Tag: ಗೋಪಾಲ್ ರೈ

  • Delhi Assembly Election | 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಎಎಪಿ

    Delhi Assembly Election | 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಎಎಪಿ

    ನವದೆಹಲಿ: ಮುಂಬರುವ ದೆಹಲಿ ವಿಧಾನಸಭೆ ಚುನಾವಣೆಗೆ (Assembly Election) ಆಮ್ ಆದ್ಮಿ ಪಕ್ಷ (Aam Aadmi Party) 11 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    70 ವಿಧಾನಸಭಾ ಕ್ಷೇತ್ರಗಳಿಗೆ 2025ರ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದ್ದು, ಇಂದು (ನ.21) 11 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಪಟ್ಟಿ ಬಿಡುಗಡೆ ಮಾಡಿದೆ.ಇದನ್ನೂ ಓದಿ: ಅದಾನಿ ವಿರುದ್ಧದ ಪ್ರಕರಣ: ಷೇರುಪೇಟೆಯಲ್ಲಿ ಅದಾನಿ ಸಮೂಹದ ಷೇರುಗಳ ಮೌಲ್ಯದಲ್ಲಿ ಭಾರೀ ಕುಸಿತ

    ಬಿಜೆಪಿ ಹಾಗೂ ಕಾಂಗ್ರೆಸ್ ಬಿಟ್ಟು ಎಎಪಿ ಸೇರಿದ್ದ 6 ನಾಯಕರು ಸೇರಿದಂತೆ ಒಟ್ಟು 11 ಅಭ್ಯರ್ಥಿಗಳ ಹೆಸರು ಪಟ್ಟಿಯಲ್ಲಿದೆ. ಬಿಜೆಪಿಯಿಂದ ಬ್ರಹ್ಮ ಸಿಂಗ್ ತನ್ವಾರ್, ಬಿಬಿ ತ್ಯಾಗಿ, ಅನಿಲ್ ಝಾ ಹಾಗೂ ಕಾಂಗ್ರೆಸ್‌ನಿಂದ ಜುಬೇರ್ ಚೌಧರಿ, ವೀರ್ ಸಿಂಗ್ ದಿಂಗನ್, ಸೋಮೇಶ್ ಶೋಕೀನ್ ಆಮ್ ಆದ್ಮಿ ಪಕ್ಷವನ್ನು ಸೇರಿದ್ದರು. ಇವರನ್ನು ಒಳಗೊಂಡಂತೆ ರಾಮ್ ಸಿಂಗ್ ನೇತಾಜಿ, ಗೌರವ್ ಶರ್ಮಾ, ಮನೋಜ್ ತ್ಯಾಗಿ, ದೀಪಕ್ ಸಿಂಘಾಲ್ ಹಾಗೂ ಸರಿತಾ ಸಿಂಗ್‌ರವರ ಹೆಸರು ಪಟ್ಟಿಯಲ್ಲಿದೆ.

    2020 ಚುನಾವಣೆಯಲ್ಲಿ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಮೂರು ಹಾಲಿ ಶಾಸಕರನ್ನು ಎಎಪಿ ಕೈಬಿಡಲು ನಿರ್ಧರಿಸಿದೆ.

    ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಎಎಪಿ ಸಂಚಾಲಕ ಗೋಪಾಲ್ ರೈ (Gopal Rai), ಈ 11 ಅಭ್ಯರ್ಥಿಗಳ ಪಟ್ಟಿಯೊಂದಿಗೆ ಚುನಾವಣಾ ಪ್ರಚಾರವನ್ನು ತ್ರೀವಗೊಳಿಸುತ್ತೇವೆ. 2020ರ ವಿಧಾನಸಭಾ ಚುನಾವಣೆಯಲ್ಲಿ ಸಾರ್ವಜನಿಕರ ಪ್ರತಿಕ್ರಿಯೆ ಆಧಾರದ ಮೇಲೆ ಹಾಲಿ ಶಾಸಕರನ್ನು ಕೈಬಿಟ್ಟಿದ್ದೇವೆ. ಇದೀಗ ನಾವು ಅತ್ಯುತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದರು.

    2015ರ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ ಎಎಪಿ 67 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. 2020ರ ಚುನಾವಣೆಯಲ್ಲಿ 62 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.ಇದನ್ನೂ ಓದಿ: 4 ಮಕ್ಕಳು ಹೆತ್ತರೆ 1 ಲಕ್ಷ ರೂ. ಬಹುಮಾನ – ಕೊಡವ ಸಮಾಜದಿಂದ ವಿಶಿಷ್ಟ ಆಫರ್

  • ದೀಪಾವಳಿ ಹೊಸ್ತಿಲಲ್ಲೇ ಪಟಾಕಿ ಬ್ಯಾನ್ ಮಾಡಿದ ದೆಹಲಿ ಸರ್ಕಾರ

    ದೀಪಾವಳಿ ಹೊಸ್ತಿಲಲ್ಲೇ ಪಟಾಕಿ ಬ್ಯಾನ್ ಮಾಡಿದ ದೆಹಲಿ ಸರ್ಕಾರ

    – ಜ.1ರ ವರೆಗೆ ಪಟಾಕಿ ಉತ್ಪಾದನೆ, ಮಾರಾಟ, ಬಳಕೆಗೆ ಬ್ರೇಕ್

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆ ಪಟಾಕಿ ಮಾರಾಟ ಹಾಗೂ ಬಳಕೆಯನ್ನು 2025ರ ಜನವರಿ 1 ರ ವರೆಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದೆಹಲಿ ಸರ್ಕಾರ (Delhi Government) ತಿಳಿಸಿದೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೆಹಲಿಯ ಪರಿಸರ ಸಚಿವ ಗೋಪಾಲ್ ರೈ (Gopal Rai), ಕೇಜ್ರಿವಾಲ್ ಸರ್ಕಾರವು ಪಟಾಕಿಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯ ಮೇಲೆ ಸಂಪೂರ್ಣ ನಿಷೇಧವನ್ನು ವಿಧಿಸಿದೆ. 2025ರ ಜನವರಿ 1ರ ವರೆಗೆ ಆನ್‌ಲೈನ್‌ನಲ್ಲಿ ಪಟಾಕಿ ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಎತ್ತಿನಹೊಳೆ ಯೋಜನೆಯ ಮೊದಲ ಹಂತ ಉದ್ಘಾಟನೆ ಬೆನ್ನಲ್ಲೆ ಕೇಂದ್ರ ಸರ್ಕಾರ ಆಕ್ಷೇಪ

    ಚಳಿಗಾಲದ ಅಧಿವೇಶನದಲ್ಲಿ ವಾಯುಮಾಲಿನ್ಯವನ್ನು ತಡೆಯುವ 21 ಅಂಶಗಳ ಯೋಜನೆಯ ಭಾಗವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪರಿಸರ ಇಲಾಖೆಯು ಮಾಲಿನ್ಯದ ಹಾಟ್‌ಸ್ಪಾಟ್‌ಗಳಲ್ಲಿ ಗಾಳಿಯ ಗುಣಮಟ್ಟ ಮೇಲ್ವಿಚಾರಣೆ ಮಾಡಲು ಡ್ರೋನ್‌ಗಳನ್ನು ಬಳಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ದರ್ಶನ್‌ ಜೊತೆಗೆ ಸಂಪರ್ಕ ಬೆಳೆದಿದ್ದು ಹೇಗೆ? – ಎಳೆಎಳೆಯಾಗಿ ಬಿಚ್ಚಿಟ್ಟ ಪವಿತ್ರಾಗೌಡ

    ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejrival) ಅವರ ನೇತೃತ್ವದಲ್ಲಿ, ಚಳಿಗಾಲದಲ್ಲಿ ಉಂಟಾಗುವ ಮಾಲಿನ್ಯ ಸಮಸ್ಯೆ ಎದುರಿಸಲು ಸರ್ಕಾರ ತೀವ್ರ ಸಿದ್ಧತೆಗಳನ್ನು ನಡೆಸಿದೆ. ನಮ್ಮ ಸರ್ಕಾರವು ದೆಹಲಿಯಲ್ಲಿ ವಾಯುಮಾಲಿನ್ಯವನ್ನು ಕಡಿಮೆ ಮಾಡಲು ನಿರಂತರವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಇದರ ಪರಿಣಾಮವಾಗಿ ಕಳೆದ 9 ವರ್ಷಗಳಲ್ಲಿ ಸುಮಾರು 30 ಪ್ರತಿಶತದಷ್ಟು ಮಾಲಿನ್ಯವನ್ನು ಕಡಿಮೆ ಮಾಡಲಾಗಿದೆ ಎಂದರು.

