Tag: ಗೋವಿಂದರಾಜನಗರ

  • Bengaluru | ಗೋವಿಂದರಾಜನಗರದಲ್ಲಿ ಬ್ರಾಹ್ಮಣ ಭವನ ಉದ್ಘಾಟನೆ

    Bengaluru | ಗೋವಿಂದರಾಜನಗರದಲ್ಲಿ ಬ್ರಾಹ್ಮಣ ಭವನ ಉದ್ಘಾಟನೆ

    ಬೆಂಗಳೂರು: ಗೋವಿಂದರಾಜನಗರ (Govindarajanagara) ವಿಧಾನಸಭಾ ಕ್ಷೇತ್ರದ ಡಾ.ರಾಜಕುಮಾರ್ ವಾರ್ಡ್‌ನ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ನೂತನವಾಗಿ ನಿರ್ಮಿಸಿದ ಶ್ರೀಪಾಂಚರಾತ್ರ ಪ್ರತಿಷ್ಠಾನ ಬ್ರಾಹ್ಮಣ ಭವನವನ್ನು (Brahmana Bhavana) ಶಾಸಕರಾದ ಎಂ.ಕೃಷ್ಣಪ್ಪ, ಪ್ರಿಯಕೃಷ್ಣ, ಯುವ ಮುಖಂಡರಾದ ಪ್ರದೀಪ್ ಕೃಷ್ಣಪ್ಪ ಉದ್ಘಾಟಿಸಿದರು.

    ಉದ್ಘಾಟನಾ ಕಾರ್ಯಕ್ರಮದಲ್ಲಿ ಆಗಮ ಪಂಡಿತರು, ಪುರೋಹಿತರು, ಅರ್ಚಕರು ಭಾಗವಹಿಸಿದ್ದರು. ಶ್ರೀನಿವಾಸ್ ರಾಮಾನುಜಾ ಭಟ್ಟಾಚಾರ್ಯ ಅವರು ಮಾತನಾಡಿ, ಕೊಡುಗೈದಾನಿ ಎಂದೇ ಹೆಸರುವಾಸಿ ಇರುವ ಎಂ. ಕೃಷ್ಣಪ್ಪ ಅವರು ಇವತ್ತು ಬ್ರಾಹ್ಮಣ ಸಮಾಜಕ್ಕೆ ಕಲ್ಯಾಣ ಮಂಟಪ ನಿರ್ಮಿಸಿಕೊಟ್ಟಿದ್ದಾರೆ. ಕೃಷ್ಣಪ್ಪ ದೇವರ ಮೇಲೆ ತುಂಬಾ ಭಕ್ತಿ, ನಿಷ್ಠೆ, ಹೊಂದಿರುವವರು. ಅವರ ಸುಪುತ್ರರಾದ ಪ್ರಿಯಕೃಷ್ಣ ಹಾಗೂ ಪ್ರದೀಪ್ ಕೃಷ್ಣಪ್ಪ ಇವರಿಬ್ಬರೂ ರಾಮ ಲಕ್ಷ್ಮಣ ಇದ್ದಹಾಗೆ. ಸಮಾಜಸೇವೆ ಮಾಡುವ ಜೊತೆ ಸಂಸ್ಕಾರದಿಂದ ಮಾತನಾಡುವ ಗುಣವುಳ್ಳವರು. ಕೃಷ್ಣಪ್ಪ, ಪ್ರಿಯಕೃಷ್ಣ, ಹಾಗೂ ಪ್ರದೀಪ್ ಕೃಷ್ಣಪ್ಪ ಅವರಿಗೆ ಇನ್ನೂ ಹೆಚ್ಚು ಒಳ್ಳೆಯ ಕೆಲಸ ಮಾಡಲು ಭಗವಂತ ಆಶೀರ್ವಾದ ನೀಡಲಿ ಎಂದರು. ಇದನ್ನೂ ಓದಿ: ಪಿಜಿ ಅಲೈಡ್ ಹೆಲ್ತ್ ಸೈನ್ಸ್, ಎಂ.ಫಾರ್ಮ, ಫಾರ್ಮ-ಡಿಗೆ ಪ್ರವೇಶ ಪರೀಕ್ಷೆ: ಕೆಇಎ

    ಶಾಸಕರಾದ ಎಂ.ಕೃಷ್ಣಪ್ಪ ಅವರು ಮಾತನಾಡಿ, ಬ್ರಾಹ್ಮಣರ ಮೇಲೆ ನಮಗೆ ಅಪಾರ ಗೌರವ ಇದೆ. ಬ್ರಾಹ್ಮಣರು ಎಂದರೆ ದೇವರ ಸಮಾನರೆಂದು ನಮ್ಮ ಭಾವನೆ. ನಾನು ಅವರಿಗೆ ನಿತ್ಯವೂ ನಮಸ್ಕರಿಸುತ್ತೇನೆ. ಸಮಾಜದಲ್ಲಿ ಯಾರೇ ತಪ್ಪು ಮಾಡಿದರೂ ಅವರನ್ನು ತಿದ್ದುವ ಕೆಲಸ ಮತ್ತು ಸಲಹೆ ನೀಡುವ ಕಾರ್ಯ ಬ್ರಾಹ್ಮಣ ಸಮುದಾಯದವರು ಮಾಡಬೇಕು. ಇವತ್ತು ವಿಶೇಷವಾಗಿ ಬ್ರಾಹ್ಮಣ ಸಮುದಾಯಕ್ಕೆ ಕಲ್ಯಾಣ ಮಂಟಪ ಉದ್ಘಾಟನೆ ಮಾಡಿರುವುದಕ್ಕೆ ನನಗೆ ಅತೀವ ಸಂತೋಷ ಆಗಿದೆ. ಶಾಸಕ ಪ್ರಿಯಕೃಷ್ಣ ಅವರು ಶ್ರೀಪಾಂಚರಾತ್ರ ಪ್ರತಿಷ್ಠಾನ ಭವನಕ್ಕೆ ಹೆಚ್ಚಿನ ಕಾಳಜಿ ವಹಿಸಿ ಬೇಗನೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ಇವತ್ತು ಉದ್ಘಾಟನೆ ಮಾಡಿ ಬ್ರಾಹ್ಮಣ ಸಮಾಜ ಜೊತೆ ಸದಾ ಇರುತ್ತೇವೆ ಎಂದು ತಿಳಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಭಾರತ ಈಗ ಸುಂಕ ಕಡಿಮೆ ಮಾಡೋಕೆ ಮುಂದಾಗಿದೆ – ಭಾರತದ ಜೊತೆಗಿನ ಸಂಬಂಧವನ್ನ ವಿಪತ್ತು ಎಂದ ಟ್ರಂಪ್‌

    ಶಾಸಕರಾದ ಪ್ರಿಯಕೃಷ್ಣ ಮಾತನಾಡಿ, ಬ್ರಾಹ್ಮಣ ಸಮುದಾಯದ ಗುರೂಜಿಗಳು ಅವರು ಒಂದು ವರ್ಷದ ಹಿಂದೆ ನನಗೆ ಹಾಗೂ ಶಾಸಕರಾದ ಎಂ.ಕೃಷ್ಣಪ್ಪ ಅವರಿಗೆ ಸಮುದಾಯ ಭವನ ಬೇಕು ಅಂತಾ ಕೇಳಿದ್ರು. ಅವರ ಆಶಯದಂತೆ ನಿರ್ಮಿಸಿ ಇವತ್ತು ಉದ್ಘಾಟನೆ ಆಗಿದೆ. ಬ್ರಾಹ್ಮಣ ಸಮಾಜದವರ ಆಶೀರ್ವಾದ ಎಲ್ಲರ ಮೇಲೂ ಇರಲಿ. ಇನ್ನು ಏನೇ ಕೆಲಸ ಆಗಬೇಕು ಅಂತಾ ಇದ್ದರೆ ಹೇಳಿ, ನಿಮ್ಮ ಸೇವೆಗೆ ಸದಾ ಸಿದ್ಧ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಧರ್ಮಸ್ಥಳ ಪರ ಬಿಜೆಪಿ `ಧರ್ಮ’ ಸಮರ – ಎನ್‌ಐಎ ತನಿಖೆಗೆ ವಹಿಸುವಂತೆ ಆಗ್ರಹ

    ಈ ಸಂದರ್ಭದಲ್ಲಿ ಶ್ರೀಪಾಂಚರಾತ್ರ ಪ್ರತಿಷ್ಠಾನ ಅಧ್ಯಕ್ಷರು ಕೆ.ಶೇಷಾದ್ರಿ, ಕೆ.ನರಸಿಂಹನ್, ಎಂ.ಮುರಳಿಕೃಷ್ಣ, ರಾಮಾನುಜಾ ಭಟ್ಟಾಚಾರ್ಯ, ಬಿ.ಕೆ ರಾಮಚಂದ್ರ ಭಟ್ಟಾಚಾರ್ಯ ಹಾಗೂ ಪದಾಧಿಕಾರಿಗಳು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಇದನ್ನೂ ಓದಿ: ಸಿಇಟಿ ಛಾಯ್ಸ್ ಆಯ್ಕೆ, ಶುಲ್ಕ ಪಾವತಿಗೆ ದಿನಾಂಕ ವಿಸ್ತರಣೆ: ಕೆಇಎ

  • ಬೆಂಗಳೂರು| ಬೈಕ್‌ನಲ್ಲಿ ಬಂದು ಪೆಪ್ಪರ್ ಸ್ಪ್ರೇ ಹಾಕಿ ಯುವಕರ ಮೇಲೆ ಹಲ್ಲೆ

    ಬೆಂಗಳೂರು| ಬೈಕ್‌ನಲ್ಲಿ ಬಂದು ಪೆಪ್ಪರ್ ಸ್ಪ್ರೇ ಹಾಕಿ ಯುವಕರ ಮೇಲೆ ಹಲ್ಲೆ

    ಬೆಂಗಳೂರು: ಯುವಕರ ಮೇಲೆ ಪೆಪ್ಪರ್ ಸ್ಪ್ರೇ ಹಾಕಿ ಹಲ್ಲೆ ಮಾಡಿರುವ ಘಟನೆ ನಗರದ ಹೊಸಹಳ್ಳಿ ಮೆಟ್ರೋ ಸ್ಟೇಷನ್ (Hosahalli Metro Statin) ಬಳಿ ನಡೆದಿದೆ.

    ಶುಕ್ರವಾರ ರಾತ್ರಿ ಮೆಟ್ರೋ ಸ್ಟೇಷನ್ ಬಳಿ ಮಾತನಾಡುತ್ತಾ ಕುಳಿತಿದ್ದ ಯುವಕರ ಮೇಲೆ ಹಲ್ಲೆ ನಡೆದಿದೆ.ಇದನ್ನೂ ಓದಿ:ಮತ್ತೆ 3 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ – ಬೆಂಗಳೂರಿಂದ ಮುಂಬೈಗೆ ಹೊರಟಿದ್ದ ಫ್ಲೈಟ್‌ಗೂ ಥ್ರೆಟ್ ಕಾಲ್

    ಯುವತಿಯರ ಜೊತೆ ಯುವಕರು ಮಾತನಾಡುತ್ತಾ ಕುಳಿತಿದ್ದರು. ಮಾತನಾಡುತ್ತಿದ್ದ ವೇಳೆ ಬೈಕ್‌ನಲ್ಲಿ ಪುಂಡರ ಗ್ಯಾಂಗ್‌ವೊಂದು ಬಂದಿದ್ದು, ಕುಳಿತಿದ್ದ ಯುವಕರಿಗೆ ಚಮಕ್ ನೀಡಿದ್ದಾರೆ. ಇದರಿಂದಾಗಿ ಯುವಕರು ಹಾಗೂ ಬೈಕ್‌ನವರ ಮಧ್ಯೆ ಗಲಾಟೆ ನಡೆದಿದೆ.

