ಬೆಂಗಳೂರು: ಚಿತ್ರನಟಿ ರನ್ಯಾ ರಾವ್ (Ranya Rao) ಚಿನ್ನ ಕಳ್ಳಸಾಗಣೆ ಪ್ರಕರಣ (Gold Smuggling Case) ಸೂಕ್ತ ತನಿಖೆಯಾಗಲಿ. ಆ ಬಳಿಕವಷ್ಟೇ ಪ್ರಕರಣದ ಸತ್ಯಾಸತ್ಯತೆ ತಿಳಿಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದರು.
ಗ್ಯಾರಂಟಿ ಸಮಿತಿಗಳ ವಿರುದ್ಧದ ಬಿಜೆಪಿ ಪ್ರತಿಭಟನೆ ಕುರಿತು ಮಾತನಾಡಿದ ಅವರು, 2023ರಲ್ಲಿ ಸರ್ಕಾರ ರಚನೆಯಾದ ಬಳಿಕ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಬಳಿಕ ಸೂಕ್ತ ರೀತಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ದೃಷ್ಟಿಯಿಂದ ಗ್ಯಾರಂಟಿ ಸಮಿತಿಗಳನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ರಚಿಸಲಾಯಿತು. ಈಗ ಸಮಿತಿಗಳನ್ನು ರದ್ದುಗೊಳಿಸುವಂತೆ ಪ್ರತಿಪಕ್ಷಗಳು ನಡೆಸುತ್ತಿರುವ ಹೋರಾಟಕ್ಕೆ ಅರ್ಥವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಡಿಸಿಎಂ ಡಿಕೆಶಿಗೆ ಬೆಳ್ಳಿ ಕಿರೀಟ ಹಾಕಿದ ಪಾಲನಹಳ್ಳಿ ಮಠದ ಸ್ವಾಮೀಜಿ
ನಮ್ಮ ಯೋಜನೆಗಳನ್ನೇ ಬಿಜೆಪಿ ಇತರ ರಾಜ್ಯಗಳಲ್ಲಿ ಜಾರಿಗೆ ತಂದಿದೆ. ಮಹಾರಾಷ್ಟ್ರ ಸರ್ಕಾರ ನಮ್ಮದೇ ಗೃಹಲಕ್ಷ್ಮಿ ಯೋಜನೆಯನ್ನು ಲಾಡ್ಲಿ ಬೆಹೆನಾ ಹೆಸರಿನಲ್ಲಿ ಚುನಾವಣೆಗೂ ಮುನ್ನ ಎರಡು ತಿಂಗಳು ಹಣ ನೀಡಿತ್ತು. ಆದರೆ ಚುನಾವಣೆಯಲ್ಲಿ ಗೆದ್ದ ಬಳಿಕ ಈ ಯೋಜನೆಯನ್ನೇ ಬಂದ್ ಮಾಡಲಾಗಿದೆ. ಇದು ಬಿಜೆಪಿ ಸರ್ಕಾರಗಳ ಸ್ಥಿತಿ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಇರಾಕ್, ಬಾಂಗ್ಲಾದೇಶ ಸೈಕ್ಲೋನ್ ಎಫೆಕ್ಟ್ – ಭಾರತದ 18 ರಾಜ್ಯಗಳಿಗೆ ಮಳೆ ಅಲರ್ಟ್
ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಬಂಧನಕ್ಕೆ ಒಳಗಾಗಿರುವ ರನ್ಯಾ ರಾವ್ (Ranya Rao) ಬಗ್ಗೆ ಮತ್ತೊಂದು ಎಕ್ಸ್‌ಕ್ಲೂಸಿವ್ ವಿಚಾರ `ಪಬ್ಲಿಕ್ ಟಿವಿ’ಗೆ ಲಭ್ಯವಾಗಿದೆ. ರನ್ಯಾ ರಾವ್ ಬಳಿ ದುಬೈ ರೆಸಿಡೆಂಟ್ ವೀಸಾ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರನ್ಯಾ ರಾವ್ ಬಳಿ ದುಬೈ ರೆಸಿಡೆಂಟ್ ವೀಸಾ ಇದ್ದು, 83 ಲಕ್ಷ ರೂ. ನೀಡಿ 2 ವರ್ಷಗಳ ರೆಸಿಡೆಂಟ್ ವೀಸಾ ಪಡೆದಿದ್ದಾರೆ. ಪ್ರಕರಣದಲ್ಲಿ ರನ್ಯಾ ರಾವ್‌ಗೆ ಜಾಮೀನು ಮಂಜೂರು ಮಾಡಿದರೆ ದೇಶ ಬಿಟ್ಟು ಹೋಗುವ ಸಾಧ್ಯತೆ ಇದೆ. ಡಿಆರ್‌ಐ ತನಿಖೆಯಲ್ಲಿ ಎಲ್ಲಾ ಮಾಹಿತಿಯು ಬಹಿರಂಗವಾಗಿದೆ. ಹೀಗಾಗಿ ಜಾಮೀನು ಮಂಜೂರು ಮಾಡದಂತೆ ಕೋರ್ಟ್‌ಗೆ ಡಿಆರ್‌ಐ ಆಕ್ಷೇಪಣೆ ಸಲ್ಲಿಸಿದೆ. ಇದನ್ನೂ ಓದಿ: WPL | ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯದಲ್ಲಿ ರೋಷಾವೇಷ – ಗೆದ್ದು ಆಟ ಮುಗಿಸಿದ ಆರ್‌ಸಿಬಿ!
ಪಬ್ಲಿಕ್ ಟಿವಿಗೆ ರನ್ಯಾ ರಾವ್ ಟ್ರಾವೆಲ್ ಹಿಸ್ಟರಿಗೆ ದಾಖಲೆಯ ಸಾಕ್ಷ್ಯ ಲಭ್ಯವಾಗಿದೆ. ರನ್ಯಾ ರಾವ್ ಪಾಸ್‌ಪೋರ್ಟ್ ಪ್ರತಿ ಲಭ್ಯವಾಗಿದ್ದು, ಎರಡನೇ ಪಾಸ್‌ಪೋರ್ಟ್ನಲ್ಲಿ 6 ಬಾರಿ ದುಬೈಗೆ ಪ್ರಯಾಣ ಬೆಳೆಸಿರುವುದು ತಿಳಿದುಬಂದಿದೆ. 2015 ಜ. 25ರಂದು ಮೊದಲ ಪಾಸ್‌ಪೋರ್ಟ್ ಹೊಂದಿದ್ದರು. ಬಳಿಕ 2025 ಜ. 25ರಲ್ಲಿ ರನ್ಯಾರಾವ್ ಪಾಸ್‌ಪೋರ್ಟ್ ರಿನಿವಲ್ ಮಾಡಿಸಿದ್ದರು. ಫೆ.25ರಂದು ಅಮೆರಿಕಾದಿಂದ ಬೆಂಗಳೂರಿಗೆ ಬಂದಿರುವುದು ಇದರಿಂದ ಗೊತ್ತಾಗಿದೆ. ಇದನ್ನೂ ಓದಿ: ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ನಾಲ್ವರಿಗೆ ಸಿಬಿಐ ನೋಟಿಸ್
– ರನ್ಯಾ ಕೇಸಲ್ಲಿ ಶಿಷ್ಟಾಚಾರ ದುರ್ಬಳಕೆ ಆರೋಪ – ಐಪಿಎಸ್ ರಾಮಚಂದ್ರರಾವ್ ವಿರುದ್ಧವೂ ತನಿಖೆ
ಬೆಂಗಳೂರು: ರನ್ಯಾ ಚಿನ್ನ ಕಳ್ಳ ಸಾಗಣೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಏರ್‌ಪೋರ್ಟ್‌ನಲ್ಲಿ ರನ್ಯಾಗೆ ಪ್ರೊಟೋಕಾಲ್ ಒದಗಿಸಿದ್ದ ವಿಚಾರವಾಗಿ ತನಿಖೆಗೆ ರಾಜ್ಯ ಸರ್ಕಾರ ಆದೇಶ ನೀಡಿದೆ. ಈ ಬೆನ್ನಲ್ಲೇ ಪ್ರತ್ಯೇಕ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿರುವ ಸಿಬಿಐ ನಾಲ್ವರಿಗೆ ನೋಟಿಸ್ ನೀಢಿದೆ.
ಇನ್ನೂ ಶಿಷ್ಟಾಚಾರ ದುರ್ಬಳಕೆ ಪ್ರಕರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರರಾವ್ ಪಾತ್ರ ಇದ್ಯಾ…? ಇಲ್ಲವೇ ಎಂಬ ಬಗ್ಗೆ ತನಿಖೆ ನಡೆಸಲು ಸರ್ಕಾರ ಮುಂದಾಗಿದೆ. ಹಿರಿಯ ಐಪಿಎಸ್ ಗೌರವ್ ಗುಪ್ತಾಗೆ ವಾರದಲ್ಲಿ ವರದಿ ನೀಡಲು ಸೂಚಿಸಿದೆ. ಇದೇ ವೇಳೆ, ರನ್ಯಾ ಪ್ರಕರಣದಲ್ಲಿ ಪೊಲೀಸರ ವಿರುದ್ಧ ಕರ್ತವ್ಯಲೋಪ ಎಸಗಿದ ಆರೋಪ ಸಂಬಂಧ ಸರ್ಕಾರ ಸಿಐಡಿ ತನಿಖೆಗೆ ಆದೇಶ ನೀಡಿದೆ. ಇದನ್ನೂ ಓದಿ: ಇನ್ಮುಂದೆ `ಇಂಡಿಯಾ’ ಅನ್ನಬೇಡಿ, `ಭಾರತ’ ಎಂದೇ ಕರೆಯಿರಿ – ಆರ್‌ಎಸ್‌ಎಸ್ ನಾಯಕ ಹೊಸಬಾಳೆ ಕರೆ
ಶೀಘ್ರವೇ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ. ಪರಿಣಾಮ ಐಪಿಎಸ್ ಅಧಿಕಾರಿ ರಾಮಚಂದ್ರರಾವ್, ರನ್ಯಾ ಏರ್‌ಪೋರ್ಟ್‌ಗೆ ಬಂದಾಗ ಪ್ರೋಟೋಕಾಲ್ ನೀಡಲು ಬಂದಿದ್ದ ಹೆಡ್ ಕಾನ್‌ಸ್ಟೇಬಲ್, ಗುಪ್ತಚರ ಇಲಾಖೆ ಕಾನ್‌ಸ್ಟೇಬಲ್‌ಗೆ ವಿಚಾರಣೆ ಬಿಸಿ ತಾಕುವುದು ಖಚಿತವಾಗಿದೆ. ಈ ಬೆಳವಣಿಗೆ ನಡುವೆ ಡಿಸಿಎಂ ಜೊತೆ, ಗೃಹ ಸಚಿವರ ಜೊತೆ ಸಿಎಂ ಪ್ರತ್ಯೇಕವಾಗಿ ಸಭೆ ನಡೆಸಿದ್ರು. ಗೌರವ್ ಗುಪ್ತಾ ಸಹ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ರು. ಈ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ಸಹ ಜೋರಾಗಿದೆ.
ಬೆಂಗಳೂರು: ನಟಿ ರನ್ಯಾ ರಾವ್ (Ranya Rao) ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ (Gold Smuggling Case) ಬಗೆದಷ್ಟು ಮಾಹಿತಿಗಳು ಬಯಲಾಗುತ್ತಿವೆ. ಇದೀಗ ಝೀರೋ ಬ್ಯಾಲೆನ್ಸ್ ಇದ್ದ ರನ್ಯಾ ಅಕೌಂಟ್‌ಗೆ ಎರಡೇ ದಿನದಲ್ಲಿ 10 ಲಕ್ಷ ಹಣ ಸಂದಾಯವಾಗಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.
4 ಲಕ್ಷ, 1 ಲಕ್ಷ, 5 ಲಕ್ಷದಂತೆ ಒಟ್ಟು 10 ಲಕ್ಷ ಹಣ ಇದ್ದಕ್ಕಿದ್ದಂತೆ ರನ್ಯಾ ಅಕೌಂಟ್‌ಗೆ ಸಂದಾಯವಾಗಿದೆ. ಓಂಕಾರ ಕೋ ಆಪರೇಟಿವ್ ಬ್ಯಾಂಕ್ ಅಕೌಂಟ್‌ನಿಂದ ಟ್ರಿನಿಟಿಯ ಕೆನರಾ ಬ್ಯಾಂಕ್‌ನಲ್ಲಿರುವ ರನ್ಯಾ ಅಕೌಂಟ್‌ಗೆ 10 ಲಕ್ಷ ಹಣ ಸಂದಾಯವಾಗಿದೆ. 2022ರ ಏ.27 ಹಾಗೂ 28ರಂದು ಹಣ ಸಂದಾಯ ಆಗಿದೆ ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಕೊಪ್ಪಳ ಗ್ಯಾಂಗ್‌ರೇಪ್ ಪ್ರಕರಣ – ಮೂವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ
ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್‌ಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಮಾ.24 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಿಸಿದೆ. ಸದ್ಯ ರನ್ಯಾ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರೋಧ
-ಸರ್ಕಾರದ ತಪ್ಪು ಮುಚ್ಚಿಕೊಳ್ಳಲು `ಗ್ರೇಟರ್ ಬೆಂಗಳೂರು’; ಸಂಸದ ಕಿಡಿ
ನವದೆಹಲಿ: ರನ್ಯಾ ರಾವ್ (Ranya Rao) ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಜಾಲದಲ್ಲಿ ಇರುವವರನ್ನು ಪತ್ತೆ ಹಚ್ಚಲು ಸಮಗ್ರವಾಗಿ, ಆಳವಾದ ತನಿಖೆ ನಡೆಸಬೇಕು. ನಮ್ಮ ಅವಧಿಯಲ್ಲಿ ರನ್ಯಾ ರಾವ್ ನಿರ್ದೇಶಕಿಯಾದ ಕಂಪನಿಗೆ ಜಮೀನು ನೀಡಿರುವುದು ಮುಖ್ಯಮಂತ್ರಿಯ ಹಂತದವರೆಗೂ ಬಂದಿರುವುದಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿರಾ ಕೈಗಾರಿಕಾ ಪ್ರದೇಶದಲ್ಲಿ ಮೆ. ಕ್ಸಿರೋಡಾ ಇಂಡಿಯಾ ಪ್ರೈ. ಲಿಮಿಟೆಡ್ ಸಂಸ್ಥೆಗೆ ಜಮೀನು ನೀಡಿದ್ದೇವೆ. ರನ್ಯಾ ರಾವ್ ಕಂಪನಿಯ ನಿರ್ದೇಶಕಿಯಾಗಿದ್ದಾರೆ. ಯಾರೇ ಉದ್ದಿಮೆ ಮಾಡುತ್ತೇವೆ ಎಂದು ಬಂದರೂ ನಾವು ಅವರಿಗೆ ಅಗತ್ಯ ಕರಾರುಗಳನ್ನು ಹಾಕುತ್ತೇವೆ. ಲ್ಯಾಂಡ್ ಆಡಿಟ್ ಕಮಿಟಿ ಅಂತ ಇರುತ್ತದೆ. ಆ ಸಮಿತಿಯಲ್ಲಿ ಪ್ರಧಾನ ಕಾರ್ಯದರ್ಶಿ ಸೇರಿ ಹಿರಿಯ ಅಧಿಕಾರಿಗಳು ಇರುತ್ತಾರೆ. ಅವರು ಸಂಬಂಧಪಟ್ಟ ಕಂಪನಿಗೆ ಎಷ್ಟು ಜಮೀನು ಬೇಕು. ಯಾವ ಭಾಗದಲ್ಲಿ ಜಮೀನು ಬೇಕಿದೆ ಎನ್ನುವುದನ್ನು ಪರಿಶೀಲಿಸಿ ಶಿಫಾರಸ್ಸು ಮಾಡುತ್ತಾರೆ ಎಂದರು. ಇದನ್ನೂ ಓದಿ: ಬಿಹಾರದ ಆಭರಣ ಮಳಿಗೆಯಲ್ಲಿ ಫಿಲ್ಮಿಸ್ಟೈಲ್‌ನಲ್ಲಿ ದರೋಡೆ – 8 ನಿಮಿಷದಲ್ಲಿ 25 ಕೋಟಿ ಚಿನ್ನಾಭರಣ ದರೋಡೆ!
500 ಕೋಟಿ ರೂ.ಗಳವರೆಗಿನ ಯೋಜನೆಗಳಿಗೆ ಸಂಬಂಧಪಟ್ಟ ಮಂತ್ರಿಗಳ ಹಂತದಲ್ಲಿ ತೀರ್ಮಾನ ಆಗುತ್ತದೆ. ಮುಖ್ಯಮಂತ್ರಿಯವರೆಗೂ ಬರುವುದಿಲ್ಲ ನನ್ನ ಹಂತದವರೆಗೂ ಅದು ಬಂದಿಲ್ಲ. ಕೈಗಾರಿಕಾ ಸಚಿವರ ನೇತೃತ್ವದಲ್ಲಿ ಸಿಂಗಲ್ ವಿಂಡೊ ಪ್ರೊಸಿಡಿಂಗ್ ಮೂಲಕ ಹಂಚಿಕೆ ಮಾಡುತ್ತಾರೆ. ಅವರಿಗೆ ಜಮೀನು ಹಂಚಿಕೆ ಮಾಡಿದ ಮೇಲೆ ಹಣ ಕಟ್ಟುವಂತೆ ನೊಟೀಸ್ ನೀಡಲಾಗಿದೆ. ಅವರು ಹಣ ಕಟ್ಟದಿರುವುದರಿಂದ ಅವರಿಗೆ ಭೂಮಿ ಹಂಚಿಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮೋದಿ ಅವಧಿಯಲ್ಲಿ ರೈಲ್ವೆ ವಲಯ ಭಾರೀ ಅಭಿವೃದ್ಧಿ ಹೊಂದಿದೆ: ಹೆಚ್‍ಡಿಡಿ
ಉದ್ದಿಮೆ ಸ್ಥಾಪಿಸಲು ಹಲವಾರು ಅರ್ಜಿಗಳು ಬಂದಾಗ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಉದ್ಯಮಗಳಿಗೆ ಜಮೀನು ನೀಡುತ್ತೇವೆ. ಈಗಿನ ಸರ್ಕಾರವೂ ಕೂಡ ಲಕ್ಷಾಂತರ ಕೋಟಿ ರೂ. ಜಮೀನು ಹಂಚಿಕೆ ಮಾಡಿರುತ್ತದೆ. ಯಾರೋ ಮುಂದೆ ಅಪರಾಧ ಮಾಡುತ್ತಾರೆ ಎಂದು ಯಾರಿಗೂ ಗೊತ್ತಿರುವುದಿಲ್ಲ. ಅದನ್ನು ಊಹೆ ಮಾಡಲು ಆಗುವುದಿಲ್ಲ. ನಟಿ ದುಬೈನಿಂದ ಅಕ್ರಮವಾಗಿ ಚಿನ್ನ ತಂದಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಎಲ್ಲ ಆಯಾಮದಿಂದಲೂ ತನಿಖೆ ನಡೆಯಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಹೇಳಿದರು. ಇದನ್ನೂ ಓದಿ: ರಂಜಾನ್ ಟೈಮಲ್ಲೇ ಗುಲ್ಮಾರ್ಗ್ ಫ್ಯಾಷನ್ ಶೋ – 24 ಗಂಟೆಗಳಲ್ಲಿ ವರದಿ ನೀಡುವಂತೆ ಒಮರ್ ಅಬ್ದುಲ್ಲಾ ಆದೇಶ
ಮಾಧ್ಯಮಗಳಲ್ಲಿ ಇಬ್ಬರು ಸಚಿವರು ಇದರ ಹಿಂದೆ ಇದ್ದಾರೆ ಎಂದು ತೋರಿಸಲಾಗುತ್ತಿದೆ. ಈ ಬಗ್ಗೆ ತನಿಖೆ ಆಗಬೇಕು. ಇದು ಒಂದು ಬಾರಿ ನಡೆದಿರುವಂತೆ ಕಾಣಿಸುತ್ತಿಲ್ಲ. ಇದಕ್ಕೆ ಬೆಂಬಲವಾಗಿ ಇರುವುವವರ ಬಗ್ಗೆ ಸಮಗ್ರವಾಗಿ, ಆಳವಾಗಿ ತನಿಖೆಯಾಗಲಿ. ಅಧಿಕಾರಿಗಳ ಪಾತ್ರ ಇಲ್ಲದೆ ಇಷ್ಟು ದೊಡ್ಡ ಅಕ್ರಮ ನಡೆಯಲು ಸಾಧ್ಯವಿಲ್ಲ. ಇದರ ಹಿಂದಿರುವ ಜಾಲವನ್ನು ಸಂಪೂರ್ಣವಾಗಿ ಭೇದಿಸಬೇಕು. ಸಿಬಿಐ ತನಿಖೆಯಿಂದ ಯಾರ ಪಾತ್ರ ಇದೆ ಎನ್ನುವುದು ಹೊರ ಬರುತ್ತದೆ. ಹೀಗಾಗಿ ಇದರ ಬಗ್ಗೆ ಆಳವಾಗಿ ತನಿಖೆಯಾದರೆ ಎಲ್ಲ ಸತ್ಯವೂ ಹೊರ ಬರಲಿದೆ ಎಂದರು. ಇದನ್ನೂ ಓದಿ: ಬಿಬಿಎಂಪಿ 2ಕ್ಕಿಂತ ಹೆಚ್ಚು ಹೋಳಾಗೋದು ಫಿಕ್ಸ್ – ಸದ್ಯದಲ್ಲೇ `ಗ್ರೇಟರ್ ಬೆಂಗಳೂರು’ ಆಡಳಿತ ಕಾಯ್ದೆ ಜಾರಿಗೆ ಸಿದ್ಧತೆ
ತಪ್ಪು ಮುಚ್ಚಿಕೊಳ್ಳಲು ಗ್ರೇಟರ್ ಬೆಂಗಳೂರು
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಜಾರಿಗೆ ಸರ್ಕಾರ ಮುಂದಾಗಿರುವ ಬಗ್ಗೆ ಮಾತನಾಡಿದ ಅವರು, ಬೆಂಗಳೂರು ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ರಸ್ತೆಗಳ ರಿಪೇರಿಯಿಂದ ಹಿಡಿದು ಹೊಸ ರಸ್ತೆ ನಿರ್ಮಾಣ ಮಾಡುವುದರಿಂದ ಹಿಡಿದು, ಚರಂಡಿ ನಿರ್ವಹಣೆ ಮಾಡುವುದನ್ನು ಸರಿಯಾಗಿ ಮಾಡಿಲ್ಲ. ಸುಮ್ಮನೆ 2 ವರ್ಷ ಬ್ರಾಂಡ್ ಬೆಂಗಳೂರು ಎಂದು ಅರ್ಜಿ ತೆಗೆದುಕೊಂಡು ಎಲ್ಲಿ ಹಾಕಿದ್ದಾರೋ ಗೊತ್ತಿಲ್ಲ. ಬಜೆಟ್‌ನಲ್ಲಿಯೂ ಕೂಡ ಕಾರ್ಯಸಾಧುವಾಗುವಂತೆ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ ಕಿಡಿಕಾರಿದರು. ಇದನ್ನೂ ಓದಿ: ತಂಬಾಕು, ಮದ್ಯದ ಜಾಹೀರಾತು ನಿಯಂತ್ರಿಸಿ – ಬಿಸಿಸಿಐ ಅಧ್ಯಕ್ಷರಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ
ನಮ್ಮ ಕಾಲದಲ್ಲಿ ತೀರ್ಮಾನ ಮಾಡಿರುವ ವಿಶ್ವ ಬ್ಯಾಂಕಿನಿಂದ 1700 ಕೋಟಿ ರೂ. ಸಾಲ ನೀಡುವ ಯೋಜನೆ ಈಗ ಅಂತಿಮವಾಗಿದೆ. ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು, ದೇವರು ಬಂದರೂ ಇದನ್ನು ಸರಿ ಮಾಡಲು ಸಾಧ್ಯವಿಲ್ಲ ಎಂಬ ಸರ್ಕಾರದ ಧೋರಣೆಯಿದೆ. ಬೆಂಗಳೂರಿನ ವಿಸ್ತರಣೆ ಎಷ್ಟಿದೆ ಅಷ್ಟೇ ಇದೆ. ಈಗಾಗಲೇ ವಲಯಗಳಿಗೊಬ್ಬರು ಮುಖ್ಯ ಇಂಜಿನಿಯರ್ ಇದ್ದಾರೆ. ಈಗ ಎಲ್ಲ ವಲಯಗಳಿಗೆ ಆಯುಕ್ತರನ್ನು ಮಾಡಲು ಹೊರಟಿದ್ದಾರೆ. ಅದು ಪರಿಹಾರವಲ್ಲ, ಅದರ ಬದಲು ಯೋಜನಾಬದ್ಧವಾಗಿ ಹಣಕಾಸು ಒದಗಿಸಬೇಕು. ನಮ್ಮ ಕಾಲದಲ್ಲಿ 2 ಉಪನಗರಗಳನ್ನು ಮಾಡಲು ಯೋಚಿಸಿದ್ದೇವು. ಅವುಗಳನ್ನು ಮಾಡಿ ಸಂಪರ್ಕ ಕಲ್ಪಿಸಿ, ಅದರ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಗುಜರಾತ್ | 5 ವರ್ಷದ ಬಾಲಕಿಯ ನರಬಲಿ – ದೇವಾಲಯದ ಮೆಟ್ಟಿಲುಗಳ ಮೇಲೆ ರಕ್ತ ಅರ್ಪಿಸಿದ ಪಾಪಿ!
ಪರಿಷ್ಕರಣೆಗೆ ಅವಸರ ಬೇಡ
ಇದೇ ವೇಳೆ ರಾಜ್ಯ ಸರ್ಕಾರ ರೇಷನ್ ಕಾರ್ಡ್ ಪರಿಷ್ಕರಣೆ ಮಾಡಲು ಮುಂದಾಗಿರುವ ಕುರಿತು ಅವರು ಪ್ರತಿಕ್ರಿಯಿಸಿದರು. ರೇಷನ್ ಕಾರ್ಡ್ ಪರಿಷ್ಕರಣೆ ಮಾಡುವ ಮೊದಲು ರಾಜ್ಯ ಸರ್ಕಾರ ಅವಸರದ ತೀರ್ಮಾನ ಮಾಡಬಾರದು. ಅರ್ಹ ಫಲಾನುಭವಿಗಳಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಎಲ್ಲಾ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಮೊದಲು 2 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಿ, ಅಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ನಂತರ ರಾಜ್ಯಾದ್ಯಂತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ನಟಿ ರನ್ಯಾಗೆ KIADB ಜಾಗ ಕೊಟ್ಟಿದ್ದೇ ಬಿಜೆಪಿ, ಈಗ ಕಾಂಗ್ರೆಸ್ ಮೇಲೆ ಆರೋಪ ಮಾಡೋ ನೈತಿಕತೆ ಅವರಿಗಿಲ್ಲ: ಹೆಚ್.ಸಿ ಬಾಲಕೃಷ್ಣ
– ಅಲ್ಪಸಂಖ್ಯಾತರಿಗೆ ಕೊಟ್ಟಿರೋದು 4 ಸಾವಿರ ಕೋಟಿ, ಬಜೆಟ್ ಗಾತ್ರ 4 ಲಕ್ಷ ಕೋಟಿ ಎಂದ ಶಾಸಕ
ರಾಮನಗರ: ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಬಂಧನವಾಗಿರುವ ನಟಿ ರನ್ಯಾಗೆ (Ranya Rao) ಕಾಂಗ್ರೆಸ್ ಸಚಿವರು ಬೆಂಬಲ ನೀಡ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ರಾಮನಗರದಲ್ಲಿ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ (HC Balakrishna) ತಿರುಗೇಟು ನೀಡಿದ್ದಾರೆ.
ನಟಿಗೆ ಈ ಹಿಂದೆ ಜಾಗ ಕೊಟ್ಟಿದ್ದೇ ಬಿಜೆಪಿ ಸರ್ಕಾರ. ಕೆಐಎಡಿಬಿಯಿಂದ (KIADB) ಜಾಗ ಕೊಟ್ಟ ಬಿಜೆಪಿ ಈಗ ನಮ್ಮ ವಿರುದ್ಧ ಆರೋಪ ಮಾಡ್ತಿದೆ. ಯಾರಾದ್ರೂ ಬಂದು ಸಹಕಾರ ಕೇಳ್ತಾರೆ. ಸಹಾಯ ಕೇಳಿಕೊಂಡು ಬಂದಾಗ ಯಾರು ಕಳ್ರು, ಯಾರು ಒಳ್ಳೆಯವರು ಗೊತ್ತಾಗಲ್ಲ. ಅವರು ಕದ್ದು ಸಿಕ್ಕಿಬಿದ್ದ ಮೇಲೆ ಕಳ್ಳರು ಅಂತ ಗೊತ್ತಾಗೋದು. ಆ ನಟಿಗೆ ಜಾಗ ಕೊಟ್ಟ ಬಿಜೆಪಿಗೆ ನಮ್ಮ ಮೇಲೆ ಆರೋಪ ಮಾಡುವ ನೈತಿಕತೆ ಇಲ್ಲ. ಈ ವಿಚಾರದಲ್ಲಿ ರಾಜಕೀಯ ಮಾಡ್ತಿದ್ದಾರೆ. ಅವರು ರಾಜಕೀಯಕ್ಕೆ ಬಂದಿರೋದು ಅಭಿವೃದ್ಧಿ ಮಾಡೋಕಲ್ಲ. ಕೇವಲ ಕ್ಷುಲ್ಲಕ ರಾಜಕಾರಣ ಮಾಡೊದಕ್ಕೆ ಅಷ್ಟೇ ಎಂದು ಬಿಜೆಪಿ ನಾಯಕರ ಆರೋಪಕ್ಕೆ ಹೆಚ್.ಸಿ ಬಾಲಕೃಷ್ಣ ಟಾಂಗ್ ನೀಡಿದ್ದಾರೆ.
ಇನ್ನೂ ರಾಜ್ಯ ಬಜೆಟ್ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದ ವಿಚಾರ ಕುರಿತು ಮಾತನಾಡಿದ ಅವರು, ಅಲ್ಪಸಂಖ್ಯಾತರಿಗೆ ಅನುದಾನ ಕೊಟ್ಟಿದ್ದಕ್ಕೆ ಬಿಜೆಪಿಯವ್ರು ಪ್ರತಿಭಟನೆ ಮಾಡಿದ್ದಾರೆ. ಅಲ್ಪಸಂಖ್ಯಾತರಿಗೆ ಕೊಟ್ಟಿರೋದು 4 ಸಾವಿರ ಕೋಟಿ, ನಮ್ಮ ಬಜೆಟ್ ಗಾತ್ರ 4 ಲಕ್ಷ ಕೋಟಿ. ಕೇವಲ ಒಂದು ಪರ್ಸೆಂಟ್ ಅಷ್ಟೇ ಕೊಟ್ಟಿದ್ದಕ್ಕೆ ಇವರಿಗೆ ಸಹಿಸಲು ಆಗ್ತಿಲ್ಲ. ಎಲ್ಲಾ ರೀತಿಯ ಅಭಿವೃದ್ಧಿಗೂ ಈ ಬಜೆಟ್ ಪೂರಕ. ಮಾಗಡಿಯಲ್ಲಿ ಆಸ್ಪತ್ರೆ ಅಭಿವೃದ್ಧಿಗೆ 45 ಕೋಟಿ ಹಣ ಕೊಟ್ಟಿದ್ದಾರೆ. ರಸ್ತೆ, ಮಾರುಕಟ್ಟೆ ಅಭಿವೃದ್ಧಿ, ರೇಷ್ಮೆ ಬೆಳೆಗೆ ಪ್ರೋತ್ಸಾಹ ಎಲ್ಲವನ್ನೂ ನಮ್ಮ ಸರ್ಕಾರ ಕೊಟ್ಟಿದೆ. ಮತ ನೀಡಿರೋ ಜನರಿಗೆ ಕೆಲಸ ಮಾಡ್ತಿದ್ದೇವೆ. ನಿಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆಯೂ ಹೇಳಿ ಸರಿ ಮಾಡ್ತೇವೆ. ಕೇವಲ ಜನರನ್ನ ದಿಕ್ಕುತಪ್ಪಿಸುವ ಕೆಲಸವನ್ನ ಬಿಜೆಪಿ ಮಾಡ್ತಿದೆ. ರಾಜ್ಯದಲ್ಲಿ 500 ಕೆಪಿಎಸ್ ಶಾಲೆಗಳನ್ನ ತೆರೆಯಲಾಗ್ತಿದೆ. ನಮ್ಮ ಜಿಲ್ಲೆಗೆ 30 ಪಬ್ಲಿಕ್ ಶಾಲೆಗಳು ಬರುತ್ತೆ. ಗ್ಯಾರಂಟಿ ಜೊತೆಗೆ ಅಭಿವೃದ್ಧಿಗೂ ಹಣ ನೀಡ್ತಿದ್ದೇವೆ ಎಂದು ಬಿಜೆಪಿ ಆರೋಪಕ್ಕೆ ಬಾಲಕೃಷ್ಣ ತಿರುಗೇಟು ನೀಡಿದ್ದಾರೆ.
ಇನ್ನೂ ಇದು ಸಿದ್ದರಾಮಯ್ಯನವರ ಕೊನೆಯ ಬಜೆಟ್ ಎಂಬ ಬಿಜೆಪಿ ಟೀಕೆ ವಿಚಾರ ಕುರಿತು ಮಾತನಾಡಿ, ಬಿಜೆಪಿಯವರಿಗೆ ಮಾತನಾಡುವ ತೆವಲು, ಮಾತನಾಡಲಿ. ಇದು ಕೊನೆಯದ್ದೋ ಅಥವಾ ಮೊದಲದ್ದೋ ತೀರ್ಮಾನ ಮಾಡೊದು ನಮ್ಮ ಹೈಕಮಾಂಡ್. ರಾಜ್ಯದಲ್ಲಿ ನಮ್ಮ ಯಜಮಾನಿಕೆ ನಡೆಯುತ್ತಿದೆ. ಈ ಮೂರು ವರ್ಷ ಅಲ್ಲದೇ ಇನ್ನೂ ಐದು ವರ್ಷ ನಮ್ಮ ಯಜಮಾನಿಕೆ ನಡೆಯುತ್ತೆ. ಕಾಂಗ್ರೆಸ್ ನವರು ಯಜಮಾನ ಆಗ್ತಾರೆ, ಯಜಮಾನ ಯಾರು ಅಂತ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಬಾಲಕೃಷ್ಣ ತಿಳಿಸಿದ್ದಾರೆ.
ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ (Gold Smuggling Case) ನಟಿ ರನ್ಯಾ ರಾವ್‌ಗೆ ಮಾರ್ಚ್ 24ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಕೋರ್ಟ್ (Court) ಆದೇಶಕ್ಕೂ ಮುನ್ನ ನಟಿಯನ್ನು ತೀವ್ರವಾಗಿ ವಿಚಾರಣೆ ನಡೆಸಲಾಯಿತು. ಈ ವೇಳೆ ಜಡ್ಜ್ ಮುಂದೆ ನಟಿ ಕಣ್ಣೀರಿಟ್ಟು ಗೋಳಾಡಿದರು.
ಡಿಆರ್‌ಐ ಸರಣಿ ಪ್ರಶ್ನೆಗಳಿಗೆ ತತ್ತರಿಸಿರುವ ನಟಿ ರನ್ಯಾ ರಾವ್ (Ranya Rao) ಮಾತು ಮಾತಿಗೂ ಕಣ್ಣೀರು ಇಡ್ತಿದ್ದಾರಂತೆ.. ಏನೇ ಪ್ರಶ್ನೆ ಕೇಳಿದ್ರೂ ಸರಿಯಾಗಿ ಉತ್ತರ ಕೊಡದ ರನ್ಯಾರಾವ್, ನನ್ನನ್ನು ಈ ಕೇಸ್ ನಲ್ಲಿ ಸಿಲುಕಿಸಲಾಗಿದೆ. ಈ ಹಿಂದೆ ಯಾವತ್ತೂ ಚಿನ್ನ ಸಾಗಟ ಮಾಡಿಲ್ಲ.. ನಂಗೇನು ಗೊತ್ತಿಲ್ಲ ಅಂತಷ್ಟೇ ಹೇಳ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವಿಚಾರಣೆ ವೇಳೆ ತೊಂದ್ರೆ ಕೊಡ್ತಿದ್ದಾರಾ? ಹಿಲ್ ಟ್ರೀಟ್ಮೆಂಟ್ ಕೊಟ್ಟಿದ್ದಾರಾ..? ಎಂದು ಜಡ್ಜ್ ಕೇಳಿದ್ದಕ್ಕೆ ಕಣ್ಣೀರಿಡುತ್ತಲೇ ಉತ್ತರಿಸಿದ ರನ್ಯಾ, ಮಾನಸಿಕವಾಗಿ ಬಹಳ ಹಿಂಸೆ ನೀಡಿದ್ದಾರೆ. ನಿನಗೆ ಇದ್ರಿಂದ ಏನಾಗುತ್ತೆ ಗೊತ್ತಾ ಅಂತ ಭಯ ಬೀಳಿಸಿದ್ದಾರೆ. ಸತ್ಯ ಒಪ್ಪಿಕೋ ಅಂತ ಹೆದರಿಸುತ್ತಿದ್ದಾರೆ. ತಲೆಗೆ ಸುತ್ತಿಗೆಯಲ್ಲಿ ಹೊಡೆದಂತೆ ಪ್ರಶ್ನೆ ಕೇಳ್ತಾರೆ, ಕೆಟ್ಟದಾಗಿ ಬೈಯ್ದಿದ್ದಾರೆ, ನಾನು ಏನು ಮಾಡಿಲ್ಲ ಅಂದ್ರು ಹಿಂಸೆ ಕೊಡ್ತಿದ್ದಾರೆ ಎಂದು ಗಳಗಳನೆ ಕಣ್ಣೀರಿಟ್ಟಿದ್ದಾರೆ. ಅಲ್ಲದೇ ನಾನು ಇದ್ರಿಂದ ಭಾವನಾತ್ಮಕವಾಗಿ ಕುಗ್ಗಿಹೋಗಿದ್ದೇನೆ ಎಂದು ಕೈ ಮುಗಿದು ಜಡ್ಜ್ ಮುಂದೆ ಬೇಡಿಕೊಂಡಿದ್ದಾರೆ.
