Tag: ಗೋವಾ ಸರ್ಕಾರ

  • ಗೋವಾ ಸರ್ಕಾರದ ಬಗ್ಗೆ ಪ್ರತಿಪಕ್ಷಗಳಿಂದ ವಿವಾದ ಸೃಷ್ಟಿ ಸಲ್ಲದು- ಸಿ.ಟಿ.ರವಿ

    ಗೋವಾ ಸರ್ಕಾರದ ಬಗ್ಗೆ ಪ್ರತಿಪಕ್ಷಗಳಿಂದ ವಿವಾದ ಸೃಷ್ಟಿ ಸಲ್ಲದು- ಸಿ.ಟಿ.ರವಿ

    ನವದೆಹಲಿ: ಕೋವಿಡ್ ಸಂದರ್ಭದಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದಲ್ಲಿ ಸರ್ಕಾರ ಗೋವಾದಲ್ಲಿ ಉತ್ತಮ ಆಡಳಿತ ನೀಡುತ್ತಿದೆ. ಪ್ರತಿಪಕ್ಷಗಳು ಈ ಬಗ್ಗೆ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಹಾಗೂ ಗೋವಾ ರಾಜ್ಯ ಉಸ್ತುವಾರಿ ಸಿ.ಟಿ.ರವಿ ಹೇಳಿದ್ದಾರೆ.

    SATYAPAL MALIK

    ಗೋವಾ ಮುಖ್ಯಮಂತ್ರಿ ಆಡಳಿತ ಕುರಿತು ತಾವು ಯಾವುದೇ ಹೇಳಿಕೆ ನೀಡಿಲ್ಲ ಎಂದು ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಸ್ಪಷ್ಟಪಡಿಸಿದ್ದಾರೆ. ಆದರೂ ಪ್ರತಿಪಕ್ಷಗಳು ವಿವಾದ ಸೃಷ್ಟಿಸುತ್ತಿರುವುದು ಸಲ್ಲ ಎಂದು ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು- ಸಿದ್ದುಗೆ ಸಿ.ಟಿ.ರವಿ ಪ್ರಶ್ನೆ

    ಆಡಳಿತಾರೂಢ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಗೋವಾದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಭ್ರಷ್ಟಾಚಾರದ ಗಂಭೀರ ಆರೋಪ ಹೊರಿಸಿದ್ದಾರೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಅವರ ಸಂಪುಟ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದ್ದವು.

  • ವ್ಯಾಕ್ಸಿನ್ ಪಡೆಯದೇ ಪ್ರವಾಸಿಗಳಿಗಿಲ್ಲ ಗೋವಾಗೆ ಎಂಟ್ರಿ

    ವ್ಯಾಕ್ಸಿನ್ ಪಡೆಯದೇ ಪ್ರವಾಸಿಗಳಿಗಿಲ್ಲ ಗೋವಾಗೆ ಎಂಟ್ರಿ

    ಪಣಜಿ: ರಾಜ್ಯದಲ್ಲಿರುವ ಎಲ್ಲರಿಗೂ ಕೊರೊನಾ ಲಸಿಕೆಯನ್ನು ನೀಡದೇ ಪ್ರವಾಸೋದ್ಯಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 30ರೊಳಗೆ ಶೇ.100ರಷ್ಟು ಕೊರೊನಾ ವ್ಯಾಕ್ಸಿನ್ ಮೊದಲ ಡೋಸ್ ನನ್ನು ರಾಜ್ಯವ್ಯಾಪಿ ನೀಡುವ ಗುರಿಯನ್ನು ಗೋವಾ ಸರ್ಕಾರ ಹೊಂದಿದೆ. ಮೊದಲ ಡೋಸ್ ವ್ಯಾಕ್ಸಿನೇಷನ್‍ನನ್ನು ರಾಜ್ಯದಲ್ಲಿ ಪೂರ್ಣಗೊಳಿಸುವವರೆಗೆ ಪ್ರವಾಸೋದ್ಯಮವನ್ನು ಆರಂಭಿಸುವ ಯಾವುದೇ ಯೋಜನೆ ಇಲ್ಲ. ಜುಲೈ 30ರೊಳಗೆ ಅದನ್ನು ಪೂರ್ಣಗೊಳಿಸುವುದು ನಮ್ಮ ಗುರಿ ಎಂದು ಹೇಳಿದ್ದಾರೆ.

