Tag: ಗೋ ಶಾಲೆ

  • ಮದ್ಯದಂಗಡಿಗಳನ್ನು ಗೋ ಶಾಲೆಯನ್ನಾಗಿ ಪರಿವರ್ತಿಸುತ್ತೇನೆ: ಉಮಾಭಾರತಿ

    ಮದ್ಯದಂಗಡಿಗಳನ್ನು ಗೋ ಶಾಲೆಯನ್ನಾಗಿ ಪರಿವರ್ತಿಸುತ್ತೇನೆ: ಉಮಾಭಾರತಿ

    ಭೋಪಾಲ್: ಶೀಘ್ರದಲ್ಲಿಯೇ ಮದ್ಯದಂಗಡಿಗಳನ್ನು ಗೋ ಶಾಲೆಯನ್ನಾಗಿ ಪರಿವರ್ತಿಸುವುದಾಗಿ ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ (Uma bharati) ಹೇಳಿದ್ದಾರೆ.

    ಕಳೆದ ನಾಲ್ಕು ದಿನಗಳಿಂದ ಉಮಾಭಾರತಿ ಭೋಪಾಲ್‍ನಲ್ಲಿ ಕ್ಷೇತ್ರ ಭೇಟಿ ಮಾಡುತ್ತಿದ್ದಾರೆ. ಕ್ಷೇತ್ರ ಭೇಟಿಯ ಕೊನೆಯ ದಿನವಾದ ಇಂದು ರಾಜ್ಯದಲ್ಲಿ ಆಲ್ಕೋಹಾಲ್ (Alcohol) ಅನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಮದ್ಯದಂಗಡಿಗಳಲ್ಲಿ ಗೋ ಶಾಲೆ (Cow Sheltar) ಆರಂಭಿಸುವುದಾಗಿ ಘೋಷಿಸಿದರು. ಅಲ್ಲದೆ ರಾಜ್ಯ ಸರ್ಕಾರ ಮದ್ಯನೀತಿಯ ಕುರಿತು ಘೋಷಣೆ ಮಾಡಲು ತಡಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಓರ್ಚಾದಲ್ಲಿರುವ ಮದ್ಯದಂಗಡಿ ಹೊರಗೆ 11 ಹಸುಗಳನ್ನು ಕಟ್ಟಿಹಾಕಲು ವ್ಯವಸ್ಥೆ ಮಾಡಲು ತಿಳಿಸಿದ್ದೇನೆ. ಅಲ್ಲದೆ ಅವುಗಳಿಗೆ ಮೇವು ಹಾಗೂ ನೀರಿನ ವಯವಸ್ಥೆಯನ್ನೂ ಮಾಡಲು ತಿಳಿಸಿದ್ದೇನೆ. ನನ್ನನ್ನು ತಡೆಯುವ ಧೈರ್ಯ ಯಾರಿಗಿದೆ ಎಂದು ನೋಡೋಣ ಎಂದು ಸವಾಲೆಸೆದರು. ಇದನ್ನೂ ಓದಿ: ಎಲ್ಲವನ್ನೂ ಕೊಟ್ಟಿರುವ ಬಿಜೆಪಿ ಬಿಡುವ ಮಾತೇ ಇಲ್ಲ – ಸಚಿವ ನಾರಾಯಣಗೌಡ ಸ್ಪಷ್ಟನೆ

    ಭಗವಾನ್ ಶ್ರೀರಾಮಚಂದ್ರನ ಹೆಸರಿನಲ್ಲಿ ಸರ್ಕಾರಗಳು ರಚನೆಯಾಗುತ್ತಿವೆ. ಆದರೆ ಓರ್ಚಾದಲ್ಲಿರುವ ರಾಮರಾಜ ದೇವಸ್ಥಾನದ ಬಳಿ ಮದ್ಯದಂಗಡಿ (Liquor Shop) ಯನ್ನು ತೆರೆಯಲು ಸರ್ಕಾರವೇ ಅನುಮತಿ ನೀಡಿರುವುದು ಬೇಸರದ ಸಂಗತಿ. ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶವು ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯದಲ್ಲಿ ಮುಂಚೂಣಿಯಲ್ಲಿದೆ. ಈ ಹಿಂಸೆಯ ಪ್ರವೃತ್ತಿಗೆ ಮದ್ಯ ಸೇವನೆಯು ಒಂದು ಕಾರಣ ಎಮದು ಅವರು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಂತ್ರಾಲಯದ ಗೋ ಶಾಲೆ ವೀಕ್ಷಿಸಿದ ದರ್ಶನ್

    ಮಂತ್ರಾಲಯದ ಗೋ ಶಾಲೆ ವೀಕ್ಷಿಸಿದ ದರ್ಶನ್

    ರಾಯಚೂರು: ಸ್ಯಾಂಡಲ್‍ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂತ್ರಾಲಯದಲ್ಲಿ ನಡೆಯುತ್ತಿರುವ ಗುರುವೈಭವೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದಾರೆ.

    ಮಂತ್ರಾಲಯ ಗುರುವೈಭವೋತ್ಸವ ಕಾರ್ಯಕ್ರದಲ್ಲಿ ಭಾಗವಹಿಸಿರುವ ದರ್ಶನ್, ಸ್ನೇಹಿತರೊಂದಿಗೆ ಮಂತ್ರಾಲಯದಲ್ಲಿ ಗೋ ಶಾಲೆಗಳಲ್ಲಿರುವ ಗೋವುಗಳನ್ನು ವೀಕ್ಷಿಸಿದರು. ಈ ವೇಳೆ ದರ್ಶನ್ ಗೋವುಗಳನ್ನು ಹಿಡಿದುಕೊಂಡಿರುವ ಹಾಗೂ ಕರುವನ್ನು ಹಿಡಿದುಕೊಂಡಿದ್ದಾರೆ.

    ಚಿಕ್ಕವರಿದ್ದಾಗ ಹಸುವನ್ನು ಸಾಕಿ ಅದರಿಂದ ಬಂದ ಹಾಲನ್ನು ಮಾರಿ ಸಂಪಾದಿಸಿ ಜೀವನ ನಡೆಸುತ್ತಿದ್ದ ದರ್ಶನ್‍ಗೆ ಗೋವಿನ ಮೇಲೆ ಅಪಾರವಾದ ಗೌರವ, ಭಕ್ತಿ ಹಾಗೂ ನಂಬಿಕೆ ಹೊಂದಿದ್ದಾರೆ.

    ದರ್ಶನ್‍ಗೆ ಪ್ರಾಣಿಗಳೆಂದರೆ ಮೊದಲಿನಿಂದಲೂ ಬಹಳ ಇಷ್ಟ. ಇದಕ್ಕೆ ಸಾಕ್ಷಿ ಎಂಬಂತೆ ದರ್ಶನ್ ಮೈಸೂರು ಮೃಗಾಲಯದಲ್ಲಿ ಹಲವಾರು ಪ್ರಾಣಿಗಳನ್ನು ದತ್ತು ಪಡೆದುಕೊಂಡಿದ್ದಾರೆ. ಅಲ್ಲದೆ ತಮ್ಮ ಫಾರ್ಮ್ ಹೌಸ್‍ನಲ್ಲಿ ಕುದುರೆ, ಕುರಿ, ಕೋಳಿ, ಪಕ್ಷಿ, ಶ್ವಾನ ಹೀಗೆ ಹಲವಾರು ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಅಲ್ಲದೆ ಸಿನಿಮಾದಿಂದ ಕೊಂಚ ಬಿಡುವು ಸಿಕ್ಕಿದರೆ ಸಾಕು ಸಫಾರಿಗೆ ಹೋಗಿ ತಮ್ಮ ಕೈಯಾರೆ ಕ್ಯಾಮೆರಾದ ಮೂಲಕ ಪ್ರಾಣಿಗಳ ಫೋಟೋವನ್ನು ಸೆರೆಹಿಡಿಯುತ್ತಾರೆ.

    ಇತ್ತೀಚೆಗೆ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಬಿಡುಗಡೆಯಾಗಿದ್ದು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಆಂಧ್ರ ಹಾಗೂ ತೆಲಂಗಾಣದಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಈ ಸಿನಿಮಾದಲ್ಲಿ ದರ್ಶನ್‍ಗೆ ಜೋಡಿಯಾಗಿ ಆಶಾ ಭಟ್ ಅಭಿನಯಿಸಿದ್ದು, ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

  • ವಿವಾದಿತ ಕೋಣ ಶಿವಮೊಗ್ಗ ಗೋ ಶಾಲೆಗೆ ಶಿಫ್ಟ್

    ವಿವಾದಿತ ಕೋಣ ಶಿವಮೊಗ್ಗ ಗೋ ಶಾಲೆಗೆ ಶಿಫ್ಟ್

    ಶಿವಮೊಗ್ಗ: ಕೋಣದ ಕಥೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಒಂದು ಕಡೆ ಈ ಕೋಣ ನಮ್ದು, ಈ ಕೋಣ ನಮ್ದು ಎಂದು 2 ಊರಿನ ಜನ ಗುದ್ದಾಡುತ್ತಿದ್ದರೆ, ಮತ್ತೊಂದು ಕಡೆ ಪೊಲೀಸರು ಈ ಕೋಣ ಯಾರದು ಎಂದು ನೀವು ತೀರ್ಮಾನ ಮಾಡಿಕೊಂಡಿಲ್ಲ ಅಂದರೆ ಕೋರ್ಟಿಗೆ ಕಳುಹಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಅಷ್ಟಕ್ಕೂ ಈ ಕೋಣ ಇದೀಗ ಶಿವಮೊಗ್ಗದ ಗೋಶಾಲೆಗೆ ಸೇರಿದ್ದು, ಕೋಣಕ್ಕಾಗಿ ಎರಡು ಊರಿನ ಜನರ ನಡುವೆ ಇನ್ನೂ ಕಿತ್ತಾಟ ಮುಂದುವರಿದಿದೆ.

    ಹೌದು. ಶಿವಮೊಗ್ಗದ ಹಾರನಹಳ್ಳಿ ಹಾಗೂ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೇಲಿ ಮಲ್ಲೂರು ಎರಡು ಗ್ರಾಮಗಳ ಗ್ರಾಮಸ್ಥರು ಒಂದು ಕೋಣದ ಹಿಂದೆ ಬಿದ್ದಿರುವ ಪ್ರಸಂಗ ದಿನೇ ದಿನೇ ಹೊಸ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತಿದೆ. ಒಂದೇ ಕೋಣವನ್ನು ಎರಡು ಗ್ರಾಮಸ್ಥರು ನಮ್ಮದೇ ಎಂದು ಹೇಳುತ್ತಿದ್ದು, ಪೊಲೀಸರಿಗೂ ಈ ಕೇಸು ತಲೆಬಿಸಿ ತರಿಸಿದೆ. ಹೀಗಾಗಿ ವಿವಾದಿತ ಕೋಣವನ್ನು ಪೊಲೀಸರು ಗೋ ಶಾಲೆಗೆ ಶಿಫ್ಟ್ ಮಾಡಿದ್ದಾರೆ. ಯಾವ ಊರಿಗೆ ಕೋಣ ಸೇರಿದ್ದು ಎಂದು ತೀರ್ಮಾನ ಆಗುವವರೆಗೂ ಕೋಣ ಗೋಶಾಲೆಯಲ್ಲಿ ಆಶ್ರಯ ಪಡೆಯಲಿದೆ.

    ದೇವರ ಹೆಸರಲ್ಲಿ ಬಿಟ್ಟಿರುವ ಕೋಣ ಇದಾಗಿದ್ದು, ಮಾರಿಕಾಂಬೆ ಜಾತ್ರೆಗಾಗಿ ಕೋಣವನ್ನು ಬಿಡಲಾಗಿದೆ. ಆದರೆ ಈ ಕೋಣ ನಮಗೆ ಸೇರಿದ್ದು ಎಂದು ಎರಡು ಗ್ರಾಮಗಳ ಗ್ರಾಮಸ್ಥರು ಕಿತ್ತಾಡಿಕೊಳ್ಳಲು ಶುರು ಮಾಡಿದ್ದಾರೆ. ಹೀಗಾಗಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಬಗೆಹರಿಸಲು ಪೊಲೀಸರು ಕೂಡ ತಲೆಕೆಡಿಸಿಕೊಂಡಿದ್ದಾರೆ.

    ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿಯ ಗ್ರಾಮದವರು ಕೋಣವನ್ನು ಹೊನ್ನಾಳಿಯಿಂದ ಕರೆದುಕೊಂಡು ಬಂದಿದ್ದಾರೆ. ಎರಡು ವರ್ಷಗಳ ಹಿಂದೆ ಹಾರನಹಳ್ಳಿ ಗ್ರಾಮಸ್ಥರು ದೇವಿಗೆ ಬಿಟ್ಟ ಕೋಣ ನಾಪತ್ತೆಯಾಗಿತ್ತು. ಈಗ ಅದು ಹೊನ್ನಾಳಿಯಲ್ಲಿ ಇದೆ ಎಂದು ಯಾರೋ ತಿಳಿಸಿದ ಕಾರಣ ಅದನ್ನು ಹಾರನಹಳ್ಳಿಗೆ ಕರೆ ತಂದಿದ್ದಾರೆ. ಆದರೆ ಹೊನ್ನಾಳಿ ತಾಲೂಕಿನ ಬೇಲಿ ಮಲ್ಲೂರು ಗ್ರಾಮಸ್ಥರು ಈಗ ಇದು ನಮ್ಮ ಊರಿಗೆ ಸೇರಿರುವ ಕೋಣ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ 5 ದಿನಗಳ ಹಿಂದೆ ಈ ಬಗ್ಗೆ ಹೊನ್ನಾಳಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ರಾಜಿಪಂಚಾಯ್ತಿ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತಿದ್ದಾರೆ.

    ಇತ್ತ ಹಾರನಹಳ್ಳಿಯಲ್ಲಿರುವ ಕೋಣ ಯಾವ ಊರಿಗೆ ಸೇರಿದ್ದು ಎಂದು ತೀರ್ಮಾನ ಆಗುವವರೆಗೂ ಅದು ಆ ಗ್ರಾಮದಲ್ಲಿ ಇರುವುದು ಬೇಡ ಎಂದು ಬೇಲಿ ಮಲ್ಲೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಕಾರಣದಿಂದಾಗಿ ಪೊಲೀಸರು ಇಂದು ಬೆಳಗ್ಗೆ ಹಾರನಹಳ್ಳಿಯಿಂದ ಶಿವಮೊಗ್ಗದ ಗೋ ಶಾಲೆಗೆ ಕೋಣವನ್ನು ಕರೆ ತಂದಿದ್ದಾರೆ. ಹಾರನಹಳ್ಳಿ, ಬೇಲಿ ಮಲ್ಲೂರು ಗ್ರಾಮಸ್ಥರ ಸಮ್ಮುಖದಲ್ಲಿ ಹೊನ್ನಾಳಿ ಪೊಲೀಸರು ಟಾಟಾ ಏಸ್ ವಾಹನದ ಮೂಲಕ ಶಿವಮೊಗ್ಗಕ್ಕೆ ಕೋಣವನ್ನು ಕರೆ ತಂದಿದ್ದಾರೆ. ಶಿವಮೊಗ್ಗದ ವಿದ್ಯಾ ನಗರದಲ್ಲಿರುವ ಮಹಾವೀರ ಗೋ ಶಾಲೆಯಲ್ಲಿ ಈಗ ಕೋಣವನ್ನು ಬಿಡಲಾಗಿದೆ. ಅದರಂತೆ ಕೋಣವನ್ನು ಗೋ ಶಾಲೆಯವರು ತಮ್ಮ ವಶಕ್ಕೆ ಪಡೆದಿದ್ದಾರೆ. ಕೋಣದ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಗೋ ಶಾಲೆಯಲ್ಲಿರುವ ಇತರೆ ಜಾನುವಾರುಗಳಿಗೆ ಯಾವ ರೀತಿ ಆರೈಕೆ ಮಾಡಲಾಗುತ್ತದೆಯೋ ಅದೇ ರೀತಿ ಈ ಕೋಣಕ್ಕೂ ಆರೈಕೆ ಮಾಡಲಾಗುತ್ತಿದೆ.

    ಇದೀಗ ಪೊಲೀಸರ ತೀರ್ಮಾನದಂತೆ ಅವರಿಗೆ ಯಾವಾಗ ಬೇಕೋ ಆಗ ಕೋಣವನ್ನು ಪೊಲೀಸರಿಗೆ ಹಸ್ತಾಂತರಿಸುತ್ತೇವೆ ಎಂದು ಹೇಳಿದ್ದಾರೆ. ಈಗಾಗಲೇ ಕೋಣದ ನಿರ್ವಹಣಾ ವೆಚ್ಚವಾಗಿ ಎರಡು ಗ್ರಾಮದವರು ಸೇರಿ ಒಂದು ಸಾವಿರ ರೂಪಾಯಿ ಹಣವನ್ನು ಗೋ ಶಾಲೆಗೆ ಕಟ್ಟಿದ್ದಾರೆ. ಆದರೆ ಇನ್ನು ಕೂಡ 2 ಗ್ರಾಮದವರೂ ಕೋಣ ನಮ್ದು ಕೋಣ ನಮ್ದು ಎಂದು ಗುದ್ದಾಡುತ್ತಿದ್ದು, ಇಂದು ಹೊನ್ನಾಳ್ಳಿಯಲ್ಲಿ ನಡೆಯುವ ಇತ್ಯರ್ಥದ ಸಭೆಯಲ್ಲಿ ಯಾವ ರೀತಿ ತೀರ್ಮಾನ ತೆಗೆದುಕೊಳ್ಳಲಾಗುತ್ತೆದೆಯೋ ಅದಕ್ಕೆ ಒಪ್ಪಿಕೊಳ್ಳಲು 2 ಗ್ರಾಮಸ್ಥರು ಕೂಡ ನಿರ್ಧರಿಸಿದ್ದಾರೆ.

    ಒಟ್ಟಾರೆ ಕಳೆದ ಐದಾರೂ ದಿನಗಳಿಂದ ಕೋಣದ ಕಥೆ ದಿನೇ ದಿನೇ ಹೊಸ ಹೊಸ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತಲೇ ಇದೆ. ಹೊನ್ನಾಳಿ ಪೊಲೀಸರು ಏನಾದರೂ ಮಾಡಿ ಕೇಸು ಬಗೆ ಹರಿಸೋಣ ಎಂದರೆ ಅವರಿಗೂ ಅದು ಸಾಧ್ಯವಾಗುತ್ತಿಲ್ಲ. ಇಂದು ಮತ್ತೆ ಹೊನ್ನಾಳಿ ಠಾಣೆಯಲ್ಲಿ ಎರಡು ಗ್ರಾಮದ ಮುಖಂಡರನ್ನು ಕರೆಸಿ ಮಾತುಕತೆ ನಡೆಸಲಾಗಿದೆ. ಈಗಾಗಲೇ ಡಿಎನ್ ಎ ಪರೀಕ್ಷೆ ನಡೆಸುವುದಾಗಿ ಪೊಲೀಸರು ಸಹ ಹೇಳಿದ್ದರೂ ದೇವರ ಕೋಣ ಮುಕ್ಕಾಗುವುದೆಂಬ ಕಾರಣದಿಂದ ಅವರು ಕೂಡ ಗ್ರಾಮಸ್ಥರೇ ಬಗೆಹರಿಸಿಕೊಳ್ಳಲಿ ಎಂದು ರಿಯಾಯಿತಿ ನೀಡಿದ್ದಾರೆ.

    https://www.youtube.com/watch?v=o-Wz15jXv3A

  • ಅಪ್ಪನ ಆಸೆಯಂತೆ ಗೋವುಗಳ ರಕ್ಷಣೆ – 20 ವರ್ಷಗಳಿಂದ ನಿಸ್ವಾರ್ಥ ಸೇವೆ ಮಾಡ್ತಿದ್ದಾರೆ ಗದಗ್‍ನ ರಿಖಪ್ ಚಂದ್ರ

    ಅಪ್ಪನ ಆಸೆಯಂತೆ ಗೋವುಗಳ ರಕ್ಷಣೆ – 20 ವರ್ಷಗಳಿಂದ ನಿಸ್ವಾರ್ಥ ಸೇವೆ ಮಾಡ್ತಿದ್ದಾರೆ ಗದಗ್‍ನ ರಿಖಪ್ ಚಂದ್ರ

    ಗದಗ: ನೂರಾರು ಅನಾಥ ಗೋವುಗಳಿಗೆ ಕಳೆದ 20 ವರ್ಷಗಳಿಂದ ಫಲಾಪೇಕ್ಷೆಯಿಲ್ಲದೆ ಪೋಷಣೆ ಮಾಡ್ತಿದ್ದಾರೆ ಇವತ್ತಿನ ಪಬ್ಲಿಕ್ ಹೀರೋ ರಿಖಪ್ ಚಂದ್ರ.

    ಹೌದು. ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ನಿವಾಸಿ ರಿಖಪ್‍ಚಂದ್ ಬಾಗಮಾರ ಎಂಬವರು ಆಧುನಿಕ ಗೋರಕ್ಷಕರು. ಇವರು ಭಗವಾನ್ ಮಹಾವೀರ ಜೈನ್ ಗೋಶಾಲೆ ಮೂಲಕ ನೂರಾರು ಅನಾಥ ಗೋವುಗಳ ರಕ್ಷಣೆ ಮಾಡುತ್ತಿದ್ದಾರೆ. ಮೂಲತ: ಬಟ್ಟೆ ವ್ಯಾಪಾರಿಗಳಾದ್ರೂ ಜಾನುವಾರಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ.

