ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapur) ವಂಚನೆ ಪ್ರಕರಣ ಸಂಬಂಧ ದೂರು ನೀಡಿದ್ದ ಉದ್ಯಮಿ ಗೋವಿಂದ ಬಾಬು ಪೂಜಾರಿ (Govind Babu Poojari) ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Election) ಸಮಯದಲ್ಲಿ ಬೈಂದೂರು (Byndoor) ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಮಾಡಿದ್ದರು.
ಚುನಾವಣಾ ಸಮಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಉದ್ಯಮಿ ಗೋವಿಂದ ಬಾಬು ಪೂಜಾರಿ ಭೇಟಿ ಮಾಡಿದ್ದರು. ಬಿಜೆಪಿ ನಾಯಕರೇ ಅಮಿತ್ ಶಾಗೆ ಪರಿಚಯ ಮಾಡಿಸಿದ್ದರು. ಈ ವೇಳೆ ಶಾಗೆ ಹೂ ಗುಚ್ಚ ಕೊಟ್ಟು ಶುಭಾಶಯ ಹೇಳಿದ್ದರು.
ರಾಷ್ಟ್ರೀಯ ನಾಯಕರ ಹತ್ತಿರ ಸುಳಿಯಲು ಭಾರೀ ಪ್ರಭಾವಿಯಾಗಿರಬೇಕು. ಈ ಬಾರಿ ಟಿಕೆಟ್ ನಿಮಗೆ ಸಿಗಲಿದೆ ಎಂದು ಬಿಜೆಪಿ ನಾಯಕರೇ ಭರವಸೆ ನೀಡಿದ್ದರು. ಆದರೆ ಬಿಜೆಪಿ ನಾಯಕರಿಗೆ ಟಿಕೆಟ್ ವಿಚಾರದ ಬಗ್ಗೆ ಎಲ್ಲವೂ ಗೊತ್ತಿತ್ತು. ಗೊತ್ತಿದ್ದರೂ ರಾಜ್ಯ ಬಿಜೆಪಿ ನಾಯಕರು ಸುಮ್ಮನಾಗಿದ್ದೆ ಗೋವಿಂದ ಬಾಬು ಪೂಜಾರಿ ದೂರು ನೀಡಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಬೆಂಗಳೂರು: ವಂಚನೆ ಪ್ರಕರಣದ (Fraud Case) ಎ1 ಆರೋಪಿ ಚೈತ್ರಾ ಕುಂದಾಪುರ (Chaithra Kundapura) ತನಿಖೆ ವೇಳೆ ಒಂದೊಂದೇ ವಿಚಾರವನ್ನು ಬಾಯ್ಬಿಡಲು ಶುರು ಮಾಡಿದ್ದಾಳೆ.
ಆರೋಪಿ ಗಗನ್ ಹೇಳಿದಂತೆ ನಾನು ಮಾಡಿದ್ದೇನೆ. ಈ ವಿಚಾರದಲ್ಲಿ ನನಗೇನು ಗೊತ್ತಿಲ್ಲ ಎಂದು ಪೊಲೀಸರ (Police) ಮುಂದೆ ಹೇಳಿದ್ದಾಳೆ. ಈ ಹಿಂದೆ ಅರೆಸ್ಟ್ ಆದ ದಿನ, ನನ್ನ ಮುಖ ನೋಡಿ ಯಾರ್ ದುಡ್ಡು ಕೊಡ್ತಾರೆ ಮೇಡಂ. ಅದು ಐದು ಕೋಟಿ ರೂ. ಕೊಡ್ತಾರಾ? ಎಂದು ತನಿಖಾಧಿಕಾರಿ ಮುಂದೆ ಹೇಳಿದ್ದಾಳೆ ಎಂಬ ವಿಚಾರ ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ.
ಚೈತ್ರಾಳನ್ನು ಮುಂದೆ ಕೂರಿಸಿ ಉಳಿದ ಆರೋಪಿಗಳಿಗೆ ಸಿಸಿಬಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಈ ವೇಳೆ ಆಕೆ ವಿಚಾರಣೆ ನೋಡಿ ಒಂದೊಂದೆ ವಿಚಾರವನ್ನು ಬಾಯ್ಬಿಡಲು ಶುರು ಮಾಡಿದ್ದಾಳೆ. ನನಗೇನು ಗೊತ್ತಿಲ್ಲ ಮೇಡಂ, ಎಲ್ಲಾ ಗಗನ್ ಮಾಡಿರೋದು ಎಂದು ಅಧಿಕಾರಿಗಳ ಮುಂದೆ ಹೇಳಿದ್ದಾಳೆ. ಇನ್ನಷ್ಟು ವಿಚಾರಣೆ ಆದ ಮೇಲೆ ಪ್ರಕರಣದಲ್ಲಿ ಆಕೆಯ ಪಾತ್ರವೂ ಹೊರ ಬರುವ ಸಾಧ್ಯತೆ ಇದೆ. ಇದನ್ನೂ ಓದಿ: ಎಲ್ಲಾ ದೊಡ್ಡೋರ ಹೆಸರೆಲ್ಲ ಹೊರಗಡೆ ಬರುತ್ತೆ: ಚೈತ್ರಾ ಕುಂದಾಪುರ
ಬೆಂಗಳೂರು: ನಾನು ಹಣವನ್ನ ಲೋನ್ (Loan) ಪಡೆದು ಕೊಟ್ಟಿದ್ದೇನೆ. ಪೂರ್ತಿ ದಾಖಲೆಯನ್ನು ಸಿಸಿಬಿಯವರಿಗೆ ಕೊಟ್ಟಿದ್ದೇನೆ ಎಂದು ಚೈತ್ರಾ ಕುಂದಾಪುರ (Chaitra Kundapura) ಅವರಿಂದ ವಂಚನೆಗೊಳಗಾದ ಉದ್ಯಮಿ ಗೋವಿಂದ ಬಾಬು ಪೂಜಾರಿ ಹೇಳಿದ್ದಾರೆ.
ಸಿಸಿಬಿ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಸಿಬಿಯವರು (CCB) ಏನೆಲ್ಲಾ ಕೇಳಿದ್ದಾರೆ ಅದನ್ನೆಲ್ಲಾ ಕೊಟ್ಟಿದ್ದೇನೆ. ಪೆನ್ ಡ್ರೈವ್‍ನಲ್ಲಿ ದಾಖಲೆಗಳನ್ನ ಕೊಟ್ಟಿದ್ದೇನೆ. ವಿಚಾರಣೆ ಹಂತದಲ್ಲಿದೆ ಹಾಗಾಗಿ ನಾನು ಹೇಳೊದಿಕ್ಕೆ ಬರಲ್ಲ ಎಂದರು.
ಹಣ ವಾಪಸ್ ಕೊಡಲು ಟೈಂ ತಗೆದುಕೊಂಡಿದ್ದರು. ಹೀಗಾಗಿ ಆಗಲೇ ದೂರು ಕೊಟ್ಟಿಲ್ಲ. ಆದರೆ ಅವರು ಹಣ ಕೊಡದೆ ಸತಾಯಿಸಿ ಬೆದರಿಕೆ ಹಾಕಿದ್ರು. ಕೊನೆಗೆ ಸತ್ಯ ಹೊರಗೆ ಬರ್ಬೇಕು ಅಂತ ದೂರು ನೀಡಿದೆ. ನಾನು ಹಣವನ್ನ ಲೋನ್ ಪಡೆದು ಕೊಟ್ಟಿದ್ದೇನೆ. ಪೂರ್ತಿ ದಾಖಲೆಯನ್ನು ಸಿಸಿಬಿಯವರಿಗೆ ಕೊಟ್ಟಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಚೈತ್ರಾ ಕುಂದಾಪುರ ಡೀಲ್ ಪ್ರಕರಣಕ್ಕೆ ಟ್ವಿಸ್ಟ್ – ಸಲೂನ್ ಮಾಲೀಕನಿಗೆ ಬೆದರಿಕೆ ಕರೆ
ನಾನು ಉದ್ಯಮಿ ರಾಜಕೀಯ ನನಗೆ ಅಷ್ಟೊಂದು ಗೊತ್ತಿಲ್ಲ. ಸಂಪೂರ್ಣವಾಗಿ ನನಗೆ ಸಂಶಯವೇ ಬರದ ರೀತಿ ನಂಬಿಸಿದ್ದರು. ನನಗೆ ಮೋಸ ಆಗಿದೆ ನನಗೆ ಆಗಿದ ರೀತಿ ಬೇರೆ ಯಾರಿಗೂ ಆಗಬಾರದು. ನಾನು ಮನೆ ಮೇಲೆ ಲೋನ್ ತೆಗೆದುಕೊಂಡು ಹಣ ನೀಡಿದ್ದೇನೆ. ಆ ದಾಖಲೆ ಎಲ್ಲವೂ ನೀಡಿದ್ದೇನೆ. ನಾನು ಉದ್ಯಮಿ ಹಾಗಾಗಿ ರಾಜಕೀಯ ನಾಯಕರು ಪರಿಚಯವಿಲ್ಲ. ಮುಂದೆ ಎಲ್ಲ ಸತ್ಯ ಹೊರ ಬರುತ್ತೆ. ಎಲ್ಲವನ್ನು ನಿಮ್ಮ ಬಳಿ ಹೇಳ್ತೇನೆ ಎಂದರು.
ಇತ್ತ ಸಿಸಿಬಿ ಕಚೇರಿಯಿಂದ ಚೈತ್ರಾ ಕುಂದಾಪುರ ಅವರನ್ನು ಡೈರಿ ಸರ್ಕಲ್ ಬಳಿಯ ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ.
ಚಿಕ್ಕಮಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿಯಿಂದ ಟಕೆಟ್ ಕೊಡಿಸುವುದಾಗಿ ನಂಬಿಸಿ ಚೈತ್ರಾ ಕುಂದಾಪುರ (Chaithra Kundapura) ಅಂಡ್ ಟೀಂ 5 ಕೋಟಿ ರೂ. ವಂಚನೆ ಎಸಗಿರುವ ಪ್ರಕರಣಕ್ಕೆ (Fraud Case) ಇದೀಗ ಟ್ವಿಸ್ಟ್ ಸಿಕ್ಕಿದೆ. ತನಿಖೆ ನಡೆದಷ್ಟು ಹೊಸ ಹೊಸ ವಿಷಯಗಳು ಬೆಳಕಿಗೆ ಬರುತ್ತಿವೆ.
ಚೈತ್ರಾ ಕುಂದಾಪುರ ವಂಚನೆ ಪ್ರಕರಣ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಕಡೂರಿನ ಸಲೂನ್ ಮಾಲೀಕ ರಾಮುಗೆ ಗಗನ್ ಮತ್ತು ಅವರ ಗುಂಪಿನಿಂದ ಬೆದರಿಕೆ ಕರೆ ಬಂದಿದೆ. ಸಲೂನ್ ಮಾಲೀಕ ಧನರಾಜ್ ಕಾಂಗ್ರೆಸ್ ಮುಖಂಡ ಎಂಬ ಸಂಗತಿಯೂ ಹೊರಬಂದಿದೆ. ಗೋವಿಂದಬಾಬು ಬಳಿ ತೆರಳುವ ಮುನ್ನ 5ನೇ ಆರೋಪಿ ಚನ್ನ ನಾಯ್ಕ್‌ಗೆ ಥೇಟ್ ಆರ್‌ಎಸ್‌ಎಸ್ ಮುಖಂಡನಂತೆ ಕೂದಲು ಶೈನಿಂಗ್ ಮಾಡಿ ಹೇರ್ ಕಟ್ ಮಾಡಿಸಿಕೊಂಡು ಹೋದ ಬಳಿಕ ಪ್ರಕರಣ ಹೊರ ಬರುತ್ತಿದ್ದಂತೆ ಸಲೂನ್ ಮಾಲೀಕ ರಾಮುಗೆ ಬೆದರಿಕೆ ಕರೆ ಬಂದಿದೆ. ಇದನ್ನೂ ಓದಿ: ಡೀಲ್‍ನಲ್ಲಿ ‘ವಿಶ್ವನಾಥ್ ಜೀʼ ಪಾತ್ರಧಾರಿ ಚನ್ನನಾಯ್ಕ್ ತನ್ನ ಪಾತ್ರದ ಬಗ್ಗೆ ವಿವರಿಸಿದ್ದು ಹೀಗೆ..
ಮಾಧ್ಯಮಗಳ ಮುಂದೆ ತನಗೆ ತಿಳಿದ ಮಾಹಿತಿ ನೀಡಿದ್ದಕ್ಕೆ ಧನರಾಜ್ ಆಪ್ತ ನೂತನ್ ಸಲೂನ್ ಮಾಲೀಕನಿಗೆ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಡಿಯೋ ಸಹ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ʻನಿನ್ಯಾಕೆ ಮಾಧ್ಯಮ ಮುಂದೆ ಮಾತಾನಾಡಿದೆ, ನನಗೆ ಗೊತ್ತಿಲ್ಲ ಅಂತಾ ಹೇಳಬೇಕಿತ್ತು. ಅಂಗಡಿ ಹೇಗೆ ನಡೆಸುತ್ತೀಯಾ ನೋಡ್ತೀನಿ ಎಂದು ಧಮ್ಕಿ ಹಾಕಿದ್ದಾರೆ. ಇದನ್ನೂ ಓದಿ: ತೆರಿಗೆ ವಂಚನೆ, ತೆರಿಗೆ ಸೋರಿಕೆ, ತೆರಿಗೆ ಕಳ್ಳತನದ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ
ಇನ್ನು ಚೈತ್ರಾ ಕುಂದಾಪುರಗೆ 2018ರಿಂದಲೇ ಕಡೂರಿನ ಲಿಂಕ್ ಇತ್ತು ಅನ್ನೋ ಮಾಹಿತಿ ಕೂಡ ಲಭ್ಯವಾಗಿದೆ. 2018ರಲ್ಲಿ ಚೈತ್ರಾ ಕಡೂರು ಪಟ್ಟಣದ ಸರ್ಕಾರಿ ಕಾಲೇಜು ಒಂದರಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ್ದರು. ಇದಕ್ಕೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ಆ ವೇಳೆ ಅಂದಿನ ಬಿಜೆಪಿಯಲ್ಲಿದ್ದ ಆರೋಪಿ ಗಗನ್ ಹಾಗೂ ಧನರಾಜ್ ಆಕೆ ಬೆನ್ನಿಗೆ ನಿಂತಿದ್ದರು. ಅಂದಿನಿಂದ ಕಡೂರಿನ ಗಗನ್ ಹಾಗೂ ಧನರಾಜ್ ಜೊತೆ ಚೈತ್ರಾಳ ಸ್ನೇಹ ಉತ್ತಮವಾಗಿತ್ತು ಎಂದು ಹೇಳಲಾಗಿದೆ.
– ಸಿಸಿಟಿವಿ ಫೂಟೇಜ್, ಫೋನ್ ಕಾಲ್ ಆಡಿಯೋ ರೆಕಾರ್ಡ್ ಎಲ್ಲಾ ಸಾಕ್ಷಿ ಇದೆ
ಬೆಂಗಳೂರು: ಚೈತ್ರಾ (Chaitra Kundapur) ವಿರುದ್ಧ ಸಿಸಿಟಿವಿ ಪೂಟೇಜ್, ಫೋನ್ ಸಂಭಾಷಣೆ ಆಡಿಯೋ ರೆಕಾರ್ಡ್ ಎಲ್ಲಾ ಸಾಕ್ಷಿಗಳೂ ಇದೆ. ಪ್ರಕರಣ ಹೊರಗೆ ಬಂದರೆ ಸರಿಯಿರಲ್ಲ, ನನಗೆ ಅಂಡರ್ ವರ್ಲ್ಡ್ ಪರಿಚಯವಿದೆ ಎಂದು ಬೆದರಿಕೆ ಹಾಕಿದ್ದು ಮಾತ್ರವಲ್ಲದೇ ಕಚೇರಿಗೆ ಬಂದು ಸೂಸೈಡ್ ಮಾಡಿಕೊಳ್ಳೋ ಬೆದರಿಕೆ ಕೂಡಾ ಹಾಕಿದ್ರು ಎಂದು ದೂರುದಾರ ಗೋವಿಂದ ಬಾಬು ಪೂಜಾರಿ (Govinda Babu Poojari) ಆಪ್ತ ರಕ್ಷಿತ್ ಶೆಟ್ಟಿ (Rakshit Shetty) ತಿಳಿಸಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿರುವ ಅವರು, ಚೈತ್ರಾ ಬೆದರಿಕೆ ಹಾಕಿರೋದು, ಬ್ಲಾಕ್ ಮೇಲ್ ಮಾಡಿರೋದು, ತಪ್ಪೊಪ್ಪಿಗೆ ಮಾಡಿಕೊಂಡಿದ್ದು ಎಲ್ಲವೂ ಆಡಿಯೋ ರೆಕಾರ್ಡ್ ಹಾಗೂ ಸಿಸಿಟಿವಿ ದಾಖಲೆಗಳು ಇವೆ. ಚೈತ್ರಾ ಈ ವಿಚಾರದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಪ್ರಕರಣ ಏನಾದ್ರೂ ಹೊರಗೆ ಬಂದರೆ ಸರಿಯಿರಲ್ಲ, ನಂಗೆ ಅಂಡರ್ ವರ್ಲ್ಡ್ ನಲ್ಲಿಯೂ ಪರಿಚಯ ಇದ್ದಾರೆ ಎಂದು ಆರಂಭದಲ್ಲಿ ಗೋವಿಂದ ಬಾಬು ಪೂಜಾರಿಗೆ ಬೆದರಿಕೆ ಹಾಕಿದ್ದರು. ಅದಾದ ಬಳಿಕ ಕಚೇರಿಗೆ ಬಂದು ಸೂಸೈಡ್ ಮಾಡ್ತೀನಿ ಅಂತ ಕಣ್ಣೀರು ಹಾಕಿದ್ರು ಎಂದು ತಿಳಿಸಿದ್ದಾರೆ.
ಚೈತ್ರಾ ಹಾಗೂ ಗೋವಿಂದ ಬಾಬು ಪೂಜಾರಿ ಅವರ ನಡುವಿನ ಮಾತುಕತೆ, ಚೈತ್ರಾ ಆತ್ಮಹತ್ಯೆ ಬೆದರಿಕೆ ಎಲ್ಲವನ್ನು ನಾನು ಖುದ್ದು ಆಡಿಯೋ ಕೇಳಿಸಿಕೊಂಡಿದ್ದೇನೆ. ಅರ್ಧ ದುಡ್ಡು ಅಂದ್ರೆ 1 ಕೋಟಿ 70 ಲಕ್ಷ ರೂ. ವಾಪಸ್ ಕೊಡ್ತೀನಿ ಅಂತ ಹೇಳಿ ಮೋಸ ಮಾಡಿದ್ದು ನಿಜ ಅಂತ ಕಚೇರಿಗೆ ಬಂದು ಕಣ್ಣೀರು ಹಾಕಿದ್ದರು. ಇದೆಲ್ಲದರ ಸಿಸಿ ಟಿವಿ ಫೂಟೇಜ್ ಆಡಿಯೋ ರೆಕಾರ್ಡ್ ಇದೆ. ಚೈತ್ರಾ ಬೇರೆಯವರಲ್ಲ. ಅದರೆ ಹಿಂದುತ್ವ, ಹಿಂದೂ ಎಂದು ಹೀಗೆಲ್ಲಾ ಯಾಮಾರಿಸ್ತಾರೆ ಎಂದರೆ ಖಂಡಿತಾ ತಪ್ಪು ಎಂದು ಹೇಳಿಕೆ ನೀಡಿದರು. ಈ ಬಗ್ಗೆ ರಕ್ಷಿತ್ ಫೇಸ್‌ಬುಕ್‌ನಲ್ಲಿ ದೀರ್ಘವಾದ ಪೋಸ್ಟ್ ಹಂಚಿಕೊಂಡಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?
ಬೈಂದೂರು ರಾಜಕೀಯದಲ್ಲಿ ನಾವೊಂದಿಷ್ಟು ಜನ ಸಕ್ರಿಯರಾಗಿರುವುದರಿಂದ ನನಗೆ ಟಿಕೆಟ್‌ಗಾಗಿ ಹಣ ಪಡೆದ ಕೇಸ್‌ನ ಬಗ್ಗೆ ಒಂದಿಷ್ಟು ನಿಖರವಾದ ಮಾಹಿತಿ ಗೊತ್ತಿದೆ. ಇಷ್ಟೆಲ್ಲಾ ಮುಗಿದು ಪೋಲಿಸರ ಕಸ್ಟಡಿಯಲ್ಲಿರುವ ತಂಡ ಇನ್ನು ನಮ್ಮದೇನು ತಪ್ಪಿಲ್ಲ. ಇಂದಿರಾ ಕ್ಯಾಂಟೀನ್ ಹಣ ಬಾಕಿಯಿರುವುದರಿಂದ ಇದೆಲ್ಲಾ, ಸ್ವಾಮೀಜಿ ಸಿಗಲಿ ಗೊತ್ತಾಗುತ್ತೆ ಎಂದಿದ್ದಾರೆ.
ಅಸಲಿಗೆ ಮೂರುವರೆ ಕೋಟಿ ನೀಡಿದ್ದು ಚೈತ್ರಾ ಆ್ಯಂಡ್ ಕಂಪನಿಗೆ. ಒಂದೂವರೆ ಕೋಟಿ ನೀಡಿದ್ದು ಸ್ವಾಮಿಗಳಿಗೆ, ಒಟ್ಟು 5 ಕೋಟಿಗಳು. ದುಡ್ಡಿನ ವಿಚಾರದಲ್ಲಿ ಸ್ವಾಮೀಜಿ ಸಿಕ್ಕಿಯೇ ಗೊತ್ತಾಗಬೇಕಾದ ವಿಚಾರಗಳಿಲ್ಲ. ಎಲ್ಲಾ ನಡೆದು ಟಿಕೆಟ್ ಸಿಗದೆ ಇದ್ದಾಗ ಸ್ವತಃ ತನಿಖೆ ಇಳಿದ ಗೋವಿಂದ ಬಾಬು ಪೂಜಾರಿಯವರಿಗೆ ಎಲ್ಲರೂ ಸಿಗುತ್ತಾರೆ. ಆಗ ಆಫೀಸಿನಲ್ಲಿ ಕೂರಿಸಿ ವಿಚಾರಣೆ ನಡೆಸಿದಾಗ ಅವರು ಹೇಳಿದ ಮಾತು ನಾವು ಹಣವನ್ನೆಲ್ಲಾ ವಿಶ್ವನಾಥ ಜೀಗೆ ಕೊಟ್ಟಿದ್ದೇವೆ. ಅವರು ತೀರಿಕೊಂಡರು ಎಂದು. ಇದನ್ನೂ ಓದಿ: ಚೈತ್ರಾ ಪ್ರಕರಣಕ್ಕೂ ಇಂದಿರಾ ಕ್ಯಾಂಟೀನ್ ಬಿಲ್‌ಗೂ ಸಂಬಂಧ ಇಲ್ಲ: ಗೋವಿಂದ ಬಾಬು
ಕೊನೆಗೆ ವಿಶ್ವನಾಥ್ ಜೀ ಪಾತ್ರ ಮಾಡಿದವನನ್ನು ಎಳೆದು ತಂದಾಗ ಇದೇ ತಂಡ ಗೋವಿಂದ ಬಾಬು ಪೂಜಾರಿಯವರ ಆಫೀಸ್‌ನಲ್ಲಿ ವಿಷ ಕುಡಿಯುವ ಪ್ರಹಸನ ಬೇರೆ ಮಾಡಿತ್ತು. ಕೊನೆಗೆ ಸ್ವಲ್ಪ ದಿನದ ನಂತರ ಹಣ ವಾಪಸ್ ಕೊಡುವುದಾಗಿ ಹೇಳಿ ಅಲ್ಲಿಂದ ಕಾಲ್ಕಿತ್ತಿತ್ತು. ಇದೆಲ್ಲದರ ಬಗ್ಗೆ ಸಿಸಿಟಿವಿ ಫೂಟೇಜ್‌ಗಳಿವೆ, ಪೋನ್ ಸಂಭಾಷಣೆಗಳ ರೆಕಾರ್ಡ್‌ಗಳಿವೆ. ಇಷ್ಟೆಲ್ಲಾ ಇದ್ದರೂ ಆಟ ಆಡುವ ಈಕೆ ಮತ್ತು ತಂಡ, ಜೊತೆಗೆ ಆಕೆಯದೆ ಸರಿ ಎನ್ನುವ ಕೆಲವರು. ಡಿಫೆಂಡ್ ಮಾಡಿಕೊಳ್ಳೋಣ ಎಂದು ರಕ್ಷಿತ್ ಬರೆದಿದ್ದಾರೆ. ಇದನ್ನೂ ಓದಿ: ಎಲ್ಲಾ ದೊಡ್ಡೋರ ಹೆಸರೆಲ್ಲ ಹೊರಗಡೆ ಬರುತ್ತೆ: ಚೈತ್ರಾ ಕುಂದಾಪುರ