ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ (Youth Congress) ಅಧ್ಯಕ್ಷ ಮೊಹಮ್ಮದ್ ನಲಪಾಡ್ (Mohammed Haris Nalapad) ಅಂಡ್ ಟೀಂ ಬೆಂಗಳೂರಿನ (Bengaluru) ವಿವಿಧೆಡೆ ವಿಶೇಷ ರೀತಿಯಲ್ಲಿ ಪ್ರೇಮಿಗಳ ದಿನವನ್ನ (Valentine’s Day) ಆಚರಿಸಿತು.
ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ನಲಪಾಡ್, ಮೋದಿ ಮತ್ತು ಅದಾನಿ ನಡುವಿನ ಪ್ರೀತಿ ಷಹಜಹಾನ್-ಮಮ್ತಾಝ್ ರೀತಿಯಂತೆ. ಮಮ್ತಾಝ್‌ಗಾಗಿ ಷಹಜಹಾನ್ ತಾಜ್ ಮಹಲ್ ಕಟ್ಟಿಸಿದಂತೆ, ಅದಾನಿಗಾಗಿ ಮೋದಿ ದೇಶದಲ್ಲಿ ರಸ್ತೆಗಳನ್ನ ಮಾಡಿಸುತ್ತಿದ್ದಾರೆ, ದೇಶವನ್ನು ಅವರಿಗೆ ಬೇಕಾದಂತೆ ಮಾಡಿಕೊಡುತ್ತಿದ್ದಾರೆ. ಹೀಗಾಗಿ ಅವರ ಪ್ರೀತಿಯನ್ನು ಸಾರ್ವಜನಿಕರಿಗೆ ತಿಳಿಸಲು ನಾವು ಪ್ರೇಮಿಗಳ ದಿನಾಚರಣೆಯ ರ‍್ಯಾಲಿ ಮಾಡುತ್ತಿದ್ದೇವೆ ಎಂದು ವ್ಯಂಗ್ಯವಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮುಂಬೈ: ಅಕ್ಟೋಬರ್-ಡಿಸೆಂಬರ್ ಮೂರನೇ ತ್ರೈಮಾಸಿಕದಲ್ಲಿ ಅದಾನಿ ಎಂಟರ್‌ಪ್ರೈಸಸ್ (Adani Enterprises Ltd) 820 ಕೋಟಿ ರೂ. ನಿವ್ವಳ (Profit) ಲಾಭಗಳಿಸಿದೆ.
2021ರ ಈ ಅವಧಿಯಲ್ಲಿ11.63 ಕೋಟಿ ರೂ. ನಷ್ಟ ಅನುಭವಿಸಿತ್ತು. ಹಿಂದಿನ ಈ ಅವಧಿಯಲ್ಲಿ 18,757.9 ಕೋಟಿ ರೂ. ಆದಾಯವಿದ್ದರೆ ಈ ಬಾರಿ ಇದು ಶೇ.42ರಷ್ಟು ಏರಿಕೆಯಾಗಿದ್ದು 26,612.2 ಕೋಟಿ ರೂ.ಗೆ ಜಿಗಿದಿದೆ.
2022-23ರ ಹಣಕಾಸು ವರ್ಷದಲ್ಲಿ (Financial Year) ಅದಾನಿ ಎಂಟರ್‌ಪ್ರೈಸಸ್ 29,245 ಕೋಟಿ ರೂ. ಆದಾಯ ಮತ್ತು 582.80 ಕೋಟಿ ನಿವ್ವಳ ಲಾಭವನ್ನು ಗಳಿಸಬಹುದು ಬ್ಲೂಮ್‌ಬರ್ಗ್ ಅಂದಾಜಿಸಿದೆ. ಇದನ್ನೂ ಓದಿ: ಇಸ್ರೇಲಿನ ಹೈಫಾ ಬಂದರು ಅದಾನಿ ತೆಕ್ಕೆಗೆ
ಅಮೆರಿಕದ ಹಿಂಡನ್‌ಬರ್ಗ್ ರಿಸರ್ಚ್ (Hindenburg Research) ಬಳಿಕ ಅದಾನಿ ಎಂಟರ್‌ಪ್ರೈಸಸ್ ಷೇರಿನ ಮೌಲ್ಯ ಶೇ.50ರಷ್ಟು ಕುಸಿತಕಂಡಿತ್ತು. ಆದರೆ ಮೂರನೇ ತ್ರೈಮಾಸಿಕದ ವರದಿ ಪ್ರಕಟಗೊಂಡ ಬೆನ್ನಲ್ಲೇ ಅದಾನಿ ಎಂಟರ್‌ಪ್ರೈಸಸ್ ಷೇರಿನ ಬೆಲೆ ಶೇ.1.91 ರಷ್ಟು ಏರಿಕೆ ಮಂಗಳವಾರ 1,750.30 ರೂ.ಗೆ(+32.75 ರೂ.) ವಹಿವಾಟು ಮುಗಿಸಿತು.
ಕಳೆದ ಮೂರು ದಶಕಗಳಲ್ಲಿ, ಹಾಗೆಯೇ ತ್ರೈಮಾಸಿಕದಿಂದ ತ್ರೈಮಾಸಿಕ ಮತ್ತು ವರ್ಷದಿಂದ ವರ್ಷಕ್ಕೆ, ಅದಾನಿ ಎಂಟರ್‌ಪ್ರೈಸಸ್ ಭಾರತದ ಅತ್ಯಂತ ಯಶಸ್ವಿ ಮೂಲಸೌಕರ್ಯ ಕಂಪನಿಯನ್ನಾಗಿ ಹೊರಹೊಮ್ಮುತ್ತಿದೆ. ಪ್ರಸ್ತುತ ಮಾರುಕಟ್ಟೆಯ ಚಂಚಲತೆಯು ತಾತ್ಕಾಲಿಕವಾಗಿದೆ. ನಮ್ಮ ಯಶಸ್ಸಿಗೆ ನಮ್ಮ ಬಲವಾದ ಆಡಳಿತ, ಕಟ್ಟುನಿಟ್ಟಾದ ನಿಯಂತ್ರಕ ಅನುಸರಣೆ, ನಿರಂತರ ಕಾರ್ಯಕ್ಷಮತೆ ಮತ್ತು ಘನ ನಗದು ಹರಿವು ಕಾರಣ ಎಂದು ಕಂಪನಿಯ ಮುಖ್ಯಸ್ಥ ಗೌತಮ್ ಅದಾನಿ (Gautam Adani) ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ದೇಶಾದ್ಯಂತ ಒಂದೇ ಒಂದು ಹೆಸರು ಕೇಳಿಬರುತ್ತಿದೆ. ಅದು ಅದಾನಿ.. ಅದಾನಿ.. ಅದಾನಿ. ತಮಿಳುನಾಡು (TamilNadu), ಕೇರಳದಿಂದ ಹಿಮಾಚಲ ಪ್ರದೇಶದವರೆಗೂ ಅದಾನಿ (Gautam Adani) ಹೆಸರು ಕೇಳಿಬರುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ (Rahul Gandhi) ಹೇಳಿದ್ದಾರೆ.
