Tag: ಗೋ ಗ್ರೀನ್

  • ಚೆನ್ನೈ ವಿರುದ್ಧ ಗ್ರೀನ್ ಜರ್ಸಿಯಲ್ಲಿ ಕಣಕ್ಕಿಳಿಯಲಿದೆ ಆರ್‌ಸಿಬಿ- ಏನಿದರ ವಿಶೇಷತೆ?

    ಚೆನ್ನೈ ವಿರುದ್ಧ ಗ್ರೀನ್ ಜರ್ಸಿಯಲ್ಲಿ ಕಣಕ್ಕಿಳಿಯಲಿದೆ ಆರ್‌ಸಿಬಿ- ಏನಿದರ ವಿಶೇಷತೆ?

    ಅಬುಧಾಬಿ: ಪ್ರತಿ ಬಾರಿ ಐಪಿಎಲ್ ಟೂರ್ನಿಯಲ್ಲಿ ವಿಶೇಷ ಬಣ್ಣದ ಜರ್ಸಿಯೊಂದಿಗೆ ಕಣಕ್ಕಿಳಿಯುವ ಬೆಂಗಳೂರು ರಾಯಲ್ಸ್ ಚಾಲೆಂಜರ್ಸ್ ತಂಡ ಈ ಬಾರಿ ಹಸಿರು ಬಣ್ಣದ ಜರ್ಸಿಯೊಂದಿಗೆ ಚೆನ್ನೈ ವಿರುದ್ಧ ಆಡಲಿದೆ.

    ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಬೆಂಗಳೂರು ತಂಡದ ಆಟಗಾರರು ಹಸಿರು ಬಣ್ಣದ ಜರ್ಸಿ ಧರಿಸಲಿದ್ದಾರೆ. ಈ ಕುರಿತ ಮಾಹಿತಿಯನ್ನು ಹಂಚಿಕೊಂಡಿರುವ ಆರ್ ಸಿಬಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದರನ್ನು ಪೋಸ್ಟ್ ಮಾಡಿದೆ.

    ವಿಶ್ವದಲ್ಲಿ ಹೆಚ್ಚಾಗುತ್ತಿರುವ ಪರಿಸರ ಮಾಲಿನ್ಯದ ಕುರಿತು ಜಾಗೃತಿ ಮೂಡಿಸಲು ಬೆಂಗಳೂರು ತಂಡದ ಹಸಿರು ಬಣ್ಣದ ಜರ್ಸಿ ಧರಿಸುತ್ತಿದೆ. ವಿಡಿಯೋದಲ್ಲಿ ಈ ಕುರಿತು ಮನವಿ ಮಾಡಿರುವ ಆರ್ ಸಿಬಿ ಆಟಗಾರರು, ಪರಿಸರವನ್ನು ರಕ್ಷಣೆ ಮಾಡಲು ಪ್ರತಿಯೊಬ್ಬರು ತಮ್ಮ ಕೈಲಾದ ಕಾರ್ಯವನ್ನು ಮಾಡಬೇಕಿದೆ. ಮುಖ್ಯವಾಗಿ ಪ್ಲಾಸ್ಟಿಕ್ ವ್ಯರ್ಥಗಳನ್ನು ಮರುಬಳಕೆ ಮಾಡಿ. ಮಕ್ಕಳಿಗೂ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿ ಎಂದು ಎಬಿ ಡಿವಿಲಿಯರ್ಸ್ ಮನವಿ ಮಾಡಿದ್ದಾರೆ.

    ಚಿಕ್ಕ ಚಿಕ್ಕ ಕೆಲಸಗಳನ್ನು ತಪ್ಪದೇ ಮಾಡುವುದರಿಂದ ಪರಿಸರವನ್ನು ನಾವು ಕಾಪಾಡಬಹುದಾಗಿದೆ. ಭೂಮಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರೊಂದಿಗೆ, ಮರಗಳನ್ನು ಬೆಳಸಿ ಹಸಿರು ವಾತಾವರಣವನ್ನು ನಿರ್ಮಾಣ ಮಾಡಬೇಕಿದೆ ಎಂದು ಫಿಂಚ್, ಡೇಲ್ ಸ್ಟೇಯ್ನ್ ಕರೆ ನೀಡಿದ್ದಾರೆ.

    2011 ರಿಂದಲೂ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಗೋ ಗ್ರೀನ್ ಕಾರ್ಯಕ್ರಮವನ್ನು ನಡೆಸಿಕೊಳ್ಳುತ್ತಾ ಬರುತ್ತಿದೆ. ಪರಿಸರವನ್ನು ಕಾಪಾಡಿಕೊಂಡರೇ ಮಾತ್ರ ಎಲ್ಲರೂ ಉತ್ತಮ ಆರೋಗ್ಯಕಾರ ಜೀವನ ನಡೆಸುತ್ತೇವೆ. ಪ್ರತಿಯೊಬ್ಬರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದೆ ಎಂದು ನಾಯಕ ವಿರಾಟ್ ಕೊಹ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಐಪಿಎಲ್‍ನಿಂದ ಧೋನಿ ನಿವೃತ್ತಿ?- ಮುನ್ಸೂಚನೆಗಳಿವೆ ಎಂದ ಫ್ಯಾನ್ಸ್

  • ರಾಹುಲ್ ಗಾಂಧಿ ಹುಟ್ಟುಹಬ್ಬದ ಪ್ರಯುಕ್ತ ‘ಗೋ ಗ್ರೀನ್’ ಅಭಿಯಾನಕ್ಕೆ ಚಾಲನೆ

    ರಾಹುಲ್ ಗಾಂಧಿ ಹುಟ್ಟುಹಬ್ಬದ ಪ್ರಯುಕ್ತ ‘ಗೋ ಗ್ರೀನ್’ ಅಭಿಯಾನಕ್ಕೆ ಚಾಲನೆ

    – 7 ವಾರ್ಡ್‌ಗಳಲ್ಲಿ 5 ಸಾವಿರಕ್ಕೂ ಹೆಚ್ಚು ಗಿಡ ನೆಡಲಾಗುತ್ತೆ

    ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಷ್ಟ್ರನಾಯಕ ಹಾಗೂ ಸಂಸದ ರಾಹುಲ್ ಗಾಂಧಿಯವರ ಹುಟ್ಟುಹಬ್ಬದ ಪ್ರಯುಕ್ತ ‘ಗೋ ಗ್ರೀನ್ ಗಾಂಧಿನಗರ’ ಅಭಿಯಾನವನ್ನು ಆರ್.ಗುಂಡೂರಾವ್ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದೆ.

    ಗಾಂಧಿನಗರದ ಶೇಷಾದ್ರಿಪುರಂನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಗಿಡಗಳನ್ನು ನೆಡುವ ಮೂಲಕ ‘ಗೋ ಗ್ರೀನ್ ಗಾಂಧಿನಗರ’ ಅಭಿಯಾನಕ್ಕೆ ಚಾಲನೆ ನೀಡಿದರು.

    ಗಾಂಧಿನಗರ ಕ್ಷೇತ್ರದ ಏಳು ವಾರ್ಡ್‌ಗಳಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಗಿಡಗಳನ್ನು ಈ ಅಭಿಯಾನದಲ್ಲಿ ನೆಡಲಾಗುತ್ತಿದೆ. ಹೊಂಗೆ, ಬೇವು, ಸಂಪಿಗೆ, ನೇರಳೆ ಮತ್ತು ಕಾಡು ಬಾದಾಮಿ ಮಾದರಿಯ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ. ಇದೇ ವೇಳೆ ಹುತಾತ್ಮರಾದ ಅಮರ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ಈ ಕಾರ್ಯಕ್ರಮದಲ್ಲಿ ಶಾಸಕ ದಿನೇಶ್ ಗುಂಡೂರಾವ್ ಅವರ ಮಗಳು ಅನನ್ಯ ಗುಂಡೂರಾವ್, ಬಿಬಿಎಂಪಿ ಸದಸ್ಯೆ ಶ್ರೀಮತಿ ಲತಾ ನವೀನ್ ಕುಮಾರ್, ಕಾಂಗ್ರೆಸ್ ಮುಖಂಡ ನವೀನ್ ಕುಮಾರ್, ರಘುನಾಥ್ ಸೇರಿದಂತೆ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಹಾಜರಿದ್ದರು.