Tag: ಗೋ ಪಿಂಕ್ ಕ್ಯಾಬ್

  • ಕೆಐಎಎಲ್‍ನಲ್ಲಿ ಮಹಿಳೆಯರಿಗಾಗಿ ಮಹಿಳೆಯರೇ ಚಲಾಯಿಸುವ ಗೋ ಪಿಂಕ್ ಕ್ಯಾಬ್‍ಗೆ ಚಾಲನೆ

    ಕೆಐಎಎಲ್‍ನಲ್ಲಿ ಮಹಿಳೆಯರಿಗಾಗಿ ಮಹಿಳೆಯರೇ ಚಲಾಯಿಸುವ ಗೋ ಪಿಂಕ್ ಕ್ಯಾಬ್‍ಗೆ ಚಾಲನೆ

    ಚಿಕ್ಕಬಳ್ಳಾಪುರ: ಕ್ಯಾಬ್‍ಗಳಲ್ಲಿ ಮಹಿಳೆಯರಿಗೆ ಚಾಲಕರು ಲೈಂಗಿಕ ಕಿರುಕುಳ ನೀಡಿರುವ ಆರೋಪಗಳು ಕೇಳಿ ಬಂದು ಹಲವು ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಲೇರಿದ ಬೆನ್ನಲ್ಲೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏಕಾಂಗಿಯಾಗಿ ಬರುವ ಮಹಿಳೆಯರು, ಯುವತಿಯರಿಗೆ ಪ್ರತ್ಯೇಕ ಕ್ಯಾಬ್ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.

    ರಾಜ್ಯ ಪ್ರವಾಸೋದ್ಯಮ ಇಲಾಖೆ (ಕೆಎಸ್‍ಟಿಡಿಸಿ) ಮತ್ತು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ಪ್ರಾಧಿಕಾರ (ಕೆಐಎಎಲ್) ಈ ಹೊಸ ಯೋಜನೆ ಜಾರಿ ಮಾಡಿದ್ದು, ಕೆಐಎಎಲ್ ನಲ್ಲಿ ಮಹಿಳಾ ಚಾಲಕರಿರುವ ಗೋ ಪಿಂಕ್ ಕ್ಯಾಬ್ ಗಳಿಗೆ ಇಂದಿನಿಂದ ಚಾಲನೆ ನೀಡಲಾಗಿದೆ.

    ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ 10 ಗೋ ಪಿಂಕ್ ಕ್ಯಾಬ್ ಗಳಿಗೆ ಕೆಐಎಎಲ್‍ನ ಉಪಾಧ್ಯಕ್ಷ ವೆಂಕಟರಾಮನ್ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮಹಿಳಾ ಪ್ರಯಾಣಿಕರ ಸ್ಪಂದನೆ ಗಮನಿಸಿ ಬೇಡಿಕೆಗೆ ಅನುಗುಣವಾಗಿ ಹೆಚ್ಚು ಗೋ ಪಿಂಕ್ ಕ್ಯಾಬ್ ಗಳನ್ನ ರಸ್ತೆಗಿಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಏನೆಲ್ಲಾ ಸೌಲಭ್ಯ ಇರಲಿದೆ: ಗೋ ಪಿಂಕ್ ಕ್ಯಾಬ್ ಗಳಲ್ಲಿ ಜಿಪಿಎಸ್ ಟ್ರಾಕಿಂಗ್ ಸೇರಿದಂತೆ, ಪ್ಯಾನಿಕ್ ಬಟನ್ ಆಳವಡಿಸಲಾಗಿದೆ. 24 ಗಂಟೆಗಳ ಈ ಸೇವೆ ಲಭ್ಯವಿರುತ್ತದೆ. ಕೆಐಎಎಲ್ ಹಾಗೂ ಕೆಎಸ್‍ಟಿಡಿಸಿ ಜೊತೆಗೂಡಿ ಮಹಿಳೆಯರಿಗಾಗಿಯೇ ನೂತನ ಕ್ಯಾಬ್‍ಗಳನ್ನು ರಸ್ತೆಗಿಳಿಸಿದ್ದು, ಇದರಿಂದ ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv