Tag: ಗೋವಾ ಮದ್ಯ

  • KSRTC ಬಸ್‍ನಲ್ಲಿ 1.27 ಲಕ್ಷ ರೂ. ಮೌಲ್ಯದ ಗೋವಾ ಮದ್ಯ ವಶ – ಇಬ್ಬರ ಬಂಧನ

    KSRTC ಬಸ್‍ನಲ್ಲಿ 1.27 ಲಕ್ಷ ರೂ. ಮೌಲ್ಯದ ಗೋವಾ ಮದ್ಯ ವಶ – ಇಬ್ಬರ ಬಂಧನ

    ಕಾರವಾರ: ಕೆಎಸ್‌ಆರ್‌ಟಿಸಿ ಬಸ್‍ನಲ್ಲಿ ಸಾಗಿಸುತ್ತಿದ್ದ 1.27 ಲಕ್ಷ ರೂ. ಮೌಲ್ಯದ ಗೋವಾ ಮದ್ಯವನ್ನು ಅಬಕಾರಿ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.

    ಸಾಗರ-ಪಣಜಿ ಕೆಎಸ್‌ಆರ್‌ಟಿಸಿ ಬಸ್‍ನಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಘಟನೆ ಕಾರವಾರ ತಾಲೂಕಿನ ಮಾಜಾಳಿಯ ಚೆಕ್‌ ಪೋಸ್ಟ್‌ನಲ್ಲಿ ನಡೆದಿದೆ. ಜೊತೆಗೆ ಆರೋಪಿಗಳ ಬಳಿ ಇದ್ದ 1.27 ಲಕ್ಷ ರೂ. ಮೌಲ್ಯದ ವಿವಿಧ ಬ್ರಾಂಡ್‍ನ ಗೋವಾ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಒಂದು ಲಕ್ಷ ಉದ್ಯೋಗ ಸೃಷ್ಟಿಸುವ FMCG ಕ್ಲಸ್ಟರ್ ಯೋಜನೆ ಇದೇ ವರ್ಷ ಪ್ರಾರಂಭ: ಬೊಮ್ಮಾಯಿ

    ಶಿವಮೊಗ್ಗ ಮೂಲದ 35 ವರ್ಷದ ನಾಗರಾಜ, ಇಪ್ಪತೈದು ವರ್ಷದ ಸಾಗರ್ ಬಂಧಿತರಾಗಿದ್ದು, ಗೋವಾದಿಂದ ಶಿವಮೊಗ್ಗಕ್ಕೆ ಬ್ಯಾಗ್‍ನಲ್ಲಿ ವಿವಿಧ ಬ್ರಾಂಡ್‍ನ ಮದ್ಯವನ್ನು ತುಂಬಿಕೊಂಡು ಬಸ್‍ನಲ್ಲಿ ತೆರಳುತಿದ್ದರು. ಈ ವೇಳೆ ತಪಾಸಣೆ ನಡೆಸಿದ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಮದ್ಯವನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಧ್ವನಿವರ್ಧಕಗಳ ವಿಚಾರವಾಗಿ ಬಿಜೆಪಿ ರಾಜಕೀಯ ಮಾಡ್ತಿದೆ: ಸಂಜಯ್ ರಾವತ್

  • ಮೀನಿನ ಲಾರಿಯಲ್ಲಿ ಸಾಗಿಸುತ್ತಿದ್ದ 9 ಲಕ್ಷ ಮೌಲ್ಯದ ಗೋವಾ ಮದ್ಯ ವಶ

    ಮೀನಿನ ಲಾರಿಯಲ್ಲಿ ಸಾಗಿಸುತ್ತಿದ್ದ 9 ಲಕ್ಷ ಮೌಲ್ಯದ ಗೋವಾ ಮದ್ಯ ವಶ

    ಕಾರವಾರ: ಮೀನಿನ ಲಾರಿಯಲ್ಲಿ 9 ಲಕ್ಷ ರೂ.ಮೌಲ್ಯದ ಅಕ್ರಮ ಗೋವಾ ಮದ್ಯ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಅಬಕಾರಿ ಸಿಬ್ಬಂದಿ ಲಾರಿ ಸಹಿತ ಓರ್ವನನ್ನು ವಶಕ್ಕೆ ಪಡೆದಿರುವ ಘಟನೆ ಕಾರವಾರದ ಮಾಜಾಳಿ ಗೇಟ್ ಬಳಿ ನಡೆದಿದೆ.