    ಪ್ರವಾಸೋದ್ಯಮ ನಿರ್ದೇಶಕರಿಗೆ ಪ್ರಮೋದ್ ಸಾವಂತ್‍ರವರು ಗೋವಾ ಪ್ರವೇಶಕ್ಕಾಗಿ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕೆಂದು ಸೂಚಿಸಿದರು. ಪ್ರವಾಸಿಗರಿಗೆ ಸಂಪರ್ಕ ತಡೆ ಹಾಗೂ ನೃತ್ಯ, ಸಂಗೀತ ಕಾರ್ಯಕ್ರಮಗಳನ್ನು ಮಾರ್ಚ್ 2022ರವರೆಗೆ ಮುಂದೂಡಬೇಕೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಒಎಲ್‌ಎಕ್ಸ್‌ನಲ್ಲಿ ಕಾರು ಖರೀದಿ ದೋಖಾ – ಅತ್ತ ಕಾರು ಇಲ್ಲ, ಹಣವೂ ಇಲ್ಲ

  • ಕರ್ನಾಟಕ ಮೀನುಗಾರರ ಮೇಲೆ ಗೋವಾ ಗೂಂಡಾಗಿರಿ – 10 ಲಕ್ಷ ಮೌಲ್ಯದ ಮೀನು ಕಸದ ತೊಟ್ಟಿಗೆ

    ಕರ್ನಾಟಕ ಮೀನುಗಾರರ ಮೇಲೆ ಗೋವಾ ಗೂಂಡಾಗಿರಿ – 10 ಲಕ್ಷ ಮೌಲ್ಯದ ಮೀನು ಕಸದ ತೊಟ್ಟಿಗೆ

    ಕಾರವಾರ: ಸುಮಾರು 10 ಲಕ್ಷ ಮೌಲ್ಯದ ಮೀನನ್ನು ಕಸದ ತೊಟ್ಟಿಗೆ ಎಸೆದು ಗೋವಾ ಸರ್ಕಾರದ ಅಧಿಕಾರಿಗಳು ಕರ್ನಾಟಕದ ಮೀನುಗಾರರ ಮೇಲೆ ಉದ್ಧಟತನ ತೋರಿದ್ದಾರೆ. ಕಾರವಾರದಿಂದ ರಾಮಣ್ಣ ಎಂಬವರಿಗೆ ಸೇರಿದ್ದ ಮೀನು ತುಂಬಿದ ಲಾರಿಯನ್ನು ಗೋವಾದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಕಸದ ತೊಟ್ಟಿಗೆ ಎಸೆದಿದ್ದಾರೆ.

    ಗೋವಾದ ಆಹಾರ ಇಲಾಖೆಯ ಅನುಮತಿ ಪಡೆದು ಪಣಜಿಯಲ್ಲಿರುವ ಅಟ್ಲಾಸ್ ಕಂಪನಿಗೆ ಕೊಂಡೊಯ್ಯುವ ವೇಳೆ ಗಡಿಯಲ್ಲಿ ವಾಹನವನ್ನು ಆಹಾರ ಇಲಾಖೆ ಅಧಿಕಾರಿಗಳು ತಡೆದಿದ್ದಾರೆ. ಬಳಿಕ ಪಣಜಿಯ ಎಫ್‍ಡಿಎ ಕಚೇರಿಗೆ ಕೊಂಡೊಯ್ದು ಎರಡು ದಿನ ಇಟ್ಟು ಫಾರ್ಮಲಿನ್ ಇಲ್ಲವೆಂದು ದೃಢಪಟ್ಟರೂ ಗಾಡಿಯನ್ನು ಬಿಡದೇ ಅಲ್ಲಿನ ನಗರಸಭೆಯ ಕಸದ ತೊಟ್ಟಿಗೆ ಎಸೆದು ಉದ್ಧಟತನ ತೋರಿದ್ದಾರೆ.

    ಕಳೆದ ಒಂದೂವರೆ ತಿಂಗಳ ಹಿಂದೆ ಕರ್ನಾಟಕದ ಮೀನಿನ ಮೇಲೆ ನಿಷೇಧ ಹೇರಿರುವ ಗೋವಾ ಸರ್ಕಾರ ಕೆಲವು ನಿಯಮಗಳನ್ನು ಜಾರಿ ಮಾಡಿ ಗೋವಾಕ್ಕೆ ತರಲು ಅವಕಾಶ ಮಾಡಿಕೊಟ್ಟಿತ್ತು. ಆದರೆ ಗೋವಾ ಸರ್ಕಾರದ ನಿಯಮವನ್ನು ಅನುಸರಿಸಿದರೂ ಆಹಾರ ಇಲಾಖೆ ಅನುಮತಿ ಪಡೆದು ಶಿಥಿಲೀಕರಣ ವಾಹನದಲ್ಲಿ ಮೀನು ತರುವಂತೆ ಆದೇಶವನ್ನು ಪಾಲನೆ ಮಾಡಲಾಗಿತ್ತು. ಆದರೂ ಕೂಡ ಗಡಿಯಲ್ಲಿ ಕರ್ನಾಟಕದ ವಾಹನ ತಡೆದು ನಂತರ ಪಣಜಿ ನಗರಸಭೆಗೆ ವಾಹನ ತೆಗೆದುಕೊಂಡು ಹೋಗಿ ಅದರಲ್ಲಿದ್ದ ಸುಮಾರು 10 ಲಕ್ಷ ಮೌಲ್ಯದ ಮೀನನ್ನ ಕಸಕ್ಕೆ ಎಸೆದಿದೆ.

    ಒಟ್ಟಿನಲ್ಲಿ ಕೇವಲ ಕರ್ನಾಟಕದ ಮೇಲೆ ಟಾರ್ಗೆಟ್ ಮಾಡಿ ಮಲತಾಯಿ ಧೋರಣೆ ತೊರಿಸುವ ಗೋವಾ ಸರ್ಕಾರದ ವಿರುದ್ಧ ಕಾರವಾರ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತಡೆ ಹಿಡಿಯುತ್ತಿರುವುದು ಯಾಕೆ?
    ಫಾರ್ಮಲಿನ್ ರಾಸಾಯಲಿಕ ಪತ್ತೆಯಾಗಿದ್ದರಿಂದ ಹೊರರಾಜ್ಯಗಳಿಂದ ಮೀನು ಆಮದನ್ನು ಗೋವಾ ಸರ್ಕಾರವು ಜುಲೈ ತಿಂಗಳಿನಿಂದ ನಿರ್ಬಂಧಿಸಿತ್ತು. ಅಷ್ಟೇ ಅಲ್ಲದೇ ನವೆಂಬರ್ ಎರಡನೇ ವಾರದಲ್ಲಿ ಅಧಿಕೃತ ಆದೇಶವನ್ನು ಹೊರಡಿಸಿತ್ತು. ನಿರ್ಬಂಧದಿಂದಾಗಿ ಕರ್ನಾಟಕದ ಮೀನುಗಾರರಿಗೆ ಹಾಗೂ ವ್ಯಾಪಾರಿಗಳಿಗೆ ಬಿಸಿ ಮುಟ್ಟಿತ್ತು. ಇದರಿಂದಾಗಿ ಕರ್ನಾಟಕದ ಮೀನುಗಾರರನ್ನು ಗುರಿಯಾಗಿಸಿಕೊಂಡು ಮೀನು ಲಾರಿಗಳನ್ನು ಗೋವಾ-ಕಾರವಾರದ ಗಡಿಭಾಗದಲ್ಲಿ ತಡೆದು ನಿಲ್ಲಿಸಲಾಗಿತ್ತು. ಗೋವಾಕ್ಕೆ ಆಮದು ಆಗುತ್ತಿದ್ದ ಮೀನಿನ ಮೇಲೆ ಸಂಪೂರ್ಣ ನಿರ್ಬಂಧ ಹೊರಡಿಸಿದ್ದರಿಂದ ರಾಜ್ಯದ ಮೀನು ಬೆಳೆಗಾರರು ಭಾರೀ ನಷ್ಟ ಎದುರಿಸಿದ್ದರು. ಬಳಿಕ ಕೆಲ ನಿಯಮಗಳನ್ನು ಸಡಿಲಿಸಿ ಮೀನು ವ್ಯಾಪಾರಿಗಳಿಗೆ ಗೋವಾಗೆ ತರಲು ಅನುಮತಿ ನೀಡಿತ್ತು.

    https://www.youtube.com/watch?v=PcwI1RtvWqs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv