Tag: ಗೋಪಾಲಕೃಷ್ಣ

  • ತನಿಖೆ ಬೇಕಾದ್ರೆ ಆಗಲಿ, ಸಿಎಂ ರಾಜೀನಾಮೆ ಕೊಡೋ ಅವಶ್ಯಕತೆ ಇಲ್ಲ: ಬೇಳೂರು ಗೋಪಾಲಕೃಷ್ಣ

    ತನಿಖೆ ಬೇಕಾದ್ರೆ ಆಗಲಿ, ಸಿಎಂ ರಾಜೀನಾಮೆ ಕೊಡೋ ಅವಶ್ಯಕತೆ ಇಲ್ಲ: ಬೇಳೂರು ಗೋಪಾಲಕೃಷ್ಣ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ನಾವೆಲ್ಲ ಸಿದ್ದರಾಮಯ್ಯ ಜೊತೆ ಇದ್ದೇವೆ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ (Belur Gopalakrishna) ತಿಳಿಸಿದ್ದಾರೆ.

    ಸಿಎಂ ಭೇಟಿ ಬಳಿಕ ಮಾತನಾಡಿದ ಅವರು, ಸಿಎಂ ಅವರು ಖುಷಿ ಖುಷಿಯಾಗಿ ಇದ್ದಾರೆ. ಅವರಿಗೆ ನಾವು ಧೈರ್ಯ ಕೊಟ್ಟಿದ್ದೇವೆ. ರಾಜ್ಯದ ಎಲ್ಲಾ ಎಂಎಲ್‌ಎಗಳು, ಎಂಪಿಗಳು ಸಿಎಂಗೆ ಧೈರ್ಯ ಕೊಟ್ಟಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ತನಿಖೆಯಾಗಬೇಕು – ಹರಿಯಾಣ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಮೋದಿ ಆಗ್ರಹ

    ವಿಜಯೇಂದ್ರ (B Y Vijayendra), ಅಶೋಕ್ (R Ashok) ಅವರಿಗೆ ಯಾವ ನೈತಿಕತೆ ಇದೆ ಸಿಎಂ ರಾಜೀನಾಮೆ ಕೇಳುವುದಕ್ಕೆ. ಯತ್ನಾಳ್ ಅವರೇ ವಿಜಯೇಂದ್ರ 2 ಸಾವಿರ ಕೋಟಿ ರೂ. ಭ್ರಷ್ಟಾಚಾರ ಮಾಡಿದ್ದಾನೆ. ಅವನನ್ನು ತೆಗೆದು ಹಾಕಬೇಕು ಎಂದು ಅವರ ಪಕ್ಷದ ಮುಖಂಡರೇ ಹೇಳಿದ್ದಾರೆ. ಇವರೆಲ್ಲ ನಮಗೆ ಪಾಠ ಹೇಳೋದು ಬೇಡ ಎಂದು ವಿಜಯೇಂದ್ರ, ಅಶೋಕ್ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಬಳ್ಳಾರಿ ಜೈಲಲ್ಲಿ ಗುರುವಾರ ಕೊಲೆ ಆರೋಪಿ ದರ್ಶನ್‌ಗೆ `ಐಟಿ’ ಡ್ರಿಲ್

    ಇವತ್ತು ಕೋರ್ಟ್ ತನಿಖೆ ಮಾಡಿ ಎಂದು ಆದೇಶ ಮಾಡಿದೆ. ಕೋರ್ಟ್ ಆದೇಶದಂತೆ ತನಿಖೆ ಆಗಲಿ. ಮುಂದೆ ಏನಾಗುತ್ತೋ ನೋಡೋಣ. ರಾಜ್ಯದಲ್ಲಿ ಯಾರು ಏನು ಮಾಡಿದ್ದಾರೆ ಎಲ್ಲಾ ಗೊತ್ತಿದೆ. ರಾಜ್ಯಪಾಲರು (Governor) ಕೇಂದ್ರದ ನಾಯಕರ ಕೈಗೊಂಬೆಯಾಗಿ ಹೀಗೆಲ್ಲ ಆಟ ಆಡಿಸುತ್ತಾ ಇದ್ದಾರೆ. ರಾಜ್ಯಪಾಲರಿಗೆ ಕೇಂದ್ರದ ನಾಯಕರು ತಾಕೀತು ಮಾಡಿ ಸಿಎಂ ವಿರುದ್ಧ ಅನುಮತಿ ಕೊಡಿಸಿರೋದು. ಕೋರ್ಟ್‌ಗೆ ಬೆಲೆ ಕೊಡಬೇಕು. ಅದರಂತೆ ತನಿಖೆ ಆಗಲಿ. 136 ಜನರು ಸಿಎಂ ಜೊತೆ ಇದ್ದೇವೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಹಿಂದೆಯೂ ನಾವು ಶಾಸಕಾಂಗ ಸಭೆ ಸೇರಿ ಸಿಎಂಗೆ ನಮ್ಮ ಬೆಂಬಲ ಕೊಟ್ಟಿದ್ದೇವೆ. ಈಗಲೂ ಹಾಗೇ ಮಾಡುತ್ತೇವೆ ಎಂದರು. ಇದನ್ನೂ ಓದಿ: 5ಜಿ ಯುಗದಲ್ಲೂ ಹಿಜ್ಬುಲ್ಲಾ ಉಗ್ರರು ಪೇಜರ್‌ ಬಳಸುತ್ತಿರುವುದು ಯಾಕೆ?

    ಇಷ್ಟೆಲ್ಲ ಮಾತನಾಡುವ ಬಿಜೆಪಿ ಅವರು ಮುನಿರತ್ನ ಕೇಸ್ ಬಗ್ಗೆ ಒಬ್ಬರಾದರೂ ಬಾಯಿ ಬಿಟ್ರಾ? ರಾಜೀನಾಮೆ ಕೊಡಿ ಎಂದು ಕೇಳಿ ಅನ್ನೋ ಯೋಗ್ಯತೆ ಇದೆಯಾ ಇವರಿಗೆ. ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆ. ಅಶೋಕ್, ವಿಜಯೇಂದ್ರ ರಾಜೀನಾಮೆ ಕೇಳಿದ್ದಾರಾ? ರಾಜೀನಾಮೆ ಕೇಳೋ ತಾಕತ್ತು ಅವರಿಗೆ ಇಲ್ಲ. ಏಡ್ಸ್ ಇಂಜೆಕ್ಷನ್ ಕೊಟ್ಟು ಜನರನ್ನ ಸಾಯಿಸು ಅಂತ ಹೇಳೋರನ್ನ ಸುಮ್ಮನೆ ಬಿಡೋದಾ? ಅಶೋಕ್‌ಗೂ ಇಂಜೆಕ್ಷನ್ ಕೊಡೋಕೆ ಹೋಗಿದ್ದರಂತೆ. ಪಿಎಸ್‌ಐ ಕೇಸ್ ಸರಿಯಾಗಿ ತನಿಖೆ ಮಾಡಿದರೆ ಇಷ್ಟು ಹೊತ್ತಿಗೆ ಜೈಲಿಗೆ ಹೋಗಬೇಕಿತ್ತು. ಅಪ್ಪನ ಸಹಿ ಫೋರ್ಜರಿ ಸಹಿ ಮಾಡಿ ದುಡ್ಡು ಮಾಡಿದವರು ಇವರು. ಇವರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ನಾವೆಲ್ಲರು ಸಿದ್ದರಾಮಯ್ಯ ಪರ ಇರುತ್ತೇವೆ. ರಾಜೀನಾಮೆ ಕೊಡೋ ಪ್ರಶ್ನೆ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ:  ತನಿಖೆ ಎದುರಿಸಲು ಸಿದ್ಧನಿದ್ದೇನೆ: ಕೋರ್ಟ್ ಆದೇಶಕ್ಕೆ ಸಿಎಂ ಪ್ರತಿಕ್ರಿಯೆ

  • ಮಂಡ್ಯ ನೂತನ ಡಿಸಿಯಾಗಿ ಗೋಪಾಲಕೃಷ್ಣ ಅಧಿಕಾರ ಸ್ವೀಕಾರ

    ಮಂಡ್ಯ ನೂತನ ಡಿಸಿಯಾಗಿ ಗೋಪಾಲಕೃಷ್ಣ ಅಧಿಕಾರ ಸ್ವೀಕಾರ

    ಮಂಡ್ಯ: ನೂತನ ಜಿಲ್ಲಾಧಿಕಾರಿಯಾಗಿ ಡಾ.ಹೆಚ್.ಎನ್.ಗೋಪಾಲಕೃಷ್ಣ(Dr H N Gopalkrishna) ಅವರು ಅಧಿಕಾರ ಸ್ವೀಕರಿಸಿದರು. ಪಶು ಸಂಗೋಪನೆ ಇಲಾಖೆಯ ಆಯುಕ್ತರಾಗಿ ವರ್ಗಾವಣೆಯಾಗಿರುವ ಎಸ್.ಅಶ್ವತಿ(S Ashwathi) ಅವರು ಇಂದು ಅಧಿಕಾರ ಹಸ್ತಾಂತರಿಸಿದರು.

    ಅಧಿಕಾರ ಸ್ವೀಕರಿಸಿಕೊಂಡ ನಂತರ ಮಾತನಾಡಿದ ಅವರು, ಜಿಲ್ಲಾಡಳಿತದ ವತಿಯಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಲಾಗುವುದು ಎಂದರು. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಮತ್ತಷ್ಟು ಹಣ ಬಿಡುಗಡೆ ಮಾಡಲು ಮುಂದಾದ ಸರ್ಕಾರ

    ಸಾರ್ವಜನಿಕರು ತಮ್ಮ ಕೆಲಸಗಳಿಗೆ ಜಿಲ್ಲಾ ಮತ್ತು ತಾಲೂಕು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಅವುಗಳು ನಿಗಧಿತ ಅವಧಿಯಲ್ಲಿ ಫಲಾನುಭವಿಗಳಿಗೆ ತಲುಪಿಸುವುದು. ಜಿಲ್ಲೆಯಲ್ಲಿರುವ ಸಮಸ್ಯೆಗಳನ್ನು ಜಿಲ್ಲಾಡಳಿತ ಒಂದು ತಂಡವಾಗಿ ಕಾರ್ಯ ನಿರ್ವಹಿಸಿ ಪರಿಹರಿಸುತ್ತದೆ ಎಂದು ತಿಳಿಸಿದರು.

    ಈ ಹಿಂದೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಆಯುಕ್ತರಾಗಿ, ಚೆಸ್ಕಾಂ ನ ವ್ಯವಸ್ಥಾಪಕ ನಿರ್ದೇಶಕ,  ಮಂಗಳೂರಿನಲ್ಲಿ ನಗರ ಪಾಲಿಕೆಗಳ ಆಯುಕ್ತರಾಗಿ ಡಾ.ಹೆಚ್.ಎನ್.ಗೋಪಾಲಕೃಷ್ಣ ಕಾರ್ಯನಿರ್ವಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಎಸ್.ಆರ್ ವಿಶ್ವನಾಥ್ ನೀಡಿದ್ದ ಎಚ್ಚರಿಕೆಯೇ ಕೊಲೆ ಸಂಚಿಗೆ ಕಾರಣವಾಯ್ತಾ..?

    ಎಸ್.ಆರ್ ವಿಶ್ವನಾಥ್ ನೀಡಿದ್ದ ಎಚ್ಚರಿಕೆಯೇ ಕೊಲೆ ಸಂಚಿಗೆ ಕಾರಣವಾಯ್ತಾ..?

    ಬೆಂಗಳೂರು: ಶಾಸಕ ಎಸ್.ಆರ್ ವಿಶ್ವನಾಥ್ ಕೊಲೆಗೆ ಸುಪಾರಿ ಪ್ರಕರಣ ಸಂಬಂಧ ಕ್ಷಣಕ್ಕೊಂದು ಟ್ವಿಸ್ಟ್ ಸಿಕ್ತಿದೆ. ವಿಶ್ವನಾಥ್ ಮತ್ತು ಗೋಪಾಲಕೃಷ್ಣ ನಡುವಿನ ವೈಷಮ್ಯ ಇದೆಲ್ಲದಕ್ಕೂ ಕಾರಣ ಎನ್ನಲಾಗ್ತಿದೆ.

    ಯಲಹಂಕದಲ್ಲಿ ವೀರ ಸಾವರ್ಕರ್ ಮೇಲ್ಸೆತುವೆ ಉದ್ಘಾಟನೆ ದಿನದ ಹಿಂದಿನ ರಾತ್ರಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗೆ ಸಜ್ಜಾಗಿದ್ರು. ಗೋಪಾಲಕೃಷ್ಣ ಸೂಚನೆಯಂತೆ ಕಪ್ಪು ಬಾವುಟಗಳನ್ನು ಹಿಡಿದು ಪ್ರತಿಭಟನೆಗೆ ಸಿದ್ಧರಾಗಿದ್ರು. ಆದರೆ ಶಾಸಕ ಎಸ್.ಆರ್ ವಿಶ್ವನಾಥ್, ಗೋಪಾಲಕೃಷ್ಣಗೆ ಕರೆ ಮಾಡಿ ಪ್ರತಿಭಟನೆ ಮಾಡಿದ್ರೆ ಹೌಸಿಂಗ್ ಬೋರ್ಡ್‍ಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಕಟ್ಟುತ್ತಿರುವ ಮನೆ ನೆಲಸಮ ಮಾಡೋದಾಗಿ ಎಚ್ಚರಿಕೆ ನೀಡಿದ್ರು.

    ಅದರಂತೆ ಬೆಳ್ಳಂಬೆಳಗ್ಗೆ ಗೋಪಾಲಕೃಷ್ಣ ಮನೆ ಮುಂದೆ ಎರಡು ಜೆಸಿಬಿಗಳು ನಿಂತಿದ್ದವು. ಇದರಿಂದ ಹೆದರಿದ ಗೋಪಾಲಕೃಷ್ಣ ಪ್ರತಿಭಟನೆಯಿಂದ ಹಿಂದೆ ಸರಿದಿದ್ರು. ಪರಿಣಾಮ ಕಾರ್ಯಕರ್ತರ ಆಕ್ರೋಶ, ಬಿಜೆಪಿ ಕಾರ್ಯಕರ್ತರ ಅಪಹಾಸ್ಯದಿಂದ ಮುಜುಗರಕ್ಕೊಳಗಾಗಿದ್ರು. ಇದೇ ಕಾರಣದಿಂದ ವೈಷಮ್ಯ ಹೆಮ್ಮರವಾಗಿತ್ತು ಎನ್ನಲಾಗ್ತಿದೆ. ಇದನ್ನೂ ಓದಿ: ಎಸ್.ಆರ್. ವಿಶ್ವನಾಥ್ ಕೊಲೆಗೆ ಸಂಚು ಪ್ರಕರಣ- ಗೋಪಾಲಕೃಷ್ಣ ವಿರುದ್ಧ ಎಫ್‍ಐಆರ್

    ಇತ್ತ ಶಾಸಕರ ಕೊಲೆಗೆ ಸಂಚು ರೂಪಿಸಿರೋದನ್ನ ಖಂಡಿಸಿ ಇಂದು ಬಿಜೆಪಿ ಕಾರ್ಯಕರ್ತರು, ವಿಶ್ವನಾಥ್ ಬೆಂಬಲಿಗರು ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿಭಟನೆಗೆ ಸಿದ್ಧತೆ ಮಾಡಿಕೊಂಡಿರೋ ಹಿನ್ನೆಲೆಯಲ್ಲಿ ರಾಜಾನುಕುಂಟೆ ಪೊಲೀಸರು ಭದ್ರತೆಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.

  • ತಪ್ಪು ಮಾಡಿದ್ದರೆ ನಾವು ಯಾರನ್ನು ರಕ್ಷಣೆ ಮಾಡುವುದಿಲ್ಲ : ಡಿಕೆ. ಶಿವಕುಮಾರ್

    ತಪ್ಪು ಮಾಡಿದ್ದರೆ ನಾವು ಯಾರನ್ನು ರಕ್ಷಣೆ ಮಾಡುವುದಿಲ್ಲ : ಡಿಕೆ. ಶಿವಕುಮಾರ್

    ಬೆಂಗಳೂರು: ಎಲೆಕ್ಷನ್ ಟೈಂನಲ್ಲಿ ಹೀಗೆ ಹೆದರಿಸುವುದಕ್ಕೆ ಯಾವುದೋ ಆಡಿಯೋ ಬಿಡುಗಡೆ ಮಾಡಿ ಹೆದರಿಸುತ್ತಿದ್ದಾರೆ. ಈ ಬಗ್ಗೆ ತನಿಖೆ ಆಗಲಿ. ತಪ್ಪು ಮಾಡಿದ್ದರೆ ನಾವು ಯಾರನ್ನು ರಕ್ಷಣೆ ಮಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ಶಾಸಕ ಎಸ್. ಆರ್ ವಿಶ್ವನಾಥ್ ಕೊಲೆಗೆ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣರಿಂದ ಯತ್ನ ನಡೆದಿದೆ ಎಂಬ ಆರೋಪದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲೆಕ್ಷನ್ ಟೈಂನಲ್ಲಿ ಹೀಗೆ ಹೆದರಿಸುವುದಕ್ಕೆ ಯಾವುದೋ ಆಡಿಯೋ ಬಿಡುಗಡೆ ಮಾಡಿ ಹೆದರಿಸುತ್ತಿದ್ದಾರೆ. ಈ ಬಗ್ಗೆ ತನಿಖೆ ಆಗಲಿ. ತಪ್ಪು ಮಾಡಿದ್ದರೆ ನಾವು ಯಾರನ್ನು ರಕ್ಷಣೆ ಮಾಡುವುದಿಲ್ಲ. ಚುನಾವಣೆಯಲ್ಲಿ ಅವರ ವಿರುದ್ಧ ಹೋದವರನ್ನು ಹೆದರಿಸುವ ಕೆಲಸ ಆಗುತ್ತಿದೆ. ತನಿಖೆ ಆಗಲಿ ಎಲ್ಲಾ ಗೊತ್ತಾಗುತ್ತದೆ. ನಮ್ಮ ಪಕ್ಷದಲ್ಲಿ ಯಾರು ಅಂತಹ ಕೆಲಸ ಮಾಡುವವರು ಇಲ್ಲ. ರಾಜಕೀಯವಾಗಿ ಅವರನ್ನು ಹೆದರಿಸುವುದಕ್ಕೆ ಇಂತಹ ಆರೋಪ ಮಾಡಿರಬಹುದು ಎಂದು ಗೋಪಾಲಕೃಷ್ಣ ಪರ ಬ್ಯಾಟ್ ಬೀಸಿದ್ದಾರೆ. ಇದನ್ನೂ ಓದಿ: ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಸ್ಯಾಂಪಲ್‌ ಕಳುಹಿಸಿ: ರಾಜ್ಯಗಳಿಗೆ ಕೇಂದ್ರ ಸೂಚನೆ

    ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಸರ್ಕಾರಿ ಅಧಿಕಾರಿಗಳು ಮತಯಾಚನೆ ಮಾಡುತ್ತಿದ್ದಾರೆ ಎಂಬ ಆರೋಪ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಬೆಳಗಾವಿ ಸೇರಿದಂತೆ ಅನೇಕ ಕಡೆ ಇದೇ ಆಗುತ್ತಿದೆ. ಸರ್ಕಾರ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಸರ್ಕಾರಿ ಅಧಿಕಾರಿಗಳೇ ಅನೇಕ ಕಡೆ ಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಶಾಸಕ ವಿಶ್ವನಾಥ್ ಹತ್ಯೆಗೆ ಸ್ಕೆಚ್‌ – ಸುಪಾರಿ ಕೊಡ್ತಿರೋ ವೀಡಿಯೋ, ಆಡಿಯೋ ವೈರಲ್‌

    ಮಗಳ ಮೇಲೆ ಅತ್ಯಾಚಾರ ಮಾಡಿದ್ದ ಕೆಜಿಎಫ್ ಬಾಬುಗೆ ಕಾಂಗ್ರೆಸ್‍ನಲ್ಲಿ ಟಿಕೆಟ್ ಕೊಟ್ಟಿದ್ದಾರೆ ಎಂಬ ಸಹಕಾರ ಸಚಿವ ಸೋಮಶೇಖರ್ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸೋಮಶೇಖರ್ ಯಾರನ್ನು ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ. ಎಂತ, ಎಂತ ಆರೋಪ ಇರುವವರು ಅವರ ಜೊತೆ ಇದ್ದಾರೆ ಅಂತ ಎಲ್ಲಾ ಗೊತ್ತಿದೆ. ಮೊದಲು ಅವರ ತಟ್ಟೆ ಕ್ಲೀನ್ ಮಾಡಿಕೊಳ್ಳಲಿ ಆಮೇಲೆ ನಮ್ಮ ಬಗ್ಗೆ ಮಾತಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಾಜ್ಯದಿಂದ ಇಸ್ರೋ ಸಂಸ್ಥೆ ಗುಜರಾತ್‍ಗೆ ಶಿಫ್ಟ್ ಮಾಡುತ್ತಿರುವ ಬಗ್ಗೆ, ಕೇಂದ್ರ ಸರ್ಕಾರ ಈ ನಿರ್ಧಾರ ಬದಲಿಸಬೇಕು. ಗುಜರಾತ್‍ಗೆ ಬೇಕಿದ್ದರೆ ಬೇರೊಂದು ಪ್ರಾಜೆಕ್ಟ್ ನೀಡಲಿ. ಆದರೆ ಇದು ನಮ್ಮ ರಾಜ್ಯದ ಹೆಮ್ಮೆಯ ವಿಚಾರ. ಕೇಂದ್ರ ಸರ್ಕಾರ ಈ ತೀರ್ಮಾನ ಕೈಬಿಡಬೇಕು. ಇದು ನಮ್ಮ ಕಾಂಗ್ರೆಸ್ ಹಾಗೂ ರಾಜ್ಯದ ಜನರ ಒತ್ತಾಯವಾಗಿದೆ ಎಂದು ಹೇಳಿದ್ದಾರೆ.

  • ಶಾಸಕ ವಿಶ್ವನಾಥ್ ಹತ್ಯೆಗೆ ಸ್ಕೆಚ್‌ – ಸುಪಾರಿ ಕೊಡ್ತಿರೋ ವೀಡಿಯೋ, ಆಡಿಯೋ ವೈರಲ್‌

    ಶಾಸಕ ವಿಶ್ವನಾಥ್ ಹತ್ಯೆಗೆ ಸ್ಕೆಚ್‌ – ಸುಪಾರಿ ಕೊಡ್ತಿರೋ ವೀಡಿಯೋ, ಆಡಿಯೋ ವೈರಲ್‌

    ಬೆಂಗಳೂರು: ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಅವರ ಕೊಲೆ ಸಂಚಿಗೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ, ಆಪ್ತನಿಗೆ ಸುಪಾರಿ ಕೊಟ್ಟಿರುವ ಎಕ್ಸ್‌ಕ್ಲೂಸಿವ್ ವೀಡಿಯೋ, ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಯಲಹಂಕದಿಂದ ಗೋಪಾಲಕೃಷ್ಣ ಅವರು ಎಸ್. ಆರ್ ವಿಶ್ವನಾಥ್ ಚುನಾವಣೆಯಲ್ಲಿ ವಿರುದ್ಧವಾಗಿ ನಿಂತು ಸೋತಿದ್ದರು. ಎಸ್. ಆರ್ ವಿಶ್ವನಾಥ್  ಅವರನ್ನು ಕೊಲೆ ಮಾಡಲು ಸುಪಾರಿ ನೀಡಿರುವ ಈ ವೀಡಿಯೋ 2 ತಿಂಗಳ ಹಿಂದೆ ಶೂಟ್‌ ಮಾಡಿದ್ದು ಎನ್ನಲಾಗಿದೆ. ಗೋಪಾಲಕೃಷ್ಣ ತನ್ನ ಆಪ್ತ ಕುಳ್ಳ ದೇವರಾಜ್‍ಗೆ  ಸುಪಾರಿ  ಕೊಟ್ಟಿರುವ ಎರಡು ವೀಡಿಯೋ ಹಾಗೂ ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ವೀಡಿಯೋದಲ್ಲಿ ಏನಿದೆ?: 6 ತಿಂಗಳು ಬೇಕಾದರೂ ಆಗಲಿ, ಕಡಬಗೆರೆ ಸೀನನ್ನು ಎತ್ತಿದ ಹಾಗೇ ಎಸ್.ಆರ್ ವಿಶ್ವನಾಥ್ ಎತ್ತಬೇಕು. ಕಾರ್‌ನಲ್ಲಿ ಹೋಗುವಾಗ ಅಟ್ಯಾಕ್ ಮಾಡಬಾರದು, ನಾಗಶೆಟ್ಟಿಯಲ್ಲಿ ಮಾಡೋಣ. ತೋಟ ಇರುವ ಜಾಗ ನೋಡಿ ಮಾಡೋಣ ಎಂದು ಹೇಳಿದ್ದಾರೆ. ಜೊತೆಗೆ ವೀಡಿಯೋದಲ್ಲಿ 20 ಲಕ್ಷ ರೂಪಾಯಿ ಹಣವನ್ನು ಕೊಡುವ ದೃಶ್ಯವೂ ಇದೆ.

    ಕುಳ್ಳ ದೇವರಾಜ್ : ಹೇಳ್ತಿನಿ ಯಾರು ಅಂತ.. ಪಟ್ ಅಂತ ರೆಡಿ ಮಾಡಿ ಎಲ್ಲಾ ಮುಗಿಸಿಬಿಡೋಣ..
    ಗೋಪಾಲಕೃಷ್ಣ : ಯಾವ ತರ ಮಾಡುತ್ತಾರೋ ಸೈಲೆಂಟಾಗಿ ಮಾಡುತ್ತಾರೆ..
    ಕುಳ್ಳ ದೇವರಾಜ್ : ಸೈಲೆಂಟಾಗಿ ಮಾಡ್ತಾರೆ ನಿಂಗ್ ಯಾಕಣ್ಣ?
    ಗೋಪಾಲಕೃಷ್ಣ : ಪಕ್ಕಾ ತಾನೇ?
    ಕುಳ್ಳ ದೇವರಾಜ್ : ನಿನ್ನ ಕಥೆ ಕಟ್ಕೊ ನಾನು ಪಕ್ಕಾ ಮಾಡುಸ್ತೀನಿ. ಒಂದು ಹೊಡೆದವನಿಗೆ ಇನ್ನೊಂದು ಹೊಡೆಯೋದು ಕಷ್ಟಾನಾ? ಸಲ್ಪ ರಿಸ್ಕ್ ಆಗುತ್ತೆ. ಒಟ್ಟಿನಲ್ಲಿ ಡಿಪಾರ್ಟ್‍ಮೆಂಟದ್ದು ನಿನ್ನ ಇಂಚಾರ್ಜ್  ಡಿಪಾರ್ಟ್‍ಮೆಂಟ್ ಏನ್ ಮಾಡ್ತಾರೆ..
    ಗೋಪಾಲಕೃಷ್ಣ : ಡಿಪಾರ್ಟ್‍ಮೆಂಟ್‍ದು ಏನಿದೆ?

    ಕುಳ್ಳ ದೇವರಾಜ್ : ಒಂದೇಟು ಮುಟ್ಟಬಾರದು.. ಮಾಡಿ ಸೆರೆಂಡರ್ ಆಗ್ತಾರೆ.
    ಗೋಪಾಲಕೃಷ್ಣ : ಆದರೆ ಅವನು ಫಿನಿಶ್ ಆಗಿಬಿಡಬೇಕು. ಫುಲ್ಲು ಮರ್ಡರ್‌ ಅರ್ಧಂಬರ್ಧ ಇರಬಾರದು
    ಕುಳ್ಳ ದೇವರಾಜ್ : ಫಿನಿಶ್ ಆಗ್ತಾನೆ ಅಣ್ಣ, ಮಾಡಿ ಅವನ ಮೇಲೆ ಹೇಳೋ ತರ ಮಾಡೋಣ.
    ಗೋಪಾಲಕೃಷ್ಣ : ಅವನ ಮೇಲೆನೆ ಹೇಳಬೇಕು.
    ಕುಳ್ಳ ದೇವರಾಜ್ : ಅವರಿಗೂ ಅವನ ಮೇಲೆ ಕೋಪ ಇದೆ. ಅರ್ಥ ಆಯ್ತಾ. ಯಾವುದೋ 2-3 ಜಮೀನಿನ ಮೇಲೆ ಕೈ ಹಾಕಿ ಥಣಿಸಂದ್ರ ಕಡೆ ಇದು ಮಾಡವ್ರೆ.. ರೆಡಿ ಮಾಡ್ತಿನಿ ಅರ್ಥ ಆಯ್ತಾ.
    ಗೋಪಾಲಕೃಷ್ಣ : ಓಕೆ ಮಾಡಿಸು.
    ಕುಳ್ಳ ದೇವರಾಜ್ : ಕೊಡು ಅಡ್ವಾನ್ಸ್ ಎಷ್ಟು ಕೊಡ್ತಿಯಾ?

    ಗೋಪಾಲಕೃಷ್ಣ: ಮಾಡಿಸು ಕೊಡ್ತಿನಿ. ಅರೇಂಜ್ ಮಾಡ್ತಿನಿ, ಹೌದಾ, ಪ್ಲ್ಯಾನ್ ರೆಡಿನಾ ಹಾಗಾದ್ರೆ?
    ಗೋಪಾಲಕೃಷ್ಣ: ಗಾಂಜಾ ಪ್ಲೇಯರ್ ಆದರೂ ಫಂಕ್ಷನ್‍ನಲ್ಲಿ ಮಾಡೋದಲ್ಲ. ಇವನು ಹೊಡೆದು ಬಿಸಾಕೋದು ಎಷ್ಟೊತ್ತು ಅವರಿಗೆ.
    ಕುಳ್ಳ ದೇವರಾಜ್ : ಇವಾಗ ಏನು ಅಣ್ಣ ಕತ್ತು ಕುಯ್ಕೊಂತಾರಾ ಏನು? ಇಲ್ಲಿ ಆಯ್ತಲ್ಲ ಸಿಗ್ನಲ್ಲಲ್ಲಿ ಕಡಬುಗೆರೆ ಸೀನಂದು ಹಂಗೆ ರೆಡಿ ಮಾಡ್ಕೊ.. ಢಮ್ ಅನ್ನಿಸೋಣ.
    ಗೋಪಾಲಕೃಷ್ಣ : ಕಾರಲ್ಲಿ ಹೋಗೋವಾಗ ಮಾಡಬಾರದು.
    ಕುಳ್ಳ ದೇವರಾಜ್ : ಅದು ಸಕ್ಕತ್ತಾಗ್ ಮಾಡಿದೆ ನೀನು ಪ್ಲಾನ್, ಹೆಂಗೋ ನಮಗೆಲ್ಲಾ ಗೊತ್ತು ತಗೋ.. ನೋಡು ಹಂಗೆ ಮಾಡಬೇಕು, ಸೈಲೆಂಟಾಗಿ.

    ಗೋಪಾಲಕೃಷ್ಣ : ಉಳಿಬಾರ್ದು ಅರ್ಧಂಬರ್ಧ ಇದ್ರೆ ಕಷ್ಟ ಆಗುತ್ತೇ. ಫಿನಿಷ್ ಆಗಿಬಿಡಬೇಕು.
    ಕುಳ್ಳ ದೇವರಾಜ್ : ನೀನು ಎಲ್ಲಾ ಕರೆಕ್ಟಾಗಿ ಮಾಡಿದೆ ಲಾಸ್ಟ್ ಟೈಂ ಆದರೆ ಹಾಸ್ಪಿಟಲ್ ಅಲ್ಲಿ ಸ್ವಲ್ಪ ಯಾಮಾರ್ ಬಿಟ್ಟೆ ಅವನು ಕಡಬಗೆರೆ ಹತ್ತಿರ. ನೀನಾಗಿ ನೀನೇ ಹೆಸರು ಹೇಳ್ಬಿಟ್ಟೆ ಅವನು ಹೇಳಿಲ್ಲ. ಮಿ** ನನ್ನ ಮಗ ಆವಾಗ ಕೇಸ್ ಸ್ವಲ್ಪ ಲೂಸ್ ಆಯ್ತು.
    ಗೋಪಾಲಕೃಷ್ಣ : ಕೇಸ್ ಲೂಸ್ ಆಗಕ್ಕೆ ಪೊಲೀಸರಿಗೆ ಅವರ ಮೇಲೆ ನಂಬಿಕೆ ಇರಲಿಲ್ಲ. ಕಡಬಗೆರೆ ಅವರು ಬರೀ ಪೊಲೀಸ್ ಅವರ ಮೇಲೆ ಕೇಸ್ ಹಾಕ್ತಾ ಇದ್ದರು. ಎಸ್‍ಪಿ ಡಿಸಿಪಿ ಅಂತವರ ಮೇಲೆ ಕೇಸ್ ಹಾಕಿ ಬಿಟ್ಟಿದ್ದಾರೆ. ಅದಕ್ಕೆ ಪೊಲೀಸರು ಅಪೋಸಿಟ್ ಇದ್ದರು. ಹರ್ಷ ಡಿಸಿಪಿ ನನಗೆ ಹೇಳಿದ ಸರ್ ಯಾಕೆ ಹೋಗಿ ಹೋಗಿ ಈ ನನ್ನ ಮಕ್ಕಳಿಗೆ ಸಪೋರ್ಟ್ ಮಾಡುತ್ತೀರಾ ಸರ್, ಸರಿ ಇಲ್ಲ ಇವರು ಕಚಡಾ ನನ್ನ ಮಕ್ಕಳು. ಬ್ಯಾಗ್ರೌಂಡ್ ಗೊತ್ತಿಲ್ಲ ಸರ್ ನಿಮಗೆ. ಇಲ್ಲ ಅಂದಿದ್ರೆ ಇನ್ನಷ್ಟು ಮಾಡಿಸುತ್ತಿದ್ದೆ. ನೋಡು ಹುಷಾರಾಗಿ ಐಡಿಯಾ ಮಾಡು.

    ಕುಳ್ಳ ದೇವರಾಜ್ : ಮಾಡೋಣ ಒಂದ್ 15 ದಿವಸ ಅಲ್ಲ, 6 ತಿಂಗಳು ಆಗಲಿ. ನಿಧಾನಕ್ಕೆ ರೆಡಿ ಮಾಡಿ ಹುಡುಗರನ್ನು ಫಿಲ್ಟರ್ ಮಾಡಬೇಕು. ಎಣ್ಣೆ ಇರಬಾರದು, ಗಾಂಜಾ ಇರಬಾರದು ಅವರಿಗೆ ಜಿದ್ದು ಇರಬೇಕು.
    ಗೋಪಾಲಕೃಷ್ಣ : ಜಿದ್ದು ಇರಬೇಕು, ಆಮೇಲೆ ಒಳ್ಳೆಯ ಜಾಗ ನೋಡಿ ಕೊಂಡು ತೋಟ ಅಂತ ಜಾಗ ನೋಡಿಕೊಂಡು.. ಅಂತ ಕಡೆ ನೊಡ್ಕೊಬೇಕು.
    ಗೋಪಾಲಕೃಷ್ಣ: ಅದನ್ನೆಲ್ಲಾ ಒಂದು ತಿಂಗಳು 2 ತಿಂಗಳಾದ್ರೂ ಪರವಾಗಿಲ್ಲ
    ಕುಳ್ಳ ದೇವರಾಜ್: 3 ಜನ ಟೀಂ ಇದೆ ಅದರಲ್ಲಿ ಫಿಲ್ಟರ್ ಮಾಡ್ಕೊಬೇಕು. ಕರೆಕ್ಟಾಗಿ ಇರೋರನ್ನ ಖಡಕ್ಕಾಗಿ ಇರುವವರನ್ನು ಮಾಡ್ಕೊಂಡು.

    ಕುಳ್ಳ ದೇವರಾಜ್: ವಾಕಿಂಗ್ ಬರ್ತಾನಾ..
    ಗೋಪಾಲಕೃಷ್ಣ : ವಾಕಿಂಗ್ ಬರ್ತಾನೆ.. 7-8 ಗಂಟೆಗೆ.. ಅಲ್ಲಿ ಜಾಸ್ತಿ ಡೀಲಿಂಗ್ಸ್ ಇವಾಗ.. ತೋಟದಲ್ಲಿ..

    ಕುಳ್ಳ ದೇವರಾಜ್ : ಮಾಡೋಣ ಬಿಡು, ನೀನು ದುಡ್ಡು ರೆಡಿ ಮಾಡ್ಕೊ ಕೆಲಸ ನಮ್ಮದು ಇರಲಿ.

    ಗೋಪಾಲಕೃಷ್ಣ : ನೀನು ಫಸ್ಟ್ ಕ್ಲೀನಾಗಿ ಪ್ಲ್ಯಾನ್ ಮಾಡ್ಕೊ.

    ಗೋಪಾಲಕೃಷ್ಣ : ಎರಡು ಏಟಲ್ಲಿ ಹೋಗಬೇಕು..
    ಕುಳ್ಳ ದೇವರಾಜ್ : ಹೈದರಾಬಾದ್‌ನಿಂದ ಶಾರ್ಪ್‌ ಶೂಟರ್ ಕರೆಸುತ್ತಾರೆ, ಹೊಡೆಯುವುದು ಅವರು ಹೋಗುವುದು ಇವರು. ಶಾರ್ಪ್ ಶೂಟರ್ ಕರೆಸಿ ಬಿಟ್ಟು ಓಡ್ಸೋದು.

    ಗೋಪಾಲಕೃಷ್ಣ : ಆಯ್ತಣ್ಣ., ಹೊರಟೋಯ್ತು ಅಣ್ಣ ಅನ್ನಬೇಕು.
    ಕುಳ್ಳ ದೇವರಾಜ್ : ಫಸ್ಟ್ ಕೊಡಿಲ್ಲಿ ಕಾಸು.

    ಗೋಪಾಲಕೃಷ್ಣ : ಇವನು ಯಾವ ಲೆಕ್ಕ ಹೇಳು. ಸಿಲಿಂಡರ್ ತಗೊಂಡು ಬಂದು ಒಬ್ಬನೇ ತಗೊಂಡು ಬಂದ್ ಢಮ್ ಅನ್ಸಿದರೆ ಆಯ್ತು.
    ಕುಳ್ಳ ದೇವರಾಜ್ : ಆಗಲಿ ಕಾಸು ಬೇಡವಾ..?

    ಕುಳ್ಳ ದೇವರಾಜ್ : ಒಬ್ಬನೇ ಇದ್ದಾಗ ಮಾಡ್ತಿವೋ… 10 ಜನ ಇದ್ದಾಗ ಮಾಡುತ್ತಿವೋ ನಿನಗ್ಯಾಕೆ..
    ಗೋಪಾಲಕೃಷ್ಣ : 10 ಜನ ಬೇಡ ಸೈಲೆಂಟಾಗಿ ಮಾಡಿಸು, ತೋಟದಲ್ಲಿ ಕ್ಯಾಮೆರಾ ಇರಲ್ಲ.. ಟಿಂಗ್ ಟಿಂಗ್ ಟಿಂಗ್ ಅಂತ ಹಾರಿಸಬಹುದು.
    ಕುಳ್ಳ ದೇವರಾಜ್ : ಕ್ಯಾಮರಾ ಇರಲಿ, ಬಿಡಲಿ. ನೀನು ಪಟ್ಟಂತಾ ರೆಡಿ ಮಾಡು. 5 ಲಕ್ಷ ಕೊಡು ಅಡ್ವಾನ್ಸ್.
    ಗೋಪಾಲಕೃಷ್ಣ : ಆಯ್ತು. ಅಡ್ವಾನ್ಸ್ ಕೊಟ್ಟರೆ ಎಷ್ಟು ದಿನಕ್ಕೆ?

    ಕುಳ್ಳ ದೇವರಾಜ್ : 20 ಇದೆ..
    ಗೋಪಾಲಕೃಷ್ಣ : ಇದು ಎಲ್ಲಾ 2 ಲಕ್ಷ ಇದೆ.. ಇದು 1 ಲಕ್ಷ…
    ಕುಳ್ಳ ದೇವರಾಜ್ : ಪಕ್ಕಾನಾ..?  500 ಆದ್ರೂ ಎಣಿಸು.
    ಗೋಪಾಲಕೃಷ್ಣ : ಇಲ್ಲಾಪ್ಪ ಎಣಿಸು ಎಣಿಸು..
    ಕುಳ್ಳ ದೇವರಾಜ್ : ಯಾವುದು ಲೆಕ್ಕಾ ಹಾಕೋದು..
    ಗೋಪಾಲಕೃಷ್ಣ : ಅಲ್ಲೇ ಇದೆಯಲ್ಲ..

    ಕುಳ್ಳ ದೇವರಾಜ್ : ಇದು 20 ಸಾವಿರ ಇದೆಯಲ್ಲ.. ಮಿಷಿನ್ ಅಲ್ಲಿ ಲೆಕ್ಕಾ ಹಾಕಿಸಿಕೊಂಡು ಬರಲಾ..?
    ಗೋಪಾಲಕೃಷ್ಣ: ಏ.. ಹಾಕಪ್ಪ?
    ಗೋಪಾಲಕೃಷ್ಣ: 2 ಲಕ್ಷದ 40 ಆಯ್ತು.. ಅದು ಸೇರಿ. ಎರಡೂ ವರೆ.
    ಗೋಪಾಲಕೃಷ್ಣ: ಡಿಸಿಪಿ ಹರ್ಷ ಇದ್ದರು. ನಾನು ಹೇಳಿದಂತೆ ಕೇಳ್ತಾ ಇದ್ರು..
    ಕುಳ್ಳ ದೇವರಾಜ್: ಹರ್ಷ ಸರ್ ಅಲ್ವಾ? ಇನ್ನೊಬ್ಬರು ಯಾರು ನಾರಾಯಣ ಅಂತಾ ಹೇಳ್ತಾ ಇದ್ರಿ
    ಗೋಪಾಲಕೃಷ್ಣ: ಅವರು ಈ ಕೇಸಿಗೆ  ಎನ್‌ಕ್ವೈರಿ ಆಫೀಸರ್ ಆಗಿ ಬಂದಿದ್ದರು.
    ಕುಳ್ಳ ದೇವರಾಜ್ : ಅವರು ಫುಲ್ ಸಪೋರ್ಟ್ ಅಲ್ವಾ ನಿಮಗೆ. ಅದುಕ್ಕಾದ್ರೆ 25 ಲಕ್ಷ ಖರ್ಚು ಮಾಡಿದ್ದೀಯಾ? ಇದಕ್ಕೆ ಕೊಡು ಅಂದ್ರೆ ಅಳ್ತಿಯಾ?
    ಗೋಪಾಲಕೃಷ್ಣ: 25 ಅಲ್ಲ 50 ಕೊಡ್ತಿನಿ, ತಲೆ ಕೆಡಿಸ್ಕೊಬೇಡ.
    ಗೋಪಾಲಕೃಷ್ಣ: ನಾನು ಎಲ್ಲೂ ಬರಬಾರದು. ರಿಮೋಟ್ ಥರ ಆಗ್ಬೇಕು. ಕುತ್ತಿಗೆಗೆ ಬಂದರೂ ನಮ್ಮ ವಿಷಯ ಬರಬಾರದು. ನಾವು ಕರೆಕ್ಟಾಗ್ ಇದ್ದಾಗ ಎಲ್ಲಿ ಎಲ್ಲಿ ಏನು ಬೇಕು. ಎಲ್ಲಾ ಕಡೆ ಮುಚ್ಚಿ ಹಾಕಬಹುದು.

