Tag: ಗೋಪುರ

  • ಮೈಸೂರಿನ ವಿವಾದಿತ ಗುಂಬಜ್ ಬಸ್ ನಿಲ್ದಾಣ – ಮೂರರಲ್ಲಿ 2 ಗೋಪುರ ತೆರವು

    ಮೈಸೂರಿನ ವಿವಾದಿತ ಗುಂಬಜ್ ಬಸ್ ನಿಲ್ದಾಣ – ಮೂರರಲ್ಲಿ 2 ಗೋಪುರ ತೆರವು

    ಮೈಸೂರು: ವಿವಾದಿತ ಗುಂಬಜ್ ಬಸ್ ನಿಲ್ದಾಣ (Bus Stand) ವಿಚಾರ ಸಂಬಂಧ ಇದೀಗ ಶೆಲ್ಟರ್ ನಲ್ಲಿದ್ದ ಮೂರು ಗೋಪುರದಲ್ಲಿ 2 ಚಿಕ್ಕ ಗೋಪುರ ತೆರವುಗೊಳಿಸಲಾಗಿದೆ.

    ಅರಮನೆ ಮಾದರಿ ನಿರ್ಮಾಣ ನನ್ನ ಉದ್ದೇಶವಾಗಿತ್ತು. ಆದರೆ ಅನವಶ್ಯಕ ಧರ್ಮದ ಲೇಪನ ನೀಡಿದ್ದು ನನಗೆ ನೋವಾಗಿದೆ. ಹೀಗಾಗಿ ವಿವಾದಿತ ಕೇಂದ್ರವಾಗಬಾರದು ಎಂಬ ಉದ್ದೇಶದಿಂದ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಗೋಪುರ ತೆರವುಗೊಳಿಸಿರುವುದಾಗಿ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ ರಾಮದಾಸ್ (S. A Ramdas) ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಮೋದಿ ಅವರಿಂದ್ಲೆ ಬೆನ್ನು ತಟ್ಟಿಸಿಕೊಂಡಿರುವ ರಾಮದಾಸ್‌ಗೆ ಕಿರುಕುಳ ಕೊಡುವಷ್ಟು ಶಕ್ತಿ ನನಗಿಲ್ಲ – ಪ್ರತಾಪ್‌ ಸಿಂಹ

    ಮೈಸೂರಿನ ಊಟಿ ಮುಖ್ಯ ರಸ್ತೆಯಲ್ಲಿ ಗುಂಬಜ್ ಮಾದರಿಯ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಭಾರೀ ವಿವಾದ ಸೃಷ್ಟಿಸಿತ್ತು. ಆ ಬಳಿಕ ಬಸ್ ನಿಲ್ದಾಣಕ್ಕೆ ರಾತ್ರೋ, ರಾತ್ರಿ ಜೆಎಸ್‍ಎಸ್ ಕಾಲೇಜ್ ಬಸ್ ನಿಲ್ದಾಣ ಎಂದು ನಾಮಫಲಕ ಅಳವಡಿಸಲಾಗಿತ್ತು. ಅಲ್ಲದೇ ಫಲಕದ ಒಂದು ಬದಿಯಲ್ಲಿ ಸುತ್ತೂರು ಆದಿ ಜಗದ್ಗುರುಗಳ ಹಾಗೂ ಸುತ್ತೂರು ಶ್ರೀ ರಾಜೇಂದ್ರ ಸ್ವಾಮೀಜಿಗಳ ಫೋಟೋ ಹಾಕಲಾಗಿತ್ತು. ಮತ್ತೊಂದು ಬದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಫೋಟೋವನ್ನು ಹಾಕಲಾಗಿತ್ತು.  ದನ್ನೂ ಓದಿ: ಗುಂಬಜ್ ಗುದ್ದಾಟಕ್ಕೆ ಟ್ವಿಸ್ಟ್ – ಬಸ್‌ನಿಲ್ದಾಣದ ಜಾಗ ನಮ್ಮದು, ತೆರವು ಮಾಡಿ ಎಂದ NHAI

    ವಿವಾದದ ಬಳಿಕ ಮಾತನಾಡಿದ್ದ ಶಾಸಕರು, ನನ್ನನ್ನು ದಯಮಾಡಿ ಬಿಟ್ಟು ಬಿಡಿ ಕೈ ಮುಗಿದು ಕೇಳಿದ್ದರು. ನಾನು ಈ ವಿಚಾರದಲ್ಲಿ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ. ನಷ್ಟದ ಹಣವನ್ನು ನನ್ನ ಸಂಬಳದಿಂದ ಭರಿಸುತ್ತೇನೆ. ಬಿಜೆಪಿಯ 11 ಜನ ಶಾಸಕರು ಇದ್ದರು. ಕಿರುಕುಳ ನೀಡಿ 10 ಜನ ಬೇರೆ ಪಕ್ಷಕ್ಕೆ ಹೊರಟು ಹೋದರು. ಉಳಿದಿರುವವನು ನಾನೊಬ್ಬನೇ. ದಯಮಾಡಿ ನನ್ನನ್ನು ಬಿಟ್ಟು ಬಿಡಿ ಏನೂ ಪ್ರಶ್ನೆ ಕೇಳಬೇಡಿ ಎಂದು ಮಾಧ್ಯಮ ಮಿತ್ರರ ಮುಂದೆ ಶಾಸಕರು ಕೈ ಮುಗಿದು ಬೇಡಿಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬಾಗಿದ ಯೋಗಾನರಸಿಂಹ ಸ್ವಾಮಿ ಗೋಪುರದ ಕಳಶ – ಆತಂಕದಲ್ಲಿ ಭಕ್ತರು

    ಬಾಗಿದ ಯೋಗಾನರಸಿಂಹ ಸ್ವಾಮಿ ಗೋಪುರದ ಕಳಶ – ಆತಂಕದಲ್ಲಿ ಭಕ್ತರು

    – ತಿಂಗಳಾದರೂ ಅಧಿಕಾರಿಗಳಿಂದ ಮಾತ್ರ ನಿರ್ಲಕ್ಷ್ಯ

    ಮಂಡ್ಯ: ನೂರಾರು ವರ್ಷಗಳ ಪುರಾತನ ಗೋಪುರ ಕಳಶ ವಾಲಿರೋದಕ್ಕೆ ಭಕ್ತರು ಆತಂಕಗೊಂಡ ಘಟನೆ ಮೇಲುಕೋಟೆ ಬೆಟ್ಟದ ಯೋಗಾನರಸಿಂಹ ಸ್ವಾಮಿ ಸನ್ನಿಧಿಯಲ್ಲಿ ನಡೆದಿದೆ.

    ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಐತಿಹಾಸಿಕ ಧಾರ್ಮಿಕ ಸ್ಥಳ ಮೇಲುಕೋಟೆ. ಅದರಲ್ಲಿಯೂ ಯೋಗಾನರಸಿಂಹ ಸ್ವಾಮಿ ದೇವಾಲಯ ನೂರಾರು ವರ್ಷಗಳ ಪುರಾತನ ದೇವಾಲಯವಾಗಿದೆ. ಎಂದೂ ಬಾಗಿರದಾ ಈ ಪುರಾತನ ದೇವಾಲಯದ ರಾಜಗೋಪುರ ಇಂದು ಭಿನ್ನವಾಗಿದೆ. ಈ ಹಿನ್ನೆಲೆ ಭಕ್ತರು ಇದು ಕೆಡುಕಿನ ಮುನ್ಸೂಚನೆಯೇ ಎಂಬ ಆತಂಕದಲ್ಲಿದ್ದಾರೆ. ಇದನ್ನೂ ಓದಿ: ಅಪ್ಪು ಅತ್ತೆ ನಾಗಮ್ಮಗೆ ಸುದ್ದಿ ಇನ್ನೂ ಗೊತ್ತೇ ಇಲ್ಲ- ಗಾಜನೂರಿನ ಪ್ರತಿ ಮನೆಯಲ್ಲೂ ನೀರವ ಮೌನ!

