Tag: ಗೋವಿಂದ್ ಬಾಬು ಪೂಜಾರಿ

  • ಅಭಿನವ ಹಾಲಶ್ರೀ ನೇತೃತ್ವದಲ್ಲಿ ಗೋವಿಂದ್ ಬಾಬು ಪೂಜಾರಿ ಬಯೋಪಿಕ್

    ಅಭಿನವ ಹಾಲಶ್ರೀ ನೇತೃತ್ವದಲ್ಲಿ ಗೋವಿಂದ್ ಬಾಬು ಪೂಜಾರಿ ಬಯೋಪಿಕ್

    ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ ಉದ್ಯಮಿ ಗೋವಿಂದ್ ಬಾಬು ಪೂಜಾರಿ (Govind Babu Pujari) ಅವರ ಬಯೋಪಿಕ್ (Biopic) ಮುಹೂರ್ತ ಕಾಣಬೇಕಿತ್ತು. ತೆರೆಯ ಮರೆಯಲ್ಲಿ ಎಲ್ಲ ರೀತಿಯ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿತ್ತು. ಅಚ್ಚರಿಯ ಸಂಗತಿ ಅಂದರೆ, ಈ ಸಿನಿಮಾವನ್ನು ಘೋಷಣೆ ಮಾಡಿದ್ದು ಆರೋಪಿ ಸ್ಥಾನದಲ್ಲಿರುವ ಹಾಲಶ್ರೀ (Abhinav Halashree) ಎನ್ನುವುದು ವಿಶೇಷ.

    ಟಿಕೆಟ್ ಗಾಗಿ ಹಣ ಕಳೆದುಕೊಂಡಿರುವ ಉದ್ಯಮಿ ಗೋವಿಂದಬಾಬು ಪೂಜಾರಿ ಜೀವನಾಧಾರಿತ ಸಿನಿಮಾ ಮಾಡುವುದಕ್ಕಾಗಿ ಮಂಜು ಕೋಟ್ಯಾನ್ ಎನ್ನುವವರು ಸಜ್ಜಾಗಿದ್ದರು. ಇವರ ನಿರ್ದೇಶನದಲ್ಲೇ ಸಿನಿಮಾ ಬರಬೇಕಿತ್ತು. ಕಳೆದ ಡಿಸೆಂಬರ್ ನಲ್ಲಿ ಪೂಜಾರಿ ಅವರ ಚೆಫ್ ಟಾಕ್  ಸಂಸ್ಥೆಯ 15ನೇ ವಾರ್ಷಿಕೋತ್ಸವಕ್ಕೆ ಅತಿಥಿಯಾಗಿದ್ದ ಅಭಿನವ ಹಾಲಶ್ರೀ, ಪೂಜಾರಿ ಕುರಿತಾದ ಸಿನಿಮಾ ಮಾಡ್ತಿರೋ ಬಗ್ಗೆ ಅನೌನ್ಸ್ ಮಾಡಿದ್ದರು. ಅಭಿನವ ಹಾಲಶ್ರೀ ಕೈಯ್ಯಲ್ಲೇ ಸಿನಿಮಾದ ಮೊದಲ ಸೀನ್ ನ ಕ್ಲ್ಯಾಪ್ ಮಾಡಿಸಲು ಸಿದ್ದತೆ ಕೂಡ ಮಾಡಲಾಗಿತ್ತು.

    ಈ ಸಿನಿಮಾದಲ್ಲಿ ಕೇವಲ ಪೂಜಾರಿಯ ಜೀವನ ಕಥನ ಮಾತ್ರವಲ್ಲ, ಆರ್.ಎಸ್.ಎಸ್ ಸಂಘಪರಿವಾರ ಬಗ್ಗೆಯೂ ಹಲವು ಅಂಶಗಳು ಇದ್ದವು. ಆರ್.ಎಸ್.ಎಸ್ ಸಂಘ ಪರಿವಾರದಿಂದ ಬಂದವರು ಹೇಗೆ ನಾಯಕರುಗಳಾಗಿ ಬೆಳಿತಾರೇ ಅನ್ನೊ ಕಥಾಹಂದರ ಈ ಸಿನಿಮಾ ಹೊಂದಿತ್ತು. ದೈವಸುತಂ ಅಥವಾ ಮನಸಾವಾಚ ಕರ್ಮಣ ಅನ್ನೊ ಹೆಸರನ್ನ ಚಿತ್ರಕ್ಕಾಗಿ ಫೈನಲ್ ಮಾಡಲಾಗಿತ್ತು.

    ಈ ಕುರಿತು ಸಿನಿಮಾದ ನಿರ್ದೇಶಕ ಮಂಜು ಕೋಟ್ಯಾನ್ (Manju Kotyan) ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿ, ‘ಈ ಸಿನಿಮಾದಲ್ಲಿ ಸಾಮಾನ್ಯ ವ್ಯಕ್ತಿ ದೊಡ್ಡ ವ್ಯಕ್ತಿಯಾಗಿ ಬೆಳೆದ ಕಥೆಯಿದೆ. ಎಷ್ಟೋ ಜನ ಬಡವರಿಗೆ ಗೋವಿಂದ ಪೂಜಾರಿ ಸಹಾಯ ಮಾಡಿದ್ದಾರೆ. ಚಿತ್ರದಲ್ಲಿ ಸಂಘ ಪರಿವಾರ, ಆರ್ ಎಸ್ ಎಸ್ ನ ತತ್ವಗಳನ್ನು ಸಹ ಸೇರಿಸಲಾಗಿದೆ. ಗೋವಿಂದಬಾಬು ಪೂಜಾರಿಗೆ ಮೋಸದ ವಿಷಯ ಕೇಳಿದಾಗ ತುಂಬಾ ಬೇಸರವಾಯಿತು. ಈ ಮೋಸದ ವಿಷಯ ಕೆಲ ನಾಯಕರುಗಳಿಗೂ ಗೊತ್ತಿತ್ತು. ಸದ್ಯ ಸಿನಿಮಾಕ್ಕೆ ನಾಯಕನನ್ನು ಸೆಲೆಕ್ಟ್ ಮಾಡ್ತಾ ಇದ್ದೇವೆ. ಉಳಿದ ಸಿನಿಮಾದ ಅಪ್ ಡೇಟ್ ಗಳು ಗೋವಿಂದ ಪೂಜಾರಿ ಕೊಡ್ತಾರೆ’ ಎನ್ನುತ್ತಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]