    ತಂದೆ ಸುಖರಾಜ್ ಅವ್ರ ಕೊನೆ ಆಸೆಯದಂತೆ ಸುಮಾರು 20 ವರ್ಷಗಳಿಂದ ಇನ್ನೂರಕ್ಕೂ ಅಧಿಕ ಗೋವುಗಳಿಗೆ ಆಶ್ರಯ ನೀಡುತ್ತಿದ್ದಾರೆ. ಬೆಳಗ್ಗೆ ಎದ್ದ ತಕ್ಷಣ ಗೋವುಗಳಿಗೆ ನಮಸ್ಕರಿಸಿ ಮಂತ್ರಪಠಿಸಿ ಬಿಸಿನೆಸ್‍ಗೆ ಹೋಗ್ತಾರೆ.

    ಗಜೇಂದ್ರಗಡ ನಗರದಲ್ಲಿ ಪ್ರತಿ ಮಂಗಳವಾರ ಜಾನುವಾರುಗಳ ಸಂತೆ ನಡೆಯುತ್ತೆ. ಈ ಸಂತೆಯಲ್ಲಿ ಕಟುಕರ ಪಾಲಾಗುವ ಜಾನುವಾರುಗಳನ್ನ ಇವರು ರೈತನಿಗೆ ಹೆಚ್ಚಿನ ಹಣನೀಡಿ ಖರೀದಿ ಮಾಡಿ ತರುತ್ತಿದ್ದಾರೆ. ರಾಜ್ಯದಲ್ಲಿ ಬರ ಇದ್ದಾಗಲೂ ಸರ್ಕಾರ, ಸಂಘ ಸಂಸ್ಥೆಗಳಿಂದ ನೆರವುಯಾಚಿಸದೇ 11 ಎಕರೆ ವಿಸ್ತೀರ್ಣದಲ್ಲಿ ಗೋರಕ್ಷೆ ಮಾಡುತ್ತಾ ಬಂದಿದ್ದಾರೆ.

    ಪ್ರತಿ ವರ್ಷ ಸುಮಾರು 150 ರಿಂದ 200 ಟನ್‍ನಷ್ಟು ಮೇವು ಸಂಗ್ರಹಿಸ್ತಾರೆ. ಕುಟುಂಬ ಸದಸ್ಯರ ಜೊತೆಗೆ ಗೋವುಗಳ ರಕ್ಷಣೆಗಾಗಿ 15 ಜನ ಗೋಪಾಲಕರನ್ನ ನಿಯೋಜಿಸಿಕೊಂಡಿದ್ದಾರೆ.

  • ಬರಗಾಲದಿಂದ ಕಂಗಾಲಾದ ಬಡ ರೈತರಿಗೆ ಅನ್ನದಾತರಾದ್ರು- ಗೋಶಾಲೆಯಲ್ಲಿ ನಿತ್ಯ 400 ರೈತರಿಗೆ ಅನ್ನ ದಾಸೋಹ

    ಬರಗಾಲದಿಂದ ಕಂಗಾಲಾದ ಬಡ ರೈತರಿಗೆ ಅನ್ನದಾತರಾದ್ರು- ಗೋಶಾಲೆಯಲ್ಲಿ ನಿತ್ಯ 400 ರೈತರಿಗೆ ಅನ್ನ ದಾಸೋಹ

    ತುಮಕೂರು: ಅನ್ನದಾತರಿಗೆ ಅನ್ನದಾನ ಮಾಡುವ ಮಹಾನುಭಾವರು. ಬರಗಾಲದಿಂದ ಕಂಗಾಲಾದ ಬಡ ರೈತರ ಹೊಟ್ಟೆ ತಣಿಸಿದ್ದಾರೆ. ತೂಮಕೂರಿನ ರಕ್ಷಿತ್ ಜೈ ಗಿರೀಶ್, ಗೋ ಶಾಲೆಯಲ್ಲಿ ಪ್ರತಿದಿನ 400ಕ್ಕೂ ಹೆಚ್ಚು ರೈತರಿಗೆ ಉಚಿತವಾಗಿ ಅನ್ನದಾಸೋಹ ಮಾಡುತ್ತಿದ್ದಾರೆ.

    ಹೌದು, ಈ ಮಹಾನುಭಾವರಿಗೆ ರೈತರೆಂದರೆ ಎಲ್ಲಿಲ್ಲದ ಕರುಣೆ. ಬರಗಾಲದಿಂದ ಬೇಸತ್ತ ರೈತರು ಗೋ ಶಾಲೆಗಳಲ್ಲಿ ತಮ್ಮ ಜಾನುವಾರುಗಳೊಂದಿಗೆ ಹಸಿವಿನಿಂದ ಮಲಗುತ್ತಿದ್ದುದನ್ನ ಕಂಡು ಇವರ ಕರುಳು ಚುರ್ರ್ ಎನ್ನುತಿತ್ತು. ನಮಗೆ ಅನ್ನ ನೀಡೋ ಅನ್ನದಾತರು ಖಾಲಿ ಹೊಟ್ಟೆಯಲ್ಲಿ ಮಲಗಬಾರದು ಎಂದು ಸಂಕಲ್ಪಿಸಿದ್ದರು. ಹಾಗಾಗಿ ಪ್ರತಿದಿನ ಸುಮಾರು 400 ಕ್ಕೂ ಹೆಚ್ಚು ರೈತರಿಗೆ ಇವರು ಉಚಿತವಾಗಿ ಅನ್ನದಾಸೋಹ ಮಾಡುತಿದ್ದಾರೆ.

    ಕಲ್ಪತರು ನಾಡು ತುಮಕೂರು ಜಿಲ್ಲೆ ಕಳೆದ ನಾಲ್ಕೈದು ವರ್ಷಗಳಿಂದ ನಿರಂತರ ಬರಗಾಲಕ್ಕೆ ತುತ್ತಾಗಿದೆ. ಮಳೆ ಇಲ್ಲದೆ ಬೆಳೆಗಳು ಕೈ ಕೊಟ್ಟು ರೈತರನ್ನು ಸಂಕಷ್ಟಕ್ಕೆ ನೂಕಿವೆ. ಅತ್ತ ಜಾನುವಾರುಗಳಿಗೂ ಮೇವಿಲ್ಲದೆ ದನ-ಕರುಗಳು ಸಾಯುವಂತಾಗಿದೆ. ಅದಕ್ಕಾಗಿಯೇ ಜಿಲ್ಲಾಡಳಿತದಿಂದ ಗೋ ಶಾಲೆಗಳನ್ನು ತೆರೆಯಲಾಗಿತ್ತು. ಈ ಗೋ ಶಾಲೆಗಳಲ್ಲಿ ಜಾನುವಾರುಗಳಿಗೇನೋ ಮೇವು- ನೀರು ಸಿಗುತಿತ್ತು. ಆದ್ರೆ ತಮ್ಮ ಹಸುಗಳೊಂದಿಗೆ ಬಂದ ನೂರಾರು ರೈತರು ಹಸಿವಿನಿಂದಲೇ ದಿನ ದೂಡುತಿದ್ದರು. ಮಧ್ಯಾಹ್ನ ಊಟ ಮಾಡಿದ್ದರೂ ರಾತ್ರಿಹೊತ್ತು ಉಪವಾಸ ಮಲಗುವುದು ಖಚಿತವಾಗಿತ್ತು. ರೈತರ ಈ ಸ್ಥಿತಿ ಕಂಡು ನಿವೃತ್ತ ಬ್ಯಾಂಕ್ ಉದ್ಯೋಗಿ ರಕ್ಷಿತ್ ಜೈ ಗಿರೀಶ್ ರ ಕರುಳು ಚುರ್ರ್ ಅಂದಿತ್ತು.

    ನಮಗೆ ಅನ್ನ ನೀಡೋ ಅನ್ನದಾತರೇ ಉಪವಾಸ ಮಲಗೋದನ್ನು ನೋಡಿ ರಕ್ಷಿತ್ ಜೈ ಗಿರೀಶ್‍ರ ಮನಸ್ಸು ಮರುಗಿತ್ತು. ಆ ಕ್ಷಣದಿಂದಲೇ ರೈತರಿಗೆ ತಮ್ಮಿಂದಾದ ಅಳಿಲು ಸೇವೆ ಮಾಡೋಣ ಎಂದು ಸಂಕಲ್ಪಿಸಿದ್ದರು. ಅದರ ಪರಿಣಾಮವಾಗಿ ಎರಡು ಗೋ ಶಾಲೆಗಳನ್ನು ಅವರು ಆಯ್ಕೆ ಮಾಡಿಕೊಂಡು ರಾತ್ರಿ ಹೊತ್ತು ರೈತರಿಗೆ ಉಚಿತವಾಗಿ ಊಟ ನೀಡುತ್ತಿದ್ದಾರೆ.

    ಶಿರಾ ತಾಲೂಕಿನ ಗಂಡಿಹಳ್ಳಿ ಹಾಗೂ ಉಲ್ಲಾಸಿನ ತೋಪು ಎಂಬ ಎರಡು ಗೋ ಶಾಲೆಗಳನ್ನು ಇವರು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರತಿದಿನ ರಾತ್ರಿ ಹೊತ್ತು ಈ ಗೋಶಾಲೆಯಲ್ಲಿದ್ದ 400 ಕ್ಕೂ ಹೆಚ್ಚು ರೈತರಿಗೆ ಅನ್ನದಾಸೋಹ ನಡೆಸುತಿದ್ದಾರೆ.

    ಕಳೆದ ಜನವರಿಯಿಂದ ನಿರಂತರವಾಗಿ ರಕ್ಷಿತ್ ಜೈ ಗಿರೀಶ್ ಈ ಸೇವೆ ಮಾಡಿಕೊಂಡು ಬಂದಿದ್ದಾರೆ. ಗಂಡಿಹಳ್ಳಿ ಹಾಗೂ ಉಲ್ಲಾಸಿನ ತೋಪಿನಲ್ಲಿರುವ ಗೋ ಶಾಲೆಗಳು ಪಟ್ಟಣದಿಂದ ದೂರ ಇದೆ. ಬಸ್ ವ್ಯವಸ್ಥೆ ಕೂಡಾ ಇಲ್ಲಿ ಇರೋದಿಲ್ಲ. ಹಾಗಾಗಿ ರೈತರು ಹೊಟೇಲ್‍ನಿಂದ ಪಾರ್ಸೆಲ್ ತಂದು ಊಟ ಮಾಡೋಕಾಗಲ್ಲ. ಪರಿಣಾಮ ಈ ಭಾಗದಲ್ಲಿ ಹೆಚ್ಚಿನ ರೈತರು ಉಪವಾಸ ಮಲಗುತಿದ್ದರು.

    ಹಾಗಾಗಿ ರಕ್ಷಿತ್ ಜೈ ಗಿರೀಶ್ ಇಲ್ಲಿಯ ರೈತರಿಗೆ ಉಚಿತವಾಗಿ ರಾತ್ರಿ ಊಟದ ವ್ಯವಸ್ಥೆ ಮಾಡಿದ್ದಾರೆ. ಅನ್ನದೊಂದಿಗೆ ದಿನಕ್ಕೊಂದು ರೀತಿಯ ಸಾಂಬಾರ್, ಪಲ್ಯ, ಕೊಟ್ಟು ರುಚಿ ರುಚಿಯಾದ ಊಟ ಬಡಿಸುತ್ತಿದ್ದಾರೆ. ರಕ್ಷಿತ್ ಜೈ ಗಿರೀಶ್ ತುಮಕೂರಿನವರಾದ್ರೂ ಬೆಂಗಳೂರಲ್ಲಿ ಸೆಟಲ್ ಆಗಿದ್ದಾರೆ. ಐಎನ್‍ಜಿ ವೈಶ್ಯ ಬ್ಯಾಂಕ್‍ನಲ್ಲಿ ಉದ್ಯೋಗಿಯಾಗಿದ್ದ ಇವರು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಸಮಾಜ ಸೇವೆ ಮಾಡುವ ಮನೋಭಾವದಿಂದ ಕೃಷ್ಣ ಗ್ಲೋಬಲ್ ಫೌಂಡೇಷನ್ ಎಂಬ ಸಂಸ್ಥೆ ಕಟ್ಟಿಕೊಂಡು ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

    ರಕ್ಷಿತ್ ಜೈ ಗಿರೀಶ್ ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ರೈತರಿಗಾಗಿ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಬಡ ರೈತ ಸಮುದಾಯ ಕೂಡಾ ಇವರ ಸೇವೆಗೆ ಋಣಿಯಾಗಿದೆ.

    https://youtu.be/aL9eHc85M8g