Tag: ಗೋ ಫಸ್ಟ್

  • ಹಾರಾಟ ನಿಲ್ಲಿಸಿದ ಗೋ ಫಸ್ಟ್ – ಕಂಪನಿ ದಿವಾಳಿಯಾಗಿದ್ದು ಯಾಕೆ?

    ಹಾರಾಟ ನಿಲ್ಲಿಸಿದ ಗೋ ಫಸ್ಟ್ – ಕಂಪನಿ ದಿವಾಳಿಯಾಗಿದ್ದು ಯಾಕೆ?

    ಮುಂಬೈ: ತೀವ್ರ ಹಣಕಾಸಿನ ಕೊರತೆಯಿಂದಾಗಿ ಗೋ ಫಸ್ಟ್ ಏರ್‌ಲೈನ್ಸ್‌ (Go First airline) ತನ್ನ ಹಾರಾಟವನ್ನು ನಿಲ್ಲಿಸಿದೆ.

    ಆರ್ಥಿಕ ಸಮಸ್ಯೆಯಿಂದಾಗಿ ಅಮೆರಿಕ ಮೂಲದ ಕಂಪನಿಯಿಂದ ಎಂಜಿನ್‍ಗಳನ್ನು ಪಡೆಯಲು ಸಾಧ್ಯವಾಗದ ಕಾರಣ ಸಂಸ್ಥೆಯ 50% ನಷ್ಟು ವಿಮಾನಗಳನ್ನು ಈಗಾಗಲೇ ಸ್ಥಗಿತಗೊಳಿಸಲಾಗಿತ್ತು. ಇದೀಗ ಸಂಪೂರ್ಣ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸುವುದಾಗಿ ಸಂಸ್ಥೆ ಘೋಷಿಸಿಕೊಂಡಿದೆ. ಈ ಬಗ್ಗೆ 24 ಗಂಟೆಗಳ ಒಳಗಾಗಿ ಉತ್ತರವನ್ನು ನೀಡುವಂತೆ ವಿಮಾನಯಾನ ನಿಯಂತ್ರಣ ಸಂಸ್ಥೆ (DGCA) ಕೇಳಿದೆ. ವಿಮಾನ ಹಾರಾಟ ಸ್ಥಗಿತಕ್ಕೂ ಮುನ್ನ ನಿಯಂತ್ರಣ ಸಂಸ್ಥೆಗೆ ಮಾಹಿತಿ ನೀಡುವುದು ಕಡ್ಡಾಯವಾಗಿದ್ದು, ಮಾಹಿತಿ ನೀಡದಿದ್ದಲ್ಲಿ ನಿಯಮದ ಉಲ್ಲಂಘನೆಯಾಗಲಿದೆ. ಇದನ್ನೂ ಓದಿ: ಕೇಂದ್ರದ ಮಾಜಿ ನೌಕರನ ಮನೆ ಮೇಲೆ ಸಿಬಿಐ ದಾಳಿ – 20 ಕೋಟಿ ವಶ

    ಪಿ ಅಂಡ್ ಡಬ್ಲ್ಯೂ (Pratt & Whitney) ಇಂಟರ್‌ನ್ಯಾಷನಲ್ ಏರೋ ಇಂಜಿನ್‍ಗಳು ನಿರಂತರವಾಗಿ ಸಮಸ್ಯೆ ನೀಡುತ್ತಿದ್ದವು. ಇದರ ಪರಿಣಾಮವಾಗಿ ಗೋ ಫಸ್ಟ್ 28 ವಿಮಾನಗಳನ್ನು ಸ್ಥಗಿತಗೊಳಿಸಬೇಕಾದ ಅನಿವಾರ್ಯತೆ ಎದುರಾಯಿತು. ವಾಡಿಯಾ ಗ್ರೂಪ್ ಒಡೆತನದ ರಾಷ್ಟ್ರೀಯ ಕಂಪನಿಯು ಕಾನೂನು ನ್ಯಾಯಮಂಡಳಿಯ ಮುಂದೆ ದಿವಾಳಿತನಕ್ಕಾಗಿ ಅರ್ಜಿ ಸಲ್ಲಿಸಿದೆ. ಇದು ದುರದೃಷ್ಟಕರ ನಿರ್ಧಾರ, ಆದರೆ ಕಂಪನಿಯ ಹಿತಾಸಕ್ತಿಗಳನ್ನು ರಕ್ಷಿಸಲು ಇದನ್ನು ಮಾಡಬೇಕಾಗಿದೆ ಎಂದು ಗೋ ಫಸ್ಟ್ ಮುಖ್ಯ ಕಾರ್ಯನಿರ್ವಾಹಕ ಕೌಶಿಕ್ ಖೋನಾ ತಿಳಿಸಿದ್ದಾರೆ.

    ವಿಮಾನಯಾನ ಸಂಸ್ಥೆಯು ಇಂಜಿನ್‍ಗಳ ಪೂರೈಕೆ ಸಮಸ್ಯೆಗಳನ್ನು ಎದುರಿಸುತ್ತಿದೆ. ಅಲ್ಲದೆ ಸರ್ಕಾರವು ಸಂಸ್ಥೆಗೆ ಸಾಧ್ಯವಿರುವ ಎಲ್ಲ ರೀತಿಯ ಸಹಾಯ ಮಾಡಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ತಿಳಿಸಿದ್ದಾರೆ.

    ಗೋ ಫಸ್ಟ್ ದಿವಾಳಿಗೇನು ಕಾರಣ?
    ಗೋ ಫಸ್ಟ್ ವಿಮಾನಗಳು ಎಂಜಿನ್ ಸಮಸ್ಯೆ ಎದುರಿಸುತ್ತಿದ್ದವು. ಆದರೆ ಎಂಜಿನ್ ಪೂರೈಕೆ ಒಪ್ಪಂದ ಮಾಡಿಕೊಂಡಿದ್ದ ಪಿ ಅಂಡ್ ಡಬ್ಲ್ಯೂ ಕಂಪನಿ ಎಂಜಿನ್ ಪೂರೈಕೆ ಮಾಡುವಲ್ಲಿ ವಿಫಲವಾಗಿತ್ತು. ಇದರಿಂದ 28 ವಿಮಾನಗಳನ್ನು ಸಂಸ್ಥೆ ನಿಲ್ಲಿಸಿತ್ತು. ಇದು ಸಂಸ್ಥೆಯ ಆರ್ಥಿಕ ನಷ್ಟಕ್ಕೆ ಕಾರಣವಾಗಿತ್ತು.

    17 ವರ್ಷಗಳ ಹಿಂದೆ ಸ್ಥಾಪನೆಗೊಂಡಿದ್ದ ಸಂಸ್ಥೆಯು 9000 ಕೋಟಿ ರೂ. ಸಾಲವನ್ನು ಹೊಂದಿದೆ. ವಿಮಾನಯಾನ ಸಂಸ್ಥೆಯನ್ನು ಉಳಿಸಲು ಹೂಡಿದಾರರು ಕಳೆದ ಮೂರು ವರ್ಷಗಳಲ್ಲಿ 3200 ಕೋಟಿ ರೂ. ಹೂಡಿಕೆ ಮಾಡಿದ್ದರು. ಇದನ್ನೂ ಓದಿ: ಪೊಲೀಸರೆಂದು ಯಾಮಾರಿಸಿ ವಿದೇಶಿ ಪ್ರಜೆಯ ಹಣ ದೋಚಿದ ದುಷ್ಕರ್ಮಿಗಳು

  • ಕುಡಿದ ಅಮಲಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ – American Airlines ನಲ್ಲಿ ಮತ್ತೊಂದು ಕೇಸ್‌

    ಕುಡಿದ ಅಮಲಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ – American Airlines ನಲ್ಲಿ ಮತ್ತೊಂದು ಕೇಸ್‌

    ವಾಷಿಂಗ್ಟನ್‌: ಇತ್ತೀಚೆಗೆ ವಿಮಾನಗಳಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಏರ್ ಇಂಡಿಯಾ (Air India), ಗೋ ಫಸ್ಟ್‌ ಬಳಿಕ ಅಮೆರಿಕನ್ ಏರ್‌ಲೈನ್ಸ್ (American Airlines) ವಿಮಾನದಲ್ಲೂ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.‌

    ಅಮೆರಿಕನ್‌ ಏರ್‌ಲೈನ್ಸ್‌ನ ನ್ಯೂಯಾರ್ಕ್‌-ನವದೆಹಲಿ (New York-Delhi Flight) ವಿಮಾನದಲ್ಲಿ ಭಾರತದ ಪ್ರಯಾಣಿಕನೊಬ್ಬ ಕುಡಿದ ಅಮಲಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ವಿಮಾನ ದೆಹಲಿಗೆ ಬಂದಿಳಿದ ನಂತರ ಆರೋಪಿಯನ್ನ ಸಿಐಎಸ್ಎಫ್ ಅಧಿಕಾರಿಗಳು ಬಂಧಿಸಿದ್ದಾರೆ.

    Air India

    ವಿಮಾನಯಾನ ಸಂಸ್ಥೆ ಸಹಪ್ರಯಾಣಿಕನ ಹೇಳಿಕೆಯನ್ನ ದಾಖಲಿಸಿಕೊಂಡಿದ್ದು, ಆರೋಪಿ ವಿರುದ್ಧ ನಾಗರಿಕ ವಿಮಾನಯಾನ ಕಾಯ್ದೆ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಇದನ್ನೂ ಓದಿ: ಕೇದಾರನಾಥ ಯಾತ್ರೆ ಇಂದಿನಿಂದ ಆರಂಭ – ಯಾತ್ರಾರ್ಥಿಗಳಿಗೆ ಬಾಗಿಲು ತೆರೆದ ದೇವಾಲಯ

