Tag: ಗೌತಮ್ ಗಂಭೀರ್

  • ಮದ್ಯ ಮಾರಾಟ ಕೇಸ್: ಕೋರ್ಟ್ ಮೆಟ್ಟಿಲೇರಿದ ಗಂಭೀರ್

    ಮದ್ಯ ಮಾರಾಟ ಕೇಸ್: ಕೋರ್ಟ್ ಮೆಟ್ಟಿಲೇರಿದ ಗಂಭೀರ್

    ನವದೆಹಲಿ: ಕ್ರಿಕೆಟಿಗ ಗೌತಮ್ ಗಂಭೀರ್ ಅವರು ತನ್ನ ಹೆಸರಿನಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಕೋರ್ಟ್ ಮೆಟ್ಟಲು ಏರಿದ್ದಾರೆ.

    ಮಂಗಳವಾರ ದೆಹಲಿ ಕೋರ್ಟ್ ನಲ್ಲಿ ತಮ್ಮ ಹೆಸರು ಬಳಕೆ ಮಾಡುತ್ತಿದ್ದ ಮಾರಾಟಗಾರನ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಪಶ್ಚಿಮ ದೆಹಲಿಯ ಗಂಗೂರ್ ಬಾರ್ ಆ್ಯಂಡ್ ರೆಸ್ಟೋರೆಂಟ್‍ಗೆ ಗೌತಮ್ ಗಂಭೀರ್ ಅವರನ್ನು ಹೆಸರನ್ನು ಇಡಲಾಗಿದೆ. ಈ ಬಾರ್‍ಗೆ ಬರುವ ಗ್ರಾಹಕರಿಗೆ ನನ್ನ ಹೆಸರಲ್ಲಿ ಸರ್ವ್ ಮಾಡಿ ಮದ್ಯಪಾನಕ್ಕೆ ಪ್ರಚೋದನೆ ನೀಡಲಾಗುತ್ತಿದೆ ಎಂದು ಗಂಭೀರ್ ಆರೋಪಿಸಿದ್ದಾರೆ.

    ಬಾರ್ ಮಾಲೀಕನ ಹೆಸರು ಗೌತಮ್ ಗಂಭೀರ್: ಇನ್ನು ಇತ್ತ ಕ್ರಿಕೆಟಿಗ ಬಾರ್ ಮಾಲೀಕನ ವಿರುದ್ಧ ಕೋರ್ಟ್‍ನಲ್ಲಿ ದೂರು ದಾಖಲಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಬಾರ್ ಮಾಲೀಕ, ನನ್ನ ಹೆಸರು ಸಹ ಗೌತಮ್ ಗಂಭೀರ್ ಆಗಿದ್ದು, ನಾನು ನನ್ನ ಹೆಸರಿನ ಟ್ಯಾಗ್ ಲೈನ್‍ನ್ನ ಬಾರ್ ಆ್ಯಂಡ್ ರೆಸ್ಟೋರೆಂಟ್‍ಗೆ ಇಟ್ಟು ವ್ಯವಹರಿಸುತ್ತಿದ್ದೇನೆ. ಗಂಗೂರ್ ಮತ್ತು ಹವಾಲಾತ ಹೆಸರಿನ ಎರಡು ರೆಸ್ಟೋರೆಂಟ್ ಬಾರ್‍ಗಳು ನನ್ನ ಹೆಸರಿನ ಟ್ಯಾಗ್‍ಲೈನ್ ದೊಂದಿಗೆ ವ್ಯವಹರಿಸುತ್ತಿವೆ ಅದರಲ್ಲಿ ಏನು ತಪ್ಪಿಲ್ಲ ಎಂದು ಬಾರ್ ಮಾಲೀಕ ಹೇಳಿದ್ದಾರೆ.