Tag: ಗೋವಾ ಸಿಎಂ

  • ಮಹದಾಯಿಗೆ ಕೇಂದ್ರ ಅನುಮತಿ ಕೊಡಲ್ಲ ಅನ್ನೋಕೆ ಇವರ‍್ಯಾರು: ಗೋವಾ ಸಿಎಂ ವಿರುದ್ಧ ಕೋನರೆಡ್ಡಿ ಗರಂ

    ಮಹದಾಯಿಗೆ ಕೇಂದ್ರ ಅನುಮತಿ ಕೊಡಲ್ಲ ಅನ್ನೋಕೆ ಇವರ‍್ಯಾರು: ಗೋವಾ ಸಿಎಂ ವಿರುದ್ಧ ಕೋನರೆಡ್ಡಿ ಗರಂ

    – ಮಹದಾಯಿಗೆ ಕೇಂದ್ರ ಸರ್ಕಾರ ಅನುಮತಿ ಕೊಡದೇ ಹೋದ್ರೆ ಉಗ್ರ ಹೋರಾಟ

    ಬೆಂಗಳೂರು: ಮಹದಾಯಿ ನಮ್ಮ ರಾಜ್ಯದ ಹಕ್ಕು. ಕೇಂದ್ರ ಅನುಮತಿ ಕೊಡಲ್ಲ ಅನ್ನೋಕೆ ಗೋವಾ ಸಿಎಂ ಯಾರು ಎಂದು ಮಹದಾಯಿ ಹೋರಾಟಗಾರ, ಶಾಸಕ ಕೋನರೆಡ್ಡಿ (Konareddy) ಕಿಡಿಕಾರಿದ್ದಾರೆ.

    ಮಹದಾಯಿಗೆ (Mahadayi) ಕೇಂದ್ರ ಅನುಮತಿ ಕೊಡಲ್ಲ ಎಂಬ ಗೋವಾ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಹದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಜಯ ಸಿಕ್ಕಿದೆ. ಗೋವಾ ಸಿಎಂ ಈ ರೀತಿ ಮಾತನಾಡಿರೋದು ಸರಿಯಲ್ಲ. ಕೇಂದ್ರ ಅನುಮತಿ ಕೊಡಲ್ಲ ಎಂದು ಹೇಳಿಕೆ ನೀಡೋಕೆ ಇರ‍್ಯಾರು? ಗೋವಾದಲ್ಲಿ ಇಬ್ಬರು ಸಂಸದರಿದ್ದಾರಷ್ಟೇ. ನಮ್ಮಲ್ಲಿ 28 ಸಂಸದರಿದ್ದಾರೆ. ಅವರ ಮಾತು ಕೇಂದ್ರ ಕೇಳುತ್ತಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಜನತೆಗೆ ಮತ್ತೊಂದು ಶಾಕ್‌; ರಾಜ್ಯದ ಎಲ್ಲಾ ಬಹುಮಹಡಿ, ಎತ್ತರದ ಕಟ್ಟಡಗಳಿಗೆ 1% ಸೆಸ್ ವಿಧಿಸಲು ಕ್ಯಾಬಿನೆಟ್ ಅಸ್ತು

    ನಾವು ಹಾಲು, ಕಾಯಿಪಲ್ಯ ನಿಲ್ಲಿಸಿದ್ರೆ ಗೋವಾಗೆ ಏನು ಸಿಗೋದಿಲ್ಲ, ನೆನಪಿರಲಿ. ಗೋವಾದವರು ಏನೇ ಮಾಡಿದ್ರು ಮಹದಾಯಿ ತಡೆಯೋಕೆ ಆಗೊಲ್ಲ. ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಸರ್ವಪಕ್ಷದ ಸಭೆ ಕರೆದು, ಪ್ರಧಾನಿಗಳ ಬಳಿ ನಿಯೋಗ ತೆಗೆದುಕೊಂಡು ಹೋಗುವಂತೆ ಮನವಿ ಮಾಡ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಸ್ಮಾರ್ಟ್ ಮೀಟರ್ ಹಗರಣ ಆರೋಪ – ಕೋರ್ಟ್ ತೀರ್ಪಿಗೆ ನಾನು ಬದ್ಧ: ಸಚಿವ ಜಾರ್ಜ್

    ಬಿಜೆಪಿ ಅವರು ಇದರ ಬಗ್ಗೆ ಮಾತಾಡಬೇಕು. ಯಾಕೆ ಬಿಜೆಪಿಗೆ ಕರ್ನಾಟಕದ ಬಗ್ಗೆ ಕಾಳಜಿ ಇಲ್ವಾ? ಹಿಂದೆ ಅನಂತ್ ಕುಮಾರ್ ಇದ್ದಾಗ ಕೇಂದ್ರ ಮತ್ತು ರಾಜ್ಯದ ನಡುವೆ ಕೊಂಡಿ ಆಗಿ ಕೆಲಸ ಮಾಡ್ತಿದ್ದರು. ಈಗ ಪ್ರಹ್ಲಾದ್ ಜೋಶಿ ಅವರು ಆ ಸ್ಥಾನವನ್ನು ತುಂಬಬೇಕು. ಮಹದಾಯಿಗೆ ಕೇಂದ್ರ ಅನುಮತಿ ಕೊಡದೇ ಹೋದರೆ ಹೋರಾಟ ಮಾಡೇ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

  • ಗೋವಾ ಸಿಎಂ ಭೇಟಿಯಾದ ಯಶ್, ರಾಧಿಕಾ ಪಂಡಿತ್

    ಗೋವಾ ಸಿಎಂ ಭೇಟಿಯಾದ ಯಶ್, ರಾಧಿಕಾ ಪಂಡಿತ್

    ತ್ತೀಚಿನ ದಿನಗಳಲ್ಲಿ ನಟ ಯಶ್ ಅವರು ರಾಜಕೀಯಕ್ಕೆ ಬರುತ್ತಾರೆ ಎನ್ನುವ ಕುರಿತು ಭಾರೀ ಚರ್ಚೆ ಆಗುತ್ತಿದೆ. ಅವರು ಈ ಕುರಿತು ಎಲ್ಲಿಯೂ ಹೇಳಿಕೆ ನೀಡದೇ ಇದ್ದರೂ, ಅವರ ನಡೆಗಳು ಇಂಥದ್ದೊಂದು ಪ್ರಶ್ನೆಯನ್ನು ಹುಟ್ಟು ಹಾಕುತ್ತಿವೆ. ಕಳೆದ ಐದಾರು ವರ್ಷಗಳಿಂದ ರಾಕಿಭಾಯ್ ಹತ್ತು ಹಲವು ಜನಪರ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಅನೇಕ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಕೆರೆಗಳನ್ನು ಸಂರಕ್ಷಿಸಿದ್ದಾರೆ. ಹೀಗಾಗಿ ಅವರಿಗೆ ಜನಪರ ಕೆಲಸ ಮಾಡುವ ಒಲವು ಇದೆ. ಇದನ್ನೂ ಓದಿ : ‘ಟಕ್ಕರ್’ ಮೂಲಕ ಪ್ರೇಕ್ಷಕರ ಮನಗೆಲ್ಲೋಕೆ ರೆಡಿಯಾದ ಮನೋಜ್ ಕುಮಾರ್

    ಅನೇಕ ಸಂದರ್ಶನಗಳಲ್ಲಿ ಯಶ್, ‘ನನ್ನ ಗುರಿ ಬೇರೆ. ನಾನು ತಲುಪಬೇಕಿರುವ ಕೇಂದ್ರಸ್ಥಾನ ಬೇರೆ’ ಎನ್ನುವ ಅರ್ಥದಲ್ಲಿ ಅನೇಕ ಬಾರಿ ಮಾತಾಡಿದ್ದೂ ಇದೆ. ಹಾಗಾಗಿ ಯಶ್ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಮಾತು ಮುನ್ನೆಲೆಗೆ ಬಂದಿದೆ. ಅದಕ್ಕೆ ಪೂರಕ ಎನ್ನುವಂತೆ ಯಶ್ ನಿನ್ನೆಷ್ಟೇ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಭೇಟಿ ಮಾಡಿದ್ದಾರೆ. ಸದ್ಯ ಯಶ್ ಮತ್ತು ರಾಧಿಕಾ ಪಂಡಿತ್ ಗೋವಾದಲ್ಲೇ ಇದ್ದು, ಪಣಜಿಯಲ್ಲಿ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ.

