Tag: ಗೋಹತ್ಯೆ ನಿಷೇಧ

  • ಯಾವತ್ತೂ ದನ ಕಾಯದೇ ಇರೋರು, ಸಗಣಿ ಎತ್ತದವರು ಗೋವು ರಕ್ಷಣೆ ಅಂತಾರೆ – ಸಿದ್ದು ಲೇವಡಿ

    ಯಾವತ್ತೂ ದನ ಕಾಯದೇ ಇರೋರು, ಸಗಣಿ ಎತ್ತದವರು ಗೋವು ರಕ್ಷಣೆ ಅಂತಾರೆ – ಸಿದ್ದು ಲೇವಡಿ

    ಹುಬ್ಬಳ್ಳಿ: ಬಿಜೆಪಿಯವರು (BJP) ಗೋವುಗಳನ್ನು (Cow) ರಕ್ಷಣೆ ಮಾಡ್ತೀವಿ ಅಂತಾರೆ. ಯಾವತ್ತೂ ದನಕಾಯದೇ ಇರುವವರು, ಸಗಣಿ ಎತ್ತದವರು ಗೋವುಗಳ ರಕ್ಷಣೆ ಅಂತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಲೇವಡಿ ಮಾಡಿದ್ದಾರೆ.

    ಧಾರವಾಡ (Dharwad) ಜಿಲ್ಲೆಯ ಸಂಶಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾನತೆ ತಂದವರು ಬುದ್ಧ, ಬಸವಣ್ಣ, ಅಂಬೇಡ್ಕರ್. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇವತ್ತಿಗೂ ಬದಲಾವಣೆ ಆಗಬಾರದು ಎಂದು ಪಟ್ಟು ಹಿಡಿದಿವೆ. ಬಡತನ, ಅಸಮಾನತೆ ಹೋಗಬಾರದು ಎಂಬುದು ಬಿಜೆಪಿ ಆಸೆಯಾಗಿದೆ. ಗೋ ರಕ್ಷಣೆ ಮಾಡ್ತೀವಿ ಅಂತಾರೆ. ಯಾವತ್ತು ದನಕಾಯದೇ ಇರುವವರು, ಸಗಣಿ ಎತ್ತದವರು ಗೋ ರಕ್ಷಣೆ ಅಂತಾರೆ ಎಂದು ವ್ಯಂಗ್ಯವಾಡಿದ್ದಾರೆ.

    ಜಾನುವಾರುಗಳಿಗೆ ಚರ್ಮಗಂಟು ರೋಗ (Lumpy Skin Disease) ಬಂದಿದೆ. ಅದನ್ನು ವಾಸಿ ಮಾಡ್ರಯ್ಯ ಅಂದ್ರೆ, 6 ತಿಂಗಳಾದ್ರೂ ಜಾನುವಾರುಗಳಿಗೆ ಲಸಿಕೆ ಹಾಕಲು ಈ ಸರ್ಕಾರಕ್ಕೆ ಆಗ್ತಿಲ್ಲ. ಈ ಸರ್ಕಾರ ಇರಬೇಕಾ? ಮೊದಲು ಕಿತ್ತು ಎಸೆಯಬೇಕು. ಆದ್ದರಿಂದ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿ, ಬಿಜೆಪಿ ಕಿತ್ತೆಸೆಯಿರಿ. ಬಿಜೆಪಿಯವರು ಇದ್ದರೆ ಸಮ ಸಮಾಜ ನಿರ್ಮಾಣ ಆಗೋದಿಲ್ಲ ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಭಾರತದ ಮೊದಲ ಮುಸ್ಲಿಂ ಫೈಟರ್ ಪೈಲಟ್ ಆಗ್ತಾರಾ ಸಾನಿಯಾ ಮಿರ್ಜಾ?

    ರಾಯಣ್ಣ ಬ್ರಿಗೇಡ್ ಎಲ್ಲಿದೆ?
    ಮಂತ್ರಿ ಸ್ಥಾನಕ್ಕಾಗಿ ರಾಯಣ್ಣ ಬ್ರಿಗೇಡ್ ಮಾಡ್ತೀವಿ ಅಂತಾ ಹೇಳಿದ್ರು. ಮಂತ್ರಿ ಸ್ಥಾನ ಹೋದ ಮೇಲೆ ನೋ ಬ್ರಿಗೇಡ್ ಅಂತಿದ್ದಾರೆ. ಸಮಾಜಕ್ಕಾಗಿ ಯಾರು ಕೆಲಸ ಮಾಡ್ತಾರೋ ಅವರು ನಿಜವಾದ ಸಮಾಜ ಸೇವಕರಾಗ್ತಾರೆ ಎಂದು ಪರೋಕ್ಷವಾಗಿ ಕೆ.ಎಸ್ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಗಾಂಜಾ ಮತ್ತಿನಲ್ಲಿ ಪೊಲೀಸ್ ಪೇದೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕಿರಾತಕರ ಗ್ಯಾಂಗ್‌

    ಸಮಾಜದಲ್ಲಿ ಬದಲಾವಣೆ ತರಲು ಬದ್ಧತೆ ಇರುವವರಿಗೆ ಮಾತ್ರ ಸಾಧ್ಯ. 2023ರ ಚುನಾವಣೆಯಲ್ಲಿ (Karnataka Election 2023) ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿ. ಬಿಜೆಪಿಗೆ ಮತ ಹಾಕಿದ್ರೆ, ಅಲ್ಲಿ ಯಾರು ತಾನೆ ಸಿಎಂ ಆಗ್ತಾರೆ? ಜೆಡಿಎಸ್‌ಗೆ ಮತ ಹಾಕಿದ್ರೆ ಯಾರಿಗೆ ಲಾಭ? ಅದೇ ಕಾಂಗ್ರೆಸ್‌ಗೆ ಮತ ನೀಡಿದ್ರೆ ನಿಮ್ಮ ಕೈನಲ್ಲೇ ಅಧಿಕಾರ ಇರುತ್ತೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುಸ್ಲಿಂ ವ್ಯಾಪಾರಿಗಳು 5 ತಿಂಗಳು ತಡೆದುಕೊಳ್ಳಿ ಆಮೇಲೆ ಈ ದರಿದ್ರಗಳು ಹೋಗ್ತವೆ – ಸಿಎಂ ಇಬ್ರಾಹಿಂ

    ಮುಸ್ಲಿಂ ವ್ಯಾಪಾರಿಗಳು 5 ತಿಂಗಳು ತಡೆದುಕೊಳ್ಳಿ ಆಮೇಲೆ ಈ ದರಿದ್ರಗಳು ಹೋಗ್ತವೆ – ಸಿಎಂ ಇಬ್ರಾಹಿಂ

    ಹುಬ್ಬಳ್ಳಿ: `ಮುಸ್ಲಿಂ ವ್ಯಾಪಾರಿಗಳು (Muslim Traders) 5 ತಿಂಗಳು ತಡೆದುಕೊಳ್ಳಿ, ನಂತರ ಈ ದರಿದ್ರಗಳು ಹೋಗ್ತವೆ. ಆಗ ನಮ್ಮದೇ ಸರ್ಕಾರ ಬರುತ್ತದೆ’ ಅಂತಾ ಹೇಳುವ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಬಿಜೆಪಿ ಸರ್ಕಾರವನ್ನ (BJP Government) ಪರೋಕ್ಷವಾಗಿ ದರಿದ್ರ ಎಂದು ಲೇವಡಿ ಮಾಡಿದ್ದಾರೆ.

    ರಾಜ್ಯದಲ್ಲಿ ಮತ್ತೆ ಧರ್ಮ ದಂಗಲ್ ವಿಚಾರವಾಗಿ ಮಾತನಾಡಿದ ಅವರು, ಚುನಾವಣೆ (Karnataka Elections) ಸಮಯದಲ್ಲಿ ಇದು ಮತಕ್ಕಾಗಿ ಮಾಡ್ತಿರೋದು. ಗೋವಾದಲ್ಲಿ ಏಕೆ ಗೋಹತ್ಯೆ ನಿಷೇಧ ಇಲ್ಲ. ಕರ್ನಾಟಕದಲ್ಲಿ ಮಾತ್ರ ಏಕೆ ಗೋಹತ್ಯೆ ನಿಷೇಧ. ಕರ್ನಾಟಕದಲ್ಲಿ ಏನ್ ಬೇಕಾದರೂ ಗುಂಡಾಗಿರಿ ಮಾಡಬಹುದು ಅನ್ನೋ ಕಾರಣಕ್ಕೆ ಗೋಹತ್ಯೆ ನಿಷೇಧ ಮಾಡಿದ್ದೀರಾ? ಈ ಕಾನೂನು ತಂದಮೇಲೆ ರೈತರ (Farmers) ಆತ್ಮಹತ್ಯೆಯಾಗ್ತಿವೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕೇಸರಿ ಶಲ್ಯ ಹಾಕಿಕೊಂಡು ಸಿ.ಟಿ ರವಿ ಮನೆಗೆ ಮುತ್ತಿಗೆಗೆ ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರು

    ಇನ್ನೂ ಗಡಿ ವಿಚಾರವಾಗಿ ಮಾತನಾಡುತ್ತಾ, ಕರ್ನಾಟಕ, ಗೋವಾ, ಮಹಾರಾಷ್ಟ್ರ ಬಿಜೆಪಿ (BJP) ನಡುವೆ ಕುಸ್ತಿ ನಡೆಯುತ್ತಿದೆ. ಸಿಎಂ ಬೊಮ್ಮಾಯಿ (Basavaraj Bommai) ಈ ವಿಚಾರದಲ್ಲಿ ಹೆಲ್ಪಲೆಸ್ ಆಗಿದ್ದಾರೆ. ಪ್ರತ್ಯೇಕ ಮುಸ್ಲಿಂ ಕಾಲೇಜ್‌ಗೆ (Muslim College) ವಿರೋಧ ವ್ಯಕ್ತಪಡಿಸಿದ ಇಬ್ರಾಹಿಂ ವಕ್ಫ್ ಮಂಡಳಿಗೆ ಪ್ರತೇಕ ಮುಸ್ಲಿಂ ಕಾಲೇಜು ಬೇಡ ಎಲ್ಲಮಕ್ಕಳಿಗೂ ಇರಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಡಿ ವಿವಾದ: ಹೋರಾಟ ಅನ್ನೋದೇ ಆದ್ರೆ ಕನ್ನಡ ಚಿತ್ರರಂಗ ಒಗ್ಗಟ್ಟಾಗಿ ಬರುತ್ತೆ – ಶಿವರಾಜಕುಮಾರ್

    Live Tv
    [brid partner=56869869 player=32851 video=960834 autoplay=true]

  • ಗೋವು ನಮಗೆ ತಾಯಿ, ಪವಿತ್ರ: ನರೇಂದ್ರ ಮೋದಿ

    ಗೋವು ನಮಗೆ ತಾಯಿ, ಪವಿತ್ರ: ನರೇಂದ್ರ ಮೋದಿ

    ವಾರಣಾಸಿ: ಕೋಟ್ಯಂತರ ಜನರ ಜೀವನವು ಜಾನುವಾರುಗಳ ಮೇಲೆ ಅವಲಂಬಿತವಾಗಿದೆ ಎನ್ನುವ ಸೂಕ್ಷ್ಮ ವಿಚಾರವು ಕೆಲವರಿಗೆ ತಿಳಿದಿರುವುದಿಲ್ಲ. ಗೋವು ನಮಗೆ ತಾಯಿ ಮತ್ತು ಪವಿತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ವಾರಣಾಸಿಯಲ್ಲಿ 2095 ಕೋಟಿ ರೂಪಾಯಿ ವೆಚ್ಚದ 27 ಯೋಜನೆಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ವಾರಣಾಸಿಗೆ  ಒಂದೇ ವಾರದಲ್ಲಿ ಎರಡನೇ ಬಾರಿ ಭೇಟಿಯಾಗುತ್ತಿದ್ದೇನೆ. ಈ ಯೋಜನೆಗಳಲ್ಲಿ (Banas Dairy Sankul project) ಬನಾಸ್ ಡೈರಿ ಸಂಕುಲ್ ಯೋಜನೆಯೂ ಸೇರಿದೆ. ಈ ಡೈರಿಯು ದಿನಕ್ಕೆ 5 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದ್ದು, 30 ಎಕರೆ ಪ್ರದೇಶದಲ್ಲಿ ಅಂದಾಜು 475 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿಧಾನಸಭೆಯಲ್ಲಿ ಮತಾಂತರ ತಡೆ ವಿಧೇಯಕ ಅಂಗೀಕಾರ

    ಗೋವು ನಮಗೆ ತಾಯಿ ಪವಿತ್ರ ಎಂದು ಪೂಜೆ ಮಾಡುತ್ತೇವೆ. ಆದರೆ ಹೀಗೆ ಹೇಳಿದರೆ ಕೆಲವರಿಗೆ ಅಪರಾಧ ಎನಿಸುತ್ತದೆ. ಅವರಿಗೆ ಕೋಟ್ಯಂತರ ಜನರ ಜೀವನ ಗೋವುಗಳ ಮೇಲೆ ಅವಲಂಬಿತವಾಗಿರುವುದು ತಿಳಿಯುವುದಿಲ್ಲ. ಗೋಹತ್ಯೆ ನಿಷೇಧವನ್ನು ವಿರೋಧಿಸುವ ರಾಜಕೀಯ ಎದುರಾಳಿಗಳ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ  ಹಿಂದಿನ ಸರ್ಕಾರವೇ ರೈತರ ಆತ್ಮಹತ್ಯೆಗೆ ಕಾರಣ – ಯೋಗಿ ಆದಿತ್ಯನಾಥ್

  • ಪ್ರತಿ ತಾಲೂಕಿನಲ್ಲೂ ಗೋಶಾಲೆ ಸ್ಥಾಪನೆ, ಗೋಮಾಳಕ್ಕೆ ಜಾಗ: ಪ್ರಭು ಚೌವ್ಹಾಣ್

    ಪ್ರತಿ ತಾಲೂಕಿನಲ್ಲೂ ಗೋಶಾಲೆ ಸ್ಥಾಪನೆ, ಗೋಮಾಳಕ್ಕೆ ಜಾಗ: ಪ್ರಭು ಚೌವ್ಹಾಣ್

    ಹಾಸನ: ರಾಜ್ಯದಲ್ಲಿ ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದ್ದು, ವಿಧಾನ ಪರಿಷತ್ ನಲ್ಲಿ ಮಸೂದೆ ಮಂಡಿಸಿ ಬಹುಮತ ಪಡೆಯುತ್ತೇನೆ ಎಂದು ಪಶುಸಂಗೋಪನೆ ಸಚಿವ ಫ್ರಭುಚೌವ್ಹಾಣ್ ಹೇಳಿದ್ದಾರೆ.

    ನಗರದ ಪಶುವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ಗೋಮಾತೆ ನಮ್ಮ ಮಾತೆ ಇದ್ದಹಾಗೆ ಅವುಗಳ ರಕ್ಷಣೆಯಾಗಬೇಕು, ಕಸಾಯಿಖಾನೆಗೆ ಹೋಗಬಾರದು, ಗೋಹತ್ಯೆ ಆಗಬಾರದು. ಗೋವುಗಳ ಕಳ್ಳ ಸಾಗಣೆ ಮಾಡಿದರೆ ಅಂತಹವರ ವಿರುದ್ಧ ಎಫ್‍ಐಆರ್ ದಾಖಲಿಸಲು ಎಸ್‍ಪಿ ಸೂಚಿಸಿದ್ದೇನೆ. ಗೋಹತ್ಯೆ ಮಾಡಿದರೆ ಐವತ್ತರಿಂದ ಒಂದು ಲಕ್ಷದವರೆಗೆ ದಂಡ, ಎರಡನೇ ಬಾರಿ ಮಾಡಿದರೆ ಹತ್ತು ಲಕ್ಷದವರೆಗೂ ದಂಡ ವಿಧಿಸಲಾಗುವುದು. ಗೋವು ಹತ್ಯೆ ಮಾಡಿದರೆ ಮೂರು ವರ್ಷ ಜೈಲು ಶಿಕ್ಷೆ ಇತ್ತು ಈಗ ಏಳು ವರ್ಷಕ್ಕೆ ಏರಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಗೋಮಾತೆ ರಕ್ಷಣೆಯೇ ನಮ್ಮ ಗುರಿಯಾಗಿದ್ದು, ಎಲ್ಲ ಜಿಲ್ಲೆಯ ಡಿಸಿ, ಎಸ್‍ಪಿ ಗಳಿಗೆ ಸೂಚಿಸಿದ್ದೇನೆ. ಗುಜರಾತ್, ಉತ್ತರಪ್ರದೇಶ ಪ್ರವಾಸ ಮಾಡಿದ್ದೇನೆ. ಪ್ರತಿ ತಾಲೂಕಿನಲ್ಲೂ ಗೋಶಾಲೆ ಸ್ಥಾಪಿಸಲಾಗುವುದು, ಗೋಮಾಳಕ್ಕೆ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ, ಮಾರಾಟವಾಗದ ಕರುಗಳನ್ನು ಗೋಶಾಲೆಗೆ ಬಿಡಲಾಗುವುದು, ಅವುಗಳಿಗೆ ಮೇವು ಹಾಗೂ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

    ಗೋವು ಸಾಗಾಣೆ ತಡೆಗಟ್ಟುವಲ್ಲಿ ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಇದೇ ವೇಳೆ ಹುತಾತ್ಮರ ದಿನಾಚರಣೆ ಪ್ರಯುಕ್ತ 11 ಗಂಟೆಗೆ ಪಶುವೈದ್ಯಕೀಯ ಕಾಲೇಜಿನಲ್ಲೇ ಮೌನಾಚರಣೆ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಪ್ರೀತಂಗೌಡ ಹಾಜರಿದ್ದರು.

  • ಸಿದ್ದರಾಮಯ್ಯ ಸಗಣಿ ಎತ್ತುವ ಬದಲು ಗೋವನ್ನು ಆರಾಧನೆ ಮಾಡಲಿ: ಕಟೀಲ್

    ಸಿದ್ದರಾಮಯ್ಯ ಸಗಣಿ ಎತ್ತುವ ಬದಲು ಗೋವನ್ನು ಆರಾಧನೆ ಮಾಡಲಿ: ಕಟೀಲ್

    ಮಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಸಗಣಿ ಎತ್ತಿದ್ದೇನೆ ಅಂತಾ ಹೇಳ್ತಾರೆ. ಸಗಣಿ ಎತ್ತಿದ್ದರಿಂದ ಏನೂ ಆಗೋದಿಲ್ಲ. ಗೋವನ್ನು ಆರಾಧನೆ ಮಾಡಬೇಕು. ಸಗಣಿ ಎತ್ತಿ ನಾಟಕ ಮಾಡೋದ್ರಿಂದ ಪ್ರಯೋಜನ ಇಲ್ಲ. ಕಾಂಗ್ರೆಸ್ ರೈತರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.

    ರಾಜ್ಯದಲ್ಲಿ ಗೋಹತ್ಯೆ ನಿಷೇಧ ಹಿನ್ನೆಲೆಯಲ್ಲಿ ಕಟೀಲ್ ಮಂಗಳೂರಿನ ಬಿಜೆಪಿ ಕಚೇರಿ ಮುಂಭಾಗದಲ್ಲಿ ಗೂಪೂಜೆ ಮಾಡಿದ್ದಾರೆ. ಈ ವೇಳೆ ಮಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಗೋಮಾತೆಗೆ ವಿಶೇಷ ಸ್ಥಾನವಿದೆ. ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡನೆ ಮಾಡಿದೆ. ದೇಶದಲ್ಲಿ ಗೋ ಸಂಸ್ಕೃತಿ ಉಳಿಯೋದಕ್ಕೆ ಈ ಮಸೂದೆ ಬಂದಿದೆ. ಇದಕ್ಕಾಗಿ ಯಡಿಯೂರಪ್ಪ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

    ಕಾಂಗ್ರೆಸ್ ಈ ಹಿಂದೆ ಮಸೂದೆ ತೆಗೆಯುವಾಗ ಚರ್ಚೆ ಮಾಡಿತ್ತಾ? ಈಗ ಚರ್ಚೆ ಬೇಕು ಅನ್ನೋದು ಕಾಂಗ್ರೆಸ್ಸಿನ ತುಷ್ಠೀಕರಣ ನೀತಿಯಾಗಿದೆ. ರೈತರ ಹೆಸರು ಹೇಳಿಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಗೋ ಹತ್ಯೆ ನಿಷೇಧ ರೈತರಿಗೆ ಪೂರಕವಾದ ಅಂಶವೇ ಆಗಿದೆ. ಕಾಂಗ್ರೆಸ್ ಸುಮ್ಮನೆ ತುಷ್ಟೀಕರಣ ಮಾಡುತ್ತಿದೆ. ಕಾಂಗ್ರೆಸ್ ಗೋಹತ್ಯೆಕೋರರ ಪರವಾಗಿದೆ. ಈ ಹಿಂದೆ ತಲ್ವಾರ್ ಹಿಡಿದು ಗೋ ಕಳ್ಳತನಮಾಡಿದವರ ಬಂಧನ ಮಾಡಿಲ್ಲ. ಸಿದ್ದರಾಮಯ್ಯ ಇದರ ಪರವಾಗಿದ್ದಾರೆ ಅಂತ ನಂಬಿಕೆಯಿಲ್ಲ ಎಂದು ಹೇಳಿದರು.