Tag: ಗೌರವ್‌ ಗೊಗೊಯ್‌

  • ಉಗ್ರರು ಬಂದಿದ್ದು ಹೇಗೆ ಅಂತ ರಾಜನಾಥ್ ಸಿಂಗ್ ಮಾಹಿತಿಯೇ ನೀಡಲಿಲ್ಲ: ಕಾಂಗ್ರೆಸ್ ಮುಖಂಡ ಗೌರವ್ ಗೊಗೊಯ್

    ಉಗ್ರರು ಬಂದಿದ್ದು ಹೇಗೆ ಅಂತ ರಾಜನಾಥ್ ಸಿಂಗ್ ಮಾಹಿತಿಯೇ ನೀಡಲಿಲ್ಲ: ಕಾಂಗ್ರೆಸ್ ಮುಖಂಡ ಗೌರವ್ ಗೊಗೊಯ್

    – ಮೋದಿ ಬಿಹಾರ ಚುನಾವಣಾ ಪ್ರಚಾರಕ್ಕೆ ಹೋದ್ರು, ಬೈಸರನ್‌ಗೆ ಹೊಗಿದ್ದು ರಾಹುಲ್ ಗಾಂಧಿ ಮಾತ್ರ
    – ಈ ಸರ್ಕಾರಕ್ಕೆ ಯಾರು ಪ್ರಶ್ನೆ ಮಾಡಲ್ಲ ಅನ್ನೋ ಅಹಂಕಾರ ಬಂದಿದೆ ಅಂತ ಲೇವಡಿ

    ನವದೆಹಲಿ: ಉಗ್ರರು ಪಹಲ್ಗಾಮ್‌ನ ಬೈಸರನ್‌ ಕಣಿವೆ ಪ್ರದೇಶಕ್ಕೆ ಬಂದಿದ್ದು ಹೇಗೆ ಅಂತ ರಾಜನಾಥ್‌ ಸಿಂಗ್‌ ಮಾಹಿತಿಯೇ ನೀಡಲಿಲ್ಲ ಅಂತ ಕಾಂಗ್ರೆಸ್‌ ಮುಖಂಡ ಗೌರವ್‌ ಗೊಗೊಯ್‌ (Gaurav Gogoi) ಕೇಂದ್ರ ಸರ್ಕಾರವನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು ಟೀಕಿಸಿದರು.

    ಪಹಲ್ಗಾಮ್‌ ದಾಳಿ & ಆಪರೇಷನ್‌ ಸಿಂಧೂರ (Operation Sindoor) ಚರ್ಚೆ ವೇಳೆ ಮಾತನಾಡಿದ ಗೊಗೊಯ್‌, ವಿಪಕ್ಷಗಳು ಸಂಪೂರ್ಣ ಸಹಕಾರ ನೀಡಿದ್ರೂ ಉಗ್ರರನ್ನ ಬಂಧಿಸಲು ಸಾಧ್ಯವಾಗಿಲ್ಲ. ಜಮ್ಮು ಕಾಶ್ಮೀರ ದಾಳಿಯ ನೈತಿಕ ಹೊಣೆಯನ್ನ ಅಮಿತ್ ಶಾ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ರಕ್ತ ಹರಿಯುವ ಕಡೆ ಮಾತುಕತೆ ಪ್ರಸ್ತಾಪವೇ ಬರಲ್ಲ – ಆಪರೇಷನ್ ಸಿಂಧೂರ ಚರ್ಚೆಯಲ್ಲಿ ರಾಜನಾಥ್‌ ಸಿಂಗ್‌ ಘರ್ಜನೆ

    ರಕ್ಷಣಾ ಸಚಿವರಾಗಿ ರಾಜನಾಥ್ ಸಿಂಗ್ (Rajnath Singh) ಎಲ್ಲ ಮಾಹಿತಿ ನೀಡಿದರು. ಆದ್ರೆ ಕಾಶ್ಮೀರದ ಬೈಸರನ್‌ಗೆ ಭಯೋತ್ಪಾದಕರು (Terrorists) ಹೇಗೆ ಬಂದರು ಎನ್ನುವುದಕ್ಕೆ ಉತ್ತರವನ್ನೇ ಕೊಡಲಿಲ್ಲ. ನಾವು ವಿಪಕ್ಷವಾಗಿ ಈ ಪ್ರಶ್ನೆಯನ್ನ ಕೇಳುತ್ತಿದ್ದೇವೆ. ಆ ಭಯೋತ್ಪಾದಕರು ಅಂದು ಹೇಗೆ ಒಳಗೆ ನುಸುಳಿದ್ರು ಅಂತ ಪ್ರಶ್ನೆ ಮಾಡಿದ್ರು. ಇದನ್ನೂ ಓದಿ: ನಾವೆಷ್ಟು ಪಾಕಿಸ್ತಾನಿ ವಿಮಾನಗಳನ್ನ ಹೊಡೆದಿದ್ದೇವೆ ಅಂತ ಯಾರೊಬ್ಬರೂ ಕೇಳಲಿಲ್ಲ – ಸಂಸತ್‌ನಲ್ಲಿ ರಾಜನಾಥ್‌ ಸಿಂಗ್‌ ಬೇಸರ

    ಉಗ್ರರು ಯಾರು ಅನ್ನೋದೇ ಗೊತ್ತಿಲ್ಲ
    ಕಾಶ್ಮೀರದ ಆರ್ಥಿಕತೆ ಹಾಳು ಮಾಡುವುದು ಅವರ ಉದ್ದೇಶವಾಗಿತ್ತು. ಬೈಸರನ್‌ನಲ್ಲಿ ಕಾಶ್ಮೀರಿ ಜನರು ಪ್ರವಾಸಿಗರು ಹೇಗೆ ಜೀವ ಉಳಿಸಿಕೊಂಡ್ರು ಅಂತ ಎಲ್ಲರೂ ನೋಡಿದ್ದಾರೆ. ವಿಪಕ್ಷಗಳು ಸರ್ಕಾರಕ್ಕೆ ಪೂರ್ಣ ಬೆಂಬಲ ನೀಡಿತ್ತು. ಆದ್ರೆ ಈವರೆಗೂ ಈ ಭಯೋತ್ಪಾದಕರನ್ನ ಬಂಧಿಸಲು ಸಾಧ್ಯವಾಗಿಲ್ಲ. ಘಟನೆ ನಡೆದು ನೂರು ದಿನಗಳ ಕಳೆದರೂ ಅವರು ನುಸುಳಿದ್ದು ಹೇಗೆ ಅನ್ನೋದೇ ಗೊತ್ತಿಲ್ಲ. ಅವರು ಯಾರೂ ಅಂತಾನೂ ಗೊತ್ತಿಲ್ಲ, ಅವರನ್ನು ಬಂಧಿಸಲು ಸಾಧ್ಯವಾಗಿಲ್ಲ. ಇದು ಯಾವ ರೀತಿಯ ಭದ್ರತೆ? ಕಾಶ್ಮೀರಕ್ಕೆ ಜನರು ಬನ್ನಿ ಎಂದು ಸರ್ಕಾರ ಹೇಳುತ್ತದೆ. ಆದ್ರೆ ಬೈಸರನ್‌ನಲ್ಲಿ ಏನಾಯಿತು, ಒಂದು ಅಂಬುಲೆನ್ಸ್‌ ಬರೋದಕ್ಕೆ ಗಂಟೆಯಾಯ್ತು ಎಂದು‌ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದರು.

    ಬೈಸರನ್‌ಗೆ ಹೋಗಿದ್ದು ರಾಹುಲ್‌ ಗಾಂಧಿ ಮಾತ್ರ
    ಈ ಸರ್ಕಾರಕ್ಕೆ ದುರಹಂಕಾರ ಬಂದಿದೆ, ಇಲ್ಲಿ ಯಾರು ಪ್ರಶ್ನೆ ಮಾಡಲ್ಲ ಎನ್ನುವ ಅಹಂಕಾರ ಇದೆ. ನಾವು ವಿರೋಧ ಪಕ್ಷಗಳು ಪ್ರಶ್ನೆ ಕೇಳುತ್ತೇವೆ. ಪ್ರಧಾನಿ ಮೋದಿ ಬೈಸರನ್‌ಗೆ ಹೋಗಲಿಲ್ಲ, ಬಿಹಾರಕ್ಕೆ ಚುನಾವಣೆ ಪ್ರಚಾರಕ್ಕೆ ಹೊದರು. ಬೈಸರನ್‌ಗೆ ಹೊಗಿದ್ದು ರಾಹುಲ್ ಗಾಂಧಿ ಮಾತ್ರ ಎಂದು ಕುಟುಕಿದರು. ಇದನ್ನೂ ಓದಿ:  ಪಹಲ್ಗಾಮ್ ದಾಳಿ ಬಳಿಕ ಆಫ್‌ ಆಗಿದ್ದ ಸ್ಯಾಟಲೈಟ್‌ ಫೋನ್ ದಿಢೀರ್ ಆನ್‌ – ಇದೇ ಸುಳಿವಿಂದ ಉಗ್ರರ ಬೇಟೆ!

    ವಿದೇಶಿ ನೀತಿ ಸಫಲ ಅಂತ ಯಾವ ಬಾಯಲ್ಲಿ ಹೇಳ್ತಿರಿ?
    ನಮ್ಮ ವಿದೇಶಿ ನೀತಿ ಸಫಲವಾಗಿದೆ ಎಂದು ಯಾವ ಬಾಯಲ್ಲಿ ಹೇಳ್ತಿರಿ? ನಮ್ಮ ಪಾರಂಪರಿಕ ಸ್ನೇಹಿತ ರಾಷ್ಟ್ರ ಕೂಡಾ ನಮ್ಮ ಜೊತೆಗೆ ನಿಲ್ಲಲಿಲ್ಲ. ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ನೆರವು ಸಿಗುತ್ತಿದೆ. ಇದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಏನು ಹೇಳ್ತಾರೆ. ನಾವು ವಿರೋಧ ಪಕ್ಷವಲ್ಲ, ದೇಶದ ಸೈನಿಕರ ಪರ. ದಯವಿಟ್ಟು ನಮ್ಮಗೆ ಸತ್ಯವಾದ ಮಾತು ಹೇಳಬೇಕು ಅಂತ ಮನವಿ ಮಾಡಿದರು.

  • ಮೌನ ವೃತದಲ್ಲಿರುವ ಮೋದಿ ಮಾತನಾಡಿಸಲು ಅವಿಶ್ವಾಸ ನಿರ್ಣಯ – ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಟೀಕೆ

    ಮೌನ ವೃತದಲ್ಲಿರುವ ಮೋದಿ ಮಾತನಾಡಿಸಲು ಅವಿಶ್ವಾಸ ನಿರ್ಣಯ – ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಟೀಕೆ

    ನವದೆಹಲಿ: ಬಿಜೆಪಿ (BJP) ನೇತೃತ್ವದ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಮೈತ್ರಿಕೂಟ INDIA ಹೊರಡಿಸಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಸಂಸತ್‌ನಲ್ಲಿ ನಡೆಯುತ್ತಿದೆ. ಅವಿಶ್ವಾಸ ನಿರ್ಣಯವು ಮಣಿಪುರದ ವಿಚಾರವಾಗಿ ಪ್ರಧಾನಿ ಮೋದಿ (Narendra Modi) ಅನುಸರಿಸುತ್ತಿರುವ ಮೌನ ವ್ರತವನ್ನು ಮುರಿಯುವಂತೆ ಮಾಡುತ್ತೆ ಎಂದು ಕಾಂಗ್ರೆಸ್‌ ತಿಳಿಸಿದೆ.

    ಅವಿಶ್ವಾಸ ನಿರ್ಣಯದ ಚರ್ಚೆ ವೇಳೆ ಮೊದಲ ಮಾತನಾಡಿದ ಕಾಂಗ್ರೆಸ್ (Congress) ಸಂಸದ ಗೌರವ್ ಗೊಗೊಯ್ (Gaurav Gogoi), ಮಣಿಪುರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಮೌನ ವ್ರತವನ್ನು ಮುರಿಯಲು INDIA ಒಕ್ಕೂಟವು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ತಂದಿತು. ಒಂದು ಭಾರತವು ಎರಡು ಮಣಿಪುರಗಳನ್ನು (Manipur) ಸೃಷ್ಟಿಸಿದೆ. ಒಂದು ಬೆಟ್ಟಗಳಲ್ಲಿ ಮತ್ತು ಇನ್ನೊಂದು ಕಣಿವೆಯಲ್ಲಿ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ- ಸಂತ್ರಸ್ತರಿಗಾಗಿ ಅಮೆರಿಕಾದಲ್ಲಿ 8 ಲಕ್ಷ ರೂ. ಸಂಗ್ರಹಿಸಿದ 16ರ ಹುಡುಗಿ

    ಮಣಿಪುರವು ನ್ಯಾಯವನ್ನು ಕೇಳುತ್ತದೆ. ಮಣಿಪುರಕ್ಕೆ ಬೆಂಕಿ ಬಿದ್ದಿದ್ದು, ಇಡೀ ಭಾರತವೇ ಹೊತ್ತಿ ಉರಿಯುತ್ತಿದೆ. ಮಣಿಪುರ ಇಬ್ಭಾಗವಾದರೆ ದೇಶವೇ ಇಬ್ಭಾಗವಾಗುತ್ತದೆ. ಪ್ರಧಾನಿ ಮೋದಿಯವರು ಸದನಕ್ಕೆ ಬಂದು ಮಣಿಪುರದ ಬಗ್ಗೆ ಮಾತನಾಡಬೇಕು. ಆದರೆ ಅವರು ಮೌನ ವ್ರತ ಪಾಲಿಸಿದರು. ಅವರು ಲೋಕಸಭೆಯಲ್ಲಿ ಅಥವಾ ರಾಜ್ಯಸಭೆಯಲ್ಲಿ ಮಾತನಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ಮೋದಿ ಮೌನವಾಗಿರಲು ಮೂರು ಕಾರಣಗಳಿವೆ. ರಾಜ್ಯ ಸರ್ಕಾರದ ವೈಫಲ್ಯ, ಗೃಹ ಇಲಾಖೆ ಮತ್ತು ರಾಷ್ಟ್ರೀಯ ಭದ್ರತಾ ವ್ಯವಸ್ಥೆ ವೈಫಲ್ಯ, ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಿರುವುದು. ಈ ಕಾರಣಗಳಿಗಾಗಿ ಪ್ರಧಾನಿಗಳು ಮೌನವಾಗಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಹರಿಯಾಣದಲ್ಲಿ ಕೋಮು ಸಂಘರ್ಷ: 3 ಜಿಲ್ಲೆಯ 14 ಹಳ್ಳಿಗಳಲ್ಲಿ ಮುಸ್ಲಿಮರಿಗೆ ಬಹಿಷ್ಕಾರ – ಜಿಲ್ಲಾಡಳಿತಕ್ಕೆ ಬಹಿರಂಗ ಪತ್ರ

    ಗೊಗೊಯ್ ಅವರು ತಮ್ಮ ಪ್ರಸ್ತಾವನೆಯನ್ನು ಸಲ್ಲಿಸಿದರು. ಈ ಸದನವು ಮಂತ್ರಿ ಮಂಡಳಿಯಲ್ಲಿ ವಿಶ್ವಾಸವನ್ನು ಬಯಸುತ್ತದೆ ಎಂದು ಸದನದ ಮುಂದೆ ಸಲ್ಲಿಸಿದರು. ಚರ್ಚೆಯಲ್ಲಿ ಐದು ಸಚಿವರು ಮಾತನಾಡಲಿದ್ದಾರೆ. ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕಿರಣ್ ರಿಜಿಜು. ಇನ್ನು ಹತ್ತು ಬಿಜೆಪಿ ಸಂಸದರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]