    ಕಳಶ ಬಾಗಿರೋದನ್ನ ನೋಡಿ ಭಕ್ತರು ಬೇಸರದೊಂದಿಗೆ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಭಕ್ತರು ಈ ಗೋಪುರದ ಕಳಶದಲ್ಲಿ ದೇವಾನು ದೇವತೆಗಳು ವಾಸಿಸುತ್ತಾರೆಂಬ ನಂಬಿಕೆಯನ್ನು ಹೊಂದಿದ್ದಾರೆ. ಗರ್ಭಗುಡಿಯ ದೇವರ ದರ್ಶನದಷ್ಟೇ ಕಳಶ ದರ್ಶನ ಮಹತ್ವದಾಗಿದೆ. ಕಳಶ ಬಿದ್ದರೆ ಕೇಡು ನಿಶ್ಚಿತ ಎಂಬ ನಂಬಿಕೆ ಹಿಂದೂ ಧರ್ಮದ್ದಾಗಿದೆ. ಶುಭ ಸಂಕೇತದ ಕಳಸ ಬಾಗಿದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಕಳಶ ಹಿಂದಕ್ಕೆ ವಾಲಿ ತಿಂಗಳುಗಳೇ ಕಳೆದ್ರೂ ಅಧಿಕಾರಿಗಳು ಇದನ್ನು ಸರಿಪಡಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಅಧಿಕಾರಿಗಳ ಈ ನಿರ್ಲಕ್ಷ್ಯತೆ ಬಗ್ಗೆ ಮೇಲುಕೋಟೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಅಧಿಕಾರಿಗಳು ಜನರ ನಂಬಿಕೆ ಜೊತೆ ಚೆಲ್ಲಾಟ ಆಡುತ್ತಿದ್ದಾರೆಂದು ಭಕ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಶ್ರೀರಂಗಪಟ್ಟಣದ ಶ್ರೀರಂಗನಾಥ ದೇಗುಲದ ಗೋಪುರದ ಕಳಶ ಬಿದ್ದ ಕೆಲವೇ ತಿಂಗಳಲ್ಲಿ ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ಒಡೆಯರ್ ನಿಧನರಾಗಿದ್ದರು. ಈ ವೇಳೆಯು ಸಹ ಅಧಿಕಾರಿಗಳು ನಿರ್ಲಕ್ಷ್ಯತೆ ಪ್ರದರ್ಶನವಾಗಿತ್ತು. ಈಗ ಯೋಗನರಸಿಂಹ ಸ್ವಾಮಿ ದೇವಾಲಯ ಕಳಶ ಬಾಗಿರುವುದರಿಂದ ಭಕ್ತರಲ್ಲಿ ಆತಂಕ ಮೂಡಿದ್ದು, ಕಳಶ ಮರು ಪ್ರತಿಷ್ಠಾಪಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸಕ್ಕರೆಬೈಲು ಆನೆ ಬಿಡಾರದ ಮರಿ ಆನೆಗೆ ಅಪ್ಪು ಹೆಸರು ನಾಮಕರಣ

  • ಸಿಡಿಲು ಬಡಿದು ದೇವಾಲಯದ ಗೋಪುರ ಛಿದ್ರ

    ಸಿಡಿಲು ಬಡಿದು ದೇವಾಲಯದ ಗೋಪುರ ಛಿದ್ರ

    ಚಿಕ್ಕಬಳ್ಳಾಪುರ: ದೇವಾಲಯಕ್ಕೆ ಸಿಡಿಲು ಬಡಿದ ಪರಿಣಾಮ ದೇವಾಲಯದ ಗೋಪುರ ಛಿದ್ರ-ಛಿದ್ರವಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಹೊಸಹುಡ್ಯ ಗ್ರಾಮದಲ್ಲಿ ನಡೆದಿದೆ.

    ಗ್ರಾಮ ದೇವರಾದ ಶ್ರೀ ಲಕ್ಷ್ಮೀಜನಾರ್ಧನಸ್ವಾಮಿ ದೇಗುಲಕ್ಕೆ ಸಿಡಿಲು ಬಡಿದಿದ್ದು, ಪರಿಣಾಮ ದೇವಾಲಯದ ಗೋಪುರದ ಕಳಸ ಕಿತ್ತು ಬಂದಿದೆ. ಗೋಪುರದ ಬಹುತೇಕ ಭಾಗ ಕಳಚಿದ್ದು ಸಿಡಿಲು ಬಡಿದ ಶಬ್ಧಕ್ಕೆ ಇಡೀ ಗ್ರಾಮದ ಜನತೆ ಬೆಚ್ಚಿಬಿದ್ದಿದ್ದಾರೆ.

    ಸಿಡಲಿನ ಹೊಡೆತಕ್ಕೆ ದೇವಾಲಯದ ಗೋಡೆಗಳು ಬಿರುಕು ಬಿಟ್ಟಿದ್ದು, ಗೋಡೆ ಹಾಗೂ ನೆಲಹಾಸುಗಳಿಗೆ ಅಳವಡಿಸಿದ್ದ ಟೈಲ್ಸ್ ಗಳು ಕಿತ್ತು ಬಂದಿವೆ. ಸಿಡಿಲಿನ ಶಬ್ಧದಿಂದ ಬೆಚ್ಚಿಬಿದ್ದಿರುವ ಗ್ರಾಮಸ್ಥರು ದೇವಾಲಯದ ಬಳಿ ಬಂದು ನೋಡಿದಾಗ ನಡೆದ ಘಟನೆ ಬೆಳಕಿಗೆ ಬಂದಿದೆ.

    ದೇವಾಲಯದ ಬಹುತೇಕ ಭಾಗ ಹಾನಿಗೆ ಒಳಗಾಗಿದೆ. ಗ್ರಾಮಸ್ಥರನ್ನು ರಕ್ಷಿಸುವ ಸಲುವಾಗಿ ದೇವರೇ ತನ್ನ ಮೇಲೆ ಸಿಡಿಲನ್ನು ಬರ ಮಾಡಿಕೊಂಡಿದ್ದಾನೆ ಎಂದು ಗ್ರಾಮಸ್ಥರು ದೇವರ ಶಕ್ತಿ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ.