Tag: ಗೋಲ್ಮಾಲ್

  • ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ನೀಡುವ ಹಾಲಿನ ಪುಡಿಗೇ ಕನ್ನ

    ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ನೀಡುವ ಹಾಲಿನ ಪುಡಿಗೇ ಕನ್ನ

    ರಾಯಚೂರು: ಕ್ಷೀರಭಾಗ್ಯ ಯೋಜನೆಯಡಿ ಶಾಲೆಗಳಿಗೆ ಹಾಲಿನ ಪುಡಿ ಸರಬರಾಜು ಮಾಡದೇ ಲಕ್ಷಾಂತರ ರೂ. ಗೋಲ್‍ಮಾಲ್ ಮಾಡಿರುವ ಪ್ರಕರಣ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

    ಆಕಾಶ್ ಎಂ ಗಾಣಿಗ ಗೋಲ್‍ಮಾಲ್ ಮಾಡಿದ ಆರೋಪಿ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಸಮತೋಲನ ಆಹಾರ ನೀಡುವ ಉದ್ದೇಶದಿಂದ ಜಾರಿಗೆ ಬಂದ ಕ್ಷೀರಭಾಗ್ಯ ಯೋಜನೆ ರಾಯಚೂರಿನಲ್ಲಿ ಕಳ್ಳಕಾಕರಿಗೆ ಅನುಕೂಲವಾಗಿದೆ. ದೇವದುರ್ಗ ತಾಲೂಕಿನ ಶಾಲೆಗಳಿಗೆ ಕೆನೆಭರಿತ ಹಾಲಿನ ಪುಡಿ ಸರಬರಾಜು ಮಾಡಲು ಕೆಎಂಎಫ್‍ನಿಂದ ಗುತ್ತಿಗೆ ಪಡೆದಿದ್ದ ಆಕಾಶ್, ಹಾಲಿನ ಪುಡಿ ಸರಬರಾಜು ಮಾಡದೇ ಗೋಲ್‍ಮಾಲ್ ಮಾಡಿದ್ದಾನೆ. ತಾಲೂಕಿನ 14 ಶಾಲೆಗಳಿಗೆ 1,768 ಕೆಜಿ ತೂಕದ 5.10 ಲಕ್ಷ ರೂ. ಮೌಲ್ಯದ ಹಾಲಿನ ಪುಡಿಯನ್ನು ಸರಬರಾಜು ಮಾಡದೇ ವಂಚಿಸಿದ್ದಾನೆ.

    ದೇವದುರ್ಗ ತಾಲೂಕಿನ ಜಾಡಲದಿನ್ನಿ, ಕಮದಾಳ, ಜಾಲಹಳ್ಳಿ, ಸಮುದ್ರ, ರಾಮದುರ್ಗ, ಮಲ್ಲಾಪುರ ಸೇರಿ 14 ಶಾಲೆಗಳ ಮುಖ್ಯೋಪಾಧ್ಯಾಯರ ಸಹಿ ನಕಲು ಮಾಡಿ, ನಕಲಿ ಸೀಲ್ ಬಳಸಿ, ನಕಲಿ ಸ್ವೀಕೃತಿ ದಾಖಲೆಗಳನ್ನು ಸೃಷ್ಟಿಸಿ ವಂಚನೆ ಮಾಡಿದ್ದಾನೆ. ಒಟ್ಟು 49,017 ಕೆಜಿ ತೂಕದ 1.41 ಕೋಟಿ ರೂ. ಮೌಲ್ಯದ ಹಾಲಿನ ಪುಡಿಯನ್ನು ಜುಲೈ, ಅಗಸ್ಟ್ ತಿಂಗಳ ಅವಧಿಯಲ್ಲಿ ಸರಬರಾಜು ಮಾಡಲು ಗುತ್ತಿಗೆ ನೀಡಲಾಗಿತ್ತು. ಆದರೆ 47,249 ಕೆಜಿ ಹಾಲಿನ ಪುಡಿಯನ್ನು ವಿವಿಧ ಶಾಲೆಗಳಿಗೆ ಸರಬರಾಜು ಮಾಡಿ 1,768 ಕೆಜಿ ಹಾಲಿನ ಪುಡಿಯನ್ನು ವಿತರಿಸದೇ ಗೋಲ್‍ಮಾಲ್ ಮಾಡಿದ್ದಾನೆ. ಒಕ್ಕೂಟ, ಅಕ್ಷರ ದಾಸೋಹ ಅಧಿಕಾರಿಗಳು ಹಾಗೂ 14 ಶಾಲಾ ಮುಖ್ಯೋಪಾಧ್ಯಾಯರು ಸಭೆ ನಡೆಸಿದಾಗ ಅಕ್ರಮ ಬಯಲಾಗಿದೆ. ಇದನ್ನೂ ಓದಿ:  ಸರ್ಕಾರಿ ನಿಯಂತ್ರಣದಿಂದ ದೇಗುಲಗಳಿಗೆ ಸ್ವಾತಂತ್ರ್ಯ: ಸಿಎಂ ನಿಲುವು ಸ್ವಾಗತಿಸಿದ ಮಂತ್ರಾಲಯ ಶ್ರೀ

    ವಿದ್ಯಾರ್ಥಿಗಳಲ್ಲಿ ಕಂಡುಬರುವ ಅಪೌಷ್ಟಿಕತೆ ಮತ್ತು ರಕ್ತಹೀನತೆ ನಿವಾರಿಸಲು, ದೈಹಿಕ ಹಾಗೂ ಮಾನಸಿಕವಾಗಿ ಮಕ್ಕಳನ್ನು ಸದೃಢಗೊಳಿಸಲು ಪ್ರೋಟಿನ್ ಮತ್ತು ಕೊಬ್ಬಿನಂಶಗಳನ್ನೊಳಗೊಂಡ ಸಮತೋಲಿತ ಆಹಾರ ನೀಡುವ ಉದ್ದೇಶದಿಂದ ಹಾಗೂ ರಾಜ್ಯದ ಹಾಲು ಉತ್ಪಾದಕರ ಹಿತದೃಷ್ಟಿಯಿಂದ ರಾಜ್ಯಾದ್ಯಂತ ಜಾರಿಗೆ ಬಂದ ಕ್ಷೀರ ಭಾಗ್ಯ ಯೋಜನೆ ಕಳ್ಳಕಾಕರಿಂದ ಹಳ್ಳ ಹಿಡಿಯುತ್ತಿದೆ. ಇನ್ನೊಂದೆಡೆ ತಾಂತ್ರಿಕ ಸಮಸ್ಯೆಗಳನ್ನು ಹೇಳಿ ಜಿಲ್ಲೆಯ ಅಂಧ, ಅಂಗವಿಕಲ ಮಕ್ಕಳಿರುವ ವಿಶೇಷ ಶಾಲೆಗಳಿಗೆ ಅಧಿಕಾರಿಗಳು ಹಾಲಿನ ಪುಡಿ ಸರಬರಾಜು ಮಾಡುತ್ತಿಲ್ಲ. ಇದನ್ನೂ ಓದಿ: ಕೋವಿಡ್ ಹೆಚ್ಚಾದ್ರೆ ಪಶ್ಚಿಮ ಬಂಗಾಳದಲ್ಲಿ ಶಾಲಾ-ಕಾಲೇಜ್ ಬಂದ್: ಮಮತಾ ಬ್ಯಾನರ್ಜಿ

    ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಟಿ.ತಿರುಪತೆಪ್ಪ ದೂರು ದಾಖಲಿಸಿದ್ದಾರೆ. ರಾಯಚೂರಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಗುತ್ತಿಗೆದಾರ ಆಕಾಶ್ ಎಂ ಗಾಣಿಗ ವಿರುದ್ಧ ಪ್ರಕರಣ ದಾಖಲಾಗಿದೆ.

  • ಬಡವರ ಪಡಿತರದಲ್ಲಿ ಗೋಲ್‍ಮಾಲ್ – ವರದಿ ನೀಡುವಂತೆ ಸಿ.ಟಿ ರವಿ ಸೂಚನೆ

    ಬಡವರ ಪಡಿತರದಲ್ಲಿ ಗೋಲ್‍ಮಾಲ್ – ವರದಿ ನೀಡುವಂತೆ ಸಿ.ಟಿ ರವಿ ಸೂಚನೆ

    ಚಿಕ್ಕಮಗಳೂರು: ಕೊರೊನಾ ಆತಂಕದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದ್ದು, ಸರ್ಕಾರ ಮನೆಯಲ್ಲೇ ಇರುವ ಬಡವರಿಗೆ ಕೊಡುತ್ತಿರುವ ಉಚಿತ ಅಕ್ಕಿಯಲ್ಲೂ ಸೊಸೈಟಿಯವರು ಗೋಲ್‍ಮಾಲ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಈ ಆರೋಪಕ್ಕೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಕೂಡಲೇ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದಾರೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಗಬ್ಗಲ್, ನಿಡುವಾಳೆ, ಕೂವೆ ಗ್ರಾಮಗಳ ಸೊಸೈಟಿಯಲ್ಲಿ ಅಕ್ರಮ ನಡೆಯುತ್ತಿದ್ದು, ನಿಗದಿಗಿಂತ ಕಡಿಮೆ ಪಡಿತರ ನೀಡುತ್ತಿದ್ದಾರೆ. ಜೊತೆಗೆ ಎಲ್ಲರಿಂದಲೂ 30-50 ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪ ಮಾಡಲಾಗಿತ್ತು.

