Tag: ಗೋರಿ

  • ಗೋರಿಯ ಚಾದರ್‌ನಲ್ಲಿ ಉಸಿರಾಟದ ಸುದ್ದಿ – ದರ್ಗಾದತ್ತ ಜನರು

    ಗೋರಿಯ ಚಾದರ್‌ನಲ್ಲಿ ಉಸಿರಾಟದ ಸುದ್ದಿ – ದರ್ಗಾದತ್ತ ಜನರು

    ಶಿವಮೊಗ್ಗ: ದರ್ಗಾದ ಗೋರಿಗೆ ಹೊದಿಸಿರುವ ಚಾದರ್‍ನಲ್ಲಿ ಉಸಿರಾಟದ ಅನುಭವವಾಗಿದೆ ಎನ್ನಲಾದ ಸುದ್ದಿಯೊಂದು ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಹರಿದಾಡಿದೆ. ಈ ಸುದ್ದಿ ಗ್ರಾಮದಲ್ಲಿ ಹರಿದಾಡುತ್ತಿದ್ದಂತೆ ಗ್ರಾಮಸ್ಥರು ಶಿರಾಳಕೊಪ್ಪದ ಹಜ್ರತ್ ಸೈಯದ್ ಶಾಹಿದ್ ಅಲಿ ಶಾ ಖಾದ್ರಿ ದರ್ಗಾಕ್ಕೆ ದೌಡಾಯಿಸಿದ್ದಾರೆ.

    ಶಿರಾಳಕೊಪ್ಪದ ಸಂತೆ ಮಾರುಕಟ್ಟೆ ಬಳಿ ಇರುವ ಹಜ್ರತ್ ಸೈಯದ್ ಶಾಹಿದ್ ಅಲಿ ಶಾ ಖಾದ್ರಿ ದರ್ಗಾದಲ್ಲಿ ಈ ವಿಸ್ಮಯ ನಡೆದಿದೆ ಎನ್ನಲಾಗಿದೆ. ಗೋರಿಯ ಮೇಲೆ ಹೊದಿಸಿರುವ ಚಾದರ್‌ನಲ್ಲಿ ಉಸಿರಾಟದ ಅನುಭವವಾಗಿದೆ ಅಂತ ಕೆಲವರು ಹೇಳಿದನ್ನ ಕೇಳಿ ಇದನ್ನು ವೀಕ್ಷಿಸಲು ದರ್ಗಾಗೆ ಜನರು ಭೇಟಿ ನೀಡುತ್ತಿದ್ದಾರೆ.

    ಕೊರೊನಾ ಕರ್ಫ್ಯೂ ಜಾರಿಯಲ್ಲಿರುವ ಕಾರಣದಿಂದ ದರ್ಗಾದ ಬಳಿ ಸಾರ್ವಜನಿಕರು ಬಾರದಂತೆ ತಡೆಯಲು ಪೊಲೀಸರನ್ನು ನಿಯೋಜಿಸಲಾಗಿದೆ. ಹಜ್ರತ್ ಸೈಯದ್ ಶಾಹಿದ್ ಅಲಿ ಶಾ, ಖಾದ್ರಿ ದರ್ಗಾಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಇದೇ ಮೊದಲ ಬಾರಿಗೆ ಈ ರೀತಿಯ ವಿಸ್ಮಯ ನಡೆದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.