    ಗಲಾಟ ವೇಳೆ ಕುಳಿತಿದ್ದ ಯುವಕರ ಮೇಲೆ ಪೆಪ್ಪರ್ ಸ್ಪ್ರೇ (Pepper Spray) ಹಾಕಿ ಹಲ್ಲೆ ಮಾಡಿದ್ದಾರೆ. ರಾತ್ರಿ 10:20ರ ಸುಮಾರಿಗೆ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಗೋವಿಂದರಾಜನಗರ ಪೊಲೀಸರು ಭೇಟಿ ನೀಡಿದ್ದಾರೆ.

    ಈ ಪ್ರಕರಣ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ (Govindaraja Nagar Police Station) ಎಫ್‌ಐಆರ್ ದಾಖಲಾಗಿದೆ.ಇದನ್ನೂ ಓದಿ:Public TV Impact | ಕಲಬುರಗಿ ಸೆಂಟ್ರಲ್‌ ಜೈಲ್‌ನ ಇಬ್ಬರು ಅಧಿಕಾರಿಗಳು ಅಮಾನತು

  • ಚಿಕಿತ್ಸೆಗೆ ಹೋಗಿದ್ದಾಗ ಮಾಂಗಲ್ಯ ಸರ ಕಳ್ಳತನ?- ನರ್ಸ್ ವಿರುದ್ಧ ಮಹಿಳೆ ದೂರು

    ಚಿಕಿತ್ಸೆಗೆ ಹೋಗಿದ್ದಾಗ ಮಾಂಗಲ್ಯ ಸರ ಕಳ್ಳತನ?- ನರ್ಸ್ ವಿರುದ್ಧ ಮಹಿಳೆ ದೂರು

    ಬೆಂಗಳೂರು: ಎದೆ ನೋವು ಅಂತ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದ ಮಹಿಳೆಯ ಮೈಮೇಲಿದ್ದ ಮಾಂಗಲ್ಯ ಸರವನ್ನ ಎಗ್ಗರಿಸಲಾಗಿದೆ. ಮಾಂಗಲ್ಯ ಸರ ಕಳ್ಳತನದ ಹಿಂದೆ ಆಸ್ಪತ್ರೆ ಸಿಬ್ಬಂದಿ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಮಹಿಳೆ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ (Govindrajanagar Police Station) ದೂರು ನೀಡಿದ್ದಾರೆ.

    ರಾಧಾ ಎಂಬವರು ಫೆಬ್ರವರಿ 8 ರಂದು ಮೂಡಲ್ ಪಾಳ್ಯದಲ್ಲಿರೋ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದಾರೆ. ಎದೆನೋವು ಅಂತ ಹೋಗಿದ್ದಾರೆ. ಎದೆ ನೋವು ಇದ್ದ ಕಾರಣ ಇಸಿಜಿ ಮಾಡಬೇಕು ಚಿನ್ನದ ಸರ ತಗೆದು ಇಡುವಂತೆ ನರ್ಸ್ ಅಕ್ಷತಾ ಸೂಚಿಸುತ್ತಾರೆ. ಮಾಂಗಲ್ಯ ಸರ ತೆಗೆದ ಬಳಿಕ ಪತಿಗೆ ಕೊಡಲು ಮಹಿಳೆ ಸೂಚಿಸಿದ್ದಾರೆ.

    ನರ್ಸ್ ದಿಂಬಿನ ಕೆಳಗಡೆ ಇಡುವಂತೆ ಸೂಚಿಸಿದ್ದಾರೆ. ಅದರಂತೆ ಮಹಿಳೆ ಕೆಳಗಡೆ ಸರ ಇಟ್ಟು ECG ಮಾಡಿಸಿಕೊಂಡು ಗಾಬರಿಯಲ್ಲಿ ಸರ ಮರೆತು ಹೋಗಿರುತ್ತಾರೆ. ರಾಧಾ ಅವರಿಗೆ ಮಾತ್ರೆ ಇಂಜೆಕ್ಷನ್ ಕೊಟ್ಟಿದ್ದ ಕಾರಣ ಮಾಂಗಲ್ಯ ಸರ ಆಸ್ಪತ್ರೆಯಲ್ಲಿ ಬಿಟ್ಟಿರೋದನ್ನ ಮರೆತು ನಿದ್ದೆ ಮಾಡಿಬಿಟ್ಟಿದ್ದಾರೆ. ಮಾರನೇ ದಿನ ಸ್ನಾನಕ್ಕೆ ಹೋದಾಗ ಮಹಿಳೆಗೆ ಸರದ ಬಗ್ಗೆ ಅರಿವಾಗಿದೆ. ಕೂಡಲೇ ನೆನಪಿಸಿಕೊಂಡು ಆಸ್ಪತ್ರೆಗೆ ಹೋಗಿ ವಿಚಾರಿಸಿದಾಗ ಆಸ್ಪತ್ರೆ ಸಿಬ್ಬಂದಿ ಸರಿಯಾಗಿ ರೆಸ್ಪಾನ್ಸ್ ಮಾಡಿಲ್ಲ. ಇದನ್ನೂ ಓದಿ: ಚಿನ್ನದ ಅಂಗಡಿಗೆ ಕನ್ನ – 250 ಗ್ರಾಂ ಚಿನ್ನ, 1.8 ಲಕ್ಷ ರೂ. ಹಣದೊಂದಿಗೆ ಪರಾರಿ

    ಸಿಸಿಟಿವಿ ಪರಿಶೀಲನೆ ಮಾಡಿ ನೋಡಿದಾಗ ನರ್ಸ್ ಒಬ್ಬರು ಕೈಯಲ್ಲಿ ಸರ ಗೊತ್ತಾಗದಂತೆ ಹಿಡಿದುಕೊಂಡು ಬರುತ್ತಿರೋದು ಅನುಮಾನ ಹುಟ್ಟಿಸಿದೆ. ಹಾಗಾಗಿ ಸಿಸಿಟಿವಿ ದೃಶ್ಯಗಳೊಂದಿಗೆ ದೂರು ಕೊಟ್ಟಿದ್ದು, ಗೋವಿಂದರಾಜ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.

