Tag: ಗೋವಿಂದ್ ಸಿಂಗ್

  • ಹೆಗ್ಡೆ ಹಿಂದೂ ಅನ್ನೋದಕ್ಕೆ ತಂದೆ, ತಾಯಿಯ ಡಿಎನ್‍ಎ ಕೊಡಿ: ಕಾಂಗ್ರೆಸ್ ಮುಖಂಡ

    ಹೆಗ್ಡೆ ಹಿಂದೂ ಅನ್ನೋದಕ್ಕೆ ತಂದೆ, ತಾಯಿಯ ಡಿಎನ್‍ಎ ಕೊಡಿ: ಕಾಂಗ್ರೆಸ್ ಮುಖಂಡ

    ಭೋಪಾಲ್: ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಹಿಂದೂ ಅನ್ನೋದಕ್ಕೆ ಸಾಕ್ಷಿಗೆ ಅವರ ತಂದೆ, ತಾಯಿಯ ಡಿಎನ್‍ಎ ತಂದು ಕೊಡಿ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ, ಸಚಿವ ಗೋವಿಂದ್ ಸಿಂಗ್ ಕೇಳಿದ್ದಾರೆ.

    ಹೆಗ್ಡೆ ಅವರ ತಂದೆ, ತಾಯಿಯವರ ಡಿಎನ್‍ಎ ತಂದು ಕೊಡಲಿ. ಡಿಎನ್‍ಎ ಪರಿಶೀಲನೆ ನಡೆಸಿ ಹೆಗ್ಡೆಯವರ ಜಾತಿ ಯಾವುದು ಎಂದು ಪತ್ತೆ ಮಾಡೋಣ. ಕೆಲವರು ಕೆಳಮಟ್ಟದ ಪದಗಳನ್ನು ಬಳಸುವ ಮೂಲಕ ಗೌರವಕ್ಕೆ ಚ್ಯುತಿ ತರಲು ಪ್ರಯತ್ನಿಸುತ್ತಿದ್ದಾರೆ. ಇಂತಹ ವ್ಯಕ್ತಿಗಳ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡಲ್ಲ ಎಂದು ಗೋವಿಂದ್ ಸಿಂಗ್ ಹೇಳಿದ್ದಾರೆ.

    ಭಾನುವಾರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕೂಗ್ತಿ ಮಹಾಸತಿ ದೇವಸ್ಥಾನದಲ್ಲಿ ನಡೆದ ತಾಯ್ನೆಲದ ಸೇವೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ, ಭಾರತೀಯ ಯೋಧರ ಶೌರ್ಯದ ಬಗ್ಗೆ ಸಂದೇಹ ಪಡುವ ಬಿಕನಾಸಿ ಪರಿಸ್ಥಿತಿ ಕಾಂಗ್ರೆಸ್‍ನಿಂದ ನಿರ್ಮಾಣವಾಗಿದೆ. ನಮ್ಮ ಪೈಲಟ್‍ಗಳು ಪಾಕಿಸ್ತಾನಕ್ಕೆ ನುಗ್ಗಿ ಉಗ್ರರನ್ನು ಹತ್ಯೆ ಮಾಡಿದ್ದಕ್ಕೆ ಸಾಕ್ಷಿ ಕೇಳುತ್ತಿದ್ದಾರೆ. ಆದರೆ ಮುಸಲ್ಮಾನನ ಮಗ ಗಾಂಧಿ ಹೇಗಾದ ಎನ್ನುವುದಕ್ಕೆ ಸಾಕ್ಷಿ ಕೊಡುತ್ತಾರಾ ಎಂದು ಪ್ರಶ್ನಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.

    ಮುಸಲ್ಮಾನ ಅಪ್ಪ, ಕ್ರಿಶ್ಚಿಯನ್ ತಾಯಿಗೆ ಹುಟ್ಟಿರುವ ಈ ಪರದೇಶಿ ಬ್ರಾಹ್ಮಣ ಹೇಗಾದ ಎನ್ನುವುದಕ್ಕೆ ಡಿಎನ್‍ಎ ಸಾಕ್ಷಿ ಕೊಡುತ್ತಾರಾ? ಮಾಜಿ ಪ್ರಧಾನಿ ರಾಜೀವ್ ಗಾಂಧಿ ಉಗ್ರರ ದಾಳಿಗೆ ಬಲಿಯಾದಾಗ ಅವರ ದೇಹ ಛಿದ್ರ ಛಿದ್ರವಾಗಿತ್ತು. ಮೃತ ದೇಹವನ್ನು ಪತ್ತೆ ಹಚ್ಚಲು, ಡಿಎನ್‍ಎ ಪರೀಕ್ಷೆಗೆ ಮಕ್ಕಳ ರಕ್ತದ ಮಾದರಿ ನೀಡುವಂತೆ ಸೋನಿಯಾ ಗಾಂಧಿ ಕೇಳಲಾಗಿತ್ತು. ಆದರೆ ಸೋನಿಯಾ ಗಾಂಧಿ ಅವರು, ರಾಹುಲ್ ಗಾಂಧಿ ರಕ್ತದ ಮಾದರಿ ಬೇಡ, ಪ್ರಿಯಾಂಕಾ ಗಾಂಧಿ ರಕ್ತವನ್ನು ತೆಗೆದುಕೊಳ್ಳಿ ಎಂದು ಹೇಳಿದ್ದರು. ಅಂತಹವರು ಈಗ ಏರ್ ಸ್ಟ್ರೈಕ್ ಸಾಕ್ಷಿ ಕೇಳುತ್ತಿದ್ದಾರೆ ಎಂದು ಗಾಂಧಿ ಕುಟುಂಬದ ವಿರುದ್ಧ ಕಿಡಿಕಾರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv