Tag: ಗೋಧಿ ಸ್ವೀಟ್

  • ಹಬ್ಬಕ್ಕೆ ಮಾಡಿ ಸ್ಪೆಷಲ್ ಗೋಧಿ ಸ್ವೀಟ್

    ಹಬ್ಬಕ್ಕೆ ಮಾಡಿ ಸ್ಪೆಷಲ್ ಗೋಧಿ ಸ್ವೀಟ್

    ಬ್ಬ ಅಂದ್ರೆ ಸಾಕು ಅಲ್ಲಿ ಏನಾದರೂ ಸಿಹಿ ತಿನಿಸು ಇರಲೇಬೇಕು. ಅಂತೆಯೇ ಶ್ರಾವಣ ಮಾಸದ ಎರಡನೇ ಶುಕ್ರವಾರ ಬರುವ ವರಮಹಾಲಕ್ಷ್ಮಿ ಹಬ್ಬಕ್ಕೆ ಹೋಳಿಗೆ, ಸಿಹಿ ತಿಂಡಿ ತಯಾರಿಸಲೇಬೇಕು. ಈ ಬಾರಿ ವರಮಹಾಲಕ್ಷ್ಮಿ ಹಬ್ಬಕ್ಕೆ ಹೊಸ ರೀತಿಯ ಸ್ವೀಟ್ ತಯಾರಿಸಿ ಮನೆಗೆ ಬಂದವರಿಗೂ ಹಂಚಿ ಹಬ್ಬವನ್ನು ಆಚರಿಸಿ.

    ಕಡಿಮೆ ಸಮಯ ಹಾಗೂ ಮನೆಯಲ್ಲೇ ಸಿಗುವ ಸಾಮಗ್ರಿಗಳಿಂದ ಅತೀ ಬೇಗನೆ ಈ ಸ್ವೀಟನ್ನು ತಯಾರಿಸಬಹುದು.

    ಬೇಕಾಗುವ ಸಾಮಗ್ರಿಗಳು:
    * ಗೋಧಿಹಿಟ್ಟು – 1/4 ಕೆ.ಜಿ
    * ಯಾಲಕ್ಕಿ ಪುಡಿ- 1/4 ಚಮಚ
    * ಹಾಲು- 1/4 ಕಪ್
    * ತುಪ್ಪ- 1/4 ಕೆ.ಜಿ
    * ಸಕ್ಕರೆ ಪುಡಿ- 1/4 ಕೆ.ಜಿ
    * ಗೋಡಂಬಿ, ಬಾದಾಮಿ, ಪಿಸ್ತಾ

    ಮಾಡುವ ವಿಧಾನ:
    * ಬಾಣಲೆಯಲ್ಲಿ ತುಪ್ಪ ಹಾಕಿ ಅದು ಕರಗಿದ ನಂತರ ಗೋಧಿ ಹಿಟ್ಟನ್ನು ಕೆಂಪಗಾಗುವ ತನಕ ಹುರಿದುಕೊಳ್ಳಬೇಕು.
    * ಗೋಧಿ ಹಿಟ್ಟು ಕೆಂಪಗಾದ ನಂತರ ತುಪ್ಪದೊಂದಿಗೆ ಚೆನ್ನಾಗಿ ಬೆರೆತ ಮೇಲೆ ಒಲೆ ಆರಿಸಿ ಅದು ತಣ್ಣಗಾಗುವ ತನಕ ಕಾಯಬೇಕು.
    * ಬಳಿಕ ಏಲಕ್ಕಿ ಪುಡಿ ಮತ್ತು ಸಕ್ಕರೆ ಪುಡಿಯನ್ನು ಬೆರೆಸಬೇಕು. ಈಗ ಬಾದಾಮಿ, ಗೋಡಂಬಿ, ಪಿಸ್ತ ಬೆರೆಸಿ ಹಾಲಿನ ಸಹಾಯದೊಂದಿಗೆ ಈ ಮಿಶ್ರಣವನ್ನು ಉಂಡೆ ಮಾಡಿಕೊಳ್ಳಬೇಕು.
    * ಈಗ ಸ್ಪೆಷಲ್ ಗೋಧಿ ಸ್ವೀಟ್ ರೆಡಿಯಾಗಿದೆ. ಇದನ್ನೂ ಓದಿ: ಸರಳವಾಗಿ ಮಾಡಿ ಶೇಂಗಾ ಹೋಳಿಗೆ

    ಒಟ್ಟಿನಲ್ಲಿ ಹಬ್ಬಕ್ಕೆ ಮನೆಮಂದಿಯೆಲ್ಲಾ ಈ ಗೋಧಿ ಸ್ವೀಟ್ ತಿಂದು ಬಾಯಿ ಸಿಹಿ ಮಾಡಿಕೊಳ್ಳಿ. ಇದು ತಿನ್ನೋದಕ್ಕೂ ಸೈ, ನೈವೇದ್ಯಕ್ಕೂ ಸೈ.