    ಈ ಹಿಂದೆ ಯಶ್ ಹಲವಾರು ರಾಜಕೀಯ ಮುಖಂಡರ ಜತೆ ಗುರುತಿಸಿಕೊಂಡಿದ್ದೂ ಇದೆ. ಸುಮಲತಾ ಅಂಬರೀಶ್ ಅವರು ಮಂಡ್ಯ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಾಗ, ಅವರ ಪರ ಪ್ರಚಾರ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡ ಎಂ.ಬಿ. ಪಾಟೀಲ್ ಅವರ ಜೊತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಹತ್ತಾರು ಯೋಜನೆಗಳಿಗೆ ಕೈ ಜೋಡಿಸಿದ್ದಾರೆ. ಹೀಗಾಗಿ ಇವತ್ತಲ್ಲ, ನಾಳೆ ಯಶ್ ರಾಜಕೀಯಕ್ಕೆ ಬರುತ್ತಾರೆ ಎನ್ನುತ್ತದೆ ಯಶ್ ವಲಯ. ಇದನ್ನೂ ಓದಿ : ಸಿನಿಮಿಯ ರೀತಿಯಲ್ಲಿ ಅಪಹರಣ – ಸ್ಯಾಂಡಲ್‍ವುಡ್ ಖಳನಟ ಅರೆಸ್ಟ್

    ದಿಢೀರ್ ಅಂತ ಅವರು ರಾಜಕೀಯ ಪ್ರವೇಶ ಮಾಡದೇ ಇದ್ದರೂ, ಅದಕ್ಕೆ ಸೂಕ್ತ ವೇದಿಕೆಯನ್ನಂತೂ ಈಗಿನಿಂದಲೇ ತಯಾರು ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೂಡ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಯಶ್ ಮುಂದೊಂದು ದಿನ ದೊಡ್ಡ ರಾಜಕಾರಣಿಯಾಗಿ ಉನ್ನತ ಹುದ್ದೆಯನ್ನೂ ಏರಲಿ ಎನ್ನುವುದು ಅವರ ಅಭಿಮಾನಿಗಳ ಆಸೆಯೂ ಆಗಿದೆ.

  • ಕಾಂಗ್ರೆಸ್‍ನಿಂದ ಯಾರು ಹೊರ ಹೋಗ್ತಾರೆ? ಮುಂದೆ ಪಶ್ಚಾತ್ತಾಪ ಪಡುತ್ತಾರೆ: ಎಚ್ ಕೆ ಪಾಟೀಲ್

    ಕಾಂಗ್ರೆಸ್‍ನಿಂದ ಯಾರು ಹೊರ ಹೋಗ್ತಾರೆ? ಮುಂದೆ ಪಶ್ಚಾತ್ತಾಪ ಪಡುತ್ತಾರೆ: ಎಚ್ ಕೆ ಪಾಟೀಲ್

    ಧಾರವಾಡ: ಕಾಂಗ್ರೆಸ್ ಬಿಟ್ಟು ಹೋದವರೆಲ್ಲಾ ಮುಂದೆ ಪಶ್ಚಾತಾಪ ಪಡುತ್ತಾರೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.

    ಇಂದು ಧಾರವಾಡದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನಿಂದ ಹೋದ ಎಚ್. ವಿಶ್ವನಾಥ್ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ಎಚ್. ವಿಶ್ವನಾಥ್ ಕಾಂಗ್ರೆಸ್ ಬಿಟ್ಟು ಹೋಗಿದ್ದೇ ತಪ್ಪು ಹೆಜ್ಜೆ. ಕಾಂಗ್ರೆಸ್‍ನಿಂದ ಯಾರು ಹೊರಗೆ ಹೋಗುತ್ತಾರೋ ಅವರು ಮುಂಬರುವ ದಿನಗಳಲ್ಲಿ ಪಶ್ಚಾತ್ತಾಪ ಪಡುತ್ತಾರೆ ಎಂದು ಹೇಳಿದರು.

    ಮಹದಾಯಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಕ್ಷದ ಮಾತು ಕೇಳುವುದಿಲ್ಲ, ಅವರ ಮಾತು ಕೇಳುವುದಿಲ್ಲ, ಇವರ ಮಾತು ಕೇಳುವುದಿಲ್ಲ ಅಂತಾರೆ, ಯಾರ ಮಾತನ್ನು ಕೇಳಬೇಕಾಗಿಲ್ಲ, ಸುಪ್ರಿಂ ಕೋರ್ಟ್ ಮಾತನ್ನಾದರೂ ಕೇಳುತ್ತಿರೋ, ಇಲ್ಲವೋ? ಎಂದು ಗೋವಾ ಸಿಎಂ ವಿರುದ್ಧ ಕಿಡಿಕಾರಿದರು.

    ಮಹದಾಯಿ ವಿಚಾರದಲ್ಲಿ ಈಗಾಗಲೇ ತೀರ್ಪು ಬಂದಿದೆ. ಅದು ಈಗ ಮುಗಿದ ಅಧ್ಯಾಯ. ಈಗ ಅನುಷ್ಠಾನದತ್ತ ಗಂಭೀರ ಹೆಜ್ಜೆ ಹಾಕಬೇಕಿದೆ. ಮಹದಾಯಿ ಕೆಲಸ ಪೂರ್ಣಗೊಳಿಸುವತ್ತಾ ಸರ್ಕಾರ ಲಕ್ಷ್ಯ ವಹಿಸಬೇಕು. ಬರೇ ಮಾತುಕತೆ, ಹೇಳಿಕೆಗಳು ಯಾವುದಕ್ಕೆ? ಗೋವಾ ಸಿಎಂ ಈ ರೀತಿ ಹೇಳಿರುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಹದ್ದು, ಇದು ಬೇಜವಾಬ್ದಾರಿ ಹೇಳಿಕೆ ಎಂದು ವಾಗ್ದಾಳಿ ನಡೆಸಿದರು.

  • ಅಪ್ಪ-ಮಕ್ಕಳಿಗೆ ಮಹದಾಯಿ ಸಮಸ್ಯೆ ಬಗೆಹರಿಸೋಕೆ ಇಷ್ಟ ಇಲ್ಲ- ಎಚ್‍ಡಿಕೆ, ದೇವೇಗೌಡರ ವಿರುದ್ಧ ಬಿಎಸ್‍ವೈ ಕಿಡಿ

    ಅಪ್ಪ-ಮಕ್ಕಳಿಗೆ ಮಹದಾಯಿ ಸಮಸ್ಯೆ ಬಗೆಹರಿಸೋಕೆ ಇಷ್ಟ ಇಲ್ಲ- ಎಚ್‍ಡಿಕೆ, ದೇವೇಗೌಡರ ವಿರುದ್ಧ ಬಿಎಸ್‍ವೈ ಕಿಡಿ

    ಹುಬ್ಬಳ್ಳಿ: ಮಹದಾಯಿ ವಿಷಯದಲ್ಲಿ ಕಾಂಗ್ರೆಸ್ ನಾಟಕ ಮಾಡುತ್ತಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಬೇಜವಾಬ್ದಾರಿ ಮನುಷ್ಯ. ಅಪ್ಪ-ಮಕ್ಕಳಿಗೆ ಮಹದಾಯಿ ಸಮಸ್ಯೆ ಬಗೆಹರಿಸೋಕೆ ಇಷ್ಟ ಇಲ್ಲ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿಸ್ ಯಡಿಯೂರಪ್ಪ ಎಚ್‍ಡಿ ಕುಮಾರಸ್ವಾಮಿ ಹಾಗೂ ದೇವೇಗೌಡರ ವಿರುದ್ಧ ಕಿಡಿ ಕಾರಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹದಾಯಿ ನೀರಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೆ. 2008 ರಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಅನುಮತಿ ನೀಡಿದ್ದರು. ಕಾಂಗ್ರೆಸ್ ಸರ್ಕಾರ 2012 ರಲ್ಲಿ ಗೋವಾ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಆಗ ಯಾಕೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಮಧ್ಯಪ್ರವೇಶ ಮಾಡಲಿಲ್ಲ ಅಂತ ಕಿಡಿ ಕಾರಿದ್ರು.

    ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ಗೋವಾ ಮುಖ್ಯಮಂತ್ರಿ ಹೇಳಿದ್ದಾರೆ. ಗೋವಾ ಸಿಎಂ ಅವರಿಗೆ ಯಾಕೆ ಪತ್ರ ಬರೆಯಬೇಕು ಎಂಬುದನ್ನು ನಾನು ಹೇಳುವುದು ಸರಿಯಲ್ಲ. ಅವರು ನೀರು ಕೊಡಲು ಒಲವು ತೋರಿದ್ದಾರೆ. ಹೀಗಿರುವಾಗ ಯಾರಿಗೆ ಪತ್ರ ಬರೆದಿದ್ದಾರೆ ಎಂಬುದು ಮುಖ್ಯವಲ್ಲ ಅಂತ ಹೇಳಿದ್ರು.

    ಈ ಹಿಂದೆ ನಮ್ಮ ಮುಖ್ಯಮಂತ್ರಿ ಹಲವು ಸಾರಿ ಹೇಳುತ್ತಾ ಬಂದಿದ್ದಾರೆ. ನೀವು ಗೋವಾ ಸಿಎಂ ಅವರನ್ನು ಒಪ್ಪಿಸಿ ಎಂದಿದ್ದರು. ನಾವು ಈಗ ಗೋವಾ ಸಿಎಂ ಅವರನ್ನು ಒಪ್ಪಿಸಿದ್ದೇವೆ. ಹೀಗಾಗಿ ಅವರು ಮಾತುಕತೆಗೆ ಒಪ್ಪಿ ನಮಗೆ ಲಿಖಿತವಾಗಿ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಸರ್ಕಾರ ನೀರಿನ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಅಂತ ಸಿಡಿಮಿಡಿಗೊಂಡ್ರು.

    2005-12 ರವರೆಗೆ ಗೋವಾ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಅವಾಗ ಯಾಕೆ ಕಾಂಗ್ರೆಸ್ ಮಹದಾಯಿ ಸಮಸ್ಯೆ ಇತ್ಯರ್ಥಪಡಿಸಲಿಲ್ಲ. ಆವಾಗ್ಯಾಕೆ ಇವರು ರಾಜಕೀಯ ದೊಂಬರಾಟ ಮಾಡಿದ್ರು? ಆದ್ರೂ ನಮ್ಮ ಪ್ರಯತ್ನ ಮಾಡಿದ್ದೇವೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ಗೋವಾ ಸಿಎಂ ಮನವೊಲಿಸಿದ್ದೇವೆ. ಗೋವಾ ಸಿಎಂ ನಮಗೆ ಒಪ್ಪಿಗೆ ನೀಡಿ ಪತ್ರ ನೀಡಿದ್ದಾರೆ. ಈ ಪತ್ರವನ್ನು ಟ್ರಿಬ್ಯುನಲ್ ಮುಂದೆ ತೆಗೆದುಕೊಂಡು ಹೋಗಿ ಸಮಸ್ಯೆ ಬಗೆಹರಿಯುತ್ತೆ. ನಿಮ್ಮಿಂದ 15 ವರ್ಷದಿಂದ ಆಗದೇ ಇರೋ ಕೆಲಸ ನಾವು ಮಾಡಿದ್ದೇವೆ. ಈಗಲಾದ್ರೂ ಸಮಸ್ಯೆ ಇತ್ಯರ್ಥ ಮಾಡೋಕೆ ಒಟ್ಟಾಗಿ ಪ್ರಯತ್ನ ಮಾಡೋಣ ಅಂತ ಕಾಂಗ್ರೆಸ್ಸಿಗರಿಗೆ ಬಿಎಸ್‍ವೈ ಸಲಹೆಯಿತ್ತರು.