  • ದೆಹಲಿಯಲ್ಲಿ ಶೀಘ್ರವೇ ಸಮ-ಬೆಸ, ಕೃತಕ ಮಳೆ ಬಗ್ಗೆ ನಿರ್ಧಾರ: ಗೋಪಾಲ್ ರೈ

    ದೆಹಲಿಯಲ್ಲಿ ಶೀಘ್ರವೇ ಸಮ-ಬೆಸ, ಕೃತಕ ಮಳೆ ಬಗ್ಗೆ ನಿರ್ಧಾರ: ಗೋಪಾಲ್ ರೈ

    ನವದೆಹಲಿ: ಮುಂದಿನ 2 ಅಥವಾ 3 ದಿನಗಳ ಕಾಲ ರಾಷ್ಟ್ರ ರಾಜಧಾನಿಯ ಮಾಲಿನ್ಯ (Pollution) ಪರಿಸ್ಥಿತಿಯನ್ನು ಗಮನಿಸಲಾಗುವುದು. ಆ ಬಳಿಕ ಸಮ-ಬೆಸ ಜಾರಿ ಮಾಡುವುದು ಅಥವಾ ಕೃತಕ ಮಳೆ (Artificial Rain) ಸುರಿಸುವ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ (Gopal Rai) ಬುಧವಾರ ಹೇಳಿದ್ದಾರೆ.

    ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದೀಪಾವಳಿಯಿಂದ ದೆಹಲಿಯ ಗಾಳಿಯ ಗುಣಮಟ್ಟವು ‘ಅತ್ಯಂತ ಕಳಪೆ’ ವಿಭಾಗದಲ್ಲಿದೆ. ಮುಂದಿನ 2-3 ದಿನಗಳ ತಾಪಮಾನ ಮತ್ತು ಗಾಳಿಯ ವೇಗವನ್ನು ಪರಿಶೀಲಿಸಲಾಗುವುದು. ಪರಿಸ್ಥಿತಿ ಉತ್ತಮಗೊಳ್ಳುವ ನಿರೀಕ್ಷೆಯಿದೆ ಎಂದರು. ಇದನ್ನೂ ಓದಿ: ಓವರ್‌ಟೇಕ್ ಭರದಲ್ಲಿ ಕಂದಕಕ್ಕೆ ಬಿದ್ದ ಬಸ್ – 38 ಮಂದಿ ಸಾವು

    ಒಂದು ವೇಳೆ ಪರಿಸ್ಥಿತಿ ಸುಧಾರಿಸದ್ದಿದ್ದರೇ ನಾವು ಕ್ರಮಗಳ ಬಗ್ಗೆ ವಿಜ್ಞಾನಿಗಳ ಜೊತೆಗೆ ನಾವು ಮೇಲ್ವಿಚಾರಣೆ ಮಾಡುತ್ತೇವೆ. ತಜ್ಞರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ ಜರುಗಿಸಲಾಗುವುದು. ಗಾಳಿಯ ಗುಣಮಟ್ಟ ತೀವ್ರವಾಗಿ ಹದಗೆಟ್ಟರೇ ಮಾತ್ರ ಬೆಸ-ಸಮದಂತಹ ಕಠಿಣ ಕ್ರಮಗಳ ಬಗ್ಗೆ ಯೋಚಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ತಮಿಳುನಾಡಿನ 9 ಜಿಲ್ಲೆಗಳಲ್ಲಿ ಮಳೆ ಎಚ್ಚರಿಕೆ – ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

    ಮಳೆಯಿಂದಾಗಿ ದೀಪಾವಳಿಗೂ ಮುನ್ನ ಉಸಿರುಗಟ್ಟಿಸುವ ಮಾಲಿನ್ಯದಿಂದ ಮುಕ್ತಿ ಸಿಕ್ಕಿತ್ತು. ಆದರೆ ದೀಪಾವಳಿ ಬಳಿಕ ಮತ್ತೆ ತೀವ್ರ ಕಳಪೆ ಮಟ್ಟದಲ್ಲಿ ಗಾಳಿಯ ಗುಣಮಟ್ಟ ದಾಖಲಾಗಿದೆ. ನವೆಂಬರ್ 13 ರಿಂದ ಬೆಸ-ಸಮ ನಿಯಮವನ್ನು ಜಾರಿಗೆ ತರಬೇಕಿತ್ತು. ಆದರೆ ನೋಂದಣಿ ಸಂಖ್ಯೆಗಳು ಕೊನೆಗೊಳ್ಳುವ ಕಾರುಗಳಂತೆ ರಸ್ತೆಯಲ್ಲಿರುವ ಕಾರುಗಳ ಸಂಖ್ಯೆಯನ್ನು ಕಡಿಮೆ ಮಾಡುವ ಬೆಸ-ಸಮ ಯೋಜನೆಯ ಪರಿಣಾಮಕಾರಿತ್ವದ ಬಗ್ಗೆ ಸುಪ್ರೀಂಕೋರ್ಟ್ ಪ್ರಶ್ನೆಗಳನ್ನು ಎತ್ತಿದಾಗ ಅದನ್ನು ತಡೆಹಿಡಿಯಲಾಯಿತು. ಇದನ್ನೂ ಓದಿ: 1 ಬಾರಿ ಬೀದಿ ನಾಯಿ ಕಚ್ಚಿದ್ರೆ ಕನಿಷ್ಟ 10 ಸಾವಿರ ಪರಿಹಾರ ಕೊಡಬೇಕು: ಹೈಕೋರ್ಟ್‌

    ಈ ಹಿಂದೆ ನವೆಂಬರ್ 20ರ ಮೊದಲು ಮೋಡ ಬಿತ್ತನೆ ತಂತ್ರಜ್ಞಾನದ ಮೂಲಕ ನಗರದಲ್ಲಿ ಕೃತಕ ಮಳೆ ಮಾಡಲು ದೆಹಲಿ ಸರ್ಕಾರ ಯೋಜಿಸಿತ್ತು. ಐಐಟಿ-ಕಾನ್ಪುರ ತಂಡದೊಂದಿಗೆ ಸಭೆ ನಡೆಸಲಾಗಿತ್ತು. ಆದರೆ ಇದಕ್ಕೆ ಕೇಂದ್ರದಿಂದ ಸಮ್ಮತಿ ಬರಬೇಕಿದೆ. ಕೃತಕ ಮಳೆಯ ಸಂಪೂರ್ಣ ವೆಚ್ಚವನ್ನು ದೆಹಲಿ ಸರ್ಕಾರ ಭರಿಸಲಿದೆ ಎಂದು ಮೊದಲೇ ನಿರ್ಧರಿಸಲಾಗಿತ್ತು. ಇದನ್ನೂ ಓದಿ: ಮೋದಿ ವಿರುದ್ಧ ಹೇಳಿಕೆ – ಪ್ರಿಯಾಂಕಾ ಗಾಂಧಿ, ಕೇಜ್ರಿವಾಲ್‌ಗೆ ಚುನಾವಣಾ ಆಯೋಗ ಶೋಕಾಸ್‌ ನೋಟಿಸ್‌

  • ಮಳೆಯಿಂದ ಸುಧಾರಿಸಿದ ವಾಯು ಗುಣಮಟ್ಟ – ದೆಹಲಿಯಲ್ಲಿ ಸದ್ಯಕ್ಕಿಲ್ಲ ಸಮ ಬೆಸ ಯೋಜನೆ

    ಮಳೆಯಿಂದ ಸುಧಾರಿಸಿದ ವಾಯು ಗುಣಮಟ್ಟ – ದೆಹಲಿಯಲ್ಲಿ ಸದ್ಯಕ್ಕಿಲ್ಲ ಸಮ ಬೆಸ ಯೋಜನೆ

    ನವದೆಹಲಿ: ಗುರುವಾರ ರಾತ್ರಿ ಸುರಿದ‌ ಮಳೆಯಿಂದಾಗಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ (Air Quality) ಪ್ರಮಾಣ ಸುಧಾರಿಸಿದ್ದು, ಸದ್ಯಕ್ಕೆ ಸಮ-ಬೆಸ (Odd-Even) ಯೋಜನೆ ಜಾರಿ ಮಾಡದಿರಲು ಸರ್ಕಾರ ನಿರ್ಧರಿಸಿದೆ ಎಂದು ಪರಿಸರ ಸಚಿವ ಗೋಪಾಲ್ ರೈ (Gopal Rai) ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಯು ಗುಣಮಟ್ಟ ವೃದ್ದಿಯಾಗಿದೆ ಎಂದರು.

    ಈ ಮೊದಲು ನವೆಂಬರ್ 13 ರಿಂದ ಸಮ ಬೆಸ ಜಾರಿಗೆ ತರಲು ನಿರ್ಧರಿಸಲಾಗಿತ್ತು, ಮಳೆಯಿಂದ ಈ ಪ್ರಸ್ತಾಪ ಕೈಬಿಟ್ಟಿದೆ. ದೀಪಾವಳಿಯ (Deepavali) ನಂತರ ಗಾಳಿಯ ಗುಣಮಟ್ಟದ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ. ಗಾಳಿಯ ಗುಣಮಟ್ಟ ಮತ್ತೆ ಹದಗೆಟ್ಟರೆ ಬೆಸ-ಸಮ ಯೋಜನೆಗೆ ಜಾರಿಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿದರು.  ಇದನ್ನೂ ಓದಿ: ಒಂದು ಮೀನಿಗೆ 70 ಲಕ್ಷ! ಅಪರೂಪದ ಮೀನು ಮಾರಿ ರಾತ್ರೋರಾತ್ರಿ 7 ಕೋಟಿ ಒಡೆಯನಾದ ಪಾಕಿಸ್ತಾನ ಮೀನುಗಾರ

    ಇದಕ್ಕೂ ಮುನ್ನ ಸೋಮವಾರ, ಸಚಿವರು ಬೆಸ-ಸಮ ಯೋಜನೆಯನ್ನು ನವೆಂಬರ್ 13 ಮತ್ತು ನವೆಂಬರ್ 20ರ ನಡುವೆ ಜಾರಿಗೊಳಿಸಲಾಗುವುದು ಎಂದು ಘೋಷಿಸಿದ್ದರು. ಈ ಯೋಜನೆಯು ಕಾರುಗಳು ತಮ್ಮ ನೋಂದಣಿ ಸಂಖ್ಯೆಗಳ ಬೆಸ ಅಥವಾ ಕೊನೆಯ ಅಂಕಿಗಳ ಆಧಾರದ ಮೇಲೆ ಪರ್ಯಾಯ ದಿನಗಳಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.

  • ಪಟಾಕಿಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯ ಮೇಲಿನ ನಿಷೇಧ ವಿಸ್ತರಣೆ

    ಪಟಾಕಿಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯ ಮೇಲಿನ ನಿಷೇಧ ವಿಸ್ತರಣೆ

    ನವದೆಹಲಿ: ಹಬ್ಬ ಹರಿದಿನಗಳಲ್ಲಿ ಮಾಲಿನ್ಯವನ್ನು ತಡೆಗಟ್ಟಲು ಎಲ್ಲಾ ರೀತಿಯ ಪಟಾಕಿ ( Fire Crackers) ಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯ ಮೇಲಿನ ನಿಷೇಧವನ್ನು ಜನವರಿ 1 ರವರೆಗೆ ವಿಸ್ತರಿಸಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ (Gopal Rai) ಬುಧವಾರ ಘೋಷಿಸಿದ್ದಾರೆ.

    ಆನ್‍ಲೈನ್‍ (Online) ನಲ್ಲಿ ಪಟಾಕಿ ಮಾರಾಟಕ್ಕೂ ನಿಷೇಧವನ್ನು ವಿಸ್ತರಿಸಲಾಗಿದೆ ಎಂದು ರೈ ಟ್ವಿಟ್ ಮಾಡಿದ್ದಾರೆ. ಎಲ್ಲಾ ರೀತಿಯ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರಿಂದ ಜನರ ಜೀವನವನ್ನು ಉಳಿಸಬಹುದು ಎಂದು ಗೋಪಾಲ್ ರೈ ತಿಳಿಸಿದ್ದಾರೆ.

    FIRE CRACKERS

    ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ದೆಹಲಿ ಪೊಲೀಸ್, ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಮತ್ತು ಕಂದಾಯ ಇಲಾಖೆಯೊಂದಿಗೆ ಕ್ರಿಯಾ ಯೋಜನೆಯನ್ನು ರೂಪಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಇದನ್ನೂ ಓದಿ: ಬಿಎಸ್‌ವೈ, ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ – ಮರು ವಿಚಾರಣೆ ನಡೆಸುವಂತೆ ಹೈಕೋರ್ಟ್‌ ಆದೇಶ

    ಕಳೆದ ವರ್ಷ ಕೊರೊನಾ ವೈರಸ್ (Corona Virus) ಮತ್ತು ಹದಗೆಡುತ್ತಿರುವ ಗಾಳಿಯ ಗುಣಮಟ್ಟದಿಂದಾಗಿ ಹಬ್ಬದ ಸೀಸನ್‍ಗೂ ಮುಂಚಿತವಾಗಿ ರಾಷ್ಟ್ರ ರಾಜಧಾನಿಯಲ್ಲಿ “ಗ್ರೀನ್ ಕ್ರ್ಯಾಕರ್ಸ್” ಸೇರಿದಂತೆ ಪಟಾಕಿಗಳನ್ನು ಮಾರಾಟ ಮಾಡುವುದನ್ನು ಮತ್ತು ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ದೆಹಲಿ ಸರ್ಕಾರ ಆದೇಶಿಸಿತ್ತು. ಪಟಾಕಿ ಸಿಡಿಸುವುದರ ವಿರುದ್ಧ ಜಾಗೃತಿ ಮೂಡಿಸಲು ಎಎಪಿ ‘ಪತಾಖೆ ನಹಿ ದಿಯೆ ಜಲಾವೋ’ ಅಭಿಯಾನವನ್ನೂ ಆರಂಭಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • AAP ಸರ್ಕಾರದ ಕಾರ್ಯಕ್ರಮ ಹೈಜಾಕ್ ಮಾಡಲು ಕೇಂದ್ರ ಸರ್ಕಾರದಿಂದ ಯತ್ನ: ಗೋಪಾಲ್ ರೈ ಕಿಡಿ

    AAP ಸರ್ಕಾರದ ಕಾರ್ಯಕ್ರಮ ಹೈಜಾಕ್ ಮಾಡಲು ಕೇಂದ್ರ ಸರ್ಕಾರದಿಂದ ಯತ್ನ: ಗೋಪಾಲ್ ರೈ ಕಿಡಿ

    ನವದೆಹಲಿ: ಇಲ್ಲಿನ ಅಸೋಲಾ ಅಭಯಾರಣ್ಯದಲ್ಲಿ ದೆಹಲಿಯ ಆಮ್ ಆದ್ಮಿ ಪಕ್ಷ (AAP) ನೇತೃತ್ವದ ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಹೈಜಾಕ್ ಮಾಡಲು ಪ್ರಯತ್ನಿಸಿದೆ ಎಂದು ಪರಿಸರ ಸಚಿವ ಗೋಪಾಲ್ ರೈ ಆರೋಪಿಸಿದ್ದಾರೆ.

    ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಸೋಲಾ ವನ್ಯಜೀವಿ ಅಭಯಾರಣ್ಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾಗಿಯಾಗಬೇಕಿತ್ತು. ಕೇಂದ್ರ ಸರ್ಕಾರ ಹೈಜಾಕ್ ಮಾಡಲು ಪ್ರಯತ್ನಿಸಿದ್ದರಿಂದಾಗಿ ಅವರು ಭಾಗಿಯಾಗದಿರಲು ನಿರ್ಧರಿಸಿದ್ದಾರೆ. ಕಾರ್ಯಕ್ರಮ ನಿಗದಿಯಾದ ಸ್ಥಳದಲ್ಲಿ ಕಳೆದ ರಾತ್ರಿ ಪೊಲೀಸರು ಪ್ರಧಾನಿ ನರೇಂದ್ರ ಮೋದಿ ಅವರಿರುವ ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವೆಯ 18 ವಯಸ್ಸಿನ ಪುತ್ರಿ ಅಕ್ರಮ ಬಾರ್‌ ನಡೆಸುತ್ತಿದ್ದಾರೆಂದು ಆರೋಪ – ಕೈ ನಾಯಕರಿಗೆ ಸ್ಮೃತಿ ಇರಾನಿ ನೋಟಿಸ್‌

    ದೆಹಲಿ ಪೊಲೀಸರು ಪ್ರಧಾನಿ ಕಾರ್ಯಾಲಯದ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಕೇಜ್ರಿವಾಲ್ ಸರ್ಕಾರದ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಅವರ ರಾಜಕೀಯ ಕಾರ್ಯಕ್ರಮವಾಗಿ ಪರಿವರ್ತಿಸಿದ್ದಾರೆ. ಕಳೆದ ರಾತ್ರಿಯೇ ಪೊಲೀಸರು ಕಾರ್ಯಕ್ರಮ ನಿಗದಿಯಾದ ಸ್ಥಳಕ್ಕೆ ಧಾವಿಸಿ ಪ್ರದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಎಎಪಿ ಸರ್ಕಾರದ ಬ್ಯಾನರ್‌ಗಳನ್ನು ಹರಿದು ಹಾಕಿ, ಪ್ರಧಾನಿ ಮೋದಿ ಅವರಿರುವ ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ. ಪ್ರಧಾನಿ ಮೋದಿ ಭಾವಚಿತ್ರವಿರುವ ಬ್ಯಾನರ್‌ಗಳನ್ನು ಮುಟ್ಟದಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮರಳು ಮೂಟೆ ಅಳವಡಿಸಿದ ನಂತರ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಘು ವಾಹನ ಸಂಚಾರ: ಬಿ.ಸಿ.ನಾಗೇಶ್

    ಈ ಬೆಳವಣಿಗೆಯು ಪ್ರಧಾನಿ ನರೇಂದ್ರ ಮೋದಿ ಅವರು ಕೇಜ್ರಿವಾಲ್ ಅವರಿಗೆ ಹೆದರಿಕೊಂಡಿರುವ ಸೂಚನೆಯನ್ನು ತೋರಿಸುತ್ತದೆ. ಎಎಪಿ ಸರ್ಕಾರದ ವಿರುದ್ಧ ಅಪಪ್ರಚಾರದ ಪ್ರಯತ್ನಗಳು ನಡೆಯುತ್ತಿದ್ದು, ಸತ್ಯೇಂದ್ರ ಜೈನ್ ಅವರನ್ನು ಸುಳ್ಳು ಆರೋಪದ ಮೇಲೆ ಬಂಧಿಸಲಾಗಿದೆ. ಎಎಪಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸುವ ಪಿತೂರಿ ನಡೆಸಲಾಗುತ್ತಿದೆ. ಪೊಲೀಸರು ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಗಾಗಿ ಇರಬೇಕು. ಪ್ರಧಾನಿ ಮೋದಿ ಭಾವಚಿತ್ರದ ಬ್ಯಾನರ್ ಅಳವಡಿಸಲು ಅಲ್ಲ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುಂದಿನ ಆದೇಶದವರೆಗೆ ದೆಹಲಿಯ ಎಲ್ಲಾ ಶಾಲೆಗಳನ್ನು ಮುಚ್ಚಲಾಗುವುದು: ಗೋಪಾಲ್ ರೈ

    ಮುಂದಿನ ಆದೇಶದವರೆಗೆ ದೆಹಲಿಯ ಎಲ್ಲಾ ಶಾಲೆಗಳನ್ನು ಮುಚ್ಚಲಾಗುವುದು: ಗೋಪಾಲ್ ರೈ

    ನವದೆಹಲಿ: ಮುಂದಿನ ಆದೇಶದವರೆಗೆ ದೆಹಲಿಯ ಎಲ್ಲಾ ಶಾಲೆಗಳನ್ನು ಮುಚ್ಚುವುದಾಗಿ ದೆಹಲಿ ಪರಿಸರ ಸಚಿವ ಗೋಪಾಲ್ ರೈ ಇಂದು ಘೋಷಿಸಿದರು.