    ಕುಳ್ಳ ದೇವರಾಜ್: ಅಣ್ಣಾ ಇದು ಯಾವದೋ ಕೆಲ್ಸ ಸ್ಟಾರ್ಟ್ ಮಾಡಿಸಿ ಬಿಟ್ಟು ನೀನು
    ಗೋಪಾಲಕೃಷ್ಣ: ಮಾಡಯ್ಯ ಎಲ್ಲಿ ರಿಸಲ್ಟ್ ಬರಲಿಲ್ಲ ಇನ್ನ.
    ಕುಳ್ಳ ದೇವರಾಜ್: ಏನು ಹೊಡೆದ ಮೇಲೆ ಕಾಸ್ ಕೊಡ್ತಾರಾ? ಯಾರಾದ್ರೂ?
    ಗೋಪಾಲಕೃಷ್ಣ: ರಿಸಲ್ಟ್ ಇನ್ನೂ ಇಲ್ಲ.
    ಕುಳ್ಳ ದೇವರಾಜ್: ನಾವು ಕೈಯಿಂದ ಕೊಡಬೇಕು ಅಷ್ಟೆ. ನೀನ್ ಮಾಡೋ ಕೆಲಸ.
    ಗೋಪಾಲಕೃಷ್ಣ: ಕೊಡು, ಕೆಲಸ ಆದ ಮೇಲೆ ಅದರ ನೂರಷ್ಟು ತಗೊತಿಯಾ? ಅದು ಕಥೆನೇ ಬೇರೆ. ನೀನು ಎಲ್ಲೋ ಹೋಗ್ ಬಿಡ್ತಿಯಾ? ನನ್ನ ಜೊತೆ ಇಟ್ಟುಕೊಂಡು ಡಿಕೆ ಹತ್ತಿರ ಹೋಗ್ತಿನಿ.

  • ಸೂಲಿಬೆಲೆ, ತೇಜಸ್ವಿ ವಿರುದ್ಧ ಕೆಟ್ಟ ಪದ ಬಳಸಿ ಬೇಳೂರು ವಾಗ್ದಾಳಿ

    ಸೂಲಿಬೆಲೆ, ತೇಜಸ್ವಿ ವಿರುದ್ಧ ಕೆಟ್ಟ ಪದ ಬಳಸಿ ಬೇಳೂರು ವಾಗ್ದಾಳಿ

    ಶಿವಮೊಗ್ಗ: ಚಕ್ರವರ್ತಿ ಸೂಲಿಬೆಲೆ ಮತ್ತು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕೆಟ್ಟ ಪದಗಳನ್ನು ಬಳಸಿ ವಾಗ್ದಾಳಿ ನಡೆಸಿದ್ದಾರೆ.

    ಶಿವಮೊಗ್ಗದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಜೊತೆಗೆ ಹಲವು ವಸ್ತುಗಳ ಬೆಲೆ ಏರಿಕೆ ಮಾಡಿದ್ದರು ಕೂಡ ಪ್ರತಿಕ್ರಿಯಿಸದ ತೇಜಸ್ವಿ ಸೂರ್ಯ ಮತ್ತು ಚಕ್ರವರ್ತಿ ಸೂಲಿಬೆಲೆ ಕೇವಲ ಬಿಜೆಪಿ ಸರ್ಕಾರವನ್ನು ಹೊಗಳುವುದೇ ಕೆಲಸವಾಗಿದೆ ಎಂದು ಟೀಕಿಸಿದ್ದಾರೆ.

    ಜನರನ್ನು ಪ್ರಚೋದನೆ ಮಾಡುವುದು ಇವರ ಕೆಲಸವಾಗಿದೆ. ಮೋದಿ, ಮೋದಿ ಎನ್ನುವ ಇವರು ಮೋದಿ ಅಧಿಕಾರಕ್ಕೆ ಬಂದ ನಂತರ ಯಾವುದೇ ಸೈನಿಕ ಸಾವನ್ನಪ್ಪಿಲ್ಲವೇ ಎಂದು ಚಕ್ರವರ್ತಿ ಸೂಲಿಬೆಲೆಗೆ ಪ್ರಶ್ನಿಸಿದ್ದಾರೆ. ಅನಂತ್ ಕುಮಾರ್ ಅವರಂತಹ ದಿಟ್ಟ ನಾಯಕನ ಕ್ಷೇತ್ರದಲ್ಲಿ ಆಯ್ಕೆಯಾಗಿ ಬಂದ ತೇಜಸ್ವಿ ಸೂರ್ಯ ಏನಾದರೂ ಸಾಧಿಸುತ್ತಾರೆ ಎಂದುಕೊಂಡಿದ್ದೆವು. ಆದರೆ ಈರುಳ್ಳಿ ಬೆಲೆ ಗಗನಕ್ಕೇರಿದ್ದರು ತುಟಿ ಬಿಚ್ಚದ ಸಂಸದರು ಇವರು ಎಂದು ಟೀಕಿಸಿದ್ದಾರೆ.

    ಇದೇನಾ ಮೋದಿಯವರ ಅಚ್ಚೇದಿನ್, ನಿಮ್ಮದು ಉತ್ತಮ ಸರ್ಕಾರನಾ ಎಂದು ಪ್ರಶ್ನಿಸಿದ್ದಾರೆ. ನಿಮ್ಮದು ಕೂಡ ದರಿದ್ರ ಸರ್ಕಾರನೇ ಎಂದು ಬೇಳೂರು ಹೇಳಿದ್ದಾರೆ. ಇನ್ನು ನಲಪಾಡ್ ಅಪಘಾತ ಮಾಡಿದರೆ ಜೈಲಿಗೆ ಹಾಕಿ ಎನ್ನುವ ಇವರು ಸಚಿವ ಆರ್. ಅಶೋಕ್ ಪುತ್ರ ಅಪಘಾತ ಮಾಡಿದರೆ ಏನು ಹೇಳುತ್ತಾರೆ. ಅಶೋಕ್ ಮತ್ತು ಸಿ.ಟಿ. ರವಿ ಈಗೇನು ಹೇಳುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.