Tag: ಗೋಪಾಲಕೃಷ್ಣ ದೇಶಪಾಂಡೆ

  • ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ ಇನ್ಮೇಲೆ ‘ಅಣ್ತಮ್ಮ’

    ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ ಇನ್ಮೇಲೆ ‘ಅಣ್ತಮ್ಮ’

    ‘ಕಿರಾತಕ’ ನಿರ್ದೇಶಕ ಪ್ರದೀಪ್ ರಾಜ್, ಪಿ ಸಿ ಶೇಖರ್, ಪ್ರಶಾಂತ್ ರಾಜಪ್ಪ ಡೈರೆಕ್ಷನ್‌ ಟೀಮ್‌ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ವಿಶ್ವ (Vishwa) ನಿರ್ದೇಶನದ ಚೊಚ್ಚಲ ಚಿತ್ರ ‘ಅಣ್ತಮ್ತನ’ ಘೋಷಣೆ ಆಗಿದೆ. ಈ ಚಿತ್ರದಲ್ಲಿ ನಟ ಅಚ್ಯುತ್ ಕುಮಾರ್ (Achyuth Kumar) ಮತ್ತು ಗೋಪಾಲಕೃಷ್ಣ ದೇಶಪಾಂಡೆ (Gopal Krishna Deshpande) ಅಣ್ಣ ತಮ್ಮಂದಿರಾಗಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

    ಅಚ್ಯುತ್, ಗೋಪಾಲಕೃಷ್ಣ ಜೊತೆ ಗಿರೀಶ್ ಜಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಎಸ್ ವಿ ಅವರ ಸಂಗೀತ, ಶೈಲೇಶ್ ಕುಮಾರ್ ಸಂಭಾಷಣೆ, ಹರಿ ಪರಾಕ್ ಸಾಹಿತ್ಯ ಈ ಚಿತ್ರಕ್ಕಿದೆ. ಇದನ್ನೂ ಓದಿ:BBK11: ಮಾನಸಾ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್

    ಈ ಚಿತ್ರ ಅಣ್ಣ ತಮ್ಮ ಸಂಬಂಧ, ನಮ್ಮ ಮಣ್ಣಿನ ಆಚರಣೆ, ಹಳೆ ಮೈಸೂರು ಸಂಸ್ಕೃತಿ, ನಂಬಿಕೆ ಮೂಢನಂಬಿಕೆಗಳ ಸುತ್ತ ಹೆಣೆದಿರುವ ಕಥೆ ಹೊಂದಿದೆ. ಆದಿಚುಂಚನಗಿರಿ, ನಾಗಮಂಗಲ, ಮದ್ದೂರು, ಮಂಡ್ಯ ಸುತ್ತ-ಮುತ್ತ ಚಿತ್ರೀಕರಣ ನಡೆಯಲಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.