ವ್ಯೂಸ್ ಮತ್ತು ಲೈಕ್ಸ್ ಪಡೆಯುತ್ತಿವೆ. ಕರ್ನಾಟಕ ಸೇರಿದಂತೆ ಇಡೀ ದೇಶದ ಜನರು ಈ ಹಾಡಿಗೆ ಫಿದಾ ಆಗಿದ್ದಾರೆ…

    ಮತ್ತೊಂದು ವಿಶೇಷ ಅಂದ್ರೆ ಆಲ್ ಇಂಡಿಯಾ ಲೆವೆಲ್ ಟ್ರೆಂಡಿಂಗ್ ನಲ್ಲಿ ಸೌತ್ ಸಾಂಗ್ ಗಳು ಸದ್ದು ಮಾಡುತ್ತಿರುವ ಲಿಸ್ಟ್ ನಲ್ಲಿ ಮೊದಲನೇ ಸ್ಥಾನ ಕಲ್ಕಿ ಚಿತ್ರದ ಹಾಡು ಪಡೆದುಕೊಂಡಿದ್ರೆ ಎರಡನೇ ಸ್ಥಾನ ಪುಷ್ಪ2 ಚಿತ್ರದ ಹಾಡು ಪಡೆದುಕೊಂಡಿದೆ. ಇನ್ನು ಮೂರನೇ ಸ್ಥಾನದಲ್ಲಿ ಕನ್ನಡದ ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಸಿನಿಮಾದ ಧೂಳ್ ಎಬ್ಬಿಸುವ ಸಾಂಗ್ ಇದೆ ಅನ್ನೋದೆ ಖುಷಿಯ ವಿಚಾರ…ಒಟ್ನಲ್ಲಿ ಸದ್ಯ ಆಲ್ ಇಂಡಿಯಾ ಮ್ಯೂಸಿಕ್ ಟ್ರೆಂಡಿಂಗ್ ಲೀಸ್ಟ್ ನಲ್ಲಿ ಬರೀ ಸೌತ್ ಚಿತ್ರಗಳೇ ಇದೆ ಎನ್ನುವುದು ಸೌತ್ ಸಿನಿಮಾ ಅಭಿಮಾನಿಗಳಿಗೆ ಹೆಮ್ಮೆಯ ವಿಚಾರವಾಗಿದೆ.

     

    ಇನ್ನು ಕಮಲ್ ಹಾಸನ್ ಅವರ ಇಂಡಿಯನ್ 2 ಚಿತ್ರದ ಹಾಡನ್ನು ಹಿಂದಿಕ್ಕಿದೆ ಗೌರಿ ಸಿನಿಮಾದ ಹಾಡು..ಅದರ ಜೊತೆಗೆ ಉತ್ತರ ಕರ್ನಾಟಕದ ಮಂದಿಯಂತು ಈ ಹಾಡಿಗೆ ಕುಣಿದು ಕುಪ್ಪಳಿಸುತ್ತಿದ್ದಾರೆ. ದೇಶದೆಲ್ಲೆಡೆ `ಗೌರಿ’ ಚಿತ್ರದ ಈ ಹಾಡು ಸಖತ್ ಧೂಳ್ ಎಬ್ಬಿಸ್ತಿದೆ. ಈಗಾಗಲೇ ಸಖತ್ ಪ್ರಮೋಷನ್ ಮೂಲಕ ಸದ್ದು ಮಾಡ್ತಿರೋ ಗೌರಿ ಸಿನಿಮಾ ಆದಷ್ಟು ಬೇಗ ದೊಡ್ಡ ಸ್ಕ್ರೀನ್ ಮೇಲೆ ಬರಲಿದೆ

  • ಸಮರ್ಜಿತ್‌ ಲಂಕೇಶ್‌, ಸಾನ್ಯಾ ನಟನೆಯ ‘ಗೌರಿ’ ಸಿನಿಮಾ ರಿಲೀಸ್‌ ಆಗೋದು ಯಾವಾಗ?

    ಸಮರ್ಜಿತ್‌ ಲಂಕೇಶ್‌, ಸಾನ್ಯಾ ನಟನೆಯ ‘ಗೌರಿ’ ಸಿನಿಮಾ ರಿಲೀಸ್‌ ಆಗೋದು ಯಾವಾಗ?

    ಇಂದ್ರಜಿತ್ ಲಂಕೇಶ್ (Indrajit Lankesh) ನಿರ್ದೇಶಿಸಿರುವ ‘ಗೌರಿ’ (Gowri Film) ಸಿನಿಮಾ 100 ದಿನಗಳ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಆಗಲಿದೆ ಎಂದು ಗೌರಿ ಚಿತ್ರದ ನಟ ಸಮರ್ಜಿತ್ ಲಂಕೇಶ್ ತಿಳಿಸಿದ್ದಾರೆ. ಇದನ್ನೂ ಓದಿ:‘ಸೀತಾರಾಮ’ ನಟಿಗೆ ಕಿಡಿಗೇಡಿಗಳ ಕಾಟ- ವೈರಲ್ ಆಗ್ತಿದೆ ಡೀಪ್ ಫೇಕ್ ಫೋಟೋ

    ಮಂಡ್ಯದಲ್ಲಿ ಸಮರ್ಜಿತ್ ಮಾತನಾಡಿ, ನೈಜ ಘಟನೆ ಆಧಾರಿತ ಕಥೆ ಇರುವ ಈ ಚಿತ್ರವನ್ನು ನಮ್ಮ ತಂದೆ ಇಂದ್ರಜಿತ್ ಲಂಕೇಶ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಎಂಟು ಹಾಡುಗಳಿದ್ದು, ಈ ಹಾಡುಗಳಲ್ಲಿ ಕೆಲವು ಹಾಡುಗಳು ಸೂಪರ್ ಹಿಟ್ ಆಗಿದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ನಮ್ಮ ಚಟ ಚಟ್ಟ ಹತ್ತಿಸುವವರೆಗೂ ಇರಬಾರದು- ದರ್ಶನ್‌ಗೆ ಉಮಾಪತಿ ಟಾಂಗ್

    ತಮ್ಮ ಜೊತೆ ಸಾನ್ಯಾ ಅಯ್ಯರ್ (Saanya Iyer) ಅವರು ನಾಯಕಿಯಾಗಿ ಪರಿಚಯ ಆಗುತ್ತಿದ್ದಾರೆ. ಈ ಚಿತ್ರ ಬಹುತಾರಾಗಣವನ್ನು ಒಳಗೊಂಡಿದ್ದು ಬಿಗ್ ಬಜೆಟ್ ಚಿತ್ರವಾಗಿದೆ ಎಂದರು. ಚಿತ್ರದಲ್ಲಿ 80 ಕಲಾವಿದರು ನಟಿಸಿದ್ದು, ರಮಣೀಯ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಾಡುಗಳು ಉತ್ತಮವಾಗಿ ಮೂಡಿ ಬಂದಿದೆ. ಐದು ಮಂದಿ ಸಂಗೀತ ನಿರ್ದೇಶಕರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಶೀಘ್ರದಲ್ಲಿಯೇ ಸಿನಿಮಾ ಬಿಡುಗಡೆಯಾಗಲಿದ್ದು, ಜನತೆ ಈ ಚಿತ್ರವನ್ನು ವೀಕ್ಷಿಸುವ ಮೂಲಕ ಪ್ರೋತ್ಸಾಹಿಸುವಂತೆ ಮನವಿ ಮಾಡಿದ್ದಾರೆ ಇಂದ್ರಜಿತ್ ಪುತ್ರ. ಕಿರುತೆರೆಯ ಪುಟ್ಟ ಗೌರಿ ಜೊತೆ ಸಮರ್ಜಿತ್ ಅದೃಷ್ಟ ಪರೀಕ್ಷೆಗಿಳಿದಿದ್ದು, ಗೆದ್ದು ಬೀಗುತ್ತಾರಾ ಕಾಯಬೇಕಿದೆ.

  • ದರ್ಶನ್ ಗೆ ನಾನ್ಯಾಕೆ ಟಾಂಗ್ ಕೊಡಲಿ: ಇಂದ್ರಜಿತ್ ಲಂಕೇಶ್

    ದರ್ಶನ್ ಗೆ ನಾನ್ಯಾಕೆ ಟಾಂಗ್ ಕೊಡಲಿ: ಇಂದ್ರಜಿತ್ ಲಂಕೇಶ್

    ಯುವ ನಟ ಸಮರ್ಜಿತ್ ಲಂಕೇಶ್ (Samarjit Lankesh) ಹಾಗೂ ನಾಯಕಿ ಸಾನ್ಯ ಅಯ್ಯರ್ ಅಭಿನಯದ ಗೌರಿ ಸಿನಿಮಾ ರಾಜ್ಯದಾದ್ಯಂತ ಜುಲೈ ನಲ್ಲಿ ತೆರೆ ಕಾಣುತ್ತಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಇದೀಗ ಸಿನಿಮಾತಂಡ ಹುಬ್ಬಳ್ಳಿಯಲ್ಲಿ ಚಿತ್ರದ ಹಾಡನ್ನು ರಿಲೀಸ್ ಮಾಡಿ ಸಂಭ್ರಮಿಸಿದೆ. ಹಾಡನ್ನು ರಿಲೀಸ್ ಮಾಡಿ ಮಾತನಾಡಿದ ನಿರ್ದೇಶಕ ಇಂದ್ರಜಿತ್ (Indrajit Lankesh) , ‘ನನ್ನ ಪುತ್ರ ಸಮರ್ಜಿತ್ ಹಾಗೂ ಸಾನ್ಯ ಅಯ್ಯರ್ ಗೆ ಇದು ಚೊಚ್ಚಲ ಸಿನಿಮಾವಾಗಿದ್ದು, ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ.  ಬೆಂಗಳೂರು ಸೇರಿದಂತೆ ರಾಜ್ಯದ ವಿವಿದ ಕಡೆ ಚಿತ್ರೀಕರಣ ಮಾಡಲಾಗಿದೆ. ಅಕ್ಕ ಗೌರಿಯ ಸಿದ್ದಾಂತ ಇದರಲ್ಲಿಯಿಲ್ಲ. ಇದು ಅಕ್ಕ ಗೌರಿಯ ಕಥೆಯೂ ಅಲ್ಲ. ಅಕ್ಕನ ಮೇಲಿನ ಅಭಿಮಾನದಿಂದ ಸಿನಿಮಾಗೆ ಆಕೆಯ ಹೆಸರು ಇಟ್ಟಿದ್ದೇನೆ’ ಎಂದರು.

    ಇನ್ನೂ ಚಿತ್ರದಲ್ಲಿ ಲೂಸ್ ಮಾದ ಯೋಗಿ, ಪ್ರಿಯಾಂಕಾ ಉಪೇಂದ್ರ, ಅಕುಲ್ ಬಾಲಾಜಿ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ನಟ ಸಮರ್ಜಿತ ಮಾತನಾಡಿ,  ಸಿನಿಮಾವನ್ನು ಕಷ್ಟಪಟ್ಟು ಮಾಡಿದ್ದು, ಅದ್ಭುತವಾಗಿ ಮೂಡಿಬಂದಿದೆ. ಜುಲೈ ತಿಂಗಳಲ್ಲಿ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದ್ದು, ಎಲ್ಲರೂ ಸಿನಿಮಾ ಚಿತ್ರಮಂದಿರಕ್ಕೆ ಹೋಗಿ ನೋಡಬೇಕು ಎಂದರು‌. ಪತ್ರಿಕಾಗೋಷ್ಠಿಯಲ್ಲಿ ನಟಿ ಸಾನ್ಯ ಅಯ್ಯರ್ ಉಪಸ್ಥಿತರಿದ್ದರು.

    ಇದೇ ಸಮಯದಲ್ಲಿ ನಟ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಇಂದ್ರಜಿತ್, ಈ ಕೇಸ್ ಬಗ್ಗೆ ನಾನು ಈಗ ಏನು ಹೇಳಲ್ಲ, ತನಿಖೆ ನಾಡೆಯುತ್ತಿದೆ. ಶಿವಮೊಗ್ಗದಲ್ಲಿ ನಾನು ಏನು ಮಾತನಾಡಿಲ್ಲ. ನನ್ನ ತಂದೆ ಹುಟ್ಟಿದ ಸ್ಥಳ ಅದು ಎಂದರು. ದರ್ಶನ್ ಅವರಿಗೆ ನಾನು ಯಾಕೆ ಟಾಂಗ್ ಕೊಡಲಿ. ಬಸವಣ್ಣನ ವಚನ ಹೇಳಿದೆ ಅಷ್ಟೆ. ಅವರ ಜೊತೆ ನಾನು ಸಿನಿಮಾ ಮಾಡಿದ್ದೇನೆ. ಪತ್ರಕರ್ತನಾಗಿ ನಾನು ಕೆಲವು ವಿಚಾರಗಳ ಬಗ್ಗೆ ಧ್ವನಿ ಎತ್ತಿದ್ದೆ ಅಷ್ಟೆ. ಅದು ಬಿಟ್ಟರೆ ನಮ್ಮ ನಡುವೆ ಏನು ಇಲ್ಲ.  ಅನ್ಯಾಯ ಆದಾಗ ಧ್ವನಿ ಎತ್ತುವ ಬಗ್ಗೆ ನನ್ನ ತಂದೆ ಲಂಕೇಶ್ ಅವರಿಂದ ಕಲಿತ್ತಿದ್ದು . ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ವಿಜಯಲಕ್ಷ್ಮಿ ಹಾಗೂ ಅವರ ಮಗನಿಗೆ ದೇವರು ಶಕ್ತಿ ಕೊಡಲಿ ಎಂದರು.

    ಸಾಮಾಜಿಕ ಜಾಲತಾಣ ಅದ್ಭುತವಾದ ಮಾದ್ಯಮ. ಅದು  ತುಂಬ ಕೆಟ್ಟದಾಗಿ ಬಳಕೆಯಾಗುತ್ತಿದೆ ಎಂದು ಸರ್ಕಾರ ಹಾಗೂ ಸೈಬರ್ ಕ್ರೈಮ್ ವಿರುದ್ದ ಇಂದ್ರಜಿತ್ ಆಕ್ರೋಶ ಹೊರಹಾಕಿದರು. ಇದೇ ಸಮಯದಲ್ಲಿ ಸರಿಯಾದ ಕ್ರಮ ಕೈಗೊಳುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಇದರಿಂದ ಇಂದಿನ ಯುವ ಜನತೆ  ಹಾಳಾಗುತ್ತಿದೆ. ಇತ್ತೀಚಿಗಷ್ಟೇ ಎಸ್ ಎಸ್ ಎಲ್‌ಸಿಯಲ್ಲಿ ರ್ಯಾಂಕ್ ಬಂದ ಹುಡುಗಿಯನ್ನು ಆಡಿಕೊಳ್ಳಲಾಯಿತು, ಅವರ ರೂಪದ ಬಗ್ಗೆ ಕೆಟ್ಟ ಕಾಮೆಂಟ್ ಮಾಡಿದರು. ನಾವು ಎಂಥ ದುರಂತದ ಸ್ಥಿತಿಯಲ್ಲಿ ಇದ್ದೀವಿ ಎಂದು ಕಳವಳ ವ್ಯಕ್ತಪಡಿಸಿದರು. .

    ಸೈಬರ್ ಕ್ರೈಮ್ ಯಾವತ್ತು ಯಾರಿಗೂ ಉಪಯೋಗ ಆಗಿಲ್ಲ. ಸಾಮಾಜಿಕ ಜಾಲತಾಣದಿಂದನೇ ಅನೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ, ಮಂತ್ರಿಗಳ ಮನೆಯಲ್ಲಿ ಆದಾಗ ಗೊತ್ತಾಗುತ್ತೆ. ಅತೀ ಶೀಘ್ರದಲ್ಲೆ ಇದರ ಬಗ್ಗೆ ಆಕ್ಷನ್ ತೆಗೆದುಕೊಳ್ಳಬೇಕು. ನಾನು ಕೂಡ ಇದರ ವಿರುದ್ದ ಹೋರಾಟ ಮಾಡುತ್ತೇನೆ. ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ಹುಬ್ಬಳ್ಳಿಯಲ್ಲಿ ಹೇಳಿದರು.

  • ‘ಗೌರಿ’ ಟೀಸರ್ ರಿಲೀಸ್ ಮಾಡಿದ ಸ್ಟಾರ್ ಕ್ರಿಕೆಟರ್ ಶ್ರೇಯಾಂಕ

    ‘ಗೌರಿ’ ಟೀಸರ್ ರಿಲೀಸ್ ಮಾಡಿದ ಸ್ಟಾರ್ ಕ್ರಿಕೆಟರ್ ಶ್ರೇಯಾಂಕ

    ಸಾಂಸ್ಕೃತಿಕ ನಗರಿ ಮೈಸೂರಿನ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಭ್ರಮವೋ ಸಂಭ್ರಮ. ಅಲ್ಲಿ ನೆರೆದಿದ್ದ ಜನರಲ್ಲಿ ಕುತೂಹಲ ಮನೆ ಮಾಡಿತ್ತು. ಇದೇ ಮೊದಲ ಬಾರಿಗೆ `ಗೌರಿ’ (Gowri) ಚಿತ್ರ ತಂಡ ಕಾಲೇಜಿನ ಕ್ಲಾಸ್ ರೂಂನಲ್ಲಿ ಚಿತ್ರದ ಮ್ಯೂಸಿಕಲ್ ಟೀಸರ್ ರಿಲೀಸ್ ಮಾಡಿದ್ದು ವಿಶೇಷವಾಗಿತ್ತು. ಭಾರತದ ಸ್ಟಾರ್ ಕ್ರಿಕೆಟರ್; ಆರ್‍ಸಿಬಿಯ ಆಲ್‍ರೌಂಡರ್; ಕರ್ನಾಟಕದ ಹೆಮ್ಮೆಯ ಆಟಗಾರ್ತಿ ಶ್ರೇಯಾಂಕ ಪಾಟೀಲ್ (Shreyanka Patil) `ಐ ಲವ್ ಯೂ ಸಮಂತ’ ಮ್ಯೂಸಿಕಲ್ ಟೀಸರನ್ನು ಬಿಡುಗಡೆಗೊಳಿಸಿದರು. ತೆರೆ ಮೇಲೆ ಟೀಸರ್ ಮೂಡುತ್ತಿದ್ದಂತೆ ನೆರೆದಿದ್ದ ನೂರಾರು ವಿದ್ಯಾರ್ಥಿಗಳು ಕುಣ ದು ಕುಪ್ಪಳಿಸಿದರು. ಕ್ಲಾಸ್ ರೂಂನಲ್ಲಿದ್ದ ಬೆಂಚ್ ಮೇಲೆ ಹತ್ತಿ ಶಿಳ್ಳೆ ಹೊಡೆಯುತ್ತಾ; `ಐ ಲವ್ ಯೂ ಸಮಂತಾ’ ಹಾಡಿಗೆ ಡ್ಯಾನ್ಸ್ ಮಾಡಿ; ಸಂಭ್ರಮಿಸಿದರು.

    ಇದೇ ಸಂದರ್ಭದಲ್ಲಿ `ಗೌರಿ’ ಚಿತ್ರದ ನಾಯಕ ಸಮರ್ಜಿತ್ ಲಂಕೇಶ್ ಜೊತೆ `ಟೈಂ ಬರುತ್ತೆ.. ಟೈಂ ಬರುತ್ತೆ..’ ಹಾಡಿಗೆ ಹೆಮ್ಮೆಯ ಕನ್ನಡತಿ ಶ್ರೇಯಾಂಕ ಪಾಟೀಲ್ ಹುಕ್ ಸ್ಟೆಪ್ ಹಾಕುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ಶ್ರೇಯಾಂಕ- ಸಮರ್ ಡ್ಯಾನ್ಸ್‍ಗೆ ನೆರೆದಿದ್ದವರು ಫಿದಾ ಆಗಿ ಹೋದರು. ಒಮ್ಮೆಲೆ ನೂರಾರು ವಿದ್ಯಾರ್ಥಿಗಳು ಶ್ರೇಯಾಂಕ ಪಾಟೀಲ್ ಹಾಗೂ ಸಮರ್ಜಿತ್ ಲಂಕೇಶರನ್ನು ಮುತ್ತಿ ಕೊಂಡು ಅಭಿನಂದನೆಗಳ ಮಹಾಪೂರ ಹರಿಸಿದರು. ಆಟೋಗ್ರಾಫ್, ಸೆಲ್ಫಿಗೆ ಮುಗಿಬಿದ್ದರು. ಕ್ಲಾಸ್ ರೂಂನಲ್ಲಿ ಒಂದು ರೀತಿ ಹಂಗಾಮವೇ ಸೃಷ್ಟಿಯಾಯಿತು.

    ಮ್ಯೂಸಿಕಲ್ ಟೀಸರ್ ಬಿಡುಗಡೆಯ ನಂತರ ಕ್ಲಾಸ್ ರೂಂನಲ್ಲಿಯೇ ಶ್ರೇಯಾಂಕ ಕ್ರಿಕೆಟ್ ಆಡಿದ್ದು ನೆರೆದಿದ್ದವರನ್ನು ರೋಮಾಂಚನಗೊಳಿಸಿತು. ಶ್ರೇಯಾಂಕ್ ವಿದ್ಯಾರ್ಥಿಗಳ ಬೌಲಿಂಗ್‍ಗೆ ಬ್ಯಾಟ್ ಬೀಸಿದರು. ಬಾಲ್ ಸಿಕ್ಕ ವಿದ್ಯಾರ್ಥಿಗಳಿಗೆ ಶ್ರೇಯಾಂಕರ ಆಟೋಗ್ರಾಫ್‍ನ ಬಾಲ್ ಅನ್ನು ಗಿಫ್ಟ್ ನೀಡಲಾಯಿತು. ಜೊತೆಗೆ `ಗೌರಿ’ ಚಿತ್ರದ ವಿಶೇಷ ಚಾಕ್‍ಲೇಟ್‍ಗಳನ್ನು ಸಹ ವಿತರಿಸಲಾಯಿತು. `ಗೌರಿ’ ಚಿತ್ರ ತಂಡಕ್ಕೆ ಎಟಿಎಂಇ ಕಾಲೇಜಿನ ವಿದ್ಯಾರ್ಥಿಗಳಿಂದ ಅಭೂತಪೂರ್ವ ಸ್ಪಂದನೆ; ಸ್ವಾಗತ ಕೋರಲಾಯಿತು. `ಗೌರಿ’ ಚಿತ್ರದ ನಿರ್ದೇಶಕ ಇಂದ್ರಜಿತ್ ಲಂಕೇಶ್, ನಾಯಕ ನಟ ಸಮರ್ಜಿತ್ ಲಂಕೇಶ್, ಖ್ಯಾತ ಕ್ರಿಕೆಟರ್ ಶ್ರೇಯಾಂಕ ಪಾಟೀಲ್.. ಇವರುಗಳು ಎಂಟ್ರಿಯಾಗುತ್ತಲೇ ವಿದ್ಯಾರ್ಥಿಗಳ ದಂಡೇ ಹರಿದುಬಂದು ಮುತ್ತಿಕೊಂಡಿತು. ಅವರ ಅಭಿಮಾನಕ್ಕೆ, ಪ್ರೀತಿಗೆ ಚಿತ್ರ ತಂಡ ಮೂಕ ವಿಸ್ಮಿತಗೊಂಡಿತು. `ಟೈಂ ಬರುತ್ತೆ..’ ಹಾಡಿನ ಮೂಲಕ ಸೌಂಡ್ ಮಾಡಿದ್ದ `ಗೌರಿ’ ಚಿತ್ರತಂಡ ಇದೀಗ `ಐ ಲವ್ ಯೂ ಸಮಂತಾ..’ ಹಾಡಿನ ಮೂಲಕ ರೋಮ್ಯಾಟಿಕ್ ಫೀಲ್ ನೀಡಿದೆ.

     

    ಮ್ಯಾಜಿಕ್ ಮಾಡಿ `ಐ ಲವ್ ಯೂ ಸಮಂತಾ’ ಐ ಲವ್ ಯೂ ಸಮಂತಾ.. ಹಾಡು ಸಖತ್ ಮೋಡಿ ಮಾಡಿದೆ. ಕವಿರಾಜ್ ಸಾಹಿತ್ಯದ, ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನದ ಈ ಹಾಡು ಇದೀಗ ಟ್ರೆಂಡ್ ಸೃಷ್ಟಿ ಮಾಡಿದೆ. ಯುವಕ-ಯುವತಿಯರಿಗೆ ಈ ಹಾಡು ಹಾಟ್ ಫೇವರಿಟ್ ಆಗಿದೆ. ಕಾರ್ಯಕ್ರಮದಲ್ಲಿ ಬಿಗ್‍ಬಾಸ್ ಖ್ಯಾತಿಯ ಶೈನ್ ಶೆಟ್ಟಿ, ಮಿಸ್ ಟೀನ್ ಯುನಿವರ್ಸ್ ಸ್ವೀಜಲ್ ಮುಂತಾದವರು ಹಾಜರಿದ್ದರು.

  • ಸಮರ್ಜಿತ್ ಲಂಕೇಶ್ ಅಭಿನಯದ ಚೊಚ್ಚಲ ಚಿತ್ರದ ಸಾಂಗ್ ರಿಲೀಸ್

    ಸಮರ್ಜಿತ್ ಲಂಕೇಶ್ ಅಭಿನಯದ ಚೊಚ್ಚಲ ಚಿತ್ರದ ಸಾಂಗ್ ರಿಲೀಸ್

    ತ್ರಕರ್ತ, ನಿರ್ದೇಶಕ ಹಾಗೂ ನಿರ್ಮಾಪಕ ಇಂದ್ರಜಿತ್ ಲಂಕೇಶ್ (Indrajit Lankesh) ಪುತ್ರ ಸಮರ್ಜಿತ್ (Samarjit) ಲಂಕೇಶ್ “ಗೌರಿ” (Gowri) ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇಂದ್ರಜಿತ್ ಲಂಕೇಶ್ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತೀಚಿಗೆ ಬಸವನಗುಡಿಯ ಬಿ.ಎಂ.ಎಸ್ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ, ಸಾವಿರಾರು ವಿದ್ಯಾರ್ಥಿಗಳ ಸಮ್ಮಖದಲ್ಲಿ “ಗೌರಿ” ಚಿತ್ರದ ಮೊದಲ ಹಾಡು ಲೋಕಾರ್ಪಣೆಯಾಯಿತು.

    ಇಂದ್ರಜಿತ್ ಲಂಕೇಶ್, ಸಮರ್ಜಿತ್ ಲಂಕೇಶ್, ಸಾನ್ಯಾ ಅಯ್ಯರ್, ಅವಿನಾಶ್, ವಿಷ್ಣು ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ವಿಜಯ್ ಈಶ್ವರ್ ಬರೆದಿರುವ “ಟೈಮ್ ಬರತ್ತೆ” ಎಂಬ ಹಾಡು ಈ ಚಿತ್ರದ ಚೊಚ್ಚಲಗೀತೆಯಾಗಿ ಬಿಡುಗಡೆಯಾಗಿದ್ದು, ಖ್ಯಾತ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಈ ಹಾಡಿಗೆ ಸಂಗೀತ ನೀಡಿ, ಹಾಡಿದ್ದಾರೆ. ಯವಜನತೆಗೆ ಹತ್ತಿರವಾಗಿರುವ ಈ ಹಾಡಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಹಾಡು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

    ಹಾಡು ಬಿಡುಗಡೆ ನಂತರ ಮಾತನಾಡಿದ ನಿರ್ಮಾಪಕ, ನಿರ್ದೇಶಕ ಇಂದ್ರಜಿತ್ ಲಂಕೇಶ್, ಇಂದು “ಗೌರಿ” ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದೇವೆ. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದೆ. ಐದು ಜನ ಸಂಗೀತ ನಿರ್ದೇಶಕರು ಈ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಭಾರತದ ಹನ್ನೆರಡಕ್ಕೂ ಅಧಿಕ ಹೆಸರಾಂತ ಗಾಯಕರು “ಗೌರಿ” ಚಿತ್ರದ ಹಾಡುಗಳನ್ನು ಹಾಡಿದ್ದಾರೆ.

    ಚಂದನ್ ಶೆಟ್ಟಿ ಸಂಗೀತ ನೀಡಿ ಹಾಡಿರುವ ಮೊದಲ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ‌. ಇದರ ಜೊತೆಗೆ ಈ ಹಾಡಿಗೆ ನಾಯಕ ಸಮರ್ಜಿತ್, ನಾಯಕಿ ಸಾನ್ಯಾ ಅಯ್ಯರ್ ಹಾಗೂ ನಟಿ ಸಂಯುಕ್ತ ಹೆಗಡೆ ರೀಲ್ಸ್ ಕೂಡ ಮಾಡಿದ್ದಾರೆ‌. ಈ ಹಾಡಿನ ಲಿರಿಕಲ್ ವಿಡಿಯೋ ಹಾಗೂ ರೀಲ್ಸ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.  ಉಳಿದ ಹಾಡುಗಳು ಅನಾವರಣವಾಗಲಿದೆ. ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ‌‌ ಎಂದರು.

    “ಗೌರಿ” ಚಿತ್ರದ ಮೊದಲ ಹಾಡಿಗೆ ಸಿಗುತ್ತಿರುವ ಮೆಚ್ಚುಗೆಗೆ ಮನ ತುಂಬಿ ಬಂದಿದೆ ನಿಮ್ಮೆಲ್ಲರ ಹಾರೈಕೆ ನಮ್ಮ ಚಿತ್ರಕ್ಕಿರಲಿ ಎಂದರು ನಾಯಕ ಸಮರ್ಜಿತ್ ಲಂಕೇಶ್ ಹಾಗೂ ನಾಯಕಿ ಸಾನ್ಯಾ ಅಯ್ಯರ್.

  • ‘ಗೌರಿ’ ಸಿನಿಮಾದ ಪ್ರೀ ಟೀಸರ್ ರಿಲೀಸ್ ಮಾಡಿದ ಅನಿಲ್ ಕುಂಬ್ಳೆ

    ‘ಗೌರಿ’ ಸಿನಿಮಾದ ಪ್ರೀ ಟೀಸರ್ ರಿಲೀಸ್ ಮಾಡಿದ ಅನಿಲ್ ಕುಂಬ್ಳೆ

    ಲಾಫಿಂಗ್ ಬುದ್ದ ಫಿಲಂಸ್ ಲಾಂಛನದಲ್ಲಿ ಇಂದ್ರಜಿತ್ ಲಂಕೇಶ್ ನಿರ್ಮಿಸಿ, ನಿರ್ದೇಶಿಸಿರುವ ಹಾಗೂ ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸಿರುವ ಮೊದಲ ಚಿತ್ರ ‘ಗೌರಿ’. ಇತ್ತೀಚಿಗೆ ಈ ಚಿತ್ರದ ಪ್ರೀ ಟೀಸರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು.  ಸ್ಪಿನ್ ಮಾಂತ್ರಿಕ ಎಂದೆ ಖ್ಯಾತರಾಗಿರುವ ಅನಿಲ್ ಕುಂಬ್ಳೆ ಹಾಗೂ ಹೆಸರಾಂತ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಗೌರಿ ಚಿತ್ರದ ಪ್ರೀ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು. ನಿರ್ಮಾಪಕ ರಮೇಶ್ ರೆಡ್ಡಿ, ಪತ್ರಕರ್ತ ಸದಾಶಿವ ಶೆಣೈ, ಕವಿತಾ ಲಂಕೇಶ್ ಸೇರಿದಂತೆ ಸಾಕಷ್ಟು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

    ನಾನು ಹಾಗೂ ಅಜಿತ್(ಇಂದ್ರಜಿತ್) ಹಲವು ವರ್ಷಗಳ ಗೆಳೆಯರು. ಅವರ ಮಗ ಸಮರ್ಜಿತ್ ನನ್ನ ಜೊತೆ ಜಾಹೀರಾತೊಂದರಲ್ಲಿ ಅಭಿನಯಿಸಿದ್ದರು. ಈಗ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಾನ್ಯಾ ಅಯ್ಯರ್ ನಾಯಕಿಯಾಗಿ ನಟಿಸಿದ್ದಾರೆ. ಇಬ್ಬರು ಯುವ ಪ್ರತಿಭೆಗಳ ಭವಿಷ್ಯ ಉಜ್ವಲವಾಗಲಿ ಎಂದು ಅನಿಲ್ ಕುಂಬ್ಳೆ ಹಾರೈಸಿದರು.

    ಅನಿಲ್ ಕುಂಬ್ಳೆ ಅವರ ಜೊತೆಗೆ ನನ್ನದು ಮೂವತ್ತು ವರ್ಷಕ್ಕೂ ಮೀರಿದ ಗೆಳೆತನ. ಹಾಗೆ ಪುನೀತ್ ರಾಜಕುಮಾರ್ ಸಹ ಬಹಳ ಆತ್ಮೀಯರು. ಇಂದು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಅನಿಲ್ ಕುಂಬ್ಳೆ ಅವರು ನಮ್ಮ ಗೌರಿ ಚಿತ್ರದ ಪ್ರೀ ಟೀಸರ್ ಬಿಡುಗಡೆ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ. ನನ್ನ ಮಗ ಸಮರ್ಜಿತ್ ನಾಯಕನಾಗಲು ಬೇಕಾದ ಎಲ್ಲಾ ತಯಾರಿ ಮಾಡಿಕೊಂಡು ಈ ಚಿತ್ರದಲ್ಲಿ ಅಭಿನಯಿಸಿದ್ದಾನೆ.‌ ಸಾನ್ಯಾ ಅವರ ಅಭಿನಯ ಕೂಡ ಉತ್ತಮವಾಗಿದೆ. ಗೌರಿ ಚಿತ್ರ ಯಾವುದಕ್ಕೂ ಕಡಿಮೆ ಇಲ್ಲದೆ ಅದ್ದೂರಿಯಾಗಿ ಮೂಡಿಬಂದಿದೆ. ಚಿತ್ರಕ್ಕೆ ಎ.ಜೆ.ಶೆಟ್ಟಿ ಹಾಗೂ ಕೆ.ಕೆ ಇಬ್ಬರು ಛಾಯಾಗ್ರಾಹಕರು, ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಬೋರ್ಗಿ ಹಾಗೂ ಅನಿರುದ್ದ್ ಶಾಸ್ತ್ರಿ ನಾಲ್ವರು ಸಂಗೀತ ನಿರ್ದೇಶಕರು. ಮ್ಯಾಥ್ಯೂಸ್ ಮನು ರೀರೆಕಾರ್ಡಿಂಗ್ ಮಾಡಿದ್ದಾರೆ. ವಿ.ನಾಗೇಂದ್ರಪ್ರಸಾದ್, ಕವಿರಾಜ್, ಕೆ.ಕಲ್ಯಾಣ್, ವರದರಾಜ್ ಈ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಕೈಲಾಶ್ ಖೇರ್ ,ಚಂದನ್ ಶೆಟ್ಟಿ, ಅನಿರುದ್ಧ ಶಾಸ್ತ್ರಿ, ಜಾವೇದ್ ಅಲಿ, ಅನನ್ಯ ಭಟ್, ನಿಹಾಲ್ ತೌರೋ, ಅದಿತಿ ಸಾಗರ್, ಬಾಲಸುಬ್ರಹ್ಮಣ್ಯಂ ಹಾಗೂ ಪ್ರಜ್ಞಾ ಮರಾಠೆ, ಸಮರ್ಜಿತ್ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.  ಗುಬ್ಬಿ, ಮಾಸ್ತಿ, ರಾಜಶೇಖರ್ ಹಾಗೂ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ರವಿವರ್ಮ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ.  ಹೀಗೆ ನುರಿತ ತಂತ್ರಜ್ಞರ ಕಾರ್ಯವೈಖರಿ ಹಾಗು ಕಲಾವಿದರ ಉತ್ತಮ ಅಭಿನಯದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದರು.

    ನಮ್ಮ ಚಿತ್ರದ ಪ್ರೀ ಟೀಸರ್ ಬಿಡುಗಡೆ ಮಾಡಿಕೊಟ್ಟ ಅನಿಲ್ ಕುಂಬ್ಳೆ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು.‌ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಸಮರ್ಜಿತ್ ಲಂಕೇಶ್. ಅವಕಾಶ ಕೊಟ್ಟ ನಿರ್ಮಾಪಕ,  ನಿರ್ದೇಶಕರಿಗೆ ಹಾಗೂ ಆಗಮಿಸಿದ್ದ ಗಣ್ಯರಿಗೆ ನಾಯಕಿ ಸಾನ್ಯಾ ಅಯ್ಯರ್ ವಿಶೇಷವಾಗಿ ಧನ್ಯವಾದ ಹೇಳಿದರು.

    ಸಂಭಾಷಣೆ ಬರೆದಿರುವ ಮಾಸ್ತಿ, ರಾಜಶೇಖರ್, ಸಂಗೀತ ನಿರ್ದೇಶನ ಮಾಡಿರುವ ಅನಿರುದ್ದ್ ಶಾಸ್ತ್ರಿ, ಹಿನ್ನೆಲೆ ಸಂಗೀತ ನೀಡಿರುವ ಮ್ಯಾಥ್ಯೂಸ್ ಮನು, ನಟ ನೀನಾಸಂ ಅಶ್ವಥ್ ಹಾಗೂ ಗಾಯಕರಾದ ಅದಿತಿ ಸಾಗರ್, ಬಾಲಸುಬ್ರಹ್ಮಣ್ಯಂ ಹಾಗೂ ಪ್ರಜ್ಞಾ ಮರಾಠೆ ಮುಂತಾದವರು ಗೌರಿ ಚಿತ್ರದ ಕುರಿತು ಮಾತನಾಡಿದರು.

  • ಭಗೀರಥ ಯತ್ನದಿಂದ ಉಕ್ಕಿದ ಗಂಗೆ- ಪಬ್ಲಿಕ್ ಟಿವಿಗೆ ಗೌರಿ ಧನ್ಯವಾದ

    ಭಗೀರಥ ಯತ್ನದಿಂದ ಉಕ್ಕಿದ ಗಂಗೆ- ಪಬ್ಲಿಕ್ ಟಿವಿಗೆ ಗೌರಿ ಧನ್ಯವಾದ

    ಕಾರವಾರ: ಶಿರಸಿಯ ಗಣೇಶ ನಗರದ ಅಂಗನವಾಡಿ ಮಕ್ಕಳಿಗಾಗಿ ಏಕಾಂಗಿಯಾಗಿ ಬಾವಿ ತೋಡುತ್ತಿದ್ದ ಗೌರಿಯವರು ಕೊನೆಗೂ ಈ ಬಿರು ಬೇಸಿಗೆಯಲ್ಲೂ ಬಾವಿಯಲ್ಲಿ ಗಂಗೆ ತರಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಶಿರಸಿಯ ಗಣೇಶ ನಗರದ ಗೌರಿಯವರು (Gauri) ಜ.30 ರಂದು ಅಂಗನಾಡಿ ಮಕ್ಕಳ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಏಕಾಂಗಿಯಾಗಿ ಬಾವಿ ತೋಡುತ್ತಿದ್ದು, ಅವರು ಬಾವಿ ತೋಡದಂತೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿ ಬಾವಿಗೆ ಹಲಗೆ ಮುಚ್ಚಿತ್ತು. ನಂತರ ಶಿರಸಿ ತಹಶೀಲ್ದಾರರ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದ ಗೌರಿಗೆ ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಸಂಸದ ಅನಂತಕುಮಾರ್ ಹೆಗಡೆ ಸ್ಥಳಕ್ಕೆ ಆಗಮಿಸಿ ಬಾವಿ ತೋಡಲು ನೆರವಾಗಿದ್ದಲ್ಲದೇ ಇದರ ಖರ್ಚನ್ನು ಸಹ ವಹಿಸಿಕೊಂಡು ಗೌರಿಗೆ ಸಹಾಯ ಆಗಲು ಇಬ್ಬರು ಕೆಲಸಗಾರರನ್ನು ನಿಯೋಜನೆ ಮಾಡಿದ್ದರು.

    ಇದರ ಬೆನ್ನಲ್ಲೇ ಬುಧವಾರ ಬಾವಿಯಲ್ಲಿ ನೀರು ಬಂದಿದ್ದು, ಗಂಗೆಗೆ ಪೂಜೆ ಸಲ್ಲಿಸಿ ಗೌರಿ ಹಾಗೂ ಸ್ಥಳೀಯ ಜನರು ಖುಷಿಪಟ್ಟರು. ಪಬ್ಲಿಕ್ ಟಿವಿ ಸಹಕಾರವನ್ನು ಸ್ಮರಿಸದ ಗೌರಿ ಧನ್ಯವಾದ ಸಲ್ಲಿಸಿದ್ದಲ್ಲದೇ, ಶಿರಸಿಯ ಮಾರಿ ಜಾತ್ರೆಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಈ ಬಾವಿಯ ಮೂಲಕ ಮಾಡುತ್ತೇನೆ. 45 ಅಡಿ ಆಳಕ್ಕೆ ನೀರು ಬಂದಿದ್ದು ಖುಷಿ ತಂದಿದೆ. ನಾನು ಬಾವಿ ತೋಡಿ ನೀರು ಬರಿಸಿಯಾಯ್ತು, ಉಳಿದದ್ದು ಆಡಳಿತಕ್ಕೆ ಬಿಟ್ಟಿದ್ದು ಎಂದರು.ಜೊತೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಇದನ್ನೂ ಓದಿ: ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ – ಉದಯನಿಧಿ ಸ್ಟಾಲಿನ್‌ಗೆ ಹೈಕೋರ್ಟ್‌ ರಿಲೀಫ್‌