ಮಂಗಳವಾರ ಲೋಕಸಭೆಯಲ್ಲಿ (Lok Sabha) ಮಾತನಾಡಿದ ಅವರು, ಉದ್ಯಮಿ ಗೌತಮ್ ಅದಾನಿ ಲಾಭ ಪಡೆಯಲು ಮೋದಿ ಸರ್ಕಾರ (Modi Government) ವ್ಯಾಪಾರ ನಿಯಮಗಳನ್ನ ಬದಲಾಯಿಸುತ್ತಿದೆ. ಅದಾನಿಗೆ ಅನುಕೂಲವಾಗುವಂತೆ ನಿಯಮಗಳನ್ನ ರೂಪಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಅದಾನಿ ವಿರುದ್ಧ ತನಿಖೆಗೆ ಆಗ್ರಹಿಸಿ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ
ವಿಮಾನ ನಿಲ್ದಾಣಗಳ (Airport) ಬಗ್ಗೆ ಪೂರ್ವಾನುಭವ ಹೊಂದಿರದ ಯಾವುದೇ ವ್ಯಕ್ತಿ, ವಿಮಾನ ನಿಲ್ದಾಣಗಳ ಅಭಿವೃದ್ಧಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವಂತಿಲ್ಲ ಎಂಬ ನಿಯಮವಿದೆ. ಆದರೆ ಬಿಜೆಪಿ ನೇತೃತ್ವದ ಭಾರತ ಸರ್ಕಾರ (Government Of India) ಈ ನಿಯಮ ಬದಲಾಯಿಸಿ ಅದಾನಿ ಒಡೆತನಕ್ಕೆ 6 ವಿಮಾನ ನಿಲ್ದಾಣಗಳನ್ನ ನೀಡಿದೆ. ಇದರಿಂದ 2014ರಲ್ಲಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 609ನೇ ಸ್ಥಾನದಲ್ಲಿದ್ದ ಅದಾನಿ ನಂತರ ಮ್ಯಾಜಿಕ್ ಮಾಡಿ 2ನೇ ಸ್ಥಾನಕ್ಕೇರಿದರು ಎಂದು ಆರೋಪಿಸಿದ್ದಾರೆ.
ಅದಾನಿ ಈಗ 8 ರಿಂದ 10 ಕ್ಷೇತ್ರಗಳಲ್ಲಿದ್ದಾರೆ. 2014ರಿಂದ 2022ರ ನಡುವೆ 8 ಶತಕೋಟಿ ಡಾಲರ್ ಸಂಪತ್ತು ಹೊಂದಿದ್ದ ಅವರು ಈಗ 140 ಶತಕೋಟಿ ಡಾಲರ್‌ನಷ್ಟು ಸಂಪತ್ತು ತಲುಪಿದ್ದು ಹೇಗೆ? ಎಂದು ಸಾಕಷ್ಟು ಯುವಕರು ನಮ್ಮನ್ನು ಕೇಳಿದ್ದಾರೆ. ಇದಕ್ಕೆ ಏನು ಉತ್ತರ ನೀಡಲು ಸಾಧ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್- ಸುಪ್ರೀಂನಿಂದ ರಾಣಾ ಅಯ್ಯುಬ್ ಅರ್ಜಿ ವಜಾ
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅದಾನಿ ನಡುವಿನ ಸಂಬಂಧ ಕುರಿತು ಮಾತನಾಡಿದ ರಾಗಾ, ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗಿನಿಂದಲೂ ಅದಾನಿ ಜೊತೆಗೆ ಸಂಪರ್ಕ ಹೊಂದಿದ್ದಾರೆ. ಆಗ ಅದಾನಿ ಗುಜರಾತ್ (Gujarat) ಪುನರುತ್ಥಾನ ಪರಿಕಲ್ಪನೆಗೆ ಮೋದಿಗೆ ಸಹಾಯ ಮಾಡಿದ್ದರು. ನರೇಂದ್ರ ಮೋದಿ ಪ್ರಧಾನಿಯಾಗಿ ದೆಹಲಿ ತಲುಪಿದಾಗ ನಿಜವಾದ ಮ್ಯಾಜಿಕ್ ಪ್ರಾರಂಭವಾಯಿತು ಎಂದು ಟೀಕಿಸಿದ್ದಾರೆ.
ಪ್ರಧಾನಿ ಮೋದಿಗೆ ಅದಾನಿ ಎಷ್ಟು ಹಣ ನೀಡಿದ್ದಾರೆ? ಮೋದಿಯೊಂದಿಗೆ ಅದಾನಿಯೊಂದಿಗೆ ಎಷ್ಟು ಬಾರಿ ವಿದೇಶಿ ಪ್ರವಾಸ ಮಾಡಿದ್ದಾರೆ? ನೀವು ವಿದೇಶಕ್ಕೆ ಬಂದಾಗ ಎಷ್ಟು ಬಾರಿ ಅಲ್ಲಿ ನಿಮ್ಮ ಜೊತೆ ಕೂಡಿಕೊಂಡಿದ್ದಾರೆ? ನಿಮ್ಮ ಭೇಟಿಯ ನಂತರ ಎಷ್ಟು ಬಾರಿ ವಿದೇಶಗಳಲ್ಲಿ ಒಪ್ಪಂದ ಮಾಡಿಕೊಂಡಿದ್ದಾರೆ? ಕಳೆದ 20 ವರ್ಷಗಳಲ್ಲಿ ಅದಾನಿ ಬಿಜೆಪಿಗೆ ಅದಾನಿ ಎಷ್ಟು ಹಣ ನೀಡಿದ್ದಾರೆ? ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) 72 ಗಂಟೆಯ ಒಳಗಡೆ ಅದಾನಿ ಸಮೂಹದ ಬಗ್ಗೆ ಹಿಂಡೆನ್‌ಬರ್ಗ್ ಪ್ರಕಟಿಸಿದ ಆರೋಪಕ್ಕೆ ವರದಿ ನೀಡಬೇಕೆಂದು ಅದಾನಿ ಕಂಪನಿಯ ಮಾಜಿ ವಕೀಲ, ಭಾರತ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ (Harish Salve) ಹೇಳಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, ಗೌತಮ್ ಆದಾನಿ (Gautam Adani) ಅವರನ್ನು ಕರೆದು ಪ್ರತಿಕ್ರಿಯೆ ಪಡೆಯಬೇಕು. ಬಳಿಕ ಕೆಲ ಕ್ಷೇತ್ರಗಳಲ್ಲಿ ಕಾಳಜಿ ಇದೆ ಅಥವಾ ಈ ವರದಿ ಅಸಂಬದ್ಧ ಎಂದು ಸ್ಪಷ್ಟಪಡಿಸಬೇಕು ಎಂದು ಹೇಳಿದರು.
ಭಾರತದ ಉದ್ಯಮಿಗಳು (Indian Entrepreneurs) ಈಗ ಜಗತ್ತಿನಲ್ಲಿ ಅಸ್ತಿತ್ವ ಹೊಂದಿದ್ದಾರೆ. ಇದನ್ನು ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಭಾರತದಲ್ಲಿ (India) ಹೂಡಿಕೆ ಮಾಡಲು ನಾವು ಬ್ರಿಟಿಷ್ ಉದ್ಯಮಿಗಳನ್ನು ಓಲೈಸುವ ಸಮಯವಿತ್ತು. ಈಗ ಬ್ರಿಟಿಷ್ ಸರ್ಕಾರವು ಯುಕೆಯಲ್ಲಿ ಹೂಡಿಕೆ ಮಾಡಲು ಭಾರತೀಯರನ್ನು ಓಲೈಸುವುದನ್ನು ನಾವು ನೋಡಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಹೂಡಿಕೆದಾರರ ಹಿತಾಸಕ್ತಿಯೇ ನನಗೆ ಮುಖ್ಯ – 20,000 ಕೋಟಿ ಮೌಲ್ಯದ FPO ಹಿಂಪಡೆದ ಬಳಿಕ ಅದಾನಿ ಮೊದಲ ಪ್ರತಿಕ್ರಿಯೆ
ಗೌತಮ್ ಅದಾನಿ ವಿರುದ್ಧ ಹೊರಿಸಲಾದ ಆರೋಪವು ಭಾರತ ಮತ್ತು ಭಾರತೀಯರ ಮೇಲೆ ನಡೆದ ದಾಳಿ. ಅದಾನಿ ಗ್ರೂಪ್ ಕಂಪನಿಗಳಲ್ಲಿ ಹೆಚ್ಚಿನವು ಪಟ್ಟಿಮಾಡಲ್ಪಟ್ಟಿವೆ, ಅವರ ಎಲ್ಲಾ ದಾಖಲೆಗಳು ಸಾರ್ವಜನಿಕ ಡೊಮೇನ್‌ನಲ್ಲಿವೆ ಎಂದು ಹೇಳಿದರು.
ಇಂದು ಶೆಲ್ ಕಂಪನಿಗಳು ಇರಲು ಸಾಧ್ಯವೇ ಇಲ್ಲ. ಲಿಸ್ಟ್ ಮಾಡಿದ ಕಂಪನಿ ವಿದೇಶದಲ್ಲಿ ಅಂಗಸಂಸ್ಥೆ ಹೊಂದಿದ್ದರೆ, ಅವೆಲ್ಲವನ್ನೂ ತೋರಿಸಲಾಗುತ್ತದೆ. ಬ್ಯಾಲೆನ್ಸ್ ಶೀಟ್ ತೋರಿಸಿದಾಗ ಅದು ಶೆಲ್ ಕಂಪನಿಯಾಗಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಹಿಂಡೆನ್‌ಬರ್ಗ್ ರಿಸರ್ಚ್ ಬಗ್ಗೆ ವ್ಯಂಗ್ಯವಾಡಿದ ಅವರು, ಅದೊಂದು ಶಾರ್ಟ್ ಸೆಲ್ಲರ್ ಕಂಪನಿಯಾಗಿದ್ದು, ಈ ರೀತಿಯ ಆರೋಪ ಮಾಡಿ ಹಣವನ್ನು ಗಳಿಸಲು ಮುಂದಾಗಿದೆ ಎಂದು ಅವರು ಆರೋಪಿಸಿದರು.
ಹಿಂಡೆನ್‌ಬರ್ಗ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಗೆ, ಈ ರೀತಿ ಕಂಪನಿ ವಿರುದ್ಧ ಕೇಸ್ ದಾಖಲಿಸಲು ಭಾರತದಲ್ಲಿ ಕಾನೂನು ಚೌಕಟ್ಟಿನ ಕೊರತೆಯಿದೆ. ಅವರ ವಿರುದ್ಧ ಹಾನಿ ಮಾಡಿದ್ದಕ್ಕೆ ಕೇಸ್ ಹಾಕಿದರೆ ಗೌತಮ್ ಅದಾನಿ ಅವರ ಮೊಮ್ಮಕ್ಕಳು ಪ್ರಕರಣದಲ್ಲಿ ಹೋರಾಡಬೇಕಾಗಬಹುದು ಎಂದು ತಿಳಿಸಿದರು.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಉದ್ಯಮಿ ಗೌತಮ್ ಅದಾನಿ ಸಮೂಹ (Gautam Adani Group) ಸಂಸ್ಥೆಗಳ ಷೇರುಗಳ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಬೆನ್ನಲ್ಲೇ 20 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದ್ದ ಎಫ್‌ಪಿಒ ಪ್ರಕ್ರಿಯೆಯನ್ನೇ ರದ್ದು ಮಾಡಿದೆ..
ಅಮೆರಿಕದ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ಪ್ರಕಟಿಸಿದ್ದ ವರದಿ ವಿಶ್ವಾದ್ಯಂತ ಸದ್ದು ಮಾಡಿತ್ತು. ವರದಿ ಪ್ರಕಟಗೊಂಡ ಬೆನ್ನಲ್ಲೇ ಅದಾನಿ (Gautam Adani) ಸಮೂಹ ಸಂಸ್ಥೆಗಳ ಷೇರು ಕಳೆದ ಮೂರ್ನಾಲ್ಕು ದಿನಗಳಲ್ಲಿ ಮತ್ತಷ್ಟು ಕುಸಿತ ಕಂಡ ಬೆನ್ನಲ್ಲೇ ಅದಾನಿ ಕಂಪನಿ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
20,000 ಕೋಟಿ ರೂ. ಮೌಲ್ಯದ ಎಫ್‌ಪಿಒಗೆ(ಮುಂದುವರಿದ ಸಾರ್ವಜನಿಕ ಕೊಡುಗೆ ಅಥವಾ ಹೊಸದಾಗಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ) ಅದಾನಿ ಕಂಪನಿಯು ಇತ್ತೀಚೆಗಷ್ಟೇ ಚಾಲನೆ ನೀಡಿತ್ತು. ಆದರೆ ಈಗ ಎಫ್‌ಪಿಒ ರದ್ದುಗೊಳಿಸಿ, ಹೂಡಿಕೆದಾರರಿಗೆ ಹಣ ವಾಪಸ್ ಕೊಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿತ್ತು. ಇದರ ಬೆನ್ನಲ್ಲೇ ಗೌತಮ್ ಅದಾನಿ (Gautam Adani) ಪ್ರತಿಕ್ರಿಯಿಸಿ ಹೂಡಿಕೆದಾರರ ಆಸಕ್ತಿ ಬಹಳ ಮುಖ್ಯ ಎಂದು ಹೇಳಿದ್ದಾರೆ.
ವಾಣಿಜ್ಯೋದ್ಯಮಿಯಾಗಿ 4 ದಶಕಗಳ ನನ್ನ ಪ್ರಯಾಣದಲ್ಲಿ ಹೂಡಿಕೆದಾರ ಸಮುದಾಯದಿಂದ ಅಗಾಧ ಬೆಂಬಲ ಪಡೆದಿದ್ದೇನೆ. ಜೀವನದಲ್ಲಿ ನಾನೇನಾದರೂ ಒಂದಷ್ಟು ಸಾಧಿಸಿದ್ದೇನೆಂದರೆ, ಅದು ಅವರ ನಂಬಿಕೆಯಿಂದ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ನನ್ನ ಎಲ್ಲಾ ಯಶಸ್ಸಿಗೆ ನಾನು ಅವರಿಗೆ ಋಣಿಯಾಗಿದ್ದೇನೆ. ನನಗೆ ನನ್ನ ಹೂಡಿಕೆದಾರರ ಹಿತಾಸಕ್ತಿ ಬಹಳ ಮುಖ್ಯ. ಮಿಕ್ಕೆಲ್ಲವೂ ಗೌಣ. ಆದ್ದರಿಂದ ಸಂಭಾವ್ಯ ನಷ್ಟದಿಂದ ಹೂಡಿಕೆದಾರರನ್ನು ರಕ್ಷಿಸಲು ನಾವು FPO ಅನ್ನು ಹಿಂತೆಗೆದುಕೊಂಡಿದ್ದೇವೆ ಎಂದು ಮಾತನಾಡಿದ್ದಾರೆ.
20,000 ಕೋಟಿ ರೂ. ಮೌಲ್ಯದ ಎಫ್‌ಪಿಒಗೆ ಅದಾನಿ ಕಂಪನಿಯು ಇತ್ತೀಚೆಗಷ್ಟೇ ಚಾಲನೆ ನೀಡಿತ್ತು. ಪ್ರತಿ ಷೇರಿಗೆ 3,112ರಿಂದ 3,276 ರೂ. ಆಫರ್ ಮಾಡಲಾಗಿತ್ತು. ಎಫ್‌ಪಿಒ ಬಿಡ್ ಸಲ್ಲಿಕೆ ಅವಧಿ ಮಂಗಳವಾರಷ್ಟೇ ಪೂರ್ಣಗೊಂಡಿತ್ತು.
ಅಮೆರಿಕದ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ಪ್ರಕಟಿಸಿದ ವರದಿ ಪರಿಣಾಮ ಅದಾನಿ ಸಮೂಹ ಸಂಸ್ಥೆಗಳ ಷೇರಿನಲ್ಲಿ ಕುಸಿತ ಆಗಿದೆ. ಷೇರುಗಳು ಹೀಗೇ ಕುಸಿಯುತ್ತಾ ಸಾಗಿದರೆ, ಶೀಘ್ರದಲ್ಲೇ ಅವರು ಏಷ್ಯಾದ ಶ್ರೀಮಂತ ವ್ಯಕ್ತಿಯ ಪಟ್ಟದಿಂದಲೂ ಕೆಳಗಿಳಿಯುವ ಸಾಧ್ಯತೆಗಳು ದಟ್ಟವಾಗಿವೆ.
Live Tv
[brid partner=56869869 player=32851 video=960834 autoplay=true]
ಹೈಫಾ: ಇಸ್ರೇಲಿನ (Israel ) ಎರಡನೇ ಅತಿದೊಡ್ಡ ಹೈಫಾ ಬಂದರನ್ನು ಅದಾನಿ ಸಮೂಹ (Adani Group) 1.2 ಶತಕೋಟಿ ಡಾಲರ್‌ಗೆ ಸ್ವಾಧೀನಪಡಿಸಿದೆ.
ಟೆಲ್ ಅವೀವ್ ನಲ್ಲಿ ಕೃತಕ ಬುದ್ಧಿಮತ್ತೆ ಪ್ರಯೋಗಾಲಯವೂ ಸೇರಿದಂತೆ ಇಸ್ರೇಲ್‌ನಲ್ಲಿನ ಹೂಡಿಕೆಯ ನಿರ್ಧಾರ ಭಾಗವಾಗಿ ಅದಾನಿ ಸಮೂಹ ಈ ಹೈಫಾ ಬಂದರು ಅಭಿವೃದ್ಧಿ ಒಪ್ಪಂದಕ್ಕೆ ಮುಂದಾಗಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಗೌತಮ್ ಅದಾನಿ (Gautam Adani) ಜೊತೆಯಾಗಿ ಹೈಫಾ ಬಂದರನ್ನು (Haifa Port) ಸ್ವಾಧೀನಪಡಿಸಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿ ಹೂಡಿಕೆ ಅವಕಾಶಗಳ ಬಗ್ಗೆ ಮಾತನಾಡಿದ್ದಾರೆ.
Privileged to meet with @IsraeliPM@netanyahu on this momentous day as the Port of Haifa is handed over to the Adani Group. The Abraham Accord will be a game changer for the Mediterranean sea logistics. Adani Gadot set to transform Haifa Port into a landmark for all to admire. pic.twitter.com/Cml2t8j1Iv
ಕಂಟೈನರ್ ಹಡಗು ವಿಷಯದಲ್ಲಿ ಹೈಫಾ ಬಂದರು ಇಸ್ರೇಲ್‌ನಲ್ಲಿ ಎರಡನೇ ಅತಿದೊಡ್ಡ ಬಂದರಾಗಿದ್ದು ಪ್ರವಾಸಿ ಕ್ರೂಸ್ ಹಡಗುಗಳು ದೊಡ್ಡ ಪ್ರಮಾಣದಲ್ಲಿ ಈ ಬಂದರಿಗೆ ಬರುತ್ತದೆ.
ಇದು ಅಗಾಧವಾದ ಮೈಲಿಗಲ್ಲು ಎಂದು ನಾನು ಭಾವಿಸುತ್ತೇನೆ. 100 ವರ್ಷಗಳ ಹಿಂದೆ ಮತ್ತು ವಿಶ್ವ ಯುದ್ದದ ಸಮಯದಲ್ಲಿ ಹೈಫಾ ನಗರವನ್ನು ವಿಮೋಚನೆಗೊಳಿಸಲು ಧೈರ್ಯಶಾಲಿ ಭಾರತೀಯ ಸೈನಿಕರು ಸಹಾಯ ಮಾಡಿದರು ಮತ್ತು ಇಂದು, ಇದು ಅತ್ಯಂತ ದೃಢವಾದ ಭಾರತೀಯ ಹೂಡಿಕೆದಾರರು ಹೈಫಾ ಬಂದರು ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ ಎಂದು ನೆತನ್ಯಾಹು ಹೇಳಿದರು.
הצטרפו לשידור החי: דברי ראש הממשלה בנימין נתניהו ושרת התחבורה מירי רגב בטקס כניסת חברת א.ד.ג.ד. בע"מ לנמל חיפה https://t.co/2fDAe2PQiN
ಅದಾನಿ ಪೋರ್ಟ್ಸ್ & ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ ಇಸ್ರೇಲಿನ ಸ್ಥಳೀಯ ಕೆಮಿಕಲ್ಸ್ ಮತ್ತು ಲಾಜಿಸ್ಟಿಕ್ಸ್ ಗ್ರೂಪ್ ಗಡೋಟ್ ಸಹಭಾಗಿತ್ವ ಹೊಂದಿದೆ. ಈ ಕಂಪನಿ ಕಳೆದ ಜುಲೈನಲ್ಲಿ ಇಸ್ರೇಲ್‌ನ ಮೆಡಿಟರೇನಿಯನ್ ಕರಾವಳಿಯ ಪ್ರಮುಖ ವ್ಯಾಪಾರ ಕೇಂದ್ರವಾದ ಹೈಫಾ ಬಂದರನ್ನು ಅಭಿವೃದ್ಧಿ ಪಡಿಸುವ ಇಸ್ರೇಲ್ ಸರ್ಕಾರದ 1.2 ಶತಕೋಟಿ ಡಾಲರ್ ಟೆಂಡರ್ ಗೆದ್ದುಕೊಂಡಿತ್ತು.
ಕಳೆದ ಆರು ವರ್ಷಗಳಲ್ಲಿ, ಅದಾನಿ ಸಮೂಹವು ಇಸ್ರೇಲಿನ ಎಲ್ಬಿಟ್ ಸಿಸ್ಟಮ್ಸ್, ಇಸ್ರೇಲ್ ವೆಪನ್ ಸಿಸ್ಟಮ್ಸ್ ಮತ್ತು ಇಸ್ರೇಲ್ ಇನ್ನೋವೇಶನ್ ಅಥಾರಿಟಿಯಂತಹ ಕಂಪನಿಗಳೊಂದಿಗೆ ಅನೇಕ ಪಾಲುದಾರಿಕೆಯನ್ನು ಹೊಂದಿದೆ.
Live Tv
[brid partner=56869869 player=32851 video=960834 autoplay=true]
ಮುಂಬೈ: ವಿವಿಧ ಕಡೆಗಳಲ್ಲಿ ಹೂಡಿಕೆ ಮಾಡಿ ಕಳೆದ ವರ್ಷ ಷೇರು ಮಾರುಕಟ್ಟೆಯಲ್ಲಿ (Share Market) ಹೂಡಿಕೆದಾರರಿಗೆ ಬಂಪರ್ ಫಸಲು ನೀಡಿದ್ದ ಅದಾನಿ ಸಮೂಹದ (Adani Group) ಷೇರುಗಳು ಭಾರೀ ಇಳಿಕೆ ಕಂಡಿದೆ.
ಲೆಕ್ಕಪತ್ರ ವಂಚನೆ ಮತ್ತು ಸ್ಟಾಕ್ ಮ್ಯಾನಿಪ್ಯುಲೇಷನ್ ಮಾಡಿದೆ ಎಂಬ ವರದಿ ಪ್ರಕಟವಾದ ಬೆನ್ನಲ್ಲೇ ಅದಾನಿ ಕಂಪನಿಗಳ ಷೇರುಗಳ ಮೌಲ್ಯ ಭಾರೀ ಇಳಿಕೆಯಾಗಿದ್ದು ಎರಡೇ ದಿನದಲ್ಲಿ 4 ಲಕ್ಷ ಕೋಟಿ ರೂ. ಸಂಪತ್ತು ಕರಗಿದೆ.
ವರದಿ ಪ್ರಕಟವಾದ ದಿನವೇ 46 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದ್ದ ಅದಾನಿ ಗ್ರೂಪ್ ಇಂದು ಮತ್ತಷ್ಟು ನಷ್ಟ ಅನುಭವಿಸಿದೆ. 2020 ಮಾರ್ಚ್ ಬಳಿಕ ಅದಾನಿ ಸಮೂಹವು ಎದುರಿಸಿರುವ ಅತಿ ದೊಡ್ಡ ದೈನಂದಿನ ಕುಸಿತ ಇದಾಗಿದೆ. ಕಂಪನಿಗಳ ಮೌಲ್ಯ ಕುಸಿತವಾದ ಬೆನ್ನಲ್ಲೇ ಗೌತಮ್ ಆದಾನಿ (Gautam Adani) ಅವರ ಸಂಪತ್ತು ಭಾರೀ ಇಳಿಕೆಯಾಗಿದೆ. ಫೋರ್ಬ್ಸ್ ರಿಯಲ್ ಟೈಂ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಅದಾನಿ ಈಗ 7ನೇ ಸ್ಥಾನಕ್ಕೆ ಜಾರಿದ್ದಾರೆ.
ಇಂದು ಅದಾನಿ ಎಂಟರ್‌ಪ್ರೈಸಸ್ (Adani Enterprises) ಮುಂದುವರಿದ ಸಾರ್ವಜನಿಕ ಕೊಡುಗೆ(FPO) ಅಥವಾ ಹೊಸ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ ಮಾಡಿದೆ. ಇಂದು ಒಟ್ಟು 3.63 ಲಕ್ಷ ಕೋಟಿ ಷೇರು ಖರೀದಿಗೆ ಬಿಡ್ ಬಂದಿದೆ. ಅದಾನಿ ಕಂಪನಿ ಆರಂಭದಲ್ಲಿ ಒಟ್ಟು 6.47 ಕೋಟಿ ಷೇರುಗಳನ್ನು ಬಿಡುಗಡೆ ಮಾಡಲು ಮುಂದಾಗಿತ್ತು. ಆದರೆ ಕೊನೆಯಲ್ಲಿ ಬದಲಾವಣೆ ಮಾಡಿ ಪ್ರಸ್ತುತ ಮಾರುಕಟ್ಟೆಗೆ 4.55 ಕೋಟಿ ಷೇರುಗಳನ್ನು ಮಾತ್ರ ಬಿಡುಗಡೆ ಮಾಡಿದೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಹೋಗಿದ್ದ ʼGo First’ಗೆ 10 ಲಕ್ಷ ದಂಡ
ಎಷ್ಟು ಇಳಿಕೆ?
ಅದಾನಿ ಪೋರ್ಟ್ ಒಂದು ಷೇರಿನ ಬೆಲೆ 699 ರೂ. ನಿಂದ 604 ರೂ.ಗೆ (-108 ರೂ.) ಇಳಿದರೆ ಅದಾನಿ ಎಂಟರ್‌ಪ್ರೈಸ್ 3,335 ರೂ. ನಿಂದ 2,768.50 (-620 ರೂ.) ಇಳಿದಿದೆ. ಅದಾನಿ ಟೋಟಲ್ ಗ್ಯಾಸ್ 3,477 ರೂ. ನಿಂದ 2,928 ರೂ.(-732 ರೂ.), ಅದಾನಿ ಟ್ರಾನ್ಸ್‌ಮಿಷನ್ ಲಿಮಿಟೆಡ್ 2,406 ರೂ. ನಿಂದ 2,014 ರೂ.(503.20 ರೂ.) ಇಳಿಕೆಯಾಗಿದೆ.
ಅದಾನಿ ಗ್ರೀನ್ ಎನರ್ಜಿ 1,780 ರೂ. ನಿಂದ 1,486 ರೂ.(-371 ರೂ.), ಎಸಿಸಿ ಸಿಮೆಂಟ್ಸ್ 2,176 ರೂ. ನಿಂದ 1,899 ರೂ.(-265 ರೂ.), ಅಂಬುಜಾ ಸಿಮೆಂಟ್ 457 ರೂ. ನಿಂದ 383 ರೂ.(-76 ರೂ.) ಇಳಿದಿದೆ.
ಒಟ್ಟು ಮೌಲ್ಯದಲ್ಲಿ ಎಷ್ಟು ಇಳಿಕೆ?
ಅದಾನಿ ಎಂಟರ್‌ಪ್ರೈಸ್ 63 ಸಾವಿರ ಕೋಟಿ ರೂ., ಅದಾನಿ ಪೋರ್ಟ್ 41 ಸಾವಿರ ಕೋಟಿ ರೂ., ಅದಾನಿ ವಿಲ್ಮರ್ 7 ಸಾವಿರ ಕೋಟಿ, ಅದಾನಿ ಪವರ್ 10,300 ಕೋಟಿ ರೂ., ಅಂಬುಜಾ ಸಿಮೆಂಟ್ 31 ಸಾವಿರ ರೂ., ಎಸಿಸಿ 11,200 ಕೋಟಿ ರೂ., ಅದಾನಿ ಟ್ರಾನ್ಸ್‌ಮಿಷನ್ 83 ಸಾವಿರ ಕೋಟಿ ರೂ., ಅದಾನಿ ಟೋಟಲ್ 1.06 ಲಕ್ಷ ಕೋಟಿ ರೂ., ಅದಾನಿ ಗ್ರೀನ್ 68 ಸಾವಿರ ರೂ., ಎನ್‌ಡಿಟಿವಿ ಕಂಪನಿ 1,800 ಕೋಟಿ ರೂ. ಮಾರುಕಟ್ಟೆ ಮೌಲ್ಯ ಇಳಿದಿದೆ..
ಹಿಂಡೆನ್‍ಬರ್ಗ್ ವರದಿಯಲ್ಲಿ ಏನಿತ್ತು?
ಎರಡು ವರ್ಷಗಳ ತನಿಖೆಯ ನಂತರ ಹಿಂಡೆನ್ಬರ್ಗ್ (Hindenburg Research) ವರದಿ ಪ್ರಕಟವಾಗಿದೆ. ದಶಕಗಳ ಅವಧಿಯ ವ್ಯವಹಾರದಲ್ಲಿ ಅದಾನಿ ಸಮೂಹ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆ ಎಸಗಿದೆ ಎಂದು ಆರೋಪಿಸಿದೆ.
ಅದಾನಿ ಗ್ರೂಪ್ನ ಮಾಜಿ ಹಿರಿಯ ಕಾರ್ಯನಿರ್ವಾಹಕರು ಸೇರಿದಂತೆ ಹಲವಾರು ಜನರನ್ನು ಸಂಶೋಧನೆಗಾಗಿ ಸಂದರ್ಶಿಸಲಾಗಿದೆ. ಸಾವಿರಾರು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಹನ್ನೆರಡು ವಿವಿಧ ರಾಷ್ಟ್ರಗಳಲ್ಲಿ ಅದಾನಿ ಕಂಪನಿಗಳನ್ನು ವೀಕ್ಷಿಸಲಾಗಿದೆ ಎಂದು ಹೇಳಿದೆ. ಅದಾನಿ ಗ್ರೂಪ್ ಭಾರೀ ಸಾಲ ಮಾಡಿದೆ. ತಮ್ಮ ಸಾಲಗಳಿಗೆ ಷೇರುಗಳನ್ನೇ ಒತ್ತೆ ಇಡುತ್ತಿದೆ. ಇದರಿಂದಾಗಿ ಸಮೂಹದ ಆರ್ಥಿಕ ಸ್ಥಿತಿ ಅಪಾಯದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅದಾನಿ ಲೀಗಲ್ ಗ್ರೂಪ್ ಮುಖಸ್ಥ ಜತಿನ್ ಜಲುಂಧ್ವಾಲಾ, ನಾವು ಪರಿಹಾರಕ್ಕಾಗಿ ಹಿಂಡೆನ್ ಬರ್ಗ್ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ. ಅಮೆರಿಕ ಹಾಗೂ ಭಾರತೀಯ ಕಾನೂನುಗಳ ಅಡಿ ಸಂಬಂಧಿತ ನಿಬಂಧನೆಗಳನ್ನ ಮೌಲ್ಯಮಾಪನ ಮಾಡುತ್ತಿದ್ದೇವೆ. ಮುಂದುವರಿದ ಸಾರ್ವಜನಿಕ ಕೊಡುಗೆ(FPO) ಪ್ರಕ್ರಿಯೆಯನ್ನು ಹಾಳು ಮಾಡುವ ದುರುದ್ದೇಶಪೂರಿತ ಪ್ರಯತ್ನ. ವರದಿಯನ್ನು ಪ್ರಕಟಿಸುವ ಮೊದಲು ಹಿಂಡೆನ್‌ಬರ್ಗ್ ರಿಸರ್ಚ್ ನಮ್ಮನ್ನು ಸಂಪರ್ಕಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ನಮ್ಮ ಸಮೂಹ ಎಲ್ಲಾ ಕಾನೂನುಗಳನ್ನು ಪಾಲಿಸುತ್ತದೆ ಎಂದು ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮುಂಬೈ: ಲೆಕ್ಕಪತ್ರ ವಂಚನೆ ಮತ್ತು ಸ್ಟಾಕ್ ಮ್ಯಾನಿಪ್ಯುಲೇಷನ್ ಮಾಡಿದೆ ಎಂಬ ವಿದೇಶಿ ಸಂಸ್ಥೆಯ ವರದಿ ಪ್ರಕಟವಾದ ಬೆನ್ನಲ್ಲೇ ಅದಾನಿ ಸಮೂಹದ (Adani Groups) ಕಂಪನಿಗಳ ಷೇರುಗಳ (Share) ಬೆಲೆ ಭಾರೀ ಇಳಿಕೆ ಕಂಡಿದೆ.
ಅಮೆರಿಕದ ಹಿಂಡೆನ್‌ಬರ್ಗ್ (Hindenburg) ರಿಸರ್ಚ್‌ನ ವರದಿಯ ನಂತರ ಇಂದು ಒಂದೇ ದಿನ ಅದಾನಿ ಸಮೂಹ ಕಂಪನಿಯ ಮೌಲ್ಯ 46 ಸಾವಿರ ಕೋಟಿ ರೂ. ಕರಗಿದೆ. ಈ ವರದಿ ಆಧಾರ ರಹಿತ ವರದಿಯಾಗಿದೆ ಎಂದು ಅದಾನಿ ಗ್ರೂಪ್ ಪ್ರತಿಕ್ರಿಯಿಸಿದೆ.
ವರದಿಯಲ್ಲಿ ಏನಿದೆ?
ಎರಡು ವರ್ಷಗಳ ತನಿಖೆಯ ನಂತರ ಹಿಂಡೆನ್ಬರ್ಗ್ ವರದಿ ಪ್ರಕಟವಾಗಿದೆ. ದಶಕಗಳ ಅವಧಿಯ ವ್ಯವಹಾರದಲ್ಲಿ ಅದಾನಿ ಸಮೂಹ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆ ಎಸಗಿದೆ ಎಂದು ಆರೋಪಿಸಿದೆ.
Today we reveal the findings of our 2-year investigation, presenting evidence that the INR 17.8 trillion (U.S. $218 billion) Indian conglomerate Adani Group has engaged in a brazen stock manipulation and accounting fraud scheme over the course of decades. (2/x)
ಅದಾನಿ ಗ್ರೂಪ್ನ ಮಾಜಿ ಹಿರಿಯ ಕಾರ್ಯನಿರ್ವಾಹಕರು ಸೇರಿದಂತೆ ಹಲವಾರು ಜನರನ್ನು ಸಂಶೋಧನೆಗಾಗಿ ಸಂದರ್ಶಿಸಲಾಗಿದೆ. ಸಾವಿರಾರು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಹನ್ನೆರಡು ವಿವಿಧ ರಾಷ್ಟ್ರಗಳಲ್ಲಿ ಅದಾನಿ ಕಂಪನಿಗಳನ್ನು ವೀಕ್ಷಿಸಲಾಗಿದೆ ಎಂದು ಹೇಳಿದೆ.
ಅದಾನಿ ಗ್ರೂಪ್ ಭಾರೀ ಸಾಲ ಮಾಡಿದೆ. ತಮ್ಮ ಸಾಲಗಳಿಗೆ ಷೇರುಗಳನ್ನೇ ಒತ್ತೆ ಇಡುತ್ತಿದೆ. ಇದರಿಂದಾಗಿ ಸಮೂಹದ ಆರ್ಥಿಕ ಸ್ಥಿತಿ ಅಪಾಯದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಷೇರು ಬೆಲೆ ಕುಸಿತ:
ಬುಧವಾರದ ವಹಿವಾಟಿನಲ್ಲಿ ಅದಾನಿ ಟೋಟಲ್ ಗ್ಯಾಸ್, ಅದಾನಿ ಎಂಟರ್‌ಪ್ರೈಸಸ್, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ, ಅದಾನಿ ಪವರ್ ಮತ್ತು ಅದಾನಿ ವಿಲ್ಮಾರ್ ಶೇರುಗಳು ಮೌಲ್ಯ ಶೇ.1-4ರಷ್ಟು ಕುಸಿತ ಕಂಡಿವೆ. ಇದನ್ನೂ ಓದಿ: Womens IPL: ದಾಖಲೆಯ 4,669 ಕೋಟಿ ರೂ.ಗೆ ಮಹಿಳಾ ಐಪಿಎಲ್‍ನ 5 ತಂಡಗಳು ಹರಾಜು
ಅದಾನಿ ಗ್ರೂಪ್ ಪ್ರತಿಕ್ರಿಯೆ ಏನು?
ನಮ್ಮ ಸಂಸ್ಥೆಯ ವಿರುದ್ಧ ಪ್ರಕಟಿಸಿದ ವರದಿ ನಮಗೆ ಆಘಾತ ತಂದಿದೆ. ಭಾರತದ ಅತ್ಯುನ್ನತ ನ್ಯಾಯಾಲಯಗಳಿಂದ ಪರೀಕ್ಷಿಸಲ್ಪಟ್ಟ ಮತ್ತು ತಿರಸ್ಕರಿಸಲ್ಪಟ್ಟ ಹಳೆಯ, ಆಧಾರರಹಿತ ಆರೋಪಗಳುನ್ನು ಆಧಾರಿಸಿ ವರದಿ ಮಾಡಲಾಗಿದೆ.
ಹಣಕಾಸು ತಜ್ಞರು ಮತ್ತು ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಸಿದ್ಧಪಡಿಸಿದ ವಿವರವಾದ ವಿಶ್ಲೇಷಣೆ ಮತ್ತು ವರದಿಗಳ ಆಧಾರದ ಮೇಲೆ ಹೂಡಿಕೆದಾರ ಸಮುದಾಯವು ಯಾವಾಗಲೂ ಅದಾನಿ ಗ್ರೂಪ್‌ನಲ್ಲಿ ನಂಬಿಕೆಯನ್ನು ಇರಿಸಿದೆ. ನಮ್ಮ ತಿಳುವಳಿಕೆಯುಳ್ಳ ಮತ್ತು ಜ್ಞಾನವುಳ್ಳ ಹೂಡಿಕೆದಾರರು ಪಟ್ಟಭದ್ರ ಹಿತಾಸಕ್ತಿಗಳನ್ನು ಹೊಂದಿರುವ ಏಕಪಕ್ಷೀಯ ಆಧಾರರಹಿತ ವರದಿಗಳಿಂದ ಪ್ರಭಾವಿತರಾಗುವುದಿಲ್ಲ.
ಮುಂದುವರಿದ ಸಾರ್ವಜನಿಕ ಕೊಡುಗೆ(FPO) ಅಥವಾ ಹೊಸದಾಗಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ ಪ್ರಕ್ರಿಯೆಯನ್ನು ಹಾಳು ಮಾಡುವ ದುರುದ್ದೇಶಪೂರಿತ ಪ್ರಯತ್ನ. ವರದಿಯನ್ನು ಪ್ರಕಟಿಸುವ ಮೊದಲು ಹಿಂಡೆನ್‌ಬರ್ಗ್ ರಿಸರ್ಚ್ ನಮ್ಮನ್ನು ಸಂಪರ್ಕಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ನಮ್ಮ ಸಮೂಹ ಎಲ್ಲಾ ಕಾನೂನುಗಳನ್ನು ಪಾಲಿಸುತ್ತದೆ ಎಂದು ಹೇಳಿದೆ.
Live Tv
[brid partner=56869869 player=32851 video=960834 autoplay=true]
ಮುಂಬೈ: 2008ರ ನವೆಂಬರ್ 26ರಂದು ಮುಂಬೈನ ತಾಜ್ ಹೋಟೆಲ್‌ನಲ್ಲಿ (Taj Hotel) ನಡೆದ ಉಗ್ರರ ದಾಳಿ (Terrorist Attack) ವೇಳೆ ನಾನು ಕೂಡಾ ಅಲ್ಲೇ ಇದ್ದೆ. ನನ್ನನ್ನು ಹೋಟೆಲ್ ಸಿಬ್ಬಂದಿ ಸುರಕ್ಷಿತವಾಗಿ ಹಿಂದಿನ ಬಾಗಿಲಿನಿಂದ ಹೊರಗೆ ಕರೆದುಕೊಂಡು ಹೋಗದಿದ್ದರೆ ಉಗ್ರರ ಗುಂಡಿಗೆ ನಾನೂ ಬಲಿಯಾಗುತ್ತಿದ್ದೆ ಎಂದು ಏಷ್ಯಾದ ನಂಬರ್ 1, ವಿಶ್ವದ ಮೂರನೇ ಶ್ರೀಮಂತ, ಕೈಗಾರಿಕೋದ್ಯಮಿ ಗೌತಮ್ ಅದಾನಿ (Gautam Adani) ಅವರು ಸ್ಫೋಟಕ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ 14 ವರ್ಷ ಹಿಂದಿನ ಕಹಿ ಘಟನೆಯನ್ನು (Mumbai Attack) ಮೆಲುಕು ಹಾಕಿದ ಅದಾನಿ ಅಲ್ಲಿಂದ ಹೇಗೆ ಪಾರಾದರು ಎಂಬ ವಿಚಾರವನ್ನು ಬಹಿರಂಗಡಿಸಿದ್ದಾರೆ. ತಾಜ್ ಹೋಟೆಲ್ ಮೇಲೆ 10 ಗಂಟೆಗಳ ಕಾಲ ಭೀಕರ ದಾಳಿ ನಡೆದರೂ ತಾವು ಸುರಕ್ಷಿತವಾಗಿ ಅಲ್ಲಿಂದ ಹೊರ ಬಂದಿರುವುದು ಮರು ಜನ್ಮವೇ ಸರಿ ಎಂದು ಬಣ್ಣಿಸಿದ್ದಾರೆ.
ವಿಶೇಷ ಟಿವಿ ಸಂದರ್ಶನದಲ್ಲಿ ಮಾತನಾಡಿದ ಅದಾನಿ, ದುಬೈ ಮೂಲದ ನನ್ನ ಸ್ನೇಹಿತರೊಂದಿಗೆ ತಾಜ್ ಹೋಟೆಲ್‌ನಲ್ಲಿ ವ್ಯಾಪಾರದ ಬಗೆಗಿನ ಸಭೆ ನಡೆಸುತ್ತಿದ್ದೆ. ಈ ವೇಳೆಯೇ ಹೋಟೆಲ್ ದಾಳಿಗೊಳಗಾಗಿತ್ತು. ಹೋಟೆಲ್ ಮೇಲೆ ದಾಳಿಯಾಗಿದ್ದಾಗ ನಾನು ಕೂಡಾ ಭಯೋತ್ಪಾದಕರನ್ನು ನೋಡಿದ್ದಾಗಿ ತಿಳಿಸಿದ್ದಾರೆ.
ಅಂದು ನಾನು ದುಬೈನಿಂದ ಮುಂಬೈಗೆ ಬಂದಿದ್ದು, ಸ್ನೇಹಿತರೊಂದಿಗೆ ಮೀಟಿಂಗ್ ಅನ್ನು ಮುಗಿಸಿದ್ದೆ. ಬಿಲ್ ಪಾವತಿಸಿದ ಬಳಿಕ ನಾನು ಹೋಟೆಲ್‌ನಿಂದ ನಿರ್ಗಮಿಸಲು ಹೊರಟಿದ್ದೆ. ಆದರೆ ನನ್ನ ಕೆಲವು ಸ್ನೇಹಿತರು ಮತ್ತೊಂದು ಸುತ್ತಿನ ಸಭೆ ನಡೆಸಲು ನನ್ನನ್ನು ಕೇಳಿದ್ದರು. ಹೀಗಾಗಿ ನಾನು ಹೋಟೆಲ್‌ನಲ್ಲಿ ಮತ್ತೆ ಉಳಿದುಕೊಳ್ಳಲು ನಿರ್ಧರಿಸಿದ್ದೆ.
ಒಂದು ಲೋಟ ಕಾಫಿ ಕುಡಿದು 2ನೇ ಸುತ್ತಿನ ಸಭೆ ಪ್ರಾರಂಭಿಸಲಿದ್ದೆವು. ಅಷ್ಟರಲ್ಲಿ ಅನಿರೀಕ್ಷಿತವಾಗಿ ಹೋಟೆಲ್ ಭಯೋತ್ಪಾದಕರ ದಾಳಿಗೆ ಒಳಗಾಗಿರುವುದು ತಿಳಿದುಬಂತು. ಕೆಲವು ನಿಮಿಷಗಳ ಬಳಿಕ ಹೋಟೆಲ್ ಸಿಬ್ಬಂದಿಯೊಬ್ಬರು ನನ್ನ ಬಳಿ ಬಂದು ತಮ್ಮನ್ನು ಹಿಂಬಾಲಿಸುವಂತೆ ಹೇಳಿದರು. ನಾನು ಅದರಂತೆಯೇ ಮಾಡಿದೆ. ಅವರು ನನ್ನನ್ನು ಅಡುಗೆ ಮನೆಗೆ ಕರೆದುಕೊಂಡು ಹೋಗಿ, ಹಿಂಬದಿಯ ಬಾಗಿಲಿನಿಂದ ಹೊರ ಬರುವಂತೆ ಮಾಡಿದರು. ಇದನ್ನೂ ಓದಿ: 22 ರಾಜ್ಯಗಳಲ್ಲಿ ಬಿಸಿನೆಸ್ ಮಾಡ್ತಿದ್ದೇವೆ; ಎಲ್ಲವನ್ನೂ ಬಿಜೆಪಿ ಜೊತೆ ಮಾಡ್ತಿಲ್ಲ – ಗೌತಮ್ ಅದಾನಿ
ಅಂದು ಹೋಟೆಲ್ ಸಿಬ್ಬಂದಿ ಸಹಾಯದಿಂದ ಬದುಕುಳಿದೆ. ನಾನು ಸಭೆಯಲ್ಲಿ ಕುಳಿತುಕೊಳ್ಳದೇ ಹೋಗಿದ್ದರೆ ಎಲ್ಲರಂತೆ ನಾನೂ ಬಾಲ್ಕನಿಯಲ್ಲಿ ಓಡಾಡಬೇಕಿತ್ತೇನೋ? ಈ ವೇಳೆ ಭಯೋತ್ಪಾದಕರು ನನಗೆ ಎದುರಾಗಿ ಅವರ ದಾಳಿಗೆ ನಾನೂ ಬಲಿಯಾಗುತ್ತಿದ್ದೆನೇನೋ! ಅಂದು ನಮ್ಮ ರಕ್ಷಣೆ ಮಾಡಿದ ಹೋಟೆಲ್ ಸಿಬ್ಬಂದಿಯಂತಹವರು ಸಿಗುವುದೇ ಬಹು ಅಪರೂಪ. ನಿಜವಾಗಿಯೂ ತಾಜ್ ಹೋಟೆಲ್‌ನ ಸಿಬ್ಬಂದಿ ಅತ್ಯಂತ ಒಳ್ಳೆಯವರು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
2008ರ ನವೆಂಬರ್ 26 ರಂದು 10 ಪಾಕಿಸ್ತಾನಿ ಭಯೋತ್ಪಾದಕರು ಸಮುದ್ರ ಮಾರ್ಗವಾಗಿ ಮುಂಬೈ ಆಗಮಿಸಿ ಪ್ರಸಿದ್ಧ ಪಂಚತಾರಾ ತಾಜ್ ಹೋಟೆಲ್ ಮೇಲೆ ದಾಳಿ ನಡೆಸಿದ್ದರು. ಘಟನೆಯಲ್ಲಿ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರು ಸಾವನ್ನಪ್ಪಿದ್ದರು. ಹಲವಾರು ಗಾಯಗೊಂಡಿದ್ದರು. ಕೋಟ್ಯಂತರ ಮೌಲ್ಯದ ಆಸ್ತಿಯನ್ನೂ ಉಗ್ರರು ಹಾನಿಗೊಳಿಸಿದ್ದರು. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ವಿಸ್ಫೋಟಕ ಆಟ – ವಿಶ್ವ ದಾಖಲೆ ಬರೆದ SKY
Live Tv
[brid partner=56869869 player=32851 video=960834 autoplay=true]
ನವದೆಹಲಿ: 22 ರಾಜ್ಯಗಳಲ್ಲಿ ಬಿಸಿನೆಸ್ (Business) ಮಾಡುತ್ತಿದ್ದೇವೆ. ಎಲ್ಲವನ್ನೂ ಬಿಜೆಪಿ (BJP) ಜೊತೆ ಮಾಡುತ್ತಿಲ್ಲ ಎಂದು ಕೈಗಾರಿಕೋದ್ಯಮಿ ಗೌತಮ್ ಅದಾನಿ (Gautam Adani) ತಿಳಿಸಿದ್ದಾರೆ.
ನಾವು ದೇಶದ ಪ್ರತಿ ರಾಜ್ಯದಲ್ಲೂ ಗರಿಷ್ಠ ಹೂಡಿಕೆ ಮಾಡಲು ಬಯಸುತ್ತೇವೆ. ಅದಾನಿ ಗುಂಪು ಇಂದು 22 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ನಿಜವಾಗಿಯೂ ಸಂತೋಷವಾಗಿದೆ. ಈ ಎಲ್ಲಾ ರಾಜ್ಯಗಳು ಬಿಜೆಪಿ ಆಡಳಿತದಲ್ಲಿಲ್ಲ. ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ. ಎಡಪಕ್ಷಗಳ ಆಡಳಿತವಿರುವ ಕೇರಳ, ಮಮತಾ ದೀದಿಯವರ ಪಶ್ಚಿಮ ಬಂಗಾಳ, ನವೀನ್ ಪಟ್ನಾಯಕ್ ಅವರ ಒಡಿಶಾ, ಜಗನ್‌ಮೋಹನ್ ರೆಡ್ಡಿ ಅವರ ಆಂಧ್ರಪ್ರದೇಶ, ಕೆಸಿಆರ್ ರಾಜ್ಯದಲ್ಲಿಯೂ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 13 ವರ್ಷಗಳ ಬಳಿಕ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಕರ್ನಾಟಕದ ಟ್ಯಾಬ್ಲೋಗಿಲ್ಲ ಅವಕಾಶ
ಹೂಡಿಕೆ ನಮ್ಮ ಸಾಮಾನ್ಯ ಕಾರ್ಯಕ್ರಮವಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಆಹ್ವಾನದ ಮೇರೆಗೆ ನಾನು ರಾಜಸ್ಥಾನ ಹೂಡಿಕೆದಾರರ ಶೃಂಗಸಭೆಗೆ ಹೋಗಿದ್ದೆ. ನಂತರ ರಾಹುಲ್ ಗಾಂಧಿ ಅವರು ಕೂಡ ರಾಜಸ್ಥಾನದಲ್ಲಿ ನಮ್ಮ ಹೂಡಿಕೆಯನ್ನು ಶ್ಲಾಘಿಸಿದ್ದಾರೆ. ರಾಹುಲ್ ಅವರ ನೀತಿಗಳು ಅಭಿವೃದ್ಧಿ ವಿರೋಧಿ ಅಲ್ಲ ಎಂದು ನನಗೆ ತಿಳಿದಿದೆ. ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ 68,000 ಕೋಟಿ ರೂ. ಹೂಡಿಕೆ ಮಾಡಲಾಗಿದೆ ಎಂದು ಮಾತನಾಡಿದ್ದಾರೆ.