Tag: ಗೋಪಿಚಂದ್

  • ‘ಭೀಮ’ನಾದ ಗೋಪಿಚಂದ್: ಎ.ಹರ್ಷ ನಿರ್ದೇಶನದ ತೆಲುಗು ಚಿತ್ರ

    ‘ಭೀಮ’ನಾದ ಗೋಪಿಚಂದ್: ಎ.ಹರ್ಷ ನಿರ್ದೇಶನದ ತೆಲುಗು ಚಿತ್ರ

    ತೆಲುಗಿನ (Telugu) ಮ್ಯಾಚೋ ಸ್ಟಾರ್ ಖ್ಯಾತಿಯ ಗೋಪಿಚಂದ್ ಹಾಗೂ ಕನ್ನಡ ಎ.ಹರ್ಷ (A. Harsha) ಕಾಂಬೋದ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಗೋಪಿಚಂದ್ (Gopichand) ಜನ್ಮದಿನದ ಪ್ರಯುಕ್ತ ಫಸ್ಟ್ (First Look) ಹಾಗೂ ಟೈಟಲ್ ನ್ನು ಚಿತ್ರತಂಡ ರಿವೀಲ್ ಮಾಡಿದೆ.

    ಭೀಮನಾಗಿ (Bhima) ಮ್ಯಾಚೋ ಸ್ಟಾರ್ ಎಂಟ್ರಿ ಕೊಟ್ಟಿದ್ದು, ಪೊಲೀಸ್ ಖದರ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಮುಖದ ಮೇಲೆ ಗಾಯದ ಗುರುತು, ಉಗ್ರ ರೂಪಿಯಾಗಿ ತೀಕ್ಷ ನೋಟದ ಗೋಪಿಚಂದ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಶರ್ವಾನಂದ್ ರಿಸೆಪ್ಷನ್ ಸಂಭ್ರಮದಲ್ಲಿ ಸಿನಿ ತಾರೆಯರ ದಂಡು

    ಭಜರಂಗಿ, ವಜ್ರಕಾಯ, ವೇದ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರ ನಿರ್ದೇಶಿಸಿರುವ ಎ.ಹರ್ಷಗೆ ಇದು ಮೊದಲ ಸಿನಿಮಾ. ಭೀಮ ಕೌಟುಂಬಿಕ ಹಾಗೂ ಆಕ್ಷನ್ ಎಂಟರ್ ಟೈನರ್ ಕಥಾಹಂದರ ಹೊಂದಿದೆ.‌  ಕೆ.ಕೆ.ರಾಧಾ ಮೋಹನ್ ಶ್ರೀ ಸತ್ಯ ಸಾಯಿ ಆರ್ಟ್ಸ್ ಪ್ರೊಡಕ್ಷನ್ ನಡಿ ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

    ಅಂದಹಾಗೇ ಭೀಮ ಶ್ರೀ ಸತ್ಯ ಸಾಯಿ ಆರ್ಟ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ 14ನೇ ಸಿನಿಮಾ. ಸ್ವಾಮಿ.ಜೆ ಛಾಯಾಗ್ರಹಣ, ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ, ಅಜ್ಜು ಮಹಂಕಾಳಿ ಸಂಭಾಷಣೆ, ವೆಂಕಟ್ ಹಾಗೂ ರವಿವರ್ಮಾ ಸ್ಟಂಟ್ ಚಿತ್ರಕ್ಕಿದೆ. ಹೈದರಾಬಾದ್ ನ ಅಲ್ಯೂಮಿನಿಯಂ ಫ್ಯಾಕ್ಟರ್ ಯಲ್ಲಿ ಹೈವೋಲ್ಟೇಜ್ ಆಕ್ಷನ್ ದೃಶ್ಯಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಾಯಕಿ ಹಾಗೂ ಉಳಿದ ತಾರಾಬಳಗ ಅಪ್ ಡೇಟ್ ಶೀಘ್ರದಲ್ಲೇ ರಿವೀಲ್ ಮಾಡಿದೆ ಭೀಮ ಚಿತ್ರತಂಡ.

  • ನಟ ಗೋಪಿಚಂದ್‌ಗೆ ಸ್ಯಾಂಡಲ್‌ವುಡ್‌ ನಿರ್ದೇಶಕ ಎ.ಹರ್ಷ ಆ್ಯಕ್ಷನ್ ಕಟ್

    ನಟ ಗೋಪಿಚಂದ್‌ಗೆ ಸ್ಯಾಂಡಲ್‌ವುಡ್‌ ನಿರ್ದೇಶಕ ಎ.ಹರ್ಷ ಆ್ಯಕ್ಷನ್ ಕಟ್

    `ಭಜರಂಗಿ’, `ವಜ್ರಕಾಯ’, `ವೇದ’ (Vedha)ಸೂಪರ್ ಹಿಟ್ ಸಿನಿಮಾ ಖ್ಯಾತಿಯ ಎ.ಹರ್ಷ (A. Harsha) ಇದೀಗ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಟಾಲಿವುಡ್ (Tollywood) ಸ್ಟಾರ್ ನಟ ಗೋಪಿಚಂದ್ (Gopichand) 31ನೇ ಸಿನಿಮಾಗೆ ಸ್ಯಾಂಡಲ್‌ವುಡ್ ಸ್ಟಾರ್ ನಿರ್ದೇಶಕ ಎ.ಹರ್ಷ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇಂದು ಗೋಪಿಚಂದ್ ಹಾಗೂ ಹರ್ಷ ಕಾಂಬಿನೇಶನ್ ಸಿನಿಮಾ ಅದ್ದೂರಿಯಾಗಿ ಸೆಟ್ಟೇರಿದ್ದು, ಕೆ.ಕೆ.ರಾಧಾ ಮೋಹನ್ ಶ್ರೀ ಸತ್ಯ ಸಾಯಿ ಆರ್ಟ್ಸ್ ಪ್ರೊಡಕ್ಷನ್ ವತಿಯಿಂದ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

    ಎ.ಹರ್ಷ ಹೆಣೆದ ಔಟ್ ಅಂಡ್ ಔಟ್ ಆ್ಯಕ್ಷನ್ ಎಂಟರ್ಟೈನರ್ ಸಬ್ಜೆಕ್ಟ್ ಒಳಗೊಂಡ ಚಿತ್ರದಲ್ಲಿ ಹೊಸ ಅವತಾರದಲ್ಲಿ ತೆರೆ ಮೇಲೆ ಗೋಪಿಚಂದ್ ಬರುತ್ತಿದ್ದಾರೆ. ಶಿವಣ್ಣ ನಟನೆಯ `ವೇದ’ ಸೂಪರ್ ಸಕ್ಸಸ್ ನಂತರ ಎ. ಹರ್ಷ ಅವರು ತೆಲುಗಿನ ನಟ ಗೋಪಿಚಂದ್ ಜೊತೆ ಕೈಜೋಡಿಸಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಬಳಿಕ ಮತ್ತೊಬ್ಬ ಕನ್ನಡತಿ ಜೊತೆ ವಿಜಯ್‌ ದೇವರಕೊಂಡ ರೊಮ್ಯಾನ್ಸ್

    ನಿರ್ಮಾಪಕ ಕೆ.ಕೆ.ರಾಧಾಮೋಹನ್ ಮಾತನಾಡಿ ಗೋಪಿಚಂದ್ ಹಾಗೂ ಎ.ಹರ್ಷ ಜೊತೆ ಸೇರಿ ಸಿನಿಮಾ ಮಾಡುತ್ತಿರೋದಕ್ಕೆ ತುಂಬಾ ಖುಷಿಯಾಗುತ್ತಿದೆ. ಇದು ನಮ್ಮ ನಿರ್ಮಾಣ ಸಂಸ್ಥೆಯ 14ನೇ ಸಿನಿಮಾ. ನಿರ್ದೇಶಕರು ಪವರ್ ಫುಲ್ ಸಬ್ಜೆಕ್ಟ್ ಇರುವ ಸ್ಕ್ರಿಪ್ಟ್ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಗೋಪಿಚಂದ್ ಹೊಸ ಅವತಾರದಲ್ಲಿ ಬರಲಿದ್ದಾರೆ. ಇದೇ ತಿಂಗಳಿನಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

    ಸ್ವಾಮಿ.ಜೆ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ನಿರ್ದೇಶನ ಈ ಚಿತ್ರಕ್ಕಿದ್ದು, ಸದ್ಯದಲ್ಲೇ ಸಿನಿಮಾದ ತಾರಾಬಳಗ ಹಾಗೂ ಸಿನಿಮಾ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಹಂಚಿಕೊಳ್ಳಲಿದೆ.

  • ಸೈನಾ, ಸಿಂಧೂಗೆ ಬೇರೆ ಬೇರೆ ಕಡೆಯಲ್ಲಿ ಪ್ರತ್ಯೇಕ ತರಬೇತಿ ನೀಡ್ತಿದ್ದಾರೆ ಗೋಪಿಚಂದ್!

    ಸೈನಾ, ಸಿಂಧೂಗೆ ಬೇರೆ ಬೇರೆ ಕಡೆಯಲ್ಲಿ ಪ್ರತ್ಯೇಕ ತರಬೇತಿ ನೀಡ್ತಿದ್ದಾರೆ ಗೋಪಿಚಂದ್!

    ಹೈದರಾಬಾದ್: ಭಾರತದ ಸ್ಟಾರ್ ಬ್ಯಾಡ್ಮಿಟನ್ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಹಾಗೂ ಪಿವಿ ಸಿಂಧೂ ಅವರು ಸದ್ಯ ರಾಷ್ಟ್ರೀಯ ತಂಡದ ತರಬೇತುದಾರ ಗೋಪಿಚಂದ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಆದರೆ ಕೋಚ್ ಇಬ್ಬರಿಗೂ ಬೇರೆ ಬೇರೆ ಕೇಂದ್ರಗಳಲ್ಲಿ ತರಬೇತಿ ನೀಡುತ್ತಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೋಪಿಚಂದ್, ಇದು ತರಬೇತಿ ತಂಡದ ನಿರ್ಧಾರವಾಗಿದ್ದು, ಇಬ್ಬರು ಆಟಗಾರ್ತಿಯರ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗಿದೆ. ಈ ಹಿಂದೆಯೂ ಇದೇ ರೀತಿ ಪ್ರತ್ಯೇಕ ತರಬೇತಿ ನೀಡಿದ್ದು, ಇಬ್ಬರು ಆಟಗಾರ್ತಿಯರ ಕುರಿತು ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

    ಸದ್ಯ ಈ ತೀರ್ಮಾನದ ಹಿನ್ನೆಲೆಯಲ್ಲಿ ಗೋಪಿಚಂದ್ ಅವರ ಆಕಾಡೆಮಿಯ ತರಬೇತಿ ಸಮಯವನ್ನು ಪ್ರತ್ಯೇಕಗೊಳಿಸಲಾಗಿದೆ. ಇದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗಿಲ್ಲ ಎಂದು ಗೋಪಿಚಂದ್ ಹೇಳಿದ್ದಾರೆ.

    ಸದ್ಯ ಗೋಪಿಚಂದ್ ಅವರು ಎರಡು ಆಕಾಡೆಮಿಗಳನ್ನು ಹೊಂದಿದ್ದು, ಅರ್ಧ ಕಿಮೀ ಅಂತರದಲ್ಲಿ ಇವುಗಳನ್ನು ನಿರ್ಮಿಸಲಾಗಿದೆ. ಈ ಮೊದಲು ಇದ್ದ ಹಳೆಯ ತರಬೇತಿ ಕೇಂದ್ರದ ಅಲ್ಪ ದೂರದಲ್ಲೇ ಮತ್ತೊಂದು ಹೊಸ ಕೇಂದ್ರ ಸ್ಥಾಪನೆ ಕೆಲ ವರ್ಷಗಳ ಹಿಂದೆ ಆರಂಭ ಮಾಡಲಾಗಿತ್ತು.

    2014 ರಲ್ಲಿ ಗೋಪಿಚಂದ್ ತರಬೇತಿ ಕೇಂದ್ರದಿಂದ ಹೊರ ನಡೆದಿದ್ದ ಸೈನಾ ಬೆಂಗಳೂರಿನಲ್ಲಿ ವಿಮಲ್ ಕುಮಾರ್ ಬಳಿ ತರಬೇತಿ ಪಡೆಯುತ್ತಿದ್ದರು. ಕಳೆದ ಸೆಪ್ಟೆಂಬರ್ ನಲ್ಲಿ ಮತ್ತೆ ಸೈನಾ ಗೋಪಿಚಂದ್ ಅವರ ಆಕಾಡೆಮಿಗೆ ಹಿಂದಿರುಗಿದ್ದರು. ವಿಶ್ವ ಶ್ರೇಯಾಂಕದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದ ನಂತರ ಗೋಪಿಚಂದ್ ಅವರ ಆಕಾಡೆಮಿಗೆ ಹಿಂದುರುಗಿ ಪಿವಿ ಸಿಂಧೂ ರನ್ನು ಮಣಿಸಿ ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

    ತರಬೇತಿ ತಂಡದ ಈ ತೀರ್ಮಾನದ ಕುರಿತು ಪ್ರತಿಕ್ರಿಯೆ ನೀಡಿರುವ ಸಿಂಧೂ ತಂದೆ, ಸದ್ಯ ನಿಗಧಿ ಮಾಡಿರುವ ಅವಧಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಗೋಪಿಚಂದ್ ಅವರು ಎಲ್ಲಾ ಆಟಗಾರರಿಗೂ ಒಂದೇ ಸಮಯವನ್ನು ನೀಡುತ್ತಿದ್ದಾರೆ. ಇದಕ್ಕಿಂತ ಹೆಚ್ಚಿನದಾಗಿ ಏನನ್ನು ಕೇಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

    ಪ್ರತ್ಯೇಕ ತರಬೇತಿ ಯಾಕೆ?
    ಸೈನಾ ಮತ್ತು ಸಿಂಧೂಗೆ ಪ್ರತ್ಯೇಕ ತರಭೇತಿ ನೀಡುತ್ತಿರುವುದು ಯಾಕೆ ಎನ್ನುವುದನ್ನು ಯಾರು ಅಧಿಕೃತವಾಗಿ ತಿಳಿಸಿಲ್ಲ. ಇಬ್ಬರಿಗೆ ಪ್ರತ್ಯೇಕ ಅವಧಿಯಲ್ಲಿ ತರಬೇತಿ ನೀಡುತ್ತಿರುವುದರ ಹಿಂದೆ ಆಟಗಾರ್ತಿಯರ ಹಿತಾದೃಷ್ಟಿಯೂ ಕಾರಣವಾಗಿದೆ ಎನ್ನಲಾಗಿದೆ. ಇಬ್ಬರು ಒಂದೇ ಕಡೆ ಅಭ್ಯಾಸ ನಡೆಸಿದರೆ ದೌರ್ಬಲ್ಯಗಳು ತಿಳಿಯುವ ಕಾರಣ ಇಬ್ಬರನ್ನು ದೂರ ಇಡಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

  • ಸೈನಾ, ಕಶ್ಯಪ್ ಜೋಡಿ ಸೂಪರ್, ಈಗ ಮದ್ವೆಯಾಗಬೇಕಂತೆ!

    ಸೈನಾ, ಕಶ್ಯಪ್ ಜೋಡಿ ಸೂಪರ್, ಈಗ ಮದ್ವೆಯಾಗಬೇಕಂತೆ!

    ಹೈದರಾಬಾದ್: ಅಂತಾರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ಮದುವೆಯಾಗಬೇಕು ಎನ್ನುವ ಬೇಡಿಕೆ ಈಗ ಅಭಿಮಾನಿಗಳ ಕಡೆಯಿಂದ ಬಂದಿದೆ.

    ಸಪ್ಟೆಂಬರ್ 8ರಂದು ಪರುಪಳ್ಳಿ ಕಶ್ಯಪ್ 31 ನೇ ವಸಂತಕ್ಕೆ ಕಾಲಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸೈನಾ ಕಶ್ಯಪ್ ಜೊತೆಗೆ ಇರುವ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಇಂದು ಹೆಚ್ಚು ಟ್ರೋಲ್ ಆಗುತ್ತಿದ್ದು, ಅಭಿಮಾನಿಗಳು ಈ ಜೋಡಿಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

    “ಇಬ್ಬರು ಅದ್ಭುತ ಜೋಡಿಗಳಾಗಿ ಕಾಣುತ್ತಿದ್ದು, ಮದುವೆ ಆಗಿ” ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ.

    ಮತ್ತೊಬ್ಬ ಅಭಿಮಾನಿ ವಿಶ್ವದ ಅತ್ಯುತ್ತಮ ಜೋಡಿ ಎಂದು, ಇಬ್ಬರು ಉತ್ತಮ ದಂಪತಿಯಾಗುವ ಲಕ್ಷಣವನ್ನು ಹೊಂದಿದ್ದೀರಿ. ಮುದ್ದಾದ ಜೋಡಿಯಾಗಿ ಕಾಣುತ್ತಿದ್ದೀರಿ ಎಂದು ಬರೆದಿದ್ದಾರೆ.

    ಸೈನಾ ನೆಹ್ವಾಲ್ ಬಹು ದಿನಗಳ ಮುನಿಸಿನ ನಂತರ ತಮ್ಮ ಹಳೆ ಗುರುವಾದ ಗೋಪಿಚಂದ್ ಅವರಿಂದ ತರಬೇತಿ ಪಡೆಯುತ್ತೇನೆ ಎಂದು ಟ್ವೀಟ್ ಮಾಡುವ ಮೂಲಕ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು.

    Last night @parupallikashyap’s birthday party ????????

    A post shared by Saina Nehwal (@nehwalsaina) on

    Birthday party ???? @parupallikashyap @jerry6 @prannoy_hs_ @gurusaidutt @sumeeth_reddy ????????

    A post shared by Saina Nehwal (@nehwalsaina) on

    Happy Birthday ???? @parupallikashyap …. @gurusaidutt @saipraneeth92

    A post shared by Saina Nehwal (@nehwalsaina) on

  • ಗುರು ಗೋಪಿಚಂದ್‍ರನ್ನು ‘ಹೇಟ್’ ಮಾಡ್ತಾರಂತೆ ಪಿವಿ ಸಿಂಧು!- ಕನ್‍ಫ್ಯೂಸ್ ಆಗ್ಬೇಡಿ, ವಿಡಿಯೋ ನೋಡಿ

    ಗುರು ಗೋಪಿಚಂದ್‍ರನ್ನು ‘ಹೇಟ್’ ಮಾಡ್ತಾರಂತೆ ಪಿವಿ ಸಿಂಧು!- ಕನ್‍ಫ್ಯೂಸ್ ಆಗ್ಬೇಡಿ, ವಿಡಿಯೋ ನೋಡಿ

    ನವದೆಹಲಿ: 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದು ಭಾರತಕ್ಕೆ ಕೀರ್ತಿ ತಂದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಈಗ ಎಲ್ಲರ ಮನೆ ಮಾತಾಗಿದ್ದಾರೆ. ಸಿಂಧು ಯಶಸ್ಸಿನ ಹಿಂದಿದ್ದುದು ಅವರ ಕೋಚ್ ಪುಲ್ಲೆಲಾ ಗೋಪಿಚಂದ್. ಶಿಕ್ಷಕರ ದಿನಾಚರಣೆಯಾದ ಇಂದು ಪಿವಿ ಸಿಂಧು ತನ್ನ ಗುರು ಗೋಪಿಚಂದ್‍ಗೆ ಗುರುಕಾಣಿಕೆಯಾಗಿ ವಿಡಿಯೋವೊಂದನ್ನ ಅರ್ಪಿಸಿದ್ದಾರೆ.

    ಪಿವಿ ಸಿಂಧು ಸ್ಪೋರ್ಟ್ಸ್ ಡ್ರಿಂಕ್ ಬ್ರ್ಯಾಂಡ್‍ವೊಂದರ ಜೊತೆಗೂಡಿ ಐ ಹೇಟ್ ಮೈ ಟೀಚರ್ ಎಂಬ ಡಿಜಿಟಲ್ ಕಿರು ಚಿತ್ರವನ್ನ ಸಹ-ನಿರ್ಮಾಣ ಮಾಡಿದ್ದಾರೆ.

    ಯಶಸ್ಸಿನ ದಾರಿ ತುಂಬಾ ಕಠಿಣವಾದುದು. ಅದಕ್ಕೆ ಸಾಕಷ್ಟು ಪರಿಶ್ರಮ ಹಾಗೂ ಸಮರ್ಪಣೆ ಬೇಕು. ಆದ್ರೆ ಬಹುತೇಕ ಮಂದಿ ಯಾವುದೋ ಒಂದು ಘಟ್ಟದಲ್ಲಿ ಇದು ನನ್ನಿಂದ ಆಗಲ್ಲ ಅಂತ ಕೈಚೆಲ್ಲಿಬಿಡುತ್ತಾರೆ. ಆದ್ರೆ ಯಾವುದೋ ಒಂದು ಶಕ್ತಿ ಅವರನ್ನ ಮುಂದೆ ತಳ್ಳುತ್ತದೆ. ಅವರು ಯಶಸ್ವಿಯಾಗಿ ಹೊರಹೊಮ್ಮುವಂತೆ ಮಾಡುತ್ತದೆ ಅನ್ನೋದನ್ನ ವಿಡಿಯೋದಲ್ಲಿ ತೋರಿಸಲಾಗಿದೆ.

    ಇಂತಹ ಸಂದರ್ಭಗಳಲ್ಲಿ ಕ್ರೀಡಾಪಟು ತನ್ನ ಗುರುವಿನ ಕಠಿಣತೆ ಹಿಂದಿನ ಉದ್ದೇಶವನ್ನ ಅರಿಯದೆ ಅವರನ್ನ ದ್ವೇಷಿಸುತ್ತಾರೆ. ಆದ್ರೆ ಕೊನೆಗೆ ತನ್ನ ಬೆನ್ನ ಹಿಂದೆ ನಿಂತು ಯಶಸ್ಸಿಗೆ ಕಾರಣವಾದ ಗುರುವಿಗೆ ಕೃತಜ್ಞತೆ ಸಲ್ಲಿಸದೆ ಇರಲಾಗದು ಅನ್ನೋದನ್ನ ವಿಡಿಯೋದಲ್ಲಿ ತೋರಿಸಿಕೊಡಲಾಗಿದೆ.

    ಐ ಹೇಟ್ ಮೈ ಟೀಚರ್. ನನ್ನ ಗಾಯಗಳಿಗೆ ಅವರೇ ಕಾರಣ. ನನ್ನ ಮೇಲೆ ರೇಗಾಡ್ತಾರೆ. ನಾನು ಬೆವರು ಸುರಿಸಿದ್ರೆ ಅವರಿಗಿಷ್ಟ. ನಾನು ಬಿದ್ದಾಗ, ನನಗೆ ಉಸಿರಾಡಲೂ ಕಷ್ಟವಾದಾಗ ಅದು ಅವರಿಗೆ ಇಷ್ಟ. ನನ್ನ ನೋವಿಗೆ ಅವರೇ ಕಾರಣ. ನಾನು ನಿದ್ದೆ ಮಾಡ್ತೀನೋ ಇಲ್ವೋ ಅವರಿಗೆ ಬೇಕಾಗಿಲ್ಲ. ಅವರು ಎಂದಿಗೂ ಕೈಚೆಲ್ಲಿ ಕೂರಲ್ಲವಲ್ಲ ಅದಕ್ಕೆ ನಾನು ಅವರನ್ನ ದ್ವೇಷಿಸುತ್ತೇನೆ. ಅವರು ಯಾವಾಗ್ಲೂ ಸರಿಯಾಗೇ ಯೋಚಿಸ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಅವರನ್ನ ದ್ವೇಷಿಸೋದು ಯಾಕಂದ್ರೆ ನಾನು ನನ್ನನ್ನು ನಂಬೋದಕ್ಕಿಂತ ಹೆಚ್ಚಿಗೆ ಅವರು ನನ್ನನ್ನು ನಂಬ್ತಾರೆ. ಥ್ಯಾಂಕ್ಯೂ ಕೋಚ್ ಎಂದು ವಿಡಿಯೋ ಅಂತ್ಯವಾಗುತ್ತದೆ.

    ಕೋಚ್ ಪಟ್ಟುಬಿಡದೆ ಕೆಲಸ ಮಾಡಿ ನನಗಾಗಿ ದೊಡ್ಡ ದೊಡ್ಡ ಕನಸು ಹೊಂದಿದ್ದಾರೆ. ಅವರ ಈ ಶ್ರೇಷ್ಠತೆಗೆ ನಾನು ಋಣಿ. ಈ ಶಿಕ್ಷಕರ ದಿನಾಚರಣೆಯಂದು ನನ್ನ ಎಲ್ಲಾ ಯಶಸ್ಸನ್ನು ಅವರಿಗೆ ಸಮರ್ಪಿಸುತ್ತೇನೆ. ಅಲ್ಲದೆ ಎಲ್ಲರೂ ತಮ್ಮ ಜೀವನದಲ್ಲಿ ಪ್ರೇರಕ ಶಕ್ತಿಯಾಗಿರುವವರನ್ನ ಗೌರವಿಸಬೇಕು ಎಂದು ಕೇಳಿಕೊಳ್ಳುತ್ತೇನೆ ಅಂತ ಪಿವಿ ಸಿಂಧು ಹೇಳಿದ್ದಾರೆ.

    https://twitter.com/GatoradeIndia/status/904646010114162688