ಇಂದು ಕಸ್ಟಡಿ ಅವಧಿ ಮುಗಿದ ಕಾರಣ ಆಕೆಯನ್ನು ಕೋರ್ಟ್ ಮುಂದೆ ಡಿಆರ್‌ಐ ಅಧಿಕಾರಿಗಳು ಹಾಜರುಪಡಿಸಿದ್ರು. ಈ ವೇಳೆ, ನನಗೆ ಟಾರ್ಚರ್ ಕೊಡ್ತಿದ್ದಾರೆ ಎಂದು ರನ್ಯಾ ಕಣ್ಣೀರಿಟ್ರು.. ಆದ್ರೆ, ಇದನ್ನು ತನಿಖಾಧಿಕಾರಿಗಳು ಅಲ್ಲಗಳೆದ್ರು. ಪ್ರಶ್ನೆ ಕೇಳೋದು ಕಿರುಕುಳ ಹೇಗಾಗುತ್ತೆ ಎಂದು ಪ್ರಶ್ನೆ ಮಾಡಿದ್ರು. ಕಡೆಗೆ, ರನ್ಯಾ ತನಿಖೆಗೆ ಅಸಹಕಾರ ಕೊಡ್ತಿದ್ದಾರೆ ಎಂದು ತೀರ್ಮಾನಿಸಿದ ನ್ಯಾಯಾಧೀಶರು, ಆಕೆಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿ ಆದೇಶ ನೀಡಿದ್ರು.
ರನ್ಯಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಡಿಆರ್‌ಐಗೆ ಸೂಚಿಸಿದ್ರು. ಈ ನಡ್ವೆ, ರನ್ಯಾರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ಸ್ಟಾರ್ ಹೋಟೆಲ್ ಮಾಲಿಕರೊಬ್ಬರ ಮೊಮ್ಮಗ ತರುಣ್‌ರಾಜ್‌ನನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದು, ಐದು ದಿನ ಕಸ್ಟಡಿಗೆ ಪಡೆದಿದ್ದಾರೆ. ಈತ ರನ್ಯಾ ರಾವ್‌ಗೆ ತರುಣ್ ಗೆಳೆಯ ಎನ್ನಲಾಗಿದೆ.
ಬೆಂಗಳೂರು: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ (Gold Smuggling) ಕೇಸ್‌ಗೆ ಸಂಬಂಧಿಸಿದಂತೆ ಸ್ಟಾರ್ ಮಾಲೀಕನ ಮೊಮ್ಮಗನನ್ನು ಡಿಆರ್‌ಐ (DRI) ಅಧಿಕಾರಿಗಳು ಬಂಧಿಸಿದ್ದಾರೆ.
ರನ್ಯಾ ರಾವ್ ಗೆಳೆಯನಾಗಿರುವ ತರುಣ್ ರಾಜ್‌ನನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದಾರೆ. ದುಬೈನಲ್ಲಿ ರನ್ಯಾ ಜೊತೆ ತರುಣ್ ರಾಜ್ ಇದ್ದ ಬಗ್ಗೆ ಡಿಆರ್‌ಐಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಸ್ಮಗ್ಲಿಂಗ್ ಬಗ್ಗೆ ತರುಣ್‌ರಾಜ್‌ನನ್ನು ಡಿಆರ್‌ಐ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಕಳೆದ ಎರಡು ದಿನಗಳಿಂದ ತರುಣ್ ರಾಜ್‌ಗೆ ಫುಲ್ ಡ್ರಿಲ್ ಮಾಡಿದ್ದಾರೆ. ಇದನ್ನೂ ಓದಿ: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಹಿಂದಿರುವ ಸಚಿವರ ಮಾಹಿತಿ ಬಹಿರಂಗಪಡಿಸಿ: ಬಿವೈವಿ
ತರುಣ್ ರಾಜ್ ದುಬೈ ಅಲ್ಲಿ ಕೂಡ ಆರ್ಥಿಕ ವ್ಯವಹಾರ ಹೊಂದಿದ್ದ. ರನ್ಯಾ ಜೊತೆ ನಿಕಟ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ತರುಣ್ ರಾಜ್‌ನನ್ನು ಬಂಧಿಸಿದ ಡಿಆರ್‌ಐ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದೆ. ವಿಚಾರಣೆ ನಡೆಸಿದ ನ್ಯಾಯಾಧೀಶರು ತರುಣ್ ರಾಜ್‌ನನ್ನು 5 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ಮಾ.15ರವರಗೆ ತರುಣ್ ರಾಜ್‌ನನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇದನ್ನೂ ಓದಿ: ತೂಕ ಹೆಚ್ಚಾಗೋ ಭಯ, ಐದಾರು ತಿಂಗಳು ಊಟವಿಲ್ಲ, ಬರೀ ನೀರು – ಯೂಟ್ಯೂಬ್ ನೋಡಿ ಡಯಟ್ ಮಾಡ್ತಿದ್ದ ಕೇರಳ ಯುವತಿ ಸಾವು!
ಬೆಂಗಳೂರು: ರನ್ಯಾ ರಾವ್ (Ranya Rao) ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಹಿಂದೆ ಕೆಲವು ಸಚಿವರು ಇರುವ ಮಾಹಿತಿ ಇದ್ದು, ಅಂಥ ಸಚಿವರ ಹೆಸರನ್ನು ಬಹಿರಂಗಪಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B Y Vijayendra) ಅವರು ಸಿಎಂಗೆ ಆಗ್ರಹಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾದ ರನ್ಯಾ ರಾವ್ ಹಿಂದೆ ಅನೇಕ ಘಟಾನುಘಟಿಗಳಿದ್ದಾರೆ ಎಂಬ ಅಂಶ ಹೊರಕ್ಕೆ ಬರುತ್ತಿದೆ. ಇದೇನೂ ಸಣ್ಣ ಘಟನೆಯಲ್ಲ. ರನ್ಯಾ ರಾವ್ ಕಳೆದ ಕೆಲವು ತಿಂಗಳುಗಳಲ್ಲಿ 30ಕ್ಕೂ ಹೆಚ್ಚು ಬಾರಿ ದುಬೈಗೆ ಹಾಗೂ ಬೇರೆ ಬೇರೆ ದೇಶಗಳಿಗೆ ಹೋಗಿ ಬಂದ ಮಾಹಿತಿ ಹೊರಬಿದ್ದಿದೆ. ಪ್ರತಿ ಬಾರಿಯೂ ಬೆಂಗಳೂರಿಗೆ ಮರಳಿ ಬಂದಾಗ ಸಂಪೂರ್ಣವಾದ ಪ್ರೋಟೋಕಾಲ್ ವ್ಯವಸ್ಥೆ ನೀಡುತ್ತಿದ್ದರು ಎಂದು ಆರೋಪಿಸಿದರು. ಇದನ್ನೂ ಓದಿ: ತೂಕ ಹೆಚ್ಚಾಗೋ ಭಯ, ಐದಾರು ತಿಂಗಳು ಊಟವಿಲ್ಲ, ಬರೀ ನೀರು – ಯೂಟ್ಯೂಬ್ ನೋಡಿ ಡಯಟ್ ಮಾಡ್ತಿದ್ದ ಕೇರಳ ಯುವತಿ ಸಾವು!
ರನ್ಯಾ ರಾವ್ ಒಬ್ಬ ಹಿರಿಯ ಐಪಿಎಸ್ ಅಧಿಕಾರಿಯ ಮಗಳು. ಏರ್‌ಪೋರ್ಟ್‌ಗೆ ವಾಪಸ್ ಬಂದಾಗ ವಿಮಾನ ನಿಲ್ದಾಣದಿಂದ ಪೊಲೀಸರೇ ಎಸ್ಕಾರ್ಟ್ ನೀಡಿ ಕರೆದೊಯ್ಯುತ್ತಿದ್ದರು. ಆಕೆ ಸಾಮಾನ್ಯ ಮಹಿಳೆ ಅಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ‘ಜೈಲರ್ 2’ ಸಿನಿಮಾ ಶೂಟಿಂಗ್ ಪ್ರಾರಂಭ- ತಲೈವಾ ಭಾಗಿ
ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಪ್ರೋಟೋಕಾಲ್ ಸಿಗುತ್ತದೆ. ಸೆಕ್ಯುರಿಟಿ ತಪಾಸಣೆ ಆಗುವುದಿಲ್ಲ ಎಂದಾದರೆ, ಇದರ ಹಿಂದೆ ಕೆಲವು ಘಟಾನುಘಟಿಗಳಿದ್ದಾರೆ. ಅಲ್ಲದೇ ಕೆಲವು ಸಚಿವರಿದ್ದಾರೆ ಎಂಬುದು ಕೂಡ ಹೊರಕ್ಕೆ ಬರುತ್ತಿದೆ. ಈಗಾಗಲೇ ಸಿಬಿಐ, ಇ.ಡಿ. ತನಿಖೆ ನಡೆಯುತ್ತಿದೆ. ಈ ಗಂಭೀರ ಪ್ರಕರಣದ ಹಿಂದಿರುವವರ ಮಾಹಿತಿ ಮುಖ್ಯಮಂತ್ರಿಗಳಿಗೆ ಇದ್ದೇ ಇರುತ್ತದೆ ಎಂದರು. ಇದನ್ನೂ ಓದಿ: ಜಿಲ್ಲಾಸ್ಪತ್ರೆಗಳಲ್ಲಿ ಗುಣಮಟ್ಟದ ಔಷಧಿ ಸರಬರಾಜಿಗೆ ಕ್ರಮ: ದಿನೇಶ್ ಗುಂಡೂರಾವ್
ಸ್ಮಗ್ಲಿಂಗ್ ಹಿಂದೆ ಇರುವ ಹವಾಲಾ ನಿರತರು, ಚಿನ್ನ ಕಳ್ಳಸಾಗಾಟದ ಮಾಫಿಯಾಗಳು, ಬೆಂಬಲ ಕೊಟ್ಟ ರಾಜಕಾರಣಿಗಳು, ಮಂತ್ರಿಗಳು, ಮಾಜಿ ಮಂತ್ರಿಗಳು, ಶಾಸಕರು, ಮಾಜಿ ಶಾಸಕರು ಯಾರೆಂಬುದನ್ನು ಸಿಎಂ ಅವರು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಕೇಸ್ – ನಟಿ ರನ್ಯಾಗೆ 15 ದಿನಗಳ ನ್ಯಾಯಾಂಗ ಬಂಧನ
ಒಬ್ಬ ಹಿರಿಯ ಐಪಿಎಸ್ ಪೊಲೀಸ್ ಅಧಿಕಾರಿ ಮಗಳ ನೇತೃತ್ವದಲ್ಲಿ ಇಷ್ಟು ದೊಡ್ಡ ಚಿನ್ನ ಕಳ್ಳಸಾಗಾಟ ನಡೆದಿರುವುದನ್ನು ನಾವೆಂದೂ ಕೇಳಿರಲಿಲ್ಲ. ಇದು ಗಂಭೀರ ಸ್ವರೂಪ ಪಡೆದುಕೊಂಡಿದೆ. ಇಲ್ಲಿ ಶಕ್ತಿಶಾಲಿ ಮುಖ್ಯಮಂತ್ರಿ ಇದ್ದು, ಅವರಿಗೆ ಪ್ರಕರಣದ ಮಾಹಿತಿ ಇರುತ್ತದೆ. ಅವರು ಅದನ್ನು ಬಹಿರಂಗಪಡಿಸಲಿ. ಇದು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸವೂ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.