    ಏನಿದು ಘಟನೆ?
    ಅಮೆರಿಕನ್‌ ಏರ್‌ಲೈನ್ಸ್‌ನ AA-292 ವಿಮಾನವು ನ್ಯೂಯಾರ್ಕ್‌ನಿಂದ ದೆಹಲಿಗೆ ಹೊರಟಿತ್ತು. ಈ ವೇಳೆ ಭಾರತದ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ಸಂಬಂಧ ಅಮೆರಿಕನ್‌ ಏರ್‌ಲೈನ್ಸ್‌ ವಿಮಾನ ಲ್ಯಾಂಡಿಂಗ್‌ ಆಗುವ ಮೊದಲೇ ದೆಹಲಿ ವಿಮಾನ ನಿಲ್ದಾಣಕ್ಕೆ (Delhi Airport) ವಿಷಯ ವರದಿ ಮಾಡಿತ್ತು. ಭಾನುವಾರ ರಾತ್ರಿ 9 ಗಂಟೆಗೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಆರೋಪಿಯನ್ನ ಬಂಧಿಸಲಾಗಿದೆ. ಇದನ್ನೂ ಓದಿ: ಯಾವುದೇ ಅಹಂ ಇಲ್ಲ, ಬಿಜೆಪಿ ವಿರುದ್ಧ ಹೋರಾಡಲು ಸಿದ್ಧ: ಮಮತಾ ಬ್ಯಾನರ್ಜಿಯನ್ನು ಭೇಟಿಯಾದ ನಿತೀಶ್

    ಕಳೆದ ವರ್ಷ ನವೆಂಬರ್‌ನಲ್ಲಿ ಏರ್‌ ಇಂಡಿಯಾದಲ್ಲಿ ವ್ಯಕ್ತಿಯೊಬ್ಬ ಸಹ ಪ್ರಯಾಣಿಕ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಮತ್ತೊಂದು ಘಟನೆಯಲ್ಲಿ ಡಿಸೆಂಬರ್‌ 6 ರಂದು ಪ್ಯಾರಿಸ್-ನವದೆಹಲಿ ಏರ್‌ ಇಂಡಿಯಾ ವಿಮಾನದಲ್ಲೂ ಇದೇ ಘಟನೆ ನಡೆದಿತ್ತು. ಈ ವರ್ಷದ ಮಾರ್ಚ್‌ ತಿಂಗಳಲ್ಲೂ ಅಮೆರಿಕನ್‌ ಏರ್‌ಲೈನ್ಸ್‌ನಲ್ಲಿ ಇದೇ ರೀತಿ ಘಟನೆ ವರದಿಯಾಗಿತ್ತು.

  • ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಹೋಗಿದ್ದ ʼGo First’ಗೆ 10 ಲಕ್ಷ ದಂಡ

    ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಹೋಗಿದ್ದ ʼGo First’ಗೆ 10 ಲಕ್ಷ ದಂಡ

    ನವದೆಹಲಿ: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Airport) 55 ಪ್ರಯಾಣಿಕರನ್ನು ಬಿಟ್ಟು ಹೋಗಿದ್ದಕ್ಕಾಗಿ ‘ಗೋ ಫಸ್ಟ್‌’ (Go First Flight) ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು (DGCA) 10 ಲಕ್ಷ ರೂ. ದಂಡವನ್ನು ವಿಧಿಸಿದೆ.

    ಈ ಅಚಾತುರ್ಯ ಸಂಭವಿಸಿದ ಬೆನ್ನಲ್ಲೇ ಗೋ ಫಸ್ಟ್‌ಗೆ ಡಿಜಿಸಿಎ ನೋಟಿಸ್‌ ನೀಡಿತ್ತು. “ಸಂವಹನ, ಸಮನ್ವಯದ ಕೊರತೆ ಮತ್ತು ದೃಢಪಡಿಸಿಕೊಳ್ಳುವಲ್ಲಿ ಆಗಿರುವ ತಪ್ಪುಗಳಿಂದ ಈ ಲೋಪ ಸಂಭವಿಸಿದೆ. ಈ ನಿರ್ಲಕ್ಷ್ಯಕ್ಕೆ ತಮ್ಮ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು” ಎಂದು ‘ಗೋ ಫಸ್ಟ್‌’ನ ಅಕೌಂಟೆಬಲ್‌ ಮ್ಯಾನೇಜರ್‌/ ಚೀಫ್‌ ಆಪರೇಷನ್‌ ಆಫೀಸರ್‌ಗೆ ಡಿಜಿಸಿಎ ನೋಟಿಸ್‌ ನೀಡಿತ್ತು. ನೋಟಿಸ್‌ಗೆ ಉತ್ತರಿಸಲು ಎರಡು ವಾರಗಳ ಕಾಲಾವಕಾಶವನ್ನು ನೀಡಿತ್ತು. ಇದನ್ನೂ ಓದಿ: 50 ಪ್ರಯಾಣಿಕರನ್ನು ಬಿಟ್ಟುಹೋದ ವಿಮಾನ – ಗೋ ಫಸ್ಟ್‌ಗೆ DGCA ನೋಟಿಸ್

    ಏನಿದು ಘಟನೆ?
    ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಜ.9 ರಂದು ಬೆಳಗ್ಗೆ ಚಲಿಸಿದ ‘ಗೋ ಫಸ್ಟ್‌’ ಸಂಸ್ಥೆಯ ವಿಮಾನವು (ಜಿ8–116), ವಿಮಾನ ನಿಲ್ದಾಣದಲ್ಲಿ ಪ್ಯಾಸೆಂಜರ್‌ ಕೋಚ್‌ನಲ್ಲಿ (ಬಸ್‌) 55 ಪ್ರಯಾಣಿಕರನ್ನು ಬಿಟ್ಟು ಹೋಗಿತ್ತು.

    ಸಿಬ್ಬಂದಿಯಿಂದ ಆದ ಆಚಾತುರ್ಯಕ್ಕಾಗಿ ‘ಗೋ ಫಸ್ಟ್‌’ ವಿಮಾನಯಾನ ಸಂಸ್ಥೆಯು ಪ್ರಯಾಣಿಕರಲ್ಲಿ ಕ್ಷಮೆ ಕೋರಿತ್ತು. ಪ್ರಯಾಣಿಕರಿಗೆ ದೆಹಲಿ ಮತ್ತು ಇತರ ಸ್ಥಳಗಳಿಗೆ ಪರ್ಯಾಯ ವಿಮಾನಗಳಲ್ಲಿ ವ್ಯವಸ್ಥೆ ಕಲ್ಪಿಸಲಾಯಿತು ಎಂದೂ ಅದು ಹೇಳಿಕೊಂಡಿತ್ತು. ಇದನ್ನೂ ಓದಿ: ಏರ್ ಇಂಡಿಯಾದಲ್ಲಿ ಮೂತ್ರವಿಸರ್ಜನೆ ಪ್ರಕರಣ ಬಳಿಕ ಗೋ ಫಸ್ಟ್‌ನಲ್ಲಿ ಗಗನಸಖಿಗೆ ವಿದೇಶಿಗನಿಂದ ಕಿರುಕುಳ

    ಸಮಸ್ಯೆಗೆ ಒಳಗಾದ ಪ್ರಯಾಣಿಕರಿಗೆ ಮುಂದಿನ 12 ತಿಂಗಳಲ್ಲಿ ದೇಶದ ಯಾವುದೇ ಸ್ಥಳಕ್ಕೆ ಪ್ರಯಾಣಿಸಲು ಒಂದು ಉಚಿತ ಟಿಕೆಟ್ ನೀಡಲು ನಿರ್ಧರಿಸಲಾಗಿದೆ ಎಂದು ಗೋ ಫಸ್ಟ್‌ ತಿಳಿಸಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 50 ಪ್ರಯಾಣಿಕರನ್ನು ಬಿಟ್ಟುಹೋದ ವಿಮಾನ –  ಗೋ ಫಸ್ಟ್‌ಗೆ DGCA ನೋಟಿಸ್

    50 ಪ್ರಯಾಣಿಕರನ್ನು ಬಿಟ್ಟುಹೋದ ವಿಮಾನ – ಗೋ ಫಸ್ಟ್‌ಗೆ DGCA ನೋಟಿಸ್

    ನವದೆಹಲಿ: ಸೋಮವಾರ ಬೆಂಗಳೂರಿನಿಂದ (Bengaluru) ದೆಹಲಿಗೆ (Delhi) ಪ್ರಯಾಣಿಸಬೇಕಿದ್ದ ಗೋ ಫಸ್ಟ್ ವಿಮಾನ (Go First Flight) ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರನ್ನು (Passengers) ನಿಲ್ದಾಣದಲ್ಲಿಯೇ (Airport) ಬಿಟ್ಟು ಟೇಕ್ ಆಫ್ ಆಗಿತ್ತು. ಇತ್ತೀಚೆಗೆ ವಿಮಾನಯಾನ ಸಂಸ್ಥೆಯಿಂದಾಗುತ್ತಿರುವ ಹಲವು ತಪ್ಪುಗಳಿಗೆ ವಿಮಾನಯಾನ ನಿಯಂತ್ರಕ ಡಿಜಿಸಿಎ (DGCA) ನೋಟಿಸ್ ಕಳುಹಿಸಿದೆ.

    ಒಂದಾದಮೇಲೊಂದರಂತೆ ವಿಮಾನಯಾನ ಸಂಸ್ಥೆಯಿಂದಾಗುತ್ತಿರುವ ತಪ್ಪುಗಳಿಗೆ ಕಾರಣಗಳನ್ನು ನೀಡುವಂತೆ ಡಿಜಿಸಿಎ ನೋಟಿಸ್ ಕಳುಹಿಸಿದೆ. ಇದಕ್ಕೆ ಉತ್ತರಿಸಲು ಸಂಸ್ಥೆಗೆ 2 ವಾರಗಳ ಕಾಲಾವಕಾಶವನ್ನು ನೀಡಿದೆ.

    ಸೋಮವಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 6:30ಕ್ಕೆ ಗೋ ಫಸ್ಟ್‌ನ ಜಿ8 118 ವಿಮಾನ ದೆಹಲಿಗೆ ಟೇಕ್ ಆಫ್ ಆಗಿತ್ತು. ಆದರೆ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ವಿಮಾನ ಹತ್ತಿಸಿಕೊಳ್ಳುವುದಕ್ಕಿಂತಲೂ ಮೊದಲೇ ಹಾರಾಟ ಪ್ರಾರಂಭಿಸಿತ್ತು. ಇದನ್ನೂ ಓದಿ: ಡೆಡ್ಲಿ ಮೆಟ್ರೋಗೆ ಇಬ್ಬರು ಬಲಿ – ಪಿಲ್ಲರ್ ದುರಂತಕ್ಕೆ ಕಾರಣಗಳೇನು?

    ವರದಿಗಳ ಪ್ರಕಾರ ಸೋಮವಾರ ಬೆಳಗ್ಗೆ ದೆಹಲಿಗೆ ಹೊರಟಿದ್ದ ವಿಮಾನಕ್ಕೆ 4 ಬಸ್‌ಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲಾಗಿತ್ತು. ಪ್ರಯಾಣಿಕರು ತಮ್ಮ ಬೋರ್ಡಿಂಗ್ ಪಾಸ್‌ಗಳನ್ನು ಪಡೆದಿದ್ದು, ತಮ್ಮ ಲಗೇಜ್‌ಗಳನ್ನೂ ಪರಿಶೀಲಿಸಲಾಗಿತ್ತು. 3 ಬಸ್‌ಗಳಲ್ಲಿ ತೆರಳಿದ್ದ ಪ್ರಯಾಣಿಕರನ್ನು ವಿಮಾನ ಹತ್ತಿಸಿಕೊಂಡು ಟೇಕ್ ಆಫ್ ಆಗಿತ್ತು. ಆದರೆ ಒಂದು ಬಸ್ ನಿಲ್ದಾಣದಲ್ಲಿಯೇ ಉಳಿದುಹೋಗಿತ್ತು. ವಿಮಾನ ತಮ್ಮನ್ನು ಬಿಟ್ಟು ಹೋಗಿದ್ದನ್ನು ತಿಳಿದ ಕೆಲ ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳಲ್ಲಿ ಸಂಸ್ಥೆ ನಿರ್ಲಕ್ಷ್ಯವಹಿಸಿದೆ ಎಂದು ಕಿಡಿ ಕಾರಿದ್ದಾರೆ.

    ಪ್ರಯಾಣದಿಂದ ವಂಚಿತರಾದವರಿಗೆ ಬೇರೆ ವಿಮಾನದ ವ್ಯವಸ್ಥೆ ಮಾಡಲಾಗಿತ್ತು. ಆದರೂ ಕೆಲ ಪ್ರಯಾಣಿಕರು ಇದನ್ನು ನಿರಾಕರಿಸಿ ತಮ್ಮ ಟಿಕೆಟ್‌ಗಳನ್ನು ಕ್ಯಾನ್ಸಲ್ ಮಾಡಿಸಿ ಮರುಪಾವತಿ ಮಾಡುವಂತೆ ಆಗ್ರಹಿಸಿರುವುದಾಗಿ ವರದಿಯಾಗಿದೆ. ತಮ್ಮಿಂದಾಗಿರುವ ತಪ್ಪಿಗೆ ಗೋ ಫಸ್ಟ್ ಕ್ಷಮೆ ಕೇಳಿದ್ದು, ಮುಂದಿವ ವರ್ಷದೊಳಗೆ ಪ್ರಯಾಣ ವಂಚಿತರಿಗೆ ಭಾರತದಲ್ಲಿ ಎಲ್ಲಾದರೂ ಪ್ರಯಾಣಿಸಲು ಒಂದು ಉಚಿತ ಟಿಕೆಟ್ ನೀಡುವುದಾಗಿ ಘೋಷಿಸಿದೆ. ಇದನ್ನೂ ಓದಿ: ಅಗಲಿದ ಮುದ್ದು ನಾಯಿಗೆ 47ನೇ ಅರ್ಧಶತಕವನ್ನು ಅರ್ಪಿಸಿದ ರೋಹಿತ್ ಶರ್ಮಾ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಬಿಟ್ಟು ದೆಹಲಿಗೆ  GO FIRST ವಿಮಾನ ಟೇಕಾಫ್

    ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಬಿಟ್ಟು ದೆಹಲಿಗೆ GO FIRST ವಿಮಾನ ಟೇಕಾಫ್

    ಬೆಂಗಳೂರು: ದೆಹಲಿಗೆ (Delhi) ಹೋಗಬೇಕಿದ್ದ ಗೋ ಫಸ್ಟ್ ವಿಮಾನವೊಂದು (Go First Flight) ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ (Bengaluru Airport) ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರನ್ನು (Passengers) ಅಲ್ಲೇ ಬಿಟ್ಟು ಟೇಕಾಫ್ ಆಗಿರುವ ಘಟನೆ ವರದಿಯಾಗಿದೆ.

    ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ಗೋ ಫಸ್ಟ್ ವಿಮಾನ ಜಿ8116 ಸೋಮವಾರ ಬೆಳಗ್ಗೆ 6:30ರ ವೇಳೆಗೆ ಟೇಕಾಫ್ ಆಫ್ ಆಗಿದೆ. ಆದರೆ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿಲ್ದಾಣದಲ್ಲಿಯೇ ಬಿಟ್ಟು ವಿಮಾನ ಟೇಕಾಫ್ ಆಗಿದೆ. ಈ ಬಗ್ಗೆ ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಾಕಿ ವಿಮಾನಯಾನ ಸಂಸ್ಥೆ ನಿರ್ಲಕ್ಷ್ಯವಹಿಸಿದೆ ಎಂದು ಆರೋಪ ಮಾಡಿದ್ದಾರೆ.

    ಪ್ರಯಾಣಿಕರು ಬೋರ್ಡಿಂಗ್ ಪಾಸ್‌ಗಳನ್ನು ಹೊಂದಿದ್ದು, ಲಗೇಜ್‌ಗಳನ್ನೂ ಪರಿಶೀಲಿಸಲಾಗಿತ್ತು. ಆದರೆ ಪ್ರಯಾಣಿಕರು ವಿಮಾನದೆಡೆಗೆ ಹೊತ್ತೊಯ್ಯುತ್ತಿದ್ದ ಬಸ್‌ನಲ್ಲಿಯೇ ಉಳಿದುಕೊಂಡಿದ್ದರು. ಈ ವೇಳೆ ವಿಮಾನ ಟೇಕಾಫ್ ಆಗಿದೆ. ಇದು ವಿಮಾನಯಾನ ಸಂಸ್ಥೆಯ ನಿರ್ಲಕ್ಷ್ಯವಾಗಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಬ್ರೆಜಿಲ್‌ ಚುನಾವಣೆಯಲ್ಲಿ ಸೋಲು – ಅಧಿಕಾರಕ್ಕೆ ಸಂಸತ್‌ ಭವನಕ್ಕೆ ನುಗ್ಗಿ ದಾಂಧಲೆ

    ಕೆಲ ಪ್ರಯಾಣಿಕರು ಈ ಬಗ್ಗೆ ಟ್ವೀಟ್‌ನಲ್ಲಿ ಆರೋಪ ಹೊರಿಸಿದ್ದು, ಇದಕ್ಕೆ ವಿಮಾನಯಾನ ಸಂಸ್ಥೆ ಪ್ರತಿಕ್ರಿಯಿಸಿದೆ. ನಮ್ಮಿಂದ ಉಂಟಾಗಿರುವ ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದು ಪ್ರಯಾಣಿಕರಲ್ಲಿ ಕ್ಷಮೆ ಕೇಳಿದೆ. ಇದನ್ನೂ ಓದಿ: ಅತ್ತೆ ಹೆಬ್ಬಾಳ್ಕರ್ ಮಾದರಿಯಲ್ಲಿ ರಾಜಕೀಯ ಶುರು ಮಾಡಿದ ಅಳಿಯ ರಜತ್ ಉಳ್ಳಾಗಡ್ಡಿಮಠ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಏರ್ ಇಂಡಿಯಾದಲ್ಲಿ ಮೂತ್ರವಿಸರ್ಜನೆ ಪ್ರಕರಣ ಬಳಿಕ ಗೋ ಫಸ್ಟ್‌ನಲ್ಲಿ ಗಗನಸಖಿಗೆ ವಿದೇಶಿಗನಿಂದ ಕಿರುಕುಳ

    ಏರ್ ಇಂಡಿಯಾದಲ್ಲಿ ಮೂತ್ರವಿಸರ್ಜನೆ ಪ್ರಕರಣ ಬಳಿಕ ಗೋ ಫಸ್ಟ್‌ನಲ್ಲಿ ಗಗನಸಖಿಗೆ ವಿದೇಶಿಗನಿಂದ ಕಿರುಕುಳ

    ಪಣಜಿ: ಏರ್ ಇಂಡಿಯಾ (Air India) ವಿಮಾನದಲ್ಲಿ (Flight) ಪ್ರಯಾಣಿಕನೊಬ್ಬ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಬೆಳಕಿಗೆ ಬಂದ ಬಳಿಕ ಇದೀಗ ಗೋ ಫಸ್ಟ್ (Go First) ವಿಮಾನದಲ್ಲಿ ಕಿರುಕುಳದ (Harassment) ಇನ್ನೊಂದು ಪ್ರಕರಣ ವರದಿಯಾಗಿದೆ.

    ಜನವರಿ 5 ರಂದು ನವದೆಹಲಿಯಿಂದ ಗೋವಾಗೆ ಹೋಗುತ್ತಿದ್ದ ಗೋ ಫಸ್ಟ್ ವಿಮಾನದಲ್ಲಿ ಮಹಿಳಾ ಗಗನಸಖಿಗೆ (Flight Attendant) ವಿದೇಶಿ ಪ್ರಯಾಣಿಕನೊಬ್ಬ ಕಿರುಕುಳ ನೀಡಿರುವುದಾಗಿ ವರದಿಯಾಗಿದೆ. ಪ್ರಯಾಣಿಕ ಆಕೆಗೆ ತನ್ನೊಂದಿಗೆ ಕುಳಿತುಕೊಳ್ಳುವಂತೆ ಹೇಳಿ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ.

    ವರದಿಗಳ ಪ್ರಕಾರ ವ್ಯಕ್ತಿ ಪದೇ ಪದೇ ತನ್ನೊಂದಿಗೆ ಕುಳಿತುಕೊಳ್ಳುವಂತೆ ಪೀಡಿಸಿದ್ದಾನೆ. ಆತ ಈ ವೇಳೆ ಮದ್ಯಪಾನ ಮಾಡಿದ್ದನೋ ಇಲ್ಲವೋ ಎಂಬುದು ತಿಳಿದುಬಂದಿಲ್ಲ. ವಿಮಾನ ಗೋವಾದ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಆತನನ್ನು ವಿಮಾನ ಭದ್ರತಾ ಸಂಸ್ಥೆ ಸಿಐಎಸ್‌ಎಫ್‌ಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಶಂಕರ್ ಮಿಶ್ರಾಗೆ 14 ದಿನ ನ್ಯಾಯಾಂಗ ಬಂಧನ

    ಏರ್ ಇಂಡಿಯಾ ವಿಮಾನದಲ್ಲಿ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಬೆಳಕಿಗೆ ಬಂದಿರುವ ಬೆನ್ನಲ್ಲೇ ಈ ಘಟನೆಯೂ ನಡೆದಿದೆ. ಆದರೆ ಇದು ಬೆಳಕಿಗೆ ಬಂದಿರುವುದು ಮೂತ್ರ ವಿಸರ್ಜನೆ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಬಳಿಕ.

    ನವೆಂಬರ್ 26ರಂದು ಏರ್ ಇಂಡಿಯಾ ವಿಮಾನದಲ್ಲಿ ಆರೋಪಿ ಶಂಕರ್ ಮಿಶ್ರಾ ತನ್ನ ಪ್ಯಾಂಟ್ ಬಿಚ್ಚಿ ವಯಸ್ಸಾದ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಆತನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೇ ಏರ್ ಇಂಡಿಯಾ ಆತನನ್ನು ಹೋಗಲು ಬಿಟ್ಟಿತ್ತು. ಆದರೆ ಘಟನೆ ಬಗ್ಗೆ ಮಹಿಳೆ ಜನವರಿ 5 ರಂದು ವಿಮಾನಯಾನ ಸಂಸ್ಥೆ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಮಗ್ಗಿ ಹೇಳಿ ವಿಶ್ವ ದಾಖಲೆ ಬರೆದ ಚೈತನ್ಯ ಶಾಲೆ

    ಘಟನೆ ಬೆಳಕಿಗೆ ಬರುತ್ತಲೇ ಶಂಕರ್ ಮಿಶ್ರಾ ತಲೆಮರೆಸಿಕೊಳ್ಳಲು ಪ್ರಯತ್ನಿಸಿದ್ದ. ಶುಕ್ರವಾರ ದೆಹಲಿ ಪೊಲೀಸರ ತಂಡ ಆತನನ್ನು ಬೆಂಗಳೂರಿನಲ್ಲಿ ಬಂಧಿಸಿದೆ. ಶನಿವಾರ ಬೆಳಗ್ಗೆ ಆತನನ್ನು ದೆಹಲಿಗೆ ಒಯ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಇಂಡಿಗೋ ವಿಮಾನದ ಅಡಿಯಲ್ಲಿ ಗೋ ಫಸ್ಟ್‌ನ ಕಾರು ಪಾರ್ಕ್ – ತನಿಖೆಗೆ ಆದೇಶ

    ಇಂಡಿಗೋ ವಿಮಾನದ ಅಡಿಯಲ್ಲಿ ಗೋ ಫಸ್ಟ್‌ನ ಕಾರು ಪಾರ್ಕ್ – ತನಿಖೆಗೆ ಆದೇಶ

    ನವದೆಹಲಿ: ಗೋ ಫಸ್ಟ್ ಏರ್‌ಲೈನ್‌ಗೆ ಸೇರಿದ ಕಾರನ್ನು ಮಂಗಳವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ ಇಂಡಿಗೋ ವಿಮಾನ ಮೂತಿಯ ಅಡಿಯಲ್ಲಿ ಪಾರ್ಕ್ ಮಾಡಿದ್ದು, ಅದು ವಿಮಾನದ ಮುಂದಿನ ಚಕ್ರಕ್ಕೆ ತಾಗುವುದು ಸ್ವಲ್ಪದರಲ್ಲೇ ತಪ್ಪಿದೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಇಂದು ಬೆಳಗ್ಗೆ ಪಾಟ್ನಾಗೆ ಹೋಗಬೇಕಿದ್ದ ಇಂಡಿಗೋ ಎ320 ವಿಮಾನವನ್ನು ದೆಹಲಿ ನಿಲ್ದಾಣದ ಟಿ2 ಟರ್ಮಿನಲ್‌ನಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಏಕಾಏಕಿ ಬಂದ ಗೋ ಫಸ್ಟ್ ಏರ್‌ಲೈನ್‌ಗೆ ಸೇರಿದ ಕಾರು ವಿಮಾನದ ಮೂತಿಯ ಅಡಿಯಲ್ಲಿ ನಿಂತಿದೆ. ವಿಮಾನದ ಚಕ್ರಕ್ಕೆ ಡಿಕ್ಕಿಯಾಗುವುದು ಸ್ವಲ್ಪದರಲ್ಲೇ ತಪ್ಪಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಅಭಿಮಾನಿಯಿಂದ ಒಂದೂವರೆ ಕೆ.ಜಿ ತೂಕದ ಬೆಳ್ಳಿ ಮೂರ್ತಿ ಗಿಫ್ಟ್!

    ಕಾರು ಚಾಲಕ ಈ ರೀತಿಯಾಗಿ ವರ್ತಿಸಲು ಕಾರಣವೇನು ಎಂದು ತಿಳಿಯಲು ತನಿಖೆ ಕೈಗೊಳ್ಳುವುದಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯದ(ಡಿಜಿಸಿಎ) ಅಧಿಕಾರಿಗಳು ತಿಳಿಸಿದ್ದಾರೆ. ಕಾರು ಚಾಲಕ ಮದ್ಯ ಸೇವನೆ ಮಾಡಿಲ್ಲ ಎಂಬುದನ್ನೂ ದೃಢಪಡಿಸಲಾಗಿದೆ. ಸದ್ಯ ವಿಮಾನಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಇಂಡಿಗೋ ತಿಳಿಸಿದೆ. ಇದನ್ನೂ ಓದಿ: Commonwealth Games: ಆಂಗ್ಲರ ವಿರುದ್ಧ ಗೆಲ್ಲುವ ಅವಕಾಶ ಕೈಚೆಲ್ಲಿದ ಭಾರತದ ಹಾಕಿ ತಂಡ

    ಘಟನೆಯ ಕುರಿತು ಇಂಡಿಗೋ ಅಥವಾ ಗೋ ಫಸ್ಟ್ ಯಾವುದೇ ಹೇಳಿಕೆ ನೀಡಿಲ್ಲ. ಪಾಟ್ನಾಗೆ ಹೋಗಬೇಕಿದ್ದ ವಿಮಾನ ನಿಗದಿತ ಸಮಯಕ್ಕೆ ತೆರಳಿದೆ ಎಂದು ಮೂಲಗಳು ತಿಳಿಸಿವೆ.

    Live Tv
    [brid partner=56869869 player=32851 video=960834 autoplay=true]

  • ಆಗಸದಲ್ಲೇ ಬಿರುಕು ಬಿಟ್ಟ ವಿಮಾನದ ಕಿಟಕಿ ಗಾಜು – ತುರ್ತು ಭೂಸ್ಪರ್ಶ

    ಆಗಸದಲ್ಲೇ ಬಿರುಕು ಬಿಟ್ಟ ವಿಮಾನದ ಕಿಟಕಿ ಗಾಜು – ತುರ್ತು ಭೂಸ್ಪರ್ಶ

    ನವದೆಹಲಿ: ಗೋ ಏರ್ ಸಂಸ್ಥೆಯ ವಿಮಾನದ ಕಿಟಕಿ ಗಾಜು ಆಗಸದಲ್ಲೇ ಬಿರುಕು ಬಿಟ್ಟ ಪರಿಣಾಮ ಗೋಫಸ್ಟ್ ವಿಮಾನ ತುರ್ತು ಭೂಸ್ಪರ್ಶ ಮಾಡಿರುವ ಬಗ್ಗೆ ವರದಿಯಾಗಿದೆ.

    ದೆಹಲಿ-ಗುವಾಹತಿ ನಡುವೆ ಸಂಚರಿಸುತ್ತಿದ್ದ ಗೋ ಏರ್ ಸಂಸ್ಥೆಯ GoAir A320 aircraft VT-WGA ವಿಮಾನದ ವಿಂಡ್‍ಶೀಲ್ಡ್ ಆಗಸದಲ್ಲಿರುವಾಗಲೇ ಬಿರುಕು ಬಿಟ್ಟಿದೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ವಿಮಾನವನ್ನು ಜೈಪುರಕ್ಕೆ ತಿರುಗಿಸಿ ತುರ್ತು ಭೂಸ್ಪರ್ಶ ಮಾಡಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ತುರ್ತು ಭೂಸ್ಪರ್ಶಿಸಿದ 2 ಗೋಫಸ್ಟ್ ವಿಮಾನ

    ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು, ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎರಡು ದಿನಗಳಲ್ಲಿ ಗೋ ಏರ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಮೂರನೇ ಘಟನೆ ಇದಾಗಿದೆ. ವಾರಗಳ ಅಂತರದಲ್ಲಿ ಗೋ ಫಸ್ಟ್‌ನ ಮುಂಬೈ-ಲೇಹ್ ಮತ್ತು ಶ್ರೀನಗರ-ದೆಹಲಿ ಪ್ರಯಾಣಿಸುತ್ತಿದ್ದ ವಿಮಾನಗಳು ತಾಂತ್ರಿಕ ದೋಷದಿಂದಾಗಿ ತುರ್ತು ಭೂಸ್ಪರ್ಶ ಮಾಡಿತ್ತು. ಇಂದಿನ ಘಟನೆ ಸೇರಿ ಇದೀಗ ಒಂದೇ ಸಂಸ್ಥೆಯ ಪ್ರಯಾಣಿಕ ವಿಮಾನ ದಿನಗಳ ಅಂತರದಲ್ಲಿ ತುರ್ತು ಭೂಸ್ಪರ್ಶ ಮಾಡುತ್ತಿರುವುದು ಮೂರನೇ ಘಟನೆಯಾಗಿದೆ. ಇದನ್ನೂ ಓದಿ: ಪೊಲೀಸ್‌ ಕಾನ್‌ಸ್ಟೇಬಲ್‌ ಮೇಲೆ ಟ್ರಕ್‌ ಹತ್ತಿಸಿ ಕೊಲೆ – 24 ಗಂಟೆಯಲ್ಲಿ 3ನೇ ದುರ್ಘಟನೆ

    Live Tv
    [brid partner=56869869 player=32851 video=960834 autoplay=true]