  • ಗಂಡನಿಗೆ ಹೆಂಡ್ತಿ ಮೇಲೆ ಸಂಶಯ, ಮಾವನಿಗೆ ಸೊಸೆ ಮೇಲೆ ಅನುಮಾನ- ಸಿಕ್ಕ ಫಲಿತಾಂಶ ಆತ್ಮಹತ್ಯೆ

    ಗಂಡನಿಗೆ ಹೆಂಡ್ತಿ ಮೇಲೆ ಸಂಶಯ, ಮಾವನಿಗೆ ಸೊಸೆ ಮೇಲೆ ಅನುಮಾನ- ಸಿಕ್ಕ ಫಲಿತಾಂಶ ಆತ್ಮಹತ್ಯೆ

    ಬೆಂಗಳೂರು: ಕುಟುಂಬದಲ್ಲಿ ಹಣಕಾಸಿಗೇನು ಕೊರತೆ ಇರಲಿಲ್ಲ. ಕೋಟಿ ಕೋಟಿಯಷ್ಟು ಹಣ ಇದ್ರೂ ಹಣದ ದಾಹ ತೀರಲಿಲ್ಲ. ಹಣದ ದಾಹದ ಜೊತೆಗೆ ಗಂಡನಿಗೆ ಹೆಂಡತಿ ಮೇಲೆ ಸಂಶಯ. ಮಾವನಿಗೆ ಸೊಸೆ ಮೇಲೆ ಅನುಮಾನ. ಕೊನೆಗೆ ಸಿಕ್ಕ ಫಲಿತಾಂಶ ಆತ್ಮಹತ್ಯೆ.

    ಅಮೇರಿಕಾದಲ್ಲಿ (America) ಚೆನ್ನಾಗಿ ಓದಿ ಉನ್ನತ ವ್ಯಾಸಂಗ ಮಾಡಿದ್ದ ಐಶ್ವರ್ಯ ಚಂದ್ರಲೇಔಟ್ ನ (Chandra Layout) ನಿವಾಸಿ ಸುಬ್ರಹ್ಮಣಿಯವರ ಏಕೈಕ ಪುತ್ರಿ. ಸುಬ್ರಹ್ಮಣಿಯೂ ಆಸ್ತಿ ಅಂತಸ್ತಿನಲ್ಲಿ ಸ್ವಲ್ಪ ಚೆನ್ನಾಗಿಯೇ ಇದ್ದರು. ತನ್ನ ಮಗಳನ್ನ ತನಗಿಂತ ಸಿರಿವಂತನಿಗೆ ಕೊಟ್ಟು ಮದುವೆ ಮಾಡಬೇಕು ಅನ್ನೋ ಆಸೆ ಇತ್ತು. ಅದರಂತೆ ಹೆಸರಾಂತ ಡೈರಿ ರೀಚಿ ಐಸ್ ಕ್ರೀಂ ನ ಮಾಲೀಕರಾದ ಗಿರಿಯಪ್ಪ ಅವರ ಮಗ ರಾಜೇಶ್‍ಗೆ ಐದು ವರ್ಷದ ಹಿಂದೆ ಮದುವೆ ಮಾಡಿಕೊಟ್ಟಿದ್ರು. ಮದ್ವೆ ಮೊದ ಮೊದಲು ಜೀವನ ಚೆನ್ನಾಗಿಯೇ ಇತ್ತು.

    ಐಶ್ವರ್ಯ ಬಾಳಲ್ಲಿ ವಿಲನ್ ಆದ ಚಿಕ್ಕಪ್ಪ: ಗಿರಿಯಪ್ಪ ಸಂಬಂಧ ಕುದಿರಿಸಿದ್ದು ಐಶ್ವರ್ಯ ಚಿಕ್ಕಪ್ಪ ಅರ್ಥಾತ್ ಸುಬ್ರಹ್ಮಣಿಯ ತಮ್ಮ. ಅಣ್ಣನ ಮಗಳಿಗೆ ಒಳ್ಳೆಯ ಸಂಬಂಧ ನೋಡಿದ ರವೀಂದ್ರ ಸ್ರುಬ್ಮಹ್ಮಣಿಯ ಜೊತೆ ಆಸ್ತಿ ಕಲಹ ಮಾಡಿಕೊಂಡ. ಇದನ್ನ ಸೇಡು ತೀರಿಸಿಕೊಳ್ಳುವ ಸಲುವಾಗಿ ರವೀಂದ್ರ, ಗಿರಿಯಪ್ಪ ಮತ್ತು ರಾಜೇಶ್‍ಗೆ ಚಾಡಿ ಹೇಳಿಕೊಡಲು ಶುರು ಮಾಡಿದ್ದಾನೆ.

    ಐಶ್ವರ್ಯ ಮೇಲೆ ಸಂಶಯ ಬರೋ ಹಾಗೇ ಮಾಡಿದ್ದಾನೆ. ಬಳಿಕ ವರದಕ್ಷಿಣೆಗೆ ಪೀಡಿಸುವಂತೆ ಕಿವಿ ಊದಿದ್ದಾನೆ. ರವೀಂದ್ರ ಮಾತು ಕೇಳಿದ ಗಿರಿಯಪ್ಪ, ರಾಜೇಶ್, ಸೀತಾ ಎಲ್ಲಾ ಐಶ್ವರ್ಯಗೆ ಮಾನಸಿಕ ಹಿಂಸೆ ನೀಡಿದ್ದಾರೆ. ಇದನ್ನೂ ಓದಿ: ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಗೆ 2 ಕೋಟಿ ವಂಚನೆ

    ಯಾವಾಗ ಅತ್ತೆ ಮಾವ, ಗಂಡ ನಾದಿನಿ ಎಲ್ಲಾ ಮೇಲಿಂದ ಮೇಲೆ ಹಿಂಸೆ ಕೊಡೋದಕ್ಕೆ ಶುರು ಮಾಡಿದ್ರೋ ಮನೆ ಬಿಟ್ಟು ಹೊರಗೆ ಬರೋ ನಿರ್ಧಾರ ಮಾಡಿ ತಂದೆ ಮನೆಗೆ ಐಶ್ವರ್ಯ ಬಂದು ಬಿಟ್ಟಿದ್ದಳು. ಆದರೆ ಅಲ್ಲೂ ನೆಮ್ಮದಿಯಾಗಿ ಇರೋದಕ್ಕೆ ಬಿಡದ ಗಂಡ ರಾಜೇಶ್ ಭಯಾನಕ ಹಿಂಸೆ ನೀಡಿದ್ದಾನೆ. ಇದರಿಂದ ಬೇಸತ್ತ ಐಶ್ವರ್ಯ ಎಳೆ ಎಳೆಯಾಗಿ ಕಷ್ಟದ ಬಗ್ಗೆ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಪ್ರಕರಣದ ತನಿಖೆ ನಡೆಸಿದ ಗೋವಿಂದರಾಜ ನಗರ ಪೊಲೀಸರು, ಅಗರ್ಭ ಶ್ರೀಮಂತ ಗಿರಿಯಪ್ಪ, ಸೀತಾ, ಐಶ್ವರ್ಯ ಪತಿ ರಾಜೇಶ್‍ನ ಬಂಧಿಸಿ ವಿಚಾರಣೆ ನಡೆಸಿದೆ. ತಾನು ಮಾಡಿದ ತಪ್ಪಿಗೆ ಹಿಂಸೆ ಅನುಭವಿಸಿದ ಐಶ್ವರ್ಯ ಇಹಲೋಕ ತ್ಯಜಿಸಿದ್ದಾಳೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2 ಕಡೆ ಟಿಕೆಟ್ ಕೊಡ್ತಾರೆ ಅಂತ ಕನಸಲ್ಲೂ ಅನ್ಕೊಂಡಿರಲಿಲ್ಲ: ಸೋಮಣ್ಣ

    2 ಕಡೆ ಟಿಕೆಟ್ ಕೊಡ್ತಾರೆ ಅಂತ ಕನಸಲ್ಲೂ ಅನ್ಕೊಂಡಿರಲಿಲ್ಲ: ಸೋಮಣ್ಣ

    ಬೆಂಗಳೂರು: ಎರಡು ಕಡೆ ಟಿಕೆಟ್ ಕೊಡ್ತಾರೆ ಅಂತಾ ನಾನು ಕನಸು ಮನಸಲ್ಲೂ ಅನ್ಕೊಂಡಿರಲಿಲ್ಲ. ವಿಧಿ ನಿಯಮ, ವರಿಷ್ಠರ ತೀರ್ಮಾನ ಎಂದು ಸಚಿವ ವಿ. ಸೋಮಣ್ಣ (V Somanna) ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಿಂದರಾಜನಗರ ನನ್ನ ಜನ್ಮ ಭೂಮಿ. ವರುಣಾ (Varuna), ಚಾಮರಾಜನಗರ (Chamarajanagar) ನನ್ನ ಕರ್ಮ ಭೂಮಿಯಾಗಿದೆ. ಭಗವಂತನ ಇಚ್ಛೆ ಹೇಗಿದಿಯೊ ನೋಡೋಣ. ನಾಳೆಯಿಂದ ವರುಣಾ, ಚಾಮರಾಜನಗರದಲ್ಲಿ ಪ್ರಚಾರ ಶುರು ಮಾಡುತ್ತೇನೆ ಎಂದು ಹೇಳಿದರು.

    ಗುಬ್ಬಿ, ಗೋವಿಂದರಾಜನಗರ ಮಗನಿಗೆ ಕೇಳಿದ್ದೇನೆ. ಈ ಬಗ್ಗೆ ಬಿಜೆಪಿ (BJP) ಹೈಕಮಾಂಡ್ ಜೊತೆಗೂ ಮಾತನಾಡಿದ್ದೇನೆ. ಮಗನಿಗೆ ಟಿಕೆಟ್ ಕೊಡೋದು ಬಿಡೋದು ಹೈಕಮಾಂಡ್‍ಗೆ ಬಿಟ್ಟದ್ದು, ಬೆಂಬಲಿಗರು ಸಂಯಮದಿಂದ ಇರಬೇಕು ಎಂದರು. ಇದನ್ನೂ ಓದಿ: ಟಿಕೆಟ್ ತಪ್ಪಿದ್ದಕ್ಕೆ ಲಕ್ಷ್ಮಣ ಸವದಿ ಕಣ್ಣೀರು

    ಗೋವಿಂದರಾಜನಗರ ಕ್ಷೇತ್ರ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಸೋಮಣ್ಣನ ಮನೆ ಮುಂದೆ ನೂರಾರು ಕಾರ್ಯಕರ್ತರು ಜಮಾಯಿಸಿದರು. ಸೋಮಣ್ಣ ಮಗ ಡಾ. ಅರುಣ್ ಸೋಮಣ್ಣರಿಗೆ ಗೋವಿಂದರಾಜನಗರದಿಂದಲೇ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದರು. ಬೇರೆವರಿಗೆ ಟಿಕೆಟ್ ನೀಡಿದ್ರೆ ನಮ್ಮ ಬೆಂಬಲಿಗರಿಗೆ ಕೆಲಸ ಮಾಡಲ್ಲ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಬಿಜೆಪಿ ಟಿಕೆಟ್ – ಜಾತಿವಾರು ಲೆಕ್ಕಾಚಾರ ಏನು?

  • ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಕಾನ್ಸ್‌ಟೇಬಲ್ ಅರೆಸ್ಟ್

    ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಕಾನ್ಸ್‌ಟೇಬಲ್ ಅರೆಸ್ಟ್

    ಬೆಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಗೋವಿಂದರಾಜನಗರ ಪೊಲೀಸ್ ಕಾನ್ಸ್‌ಟೇಬಲ್‌ನನ್ನು ಬಂಧನ ಮಾಡಲಾಗಿದೆ.

    ಚಾಮರಾಜನಗರ ಮೂಲದ ಬಾಲಕಿ ಮೇಲೆ ಗೋವಿಂದರಾಜನಗರ ಪೊಲೀಸ್ ಕಾನ್ಸ್‌ಟೇಬಲ್‌ ದೌರ್ಜನ್ಯ ಎಸಗಿದ್ದ ಎಂದು ಅಪ್ರಾಪ್ತೆಯ ಪೋಷಕರು ದೂರು ಕೊಟ್ಟಿದ್ದಾರೆ. ಈ ಆರೋಪದ ಆಧಾರ ಮೇಲೆ ಕಾನ್ಸ್‌ಟೇಬಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: 6 ರಿಂದ 7 ಮಂದಿ ಸೇರಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ – ಮೂವರು ಶಂಕಿತರು ವಶ  

    ನಡೆದಿದ್ದೇನು?
    ಗೋವಿಂದರಾಜನಗರದ ರಸ್ತೆ ಬದಿಯ ಪಾರ್ಕ್‍ನಲ್ಲಿ ಬಾಲಕಿ ಇದ್ದಳು. ಈ ವೇಳೆ ಕಾನ್ಸ್‌ಟೇಬಲ್‌ ಸಹಾಯ ಮಾಡುವ ನೆಪದಲ್ಲಿ ಬಾಲಕಿ ಹತ್ತಿರ ಹೋಗಿದ್ದ. ಬಳಿಕ ಆಕೆಯನ್ನು ತನ್ನ ರೂಂಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ಮರುದಿನ ಬಾಲಕಿಯನ್ನು ವಾಪಸ್ ಊರಿಗೆ ಕಳಿಸಿದ್ದ.

    ಬಾಲಕಿ ಮನೆಗೆ ಹೋದ ಬಳಿಕ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಪರಿಣಾಮ ಪೋಷಕರು ಆಕ್ರೋಶಗೊಂಡಿದ್ದು, ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ಮಾಹಿತಿ ಮೇರೆಗೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ಗೋವಿಂದರಾಜನಗರ ಪೊಲೀಸರು ಕಾನ್ಸ್‌ಟೇಬಲ್‌ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಯುವತಿ ಫೋಟೋ ಬಳಸಿ ಯುವಕರಿಂದ 19 ಲಕ್ಷ ರೂ. ಎಗರಿಸಿದ್ದ ಆರೋಪಿ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ಗೋವಿಂದರಾಜನಗರ ಕ್ಷೇತ್ರದಲ್ಲಿ ಹಕ್ಕು ಪತ್ರ ವಿತರಣೆ

    ಗೋವಿಂದರಾಜನಗರ ಕ್ಷೇತ್ರದಲ್ಲಿ ಹಕ್ಕು ಪತ್ರ ವಿತರಣೆ

    ಬೆಂಗಳೂರು: ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದ ವೇದಿಕೆಯಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿವಾಸಿಗಳಿಗೆ ಇಂದು ಹಕ್ಕುಪತ್ರ ನೀಡಲಾಯಿತು.

    ಕಂದಾಯ ಸಚಿವರಾದ ಆರ್.ಅಶೋಕ್ ಮಾತನಾಡಿ, ಬಡವರಿಗೆ ಆಶ್ರಯ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಬಡವರಿಗೆ ಸೂರು ನೀಡಲು ಕಂದಾಯ ಇಲಾಖೆಯಿಂದ ನೂರಾರು ಎಕರೆ ಜಾಗವನ್ನು ವಸತಿ ಇಲಾಖೆಗೆ ನೀಡಲಾಗಿದೆ ಎಂದು ಹೇಳಿದರು.

    ಬಡವರ ಜೀವನದಲ್ಲಿ ಬೆಳಕಾಗಬೇಕು ಎಂದು ಸಾವಿರಾರು ಎಕರೆ ಭೂಮಿಯನ್ನು ಕಂದಾಯ ಇಲಾಖೆವತಿಯಿಂದ ಕೊಳಗೇರಿ,ವಸತಿ ಇಲಾಖೆ ನೀಡಲಾಗಿದೆ. ಹಕ್ಕುಪತ್ರ ನೀಡಲು ನೆನಗುದಿಗೆ ಬಿದ್ದ ಕಾರ್ಯ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ನೇತೃತ್ವದಲ್ಲಿ ನೀಡಲಾಗುತ್ತಿದೆ. 1800 ಕೊಳಚೆ ಪ್ರದೇಶದಲ್ಲಿ ರಾಜ್ಯದ ವಿವಿದ ಕಡೆ ಬಡವರಿಗೆ 3ಲಕ್ಷದ ಮನೆಗಳನ್ನು ನೀಡಲಾಗುತ್ತಿದೆ. ಹಕ್ಕುಪತ್ರ 5 ವರ್ಷಗಳ ಕಾಲ ಪರಭಾರೆ ಮಾಡುವಂತಿಲ್ಲ. ಬ್ಯಾಂಕ್ ನಿಂದ ಸಾಲ ಪಡೆದು ಮನೆ ಕಟ್ಟಿಕೊಳ್ಳಬಹುದು ಎಂದು ವಸತಿ ಸಚಿವರಾದ ವಿ.ಸೋಮಣ್ಣ ತಿಳಿಸಿದರು.

     

    ಈ ಕಾರ್ಯಕ್ರಮದಲ್ಲಿ ನಗರಾಭಿವೃದ್ದಿ ಸಚಿವರಾದ ಭೈರತಿ ಬಸವರಾಜ್, ಕೊಳಗೇರಿ ಅಭಿವೃದ್ದಿ ಮಂಡಳಿ ಅಧ್ಯಕ್ಷರಾದ ಮಹೇಶ್ ಕುಮಟಹಳ್ಳಿ, ವಿಧಾನಪರಿಷತ್ ಸದಸ್ಯ ದೇವೇಗೌಡ, ಪುಟ್ಟಣ್ಣ, ವಸತಿ ಇಲಾಖೆ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಬಿಬಿಎಂಪಿ ಸದಸ್ಯರುಗಳಾದ ಕೆ.ಉಮೇಶ್ ಶೆಟ್ಟಿ,ಮೋಹನ್ ಕುಮಾರ್, ಶಾಂತಕುಮಾರಿ, ದಾಸೇಗೌಡ, ಮಧುಕುಮಾರಿ ವಾಗೇಶ್, ಶ್ರೀಮತಿ ರೂಪ ಲಿಂಗೇಶ್ವರ್, ಶಿಲ್ಪ ಶ್ರೀಧರ್, ರಾಜ್ಯ ಬಿಜೆಪಿ ಯುವ ಮೋರ್ಚಾ ಮುಖಂಡರಾದ ಅರುಣ್ ಸೋಮಣ್ಣ ಭಾಗಿಯಾಗಿದ್ದರು. ಬಿಜೆಪಿ ಮಂಡಲದ ಅಧ್ಯಕ್ಷರಾದ ವಿಶ್ವನಾಥಗೌಡರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು.

  • ಬೆಲ್ಟ್ ಬಿಚ್ಚಿ ಹೊಡಿತೀನಿ, ಏನ್ ಮಾಡ್ತೀನಿ ನೋಡು-ಮಹಿಳೆಗೆ ಶಾಸಕ ವಿ.ಸೋಮಣ್ಣ ಅವಾಜ್

    ಬೆಲ್ಟ್ ಬಿಚ್ಚಿ ಹೊಡಿತೀನಿ, ಏನ್ ಮಾಡ್ತೀನಿ ನೋಡು-ಮಹಿಳೆಗೆ ಶಾಸಕ ವಿ.ಸೋಮಣ್ಣ ಅವಾಜ್

    -ನಾನು ಹಲ್ಕಟ್ ರಾಜಕಾರಣಿ ಅಲ್ಲ ಅಂದ್ರು ಸೋಮಣ್ಣ

    ಬೆಂಗಳೂರು: ಬಿಜೆಪಿಯ ಹಿರಿಯ ನಾಯಕ, ಗೋವಿಂದರಾಜ ನಗರ ಶಾಸಕ ವಿ.ಸೋಮಣ್ಣ ಅವರು, ಮಹಿಳೆಗೆ ಏಕವಚನದಲ್ಲಿಯೇ ಕೆಳಮಟ್ಟದ ಪದ ಪ್ರಯೋಗಿಸಿ ನಿಂದಿಸಿರುವ ವಿಡಿಯೋ ವೈರಲ್ ಆಗಿದೆ.

    ರಾಜಕಾರಣದಲ್ಲಿ ಸಭ್ಯ, ಮೃದು ಸ್ವಭಾವದ ನಾಯಕ ಅಂತಾ ಗುರುತಿಸಿಕೊಳ್ಳುವ ವಿ.ಸೋಮಣ್ಣರ ಕೆಳಮಟ್ಟದ ಮಾತುಗಳನ್ನು ಕೇಳಿದ ಜನರು ಶಾಕ್ ಆಗಿದ್ದಾರೆ. ಚುನಾವಣೆ ಸಮಯದಲ್ಲಿ ಮಹಿಳೆಯರಿಗೆ ಅಮ್ಮಾ.. ತಾಯಿ ಎಂದು ಕರೆಯುವ ರಾಜಕೀಯ ನಾಯಕರು ಸಹಾಯ ಕೇಳಲು ಹೋದಾಗ ಈ ರೀತಿಯ ಪದ ಪ್ರಯೋಗ ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

    ವಿಡಿಯೋದಲ್ಲಿ ಏನಿದೆ?: ಶಾಲಾ ಕಟ್ಟಡದ ವಿಚಾರಕ್ಕಾಗಿ ಕೆಲ ಸ್ಥಳೀಯ ಮಹಿಳೆಯರು ಶಾಸಕರನ್ನು ಭೇಟಿ ಆಗಿದ್ದರು. ಇದೇ ವೇಳೆ ಶಾಸಕರು, ಈಯಮ್ಮ ಏನ್ ಕಡಿಮೆ ಇಲ್ಲ, ಬೆಲ್ಟ್ ಬಿಚ್ಚಿ ಹೊಡೀತಿನಿ ನಿಂಗೆ, ಇರು ಏನ್ ಮಾಡ್ತೀನಿ ನೋಡು ಎಂದು ಅವಾಜ್ ಹಾಕಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ವಿ.ಸೋಮಣ್ಣ, ನಾನು 40 ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ. ವಿಡಿಯೋದಲ್ಲಿರುವ ಧ್ವನಿ ನನ್ನದಲ್ಲ, ಯಾರೋ ಎಡಿಟ್ ಮಾಡಿರುವ ಕೆಲಸ ಇದಾಗಿದ್ದು, ಉದ್ದೇಶ ಪೂರ್ವಕವಾಗಿ ನನ್ನ ತೇಜೋವಧೆಗಾಗಿ ವಿಡಿಯೋ ಮಾಡಿಸಲಾಗಿದೆ ಎಂದು ಆರೋಪಿಸಿದ್ದಾರೆ. 40 ವರ್ಷಗಳ ನನ್ನ ರಾಜಕಾರಣದಲ್ಲಿ ಎಂದಿಗೂ ನಾನು ಇಷ್ಟು ಕೆಳಮಟ್ಟದ ಪದಗಳನ್ನು ಬಳಸಿಲ್ಲ. ಅದರಲ್ಲಿಯೂ ಮಹಿಳೆಯರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದೇನೆ. ಪ್ರತಿದಿನ ಕಚೇರಿಗೆ ಆಗಮಿಸಿ ಸಾವಿರಾರು ಜನರ ಸಮಸ್ಯೆಗಳನ್ನು ಕೇಳಿ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ.

    ನನ್ನ ಕಚೇರಿಗೆ ಸುಮಾರು 20 ರಿಂದ 30 ಮಹಿಳೆಯರು ಬಂದಿದ್ದರು. ಶಾಲಾ ಆವರಣದಲ್ಲಿರುವ ದೇವಸ್ಥಾನಕ್ಕೆ ಕಾಂಪೌಂಡ್ ಕಟ್ಟಬೇಕೆಂದು ಕೇಳಿಕೊಂಡಿದ್ದರು. ಕಾಂಪೌಂಡ್ ನಿರ್ಮಿಸುವುದರಿಂದ ಶಾಲೆಯ ಮಕ್ಕಳಿಗೆ ತೊಂದರೆ ಆಗಲಿದ್ದು, ದೇವಸ್ಥಾನಕ್ಕಾಗಿ ಬೇರೆ ಸ್ಥಳ ನಿಗದಿ ಮಾಡುತ್ತೇನೆ. ಸರ್ಕಾರದಿಂದ 10 ಲಕ್ಷ ರೂ.ಯನ್ನು ಸಹ ಕೊಡಿಸುತ್ತೇನೆ ಅಂತಾ ಹೇಳಿ ಕಳುಹಿಸಿದ್ದೆ ಎಂದು ಸೋಮಣ್ಣ ಅವರು ಸ್ಪಷ್ಟನೆ ನೀಡಿದ್ದಾರೆ.

    ಮಾತು ಬದಲಿಸಿದ ಸೋಮಣ್ಣ: ವಿಡಿಯೋ ಕುರಿತು ಸ್ಪಷ್ಟನೆ ನೀಡುತ್ತಿದ್ದ ಶಾಸಕರು ಕ್ಷಣಾರ್ಧದಲ್ಲಿ ತಮ್ಮ ಮಾತುಗಳನ್ನು ಬದಲಿಸಿದ್ದಾರೆ. ಸ್ಪಷ್ಟನೆ ಆರಂಭದಲ್ಲಿ ನಾನು ಈ ಬಗ್ಗೆ ಸಿಬಿಐಗೆ ದೂರು ಸಲ್ಲಿಸುತ್ತೇನೆ ಅಂತಾ ಹೇಳಿದರು. ಕೊನೆಗೆ ನಾನು ಯಾವುದೇ ದೂರು ನೀಡಲ್ಲ ಅಂದರು. ನಾನೇನು ತಪ್ಪು ಮಾಡಿಲ್ಲ, ಅಲ್ಲಿರುವ ಧ್ವನಿ ನನ್ನದಲ್ಲ. ವಿಡಿಯೋ ವೈರಲ್ ಮಾಡಿರುವವರೇ ಅದಕ್ಕೆ ಸಾಕ್ಷ್ಯಾಧಾರ ಒದಗಿಸಲಿ. ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ ಮಾಜಿ ಶಾಸಕ ಪ್ರಿಯಾ ಕೃಷ್ಣ ಅವರೇ ಈ ವಿಡಿಯೋ ಮಾಡಿಸಿರುವ ಸಾಧ್ಯತೆಗಳಿವೆ ಎಂದು ಆರೋಪ ಮಾಡಿದರು.

    ಇದೆಲ್ಲಾ ಸುಳ್ಳು ಅಂತಾದ್ರೆ, ವಿಡಿಯೋ ಮೂಲಕ ನಿಮ್ಮ ತೇಜೋವಧೆ ಆಗುತ್ತಿದ್ದರೆ ನೀವು ಯಾಕೆ ದೂರು ದಾಖಲಿಸಿಬರದು ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾರು ಏನ್ ಬೇಕಾದರೂ ಮಾಡಿಕೊಳ್ಳಲಿ, ನಾನೇನು ತಲೆ ಕೆಡಿಸಿಕೊಳ್ಳಲ್ಲ. ವಿಡಿಯೋದಲ್ಲಿರುವ ಧ್ವನಿ ಮಾತ್ರ ನನ್ನದಲ್ಲ ಎಂಬುದನ್ನು ಮಾತ್ರ ಸ್ಪಷ್ಟಪಡಿಸುತ್ತೇನೆ. ಗೌರವ, ಸಂಸ್ಕಾರದಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ ಅಂತಾ ಅಂದ್ರು.