Tag: ಗೌರವ

  • ರಾಷ್ಟ್ರಕವಿ ಕುವೆಂಪು ಜನ್ಮದಿನಕ್ಕೆ ಗೂಗಲ್‍ನಿಂದ ವಿಶೇಷ ಗೌರವ

    ರಾಷ್ಟ್ರಕವಿ ಕುವೆಂಪು ಜನ್ಮದಿನಕ್ಕೆ ಗೂಗಲ್‍ನಿಂದ ವಿಶೇಷ ಗೌರವ

    ಬೆಂಗಳೂರು: ಇಂದು ರಾಷ್ಟ್ರಕವಿ, ವಿಶ್ವಮಾನವ ಸಂದೇಶ ಸಾರಿದ ನಮ್ಮ ಹೆಮ್ಮೆಯ ಕುವೆಂಪು ಅವರ 113ನೇ ಜನ್ಮದಿನ. ಈ ವಿಶಿಷ್ಟ ದಿನದಂದು ಗೂಗಲ್ ಡೂಡಲ್ ಮೂಲಕ ಕುವೆಂಪು ಅವರಿಗೆ ವಿಶೇಷ ಗೌರವ ಸಲ್ಲಿಸಿದೆ.

    ಕವಿಶೈಲದ ಪ್ರಕೃತಿಯ ಮಡಲಲ್ಲಿ ಬಂಡೆಯ ಮೇಲೆ ಕುಳಿತು ಕುವೆಂಪು ಸಾಹಿತ್ಯ ಸೃಷ್ಟಿಸುತ್ತಿರುವ ಚಿತ್ರವನ್ನು ಡೂಡಲ್‍ಗೆ ಬಳಸಿಕೊಳ್ಳಲಾಗಿದೆ. ಮತ್ತೊಂದು ವಿಶಿಷ್ಟವೇನೆಂದರೆ ಕುವೆಂಪು ಚಿತ್ರದ ಹಿಂಭಾಗದಲ್ಲಿ ಗೂಗಲ್ ಎಂದು ಕನ್ನಡದಲ್ಲಿ ಬರೆಯಲಾಗಿದೆ. ಅಷ್ಟೇ ಅಲ್ಲದೆ ಕುವೆಂಪು ಅವರಿಗೆ ಇಷ್ಟವಾದ ಬಂಡೆ, ಕಾಜಾಣ ಹಕ್ಕಿಯನ್ನು ಚಿತ್ರಿಸಿದ್ದು, ಇದ್ದಕ್ಕೆ ಕನ್ನಡಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಕುವೆಂಪು ಅವರು 1904ರ ಡಿಸೆಂಬರ್ 29ರಂದು ಜನಿಸಿದ್ದು, ರಾಮಾಯಣ ದರ್ಶನಂ ಮೂಲಕ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿದ್ದರು. ನವೆಂಬರ್ 11, 1994ರಲ್ಲಿ ಕುವೆಂಪು ವಿಧಿವಶರಾದ್ರು.

  • 60 ಪ್ರಯಾಣಿಕರ ಪ್ರಾಣ ಉಳಿಸಿದ್ದ ಚಾಲಕನಿಗೆ ಸಿಕ್ತು ಚಿನ್ನದ ಪದಕ!

    60 ಪ್ರಯಾಣಿಕರ ಪ್ರಾಣ ಉಳಿಸಿದ್ದ ಚಾಲಕನಿಗೆ ಸಿಕ್ತು ಚಿನ್ನದ ಪದಕ!

    ಚಾಮರಾಜನಗರ: ಚಾಲಕನ ಸಮಯ ಪ್ರಜ್ಞೆಯಿಂದಾಗಿ ಪ್ರಪಾತಕ್ಕೆ ಬೀಳಬೇಕಾಗಿದ್ದ ಬಸ್ ಮತ್ತು ಅದರಲ್ಲಿದ್ದ 60 ಮಂದಿ ಪ್ರಯಾಣಿಕರ ಪ್ರಾಣ ಉಳಿಸಿದ್ದ ಚಾಲಕನಿಗೆ ಚಿನ್ನದ ಪದಕ ಸಿಕ್ಕಿದೆ.

    ಅಕ್ಟೋಬರ್ 8 ರಂದು ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಹಾದಿಯಲ್ಲಿ ಈ ಘಟನೆ ನಡೆದಿತ್ತು. ಅಂದು ಚಾಲಕ ಚಿನ್ನಸ್ವಾಮಿ ಅವರ ಸಮಯ ಪ್ರಜ್ಞೆಯಿಂದ 60 ಪ್ರಯಾಣಿಕರ ಪ್ರಾಣ ಉಳಿಸಿದ್ದರು. ಆದ್ದರಿಂದ ಮಂಗಳವಾರ ಅವರಿಗೆ ಕೆಎಸ್‍ಆರ್‍ಟಿಸಿ ಇಲಾಖೆ ಚಿನ್ನದ ಪದಕವನ್ನು ನೀಡಿದೆ.

    ಇಲಾಖೆಯ ನಿಯಮದ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿ 15 ವರ್ಷ ಹಾಗೂ ನಗರ ಪ್ರದೇಶದಲ್ಲಿ 5 ವರ್ಷ ಯಾವುದೇ ಅಪಾಯ ಸಂಭವಿಸಿದೆ ಬಸ್ ಚಲಾಯಿಸಿದ್ದರೆ ಮಾತ್ರ ಅಂತಹವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಆದರೆ ಚಿನ್ನಸ್ವಾಮಿ ಕೇವಲ 5 ವರ್ಷ ಚಾಲಕರಾಗಿ ಕಾರ್ಯನಿರ್ವಹಿಸಿದ್ದರು. ಆದರೆ 60 ಜನರ ಪ್ರಾಣ ಉಳಿಸಿದ್ದರಿಂದ ಅವರ ಸಾಧನೆಯನ್ನು ಗುರುತಿಸಿ ಈಗ ಚಿನ್ನದ ಪದಕವನ್ನು ಕೊಟ್ಟು ಗೌರವಿಸಲಾಗಿದೆ.

    ನಾನು ಅಂದು ಬ್ರೇಕ್ ಫೇಲ್ ಆಗಿದ್ದಾಗ ಪ್ರಯಾಣಿಕರು ಭಯ ಪಡುತ್ತಾರೆ ಎಂದು ಹೇಳಿರಲಿಲ್ಲ. ನಾನೇ ಬಸ್ ನಿಲ್ಲಿಸಲು ನಿರ್ಧಾರ ಮಾಡಿ ನಿಧಾನವಾಗಿ ಬಸ್ ಚಲಾಯಿಸಿ ಹ್ಯಾಂಡ್‍ಬ್ರೇಕ್ ಹಾಕಿ ಕಬ್ಬಿಣದ ತಡೆಗೋಡೆಗೆ ತಂದು ನಿಲ್ಲಿಸಿದೆ. ಬಳಿಕ ಎಲ್ಲರನ್ನು ನಿಧಾನವಾಗಿ ಬಸ್‍ನಿಂದ ಕೆಳಗಿಳಿಸಿದೆ ಎಂದು ಚಾಲಕ ಚಿನ್ನಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

    ಇಲಾಖೆ ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ನನಗೆ ಚಿನ್ನದ ಪದಕ ನೀಡಿದೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ. ನನ್ನ ಕೆಲಸವನ್ನು ಮುಂದುವರಿಸಲು ನನಗೆ ಪ್ರೋತ್ಸಾಹ ನೀಡಿದ್ದಾರೆ ಎಂದು ಅವರು ಹೇಳಿದರು.

    ನಡೆದಿದ್ದೇನು?
    ಅಕ್ಟೋಬರ್ 8 ರಂದು ಗುಂಡ್ಲುಪೇಟೆಯಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಜಾತ್ರೆಗಾಗಿ ಕೆಎಸ್‍ಆರ್ ಟಿಸಿ ಬಸ್ ತೆರಳುತಿತ್ತು. ಆದರೆ ಬೆಟ್ಟದಿಂದ ವಾಪಸ್ ಬರುವಾಗ ಬಸ್‍ನ ಬ್ರೇಕ್ ಫೇಲ್ ಆಗಿದ್ದರಿಂದ ಪ್ರಪಾತಕ್ಕೆ ಬೀಳುವ ಹಂತದಲ್ಲಿತ್ತು. ಆದರೆ ಈ ಸಂದರ್ಭದಲ್ಲಿ ಬಸ್ ಚಾಲಕ ಚಿನ್ನಸ್ವಾಮಿ ಸಮಯ ಪ್ರಜ್ಞೆಯಿಂದ ಬಸ್ಸನ್ನು ಯಾವುದೇ ರೀತಿಯಲ್ಲಿ ಅಪಾಯವಿಲ್ಲದಂತೆ ಕಬ್ಬಿಣದ ತಡೆಗೋಡೆಗೆ ತಂದು ನಿಲ್ಲಿಸಿ ಎಲ್ಲಾ ಪ್ರಯಾಣಿಕರ ಪ್ರಾಣ ಉಳಿಸಿದ್ದರು.

    ಚಿನ್ನಸ್ವಾಮಿ ಅವರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಕೆಟ್ಟ ರಸ್ತೆಯಿಂದಾಗಿ ಈ ಅಪಘಾತ ಸಂಭವಿಸಿದೆ. ದೊಡ್ಡ ಬಸ್ ಗಳು ಈ ರಸ್ತೆಯಲ್ಲಿ ಸಂಚರಿಸುವುದು ಕಷ್ಟ ಹೀಗಾಗಿ ಮುಂದೆ ಗುಂಡ್ಲುಪೇಟೆ ಮತ್ತು ಹಿಮವದ್ ಗೋಪಾಲಸ್ವಾಮಿ ಬೆಟ್ಟದ ನಡುವೆ ಕೇವಲ ಮಿನಿ ಬಸ್ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗುವುದು ಎಂದು ಕೆಎಸ್‍ಆರ್ ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಸರ್ಕಾರಿ ಕಚೇರಿಗಳ ಮುಂದೆ ಹೋಗಿ ಇದ್ದಕ್ಕಿದ್ದಂತೆ ರಾಷ್ಟ್ರಗೀತೆ ಹಾಡಿದ್ರು!

    ಸರ್ಕಾರಿ ಕಚೇರಿಗಳ ಮುಂದೆ ಹೋಗಿ ಇದ್ದಕ್ಕಿದ್ದಂತೆ ರಾಷ್ಟ್ರಗೀತೆ ಹಾಡಿದ್ರು!

    ಬೆಂಗಳೂರು: ರಾಷ್ಟ್ರಕ್ಕೆ, ರಾಷ್ಟ್ರಗೀತೆಗೆ, ರಾಷ್ಟ್ರಧ್ವಜಕ್ಕೆ ಎಲ್ಲರೂ ಗೌರವ ಕೊಡಬೇಕು. ಅದು ನಮ್ಮೆಲ್ಲರ ಕರ್ತವ್ಯ. ಅದು ಎಲ್ಲಿ ಇಲ್ಲವೋ ಆಗ ಎಲ್ಲಾ ಭಾರತಿಯರೂ ಅದನ್ನು ಪ್ರಶ್ನಿಸಬೇಕು, ಸರಿ ಮಾಡಬೇಕು. ಅದರೆ ಬೆಂಗಳೂರಿನಲ್ಲಿ ಆ್ಯಂಟಿ ಕರಪ್ಷನ್ ಕೌನ್ಸಿಲ್ ಆಫ್ ಇಂಡಿಯಾ ಅನ್ನೊ ಒಂದು ಸಂಘಟನೆ ಇದ್ದಕ್ಕಿದ್ದ ಹಾಗೇ ರಾಷ್ಟ್ರಗೀತೆಯ ಬಗ್ಗೆ ಅರಿವನ್ನು ಮೂಡಿಸುತ್ತೇವೆ ಎಂದು ಮುಂದೆ ಬಂದಿದ್ದಾರೆ.

    ಬೆಂಗಳೂರಿನ ಪೊಲೀಸ್ ಕಚೇರಿಗಳು, ಸರ್ಕಾರಿ ಕಚೇರಿಗಳಿಗೆ ಹೋಗಿ ರಾಷ್ಟ್ರಗೀತೆ ಹಾಡೋಣ ಬನ್ನಿ, ಇಲ್ಲ ನಿಮ್ಮ ಕಚೇರಿ ಮುಂದೆ ನಾವು ಹಾಡ್ತೀವಿ ಅಂತ ಇದ್ದಕ್ಕಿದ್ದ ಹಾಗೇ ಹಾಡೋಕೆ ಶುರು ಮಾಡುತ್ತಾರೆ. ಯಾಕೆ ಈ ರೀತಿ ಅಂದರೆ ನಮ್ಮ ಹಾಗೇ ಎಲ್ಲರೂ ಗೌರವ ಕೊಡಬೇಕು ಎಂದು ಹೇಳುತ್ತಾರೆ.

    ರಾಷ್ಟ್ರಗೀತೆ ಹಾಡಿ ಅನ್ನೋ ಒತ್ತಾಯವನ್ನು ಯಾರೂ ಮಾಡುವಂತಿಲ್ಲ ಹಾಗೂ ಮನವಿ ಕೇಳುವಂತಿಲ್ಲ ಎಂದು ಎಮ್‍ಎಸ್ ಬಿಲ್ಡಿಂಗ್ ಬಳಿಯ ಹ್ಯೂಮನ್ ರೈಟ್ಸ್ ಕಚೇರಿ ಹೊರಗೆ ನಿಂತು ಈ ಸಂಘಟನೆಯ ಕಾರ್ಯಕರ್ತರು ರಾಷ್ಟ್ರಗೀತೆಯನ್ನು ಹಾಡೋಕೆ ಶುರು ಮಾಡಿದರು. ಅಲ್ಲಿ ಸುತ್ತ ಇದ್ದವರಿಗೆ ಒಮ್ಮೆಲೆ ಶಾಕ್. ಈ ಟೈಮಲ್ಲಿ ಯಾರಪ್ಪ ರಾಷ್ಟ್ರಗೀತೆ ಹಾಡುತ್ತಿದ್ದಾರೆ ಎಂದು. ಎಲ್ಲರಿಗೂ ರಾಷ್ಟ್ರಗೀತೆ ಬಗ್ಗೆ ಅರಿವು ಮೂಡಿಸಬೇಕು ಎಂದು ಹಾಡಲು ಶುರು ಮಾಡಿದವರು ಸರಿಯಾಗಿ ಹಾಡುತ್ತಾರೆ ಅಂದುಕೊಂಡರೆ ಬರೀ ತಪ್ಪು ತಪ್ಪು ಹಾಡಿದ್ರು. ಇದನ್ನ ಪ್ರಶ್ನೆ ಮಾಡಿದ್ರೆ ಅದಕ್ಕೂ ಸಮಜಾಯಿಷಿ ಕೊಟ್ರು.

    ರಾಷ್ಟ್ರಗೀತೆ ಎಲ್ಲಾ ಸ್ಕೂಲ್ ಮತ್ತು ಕಾಲೇಜುಗಳಲ್ಲಿ ಹಾಡಬೇಕು. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ರಾಷ್ಟ್ರಗೀತೆ ಹಾಡಬೇಕು. ಇದನ್ನು ನಾವು ಮಾಡ್ತೀವಿ ಮತ್ತು ಮಾಡಿ ತೋರಿಸುತ್ತೀವಿ. ತಪ್ಪು ಮಾಡುವವರಿಗೆ ಜಾಗೃತಿ ಮೂಡಿಸುತ್ತೇವೆ. ಸಂವಿಧಾನದಲ್ಲಿ ನಮಗೆ ಕೊಟ್ಟ ಅಧಿಕಾರವನ್ನು ನಾವು ರಕ್ಷಣೆ ಮಾಡಿ ಶಾಲಾ-ಕಾಲೇಜು ಮತ್ತು ದೈನಂದಿನ ದಿನಗಳಲ್ಲಿ ರಾಷ್ಟ್ರಗೀತೆಯ ಬಗ್ಗೆ ಜಾಗೃತಿಯನ್ನು ಮೂಡಿಸುತ್ತೇವೆ ಎಂದು ಆ್ಯಂಟಿ ಕರಪ್ಷನ್ ಅಧಿಕಾರಿಗಳು ಹೇಳಿದ್ರು

    ರಾಷ್ಟ್ರಗೀತೆಯನ್ನು 52 ಸೆಕೆಂಡ್‍ಗಳಲ್ಲಿ ಹಾಡಿ ಮುಗಿಸಬೇಕು ಹಾಗೂ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಬೇಕು, ಅದು ನಮ್ಮ ಕರ್ತವ್ಯ. ಆದರೆ ರಾಷ್ಟ್ರಗೀತೆ ಹಾಡುವುದಕ್ಕೆ ಒಂದು ನಿರ್ದಿಷ್ಟ ಸ್ಥಳ, ಟೈಮ್ ಇರುತ್ತದೆ. ಶಾಲೆ ಪ್ರಾರಂಭಕ್ಕೂ ಮುನ್ನ ಹಾಗೂ ಸಿನಿಮಾ ಮಂದಿರಗಳಲ್ಲಿ ಸಿನಿಮಾ ಶುರುವಾಗುವ ಮುನ್ನ ರಾಷ್ಟ್ರಗೀತೆ ಹಾಡಬೇಕು. ಸಿನಿಮಾದ ಮಧ್ಯೆ ಗೀತೆ ಹಾಡುವುದು ಅಪಮಾನ. ಅದೇ ರೀತಿ ಎಲ್ಲೆಂದರಲ್ಲಿ ತಮ್ಮನ್ನ ಹಾಗೂ ಸಂಘಟನೆಯನ್ನ ಗುರುತಿಸಿಕೊಳ್ಳೋಕೆ ಈ ರೀತಿ ಮಾಡೊದು ಎಷ್ಟು ಸರಿ ಅನ್ನೊದು ಸಾರ್ವಜನಿಕರ ಪ್ರಶ್ನೆ.