Tag: ಗೌತಮಿ

  • ‘ಅಂಕಲ್, ಆಂಟಿ ಲವ್‌ಸ್ಟೋರಿ’ ಎಂದು ಟ್ರೋಲ್ ಮಾಡಿದವರಿಗೆ ತಕ್ಕ ಉತ್ತರ ಕೊಟ್ಟ ಗೌತಮಿ

    ‘ಅಂಕಲ್, ಆಂಟಿ ಲವ್‌ಸ್ಟೋರಿ’ ಎಂದು ಟ್ರೋಲ್ ಮಾಡಿದವರಿಗೆ ತಕ್ಕ ಉತ್ತರ ಕೊಟ್ಟ ಗೌತಮಿ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟಕ್ಕೆ ತೆರೆ ಬಿದ್ದಿದೆ. ಇನ್ನೂ ಗೆಳೆತನದಿಂದ ಆಟಕ್ಕೆ ಅಡ್ಡಿಯಾಯ್ತು, ಈ ಸ್ನೇಹ ಮತ್ತೆ ಮುಂದುವರೆಯುತ್ತಾ? ಇದು ಅಂಕಲ್, ಆಂಟಿ ಲವ್‌ಸ್ಟೋರಿ ಎಂದವರಿಗೆ ಗೌತಮಿ (Gouthami Jadav) ತಿರುಗೇಟು ನೀಡಿದ್ದಾರೆ. ಉಗ್ರಂ ಮಂಜು ಜೊತೆ ಗೌತಮಿ ದಂಪತಿ ಪೋಸ್ ಕೊಟ್ಟಿರುವ ಫೋಟೋ ಶೇರ್ ಮಾಡಿ ಗಾಸಿಪ್ ಹಬ್ಬಿಸುವವರಿಗೆ ತಕ್ಕ ಉತ್ತರ ನೀಡಿದ್ದಾರೆ. ಇದನ್ನೂ ಓದಿ:ಬಿಗ್‌ ಬಾಸ್‌ ವಿನ್ನರ್‌ ಹನುಮಂತಗೆ ಹುಟ್ಟೂರಲ್ಲಿ ಅದ್ದೂರಿ ಸ್ವಾಗತ

    ‘ಬಿಗ್ ಬಾಸ್’ ಆಟದ ಶುರುವಿನಲ್ಲಿ ಗೌತಮಿ, ಮಂಜು ಹಾಗೂ ಮೋಕ್ಷಿತಾ ಮಧ್ಯೆ ಉತ್ತರ ಗೆಳೆತನವಿತ್ತು. ದಿನ ಕಳೆದಂತೆ ಮಂಜು ಹಾಗೂ ಗೌತಮಿ ಜೊತೆಗೆ ವೈಮನಸ್ಸು ಬೆಳೆದು ಮೋಕ್ಷಿತಾ ಈ ಗುಂಪಿನಿಂದ ಹೊರ ನಡೆದರು. ಮಂಜು ತಮ್ಮನ್ನು ಕುಗ್ಗಿಸುತ್ತಾರೆ ಎಂದು ಮೋಕ್ಷಿತಾ ಹೊರಬಂದರು. ಆ ನಂತರ ಗೌತಮಿ ಹಾಗೂ ಮಂಜು ಜೊತೆಯಾದರು. ಹೀಗೆ ದಿನ ಕಳೆದಂತೆ ಮಂಜುವಿನ ನಡೆಯಿಂದ ಗೌತಮಿ ರಾಂಗ್ ಆದರು. ಇಬ್ಬರೂ ಸಾಕಷ್ಟು ಬಾರಿ ಕಿರಿಕ್ ಮಾಡಿಕೊಂಡಿದ್ದು ಇದೆ. ಗೌತಮಿ ಫಿನಾಲೆಗೂ ಮೊದಲೇ ಔಟ್ ಆದರು. ಫಿನಾಲೆ ಮೆಟ್ಟಿಲು ಅವರಿಗೆ ಜಸ್ಟ್ ಮಿಸ್ ಆಗಿತ್ತು. ಮಂಜು (Ugramm Manju) ಅವರು ಫಿನಾಲೆಯಲ್ಲಿ ಕಪ್ ಗೆಲ್ಲಲಾಗದೆ 4ನೇ ರನ್ನರ್ ಅಪ್ ಆದರು.

    ಗೌತಮಿ ಹಾಗೂ ಅವರ ಪತಿ ಅಭಿಷೇಕ್ ಮಧ್ಯೆ ಮಂಜು ಪ್ರವೇಶ ಎಂದೆಲ್ಲ ಟ್ರೋಲ್ ಮಾಡಿದ್ದರು. ‘ಅಂಕಲ್- ಆಂಟಿ ಲವ್‌ಸ್ಟೋರಿ’ ಎಂದು ಟೀಕಿಸಿದ್ದು ಇದೆ. ಹೀಗೆ ಟೀಕಿಸದವರಿಗೆ ಗೌತಮಿ ಅವರು ಒಂದೇ ಒಂದು ಫೋಟೋ ಮೂಲಕ ಉತ್ತರ ಕೊಟ್ಟಿದ್ದಾರೆ.

  • BBK 11: ಅಂಕಲ್, ಆಂಟಿ ಅಂತ ಟ್ರೋಲ್ ಮಾಡಿದವರಿಗೆ ತಕ್ಕ ಉತ್ತರ ಕೊಟ್ಟ ಗೌತಮಿ

    BBK 11: ಅಂಕಲ್, ಆಂಟಿ ಅಂತ ಟ್ರೋಲ್ ಮಾಡಿದವರಿಗೆ ತಕ್ಕ ಉತ್ತರ ಕೊಟ್ಟ ಗೌತಮಿ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ಈ ವಾರಾಂತ್ಯದಲ್ಲಿ ಬ್ರೇಕ್ ಬೀಳಲಿದೆ. ಸದ್ಯ ಬಿಗ್ ಬಾಸ್‌ನಿಂದ ಹೊರಬಂದಿರುವ ಗೌತಮಿ ಜಾಧವ್ ತಮ್ಮ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಅದಷ್ಟೇ ಅಲ್ಲ, ಅಂಕಲ್, ಆಂಟಿ ಎಂದು ಕೆಟ್ಟದಾಗಿ ಮಂಜು ಜೊತೆ ಟ್ರೋಲ್ (Troll) ಮಾಡಿದವರಿಗೆ ಗೌತಮಿ (Gouthami Jadav) ತಕ್ಕ ಉತ್ತರ ನೀಡಿದ್ದಾರೆ. ಟ್ರೋಲ್ ಮಾಡುತ್ತಿರುವವರಿಗೆ ನಾನು ಏನು ಅಂತನೇ ಗೊತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ:ಹನುಮಂತ ಆ ಹುಡುಗಿಯ ಮನಸ್ಸನ್ನು ಗೆದ್ದಿದ್ದಾನೆ: ಗೆಳೆಯನ ಮದುವೆ ಬಗ್ಗೆ ಧನರಾಜ್ ಮಾತು

    ಹೀಗೆ ಟ್ರೋಲ್ ಮಾಡಿರೋದನ್ನು ನೋಡಿ ಥ್ಯಾಂಕ್ ಗಾಢ್ ನನ್ನ ಕುಟುಂಬ ಉತ್ತಮ ರೀತಿಯಲ್ಲಿ ತೆಗೆದುಕೊಂಡಿದ್ದಾರೆ. ನನ್ನನ್ನು ಹೊಸಬರು ಎರಡ್ಮೂರು ತಿಂಗಳಿನಿಂದ ನೋಡುತ್ತಿರುವವರು. ಆದರೆ ನನ್ನ ಫ್ಯಾಮಿಲಿ ಇದನ್ನೆಲ್ಲಾ ಧೈರ್ಯವಾಗಿ ಸ್ವೀಕರಿಸಿದ್ದಾರೆ. ಯಾಕೆಂದರೆ ಅವರಿಗೆ ನಾನು ಏನು ಅಂತ ಗೊತ್ತು. ಟ್ರೋಲ್ ಮಾಡುವವರಿಗೆ ನಾನು ಏನು ಅಂತನೇ ಗೊತ್ತಿಲ್ಲ. ಅವರುಗಳು ಆಟದಲ್ಲಿ ನೋಡಿದ್ದಾರೆ. ನನ್ನ ಬಗ್ಗೆ ಗೊತ್ತಿದಿದ್ರೆ ಅವರು ಟ್ರೋಲ್ ಮಾಡುತ್ತಿರಲಿಲ್ಲ ಎಂದಿದ್ದಾರೆ ಗೌತಮಿ.

    ಅಂಕಲ್, ಆಂಟಿ ಸ್ಟೋರಿ ಅನ್ನೋಕೆ ಅಲ್ಲಿ ಏನು ಇರಲಿಲ್ಲ. ಅಲ್ಲಿ ಲವ್ ಸ್ಟೋರಿ ಇರಲಿಲ್ಲ. ಒಂದು ಒಳ್ಳೆಯ ಸ್ನೇಹವಿತ್ತು. ಅದು ಕೇವಲ ಟ್ರೋಲ್ ಅಷ್ಟೇ. ಟ್ರೋಲ್‌ಗೂ ಅಭಿಪ್ರಾಯಕ್ಕೂ ವ್ಯತ್ಯಾಸವಿದೆ. ನನ್ನ ಕೊಡೋ ಸ್ಪಷ್ಟತೆ ಏನು ಅಂದರೆ ನನ್ನ ಮತ್ತು ಮಂಜು ನಡುವೆ ಅಂತಹದ್ದು ಏನು ಇರಲಿಲ್ಲ. ನನ್ನ ಜೀವನದಲ್ಲಿ ಅಭಿಷೇಕ್ ಜೊತೆ ಮಾತ್ರ ಒಂದು ಬ್ಯೂಟಿಫುಲ್ ಲವ್ ಸ್ಟೋರಿ ಇದೆ. ಅದು ನನಗೆ ಏಳೇಳು ಜನ್ಮಕ್ಕೂ ಬೇಕು ಅಂತ ಬಯಸುವವಳು. ನನ್ನ ಜೀವನದಲ್ಲಿ ಪ್ರೀತಿಗೆ ಕೊರತೆಯಿಲ್ಲ. ಮಂಜು (Ugramm Manju) ಜೊತೆಗಿನ ಸ್ನೇಹಕ್ಕೆ ಬೇರೆ ಅರ್ಥ ಕಲ್ಪಿಸಬೇಡಿ ಎಂದಿದ್ದಾರೆ. ಅವರೊಂದಿಗೆ ಒಂದೊಳ್ಳೆಯ ಫ್ರೆಂಡ್‌ಶಿಪ್ ಸ್ಟೋರಿ ಅಂತೂ ಖಂಡಿತ ಇದೆ ಎಂದಿದ್ದಾರೆ.

    ಇನ್ನೂ ‘ಬಿಗ್ ಬಾಸ್ ಕನ್ನಡ 11’ರಲ್ಲಿ ಯಾರು ಗೆಲ್ಲಬೇಕು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೌತಮಿ, ನನಗೆ ಹನುಮಂತ ಗೆಲ್ಲಬೇಕು. ಅವರು ಚೆನ್ನಾಗಿ ಆಟ ಆಡುತ್ತಿದ್ದಾರೆ ಎಂದಿದ್ದಾರೆ.

  • BBK 11: ಪತಿ ಜೊತೆಗಿನ ಗೌತಮಿ ರೊಮ್ಯಾನ್ಸ್ ಕದ್ದು ನೋಡಿದ ದೋಸ್ತರಿಗೆ ಕಾಲೆಳೆದ ಕಿಚ್ಚ

    BBK 11: ಪತಿ ಜೊತೆಗಿನ ಗೌತಮಿ ರೊಮ್ಯಾನ್ಸ್ ಕದ್ದು ನೋಡಿದ ದೋಸ್ತರಿಗೆ ಕಾಲೆಳೆದ ಕಿಚ್ಚ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11)  ಆಟ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಇದೀಗ ಭಾನುವಾರ ಎಪಿಸೋಡ್‌ನಲ್ಲಿ ಹನುಮಂತ (Hanumantha) ಮತ್ತು ಧನರಾಜ್ (Dhanraj) ಫುಲ್ ಟ್ರೋಲ್ ಆಗಿರೋದನ್ನು ತೋರಿಸಿ ಸುದೀಪ್ (Sudeep) ಕಾಲೆಳೆದಿದ್ದಾರೆ. ಪತಿ ಜೊತೆ ಗೌತಮಿ ಇರುವಾಗ ಕದ್ದು ನೋಡಿದ್ದರ ಬಗ್ಗೆ ವೀಕೆಂಡ್‌ನಲ್ಲಿ ಕಿಚ್ಚ ಫುಲ್ ತಮಾಷೆ ಮಾಡಿದ್ದಾರೆ. ಈ ಕುರಿತು ಪ್ರೋಮೋವನ್ನು ವಾಹಿನಿ ಹಂಚಿಕೊಂಡಿದೆ.

    ಗೌತಮಿ ದಂಪತಿಯನ್ನು ಹನುಮಂತ ಮತ್ತು ಧನರಾಜ್ ನೋಡುತ್ತಿದ್ದ ರೀತಿಗೆ ಸುದೀಪ್ ಸಖತ್ ಆಗಿ ಕಾಲೆಳೆದಿದ್ದಾರೆ. ಅವರ ಮಾತುಗಳಿಗೆ ಮನೆ ಸದಸ್ಯರೆಲ್ಲಾ ನಕ್ಕು ನಕ್ಕು ಸುಸ್ತಾಗಿದ್ದಾರೆ. ಹೊರಗಡೆ ಟ್ರೋಲ್ ಅಂತ ನಡೆಯುತ್ತಿರುತ್ತೆ. ನಿಮಗೆ ಯಾವ ಥರ ಇಮೇಜ್ ಇರಬಹುದು ಎಂದು ಸುದೀಪ್ ಪ್ರಶ್ನಿಸಿದ್ದಾರೆ. ಅವರ ವಿಡಿಯೋಗಳನ್ನು ಬಿಗ್ ಬಾಸ್‌ನಲ್ಲಿ ಪ್ಲೇ ಮಾಡಿಸಿದ್ದಾರೆ.

    ಫ್ಯಾಮಿಲಿ ರೌಂಡ್ ವೇಳೆ, ಗೌತಮಿ ದಂಪತಿ ‘ಬಿಗ್ ಬಾಸ್’ನಲ್ಲಿ ಮದುವೆ ಆ್ಯನಿವರ್ಸರಿ ಆಚರಿಸುವ ಅವಕಾಶ ಸಿಕ್ಕಿತ್ತು. ಈ ವೇಳೆ, ಒಬ್ಬರಿಗೊಬ್ಬರು ಕೇಕ್ ತಿನ್ನಿಸುತ್ತಿದ್ದರು. ಆಗ ರೂಮ್‌ನಿಂದ ಹೊರಗೆ ಹನುಮಂತು, ಧನರಾಜ್ ಇಣುಕಿ ನೋಡುತ್ತಿದ್ದರು. ಇದು ಸದ್ಯ ಎಲ್ಲ ಕಡೆ ವೈರಲ್ ಆಗಿದೆ. ಇದರ ಬಗ್ಗೆ ಪ್ರಶ್ನೆ ಮಾಡಿರುವ ಸುದೀಪ್ ಅವರು, ನಿಮಗೆ ಏನ್ ನೋಡುವ ಕುತೂಹಲ ಇತ್ತು ಎಂದು ಕೇಳಿದ್ದಾರೆ. ಇದಕ್ಕೆ ಹನುಮಂತು ಕೇಕ್ ತಿನ್ನಿಸುತ್ತಿದ್ದರಲ್ಲ, ಅದನ್ನ ನೋಡುತ್ತಿದ್ದೇವು ಸರ್ ಎಂದಿದ್ದಾರೆ.

    ಮತ್ತೆ ಪ್ರಶ್ನೆ ಮಾಡಿದ ಸುದೀಪ್ ಅವರು, ಏನ್ ನಿರೀಕ್ಷೆ ಮಾಡುತ್ತಿದ್ದೀರಿ ಧನರಾಜ್ ಎಂದು ಕೇಳಿದಾಗ, 3 ತಿಂಗಳು ಆಯಿತಲ್ಲ ಸರ್ ಎನ್ನುತ್ತಿದ್ದಂತೆ ಎಲ್ಲರೂ ನಕ್ಕಿದ್ದಾರೆ. ಒಂದು ವೇಳೆ, ನೀವಿಬ್ಬರು ನೋಡುವಾಗ ಏನಾದರೂ ಕಂಟೆಂಟ್ ಸಿಕ್ಕಿದ್ದರೇ ಆಗಿದ್ದಲ್ಲಿ ಏನ್ ಮಾಡುತ್ತಿದ್ದೀರಿ ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ. ಅದನ್ನೇ ರಿವೆಂಡ್ ಮಾಡಿ ಮನಸಲ್ಲೇ ಯೋಚನೆ ಮಾಡುತ್ತಿದ್ದೆ ಎಂದು ಹೇಳಿ ಎಲ್ಲರನ್ನೂ ಧನರಾಜ್ ನಗಿಸಿದ್ದಾರೆ. ಧನರಾಜ್ ಮಾತಿಗೆ ಸುದೀಪ್ ನಕ್ಕು ನಕ್ಕು ಸುಸ್ತಾಗಿದ್ದಾರೆ.

  • BBK 11: ದೊಡ್ಮನೆಯಲ್ಲಿ ಪತಿ ಜೊತೆ ಮದುವೆ ಆ್ಯನಿವರ್ಸರಿ ಆಚರಿಸಿದ ಗೌತಮಿ

    BBK 11: ದೊಡ್ಮನೆಯಲ್ಲಿ ಪತಿ ಜೊತೆ ಮದುವೆ ಆ್ಯನಿವರ್ಸರಿ ಆಚರಿಸಿದ ಗೌತಮಿ

    ಬಿಗ್ ಬಾಸ್ ಮನೆಯ 11ರ (Bigg Boss Kannada 11)  ಆಟ ಇನ್ನೇನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ. ಹೀಗಿರುವಾಗ ದೊಡ್ಮನೆಯಲ್ಲಿ ಫ್ಯಾಮಿಲಿ ರೌಂಡ್ ಶುರುವಾಗಿದೆ. ಮನೆಯಲ್ಲಿರುವ ಸ್ಪರ್ಧಿಗಳ ಕುಟುಂಬಸ್ಥರು ಬಿಗ್ ಬಾಸ್‌ಗೆ ಎಂಟ್ರಿ ಕೊಡ್ತಿದ್ದಾರೆ. ಇದೀಗ ಗೌತಮಿ (Gouthami) ಪತಿ ಅಭಿಷೇಕ್ (Abhishek Kasaragod) ಆಗಮಿಸಿದ್ದಾರೆ. ತಮ್ಮ ಮದುವೆ ಆ್ಯನಿವರ್ಸರಿಯನ್ನು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

    ನಿನ್ನೆ (ಡಿ.31) ಭವ್ಯಾ, ತ್ರಿವಿಕ್ರಮ್ ಹಾಗೂ ರಜತ್ ಕುಟುಂಬ ಆಗಮಿಸಿತ್ತು. ಇಂದು ಮೋಕ್ಷಿತಾ, ಮಂಜು ಹಾಗೂ ಗೌತಮಿ ಕುಟುಂಬ ಆಗಮಿಸಿದೆ. ಮನೆಗೆ ಎಂಟ್ರಿ ಕೊಡುವಾಗಲೇ ಅಭಿಷೇಕ್ ಕೇಕ್ ಹಿಡಿದು ಬಂದರು. ಪತಿಯನ್ನು ನೋಡುತ್ತಿದ್ದಂತೆ ಗೌತಮಿ ಭಾವುಕರಾಗಿದ್ದಾರೆ. ಇದನ್ನೂ ಓದಿ:BBK 11: ತ್ರಿವಿಕ್ರಮ್‌ನಿಂದ ದೂರವಿರಲು ಪರೋಕ್ಷವಾಗಿ ಭವ್ಯಾಗೆ ಅಕ್ಕ ಸಲಹೆ

    ಬಳಿಕ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಹಾಗೂ ಮೋಕ್ಷಿತಾ, ಮಂಜು ಕುಟುಂಬದ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ವೇಳೆ, ಪತಿ ಜೊತೆ ನಟಿ ತರಲೆ ಮಾಡಿದ್ದಾರೆ. ಆ ನಂತರ ಮಂಜು ತಂದೆಯ ಕಾಲಿಗೆ ಬಿದ್ದು ಗೌತಮಿ ದಂಪತಿ ಆಶೀರ್ವಾದ ಪಡೆದಿದ್ದಾರೆ. ಪತ್ನಿ ಗೌತಮಿಗೆ ಕಾಲಿಗೆ ಗೆಜ್ಜೆ ಮತ್ತು ಸರವನ್ನು ಗಿಫ್ಟ್ ಆಗಿ ನೀಡಿದ್ದಾರೆ. ಈ ವೇಳೆ ಪತಿಯನ್ನು ತಬ್ಬಿ ಮುದ್ದಾಡಿದ್ದಾರೆ.

    ಇನ್ನೂ ಅಭಿಷೇಕ್ ಕಾಸರಗೋಡು ಅವರನ್ನು 2018ರ ಡಿ.31 ಗೌತಮಿ ಮದುವೆಯಾದರು. ಚಿತ್ರರಂಗದಲ್ಲಿ ಕ್ಯಾಮರಾಮ್ಯಾನ್ ಆಗಿ ಗುರುತಿಸಿಕೊಂಡಿರುವ ಅಭಿಷೇಕ್ ಅವರು ಪುನೀತ್ ರಾಜ್‌ಕುಮಾರ್ ನಿರ್ಮಾಣದ ಮಾಯಾ ಬಜಾರ್, ಗ್ರಾಮಾಯಣ, ಕೃಷ್ಣ ಟಾಕೀಸ್ ಸೇರಿದಂತೆ ಹಲವು ಚಿತ್ರಗಳಿಗೆ ಅವರು ಕೆಲಸ ಮಾಡಿದ್ದಾರೆ.

  • BBK 11: ಗೌತಮಿ ಪಕ್ಷಪಾತಿ ಎಂದು ದೂರಿದ ಮೋಕ್ಷಿತಾ

    BBK 11: ಗೌತಮಿ ಪಕ್ಷಪಾತಿ ಎಂದು ದೂರಿದ ಮೋಕ್ಷಿತಾ

    ದೊಡ್ಮನೆಯ ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ. 80 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಸ್ಪರ್ಧಿಗಳ ಅಳಿವು ಉಳಿವಿಗಾಗಿ ಹೋರಾಟ ನಡೆಯುತ್ತಿದೆ. ಹೀಗಿರುವಾಗ ಟಾಸ್ಕ್‌ವೊಂದರಲ್ಲಿ ಮನೆಯ ಪಕ್ಷಪಾತಿ ಯಾರು? ಎಂದು ಕೇಳಿದ್ರೆ ಗೌತಮಿ ಹೆಸರು ಹೇಳಿ ಮೋಕ್ಷಿತಾ (Mokshitha Pai) ನೀರಿಗೆ ತಳ್ಳಿದ್ದಾರೆ. ಇದನ್ನು ನೋಡಿ ಮನೆ ಮಂದಿ ಶಾಕ್ ಆಗಿದ್ದಾರೆ. ಇದನ್ನೂ ಓದಿ:ಯುಐ ಚಿತ್ರಕ್ಕೆ ಬಾಲಿವುಡ್‌ನಲ್ಲೂ ಬಹುಪರಾಕ್

    ಮಂಜು, ಮೋಕ್ಷಿತಾ, ಗೌತಮಿ (Gouthami Jadav) ನಡುವಿನ ಸ್ನೇಹಕ್ಕೆ ಬ್ರೇಕ್ ಬಿದ್ದು ಹಲವು ದಿನಗಳಾಗಿದೆ. ಮೂವರು ಜಿದ್ದಿಗೆ ಬಿದ್ದಿದ್ದು ಇದೆ. ಹೀಗಿರುವಾಗ ಗೌತಮಿ ಮೇಲೆ ಮೋಕ್ಷಿತಾ ಸೇಡು ತೀರಿಸಿಕೊಳ್ಳುವ ಕೆಲಸ ಶುರು ಮಾಡಿದ್ದಾರೆ. ಸದ್ಯ ವಾಹಿನಿ ಹಂಚಿಕೊಂಡ ಪ್ರೋಮೋದಲ್ಲಿ ‘ಬಿಗ್ ಬಾಸ್’ ಟಾಸ್ಕ್‌ವೊಂದರಲ್ಲಿ ನೀಡಿದ್ದಾರೆ. ಪಕ್ಷಪಾತಿ ಹಾಗೂ ನಿರ್ಧಾರ ತೆಗೆದುಕೊಳ್ಳುವ ಅಶಕ್ತ, ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ಅಶಕ್ತ, ಜನ ನಿರ್ವಹಣೆಯಲ್ಲಿ ಅಶಕ್ತ ಎಂಬ ಆಯ್ಕೆಗೆ ಸ್ಪರ್ಧಿಗಳನ್ನು ಸೂಚಿಸುವಂತೆ ‘ಬಿಗ್ ಬಾಸ್’ ಸೂಚನೆ ನೀಡಿದ್ದಾರೆ. ಟಾಸ್ಕ್‌ ಮುಂದುವರಿದ ಭಾಗವಾಗಿ ತಾವು ತೆಗೆದುಕೊಂಡ ವ್ಯಕ್ತಿಯ ಹೆಸರನ್ನು ಹೇಳಿ, ಅದಕ್ಕೆ ಸೂಕ್ತ ಕಾರಣ ನೀಡಿ ಸ್ವಿಮ್ಮಿಂಗ್ ಪೂಲ್‌ಗೆ ತಳ್ಳಬೇಕು ಎಂದು ಆದೇಶ ನೀಡಿದರು.

    ಅದರಂತೆಯೇ ಮೋಕ್ಷಿತಾ, ಅವರು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅಶಕ್ತ ಸ್ಥಾನಕ್ಕೆ ಗೌತಮಿ ಹೆಸರನ್ನು ತಿಳಿಸಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮತ್ತೆ ವಾಕ್ಸಮರ ನಡೆದಿದೆ. ನಮ್ಮ ಮೂರು ಜನರ ಫ್ರೆಂಡ್‌ಶಿಪ್ ಕಡೆವರೆಗೂ ಕಾಪಾಡುತ್ತೇನೆ ಎಂದಿದ್ರಿ ಎಂದ ಮೋಕ್ಷಿತಾಗೆ ನೀವು ಒಮ್ಮೆ ನಮ್ಮಿಂದ ದೂರಾದ ಮೇಲೆ ಆಟದ ಸಲುವಾಗಿ ನಿಮ್ಮಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಎಂದು ಗೌತಮಿ ತಿರುಗೇಟು ನೀಡಿದರು.

    ಅದಕ್ಕೆ ನಿಮಗೆ ಮಂಜುರವರು ಬೇಜಾರ್ ಆದರೆ ಫೀಲ್ ಆಗುತ್ತದೆ. ಅದೇ ಮೋಕ್ಷಿತಾಗೆ ಫೀಲ್ ಆದರೆ ಅಲ್ಲಿ ಗೌತಮಿ ಇರುತ್ತಿರಲಿಲ್ಲ ಎಂದು ಮೋಕ್ಷಿತಾ ತಿವಿದಿದ್ದಾರೆ. ಅವರ ಮಾತಿಗೆ ನನಗೆ ನಿಮ್ಮ ಹಾಗೆ ಯೋಚನೆ ಮಾಡೋಕೆ ಬರಲ್ಲ. ಇಂದಿಗೂ ಈ ಸ್ನೇಹವನ್ನು ನಿಭಾಯಿಸುತ್ತಿರೋದು ನಾನು ಎಂದಿದ್ದಾರೆ ಗೌತಮಿ. ನಂತರ ಗೌತಮಿರನ್ನು ಮೋಕ್ಷಿತಾ ನೀರಿಗೆ ತಳ್ಳಿದ್ದಾರೆ. ಇದರ ಜೊತೆಗೆ ಪಕ್ಷಪಾತಿ ವ್ಯಕ್ತಿಗಳ ಸಾಲಿನಲ್ಲಿ ಹೆಚ್ಚು ಮಂದಿ ಚೈತ್ರಾ ಕುಂದಾಪುರ ಹೆಸರನ್ನು ಟಾರ್ಗೆಟ್ ಮಾಡಿದ್ದಾರೆ.

  • BBK 11: ಆಟ ಆಡಲು ಅವಕಾಶ ಸಿಗುತ್ತಿಲ್ಲ- ಗೌತಮಿ ನಡೆಗೆ ಗೋಳಾಡಿದ ಚೈತ್ರಾ

    BBK 11: ಆಟ ಆಡಲು ಅವಕಾಶ ಸಿಗುತ್ತಿಲ್ಲ- ಗೌತಮಿ ನಡೆಗೆ ಗೋಳಾಡಿದ ಚೈತ್ರಾ

    ಬಿಗ್ ಬಾಸ್ ಮನೆಯ (Bigg Boss Kannada 11) ಆಟ 80ನೇ ದಿನದತ್ತ ಮುನ್ನುಗ್ಗುತ್ತಿದೆ. ದೊಡ್ಮನೆಯಲ್ಲಿ ಕ್ಯಾಪ್ಟನ್ಸಿ ರೇಸ್ ಸ್ಪರ್ಧೆ ಜೋರಾಗಿದೆ. ಹನುಮಂತ ಹಾಗೂ ಗೌತಮಿ ನೇತೃತ್ವದಲ್ಲಿ ಎರಡು ತಂಡಗಳಾಗಿ ವಿಭಾಗಿಸಿದ್ದು, ಕ್ಯಾಪ್ಟನ್ ಆಯ್ಕೆಯ ಪ್ರಕ್ರಿಯೆಗಳು ಜಾರಿಯಲ್ಲಿವೆ. ಈ ಮಧ್ಯೆ ಅವಕಾಶಕ್ಕಾಗಿ ಚೈತ್ರಾ ಕುಂದಾಪುರ (Chaithra Kundapura) ಸಣ್ಣ ಮಕ್ಕಳಂತೆ ಕಣ್ಣೀರು ಇಟ್ಟಿದ್ದಾರೆ. ನನಗೆ ಆಟ ಆಡೋಕೆ ಅವಕಾಶ ಕೊಡ್ತಿಲ್ಲ ಅಂತ ಗಳೋ ಅಂತ ಅತ್ತಿದ್ದಾರೆ.

    ಕ್ಯಾಪ್ಟನ್ ಗೌತಮಿ (Gouthami) ತಂಡದಲ್ಲಿರುವ ಚೈತ್ರಾಗೆ ಆಡಲು ಅವಕಾಶ ಸಿಗುತ್ತಿಲ್ಲ ಅನ್ನೋದು ಆರೋಪವಾಗಿದೆ. ನಿನ್ನೆ ನಡೆದ ಒಂದು ಪಂದ್ಯದಲ್ಲಿ ಗೌತಮಿ ತಂಡದ ಪರ ಚೈತ್ರಾ ಹಾಗೂ ಮಂಜು (Ugramm Manju) ಆಡಿದ್ದರು. ಚೈತ್ರಾ ಹಾಗೂ ಮಂಜು ಜೋಡಿ ಸೋಲನ್ನು ಕಂಡಿದೆ. ನಂತರದ ಗೇಮ್‌ಗೆ ಚೈತ್ರಾ ಅವರನ್ನು ಉಸ್ತುವಾರಿಯಾಗಿ ಗೌತಮಿ ನೇಮಕ ಮಾಡಿದ್ದರು. ಇದನ್ನೂ ಓದಿ:1000 ಕೋಟಿ ದಾಟಿದ ‘ಪುಷ್ಪ 2’- ಗಲ್ಲಾಪೆಟ್ಟಿಗೆಯಲ್ಲಿ ಅಲ್ಲು ಅರ್ಜುನ್ ಸಿನಿಮಾ ರಣಕೇಕೆ

    ಬೇಸರಗೊಳ್ಳುವ ಚೈತ್ರಾ, ನನಗೆ ಆಟ ಆಡಕ್ಕೆ‌ ಅವಕಾಶ ಕೊಡಲ್ಲ. ಉಸ್ತುವಾರಿ ಮಾಡಲ್ಲ ಹೇಳುತ್ತೀದ್ದೀನಿ, ನನಗೆ ಅದನ್ನೇ ಕೊಡ್ತಾರೆ. ಕಳೆದ ವಾರ ಎಲಿಮಿನೇಟ್ ಆಗಿ ವಾಪಸ್ ಬಂದಿದ್ದೀನಿ. ಇಡೀ ವಾರ ಆಟ ಆಡಿಲ್ಲ. ಆಡ್ತೀನಿ ಅಂದರೆ ಆಡಕ್ಕೆ ಕೊಡಲ್ಲ. ಆಮೇಲೆ ಆಟಕ್ಕೆ ಉಂಟು, ಲೆಕ್ಕಕ್ಕೆ ಇಲ್ಲ ಅಂತಾರೆ ಎನ್ನುತ್ತ ಕಣ್ಣೀರು ಇಟ್ಟಿದ್ದಾರೆ. ಕೇಳಿದ ತಕ್ಷಣ ನಾನು ಆಡಲು ಬಿಡೋಕೆ ಆಗೋದಿಲ್ಲ ಎಂದು ಕಡ್ಡಿ ಮುರಿದಂತೆ ಗೌತಮಿ ಉತ್ತರ ಕೊಟ್ಟಿದ್ದಾರೆ.

    ಇತರೆ ಟಾಸ್ಕ್‌ನಲ್ಲೂ ಮತ್ತೆ ಗೌತಮಿ ತಂಡ ಸೋಲನ್ನು ಕಂಡಿದೆ. ಹೀಗಾಗಿ ಬಿಗ್ ಬಾಸ್, ನಿಮ್ಮ ತಂಡದಿಂದ ಕ್ಯಾಪ್ಟನ್ಸಿ ರೇಸ್‌ನಿಂದ ಒಬ್ಬರನ್ನು ಹೊರಗೆ ಇಡಬೇಕು ಎನ್ನುತ್ತಾರೆ. ಆಗ ಗೌತಮಿ ಚೈತ್ರಾ ಹೆಸರನ್ನು ತೆಗೆದುಕೊಂಡಿದ್ದಾರೆ. ಇದು ಚೈತ್ರಾಗೆ ಸಹಿಸಲಾರ ಸಂಕಟ ಆಗಿದೆ. ಇಂದಿನ ಸಂಚಿಕೆಯಲ್ಲಿ ಏನೆಲ್ಲಾ ಹೈಡ್ರಾಮಗಳು ನಡೆಯುತ್ತವೆ ಎಂದು ತಿಳಿದುಕೊಳ್ಳಲು ವೀಕ್ಷಕರು ಕ್ಯೂರಿಯಸ್ ಆಗಿದ್ದಾರೆ.

  • BBK 11: ನಾನು ಮೇಲೆ ಹೋಗಿದ್ದಾಗಿದೆ, ಬಗ್ಗೋ ಮಾತೇ ಇಲ್ಲ- ಮಂಜುಗೆ ಗೌತಮಿ ತಿರುಗೇಟು

    BBK 11: ನಾನು ಮೇಲೆ ಹೋಗಿದ್ದಾಗಿದೆ, ಬಗ್ಗೋ ಮಾತೇ ಇಲ್ಲ- ಮಂಜುಗೆ ಗೌತಮಿ ತಿರುಗೇಟು

    ಬಿಗ್ ಬಾಸ್ ಮನೆಯ (Bigg Boss Kannada 11) ಆಟ 80ನೇ ದಿನದತ್ತ ಮುನ್ನುಗ್ಗುತ್ತಿದೆ. ಇನ್ನೂ ಸ್ನೇಹಿತರಾಗಿದ್ದ ಉಗ್ರಂ ಮಂಜು, ಗೌತಮಿ ಜಾಧವ್ ನಡುವೆ ಬಿರುಕು ಮೂಡಿದೆ. ತ್ರಿವಿಕ್ರಮ್ ಜೊತೆ ಆಟದ ಲಾಜಿಕ್ ಮತ್ತು ಸ್ಟ್ರಾಟಜಿ ಮಾತನಾಡುವಾಗ ಮಂಜು ಮಧ್ಯೆ ಎಂಟ್ರಿ ಕೊಟ್ಟಿದ್ದಾರೆ. ಇದು ನಟಿಗೆ ಕೋಪ ತರಿಸಿದೆ. ಟೇಕ್ ಆಫ್ ಆಗಿದೆ, ಬಗ್ಗೋ ಮಾತೇ ಇಲ್ಲ ಎಂದು ಉಗ್ರಂ ಮಂಜುಗೆ (Ugramm Manju) ಗೌತಮಿ ಜಾಡಿಸಿದ್ದಾರೆ.

    ಗೌತಮಿ (Gouthami) ಅವರು ಟಾಸ್ಕ್ ವಿಚಾರವಾಗಿ ತ್ರಿವಿಕ್ರಮ್ ಜತೆ ಮಾತನಾಡಿದ್ದಾರೆ. ಲಾಜಿಕ್ ಹಾಗೂ ಸ್ಟ್ರಾಟಜಿ ಬಗ್ಗೆ ಮಾತನಾಡಿದ್ದಾರೆ. ಇವರ ಮಾತಿನ ನಡುವೆ ಮಂಜು ಬಂದಿದ್ದಾರೆ. ಆಗ ಮಂಜು ಅವರು ನಾನು ಚಪ್ಪಾಳೆ ಹೊಡೆದೆ ಎಂದಿದ್ದಾರೆ. ಅದಕ್ಕೆ ಗೌತಮಿ ಅವರು, ಮಂಜುಗೆ ಚೆನ್ನಾಗಿ ಮಾತಿನಲ್ಲೇ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:‘ಅಯೋಗ್ಯ 2’ಗೆ ಅದ್ಧೂರಿ ಮುಹೂರ್ತ- ಮತ್ತೆ ಜೊತೆಯಾದ ಸತೀಶ್‌ ನೀನಾಸಂ, ರಚಿತಾ ರಾಮ್

    ನಿಮಗೆ ಚಪ್ಪಾಳೆಯ ಧ್ವನಿ ಕೇಳೆ ಇಲ್ಲ. ನಾನು ಕೇಳಿದ್ದು. ನಮ್ಮ ಕಥೆ ಜೊತೆ ನಿಮ್ಮ ಕಥೆ ಸೇರಿಸಿಕೊಂಡು ಹೇಳಿದ್ರಿ ಅಂತ. ಇದೇ ಪ್ಲಾಬ್ಲಮ್ ಇರೋದು. ಎಲ್ಲರಿಗೂ ನಿಮ್ಮ ನರೇಶನ್ ಕೊಡುತ್ತೀರಾ. ಇದಕ್ಕೆ ಎಲ್ಲರಿಗೂ ಅನ್ಸೋದು, ಮಂಜು ನಾನು ನಾನು ಅಂತ ಎನ್ನುತ್ತಾರೆ ಅಂತ. ನಾನು ಮೇಲೆ ಹೋಗಿದ್ದಾಗಿದೆ, ಬಗ್ಗೋ ಮಾತೇ ಇಲ್ಲ ಎಂದು ಗೌತಮಿ ತಿರುಗೇಟು ನೀಡಿದ್ದಾರೆ.

    ನಾನು ಕ್ಯಾಪ್ಟನ್ ಆಗಿದ್ದಾಗ ನೀವು ನನ್ನನ್ನು ಲೀಡ್ ಮಾಡಬೇಡಿ. ನಿಮ್ಮ ವಾಯ್ಸ್‌ನಿಂದ ನನ್ನ ಧ್ವನಿ ಕೆಳಗೆ ಹೋಗ್ತಿದೆ ಎಂದು ನಟಿ ಮಂಜುಗೆ ಎಚ್ಚರಿಕೆ ನೀಡಿದ್ದಾರೆ.

  • BBK 11: ಮೋಕ್ಷಿತಾ ಹೇಳಿದ್ದು ಸರಿ- ಮಂಜು ಜೊತೆಗಿನ ಫ್ರೆಂಡ್‌ಶಿಪ್‌ ಕಟ್‌ ಎಂದ ಗೌತಮಿ

    BBK 11: ಮೋಕ್ಷಿತಾ ಹೇಳಿದ್ದು ಸರಿ- ಮಂಜು ಜೊತೆಗಿನ ಫ್ರೆಂಡ್‌ಶಿಪ್‌ ಕಟ್‌ ಎಂದ ಗೌತಮಿ

    ‘ಬಿಗ್‌ ಬಾಸ್‌ ಕನ್ನಡ 11’ರ (Bigg Boss Kannada 11) ಆಟ 80ನೇ ದಿನದತ್ತ ಮುನ್ನುಗ್ಗುತ್ತಿದೆ. ಸಾಕಷ್ಟು ಟಿಸ್ಟ್‌ಗಳನ್ನು ನೋಡಿ ಪ್ರೇಕ್ಷಕರಿಗೂ ಶೋ ರೋಚಕ ಎನಿಸುತ್ತಿದೆ. ಉಗ್ರಂ ಮಂಜು ಸ್ನೇಹಕ್ಕೆ ಮೋಕ್ಷಿತಾ ಗುಡ್‌ ಬೈ ಹೇಳಿರುವ ಬೆನ್ನಲ್ಲೇ ಈಗ ಗೌತಮಿ ಕೂಡ ಇಬ್ಬರ ಸ್ನೇಹ ಕಟ್‌ ಎಂದು ಹೇಳಿ ಶಾಕ್‌ ಕೊಟ್ಟಿದ್ದಾರೆ. ಗೆಳೆಯ-ಗೆಳತಿ ಎಂದೇ ಫೇಮಸ್ ಆಗಿದ್ದ ಗೌತಮಿ ಜಾಧವ್ (Gouthami) ಹಾಗೂ ಮಂಜು (Ugramm Manju) ನಡುವೆ ಬಿರುಕು ಮೂಡಿದೆ.

    ಸದ್ಯ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಅದರಲ್ಲಿ ಗೌತಮಿ ಹಾಗೂ ಮಂಜು ನಡುವಿನ ಸಂಭಾಷಣೆಯನ್ನು ತೋರಿಸಲಾಗಿದೆ. ನಾನು ಕ್ಯಾಪ್ಟನ್ ಆದಾಗ ನೀವು ನನ್ನನ್ನು ಲೀಡ್ ಮಾಡಬೇಡಿ. ನಿಮ್ಮ ವಾಯ್ಸ್‌ನಿಂದ ನನ್ನ ಧ್ವನಿ ಕೆಳಗೆ ಹೋಗ್ತಿದೆ ಎಂದು ಮಂಜುಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:ಬೆಂಗಳೂರಿಗೆ ವಿಶ್ವ ಮಾನ್ಯತೆ ದೊರಕಿಸಿದ ಶಿಸ್ತುಬದ್ಧ ರಾಜಕಾರಣಿ ಎಸ್ಎಂಕೆ – ರಾಧಿಕಾ ಪಂಡಿತ್ ಭಾವುಕ ಪೋಸ್ಟ್

    ನಂತರ ನಡೆದ ಟಾಸ್ಕ್ ಮಧ್ಯದಲ್ಲಿ ಮಂಜು ಏನೋ ಹೇಳಲು ಪ್ರಯತ್ನಿಸಿದ್ದಾರೆ. ಅದಕ್ಕೆ ಕೋಪಿಸಿಕೊಂಡ ಗೌತಮಿ, ಮಂಜು ಅವರ ನಾನು 20 ಸಾರಿ ಹೇಳಲು ಸಾಧ್ಯವಿಲ್ಲ. ನೀವು ಹೇಳಿದ ಹಾಗೆ ಇಲ್ಲ ಎಂದು ಮಂಜುಗೆ ಟಾಂಗ್ ಕೊಟ್ಟಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಗೌತಮಿ, ಕ್ಯಾಪ್ಟನ್ಸಿ ಓಟದಿಂದ ಮಂಜು ಅವರನ್ನು ಹೊರಗೆ ಇಟ್ಟಿದ್ದಾರೆ. ಇದು ಮನೆ ಮಂದಿಗೆ ಅಚ್ಚರಿ ಮೂಡಿಸಿದೆ. ಇಲ್ಲಿ ಗೆಳೆಯ, ಗೆಳತನ ಇರಲ್ಲ ಅದೆಲ್ಲ ಮುಗಿಸುತ್ತ ಇದ್ದೀನಿ ಅನ್ನುವ ಮೂಲಕ ಗೌತಮಿ ಶಾಕ್ ನೀಡಿದ್ದಾರೆ. ಮಂಜುಗೆ ಗೌತಮಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಗಾರ್ಡನ್ ಏರಿಯಾದಲ್ಲಿ ಕೂತು ಮಾತನಾಡುವ ವೇಳೆ, ಗೌತಮಿ ಮಂಜುಗೆ ಬುದ್ಧಿ ಹೇಳಿದ್ದಾರೆ. ಆಗ ಮೋಕ್ಷಿತಾ ಅವರ ಏನು ಹೇಳಿದರು ಅವರು ಇಬ್ಬರೇ ಮಾತನಾಡುತ್ತಾರೆ ಎಂದು ಆರೋಪಿಸಿದರು. ಮೋಕ್ಷಿತಾ ಹೇಳಿದ್ದು ಸರಿ ಎನಿಸುತ್ತಿದೆ ಎಂದಿದ್ದಾರೆ.

    ನಾವು ಇಬ್ಬರೇ ಇರಬೇಕಾದರೂ ಕೂಡ ನೀವೇ ಮಾತನಾಡುತ್ತೀರಿ ಎಂದು ನನಗೆ ಅನಿಸುತ್ತಾ ಇದೆ. ಅವರು ಹೇಳಿದ ಲೈನ್‌ಗಳು ನನಗೆ ಸರಿಯಾಗಿ ಇದೆ ಎಂದು ಅನಿಸಿತು. ನಾವು ಹೇಳುವ ಹಾಗೆ ನೀವೇ ಇಲ್ಲ. ಇಲ್ಲಿ ಗೆಳೆಯ, ಗೆಳತಿ ಗೆಳತನ ಇರಲ್ಲ ಎಂದಿರುವ ಗೌತಮಿ, ಮಂಜು ಅವರನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟಿದ್ದಾರೆ. ಇದು ಮಂಜು ಅವರ ಕೋಪಕ್ಕೆ ಕಾರಣವಾಗಿದೆ. ಅಲ್ಲದೇ ಮುನಿಸು ಬಿಟ್ಟು ಗೌತಮಿ ಮತ್ತು ಮೋಕ್ಷಿತಾ (Mokshitha Pai) ಮತ್ತೆ ಒಂದು ಆಗ್ತಾರಾ ಎಂಬ ಪ್ರಶ್ನೆ ವೀಕ್ಷಕರಲ್ಲಿ ಕಾಡುತ್ತಿದೆ.

  • ವರಸೆ ಬದಲಿಸಿದ ಗೌತಮಿ- ಉಗ್ರಂ ಮಂಜು ಮುಂದೆ ಮೋಕ್ಷಿತಾರನ್ನು ಹೊಗಳಿದ ಸ್ಪರ್ಧಿ

    ವರಸೆ ಬದಲಿಸಿದ ಗೌತಮಿ- ಉಗ್ರಂ ಮಂಜು ಮುಂದೆ ಮೋಕ್ಷಿತಾರನ್ನು ಹೊಗಳಿದ ಸ್ಪರ್ಧಿ

    ದೊಡ್ಮನೆಯ (Bigg Boss Kannada 11) ಆಟ ದಿನದಿಂದ ದಿನಕ್ಕೆ ಸಾಕಷ್ಟು ತಿರುವುಗಳನ್ನು ಪಡೆದು 70ನೇ ದಿನ ಪೂರೈಸಿ ಮುನ್ನುಗ್ಗುತ್ತಿದೆ. ಇದೀಗ ಉಗ್ರಂ ಮಂಜುಗೆ ಕೈ ಕೊಟ್ಟು ಮೋಕ್ಷಿತಾಗೆ ಗೌತಮಿ ಹತ್ತಿರವಾಗ್ತಿದ್ದಾರಾ? ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಉಗ್ರಂ ಮಂಜು ಮುಂದೆಯೇ ಮೋಕ್ಷಿತಾರನ್ನು ಗೌತಮಿ ಹಾಡಿಹೊಗಳಿದ್ದಾರೆ.

    ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟ ದಿನದಿಂದ ಮೋಕ್ಷಿತಾ, ಮಂಜು (Ugramm Manju) ಹಾಗೂ ಗೌತಮಿ ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು. ಇದು ವೀಕ್ಷಕರಿಗೂ ಗೊತ್ತಿರುವ ವಿಚಾರ. ಆದರೆ ಆ ಸ್ನೇಹ ಹೆಚ್ಚು ದಿನ ಉಳಿಯೋಕೆ ಸಾಧ್ಯವಾಗಲಿಲ್ಲ. ಆದರೆ ಟಾಸ್ಕ್ ವಿಚಾರಕ್ಕೆ ಈ ಮೂವರ ಮಧ್ಯೆ ಭಿನ್ನಾಭಿಪ್ರಾಯ ಮೂಡಿದ ಹಿನ್ನೆಲೆ ಮೋಕ್ಷಿತಾ ಇಬ್ಬರಿಂದಲೂ ದೂರ ಸರಿದರು. ಇದನ್ನೂ ಓದಿ:ರಾಜ್ಯದ ರಾಜಕಾರಣದಲ್ಲಿ ಬದಲಾವಣೆ ತಂದವರು ಎಸ್‌ಎಂಕೆ: ಅಭಿಷೇಕ್ ಅಂಬರೀಶ್

    ಆದರೆ ಇದೀಗ ಮಂಜುಗೆ ಕೈ ಕೊಟ್ಟು ಮೋಕ್ಷಿತಾಗೆ (Mokshitha Pai) ಹತ್ತಿರವಾಗೋಕೆ ಗೌತಮಿ (Gouthami) ಹೊರಟ್ರಾ ಎಂಬ ಅನುಮಾನ ಮೂಡಿದೆ. ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎಂಬ ಟಾಸ್ಕ್‌ನಲ್ಲಿ ತಮ್ಮ ತಂಡಕ್ಕೆ ಸದಸ್ಯರನ್ನು ಆಯ್ಕೆ ಮಾಡುವಾಗ ಮೋಕ್ಷಿತಾರ ಹೆಸರನ್ನು ಗೌತಮಿ ಉಲ್ಲೇಖಿಸಿದ್ದಾರೆ. ಮೋಕ್ಷಿತಾರ ಆಟದ ಬಗ್ಗೆ ಗುಣಗಾನ ಮಾಡಿದ್ದಾರೆ. ಗೌತಮಿ ಮಾತು ಕೇಳಿ ಮೋಕ್ಷಿತಾ ನಾಚಿದ್ದಾರೆ.

  • BBK 11: ಗೌತಮಿ ಜೊತೆ ಆಡಲ್ಲ ಎಂದ ಮೋಕ್ಷಿತಾಗೆ ಬಿಗ್‌ ಶಾಕ್ ಕೊಟ್ಟ ‘ಬಿಗ್‌ ಬಾಸ್‌’

    BBK 11: ಗೌತಮಿ ಜೊತೆ ಆಡಲ್ಲ ಎಂದ ಮೋಕ್ಷಿತಾಗೆ ಬಿಗ್‌ ಶಾಕ್ ಕೊಟ್ಟ ‘ಬಿಗ್‌ ಬಾಸ್‌’

    ದೊಡ್ಮನೆಯ (Bigg Boss Kannada 11) ಆಟ 70ನೇ ದಿನದತ್ತ ಮುನ್ನುಗ್ಗುತ್ತಿದೆ. ಇನ್ನೂ ಆಟ ಬಿಟ್ಟು ಫ್ರೆಂಡ್‌ಶಿಪ್ ಅತೀ ಆದರೆ ದೊಡ್ಮನೆಯಲ್ಲಿ ಕಣ್ಣೀರು ಕಟ್ಟಿಟ್ಟ ಬುತ್ತಿ ಅನ್ನೋದು ಈಗಾಗಲೇ ಪ್ರೂವ್ ಆಗಿದೆ. ಹೀಗಿರುವಾದ ಗೌತಮಿ ಜೊತೆ ಉತ್ತಮ ಒಡನಾಟ ಹೊಂದಿದ್ದ ಮೋಕ್ಷಿತಾ ಪೈ ಇದೀಗ ರಾಂಗ್ ಆಗಿದ್ದಾರೆ. ನನ್ನ ಸ್ವಾಭಿಮಾನದ ಮುಂದೆ ಏನೂ ಇಲ್ಲ. ಯಾವುದೂ ದೊಡ್ಡದಲ್ಲ. ಕ್ಯಾಪ್ಟನ್ ಆಗಲು ಗೌತಮಿ (Gouthami) ಮುಂದೆ ತಲೆ ತಗ್ಗಿಸೋಲ್ಲ ಎಂದು ಮೋಕ್ಷಿತಾ ಪೈ ಪಟ್ಟು ಹಿಡಿದಿದ್ದಾರೆ.

    ಉಗ್ರಂ ಮಂಜು, ಗೌತಮಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಮೋಕ್ಷಿತಾ (Mokshitha Pai) ಅವರಿಂದ ದೂರ ಆಗಿ ತಮ್ಮದೇ ಶೈಲಿಯಲ್ಲಿ ಆಟ ಆಡುತ್ತಿದ್ದಾರೆ. ಇದೀಗ ಕ್ಯಾಪ್ಟನ್ಸಿ ರೇಸ್‌ನಲ್ಲಿ ನಿಲ್ಲಲ್ಲು ಗೌತಮಿ ಮುಂದೆ ನಿಲ್ಲುವ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಕ್ಯಾಪ್ಟನ್ ಆಗೋದಕ್ಕೆ ಗೌತಮಿ ಸಹಾಯ ತೆಗೆದುಕೊಳ್ಳಲೇ ಬೇಕಾ? ಹಾಗಾದ್ರೆ ನಾನು ಆಟವನ್ನೇ ಆಡೋದಿಲ್ಲ ಅಂತ ಹಠ ಹಿಡಿದಿದ್ದಾರೆ. ಕ್ಯಾಪ್ಟನ್ಸಿ ಓಟದಲ್ಲಿಇರಬೇಕು ಅಂದ್ರೆ, ಒಬ್ಬರನ್ನ ಸಹಾಯಕ್ಕೆ ತೆಗೆದುಕೊಳ್ಳಬೇಕಿದೆ. ಎಲ್ಲರೂ ಎಲ್ಲರನ್ನ ತೆಗೆದುಕೊಂಡಿದ್ದಾರೆ. ಆದರೆ, ಕೊನೆಗೆ ಗೌತಮಿನೇ ಮೋಕ್ಷಿತಾ ಪಾಲಿಗೆ ಉಳಿದಂತೆ ಇದೆ. ಹಾಗಾಗಿಯೇ ಮೋಕ್ಷಿತಾ ಪೈ ಟೆನ್ಷನ್ ಮಾಡಿಕೊಂಡಿದ್ದಾರೆ.

    ಹೌದು, ನಾನು ಗೌತಮಿ ಸಹಾಯ ತೆಗೆದುಕೊಂಡು ಕ್ಯಾಪ್ಟನ್ ಆಗೋದೇ ಇಲ್ಲ. ಆ ರೀತಿನೇ ಇದ್ದರೇ, ಆಟವನ್ನೆ ಆಡೋದಿಲ್ಲ. ಈ ಆಟದಿಂದ ದೂರವೇ ಉಳಿಯುತ್ತೇನೆ. ಗೌತಮಿಯನ್ನ ಹೋಗಿ ನಾನು ಕೇಳೋದೇ ಇಲ್ಲ. ಅದು ನನಗೆ ಆಗೋದೇ ಇಲ್ಲ ಅಂತಲೇ ಮೋಕ್ಷಿತಾ ಪೈ ಹೇಳಿಕೊಂಡಿದ್ದಾರೆ. ಐಶ್ವರ್ಯಾ ಅವರು ಇದು ಗೇಮ್ ಅಷ್ಟೇ, ವೈಯಕ್ತಿವಾಗಿ ತೆಗೆದುಕೊಳ್ಳಬೇಡಿ ಎಂದು ಬೆಂಬಲಿಸಿದ್ದಾರೆ. ಆದರೆ ಅವರು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ನನ್ನ ಸೆಲ್ಫ್ ರೆಸ್ಪೆಕ್ಟ್ ಮುಂದೆ ಏನೂ ಇಲ್ಲ. ಯಾವುದು ದೊಡ್ಡದಿಲ್ಲ. ಗೌತಮಿಯಿಂದ ನಾನು ಕ್ಯಾಪ್ಟನ್ ಆಗೋದೇ ಆದ್ರೆ, ಅದು ಬೇಡವೇ ಬೇಡ. ಬಿಗ್ ಬಾಸ್ ಮನೆಗೆ ಕಳಿಸಿದರೆ ನಾನು ರೆಡಿ ಇದ್ದೇನೆ. ಹೀಗೆ ಮನೆ ಮಂದಿಯ ಮುಂದೆ ಮೋಕ್ಷಿತಾ ಪೈ ಹೇಳಿಕೊಂಡಿದ್ದಾರೆ.

    ಗೌತಮಿ ಜಾದವ್ ಮಂದಹಾಸ ಬೀರಿದ್ದಾರೆ. ಮೋಕ್ಷಿತಾ ಪೈ ಸ್ಥಿತಿಗೆ ಈ ರೀತಿ ಮಾಡಿದ್ರೋ ಏನೋ? ಗೊತ್ತಿಲ್ಲ. ಆದರೆ ಇವರ ನಗುವಿನಲ್ಲೆ ಸಾಕಷ್ಟು ಅರ್ಥ ಕೂಡ ಇದೆ. ಕ್ಯಾಪ್ಟನ್ ಆಗಲು ಗೌತಮಿ ಸಹಾಯ ತೆಗೆದುಕೊಳ್ಳಲ್ಲ ಎಂದ ಮೋಕ್ಷಿತಾಗೆ ‘ಬಿಗ್ ಬಾಸ್’ ಇಲ್ಲಿ ಒಂದು ಶಾಕ್ ಕೂಡ ಕೊಟ್ಟಿದ್ದಾರೆ. ಆ ಶಾಕ್ ಏನು ಅಂದ್ರೆ, ದೊಡ್ಡ ನಿರ್ಧಾರ ತೆಗೆದುಕೊಂಡರೆ ಅದಕ್ಕೆ ದೊಡ್ಡ ಬೆಲೆನೂ ಕಟ್ಟಬೇಕಾಗುತ್ತದೆ ಅಂತಲೇ ಹೇಳಿದ್ದಾರೆ. ಇದನ್ನ ಕೇಳಿದ ಉಗ್ರಂ ಮಂಜು ತಮ್ಮ ಎಂದಿನಂತೆ ನಗುವಿನೊಂದಿಗೆ ಚಪ್ಪಾಳೆ ತಟ್ಟಿ ಖುಷಿಪಟ್ಟಿದ್ದಾರೆ. ಅಂತಿಮವಾಗಿ ಏನು ಆಯ್ತು ಎಂಬುದನ್ನು ಎಪಿಸೋಡ್ ಪ್ರಸಾರ ಆಗುವವರೆಗೂ ಕಾದುನೋಡಬೇಕಿದೆ.