Tag: ಗೋಧಿ ಹಿಟ್ಟಿನ ಲಡ್ಡು

  • ಗೋಧಿ ಹಿಟ್ಟಿನ ಲಡ್ಡು ಎಂದಾದರೂ ಮಾಡಿದ್ದೀರಾ?

    ಗೋಧಿ ಹಿಟ್ಟಿನ ಲಡ್ಡು ಎಂದಾದರೂ ಮಾಡಿದ್ದೀರಾ?

    ಟದ ಕೊನೆಯಲ್ಲಿ ಸಿಹಿ ಇಲ್ಲವೆಂದರೆ ಏನೋ ಕಡಿಮೆ ಎಂದು ಯಾವಾಗಲೂ ಎನಿಸುತ್ತದೆ. ನಾವಿಂದು ಯಾವುದೇ ಹಬ್ಬಕ್ಕೂ ಸೈ ಎನಿಸುವ ಒಂದು ಸಿಂಪಲ್ ಸ್ವೀಟ್ ರೆಸಿಪಿಯನ್ನು ಹೇಳಿಕೊಡುತ್ತೇವೆ. ಸುಲಭ, ರುಚಿಕರ ಮಾತ್ರವಲ್ಲದೇ ಪೌಷ್ಟಿಕಾಂಶಯುಕ್ತ ಗೋಧಿ ಹಿಟ್ಟಿನ ಲಡ್ಡು (Wheat Flour Laddu) ನೀವೂ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಗೋಧಿ ಹಿಟ್ಟು – 1 ಕಪ್
    ಸಕ್ಕರೆ – ಅರ್ಧ ಕಪ್
    ತುಪ್ಪ – ಕಾಲು ಕಪ್
    ಗಸಗಸೆ – 1 ಟೀಸ್ಪೂನ್
    ಒಣ ತೆಂಗಿನ ತುರಿ – 2 ಟೀಸ್ಪೂನ್
    ಏಲಕ್ಕಿ ಪುಡಿ – 1 ಟೀಸ್ಪೂನ್
    ಡ್ರೈ ಫ್ರೂಟ್ಸ್(ಗೋಡಂಬಿ, ಬಾದಾಮಿ, ಒಣದ್ರಾಕ್ಷಿ) – ಕಾಲು ಕಪ್ ಇದನ್ನೂ ಓದಿ: ಸಿಹಿಯಾದ ಪಪ್ಪಾಯಿ ಹಲ್ವಾ – ನೀವೊಮ್ಮೆ ಟ್ರೈ ಮಾಡಲೇ ಬೇಕು

    ಮಾಡುವ ವಿಧಾನ:
    * ಮೊದಲಿಗೆ ಸಕ್ಕರೆ ಮತ್ತು ಏಲಕ್ಕಿಯನ್ನು ಮಿಕ್ಸರ್ ಜಾರ್‌ಗೆ ಹಾಕಿ ಚೆನ್ನಾಗಿ ಪುಡಿ ಮಾಡಿ ಪಕ್ಕಕ್ಕಿಡಿ.
    * ಈಗ ದಪ್ಪ ತಳದ ಪ್ಯಾನ್ ತೆಗೆದುಕೊಂಡು, ಅದರಲ್ಲಿ ತುಪ್ಪ ಹಾಕಿ, ಒಣ ಹಣ್ಣುಗಳನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿದುಕೊಳ್ಳಿ. ಬಳಿಕ ಪಕ್ಕಕ್ಕಿಡಿ.
    * ಈಗ ಗಸಗಸೆಯನ್ನು ಪರಿಮಳ ಬರುವವರೆಗೆ ಫ್ರೈ ಮಾಡಿ, ಅದನ್ನೂ ಪಕ್ಕಕ್ಕಿಡಿ.
    * ಬಳಿಕ ಗೋಧಿ ಹಿಟ್ಟನ್ನು ಪ್ಯಾನ್‌ಗೆ ಹಾಕಿ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ. ಗೋಧಿ ಹಿಟ್ಟಿನ ಬಣ್ಣ ಗೋಲ್ಡನ್ ಬ್ರೌನ್ ಆಗುವವರೆಗೆ ಚೆನ್ನಾಗಿ ಫ್ರೈ ಮಾಡಿ. ಅದು ಸುಡದಂತೆ ನೋಡಿಕೊಳ್ಳಿ.
    * ಈಗ ಒಂದು ಪಾತ್ರೆ ತೆಗೆದುಕೊಂಡು, ಅದರಲ್ಲಿ ಗೋಧಿ ಹಿಟ್ಟು, ಸಕ್ಕರೆ ಪುಡಿ, ಒಣ ತೆಂಗಿನ ತುರಿ, ಹುರಿದ ಗಸಗಸೆ ಮತ್ತು ಒಣ ಹಣ್ಣುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
    * ಹಿಟ್ಟನ್ನು ನಿಮ್ಮ ಕೈಯಿಂದ ಮುಟ್ಟಲು ಸಾಧ್ಯವಾಗುವಷ್ಟು ಬಿಸಿ ತಣ್ಣಗಾದ ಮೇಲೆ ಹಿಡಿ ಮಿಶ್ರಣ ತೆಗೆದುಕೊಂಡು, ನಿಂಬೆ ಹಣ್ಣಿನ ಗಾತ್ರದ ಲಡ್ಡುವಾಗಿ ಉಂಡೆಗಳನ್ನು ತಯಾರಿಸಿ.
    * ಸಂಪೂರ್ಣ ಮಿಶ್ರಣವನ್ನು ಹೀಗೇ ಪುನರಾವರ್ತಿಸಿ. ಮೊದಲಿಗೆ ಲಡ್ಡುಗಳು ತೇವವಾಗಿದೆ ಎನಿಸಿದರೂ ಬಳಿಕ ಅದು ಸರಿಯಾಗುತ್ತದೆ.
    * ಲಡ್ಡುಗಳನ್ನು ಸಂಪೂರ್ಣ ಆರಲು ಬಿಡಿ. ಬಳಿಕ ಗಾಳಿಯಾಡದ ಡಬ್ಬಿಯಲ್ಲಿ ಹಾಕಿ ಅವುಗಳನ್ನು ಶೇಖರಿಸಿಡಿ.
    * ನೀವು ಬೇಕೆನಿಸಿದಾಗಿ ಗೋಧಿ ಹಿಟ್ಟಿನ ಲಡ್ಡುಗಳನ್ನು ಸವಿಯಬಹುದು. ಇದನ್ನೂ ಓದಿ: ಸಿಹಿಯಾದ ಕ್ಯಾರೆಟ್ ಬರ್ಫಿ ಟ್ರೈ ಮಾಡಿ ನೋಡಿ

    Live Tv
    [brid partner=56869869 player=32851 video=960834 autoplay=true]

  • ಹಬ್ಬಕ್ಕೆ ಮಾಡಿ ಗೋಧಿ ಹಿಟ್ಟಿನ ಲಡ್ಡು

    ಹಬ್ಬಕ್ಕೆ ಮಾಡಿ ಗೋಧಿ ಹಿಟ್ಟಿನ ಲಡ್ಡು

    ಬ್ಬಗಳು ಒಂದೊಂದಾಗಿಯೆ ಬರುತ್ತಿವೆ. ರಕ್ಷಾ ಬಂಧನಕ್ಕೆ ಸಿಹಿ ತಿಂಡಿ ಇದ್ದರೆ ಹಬ್ಬದ ಮೆರಗು ಹೆಚ್ಚಾಗುತ್ತದೆ. ಹಬ್ಬದ ದಿನ ಬಗೆಬಗೆಯಾದ ಸಿಹಿ ತಿಂಡಿಗಳನ್ನು ದೇವರಿಗೆ ನೈವೇದ್ಯ ಅರ್ಪಿಸಿಬೇಕು. ಸಿಹಿ ತಿಂಡಿಗಳು ರುಚಿಯ ಜೊತೆಗೆ ಆರೋಗ್ಯದ ಕಾಳಜಿಯಿಂದಲೂ ತಯಾರಿಸಬೇಕು ಎಂಬುದು ಮುಖ್ಯವಾಗುತ್ತದೆ. ಹೀಗಾಗಿ ನೀವು ಮನೆಯಲ್ಲಿಯೆ ಸರಳವಾಗಿ ಗೋಧಿ ಹಿಟ್ಟಿನ ಲಡ್ಡು ಮಾಡಿ.

    ಬೇಕಾಗುವ ಸಾಮಗ್ರಿಗಳು:

    * ಗೋಧಿ ಹಿಟ್ಟು- 1 ಕಪ್
    * ತುಪ್ಪ – ಅರ್ಧ ಕಪ್
    * ನೀರು – 3 ಚಮಚ
    * ತೆಂಗಿನ ತುರಿ- ಅರ್ಧ ಕಪ್
    * ಬಾದಾಮಿ – 5 ರಿಂದ 6
    * ಗೋಡಂಬಿ – 5 ರಿಂದ 6
    * ಒಣದ್ರಾಕ್ಷಿ – 8-10
    * ಪಿಸ್ತಾ – ¼ ಚಮಚ
    * ಏಲಕ್ಕಿ ಪುಡಿ – ಅರ್ಧ ಚಮಚ
    * ಸಕ್ಕರೆ ಪುಡಿ – ಅರ್ಧ ಕಪ್


    ಮಾಡುವ ವಿಧಾನ:
    * ಮಿಕ್ಸಿಂಗ್ ಬೌಲ್‍ನಲ್ಲಿ ಗೋಧಿ ಹಿಟ್ಟು ತುಪ್ಪ ಸೇರಿಸಿ.
    * ಮಿಶ್ರಣಕ್ಕೆ ಬೆಚ್ಚಗಿನ ನೀರನ್ನು ಸೇರಿಸಿ ಕೈಯಿಂದ ಚೆನ್ನಾಗಿ ಮಿಶ್ರಣ ಮಾಡಿ.
    * ಅಂಗೈಯಲ್ಲಿ ಹಿಡಿದಾಗ ಮಿಶ್ರಣ ಒಟ್ಟಿಗೆ ಅಂಟಿಕೊಳ್ಳಬೇಕು.
    * ಬಿಸಿ ಮಾಡಿದ ಬಾಣಲೆಯಲ್ಲಿ ಅರ್ಧ ಕಪ್ ತುಪ್ಪ ಸೇರಿಸಿ ಮಿಶ್ರಣವನ್ನು ಹಾಕಿ ಚೆನ್ನಾಗಿ ಹುರಿಯಿರಿ. ಇದನ್ನೂ ಓದಿ:  ಥಟ್ಟನೆ ಮಾಡಿ ಹೆಸರು ಬೇಳೆ ಚಾಟ್

    * ನಂತರ ತೆಂಗಿನ ಪುಡಿ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಸ್ಟವ್ ಆಫ್ ಮಾಡಿ.
    * ಕತ್ತರಿಸಿದ ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಪಿಸ್ತಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಏಲಕ್ಕಿ ಪುಡಿಯನ್ನು ಸೇರಿಸಿ 10 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ಪುಡಿ ಮಾಡಿದ ಸಕ್ಕರೆಯನ್ನು ಸೇರಿಸಿ ಕೈಬಳಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸಣ್ಣ ಲಡ್ಡುಗಳಾಗಿ ಮಾಡಿದರೆ ಗೋಧಿ ಲಡ್ಡು ಸವಿಯಲು ಸಿದ್ಧವಾಗುತ್ತದೆ.