    ಮಾಲಿನ್ಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಪ್ರಸ್ತುತ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇದರಿಂದ ಮಕ್ಕಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ದೆಹಲಿಯ ಎಲ್ಲ ಶಾಲೆಗಳನ್ನು ನಾಳೆಯಿಂದ ಮುಂದಿನ ಆದೇಶದವರೆಗೆ ಮುಚ್ಚಲಾಗುವುದು ಎಂದು ಹೇಳಿದರು.

    ಗಾಳಿಯ ಗುಣಮಟ್ಟ ಸುಧಾರಿಸುತ್ತಿದ್ದ ಮುನ್ಸೂಚನೆಯಿಂದ ನಾವು ಶಾಲೆಗಳನ್ನು ಪುನರಾರಂಭಿಸಿದ್ದೆವು. ಆದರೆ ಈಗ ಮತ್ತೆ ವಾಯುಮಾಲಿನ್ಯದ ಮಟ್ಟವು ಹೆಚ್ಚಾಗಿದೆ. ಈ ಹಿನ್ನೆಲೆ ನಾಳೆಯಿಂದ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ನನಗೆ ಮತ ಹಾಕದಂತೆ ಜೆಡಿಎಸ್ ಮುಖಂಡರು ಬೆದರಿಕೆ ಹಾಕ್ತಿದ್ದಾರೆ: ಎಂ.ಶಂಕರ್ ಆರೋಪ

    ನವೆಂಬರ್ 13ರಲ್ಲಿಯೂ ಶಾಲಾ-ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದ್ದು, ಸೋಮವಾರದಿಂದ ಪ್ರಾರಂಭಿಸಲಾಗಿತ್ತು. ಈ ಹಿನ್ನೆಲೆ ದೈಹಿಕ ತರಗತಿಗಳನ್ನು ಪುನರಾರಂಭಿಸುವಂತೆ ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್ ಗೆ ಕೇಳಿದ ಕೆಲವೇ ಗಂಟೆಗಳಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

    ಈ ವೇಳೆ ಸುಪ್ರೀಂ ಕೋರ್ಟ್ ದೆಹಲಿಯ ಎನ್‍ಸಿಆರ್‍ನಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟ ಕುರಿತು ಕೇಂದ್ರ ಮತ್ತು ದೆಹಲಿಯನ್ನು ತರಾಟೆಗೆ ತೆಗೆದುಕೊಂಡಿತು. ನಾವು, ನಿಮ್ಮ ಅಧಿಕಾರಶಾಹಿಯಲ್ಲಿ ಸೃಜನಶೀಲತೆಯನ್ನು ತುಂಬಲು ಸಾಧ್ಯವಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್, ಅಧಿಕಾರಿಗಳು ಮಾಲಿನ್ಯವನ್ನು ನಿಯಂತ್ರಿಸಲು ವಿಫಲವಾದರೆ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತೆ ಎಂದು ಎಚ್ಚರಿಸಿದೆ. ಇದನ್ನೂ ಓದಿ:  ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್‍ಗೆ 3ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

    ಮುಖ್ಯ ನ್ಯಾಯಮೂರ್ತಿ ಎನ್‍ವಿ ರಮಣ ನೇತೃತ್ವದ ವಿಶೇಷ ಪೀಠವು ಮಾಲಿನ್ಯ ಮಟ್ಟವನ್ನು ತಗ್ಗಿಸಲು ಗಂಭೀರ ಕ್ರಮಗಳನ್ನು ನಿರೀಕ್ಷಿಸುವುದಾಗಿ ಹೇಳಿದೆ.