Tag: ಗೋರಕ್ಷಕ

  • ಡಬಲ್‌ ಮರ್ಡರ್‌, ಹಿಂಸಾಚಾರ ಪ್ರಕರಣದಲ್ಲಿ ಬೇಕಾಗಿದ್ದ ಗೋರಕ್ಷಕ ಬಂಧನ

    ಡಬಲ್‌ ಮರ್ಡರ್‌, ಹಿಂಸಾಚಾರ ಪ್ರಕರಣದಲ್ಲಿ ಬೇಕಾಗಿದ್ದ ಗೋರಕ್ಷಕ ಬಂಧನ

    ನವದೆಹಲಿ: ರಾಜಸ್ಥಾನದ ಇಬ್ಬರು ವ್ಯಕ್ತಿಗಳ ಹತ್ಯೆ ಹಾಗೂ ಜುಲೈನಲ್ಲಿ ನುಹ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಕಾಗಿದ್ದ ಗೋರಕ್ಷಕ ಮೋನು ಮಾನೇಸರ್‌ನನ್ನು (Monu Manesar) ಹರಿಯಾಣ ಪೊಲೀಸರು ಬಂಧಿಸಿದ್ದಾರೆ.

    ಭಜರಂಗದಳದ ಕಾರ್ಯಕರ್ತನಾಗಿರುವ ಈತ ರಾಜಸ್ಥಾನದ ಮುಸ್ಲಿಂ ಸಮುದಾಯದ ಇಬ್ಬರು ವ್ಯಕ್ತಿಗಳ ಹತ್ಯೆಯಲ್ಲಿ ಪ್ರಮುಖ ಆರೋಪಿಯಾಗಿದ್ದ. ಫೆಬ್ರವರಿಯಲ್ಲಿ ಹರಿಯಾಣದಲ್ಲಿ ಕಾರಿನಲ್ಲಿ ಶವ ಪತ್ತೆಯಾಗಿದ್ದವು. ಇದನ್ನೂ ಓದಿ: ವಿವಾಹಿತ ಸೇನಾಧಿಕಾರಿ ಜೊತೆ ನೇಪಾಳಿ ಮಹಿಳೆ ಸಂಬಂಧ – ಮದುವೆಯಾಗು ಎಂದಿದ್ದಕ್ಕೆ ಕೊಲೆಯಾದ್ಳು

    ಫೆಬ್ರವರಿ 15 ರಂದು ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಹಳ್ಳಿಯೊಂದರ ನಿವಾಸಿಗಳಾದ ನಾಸಿರ್ (25) ಮತ್ತು ಜುನೈದ್ (35) ಇಬ್ಬರನ್ನೂ ಗೋರಕ್ಷಕರು ಅಪಹರಿಸಿದ್ದರು ಎಂದು ಹೇಳಲಾಗಿದೆ. ಮರುದಿನ ಹರಿಯಾಣದ ಲೋಹರುದಲ್ಲಿ ಸುಟ್ಟು ಹಾಕಲಾಗಿದ್ದ ಕಾರಿನೊಳಗೆ ಅವರ ಶವಗಳು ಪತ್ತೆಯಾಗಿದ್ದವು.

    ಮಾಹಿತಿ ತಂತ್ರಜ್ಞಾನ ಕಾಯ್ದೆಯ ಜಾಮೀನು ಪಡೆಯಬಹುದಾದ ಸೆಕ್ಷನ್‌ಗಳ ಅಡಿಯಲ್ಲಿ ಮಾನೇಸರ್‌ನನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಹರಿಯಾಣ ಪೊಲೀಸ್ ಮೂಲಗಳು ತಿಳಿಸಿವೆ. ಸಂಜೆ ವೇಳೆಗೆ ಆತನಿಗೆ ಜಾಮೀನು ಸಿಗುವ ಸಾಧ್ಯತೆ ಇದ್ದು, ಡಬಲ್ ಮರ್ಡರ್ ಪ್ರಕರಣದಲ್ಲಿ ರಾಜಸ್ಥಾನ ಪೊಲೀಸರು ಆತನನ್ನು ಕಸ್ಟಡಿಗೆ ತೆಗೆದುಕೊಳ್ಳಲಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಭಯೋತ್ಪಾದಕರಿಂದ ಗುಂಡಿನ ದಾಳಿ – ಮೂವರು ಆದಿವಾಸಿಗಳ ಹತ್ಯೆ

    ಹರಿಯಾಣದ ನುಹ್‌ನಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪವೂ ಮಾನೇಸರ್ ಮೇಲಿದೆ. ಹಿಂಸಾಚಾರದಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದರು. ಜುಲೈ 31 ರಂದು ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ‘ಜಲ್ ಅಭಿಷೇಕ್ ಯಾತ್ರೆ’ ವೇಳೆ ಹಿಂಸಾಚಾರ ನಡೆಯಿತು. ಬಳಿಕ ಅದು ಗುರುಗ್ರಾಮ್ ಸೇರಿದಂತೆ ಪಕ್ಕದ ಪ್ರದೇಶಗಳಿಗೆ ಹರಡಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುಟ್ಟ ಸ್ಥಿತಿಯಲ್ಲಿ ಇಬ್ಬರ ಮೃತ ದೇಹ ಪತ್ತೆ – ಗೋ ರಕ್ಷಕರ ವಿರುದ್ಧ ಪ್ರಕರಣ ದಾಖಲು

    ಸುಟ್ಟ ಸ್ಥಿತಿಯಲ್ಲಿ ಇಬ್ಬರ ಮೃತ ದೇಹ ಪತ್ತೆ – ಗೋ ರಕ್ಷಕರ ವಿರುದ್ಧ ಪ್ರಕರಣ ದಾಖಲು

    ಜೈಪುರ್: ಕಾರಿನಲ್ಲಿ ಇಬ್ಬರ ಮೃತ ದೇಹ ಸುಟ್ಟ ಸ್ಥಿತಿಯಲ್ಲಿ (Burnt Bodies) ಪತ್ತೆಯಾದ ಒಂದು ದಿನದ ನಂತರ ಐವರು ಗೋರಕ್ಷಕರ ಮೇಲೆ ಅಪಹರಣ ಪ್ರಕರಣ ದಾಖಲಾದ ಘಟನೆ ರಾಜಸ್ಥಾನದ (Rajasthan) ಭರತ್‍ಪುರ್ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಭರತ್‍ಪುರನ ನಾಸಿರ್ (25) ಹಾಗೂ ಜುನೈದ್ (35) ಎಂಬ ಇಬ್ಬರು ಬುಧವಾರದಿಂದ ನಾಪತ್ತೆಯಾಗಿದ್ದರು. ಇಬ್ಬರನ್ನು ಅಪಹರಿಸಲಾಗಿದೆ ಎಂದು ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಕಿವಿಯಿಂದ ಹೂ ತೆಗೆದ ಯಡಿಯೂರಪ್ಪ

    ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ ಬೊಲೆರೋ (Bolero) ವಾಹನದಲ್ಲಿ ಸುಟ್ಟ ಸ್ಥಿತಿಯಲ್ಲಿ ಇಬ್ಬರ ಮೃತ ದೇಹ ಪತ್ತೆಯಾಗಿತ್ತು. ಮೃತ ದೇಹಗಳು ನಾಸಿರ್ ಮತ್ತು ಜುನೈದ್ ಅವರದ್ದೇ ಎಂಬುದನ್ನು ಖಚಿತ ಪಡಿಸಲು ಕುಟುಂಬಸ್ಥರನ್ನು ಸ್ಥಳಕ್ಕೆ ಕರೆದೊಯ್ಯಲಾಗುವುದು. ಮರಣೋತ್ತರ ಪರೀಕ್ಷೆ ಹಾಗೂ ಡಿಎನ್‍ಎ ವರದಿ ಆಧರಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರತ್‍ಪುರದ ಇನ್ಸ್‍ಪೆಕ್ಟರ್ ಜನರಲ್ ಗೌರವ್ ಶ್ರೀವಾಸ್ತವ ತಿಳಿಸಿದ್ದಾರೆ.

    ಮೃತ ದೇಹಗಳು ಪತ್ತೆಯಾದ ಕಾರನ್ನು ಕುಟುಂಬಸ್ಥರು ಪತ್ತೆಹಚ್ಚಿದ್ದಾರೆ. ನಾಸಿರ್ ಹಾಗೂ ಜುನೈದ್ ಅವರ ಪರಿಚಿತರ ಕಾರು ಎಂದು ಅವರು ಹೇಳಿದ್ದಾರೆ.

    ಜುನೈದ್ ವಿರುದ್ಧ ಗೋವು ಕಳ್ಳಸಾಗಾಣಿಕೆಯ ಐದು ಪ್ರಕರಣಗಳಿದ್ದವು. ಆದರೆ ನಾಸಿರ್ ಯಾವುದೇ ಕ್ರಿಮಿನಲ್ ಹಿನ್ನಲೆ ಹೊಂದಿರಲಿಲ್ಲ. ಈ ಪ್ರಕರಣದಲ್ಲಿ ಗೋ ರಕ್ಷಕರ ಪಾತ್ರವಿರುವ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಶ್ರೀವಾಸ್ತವ ತಿಳಿಸಿದ್ದಾರೆ.

    ಮೋನು ಮನೆಸರ್, ಲೋಕೇಶ್ ಸಿಂಘಿಯಾ, ರಿಂಕು ಸೈನಿ, ಅನಿಲ್ ಮತ್ತು ಶ್ರೀಕಾಂತ್ ಅಪಹರಿಸಿದ್ದಾರೆ. ಆರೋಪಿಗಳೆಲ್ಲ ಬಲಪಂಥೀಯ ಬಜರಂಗದಳದ ಕಾರ್ಯಕರ್ತರು ಎಂಬ ಆರೋಪ ಬಂದಿದೆ. ಇದನ್ನೂ ಓದಿ: ಗುಂಡಿಟ್ಟು ಕೊಲ್ತೀನಿ, ಕಸ ಗುಡಿಸ್ತೀನಿ ಎಂದವನು ಎಲ್ಲಿ ಹೋದ?- ಅಶ್ವಥ್ ವಿರುದ್ಧ ಡಿಕೆಶಿ ವಾಗ್ದಾಳಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಲ್ವಾರ್ ಗುಂಪು ಥಳಿತ ಕೇಸ್ – ಮೃತ ಪೆಹ್ಲೂಖಾನ್, ಮಕ್ಕಳ ಮೇಲೆ ಚಾರ್ಜ್ ಶೀಟ್

    ಅಲ್ವಾರ್ ಗುಂಪು ಥಳಿತ ಕೇಸ್ – ಮೃತ ಪೆಹ್ಲೂಖಾನ್, ಮಕ್ಕಳ ಮೇಲೆ ಚಾರ್ಜ್ ಶೀಟ್

    ಜೈಪುರ: ಗೋವು ಕಳ್ಳ ಸಾಗಾಣಿಕೆ ಮಾಡುವ ವೇಳೆ ಗೋರಕ್ಷಕರಿಂದ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ದೇಶವ್ಯಾಪಿ ಸುದ್ದಿಯಾಗಿದ್ದ ಅಲ್ವರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

    ರಾಜಸ್ಥಾನ ಪೊಲೀಸರು ಮೃತಪಟ್ಟ ಪೆಹ್ಲೂ ಖಾನ್ ಹಾಗೂ ಆತನ ಇಬ್ಬರು ಮಕ್ಕಳಾದ ಇರ್ಶಾದ್(25) ಹಾಗೂ ಆರಿಫ್(22) ವಿರುದ್ಧ 1995ರ ರಾಜಸ್ಥಾನ ವಧೆ ನಿಷೇಧ ಮತ್ತು ಮಾಂಸ ರಫ್ತು ನಿಯಂತ್ರಣ ಕಾಯ್ದೆಯ ಅಡಿ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದಾರೆ.

    ಖಾನ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿ ಬಂದಿದ್ದ ಆರು ಜನ ಗೋರಕ್ಷಕರಿಗೆ ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ. ಗೋವು ಸಾಕಾಣಿಕಾ ಸಿಬ್ಬಂದಿ ಹಾಗೂ ಮೊಬೈಲ್ ಕರೆ ದಾಖಲೆಗಳ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದ್ದಾರೆ.

    ಈ ಕಾಯ್ದೆಯ ಅನ್ವಯ ಕೃತ್ಯಕ್ಕೆ ಪ್ರೇರಣೆ ನೀಡಿದ ಅಥವಾ ಮಾಂಸ ಸಾಗಾಟ ಮಾಡಲು ಸಹಕರಿಸಿದ ವ್ಯಕ್ತಿಯ ಮೇಲೂ ಕೇಸ್ ದಾಖಲಿಸಬಹುದಾಗಿದೆ.

    ಈ ಕುರಿತು ಬಿಜೆಪಿ ನಾಯಕ ಜ್ಞಾನ್ ದೇವ್ ಪ್ರತಿಕ್ರಿಯಿಸಿ, ಕಾಂಗ್ರೆಸ್ ಚಾರ್ಜ್ ಶೀಟ್ ಹಾಕಿರುವ ಕ್ರೆಡಿಟ್ ಪಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಪೆಹ್ಲೂ ಖಾನ್ ಅಕ್ರಮವಾಗಿ ಗೋವು ಸಾಗಣೆ ಮಾಡುತ್ತಿದ್ದ ವಾಹನವನ್ನು ಸ್ಥಳೀಯರು ತಡೆದಿದ್ದರು. ಆತನ ಮೇಲೆ ಹಲ್ಲೆ ನಡೆಸಿರಲಿಲ್ಲ. ಆತ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾನೆ. ಅವನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸುತ್ತಿದ್ದಂತೆ ಕಾಂಗ್ರೆಸ್ ಕ್ರೆಡಿಟ್ ಪಡೆಯಲು ಯತ್ನಿಸುತ್ತಿದೆ. ಆದರೆ, ಈ ಹಿಂದೆ ಕಾಂಗ್ರೆಸ್ ಖಾನ್ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದೆ ಎಂದು ಜ್ಞಾನ್  ದೇವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಮ್ಮನ್ನೇ ಕೊಂದುಬಿಡಿ: ಬಿಜೆಪಿ, ಕಾಂಗ್ರೆಸ್ ಎರಡೂ ಒಂದೇ. ಯಾವುದೇ ಸರ್ಕಾರದಿಂದಲೂ ನಮಗೆ ನ್ಯಾಯ ಸಿಕ್ಕಿಲ್ಲ. ಸರ್ಕಾರ ನಮ್ಮನ್ನು ಕೊಂದರೆ ಉತ್ತಮ. ಕುಟುಂಬಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ. ನನ್ನ ತಂದೆ ಸಾವನ್ನಪ್ಪುವುದಕ್ಕೂ ಮೊದಲು ದುಷ್ಕರ್ಮಿಗಳ ಹೆಸರನ್ನು ಹೇಳಿದ್ದಾರೆ. ಆದರೂ, ನಮ್ಮ ಮೇಲೆ ಚಾರ್ಜ್ ಶೀಟ್ ಹಾಕಿ ದಾಳಿ ಮಾಡಿದವರನ್ನು ಸುಮ್ಮನೆ ಬಿಟ್ಟಿದ್ದಾರೆ ಎಂದು ಪೆಹ್ಲೂ ಖಾನ್‍ನ ಹಿರಿಯ ಮಗ ಇರ್ಷಾದ್ ಬೇಸರ ವ್ಯಕ್ತಪಡಿಸಿದ್ದಾರೆ.

    ಹಿಂದಿನ ಸರ್ಕಾರದ ಅವಧಿಯಲ್ಲಿ ಅನುಭವಿಸಿದ ನೋವನ್ನೇ ಈಗಲೂ ಅನುಭವಿಸುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ನಮ್ಮ ಕುಟುಂಬಕ್ಕೆ ನ್ಯಾಯ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದೆವು. ಆದರೆ ಈಗ ಎರಡೂ ಪಕ್ಷಗಳು ಒಂದೇ ಎನ್ನುವುದು ಗೊತ್ತಾಗಿದೆ. ನಮ್ಮ ಕುಟುಂಬಕ್ಕೆ ಯಾವುದೇ ಪಕ್ಷದ ಸಂಬಂಧವಿಲ್ಲ. ನಾವು ಬಯಸುವುದು ನ್ಯಾಯ ಮಾತ್ರ. ನಮ್ಮ ತಂದೆ ಡೈರಿ ಫಾರ್ಮರ್, ನಾನೂ ಡೈರಿ ಫಾರ್ಮರ್ ದನಗಳನ್ನು ಸಾಕಿಕೊಂಡು ಜೀವನ ಸಾಗಿಸುತ್ತೇನೆ ನ್ಯಾಯ ಕೊಡಿಸಿ ಎಂದು ಬೇಡಿಕೊಂಡಿದ್ದಾರೆ.

    ಏನಿದು ಪ್ರಕರಣ?
    2017ರ ಏಪ್ರಿಲ್ 1 ರಂದು 55 ವರ್ಷದ ಪೆಹ್ಲೂ ಖಾನ್ ಅವರು ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದಾಗ ಗೋ ರಕ್ಷಕರು ಹಲ್ಲೆ ನಡೆಸಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ದೆಹಲಿ ಅಲ್ವರ್ ಹೈವೇ ಮಧ್ಯೆ ಈ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಪೆಹ್ಲೂ ಖಾನ್ ಏಪ್ರಿಲ್ 3 ರಂದು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

  • ಗೋರಕ್ಷಕರ ವಿರುದ್ಧ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಯುವಕ ಅರೆಸ್ಟ್

    ಗೋರಕ್ಷಕರ ವಿರುದ್ಧ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಯುವಕ ಅರೆಸ್ಟ್

    ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕು ಶಿರಾಳಕೊಪ್ಪದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಫೇಸ್‍ಬುಕ್‍ನಲ್ಲಿ ಕೋಮು ಸಾಮರಸ್ಯ ಕದಡುವಂತ ಪೋಸ್ಟ್ ಹಾಕಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

    ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಫೋಸ್ಟ್ ಮಾಡಿದ್ದ ಶಿಕಾರಿಪುರ ತಾಲೂಕಿನ ಮತ್ತಿಕೋಟೆಯ ರಹೀಮ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.

     

    ಕಳೆದ ವಾರ ಶಿರಾಳಕೊಪ್ಪದಲ್ಲಿ ಗೋವುಗಳ ಸಾಗಾಣಿಕೆ ತಡೆದ ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆಯಾಗಿತ್ತು. ಇದರಿಂದಾಗಿ ಶಿರಾಳಕೊಪ್ಪ ಪಟ್ಟಣದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು. ಇಂಥ ಸಂದರ್ಭದಲ್ಲಿ ರಹೀಮ್ ತನ್ನ ಎಫ್‍ಬಿಯಲ್ಲಿ `ಕರ್ನಾಟಕದ ಶಿರಾಳಕೊಪ್ಪದಲ್ಲಿ ಗೋರಕ್ಷಕರನ್ನು ರುಬ್ಬಿದ ಜನ. ಯಾವತ್ತೋ ಆಗಬೇಕಿತ್ತು ಈ ಕೆಲ್ಸ’ ಎಂದು ಪೋಸ್ಟ್ ಹಾಕಿದ್ದ. ಇದಕ್ಕೆ ಫೇಸ್ ಬುಕ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

    ಇದನ್ನು ಖಂಡಿಸಿ ಹಾಗೂ ಕ್ರಮಕ್ಕೆ ಆಗ್ರಹಿಸಿ ಶಿರಾಳಕೊಪ್ಪದಲ್ಲಿ ಸಂಘ ಪರಿವಾರದಿಂದ ಬೈಕ್ ಜಾಥಾವನ್ನೂ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಶಿಕಾರಿಪುರ ಗ್ರಾಮಾಂತರ ಪೊಲೀಸರು ರಹೀಮ್‍ನನ್ನು ಬಂಧಿಸಿದ್ದಾರೆ.