    ಗೋವಾದಿಂದ ಆಗಮಿಸಿದ ಮೀನಿನ ಲಾರಿಯಲ್ಲಿ 300 ಕ್ಕೂ ಹೆಚ್ಚು ಖಾಲಿ ಟ್ರೇ ಗಳು ಇರುವುದನ್ನು ಕಂಡು ಅನುಮಾನಗೊಂಡ ಅಬಕಾರಿ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಟ್ರೇಗಳ ಮಧ್ಯೆ ಸುಮಾರು 505 ಲೀಟರ್‍ನ 9.13 ಲಕ್ಷ ಮೌಲ್ಯದ ಗೋವಾ ಮದ್ಯ ಪತ್ತೆಯಾಗಿದೆ. ಚಾಲಕ ಆಂಧ್ರಪ್ರದೇಶ ಮೂಲದ ಸೂರ್ಯನಾರಾಯಣ ಮೂರ್ತಿ ಎಂದು ಗುರುತಿಸಲಾಗಿದೆ. ಈತನ ಸಹಿತ ಗೋವಾ ಮದ್ಯವನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ.

    ಸಾಗಾಟಕ್ಕೆ ಬಳಸಿದ್ದ 16 ಲಕ್ಷ ಮೌಲ್ಯದ ಕಂಟೇನರ್ ಲಾರಿ, 90 ಸಾವಿರ ಮೌಲ್ಯದ ಪ್ಲಾಸ್ಟಿಕ್ ಟ್ರೇ ಸೇರಿ 25 ಲಕ್ಷ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದು ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಇಟ್ಟಿಗೆಗಳ ಮಧ್ಯೆ ಸಾಗಿಸುತ್ತಿದ್ದ 15 ಲಕ್ಷ ಮೌಲ್ಯದ ಗೋವಾ ಮದ್ಯ ವಶ

    ಇಟ್ಟಿಗೆಗಳ ಮಧ್ಯೆ ಸಾಗಿಸುತ್ತಿದ್ದ 15 ಲಕ್ಷ ಮೌಲ್ಯದ ಗೋವಾ ಮದ್ಯ ವಶ

    – ಮಧ್ಯಪ್ರದೇಶದ ಇಬ್ಬರು ಅರೆಸ್ಟ್

    ಚಿಕ್ಕೋಡಿ: ಲಾರಿಯಲ್ಲಿ ಇಟ್ಟಿಗೆಗಳ ಮಧ್ಯೆ ಅಕ್ರಮವಾಗಿ ಗೋವಾ ರಾಜ್ಯದಿಂದ ಗುಜರಾತ್ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದ 15 ಲಕ್ಷ ರೂ. ಮೌಲ್ಯದ 600 ಅಕ್ರಮ ಮದ್ಯದ ಬಾಟಲಿಗಳನ್ನು ಚಿಕ್ಕೋಡಿ ಉಪ ವಿಭಾಗದ ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಜೊತೆಗೆ ಇಬ್ಬರನ್ನು ಅರೆಸ್ಟ್ ಮಾಡಿದ್ದು, ಮಧ್ಯಪ್ರದೇಶ ರಾಜ್ಯದ ಇಂದೋರಿನ ಧನಪಾಲಸಿಂಗ್ ತೋಮರ್, ರಾಜು ಕಂಠಿ ಬಂಧಿತರು. ಆರೋಪಿಗಳು ಲಾರಿಯಲ್ಲಿ ಇಟ್ಟಿಗೆಗಳ ಮಧ್ಯೆ ಮದ್ಯದ ಬಾಟಲಿಗಳ ಬಾಕ್ಸ್ ಗಳನ್ನು ತುಂಬಿ ಸಾಗಿಸುತ್ತಿದ್ದರು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ರಾಧಾನಗರ ರಸ್ತೆ ಅಂಡರ್ ಪಾಸ್ ತಿರುವಿನ ಹತ್ತಿರ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೋಲಿಸರು ದಾಳಿ ನಡೆಸಿದ್ದಾರೆ.

    ಜಪ್ತಾದ ಗೋವಾ ರಾಜ್ಯದ 15 ಲಕ್ಷ ಮೌಲ್ಯದ ಮದ್ಯ ಹಾಗೂ ವಾಹನದ ಮೌಲ್ಯ 20 ಲಕ್ಷ ಹೀಗೆ ಒಟ್ಟು 35 ಲಕ್ಷ್ಯದ ಮೌಲ್ಯ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಕುರಿತು ಚಿಕ್ಕೋಡಿ ಉಪವಿಭಾಗ ಅಬಕಾರಿ ಉಪ ಅಧೀಕ್ಷಕರು ವಿಜಯಕುಮಾರ ಹೀರೆಮಠ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.