Tag: ಗೋಬಿ 65

  • ಗರಿಗರಿಯಾದ ಗೋಬಿ 65 ಮಾಡಿ ನೋಡಿ

    ಗರಿಗರಿಯಾದ ಗೋಬಿ 65 ಮಾಡಿ ನೋಡಿ

    ಚಿಕನ್ 65 ನೀವೆಲ್ಲರೂ ಕೇಳಿರುತ್ತೀರಿ, ಸವಿದೂ ಇರುತ್ತೀರಿ. ಆದರೆ ಇದೇ ರುಚಿಯನ್ನು ಸಸ್ಯಾಹಾರಿಗಳೂ ಆನಂದಿಸಬೇಕಾದರೆ ಸಸ್ಯಾಹಾರದ ರೂಪದಲ್ಲಿ ಈ ರೆಸಿಪಿಯನ್ನು ಮಾಡಬೇಕಾಗುತ್ತದೆ. ಪನೀರ್, ಮಶ್ರೂಮ್, ಸೋಯಾಬೀನ್ ಬಳಸಿ ನೀವಿದನ್ನು ಟ್ರೈ ಮಾಡಬಹುದು. ನಾವಿಂದು ಪ್ಯೂರ್ ವೆಜ್ ಗೋಬಿ 65 (Gobi 65) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಸಸ್ಯಾಹಾರಿಗಳು ಖಂಡಿತವಾಗಿಯೂ ಈ ರೆಸಿಪಿಯನ್ನೊಮ್ಮೆ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಶುಚಿ ಮಾಡಿ ಕತ್ತರಿಸಿದ ಗೋಬಿ (ಹೂಕೋಸು) – 1
    ಉಪ್ಪು – ಅರ್ಧ ಟೀಸ್ಪೂನ್
    ಬಿಸಿ ನೀರು – 4 ಕಪ್
    ಹುರಿಯಲು:
    ಮೊಸರು – 2 ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    ಅರಿಶಿನ – ಕಾಲು ಟೀಸ್ಪೂನ್
    ಗರಂ ಮಸಾಲ – ಅರ್ಧ ಟೀಸ್ಪೂನ್
    ಕೊತ್ತಂಬರಿ ಪುಡಿ – ಅರ್ಧ ಟೀಸ್ಪೂನ್
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ನಿಂಬೆ ರಸ – 1 ಟೀಸ್ಪೂನ್
    ಕತ್ತರಿಸಿದ ಕರಿಬೇವಿನ ಎಲೆ – ಕೆಲವು
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಎಣ್ಣೆ – 1 ಟೀಸ್ಪೂನ್
    ಉಪ್ಪು – ಅರ್ಧ ಟೀಸ್ಪೂನ್
    ಕಾರ್ನ್ ಫ್ಲೋರ್ – ಕಾಲು ಕಪ್
    ಅಕ್ಕಿ ಹಿಟ್ಟು – ಕಾಲು ಕಪ್
    ಎಣ್ಣೆ – ಹುರಿಯಲು

    ಒಗ್ಗರಣೆಗೆ:
    ಎಣ್ಣೆ – 2 ಟೀಸ್ಪೂನ್
    ಜೀರಿಗೆ – ಅರ್ಧ ಟೀಸ್ಪೂನ್
    ತುರಿದ ಶುಂಠಿ – 1 ಇಂಚು
    ತುರಿದ ಬೆಳ್ಳುಳ್ಳಿ – 2
    ಒಣ ಕೆಂಪು ಮೆಣಸಿನಕಾಯಿ – 2
    ಕತ್ತರಿಸಿದ ಕರಿಬೇವಿನ ಎಲೆ – ಕೆಲವು
    ಮೊಸರು – 1 ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಉಪ್ಪು – ಕಾಲು ಟೀಸ್ಪೂನ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ವಾವ್, ಸಖತ್ ಟೇಸ್ಟಿ – ಬೇಬಿ ಕಾರ್ನ್ ರೋಸ್ಟ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ ಕತ್ತರಿಸಿದ ಗೋಬಿಯನ್ನು ತೆಗೆದುಕೊಂಡು, ಅದಕ್ಕೆ ಅರ್ಧ ಟೀಸ್ಪೂನ್ ಉಪ್ಪು ಹಾಕಿ, ಬಿಸಿ ನೀರನ್ನು ಸುರಿದು 5 ನಿಮಿಷ ಪಕ್ಕಕ್ಕಿಡಿ.
    * ಈಗ ನೀರನ್ನು ಸಂಪೂರ್ಣವಾಗಿ ಹರಿಸಿ, ಅದಕ್ಕೆ ಮೊಸರು, ಮೆಣಸಿನ ಪುಡಿ, ಅರಿಶಿನ, ಗರಂ ಮಸಾಲ, ಕೊತ್ತಂಬರಿ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ನಿಂಬೆ ರಸ ಸೇರಿಸಿ.
    * ಕರಿಬೇವಿನ ಎಲೆ, ಕೊತ್ತಂಬರಿ ಸೊಪ್ಪು, 1 ಟೀಸ್ಪೂನ್ ಎಣ್ಣೆ ಮತ್ತು ಅರ್ಧ ಟೀಸ್ಪೂನ್ ಉಪ್ಪು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
    * ಈ ಮಿಶ್ರಣಕ್ಕೆ ಮ್ಯಾರಿನೇಟ್ ಮಾಡಲು 30 ನಿಮಿಷ ಪಕ್ಕಕ್ಕೆ ಇರಿಸಿ.
    * ಬಳಿಕ ಕಾರ್ನ್ಫ್ಲೋರ್ ಮತ್ತು ಅಕ್ಕಿ ಹಿಟ್ಟನ್ನು ಸೇರಿಸಿ. ಗೋಬಿಗೆ ಚೆನ್ನಾಗಿ ಲೇಪನವಾಗುವಂತೆ ಮಿಶ್ರಣ ಮಾಡಿ.
    * ಈಗ ಬಿಸಿ ಎಣ್ಣೆಯಲ್ಲಿ ಗೋಬಿ ತುಂಡುಗಳನ್ನು ಸ್ವಲ್ಪ ಸ್ವಲ್ಪವೇ ಹಾಕಿ ಡೀಪ್ ಫ್ರೈ ಮಾಡಿ.
    * ಗೋಬಿ ಗರಿಗರಿಯಾಗಿ, ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಎಣ್ಣೆಯಿಂದ ತೆಗೆದು, ಟಿಶ್ಯೂ ಪೇಪರ್ ಮೇಲೆ ಹರಡಿ.
    * ಈಗ ಒಗ್ಗರಣೆ ತಯಾರಿಸಲು ಕಡಾಯಿಯಲ್ಲಿ 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಜೀರಿಗೆ, ಶುಂಠಿ, ಬೆಳ್ಳುಳ್ಳಿ, ಕೆಂಪು ಮೆಣಸಿನ ಪುಡಿ, ಕರಿಬೇವಿನ ಎಲೆ, ಹಾಕಿ ಹುರಿದುಕೊಳ್ಳಿ.
    * ಬಳಿಕ ಉರಿಯನ್ನು ಕಡಿಮೆ ಮಾಡಿ, ಅದಕ್ಕೆ 1 ಟೀಸ್ಪೂನ್ ಮೊಸರು, ಉಪ್ಪು ಸೇರಿಸಿ ಮಿಶ್ರಣ ಮಾಡಿ.
    * ಈಗ ಹುರಿದಿಟ್ಟುಕೊಂಡಿದ್ದ ಗೋಬಿಯನ್ನು ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
    * ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿದರೆ ಗೋಬಿ 65 ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಗರಿಗರಿಯಾಗಿ ಕಡಿಮೆ ಸಮಯದಲ್ಲಿ ಆಲೂ ಸೇವ್ ಮಾಡಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k