    ಹಮಾಲಿ ಕೂಲಿ, ಸಾಗಾಣಿಕ ವೆಚ್ಚ, ಲ್ಯಾಪ್‍ಟಾಪ್ ಚಾರ್ಜ್, ಅಕ್ಕಿ ತೂಗಿ ಹಾಕುವವನಿಗೆ ಹಾಗೂ ಗೋಣಿಚೀಲದ ಕರ್ಚನ್ನು ಬಡವರ ಮೇಲೆ ಹಾಕುತ್ತಿದ್ದಾರೆ. ಅತಿ ಬಡವರ ಅಂತ್ಯೋದಯ ಕಾರ್ಡ್‍ನಲ್ಲೂ ಅಕ್ರಮ ಮಾಡುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಕೊಡುವ ಅಕ್ಕಿಯಲ್ಲೂ ಕಡಿಮೆ ಕೊಡುತ್ತಿದ್ದಾರೆ. ಪ್ರಶ್ನಿಸಿದರೆ ನಿಮಗೆ ಬರುವುದು ಅಷ್ಟೆ ಎಂದು ಹೇಳುತ್ತಿದ್ದರಂತೆ.

    ಸೀಮೆಎಣ್ಣೆ ಕೂಡ ಹಂಚಿಕೆ ಮಾಡಲಾಗಿದೆ. ಆದರೆ ಸೊಸೈಟಿಯವರು ಸೀಮೆ ಎಣ್ಣೆ ಇಲ್ಲ ಅಂತಾರೆ. ಲೀಟರ್ ಸೀಮೆಎಣ್ಣೆಗೆ 35 ರೂಪಾಯಿ. ಆದರೆ ಇವರು 50 ರೂಪಾಯಿವರೆಗೂ ಪಡೆದುಕೊಳ್ಳುತ್ತಾರೆ ಎಂದು ಸ್ಥಳೀಯರು ಸೊಸೈಟಿಯವರ ವಿರುದ್ಧ ಕಿಡಿಕಾರಿದ್ದಾರೆ. ಅಧಿಕಾರಿಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು ಸಚಿವ ಸಿ.ಟಿ ರವಿಗೆ ಲಿಖಿತ ದೂರು ನೀಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ ಸಿ.ಟಿ.ರವಿ ಸೂಚಿಸಿದ್ದಾರೆ.

  • ಅಜಯ್ ಜೊತೆ ನಟಿಸಲು ಸ್ಕ್ರಿಪ್ಟ್ ಓದದೇ ಚಿತ್ರಕ್ಕೆ ಸಹಿ ಹಾಕಿದ ನಟಿ

    ಅಜಯ್ ಜೊತೆ ನಟಿಸಲು ಸ್ಕ್ರಿಪ್ಟ್ ಓದದೇ ಚಿತ್ರಕ್ಕೆ ಸಹಿ ಹಾಕಿದ ನಟಿ

    ಮುಂಬೈ: ರೋಹಿತ್ ಶೆಟ್ಟಿ ನಿರ್ದೇಶನದ ಗೋಲ್‍ಮಾಲ್ ಚಿತ್ರದಲ್ಲಿ ಅಜಯ್ ದೇವಗನ್ ಜೊತೆ ಮತ್ತೆ ನಟಿಸುವ ಅವಕಾಶ ಸಿಕ್ಕಿದ್ದರಿಂದ ಕಥೆ ಓದದೇ ಚಿತ್ರಕ್ಕೆ ಸಹಿ ಹಾಕಿದ್ದೇನೆ ಎಂದು ಬಾಲಿವುಡ್ ನಟಿ ತಬು ಹೇಳಿಕೊಂಡಿದ್ದಾರೆ.

    ಮುಂಬೈನಲ್ಲಿ ಗೋಲ್‍ಮಾಲ್-4 ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ಬಹುದಿನಗಳ ನಂತರ ರೋಹಿತ್ ಶೆಟ್ಟಿ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಗೋಲ್‍ಮಾಲ್ ಸರಣಿಯ ಭಾಗ 4 ಸದ್ಯ ಬರುತ್ತಿದ್ದು, ಬಹುದಿನಗಳ ಮೇಲೆ ಬಾಲಿವುಡ್ ನಟಿ ತಬು ಬಣ್ಣ ಹಚ್ಚಿದ್ದಾರೆ.

    ನಾನು ತುಂಬಾ ದಿನಗಳಿಂದ ಬಣ್ಣ ಹಚ್ಚಿರಲಿಲ್ಲ. ಗೋಲ್‍ಮಾಲ್‍ನ ಒಂದನೇ ಸೀರಿಸ್ ನಲ್ಲಿ ನಾನು ನಟಿಸಿದ್ದೆ. ಚಿತ್ರ ಈಗ ನೋಡಿದರೂ ಅಷ್ಟೇ ನಗು ಬರುತ್ತದೆ. ಅಲ್ಲದೇ ಅಜಯ್ ದೇವಗನ್ ಮುಖ್ಯ ಪತ್ರದಲಿ ನಟಿಸಿದ್ದು, ಅವರ ಜೊತೆ ತುಂಬಾ ದಿನಗಳ ಕಾಲ ನಟಿಸಿರಲಿಲ್ಲ. ಆದರೆ ಈ ಚಿತ್ರದ ಮೂಲಕ ಮತ್ತೆ ಒಂದೇ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದೇವೆ ಎಂದು ತಬು ತಿಳಿಸಿದರು.

    ಈಗಾಗಲೇ ಮೂರು ಆವೃತ್ತಿಗಳಲ್ಲಿ ತೆರೆಕಂಡಿರೋ ಗೋಲ್ಮಾಲ್ ಈಗ ನಾಲ್ಕನೇಯ ಬಾರಿಗೆ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಲು ಬರಲಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಕುತೂಹಲ ಹುಟ್ಟಿಸಿರುವ ಚಿತ್ರದ ಮೊದಲ ಟ್ರೇಲರ್ ಸೆಪ್ಟಂಬರ್ 29ರಂದು ಬಿಡುಗಡೆಯಾಗಲಿದೆ. 2006ರಲ್ಲಿ ಮೊದಲ ಬಾರಿಗೆ ಗೋಲ್ಮಾಲ್ ತೆರೆಕಂಡು ನೋಡುಗರನ್ನು ನಗಿಸುವ ಮೂಲಕ ಯಶಸ್ವಿಯಾಗಿತ್ತು. ಮುಂದೆ ಗೋಲ್ಮಾಲ್ ರಿಟರ್ನ್ (2008) ಮತ್ತು ಗೋಲ್ಮಾಲ್ (2010) ರಲ್ಲಿ ತೆರೆಕಂಡಿದ್ದವು. ಈಗ ಇದೇ ಸಿನಿಮಾದ ಮುಂದುವರೆದ ಭಾಗ ದೀಪಾವಳಿಯಂದು ದೇಶಾದ್ಯಂತ ಬಿಡುಗಡೆಯಾಗಲಿದೆ.

    ಗೋಲ್ಮಾಲ್ ಅಗೇನ್ ಸಿನಿಮಾದಲ್ಲಿ ಅಜಯ್ ದೇವಗನ್‍ಗೆ ಜೊತೆಯಾಗಿ ಪರಿಣೀತಿ ಚೋಪ್ರಾ ಜೋಡಿಯಾಗಿದ್ದಾರೆ. ಇನ್ನುಳಿದಂತೆ ಮೊದಲಿನ ಆವೃತ್ತಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಅರ್ಷದ್ ವಾರ್ಸಿ, ತುಶಾರ್ ಕಪೂರ್, ಕುನಾಳ್ ಕೇಮು ಸೇರಿದಂತೆ ದೊಡ್ಡ ತಾರಗಣವನ್ನು ಚಿತ್ರ ಹೊಂದಿದೆ. ಗೋಲ್ಮಾಲ್ ಅಗೇನ್‍ಗೆ ರೋಹಿತ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳುವ ಜೊತೆಗೆ ಅಜಯ್ ದೇವಗನ್ ಜೊತೆಗೆ ಬಂಡವಾಳನ್ನೂ ಹೂಡಿದ್ದಾರೆ.

    https://www.instagram.com/p/BY93WjHFs_9/?tagged=golmaalagain

    https://www.instagram.com/p/BXuocLljX-c/?tagged=golmaalagain

    https://www.instagram.com/p/BY5yGhPH5io/?tagged=golmaalagain

    https://www.instagram.com/p/BY52bHEDCLo/?tagged=golmaalagain

    https://www.instagram.com/p/BY1bgkYDLZm/?tagged=golmaalagain

    https://www.instagram.com/p/BYtZV6slBaO/?tagged=golmaalagain

    https://www.instagram.com/p/BYflPLODeFW/?tagged=golmaalagain

    https://www.instagram.com/p/BYOIx7_Fef6/?tagged=golmaalagain

    https://www.instagram.com/p/BY9_5HJgSEz/?tagged=golmaalagain

  • ಆರೋಗ್ಯ ಇಲಾಖೆಯಲ್ಲಿ ಗೋಲ್ಮಾಲ್: ಪ್ರಶ್ನಿಸಿದ್ದಕ್ಕೆ ಹಿರಿಯ ವೈದ್ಯರಿಗೆ ಹಿಂಭಡ್ತಿ!

    ಆರೋಗ್ಯ ಇಲಾಖೆಯಲ್ಲಿ ಗೋಲ್ಮಾಲ್: ಪ್ರಶ್ನಿಸಿದ್ದಕ್ಕೆ ಹಿರಿಯ ವೈದ್ಯರಿಗೆ ಹಿಂಭಡ್ತಿ!

    ನೆಲಮಂಗಲ: ಆರೋಗ್ಯ ಇಲಾಖೆಯಿಂದ ಸರ್ಕಾರಿ ಆಸ್ಪತ್ರೆಗಳಿಗೆ ವಿತರಣೆ ಆಗುತ್ತಿರುವ ಔಷಧಿಗಳು, ಮಾತ್ರೆ, ಯಂತ್ರೋಪಕರಣಗಳು ಸೇರಿದಂತೆ ಇನ್ನಿತರ ವಸ್ತುಗಳ ವಿತರಣೆಯಲ್ಲಿ ಭಾರೀ ಗೋಲ್ಮಾಲ್ ನಡೆಯುತ್ತಿರುವ ಬಗ್ಗೆ, ಸ್ವತಃ ಹಿರಿಯ ವೈದ್ಯರೇ ಈಗ ಗಂಭೀರ ಆರೋಪ ಮಾಡಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕು ಸರ್ಕಾರಿ ಆಸ್ಪತ್ರೆಯ ಡಾ.ಅಮರ್‍ನಾಥ್ ಈ ಆರೋಪ ಮಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ನೆಲಮಂಗಲ ತಾಲೂಕು ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿ ಸೇವೆ ಮಾಡುತಿದ್ದೆ. ಈ ವೇಳೆ ಅಲ್ಲಿ ನಡೆಯುತ್ತಿದ್ದ ಅಕ್ರಮಗಳ ತಡೆದಿದ್ದೆ. ಅಕ್ರಮಗಳಿಗೆ ಬ್ರೇಕ್ ಹಾಕಿದ್ದಕ್ಕೆ ನನಗೆ ಹಿಂಭಡ್ತಿ ನೀಡಲಾಗಿದೆ ಎಂದು ಅವರು ಆರೋಪಿಸಿದರು.

    ಗ್ರಾಮಾಂತರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಜೇಶ್ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸಂಬಳ ತಡೆಹಿಡಿದು ಕೆಲಸದಲ್ಲಿ ಕಿರಿಕಿರಿ ಮಾಡುತ್ತಿದ್ದಾರೆ. ವರ್ಗಾವಣೆಗೆ ತಡೆ ನೀಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಸಿಕ್ಕ ಸಿಕ್ಕವರ ಕೈಲಿ ಮಾಹಿತಿ ಹಕ್ಕು ಕಾಯ್ದೆಯಡಿ ಸುಕಾಸುಮ್ಮನೆ ಆರೋಪಗಳನ್ನ ಮಾಡಿಸಿ, ತೇಜೋವಧೆ ಮಾಡಿ ನಾನು ಈ ಆಸ್ಪತ್ರೆಯಲ್ಲಿ ಕೆಲಸನೇ ಮಾಡಿಲ್ಲ, ಬಿಟ್ಟಿಯಾಗಿ ಸಂಬಳ ಪಡೆಯುತ್ತಿರುವ ಬಗ್ಗೆ ದಾಖಲೆಗಳನ್ನ ಒದಗಿಸಿದ್ದಾರೆ ಎಂದು ಅವರು ದೂರಿದರು.

    ಡಾ.ರಾಜೇಶ್ ಆಕ್ರಮದ ಬಗ್ಗೆ ಸಾರ್ವಜನಿಕರು ಸೇರಿದಂತೆ ಜನಪ್ರತಿನಿಧಿಗಳು, ಆರೋಗ್ಯ ಸಚಿವ ರಮೇಶ್ ಕುಮಾರ್ ಅವರಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಇನ್ನು ಮುಂದೆ ನನಗೆ ಆತ್ಮಹತ್ಯೆ ಒಂದೇ ದಾರಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.

    ಯುಪಿಎಸ್ ಬ್ಯಾಟರಿ, ಸಿಸಿಟಿವಿ ಅಡವಡಿಕೆ, ಬಲ್ಪ್, ಮೇಜಿನ ಮೇಲಿನ ಗ್ಲಾಸು, ಇನ್ನಿತರ ವಸ್ತುಗಳಿಗೆ ನಾಲ್ಕೈದು ಬಾರಿ ಹಣವನ್ನ ರಾಜೇಶ್ ಅವರು ಬಿಡುಗಡೆ ಮಾಡಿರುವ ದಾಖಲೆ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ನರೇಗಾ ಗೋಲ್ಮಾಲ್- ಮಿನಿಸ್ಟರ್ ಬಂದಾಗ ಕೆಲಸ ಕೊಟ್ರು, ಹೋದ್ಮೇಲೆ ಜೆಸಿಬಿ ತರಿಸಿದ್ರು

    ನರೇಗಾ ಗೋಲ್ಮಾಲ್- ಮಿನಿಸ್ಟರ್ ಬಂದಾಗ ಕೆಲಸ ಕೊಟ್ರು, ಹೋದ್ಮೇಲೆ ಜೆಸಿಬಿ ತರಿಸಿದ್ರು

    ಬಾಗಲಕೋಟೆ: ಸಚಿವರು ಬಂದಾಗ ಕೆಲಸ ಕೊಡ್ಸಿ, ಸಚಿವರು ಹೋದ ಬಳಿಕ ಮನೆಗೆ ಕಳುಹಿಸಿದ ಘಟನೆ ಬಾಗಲಕೋಟೆಯ ಬೀಳಗಿಯ ಗಿರಿಸಾಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ.

    ಹೌದು. ಸಚಿವರು ಬಂದಾಗ ಜನರನ್ನು ಗುಡ್ಡೆ ಹಾಕಿ ಕೆಲಸ ಕೊಟ್ರು. ಸಚಿವರು ಹೋದ ಬಳಿಕ ಕೆಲಸ ಇಲ್ಲ ಹೋಗಿ ಅಂದ್ರು. ರಾತ್ರೋ ರಾತ್ರಿ ನರೇಗಾ ಕೆಲಸವನ್ನ ಜೆಸಿಬಿಯಲ್ಲಿ ಕಾಮಗಾರಿ ಮಾಡಿಸಿದ್ರು.

    ಇದ್ರಿಂದ ರೊಚ್ಚಿಗೆದ್ದ ಕಾರ್ಮಿಕರು ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಬರ ನಿರ್ವಹಣೆ ವೀಕ್ಷಣೆಗೆ ಸಂಪುಟ ಉಪ ಸಮಿತಿಯ ಸಚಿವ ದೇಶಪಾಂಡೆ ಅವ್ರು ಮೇ 12 ರಂದು ಭೇಟಿ ನೀಡಿದ್ರು. ಈ ವೇಳೆ 280 ಕಾರ್ಮಿಕರು ಕೆಲಸ ಮಾಡುತ್ತಿದ್ದು ಕಂಡು ಭೇಷ್ ಅಂದಿದ್ರು. ಆದ್ರೆ, ಅವ್ರು ಹೋದ ಮೇಲೆ ಈಗ ಕೆಲಸ ಇಲ್ಲ ಅಂತ ಹೇಳಿ ಜನರನ್ನ ವಾಪಸ್ ಕಳಿಸಲಾಗಿದೆ.

    ಎನ್‍ಆರ್‍ಇಜಿ ಅಡಿ ಕೆಲಸ ಬಂದ್ ಮಾಡಿ ಜೆಸಿಬಿ ಮೂಲಕ ರಾತ್ರೋ ರಾತ್ರಿ ಕಾಮಗಾರಿ ಮಾಡಿಸಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.