Tag: ಗೌತಮಿ

  • ಸಂಬಂಧಗಳನ್ನೆಲ್ಲ ಸೂಟ್‌ಕೇಸ್‌ಗೆ ಹಾಕಿ ತುಂಬಿಡಿ: ಮಂಜು, ಗೌತಮಿಗೆ ಕಿಚ್ಚನ ವಾರ್ನಿಂಗ್

    ಸಂಬಂಧಗಳನ್ನೆಲ್ಲ ಸೂಟ್‌ಕೇಸ್‌ಗೆ ಹಾಕಿ ತುಂಬಿಡಿ: ಮಂಜು, ಗೌತಮಿಗೆ ಕಿಚ್ಚನ ವಾರ್ನಿಂಗ್

    ಬಿಗ್ ಬಾಸ್ ಮನೆಯ (Bigg Boss Kannada 11) ಆಟ ಇದೀಗ 62 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಇನ್ನೂ ಈ ವಾರ ದೊಡ್ಮನೆಯ ಮಹಾರಾಜನಾಗಿ ಆಳಿದ ಉಗ್ರಂ ಮಂಜು ಅವರು ಗೌತಮಿಗೆ ಕಟುಕ ರಾಜನಾಗಿರಲಿಲ್ಲ. ಈ ವಿಷ್ಯದಲ್ಲಿ ಪಕ್ಷಪಾತವಾಗಿ ಮಂಜು ಆಡಿದ್ದರು. ಅದಕ್ಕೆ ಸುದೀಪ್ (Sudeep) ವಾರಾಂತ್ಯ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಂಬಂಧಗಳನ್ನೆಲ್ಲ ಸೂಟ್‌ಕೇಸ್‌ಗೆ ಹಾಕಿ ತುಂಬಿಡಿ, ಬಿಗ್ ಬಾಸ್‌ನಲ್ಲಿ ಆಟ ಆಡಿ ಎಂದು ಮಂಜು ಹಾಗೂ ಗೌತಮಿಗೆ (Gouthami) ಸುದೀಪ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:BBK 11: ಬಿಗ್ ಬಾಸ್‌ನಿಂದ ಐಶ್ವರ್ಯಾ ಸಿಂಧೋಗಿ ಔಟ್?

    ಗೆಳತಿ ಮಂಜು ಅವರು ಪಕ್ಷಪಾತವಾಗಿ ಆಟ ಆಡಿದ್ದರು. ಇದು ಮನೆಯ ಉಳಿದ ಸದಸ್ಯರ ಮೇಲೂ ಪರಿಣಾಮ ಬಿದ್ದಿತ್ತು. ಇದರ ಬಗ್ಗೆ ಮನೆ ಮಂದಿಗೂ ಬೇಸರವಿದೆ. ಈ ಕುರಿತು ಸುದೀಪ್ ಅವರು ಪರೋಕ್ಷವಾಗಿಯೇ ಮಾತನಾಡಿದರು. ಬಿಗ್ ಬಾಸ್‌ಗೆ ಇಲ್ಲಿ ಯಾರೂ ಸಂಬಂಧ ಬೆಳೆಸಲು ಬಂದಿಲ್ಲ. ಈ ರಾಜನ ಆಟ ಮೊದಲಿಗೆ ಚೆನ್ನಾಗಿಯೇ ಟೇಕ್ ಓವರ್ ಆಗಿತ್ತು. ಆಮೇಲೆ ಏನಾಯ್ತು ಮುಂಜು ಅವರೆ? ಇಲ್ಲಿ ಪಾತ್ರವನ್ನೂ, ಸಂಬಂಧವನ್ನೂ ನಿಭಾಯಿಸುವಾಗ, ಈ ರೀತಿ ಆಗತ್ತದೆ. ಈ ಸಂಬಂಧಗಳನ್ನೆಲ್ಲ ಸೂಟ್‌ಕೇಸ್‌ಗೆ ಹಾಕಿ ತುಂಬಿ ಇಡಿ. ಸಂಬಂಧ ಹೊರಗಡೆ ಬೆಳೆಸಿ, ಸದ್ಯಕ್ಕೆ ಬಿಗ್ ಬಾಸ್‌ನಲ್ಲಿ ಆಟ ಆಡಿ. ವೀಕ್ಷಕರಿಗೆ ಇದೊಂದು ಉಪಕಾರ ಮಾಡಿ ಎಂದು ಗೌತಮಿ ಮತ್ತು ಮಂಜುಗೆ (Ugramm Manju) ಸುದೀಪ್ ಎಚ್ಚರಿಕೆ ನೀಡಿದ್ದಾರೆ.

    ಒಂದು ಸಲಹೆ ಏನೆಂದರೆ, ನೀವು ಅಲ್ಲಿ ಸ್ನೇಹಿತರಾಗಿಯೇ ಇರಿ. ಆದರೆ ಟಾಸ್ಕ್ ಅಂತ ಬಂದಾಗ, ನಿಮ್ಮ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳು ಮನೆಯಲ್ಲಿ ಬಂದಿವೆ. ಆದರೆ ನಾಳೆ ನೀವಿಬ್ಬರೂ ಜಗಳ ಆಡಿ ಅಂತಲ್ಲ. ಟಾಸ್ಕ್ ಅಂತ ಬಂದಾಗ ಸರಿಯಾಗಿ ಗಮನ ವಹಿಸಿ. ಆಗಿಲ್ಲ ಅಂದರೆ ಬಿಗ್ ಬಾಸ್ ಹತ್ತಿರ ಹೇಳಿ. ಉಸ್ತುವಾರಿ ವಹಿಸಿಕೊಳ್ಳಬೇಡಿ ಎಂದಿದ್ದಾರೆ ಸುದೀಪ್.

    ಇನ್ನೂ ಯುವರಾಣಿ ಮೋಕ್ಷಿತಾ ಕೆಲವು ನಿಯಮಗಳನ್ನು ಮಾಡಿರುತ್ತಾರೆ. ಆ ನಿಯಮಕ್ಕೆ ತಕ್ಕಂತೆ ಎಲ್ಲರೂ ನಡೆದುಕೊಳ್ಳಬೇಕು. ಆದರೆ ಗೌತಮಿ ಮಾತ್ರ ಫಾಲೋ ಮಾಡಲ್ಲ ಎಂದು ಹೇಳುತ್ತಾರೆ. ಸುರೇಶ್ ಅವರು ಆಟದ ನಿಯಮವನ್ನು ಹೇಳಿದರೂ ಸಹ ಗೌತಮಿ ಮಾತ್ರ ಇದಕ್ಕೆಲ್ಲ ಒಪ್ಪಿಕೊಂಡಿಲ್ಲ. ಯುವರಾಣಿ ಕಂಡಾಗೆಲ್ಲ ನೀವು ತಲೆ ಬಾಗಿ ನಮಸ್ಕಾರ ಮಾಡಬೇಕಂತೆ ಎಂದು ಸುರೇಶ್ ಅವರು ಹೇಳುತ್ತಾರೆ. ಆದರೆ ಗೌತಮಿ ಇಲ್ಲ ನಾನು ಹಾಗೆಲ್ಲ ತಲೆ ಬಾಗೋದಿಲ್ಲ. ಯಾವತ್ತು ನಾನು ಅವರಿಗೆ ತಲೆ ಬಾಗಿದರೆ, ಅವತ್ತು ನಾನು ಅವರು ಹೇಳಿದ್ದನ್ನು ಕೇಳಿದೆ ಎಂದಾಗುತ್ತದೆ. ಆ ಕಾರಣಕ್ಕಾಗಿ ನಾನು ತಲೆ ಬಾಗೋದಿಲ್ಲ ಎಂದು ಮಂಜುಗೆ ಹೇಳಿರುತ್ತಾರೆ. ರಾಜನಾಗಿ ಮಂಜು ಅವರು ಗೌತಮಿಗೆ ಮೋಕ್ಷಿತಾರ ಆಜ್ಞೆ ಪಾಲಿಸಿ ಎಂದು ಹೇಳದೇ ಬೆಂಬಲ ನೀಡಿರುತ್ತಾರೆ. ಅದಕ್ಕಾಗಿ ಸುದೀಪ್ ಇಬ್ಬರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ.

  • BBK 11: ಹನುಮಂತನ ಬಟ್ಟೆ ಧರಿಸಿ ಕ್ವಾಟ್ಲೆ ಕೊಟ್ಟ ಗೌತಮಿ

    BBK 11: ಹನುಮಂತನ ಬಟ್ಟೆ ಧರಿಸಿ ಕ್ವಾಟ್ಲೆ ಕೊಟ್ಟ ಗೌತಮಿ

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ (Bigg Boss Kannada 11) 7ನೇ ವಾರಕ್ಕೆ ಕಾಲಿಟ್ಟಿದೆ. ಈಗ ದೊಡ್ಮನೆಯಲ್ಲಿ ಸ್ಪರ್ಧಿಗಳನ್ನು ಜೋಡಿಗಳಾಗಿ ಪರಿವರ್ತನೆ ಮಾಡಿದ್ದಾರೆ. ಆದರೆ ಮನೆಯ ಯಾವ ಮೂಲೆಗೂ ಹೋದರು ಸ್ಪರ್ಧಿಗಳು ಪರಸ್ಪರ ಅಂಟಿಕೊಂಡು ಓಡಾಡಬೇಕು. ಮಿಸ್ ಆಗಿ ಜೋಡಿಗಳನ್ನು ಬಿಟ್ಟು ಹಾಗೇ ಹೋಗಿದ್ದೇ ಆದರೆ ‘ಬಿಗ್ ಬಾಸ್’ ಕಡೆಯಿಂದ ಬಿಗ್ ಶಿಕ್ಷೆ ಸಿಗೋದು ಗ್ಯಾರಂಟಿ. ಇದನ್ನೂ ಓದಿ:‘ಕುಬೇರ’ ಸಿನಿಮಾದಲ್ಲಿ ನಾಗಾರ್ಜುನ ಅಕ್ಕಿನೇನಿ ಹೊಸ ಪೋಸ್ಟರ್‌ ಔಟ್‌

    ಇನ್ನೂ ಮನೆಯಲ್ಲಿರೋ ಸ್ಪರ್ಧಿಗಳಿಗೆ ಬಿಗ್ ಬಾಸ್, ತಾವೇ ಜೋಡಿಗಳನ್ನು ಆಯ್ಕೆ ಮಾಡಿದ್ದಾರೆ. ಹಳ್ಳಿ ಹೈದ ಹನುಮಂತಗೆ ಗೌತಮಿ, ಉಗ್ರಂ ಮಂಜು ಜೊತೆ ಭವ್ಯಾ ಗೌಡ, ಶಿಶಿರ್ ಮತ್ತು ಚೈತ್ರಾ ಕುಂದಾಪುರ, ಧರ್ಮ- ಐಶ್ವರ್ಯಾ ಸಿಂಧೋಗಿ, ಅನುಷಾ ರೈ- ಗೋಲ್ಡ್ ಸುರೇಶ್ ಹಾಗೂ ಧನರಾಜ್- ಮೋಕ್ಷಿತಾ ಪೈ ಅವರನ್ನು ಜೋಡಿಗಳನ್ನಾಗಿ ಮಾಡಿ ಈ ವಾರದ ಟಾಸ್ಕ್ ನೀಡುತ್ತಿದ್ದಾರೆ.

    ಒಂದೊಂದು ಜೋಡಿಯು ಇನ್ಮುಂದೆ ಯಾವ ರೀತಿ ಮನರಂಜನೆ ನೀಡುತ್ತಾರೆ ಅಂತ ವೀಕ್ಷಕರು ಕಾಯುತ್ತಿದ್ದಾರೆ. ಇಂದಿನ ಸಂಚಿಕೆಯಲ್ಲಿ ಗೌತಮಿ ಜಾಧವ್ (Gouthami Jadav) ಅವರು ಹನುಮಂತನಾಗಿ (Hanumantha) ಚೇಂಚ್ ಆಗಿದ್ದಾರೆ. ಹನುಮಂತನಂತೆಯೇ ನಟಿ ಗೆಟಪ್ ಬದಲಿಸಿದ್ದಾರೆ. ಹನುಮಂತ ಧರಿಸುವ ಹಾಗೇ ವೇಷ ಭೂಷಣ ತೊಟ್ಟು ಉತ್ತರ ಕರ್ನಾಟಕದ ಶೈಲಿಯಲ್ಲಿ ಮಾತಾಡಿದ್ದಾರೆ. ಬಳಿಕ ಮನೆಮಂದಿಗೆ ಗೌತಮಿ ಕ್ವಾಟ್ಲೆ ಕೊಟ್ಟಿದ್ದಾರೆ. ಗೌತಮಿ ನಯಾ ಲುಕ್ ನೋಡಿ ಮನೆ ಮಂದಿ ಫುಲ್ ಶಾಕ್ ಆಗಿದ್ದಾರೆ.

    ಇನ್ನೂ ಕಳೆದ ವಾರ ಎಲಿಮಿನೇಷನ್ ಪ್ರತಿಕ್ರಿಯೆ ನಡೆದಿಲ್ಲ. ಭವ್ಯಾರನ್ನು ಪ್ರ್ಯಾಂಕ್ ಎಲಿಮಿನೇಷನ್ ಮಾಡಿ `ಬಿಗ್ ಬಾಸ್’ ಉಲ್ಟಾ ಹೊಡೆದಿದ್ದರು. ಈ ವಾರ ಡಬಲ್ ಎಲಿಮಿನೇಷನ್ ನಡೆಯುವ ಸಾಧ್ಯತೆ ಇದೆ.

  • ನನಗೆ 25 ಕೋಟಿ ರೂ. ಮೋಸವಾಗಿದೆ: ಕಮಲ್ ಹಾಸನ್ ಮಾಜಿ ಪ್ರೇಯಸಿ, ನಟಿ ಗೌತಮಿ ಅಳಲು

    ನನಗೆ 25 ಕೋಟಿ ರೂ. ಮೋಸವಾಗಿದೆ: ಕಮಲ್ ಹಾಸನ್ ಮಾಜಿ ಪ್ರೇಯಸಿ, ನಟಿ ಗೌತಮಿ ಅಳಲು

    ಮಿಳು (Tamil Nadu) ಸಿನಿಮಾ ರಂಗದ ಖ್ಯಾತ ನಟ ಕಮಲ್ ಹಾಸನ್ (Kamal Haasan) ಮಾಜಿ ಪ್ರೇಯಸಿ, ನಟಿ ಗೌತಮ್ (Gauthami) ತಮಗೆ ಕಂಪನಿಯೊಂದರಿಂದ ತಮಗೆ 25 ಕೋಟಿ ರೂಪಾಯಿ ಮೋಸವಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಅಳಗಪ್ಪನ್ ಕಂಪನಿಯ ಮುಖ್ಯಸ್ಥರಿಂದ ತಮಗೆ ದೋಖಾವಾಗಿದ್ದು, ತಮಗೆ ನ್ಯಾಯ ಕೊಡಿಸಬೇಕೆಂದು ಅವರು ಚೆನ್ನೈ ಸಿಟಿ ಪೊಲೀಸ್ ಕಮಿಷ್ನರ್ ಗೆ ದೂರು ಸಲ್ಲಿಸಿದ್ದಾರೆ.

    ಶ್ರೀಪರೆಂಬುದುರ್ ನಲ್ಲಿ ನಟಿ ಗೌತಮಿ ಅವರಿಗೆ ಸೇರಿದ್ದ 46 ಎಕರೆ ಜಮೀನು ಇದೆ. ಅದನ್ನು ಮಾರಾಟ ಮಾಡಲು ಅಳಗಪ್ಪನ್ ಕಂಪನಿಗೆ ಪವರ್ ಆಫ್ ಅಟಾರ್ನಿ ನೀಡಿದ್ದರಂತೆ. ಇದನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಗೌತಮಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ, ತಮ್ಮ ಕೃಷಿ ಭೂಮಿಯನ್ನು ನಾಲ್ಕು ಕೋಟಿ ರೂಪಾಯಿಗೆ ಮಾರಾಟ ಮಾಡಿದರೂ ಕಂಪನಿ ತಮಗೆ ಕೇವಲ 62 ಲಕ್ಷ ರೂಪಾಯಿಯನ್ನು ಮಾತ್ರ ನೀಡಿದೆ ಎಂದು ಅವರು ದೂರಿದ್ದಾರೆ.

    ಹಣದ ಮೋಸ (Cheating) ಮಾಡುವುದರ ಜೊತೆಗೆ ತಮ್ಮ ಸಹಿ ಕೂಡ ಫೋರ್ಜರಿ ಮಾಡಲಾಗಿದೆ ಎಂದು ಆರೋಪಿಸಿರುವ ಗೌತಮಿ, ತಮಗಾದ ಅನ್ಯಾಯವನ್ನು ಪ್ರಶ್ನಿಸಿದರೆ, ಕಂಪನಿಯವರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ತಾವು ಕಷ್ಟಪಟ್ಟು ಸಂಪಾದನೆ ಮಾಡಿರುವ ಆಸ್ತಿಯದು. ಇದೀಗ ಅನಿವಾರ್ಯ ಕಾರಣಗಳಿಂದ ಮಾರಾಟಕ್ಕೆ ಮುಂದಾಗಿದ್ದೆ. ಆದರೆ, ಈ ರೀತಿ ಮೋಸವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಲಂ ಹುಡುಗರ ಕಥೆ ಸಲಾಂ ಬೆಂಗಳೂರು

    ಸ್ಲಂ ಹುಡುಗರ ಕಥೆ ಸಲಾಂ ಬೆಂಗಳೂರು

    ಬೆಂಗಳೂರು: ಸ್ಲಂನಲ್ಲಿ ಚಿಂದಿ ಆಯುವ ಇಬ್ಬರು ಹುಡುಗರು ಹಣದ ಆಸೆಗಾಗಿ ಕೆಟ್ಟ ಕೆಲಸಗಳನ್ನು ಮಾಡಲು ಮುಂದಾಗುತ್ತಾರೆ. ಈ ಇಬ್ಬರು ಸ್ನೇಹಿತರ ಜೀವನದಲ್ಲಿ ನಡೆಯುವಂಥ ಘಟನೆಗಳನ್ನಿಟ್ಟುಕೊಂಡು ನಿರ್ದೇಶಕ ರಾಜು.ಡಿ. ಪದ್ಮಶಾಲಿ ಅವರು ಕಥಾಹಂದರ ಹೆಣೆದಿರುವ ಈ ಚಿತ್ರದ ಹೆಸರು ಸಲಾಂ ಬೆಂಗಳೂರು. ಸಂದೇಶ್ ಪೂಜಾರ್ ಹಾಗೂ ಕಿರುತೆರೆ ನಟಿ ಗೌತಮಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದಿದೆ. ಸ್ಲಂನಲ್ಲಿ ನಡೆಯುವಂಥಾ ಘಟನೆಗಳನ್ನು ಸಸ್ಸೆನ್ಸ್, ಥ್ರಿಲ್ಲರ್ ಹಾಗೂ ಹಾರರ್ ಕಥಾ ಹಂದರದ ಮೂಲಕ ಹೇಳಹೊರಟಿರುವ ಈ ಚಿತ್ರದ ಪ್ರಥಮ ಪ್ರತಿ ಹೊರಬಂದಿದೆ.

    ಆರ್.ಡಿ.ಪಿ. ಮೂವೀ ಮೇಕರ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಎಸ್.ನಾಗು ಸಂಗೀತ, ಮನೋಹರ್ ಛಾಯಾಗ್ರಹಣ, ಆನಂದ್ ಪ್ರಸಾದ್ ಸಾಹಿತ್ಯ, ರಾಜು.ಡಿ ಸಂಭಾಷಣೆ, ರಘು ಸಂಕಲನ, ರಾಹುಲ್ ಸುಧಾಂಶ್, ಮೆಂಡ್ರು ಬ್ರದರ್ಸ್ ಸಹ ನಿರ್ಮಾಪಕರು, ನಾಗರಾಜ್ ನೃತ್ಯ ನಿರ್ದೇಶನ, ಅನಿಲ್ ಕುಮಾರ್ ಗ್ರಾಫಿಕ್ಸ್ ಇದೆ. ಸಂದೇಶ್ ಪೂಜಾರ್, ಗೌತಮಿ, ಧರಣಿ, ಅರವಿಂದ್ ರಾಜ್ ಪ್ರಭಾಕರ್, ಆಂಜನೇಯ ರೆಡ್ಡಿ, ಉಮಾ ಹೆಬ್ಬಾರ್, ಬಾಲು ಸಮರ್ಥ್, ರಾಜು ಆಡಗೋಡಿ ಮುಂತಾದವರ ತಾರಾಬಳಗವಿದೆ.