Tag: ಗೋಲ್ಡ್

  • PUBLiC TV Explainer| ಅಮೆರಿಕ Vs ಚೀನಾ – ಏನಿದು ಗೋಲ್ಡ್‌ ಬಾಂಬ್‌? ವಿಶ್ವದ ಮೇಲೆ ಪರಿಣಾಮ ಏನು?

    PUBLiC TV Explainer| ಅಮೆರಿಕ Vs ಚೀನಾ – ಏನಿದು ಗೋಲ್ಡ್‌ ಬಾಂಬ್‌? ವಿಶ್ವದ ಮೇಲೆ ಪರಿಣಾಮ ಏನು?

    ಡಿಯನ್ನು ಹಂಚಿಕೊಂಡಿರುವ ಎರಡು ದೇಶಗಳ ಸೈನಿಕರು ಕಾದಾಟ ಮಾಡುವ ಕಾಲ ಹೋಯ್ತು. ಯುದ್ಧ ವಿಮಾನಗಳು, ಡ್ರೋನ್‌ಗಳು ಈಗ ಸೈನಿಕರ ಸ್ಥಾನವನ್ನು ತುಂಬಿದೆ. ಆದರೆ ಗಡಿಯನ್ನೇ ಹಂಚಿಕೊಳ್ಳದ ದೇಶಗಳು ಈಗ ಕಾದಾಟಕ್ಕೆ ಇಳಿದಿದೆ. ಎರಡು ದೇಶಗಳು ಮಿಲಿಟರಿಯಲ್ಲಿ ಬಲಿಷ್ಠವಾಗಿದ್ದರೂ ಅವುಗಳ ಸೈನಿಕರು ಪರಸ್ಪರ ಕಾದಾಡುತ್ತಿಲ್ಲ. ಬದಲಾಗಿ ಕರೆನ್ಸಿ ವಾರ್‌ನಲ್ಲಿ ಗೋಲ್ಡ್‌ ಬಾಂಬ್‌ ಪ್ರಯೋಗಕ್ಕೆ ವೇದಿಕೆ ಸಿದ್ಧವಾಗಿದೆ.

    ಹೌದು. ಅಮೆರಿಕ ಮತ್ತು ಚೀನಾದ (China) ಕಿತ್ತಾಟ ಈಗ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಕಾಣುತ್ತಿದೆ. ನಮ್ಮ ಒತ್ತಡಕ್ಕೆ ಬಗ್ಗದೇ ಇದ್ದರೆ ಚೀನಾದ ಮೇಲೆ 145% ಸುಂಕ ವಿಧಿಸುತ್ತೇವೆ ಎಂದು ಟ್ರಂಪ್‌ (Donald Trump) ಬೆದರಿಕೆ ಹಾಕಿದ್ದಾರೆ. ಟ್ರಂಪ್‌ ಬೆದರಿಕೆ ಬಗ್ಗದ ಚೀನಾ ಡಾಲರ್‌ (Dollar) ವಿರುದ್ಧ ಹೋರಾಡಲು ಗೋಲ್ಡ್‌ ಬಾಂಬ್‌ ಬಳಸಲು ಮುಂದಾಗಿದೆ. ಈ ʼಬಾಂಬ್‌ʼ ಪ್ರಯೋಗ ಯಶಸ್ವಿಯಾದರೆ ವಿಶ್ವದ ಆರ್ಥಿಕತೆ ಏರುಪೇರಾಗುವ ಸಾಧ್ಯತೆಯಿದೆ. ಹೀಗಾಗಿ ಇಲ್ಲಿ ಏನಿದು ಗೋಲ್ಡ್‌ ಬಾಂಬ್‌? ಚೀನಾದ ತಂತ್ರ ಏನು? ಅಮೆರಿಕದ ಡಾಲರ್‌ (Dollar) ವಿಶ್ವದ ಕರೆನ್ಸಿಯಾಗಿದ್ದು ಹೇಗೆ ಇತ್ಯಾದಿ ವಿಚಾರಗಳನ್ನು ವಿವರಿಸಲಾಗಿದೆ.

    ಏನಿದು ಕರೆನ್ಸಿ ವಾರ್?‌
    ವಿಶ್ವದ ಆರ್ಥಿಕತೆಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕಕ್ಕೆ ದೊಡ್ಡಣ್ಣನ ಪಟ್ಟ ಸಿಗಲು ಕಾರಣ ಯಾವುದು ಎಂದರೆ ಅದು ಡಾಲರ್‌. ಜಗತ್ತಿನ ವ್ಯವಹಾರಗಳು ಡಾಲರ್‌ನಲ್ಲೇ ನಡೆಯುತ್ತಿರುವ ಕಾರಣ ಅಮೆರಿಕ ಶ್ರೀಮಂತ ದೇಶವಾಗಿ ಹೊರಹೊಮ್ಮಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಿಲಿಟರಿ ಬಳಸಿ ಅಮೆರಿಕವನ್ನು ಸೋಲಿಸಲು ಸಾಧ್ಯವಿಲ್ಲ. ಹೀಗಾಗಿ ಡಾಲರ್‌ ಮೌಲ್ಯವನ್ನೇ ಕುಗ್ಗಿಸಲು ಚೀನಾ ಈಗ ಚಿನ್ನದ ಬಾಂಬ್‌ ಪ್ರಯೋಗಕ್ಕೆ ಮುಂದಾಗಿದೆ.

    ಚೀನಾಗೆ ಸಿಟ್ಟು ಯಾಕೆ?
    ನಾವು ಅಭಿವೃದ್ಧಿ ಪಡಿಸಿದ ವಸ್ತುಗಳನ್ನು ಚೀನಾ ನಕಲಿ ಮಾಡಿ ಮೋಸ ಮಾಡುತ್ತಿದೆ ಎಂದು ಹಿಂದಿನಿಂದಲೂ ಅಮೆರಿಕ ಆರೋಪಿಸಿಕೊಂಡೇ ಬಂದಿದೆ. ಈಗ ಟ್ರಂಪ್‌ ಅಧಿಕಾರಕ್ಕೆ ಏರಿದ ಬಳಿಕ ಭಾರೀ ಪ್ರಮಾಣದಲ್ಲಿ ಲಾಬಿ ಮಾಡುತ್ತಿದ್ದು ಅವರ ಲಾಬಿಗೆ ಮಣಿಯದೇ ಇದ್ದರೆ ಸುಂಕಾಸ್ತ್ರವನ್ನು ಪ್ರಯೋಗ ಮಾಡುತ್ತಿದ್ದಾರೆ. ಈ ಕಾರಣಕ್ಕೆ ವಿಶ್ವದ ಸ್ಟಾಕ್‌ ಮಾರ್ಕೆಟ್‌ ಪತನಗೊಳ್ಳುತ್ತಿದೆ. ಈಗ ಮತ್ತೆ ಇರಾನ್‌ನಿಂದ ಕಚ್ಚಾ ತೈಲ, ಎಲ್‌ಎನ್‌ಜಿ ಖರೀದಿ ಮಾಡುವುದನ್ನು ನಿಲ್ಲಿಸದೇ ಇದ್ದರೆ ಚೀನಾದಿಂದ ಆಮದಾಗುವ 155% ಸುಂಕ ವಿಧಿಸುವುದಾಗಿ ಬೆದರಿಸಿದ್ದಾರೆ.

    ಟ್ರಂಪ್‌ (Donald Trump) ಈ ರೀತಿಯ ನಿರಂತರ ಬೆದರಿಕೆಯಿಂದಾಗಿ ಚೀನಾದ ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆ ಕಡಿಮೆ ಆಗುತ್ತಿದೆ. ನಿರೀಕ್ಷೆಯ ಪ್ರಕಾರ ಮೂರನೇ ತ್ರೈಮಾಸಿಕದಲ್ಲಿ ಚೀನಾದ ಜಿಡಿಪಿ ಬೆಳವಣಿಗೆ ದರ ಕಡಿಮೆಯಾಗಿದೆ. ಈ ವರ್ಷ 5% ಬೆಳವಣಿಗೆ ಸಾಧಿಸುವ ಗುರಿಯನ್ನು ಹಾಕಿಕೊಂಡಿದ್ದ ಚೀನಾ ಮೂರನೇ ತ್ರೈಮಾಸಿಕದಲ್ಲಿ 4.8% ಬೆಳವಣಿಗೆ ಸಾಧಿಸಿದೆ. ಇದೇ ರೀತಿ ವ್ಯಾಪಾರ ಸಮರ ಮುಂದುವರಿದರೆ ಚೀನಾದ ಜಿಡಿಪಿ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ. ಈ ಕಾರಣಕ್ಕೆ ಚೀನಾ ಈಗ ಅಮೆರಕದ ಡಾಲರ್‌ ಮೌಲ್ಯವನ್ನೇ ಕುಗ್ಗಿಸಲು ಮುಂದಾಗಿದೆ.

    ಏನಿದು ಗೋಲ್ಡ್‌ ಬಾಂಬ್‌?
    ಡಾಲರ್‌ ಏಕಸ್ವಾಮ್ಯವನ್ನು ಕುಗ್ಗಿಸಲು ಮತ್ತು ಟ್ರಂಪ್‌ ಅವರ ಮೇಕ್‌ ಅಮೆರಿಕ ಗ್ರೇಟ್‌ ಅಗೇನ್‌ ಯೋಜನೆಯನ್ನು ಕುಸಿಯುವಂತೆ ಮಾಡಲು ಚೀನಾ ಮೂರು ರೀತಿಯ ತಂತ್ರ ಮಾಡಿದೆ. ಒಂದನೇಯದ್ದು ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್‌ ರಿಸರ್ವ್‌ನಲ್ಲಿರುವ ತನ್ನ ಡಾಲರ್‌ ಬಾಂಡ್‌ ಅನ್ನು ಮಾರಾಟ ಮಾಡುತ್ತಿದೆ. 2020 ರಲ್ಲಿ 1,120 ಬಿಲಿಯನ್‌ ಡಾಲರ್‌ ಇದ್ದರೆ 2025ರ ವೇಳೆಗೆ ಇದು 760 ಬಿಲಿಯನ್‌ ಡಾಲರ್‌ಗೆ ಇಳಿಕೆಯಾಗಿದೆ. ಚೀನಾ ಮಾತ್ರವಲ್ಲ ಭಾರತ,‌ ಬ್ರೆಜಿಲ್‌ ಸೇರಿದಂತೆ ಹಲವು ದೇಶಗಳು ಡಾಲರ್‌ ಬಾಂಡ್‌ ಮಾರಾಟ ಮಾಡುತ್ತಿದೆ. ಈ ಕ್ರಮದಿಂದಾಗಿ ಚೀನಾದ ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆಯಾಗುತ್ತದೆ ಮತ್ತು ಅಮೆರಿಕದ ಆರ್ಥಿಕ ಹಿಡಿತವನ್ನು ದುರ್ಬಲಗೊಳಿಸುತ್ತದೆ

    ಎರಡನೇಯದ್ದು ಚೀನಾ ಈಗ ಇತರ ದೇಶಗಳಿಗೆ ಶಾಂಘೈ ಚಿನ್ನದ ವಿನಿಮಯ ಕೇಂದ್ರದ ಮೂಲಕ ತಮ್ಮ ಚಿನ್ನವನ್ನು ಸಂಗ್ರಹಿಸುವ ಸೌಲಭ್ಯವನ್ನು ನೀಡುತ್ತಿದೆ. ಇಲ್ಲಿಯವರೆಗೆ ಅಮೆರಿಕ ಮಾತ್ರ ಈ ಸವಲತ್ತನ್ನು ಒದಗಿಸಿತ್ತು. ಇದರಿಂದಾಗಿ ಡಾಲರ್‌ ಬಲಗೊಳ್ಳುತ್ತಿತ್ತು. ಆದರೆ ಈಗ ಚಿನ್ನದ ಠೇವಣಿ ಇರಿಸುವ ಸೌಲಭ್ಯ ನೀಡಿದ ಕಾರಣ ತನ್ನ ಚೀನಾ ಕರೆನ್ಸಿ ಯುವಾನ್‌ ಬಲಗೊಳ್ಳಲಿದೆ. ಒಂದು ದೇಶದ ಒಳಗಡೆ ವಿದೇಶಿ ಹೂಡಿಕೆ ಜಾಸ್ತಿಯಾದಂತೆ ಆ ದೇಶದ ಕರೆನ್ಸಿ ಬಲವಾಗುತ್ತದೆ. ವರ್ಷದಿಂದ ವರ್ಷಕ್ಕೆ ಚೀನಾ ತನ್ನ ಚಿನ್ನದ ಮೀಸಲು ನಿಧಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಿದೆ. 2020 ರಲ್ಲಿ ಚೀನಾದ ಬಳಿ 1,948.3 ಮೆಟ್ರಿಕ್‌ ಟನ್‌ ಚಿನ್ನ ಇದ್ದರೆ 2025 ರ ವೇಳೆ ಇದು 2,279.6 ಮೆಟ್ರಿಕ್‌ ಟನ್‌ಗೆ ಏರಿಕೆಯಾಗಿದೆ. ಇದನ್ನೂ ಓದಿ:  ಭಾರತದ ಬಳಿಕ ಪಾಕ್‌ಗೆ ನೀರಿನ‌ ಹರಿವು ತಡೆಯಲು ಪ್ಲ್ಯಾನ್‌ – ಅಣೆಕಟ್ಟು ನಿರ್ಮಿಸಲು ಮುಂದಾದ ಅಫ್ಘಾನ್

    ಕಮ್ಯೂನಿಸ್ಟ್‌ ಸರ್ಕಾರ ಆಗಿರುವ ಕಾರಣ ಚೀನಿ ಜನತೆ ಜಾಗದ ಮೇಲೆ ಹೂಡಿಕೆ ಮಾಡುವುದಿಲ್ಲ. ಬದಲಾಗಿ ರಿಯಲ್‌ ಎಸ್ಟೇಟ್‌ ಹೂಡಿಕೆಗಳಲ್ಲಿ ಹೂಡಿಕೆ ಮಾಡುತ್ತಿದ್ದರು. ಆದರೆ ಕೋವಿಡ್‌ ನಂತರ ರಿಯಲ್‌ ಎಸ್ಟೇಟ್‌ ಉದ್ಯಮ ಸಮಸ್ಯೆಗೆ ಸಿಲುಕಿದ್ದು ಜನ ಈಗ ಭಾರೀ ಪ್ರಮಾಣದಲ್ಲಿ ಚಿನ್ನ ಖರೀದಿ ಮಾಡಲು ಆರಂಭಿಸಿದ್ದಾರೆ. ಪರಿಣಾಮ 2024 ರಲ್ಲಿ ಚೀನಾ 103 ಬಿಲಿಯನ್‌ ಡಾಲರ್‌ ಮೌಲ್ಯದ ಚಿನ್ನವನ್ನು ಆಮದು ಮಾಡಿತ್ತು.

    ಮೂರನೇಯದ್ದು ಮೂಲಸೌಕರ್ಯದಲ್ಲಿ ಮುಂಚೂಣಿಯಲ್ಲಿರುವ ಚೀನಾ ಬ್ರಿಕ್ಸ್ ದೇಶಗಳೊಂದಿಗೆ ಚಿನ್ನದ ಬೆಂಬಲಿತ ವ್ಯವಸ್ಥೆಯನ್ನು ಪರಿಚಯಿಸಲು ಯೋಜಿಸಿದೆ. ಇದರ ಜೊತೆ ಬ್ರಿಕ್ಸ್‌ ದೇಶಗಳು ಡಾಲರ್‌ಗೆ ಬದಲಾಗಿ ಹೊಸ ಬ್ರಿಕ್ಸ್‌ ಕರೆನ್ಸಿಯನ್ನು ತರುವ ಪ್ಲ್ಯಾನ್‌ ಮಾಡಿದೆ. ಒಂದು ವೇಳೆ ಬ್ರೆಜಿಲ್‌, ರಷ್ಯಾ, ಚೀನಾ, ಭಾರತ, ದಕ್ಷಿಣ ಆಫ್ರಿಕಾ ಒಂದಾಗಿ ಈ ನಿರ್ಧಾರ ಪ್ರಕಟಿಸಿದರೆ ಡಾಲರ್‌ ಮೌಲ್ಯ ಭಾರೀ ಕುಸಿಯಲಿದೆ.

     

    ವಿಶ್ವದ ಮೇಲೆ ಪರಿಣಾಮ ಏನು?
    ಈಗಾಗಲೇ ಭಾರತದ ಸೇರಿದಂತೆ ಹಲವು ದೇಶಗಳು ಚಿನ್ನದ ಮೀಸಲು ನಿಧಿಯನ್ನು ಹೆಚ್ಚಿಸುತ್ತಿದೆ. ಚೀನಾ ಭಾರೀ ಪ್ರಮಾಣದಲ್ಲಿ ಚಿನ್ನದ ಖರೀದಿಸಲು ಮುಂದಾದರೆ ಚಿನ್ನದ ಮೇಲೆ ಮತ್ತಷ್ಟು ಏರಿಕೆಯಾಗಲಿದೆ.

    ಡಾಲರ್‌ ವಿಶ್ವದ ಕರೆನ್ಸಿಯಾಗಿದ್ದು ಹೇಗೆ?
    1914 ರಿಂದ 1919 ವರೆಗೆ ಮೊದಲ ಮಹಾಯುದ್ಧ ನಡೆದರೆ 1939 ರಿಂದ 1945ರವರೆಗೆ ಎರಡನೇ ಮಹಾಯುದ್ಧ ನಡೆಯಿತು. ಎರಡನೇ ಮಹಾಯುದ್ಧಕ್ಕೆ ಅಮೆರಿಕ ತಡವಾಗಿ ಪ್ರವೇಶ ಮಾಡಿದರೂ ಯುಕೆ, ಯುಎಸ್‌ಎಸ್‌ಆರ್‌ ಸೇರಿದಂತೆ ಮಿತ್ರ ರಾಷ್ಟ್ರಗಳಿಗೆ ದೊಡ್ಡ ಆನೆ ಬಲ ಬಂತು. ಆದರೆ ಎರಡು ಯುದ್ಧಗಳಿಂದ ಮಿತ್ರ ರಾಷ್ಟ್ರಗಳ ಮಧ್ಯೆ ವ್ಯವಹಾರಕ್ಕೆ ಬಹಳ ಸಂಕಷ್ಟ ಎದುರಾಯ್ತು. ಯಾಕೆಂದರೆ ಒಂದೊಂದು ರಾಷ್ಟ್ರದಲ್ಲಿ ಒಂದೊಂದು ಕರೆನ್ಸಿ ಇತ್ತು. ಈ ಸಮಸ್ಯೆ ಪರಿಹಾರಕ್ಕೆ ಅಮೆರಿಕದಲ್ಲಿ ಬ್ರೆಟ್ಟನ್‌ವುಡ್ಸ್‌ ಒಪ್ಪಂದಕ್ಕೆ 44 ದೇಶಗಳು ಸಹಿ ಹಾಕಿದವು.

    ಈ ಒಪ್ಪಂದದ ಪ್ರಕಾರ ವ್ಯವಹಾರಕ್ಕೆ ಅಮೆರಿಕ ಡಾಲರ್‌ ಅನ್ನು ಎಲ್ಲಾ ದೇಶಗಳು ಬಳಸಲು ಅಧಿಕೃತ ಒಪ್ಪಿಗೆ ಸಿಕ್ಕಿತು. ಒಂದು ಔನ್ಸ್‌ ಅಥವಾ 28.35 ಗ್ರಾಂ ಚಿನ್ನಕ್ಕೆ 35 ಡಾಲರ್‌ ದರವನ್ನು ನಿಗದಿ ಮಾಡಲಾಗಿತ್ತು. ಈ ಚಿನ್ನದ ಒಪ್ಪಂದಕ್ಕೆ ಬಂದಿದ್ದು ಯಾಕೆ ಎನ್ನುವುದಕ್ಕೆ ಕಾರಣವಿದೆ. 1910ರಲ್ಲಿ 2 ಸಾವಿರ ಟನ್‌ ಚಿನ್ನ ಅಮೆರಿಕದಲ್ಲಿ ಇದ್ದರೆ ತನ್ನ ಎಲ್ಲಾ ವ್ಯವಹಾರಗಳಿಂದ 1940ರ ವೇಳೆಗೆ ಇದು 20 ಸಾವಿರ ಟನ್‌ಗೆ ಏರಿಕೆಯಾಗಿತ್ತು. ಮಾಹಿತಿಗಳ ಪ್ರಕಾರ ವಿಶ್ವದ 75% ಚಿನ್ನ ಅಮೆರಿಕದ ಬಳಿ ಇತ್ತು. ಚಿನ್ನ ಹೊಂದಿದ್ದವವೇ ಬಾಸ್‌ ಎನ್ನುವಂತೆ ಅಮೆರಿಕ ಡಾಲರ್‌ ವಿಶ್ವದ ಕರೆನ್ಸಿಯಾಗತೊಡಗಿತು. ಇದರಿಂದ ಬೇರೆ ದೇಶಗಳಿಗೆ ಲಾಭ ಇತ್ತು. ಆ ಸಮಯದಲ್ಲಿ ಯಾವ ದೇಶದ ಆರ್ಥಿಕ ಪರಿಸ್ಥಿತಿ ಹೇಗಿರುತ್ತದೆ ಹೇಳಲು ಸಾಧ್ಯವಿರಲಿಲ್ಲ. ಎರಡು ದೇಶಗಳ ಕರೆನ್ಸಿ ಮಧ್ಯೆ ವ್ಯವಹಾರ ಸಾಧ್ಯವಿರಲಿಲ್ಲ. ಒಂದು ವೇಳೆ ಕರೆನ್ಸಿ ಅಪಮೌಲ್ಯವಾದರೆ ಭಾರೀ ಸಮಸ್ಯೆಯಾಗುವ ಸಾಧ್ಯತೆ ಇತ್ತು.

    ಭವಿಷ್ಯದಲ್ಲಿ ಕಚ್ಚಾತೈಲ ವಿಶ್ವವವನ್ನೇ ಆಳಲಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ಸೌದಿ ಅರೇಬಿಯಾದ ಜೊತೆ ಅಮೆರಿಕ 1974 ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದಕ್ಕೆ ಅಮೆರಿಕ ಷರತ್ತು ವಿಧಿಸಿತ್ತು. ನಿಮ್ಮ ಎಲ್ಲಾ ತೈಲ ಬಾವಿಗಳಿಗೆ ನಾವು ರಕ್ಷಣೆ ನೀಡುತ್ತೇವೆ. ಆದರೆ ಕಚ್ಚಾ ತೈಲ ವ್ಯವಹಾರ ಎಲ್ಲವನ್ನು ಡಾಲರ್‌ನಲ್ಲೇ ನಡೆಸಬೇಕು ಎಂದು ಹೇಳಿತ್ತು. ಈ ಷರತ್ತಿಗೆ ಒಪ್ಪಿಗೆ ನೀಡಿದ್ದರಿಂದ ಡಾಲರ್‌ ಸುಲಭವಾಗಿ ವಿಶ್ವದ ಕರೆನ್ಸಿಯಾಗತೊಡಗಿತು.

    ಸ್ವಿಫ್ಟ್ ಬ್ಯಾಂಕಿಂಗ್‌- ಡಾಲರ್‌ ಶೈನಿಂಗ್‌
    ಯೆಟ್ನಾಂ ಯುದ್ಧ, ಚಿನ್ನದ ಬೆಲೆ ಏರಿಕೆ, ಅಮೆರಿಕದ ಚಿನ್ನ ಸಂಗ್ರಹ ಕರಗಿದ ಬೆನ್ನಲ್ಲೇ ಅಮೆರಿಕ 1971ರಲ್ಲಿ ಬ್ರೆಟ್ಟನ್‌ ವುಡ್ಸ್‌ ಒಪ್ಪಂದವನ್ನು ರದ್ದು ಮಾಡುತ್ತದೆ. ರದ್ದು ಮಾಡಿದ ಬೆನ್ನಲ್ಲೇ ಇಡಿ ವಿಶ್ವದಲ್ಲಿ ವ್ಯವಹಾರ ಹೇಗೆ ನಡೆಸುವುದು ಎಂಬ ಗಂಭೀರ ಪ್ರಶ್ನೆ ಏಳುತ್ತದೆ. ಈ ಸಂದರ್ಭದಲ್ಲಿ ಯುಕೆಯ ಪೌಂಡ್‌, ಚೀನಾದ ಯುವಾನ್‌ ಎಲ್ಲವೂ ಪ್ರವರ್ಧಮಾನಕ್ಕೆ ಬರುತ್ತದೆ. ಕೊನೆಗೆ ದೇಶ ದೇಶಗಳ ಮಧ್ಯೆ ಚರ್ಚೆ ನಡೆದು ಕೊನೆಗೆ 1973 ರಲ್ಲಿ ಒಂದು ಸಂಸ್ಥೆ ಆರಂಭವಾಗುತ್ತದೆ. ಅದುವೇ SWIFT. Society for Worldwide Interbank Financial Telecommunication ಸಂಸ್ಥೆ. ಆರಂಭದಲ್ಲಿ ಇದು ಯುರೋಪ್‌ ಮತ್ತು ಅಮೆರಿಕದ ಬ್ಯಾಂಕ್‌ಗಳ ಮಧ್ಯೆ ನಡೆದ ಒಪ್ಪಂದ ಆಗಿತ್ತು.

    SWIFT ಇದು ಅಂತರಾಷ್ಟ್ರೀಯ ನಗದು ವ್ಯವಹಾರಗಳ ಸಂಸ್ಥೆಯಾಗಿದ್ದು, ವಿವಿಧ ದೇಶಗಳ ನಡುವೆ ವೇಗವಾಗಿ ನಗದು ವ್ಯವಹಾರ ನಡೆಯಲು ನೆರವಾಗುವಂತಹ ವ್ಯವಸ್ಥೆ ಸ್ವಿಫ್ಟ್‌ನಲ್ಲಿದೆ. 1973ರಲ್ಲಿ ಬೆಲ್ಜಿಯಂನಲ್ಲಿ ಸ್ವಿಫ್ಟ್ ನೆಟ್‍ವರ್ಕ್‌ ಆರಂಭವಾಯಿತು.

    ಇಲ್ಲೂ ಡಾಲರನ್ನೇ ಯಾಕೆ ಪರಿಗಣಸಿಲಾಯಿತು ಎನ್ನುವುದಕ್ಕೂ ಕಾರಣವಿದೆ.ಭವಿಷ್ಯದಲ್ಲಿ ಯುರೋಪ್‌ ದೇಶಗಳ ಮೇಲೆ ಯಾರೇ ಆಕ್ರಮಣ ಮಾಡಿದರೂ ನಾನು ರಕ್ಷಣೆ ನೀಡುತ್ತೇನೆ ಎಂದು ಅಮೆರಿಕ ಭರವಸೆ ನೀಡಿತ್ತು. ಪರಿಣಾಮ North Atlantic Treaty Organization 1949ರಲ್ಲಿ ಜನ್ಮ ತಾಳಿತ್ತು. ಎರಡನೇ ಮಹಾಯದ್ಧದ ಬಳಿಕ ಯುರೋಪ್‌ ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು ನಿಧನವಾಗಿ ಚೇತರಿಕೆ ಕಾಣುತ್ತಿತ್ತು. ಈ ಸಂದರ್ಭದಲ್ಲಿ ಅಮೆರಿಕ ಮತ್ತು ರಷ್ಯಾ ಮಧ್ಯೆ ಶೀತಲ ಸಮರ ನಡೆಯುತ್ತಿತ್ತು. ಈ ಕಾರಣಕ್ಕೆ ಯುರೋಪ್‌ ರಾಷ್ಟ್ರಗಳು ಸ್ವಿಫ್ಟ್‌ ನೀತಿಯನ್ನು ಒಪ್ಪಿಕೊಂಡವು.

  • ಗೋಲ್ಡ್ ರಿಕವರಿಗೆ ಬಂದ ತಮಿಳುನಾಡು ಪೊಲೀಸರು ಚಿಕ್ಕಬಳ್ಳಾಪುರದಲ್ಲಿ ಲಾಕ್

    ಗೋಲ್ಡ್ ರಿಕವರಿಗೆ ಬಂದ ತಮಿಳುನಾಡು ಪೊಲೀಸರು ಚಿಕ್ಕಬಳ್ಳಾಪುರದಲ್ಲಿ ಲಾಕ್

    ಚಿಕ್ಕಬಳ್ಳಾಪುರ: ಕಳ್ಳತನ ಪ್ರಕರಣದಲ್ಲಿ ಮಾರಾಟ ಮಾಡಲಾಗಿದ್ದ ಚಿನ್ನಾಭರಣಗಳ ರಿಕವರಿಗೆ ಅಂತ ಕಳ್ಳನ ಸಮೇತ ಬಂದ ತಮಿಳುನಾಡು ಮೂಲದ ಪೊಲೀಸರನ್ನು ಚಿನ್ನದಂಗಡಿ ಮಾಲೀಕರು ಕೂಡಿ ಹಾಕಿದ ಘಟನೆ ಚಿಕ್ಕಬಳ್ಳಾಪುರ (Chikkaballapur) ನಗರದಲ್ಲಿ ನಡೆದಿದೆ.

    ಗೋಲ್ಡ್ ರಿಕವರಿಗೆ ಅಂತ ಬಂದ ತಮಿಳುನಾಡಿನ ಚೆನ್ನೈನ ಕೊರಟೂರು ಟಿತ್ರಿ ಪೊಲೀಸರಿಗೆ ಚಿಕ್ಕಬಳ್ಳಾಪುರ ನಗರದ ಗಂಗಮ್ಮ ಗುಡಿ ಬಜಾರ್ ರಸ್ತೆಯಲ್ಲಿ ಚಿನ್ನದಂಗಡಿ ಮಾಲೀಕರು ದಿಗ್ಭಂಧನ ವಿಧಿಸಿದ್ದಾರೆ.

    ಏನಿದು ಘಟನೆ..?: ಚಿನ್ನದಂಗಡಿ ಮಾಲೀಕ ಆತುಲ್ ಸೂರ್ಯವಂಶಿ ಎಂಬಾತನಿಗೆ ಕಳ್ಳ ಮಹಮದ್ ಖಾನ್ ಎಂಬಾತ ಕದ್ದ ಚಿನ್ನವನ್ನ ಮಾರಾಟ ಮಾಡಿದ್ದನಂತೆ. ಈ ವಿಚಾರದಲ್ಲಿ ಈಗಾಗಲೇ ಎರಡು ಬಾರಿ ಬೆಂಗಳೂರು, ತಮಿಳುನಾಡು ಪೊಲೀಸರು (Tamilnadu Police) ಸೇರಿದಂತೆ ಬೇರೆ ಬೇರೆ ಠಾಣಾ ಪೊಲೀಸರು ಆತುಲ್ ಬಳಿ 200 ಗ್ರಾಂ ಚಿನ್ನಾಭರಣವನ್ನ ರಿಕವರಿ ಮಾಡಿಕೊಂಡಿದ್ದಾರಂತೆ. ಆದರೆ ಈಗ ಮರಳಿ ಅದೇ ಕಳ್ಳನನ್ನು ಕರೆದುಕೊಂಡು ತಮಿಳುನಾಡು ಪೊಲೀಸರು ಗೋಲ್ಡ್ ರಿಕವರಿಗೆ ಬಂದಿದ್ದಾರೆ.

    ಈಗಾಗಲೇ ಆತುಲ್ ಅಂಗಡಿ ಮುಚ್ಚಿಹಾಕಿ ಊರು ಬಿಟ್ಟು ಓಡಿ ಹೋಗಿದ್ದು, ಆತುಲ್ ಸಿಕ್ಕಿಲ್ಲ ಅಂತ ಗೋಲ್ಡ್ ರಿಕವರಿಗೆ (Gold Recovery) ಬಂದಿರೋ ಪೊಲೀಸರು ಆತುಲ್ ಮಾವ ಶ್ರೀನಿವಾಸ್ ನನ್ನ ಅರೆಸ್ಟ್ ಮಾಡೋಕೆ ಮುಂದಾಗಿದ್ದಾರೆ. ಇದರಿಂದ ಆಕ್ರೋಶಗೊಂಡಿರೋ ಚಿನ್ನದಂಗಡಿ ಮಾಲೀಕರು ಪೊಲೀಸರಿಗೆ ದಿಗ್ಬಂಧನ ವಿಧಿಸಿ, ಅವರು ಬಂದಿದ್ದ ಕಾರಿನ ಚಕ್ರದ ಗಾಳಿಯನ್ನೇ ಬಿಟ್ಟು ಆಕ್ರೋಶ ಹೊರಹಾಕಿದ್ರು. ಗಂಟೆಗಟ್ಟಲೇ ಜ್ಯುವೆಲ್ಲರಿ ಶಾಪ್ ನಲ್ಲಿ ಕೂಡಿ ಹಾಕಿದ್ರು. ಇದನ್ನೂ ಓದಿ: ಹಾಸ್ಟೆಲ್‍ನ ಕಿಟಕಿ ರಾಡ್ ಮುರಿದು ಮೂವರು ವಿದ್ಯಾರ್ಥಿನಿಯರು ಪರಾರಿ

    ಘಟನೆ ನಂತರ ಚಿಕ್ಕಬಳ್ಳಾಪುರ ನಗರ ಪೊಲೀಸರು, ಜ್ಯುವೆಲ್ಲರಿ ಶಾಪ್ ಮಾಲೀಕರು ದಿಗ್ಬಂಧನ ಹಾಕಿದ್ದ ಕಳ್ಳ ಮಹಮದ್ ಖಾನ್ ಹಾಗೂ ಪೊಲೀಸರನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ತಮಿಳುನಾಡು ಬಂದಿದ್ದವರು ಸಿಪಿಐ ವಿ ರಮಣಿ, ಪಿಎಸ್‍ಐ ಸೆಲ್ವಕುಮಾರ್ ಅಂತ ತಿಳಿದುಬಂದಿದೆ. ತಮಿಳುನಾಡು ಪೊಲೀಸರು ಕರೆತಂದಿದ್ದ ಕಳ್ಳ ಮಹಮದ್ ಖಾನ್ ಎಂಬಾತನಾಗಿದ್ದು, ಮೂಲತಃ ಆಂಧ್ರದ ಹಿಂದೂಪುರದವಾನಾಗಿದ್ದು, ಸದ್ಯ ಬೆಂಗಳೂರಿನ ಆರ್ ಟಿ ನಗರದಲ್ಲಿ ವಾಸವಾಗಿದ್ದಾನೆ. ಈತನ ವೃತ್ತಿಯೇ ಮನೆಗಳ್ಳತನವಾಗಿದ್ದು, ಚೆನೈ ಬೆಂಗಳೂರು ಸೇರಿದಂತೆ ಹಲವು ಕಡೆ ಮನೆಗಳಲ್ಲಿ ಕಳ್ಳತನ ಮಾಡಿದ್ದ ಚಿನ್ನಾಭರಣಗಳನ್ನ ಚಿಕ್ಕಬಳ್ಳಾಪುರ ನಗರದ ಚಿನ್ನದಂಗಡಿ ಮಾಲೀಕ ಆತುಲ್ ಸೂರ್ಯವಂಶಿ ಎಂಬಾತನಿಗೆ ಮಾರಾಟ ಮಾಡಿದ್ದಾನೆ.

    ಇದುವರೆಗೂ 580 ಗ್ರಾಂ ಚಿನ್ನಾಭರಣಗಳನ್ನ ನಾನು ಆತುಲ್ ಗೆ ನೀಡಿದ್ದೇನೆ. ಮಾರಾಟ ಮಾಡಿದಾಗ ಆತುಲ್ ಜೊತೆ ಆತನ ಮಾವ ಶ್ರೀನಿವಾಸ್ ಸಹ ಇದ್ದರು. ಹಾಗಾಗಿ ನಾನು ಅವರ ಮಾಹಿತಿಯನ್ನ ಸಹ ಪೊಲೀಸರಿಗೆ ಹೇಳಿದ್ದೇನೆ. ಅಂತಾನೆ ಕಳ್ಳ ಮಹಮದ್ ಖಾನ್, ಆದರೆ ಜ್ಯುವೆಲ್ಲರಿ ಶಾಪ್ ಮಾಲೀಕರು ಆತುಲ್ ಗೆ ಮಾರಾಟ ಮಾಡಿದರೆ ಅವನನ್ನ ಅರೆಸ್ಟ್ ಮಾಡಲಿ ಅದು ಬಿಟ್ಟು ಅವರ ಮಾವ ಹೆಂಡತಿನಾ ಯಾಕೆ ಅರೆಸ್ಟ್ ಮಾಡೋದು ಅನ್ನೋದು ಅವರ ವಾದವಾಗಿದೆ.

    ಸದ್ಯ ಚಿಕ್ಕಬಳ್ಳಾಪುರ ನಗರ ಪೊಲೀಸರು ದಿಗ್ಬಂಧನಕ್ಕೊಳಗಾಗಿದ್ದ ಕಳ್ಳ ಹಾಗೂ ಪೊಲೀಸರನ್ನ ಬಿಡಿಸಿ ಮರಳಿ ತಮಿಳುನಾಡಿಗೆ ಕಳುಹಿಸಿಕೊಟ್ಟಿದ್ದಾರೆ. ಇತ್ತ ಗೋಲ್ಡ್ ರಿಕವರಿಗೆ ಅಂತ ಬಂದ ಪೊಲೀಸರೇ ಜನರೇ ಕೈಯಲ್ಲಿ ತಗ್ಲಾಕ್ಕೊಂಡು ಲಾಕ್ ಆಗಿದ್ದು, ವಿಪರ್ಯಾಸವೇ ಸರಿ.

    Live Tv
    [brid partner=56869869 player=32851 video=960834 autoplay=true]