Tag: ಗೋಧಿ

  • ಕಡಿಮೆ ಬೆಲೆಗೆ ಅಕ್ಕಿ, ಗೋಧಿ ಹಿಟ್ಟು ಮಾರಾಟಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ

    ಕಡಿಮೆ ಬೆಲೆಗೆ ಅಕ್ಕಿ, ಗೋಧಿ ಹಿಟ್ಟು ಮಾರಾಟಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ

    ನವದೆಹಲಿ: ಅಕ್ಕಿ, ಗೋಧಿ, ಬೇಳೆ ಸೇರಿದಂತೆ ದ್ವಿದಳ ಧಾನ್ಯಗಳ ಬೆಲೆಗಳನ್ನು ಮಾರುಕಟ್ಟೆಯಲ್ಲಿ ನಿಯಂತ್ರಣದಲ್ಲಿಡುವ ದೃಷ್ಟಿಯಿಂದ ಭಾರತ್ ಬ್ರಾಂಡ್ (Bharat Brand) ಅಡಿಯಲ್ಲಿ ಎರಡನೇ ಹಂತದಲ್ಲಿ ಅಕ್ಕಿ ಮತ್ತು ಗೋಧಿ ಹಿಟ್ಟು ಮಾರಾಟಕ್ಕೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಚಾಲನೆ ನೀಡಿದ್ದಾರೆ.

    ದೆಹಲಿಯಲ್ಲಿರುವ ಕೃಷಿ ಭವನದಲ್ಲಿ NCCF, NAFED ಮತ್ತು ಕೇಂದ್ರೀಯ ಭಂಡಾರ್‌ನ ಮೊಬೈಲ್ ವ್ಯಾನ್‌ಗಳಿಗೆ ಚಾಲನೆ ನೀಡುವ ಮೂಲಕ ಭಾರತ್ ಗೋಧಿ ಹಿಟ್ಟು ಮತ್ತು ಭಾರತ್ ಅಕ್ಕಿ ಚಿಲ್ಲರೆ ಮಾರಾಟದ 2ನೇ ಹಂತಕ್ಕೆ ಜೋಶಿ ಚಾಲನೆ ನೀಡಿದರು. ಈ ವೇಳೆ ರಾಜ್ಯ ಖಾತೆ ಸಚಿವರಾದ ಬಿ.ಎಲ್ ವರ್ಮಾ ಉಪಸ್ಥಿತರಿದ್ದರು. ಇದನ್ನೂ ಓದಿ: ರೈತರ ಜಮೀನಿಗೆ ವಕ್ಫ್ ನೋಟಿಸ್ – ಸಿಎಂ ಮುಂದೆ 6 ಬೇಡಿಕೆಯಿಟ್ಟ ಶೋಭಾ ಕರಂದ್ಲಾಜೆ

    ಮೊದಲ ಹಂತದ ಸಮಯದಲ್ಲಿ ಸುಮಾರು 15.20 ಲಕ್ಷ ಮೆಟ್ರಿಕ್ ಟನ್ ಭಾರತ್ ಗೋಧಿ ಹಿಟ್ಟು ಮತ್ತು 14.58 ಲಕ್ಷ ಮೆಟ್ರಿಕ್ ಟನ್ ಭಾರತ್ ರೈಸ್ ಅನ್ನು ಸಾಮಾನ್ಯ ಗ್ರಾಹಕರಿಗೆ ಸಬ್ಸಿಡಿ ದರದಲ್ಲಿ ಲಭ್ಯಗೊಳಿಸಲಾಗಿತ್ತು. ಎರಡನೇ ಹಂತದ ಆರಂಭಿಕ ಹಂತದಲ್ಲಿ 3.69 ಲಕ್ಷ ಮೆಟ್ರಿಕ್ ಟನ್ ಗೋಧಿ ಮತ್ತು 2.91 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಚಿಲ್ಲರೆ ಮಾರಾಟಕ್ಕೆ ಲಭ್ಯವಾಗುವಂತೆ ಮಾಡಲಾಗಿದೆ. ಇದನ್ನೂ ಓದಿ: ಮುಡಾ ಹಗರಣ ಸಿಬಿಐ ತನಿಖೆಗೆ ವಹಿಸಲು ಮನವಿ – ನ.26 ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

    ಅಕ್ಕಿ ಮತ್ತು ಗೋಧಿ ಹಿಟ್ಟನ್ನು NCCF, NAFED ಮತ್ತು ಇ-ಕಾಮರ್ಸ್/ಬಿಗ್ ಚೈನ್ ರಿಟೇಲರ್‌ಗಳ ಅಂಗಡಿಗಳು ಮತ್ತು ಮೊಬೈಲ್ ವ್ಯಾನ್‌ಗಳಲ್ಲಿ ಲಭ್ಯವಿರುತ್ತದೆ. 5 ಕೆಜಿ ಮತ್ತು 10 ಕೆಜಿ ಚೀಲಗಳಲ್ಲಿ ಮಾರಾಟ ಮಾಡಲಾಗುತ್ತದೆ. ಅಕ್ಕಿಯ ಬೆಲೆ ಪ್ರತಿ ಕೆಜಿಗೆ 34 ರೂ. ಮತ್ತು ಗೋಧಿ ಹಿಟ್ಟಿನ ಬೆಲೆಯನ್ನು ಪ್ರತಿ ಕೆಜಿಗೆ 29 ರೂ. ನಿಗದಿ ಮಾಡಿದೆ. ಇದನ್ನೂ ಓದಿ: ಬಿಷ್ಣೋಯ್ ಹೆಸರಲ್ಲಿ ಸಲ್ಮಾನ್‌ ಖಾನ್‌ಗೆ ಬೆದರಿಕೆ – ತುಮಕೂರಲ್ಲಿ ಆರೋಪಿ ಅರೆಸ್ಟ್‌

    ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೋಶಿ, ಭಾರತ ಗೋಧಿ ಹಿಟ್ಟು, ಅಕ್ಕಿಯನ್ನು ಎರಡನೇ ಹಂತದಲ್ಲಿ ಕೊಡುವ ತಿರ್ಮಾನ ಮಾಡಿದೆ. ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಿಸಲು ಇದನ್ನು ಪರಿಚಯಿಸಿದೆ. ಬೆಲೆ ನಿಯಂತ್ರಣ ಫಂಡ್ ಮೂಲಕ ಇದನ್ನು ಮಾಡಲಾಗುತ್ತಿದೆ ಎಂದರು. ಇದನ್ನೂ ಓದಿ: ಯಾವ ಕ್ಷೇತ್ರವೂ ರಾಜಕಾರಣಿಗಳ ಭದ್ರಕೋಟೆ ಅಲ್ಲ, ಜನರ ಭದ್ರಕೋಟೆ: ಮಹದೇವಪ್ಪ

    ಅಗತ್ಯ ವಸ್ತುಗಳ ಬೆಲೆ 9 ವರ್ಷದಲ್ಲಿ ಬಹುತೇಕ ಸ್ಥಿರವಾಗಿದೆ. ಆದರೆ ಈ ವರ್ಷ ಬೇರೆ ಬೇರೆ ಕಾರಣಗಳಿಂದ ಬೆಲೆ ಏರಿಕೆಯಾಗುತ್ತಿದೆ. ಈಗಾಗಲೇ ಬೇಳೆ ಕಾಳುಗಳನ್ನು ಭಾರತ್ ಬ್ರ್ಯಾಂಡ್ ಮೂಲಕ ಮಾರಾಟ ಮಾಡುತ್ತಿದ್ದೇವೆ. ಅಕ್ಕಿಗೆ 34 ರೂ, ಗೋಧಿ ಹಿಟ್ಟಿಗೆ 29 ಬೆಲೆ ನಿಗದಿ ಮಾಡಿದೆ. ರೈತರಿಗೆ ತೊಂದರೆಯಾಗಬಾರದು ಎಂದು ರೈತರಿಂದ ಸರ್ಕಾರ ಖರೀದಿ ಮಾಡುತ್ತಿದೆ. ಗ್ರಾಹಕರಿಗೆ ಬೆಲೆ ಏರಿಕೆ ಸಮಸ್ಯೆ ಆಗಬಾರದು ಎಂದು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ‘ಮಂಥ್ಲಿ ಮನಿ’ ಹೆಸರಿನಲ್ಲಿ ಮದ್ಯದಂಗಡಿಗಳಿಂದ ತಿಂಗಳಿಗೆ 15 ಕೋಟಿ ಲಂಚ – ಅಬಕಾರಿ ಇಲಾಖೆ ವಿರುದ್ಧ ಗಂಭೀರ ಆರೋಪ

  • ಗೋಧಿ ಹಿಟ್ಟಿನ ಬೆಲೆ‌ ನಿಯಂತ್ರಣಕ್ಕೆ ಸರ್ಕಾರದ ಕ್ರಮ – ರಿಯಾಯಿತಿ ದರದಲ್ಲಿ ಭಾರತ್ ಅಟ್ಟಾ ಮಾರಾಟ

    ಗೋಧಿ ಹಿಟ್ಟಿನ ಬೆಲೆ‌ ನಿಯಂತ್ರಣಕ್ಕೆ ಸರ್ಕಾರದ ಕ್ರಮ – ರಿಯಾಯಿತಿ ದರದಲ್ಲಿ ಭಾರತ್ ಅಟ್ಟಾ ಮಾರಾಟ

    ನವದೆಹಲಿ: ದೇಶಾದ್ಯಂತ ಭಾರತ್ ಅಟ್ಟಾ (Bharat Atta) ಹೆಸರಿನ ಹಿಟ್ಟು ವಿತರಣಾ ವಾಹನಗಳಿಗೆ ಚಾಲನೆ ನೀಡಲಾಗಿದೆ. ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ (Piyush Goyal) ಅವರು ದೆಹಲಿಯಲ್ಲಿ ಮೊಬೈಲ್ ವ್ಯಾನ್‌ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು. ದೇಶಾದ್ಯಂತ 2 ಸಾವಿರ ಕಡೆ ಈ ಹಿಟ್ಟು ಲಭ್ಯವಾಗಲಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

    ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NAFED), ನ್ಯಾಷನಲ್ ಕೋಆಪರೇಟಿವ್ ಕನ್ಸೂಮರ್ಸ್ ಫೆಡರೇಶನ್ ಆಫ್ ಇಂಡಿಯಾ (NCCF), ಸಫಲ್, ಮದರ್ ಡೈರಿ ಮತ್ತು ಇತರ ಸಹಕಾರಿ ಸಂಸ್ಥೆಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಕೆಜಿಗೆ 27.50 ರೂಪಾಯಿಯಲ್ಲಿ ಗೋಧಿ ಹಿಟ್ಟು ಲಭ್ಯವಾಗಲಿದೆ.

    ಈ ಯೋಜನೆಗಾಗಿ 2.5 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದರು. ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಕಾರ, ಪ್ರಸ್ತುತ ದೇಶದಲ್ಲಿ ಹಿಟ್ಟಿನ ಸರಾಸರಿ ಬೆಲೆ ಕೆಜಿಗೆ 35 ರೂ.ಇದೆ. ಹಣದುಬ್ಬರ (Inflation) ನಿಯಂತ್ರಿಸಲು ಈ ಪರಿಹಾರ ಕಂಡುಕೊಳ್ಳಲಾಗಿದೆ.  ಇದನ್ನೂ ಓದಿ: ಚುನಾವಣಾ ಹೊಸ್ತಿಲಲ್ಲೇ ʼಕೈʼಗೆ ಶಾಕ್-‌ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಶಾಸಕ

    ಮಾರುಕಟ್ಟೆಯಲ್ಲಿ ಬ್ರಾಂಡೆಡ್ ಅಲ್ಲದ ಹಿಟ್ಟಿನ ಚಿಲ್ಲರೆ ಬೆಲೆ ಕೆಜಿಗೆ 30-40 ರೂ.ಗಳಾಗಿದ್ದು, ಬ್ರಾಂಡ್ ಹಿಟ್ಟು ಕೆಜಿಗೆ 40-50 ರೂ.ಗೆ ಮಾರಾಟವಾಗುತ್ತಿದೆ. ನಿರಂತರವಾಗಿ ಹೆಚ್ಚುತ್ತಿರುವ ಗೋಧಿ ಬೆಲೆಯಿಂದಾಗಿ ಹಬ್ಬ ಹರಿದಿನಗಳಲ್ಲಿ ಹಿಟ್ಟಿನ ಬೆಲೆಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಡಿಮೆ ಬೆಲೆಗೆ ಹಿಟ್ಟು ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ.

    ಈರುಳ್ಳಿ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಪರಿಹಾರ ನೀಡಲು ಸರ್ಕಾರ ಪ್ರತಿ ಕೆ.ಜಿ.ಗೆ 25 ರೂ. ದರದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದೆ. ಭಾರತದ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ಎನ್‌ಸಿಸಿಎಫ್‌ ಮತ್ತು ಎನ್‌ಎಫ್‌ಇಡಿ ಈಗಾಗಲೇ ಪ್ರತಿ ಕೆಜಿಗೆ 25 ರೂ. ದರದಲ್ಲಿ ಬಫರ್ ಈರುಳ್ಳಿ ಮಾರಾಟ ಮಾಡುತ್ತಿವೆ. NCCF 20 ರಾಜ್ಯಗಳಾದ್ಯಂತ 54 ನಗರಗಳಲ್ಲಿ 457 ಚಿಲ್ಲರೆ ಅಂಗಡಿಗಳಲ್ಲಿ ಸಬ್ಸಿಡಿ ದರದಲ್ಲಿ ಈರುಳ್ಳಿಯನ್ನು ಮಾರಾಟ ಮಾಡುತ್ತಿದೆ. NAFED 21 ರಾಜ್ಯಗಳ 55 ನಗರಗಳಲ್ಲಿ 329 ಚಿಲ್ಲರೆ ಅಂಗಡಿಗಳಲ್ಲಿ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದೆ. ಕೇಂದ್ರೀಯ ಭಂಡಾರ್ ಕಳೆದ ಶುಕ್ರವಾರದಿಂದ ದೆಹಲಿ-ಎನ್‌ಸಿಆರ್‌ನಲ್ಲಿರುವ ತನ್ನ ಮಳಿಗೆಗಳಿಂದ ಈರುಳ್ಳಿ ಚಿಲ್ಲರೆ ಮಾರಾಟವನ್ನು ಪ್ರಾರಂಭಿಸಿದೆ.

  • ದಾಖಲೆ ಮೀರಿ ಗೋಧಿ ಉತ್ಪಾದನೆಯಾಗುತ್ತಿದ್ದರೂ ಬೆಲೆ ಏರಿಕೆ ಯಾಕೆ?

    ದಾಖಲೆ ಮೀರಿ ಗೋಧಿ ಉತ್ಪಾದನೆಯಾಗುತ್ತಿದ್ದರೂ ಬೆಲೆ ಏರಿಕೆ ಯಾಕೆ?

    ಕೇಂದ್ರವು 16 ವರ್ಷಗಳಲ್ಲೇ ಮೊದಲ ಬಾರಿಗೆ ಜೂನ್ 12ರಂದು ಗೋಧಿ (Wheat) ಮೇಲೆ ದಾಸ್ತಾನು ಮಿತಿಯನ್ನು ಹೇರಿದೆ. ಅಕ್ರಮ ದಾಸ್ತಾನು ತಡೆಯಲು ಹಾಗೂ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ.

    ಏಪ್ರಿಲ್-ಜೂನ್ ತಿಂಗಳು ಗೋಧಿಗೆ ಪ್ರಮುಖ ಕೊಯ್ಲು ತಿಂಗಳಾಗಿದೆ. ದೇಶದಲ್ಲಿ ಗೋಧಿ ದಾಖಲೆಯ ಉತ್ಪಾದನೆ ಹೊಂದಿದ್ದರೂ ಇಂತಹ ಕ್ರಮಗಳನ್ನು ಏಕೆ ತೆಗೆದುಕೊಂಡಿದೆ ಎಂಬುದು ಜನತೆಯಲ್ಲಿ ಮೂಡಿರುವ ಪ್ರಶ್ನೆ.

    ಇದೀಗ ಮುಂದಿನ ವರ್ಷವೇ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಸರ್ಕಾರ ದೇಶದ ಪ್ರಮುಖ ಆಹಾರ ಧಾನ್ಯವಾಗಿರುವ ಅಕ್ಕಿ ಹಾಗೂ ಗೋಧಿಯ ಹಣದುಬ್ಬರದ ಬಗ್ಗೆ ಚಿಂತಿಸುತ್ತಿದೆ. ಕಳೆದ ಏಪ್ರಿಲ್‌ನಲ್ಲಿ ಸಿರಿಧಾನ್ಯಗಳ ಚಿಲ್ಲರೆ ಹಣದುಬ್ಬರ 12.65% ರಷ್ಟಿತ್ತು. ಮುಂದಿನ ಬೆಳೆ ಬರುವವರೆಗೆ ಎಂದರೆ 2024ರ ಮಾರ್ಚ್ ತಿಂಗಳ ವರೆಗೆ ಗೋಧಿ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.

    2023-24ರಲ್ಲಿ ಗೋಧಿ ಬೇಡಿಕೆ, ಪೂರೈಕೆ ಎಷ್ಟು?
    2023 ಜುಲೈಯಿಂದ 2023 ಜೂನ್ ವರೆಗೆ ದೇಶದಲ್ಲಿ ಗೋಧಿ ಉತ್ಪಾದನೆ ದಾಖಲೆಯ 112.74 ಮೆಟ್ರಿಕ್ ಟನ್‌ನಷ್ಟು ಹೊಂದಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ. ಆದರೆ ಫ್ಲೋರ್ ಮಿಲ್ಲರ್ಸ್ ಫೆಡರೇಶನ್ ಆಫ್ ಇಂಡಿಯಾ (RFMFI) ನಿಯೋಜಿಸಿದ ಖಾಸಗಿ ಸಂಸ್ಥೆ ಮಾರ್ಚ್ನಲ್ಲಿ ಅಕಾಲಿ ಮಳೆ ಹಾಗೂ ಆಲಿಕಲ್ಲು ಮಳೆಯ ಬಳಿಕ 1.35 ಮೀ.ನಷ್ಟು ಬೆಳೆ ನಷ್ಟಕ್ಕೆ ಕಾರಣವಾಗಿದ್ದು, ಉತ್ಪಾದನೆಯನ್ನು 102.89 ಮೆಟ್ರಿಕ್ ಟನ್ ಎಂದು ಅಂದಾಜಿಸಿದೆ.

    ನೀತಿ ಆಯೋಗದ ಅಂದಾಜಿನ ಪ್ರಕಾರ 2021-22ರಲ್ಲಿ 97.12 ಮೆಟ್ರಿಕ್ ಟನ್ ಗೋಧಿ ಬಳಕೆಯಾಗಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಗೋಧಿ ಬಳಕೆ 100 ಮೆಟ್ರಿಕ್ ಟನ್ ಅನ್ನು ಮೀರಬಹುದು ಎನ್ನಲಾಗಿದೆ. ಯುನೈಟೆಡ್ ಸ್ಟೇಟ್ಸ್ ಕೃಷಿ ಇಲಾಖೆ (USDA) ದೇಶದ ಗೋಧಿ ಬಳಕೆಯನ್ನು 108.1 ಮೆಟ್ರಿಕ್ ಟನ್ ಎಂದು ನಿಗದಿಪಡಿಸಿದೆ. ಆದರೆ ದೇಶದಲ್ಲಿ ಹೆಚ್ಚುವರಿ ಗೋಧಿ ಇದೆಯೇ ಅಥವಾ ಕೊರತೆಯಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಇದನ್ನೂ ಓದಿ: LPG Price Hike: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 7 ರೂ. ಏರಿಕೆ

    ಗೋಧಿ ಬೆಲೆ:
    ಪ್ಯಾನ್ ಇಂಡಿಯಾ ಸರಾಸರಿ ಮಾರುಕಟ್ಟೆಯ ಬೆಲೆ ಕ್ವಿಂಟಲ್ ಗೋಧಿಗೆ ಮೇ 15ರಂದು 2,196 ರೂ., ಮೇ 22ರಂದು 2,225 ರೂ., ಮೇ 29ರಂದು 2,277, ಜೂನ್ 5ರಂದು 2,307, ಜೂನ್ 12ರಂದು 2,295 ಹಾಗೂ ಜೂನ್ 19ರಂದು 2,310ಕ್ಕೆ ಹೆಚ್ಚಳವಾಗಿದೆ.

    ಸಾಮಾನ್ಯವಾಗಿ ಬೇಡಿಕೆ ಹಾಗೂ ಪೂರೈಕೆಯ ಅಂಶದ ಮೇಲೆ ಮಾರುಕಟ್ಟೆಯಲ್ಲಿ ಬೆಲೆ ನಿಗದಿಯಾಗುತ್ತದೆ. 2022ರ ಮೇ ತಿಂಗಳಿನಲ್ಲಿ ದೇಶದಲ್ಲಿ ಗೋಧಿಯ ಸಂಗ್ರಹ ಕಡಿಮೆಯಿದ್ದು, ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಹಾಗೂ ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಧಾನ್ಯ ಹಂಚಿಕೆಯಲ್ಲಿ ಬದಲಾವಣೆಗೆ ಮುಂದಾಯಿತು. ಗೋಧಿಯ ಬದಲಿಗೆ ಅಕ್ಕಿಯನ್ನು ತೆಗೆದುಕೊಳ್ಳುವಂತೆ ಜನರಲ್ಲಿ ಕೇಳಲಾಯಿತು. ಈ ಪ್ರಕ್ರಿಯೆಯಲ್ಲಿ ತಿಂಗಳಿಗೆ 7 ಲಕ್ಷ ಟನ್ ಗೋಧಿಯನ್ನು ಹಿಂತೆಗೆದುಕೊಳ್ಳಲಾಯಿತು.

    ಈ ಕ್ರಮದಿಂದ ಬೆಲೆಗಳ ಮೇಲೂ ಪರಿಣಾಮ ಬೀರಿದ್ದು, ಹೆಚ್ಚಿನ ಗ್ರಾಹಕರು ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುವ ಬದಲು ಮುಕ್ತ ಮಾರುಕಟ್ಟೆಯಿಂದ ಧಾನ್ಯವನ್ನು ಪಡೆಯಲು ಹೆಚ್ಚು ಆದ್ಯತೆ ನೀಡಿದರು. 2022ರಲ್ಲಿ ಸುಮಾರು 1.9 ಕೋಟಿ ಟನ್ ಸಂಗ್ರಹವಿತ್ತು. ಈ ವರ್ಷ 2.62 ಕೋಟಿ ಟನ್ ಗೋಧಿ ಸಂಗ್ರಹವಿದ್ದರೂ ಆ ಮಾರುಕಟ್ಟೆ ಸ್ಪಷ್ಟತೆಯನ್ನು ತಿಳಿಸಲಾಗಿಲ್ಲ. ಇದನ್ನೂ ಓದಿ: ಸೇಬಿಗಿಂತ ಟೊಮೆಟೊ ರೇಟೇ ಜಾಸ್ತಿ!

    ಕೆಲ ವಾರಗಳಿಂದ ಗೋಧಿ ಮಾರುಕಟ್ಟೆಯ ಬೆಲೆ ಹೆಚ್ಚುತ್ತಲೇ ಬಂದಿದೆ. ಇದು ಮಾರ್ಚ್ ತಿಂಗಳವರೆಗೂ ಮುಂದುವರಿಯುವ ಸಾಧ್ಯತೆಯಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಕಿಸ್ತಾನದಲ್ಲಿ ಬಿಕ್ಕಟ್ಟು – ಒಂದು ಪ್ಯಾಕೆಟ್ ಗೋಧಿ ಹಿಟ್ಟಿಗಾಗಿ ಟ್ರಕ್ ಹಿಂದೆ ಓಡಿದ ಜನ

    ಪಾಕಿಸ್ತಾನದಲ್ಲಿ ಬಿಕ್ಕಟ್ಟು – ಒಂದು ಪ್ಯಾಕೆಟ್ ಗೋಧಿ ಹಿಟ್ಟಿಗಾಗಿ ಟ್ರಕ್ ಹಿಂದೆ ಓಡಿದ ಜನ

    ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ (Pakistan) ಆಹಾರಕ್ಕಾಗಿ ಜನರು ಒದ್ದಾಡುವಂತಹ ಪರಿಸ್ಥಿತಿ ಎದುರಾಗಿದೆ. ಆಹಾರಕ್ಕಾಗಿ (Food) ಜನರು ಗೋಧಿ (Wheat) ಮೂಟೆಗಳನ್ನು ತುಂಬಿಕೊಂಡು ಸಾಗುತ್ತಿದ್ದ ಟ್ರಕ್ (Truck) ಹಿಂದೆ ಓಡುತ್ತಿರುವ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಪಾಕಿಸ್ತಾನದಲ್ಲಿ ದಿನೇ ದಿನೇ ಆರ್ಥಿಕ ಬಿಕ್ಕಟ್ಟಿನ ಜೊತೆಗೆ ಆಹಾರದ ಬಿಕ್ಕಟ್ಟು ಎದುರಾಗಿದೆ. ಈ ಹಿನ್ನೆಲೆಯಲ್ಲಿ ಜನರು ಗೋಧಿಯನ್ನು ಪಡೆಯಲು ಈ ರೀತಿ ಟ್ರಕ್ ಅನ್ನು ಹಿಂಬಾಲಿಸುತ್ತಿದ್ದಾರೆ. ಈ ವೀಡಿಯೋವನ್ನು ನ್ಯಾಷನಲ್ ಇಕ್ವಾಲಿಟಿ ಪಾರ್ಟಿ ಜೆಕೆಜಿಬಿಎಲ್ ಅಧ್ಯಕ್ಷ ಪ್ರೊ. ಸಜ್ಜದ್ ರಾಜಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    ವೀಡಿಯೋದ ಬಗ್ಗೆ ಅವರು, “ಜನರು ಬೈಕ್ (Bike) ರ‍್ಯಾಲಿ ನಡೆಸುತ್ತಿಲ್ಲ. ಬದಲಿಗೆ ಒಂದು ಪ್ಯಾಕೆಟ್ ಗೋಧಿ ಹಿಟ್ಟನ್ನು ಖರೀದಿಸಲು ಈ ರೀತಿಯಾಗಿ ಟ್ರಕ್ ಅನ್ನು ಹಿಂಬಾಲಿಸುತ್ತಿದ್ದಾರೆ. ಇದನ್ನು ನೋಡಿದರೇ ಪಾಕಿಸ್ತಾನದಲ್ಲಿ ನಮಗೆ ಭವಿಷ್ಯವಿದೆಯೇ” ಎಂದು ಪ್ರಶ್ನಿಸಿದ್ದಾರೆ.

    ವಿಡಿಯೋದಲ್ಲಿ ಏನಿದೆ?: ಬೈಕ್‍ನಲ್ಲಿ ಹೋಗುತ್ತಿರುವ ಕೆಲವರು ಹಿಟ್ಟಿನ ಮೂಟೆಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಹಿಂಬಾಲಿಸುತ್ತಿದ್ದಾರೆ. ಜನರು ಹಿಟ್ಟಿನ ಪ್ಯಾಕೆಟ್ ಅನ್ನು ಖರೀದಿಸಲು ವಾಹನವನ್ನು ಹಿಂಬಾಲಿಸುತ್ತಿದ್ದಾರೆ. ಇದನ್ನೂ ಓದಿ: Nepal Plane Crashː 32 ಮೃತದೇಹ ಹೊರಕ್ಕೆ – ತುರ್ತು ಸಭೆ ಕರೆದ ನೇಪಾಳ ಸರ್ಕಾರ

    ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ಆಹಾರಕ್ಕಾಗಿ ಹಾಹಾಕಾರ ಎದುರಾಗಿದೆ. ಸರ್ಕಾರದ ಸಬ್ಸಿಡಿ ಗೋಧಿಯ ಪೂರೈಕೆ ಬಹುತೇಕ ಸ್ಥಗಿತಗೊಂಡಿದ್ದರೂ, ಇತರ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಕಳೆದ ವಾರದಿಂದ ಖೈಬರ್ ಪಖ್ತುಂಖ್ವಾ, ಸಿಂಧ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ಹಿಟ್ಟಿನ ಬೆಲೆ ಗಗನಕ್ಕೇರಿದೆ. ಒಂದು ಪ್ಯಾಕೆಟ್ ಹಿಟ್ಟು 3,000 ಪಾಕಿಸ್ತಾನಿ ರೂ.ಗೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಗೋಧಿಯ ಕೊರತೆಯ ನಡುವೆಯೇ ಜನರು ಗಂಟೆಗಟ್ಟಲೆ ಉದ್ದನೆಯ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಬಂದೊದಗಿದೆ. ಇದನ್ನೂ ಓದಿ: ಯತ್ನಾಳ್ ವಿರುದ್ಧ ಸಿಎಂ, ನಿರಾಣಿ ಗರಂ; ಯತ್ನಾಳ್‌ಗೆ ಮೂಗುದಾರ ಹಾಕುವ ಬಗ್ಗೆ ನಡ್ಡಾ ಎದುರು ಪ್ರಸ್ತಾಪಕ್ಕೆ ನಿರ್ಧಾರ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಲೆ ಏರಿಕೆ – ಗೋಧಿ ಹಿಟ್ಟು, ಮೈದಾ, ರವೆ ರಫ್ತು ನಿಷೇಧ

    ಬೆಲೆ ಏರಿಕೆ – ಗೋಧಿ ಹಿಟ್ಟು, ಮೈದಾ, ರವೆ ರಫ್ತು ನಿಷೇಧ

    ನವದೆಹಲಿ: ಬೆಲೆ ಏರಿಕೆಯ ಹಿನ್ನೆಲೆ ಕೇಂದ್ರ ಸರ್ಕಾರ ಮೈದಾ, ರವೆ, ಗೋಧಿ ಹಿಟ್ಟಿನ ರಫ್ತನ್ನು ನಿಷೇಧಿಸಿದೆ. ಈ ಹಿಂದೆ ಮೇ ತಿಂಗಳಿನಲ್ಲೂ ಸರ್ಕಾರ ಗೋಧಿ ರಫ್ತಿನ ಮೇಲೆ ನಿಷೇಧ ಹೇರಿತ್ತು.

    ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಸರ್ಕಾರ ರಫ್ತು ನಿಷೇಧ ಹೇರಿಕೆ ಮಾಡಿದೆ. ಆದರೂ ಕೆಲವು ಸಂದರ್ಭಗಳಲ್ಲಿ ಸರ್ಕಾರದ ಅನುಮತಿಯ ಮೇರೆಗೆ ಈ ವಸ್ತುಗಳನ್ನು ರಫ್ತು ಮಾಡಲು ಸಾಧ್ಯವಾಗುತ್ತದೆ ಎಂದು ವಿದೇಶೀ ವ್ಯಾಪಾರದ ಮಹಾನಿರ್ದೇಶನಾಲಯ ತಿಳಿಸಿದೆ.

    ಆಗಸ್ಟ್ 25 ರಂದು, ಸರಕುಗಳ ಏರುತ್ತಿರುವ ಬೆಲೆಗಳನ್ನು ತಡೆಯಲು ಗೋಧಿ ಅಥವಾ ಮೆಸ್ಲಿನ್ ಹಿಟ್ಟಿನ ರಫ್ತಿನ ಮೇಲೆ ನಿರ್ಬಂಧಗಳನ್ನು ಹೇರಲು ಸರ್ಕಾರ ನಿರ್ಧರಿಸಿತು. ಬಳಿಕ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ತಿದ್ದುಪಡಿಯ ಪ್ರಸ್ತಾಪವನ್ನು ಅನುಮೋದಿಸಿದೆ.

    ರಷ್ಯಾ ಮತ್ತು ಉಕ್ರೇನ್ ಗೋಧಿಯ ಪ್ರಮುಖ ರಫ್ತುದಾರರಾಗಿದ್ದು, ಜಾಗತಿಕ ಗೋಧಿ ವ್ಯಾಪಾರದ ಸುಮಾರು ನಾಲ್ಕನೇ ಒಂದು ಭಾಗವನ್ನು ಹೊಂದಿದೆ. ಆದರೆ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಿಂದ ಇದೀಗ ಜಾಗತಿಕ ಗೋಧಿ ಪೂರೈಕೆಗೆ ಅಡೆತಡೆಯುಂಟಾಗಿದೆ. ಇದರಿಂದ ವಿದೇಶಗಳಿಂದ ಭಾರತಕ್ಕೆ ಗೋಧಿಯ ಬೇಡಿಕೆ ಹೆಚ್ಚುತ್ತಿದೆ. ಆದರೆ ಆಂತರಿಕ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ಏರಿಕೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮೈದಾ, ರವೆ ಸೇರಿದಂತೆ ಹಿಟ್ಟಿನ ರಫ್ತಿಗೆ ನಿಷೇಧ ಹೇರಿದ ಭಾರತ

    ಮೈದಾ, ರವೆ ಸೇರಿದಂತೆ ಹಿಟ್ಟಿನ ರಫ್ತಿಗೆ ನಿಷೇಧ ಹೇರಿದ ಭಾರತ

    ನವದೆಹಲಿ: ಭಾರತ ಸರ್ಕಾರ ಗೋಧಿ ರಫ್ತಿಗೆ ಈ ಹಿಂದೆ ನಿಷೇಧ ಹೇರಿದ ಬಳಿಕ ಇದೀಗ ಮೈದಾ, ರವೆ ಸೇರಿದಂತೆ ಹಿಟ್ಟಿನ ರಫ್ತಿಗೆ ನಿಷೇಧ ಹೇರಿದೆ.

    Wheat

    ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್‍ಟಿ)ಯ ಅಧಿಸೂಚನೆಯ ಪ್ರಕಾರ, ಈ ನಿರ್ಧಾರವು ಜುಲೈ 12 ರಿಂದ ಜಾರಿಗೆ ಬರಲಿದೆ. ಗೋಧಿ ಮತ್ತು ಗೋಧಿ ಹಿಟ್ಟಿನ ರಫ್ತಿನ ಕುರಿತಾಗಿ ಜುಲೈ 6 ರಂದು ಹೊರಡಿಸಲಾದ ಅಧಿಸೂಚನೆಯ ಪ್ರಕಾರ ಈಗಾಗಲೇ ರಫ್ತಿಗೆ ಸಿದ್ಧಗೊಂಡಿರುವ ಹಿಟ್ಟಿಗೆ ಸಚಿವಾಲಯದ ಸಮಿತಿಯಿಂದ ಪೂರ್ವಾನುಮತಿ ಪಡೆಯಬಹುದಾಗಿದೆ. ಆದರೆ ಜುಲೈ 12 ರಿಂದ ಸಂಪೂರ್ಣ ನಿಷೇಧ ಹೇರಲಾಗಿದೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ರಫ್ತು ನಿಲ್ಲಿಸಿದ ಭಾರತ – ಗೋಧಿಗಾಗಿ ರಷ್ಯಾ ಕಡೆ ಮುಖ ಮಾಡಿದ ಬಾಂಗ್ಲಾದೇಶ

    WHEAT

    ಗೋಧಿ ಮತ್ತು ಗೋಧಿ ಹಿಟ್ಟಿನ ಜಾಗತಿಕ ಪೂರೈಕೆ ಅಡೆತಡೆಗಳಿಂದಾಗಿ ಅನೇಕ ಏರುಪೇರು ಕಾಣುತ್ತಿದೆ. ಕಡಿಮೆ ಉತ್ಪಾದನೆ ಮತ್ತು ಜಾಗತಿಕ ಬೆಲೆಗಳು ತೀವ್ರವಾಗಿ ಹೆಚ್ಚಿರುವುದು ಸೇರಿದಂತೆ ತನ್ನದೇ ದೇಶದ ಜನರ ಆಹಾರ ಭದ್ರತೆಯ ಬಗ್ಗೆ ಭಾರತ ಚಿಂತಿಸಿ ಈ ಕ್ರಮಕ್ಕೆ ಮುಂದಾಗಿದೆ. ಇದರಿಂದಾಗಿ ರಫ್ತು ವ್ಯಾಪಾರಕ್ಕೆ ನಿಷೇಧದ ನಿರ್ಧಾರವನ್ನು ತೆಗೆದುಕೊಂಡಿದೆ. ಇದನ್ನೂ ಓದಿ: ಆರ್ಥಿಕ ಹಿಂಜರಿತ ಭೀತಿ – ಅಂತಾರಾಷ್ಟ್ರೀಯ ತೈಲಬೆಲೆ ಭಾರೀ ಇಳಿಕೆ

    ಗೋಧಿ ರಫ್ತು ನಿಷೇಧವಾದಾಗ ಭಾರತದ ಈ ನಿರ್ಧಾರವನ್ನು US, ಕೆನಡಾ, EU ಮತ್ತು ಆಸ್ಟ್ರೇಲಿಯಾ ಸೇರಿದಂತೆ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ಈ ನಿರ್ಧಾರದ ವಿರುದ್ಧ ಮಾತನಾಡಿದ್ದವು. ಇದೀಗ ಗೋಧಿ ಹಿಟ್ಟಿನ ರಫ್ತಿಗೆ ನಿಷೇಧ ಹೇರಿದ ಬಳಿಕ ಇನ್ನಷ್ಟು ಅಪಸ್ವರ ಕೇಳಿ ಬರುತ್ತಿದೆ. ಕೇಂದ್ರ ಸರ್ಕಾರವು ಗೋಧಿಯ ರಫ್ತು ನೀತಿಯನ್ನು ನಿಷೇಧಿತ ವರ್ಗದ ಅಡಿಯಲ್ಲಿ ತಿದ್ದುಪಡಿ ಮಾಡಿದ ಬಳಿಕ ಈ ನಿರ್ಧಾರಕ್ಕೆ ಮುಂದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರಫ್ತು ನಿಲ್ಲಿಸಿದ ಭಾರತ – ಗೋಧಿಗಾಗಿ ರಷ್ಯಾ ಕಡೆ ಮುಖ ಮಾಡಿದ ಬಾಂಗ್ಲಾದೇಶ

    ರಫ್ತು ನಿಲ್ಲಿಸಿದ ಭಾರತ – ಗೋಧಿಗಾಗಿ ರಷ್ಯಾ ಕಡೆ ಮುಖ ಮಾಡಿದ ಬಾಂಗ್ಲಾದೇಶ

    ಢಾಕಾ: ಬಾಂಗ್ಲಾದೇಶಕ್ಕೆ ಅತಿ ದೊಡ್ಡ ಧಾನ್ಯ ಪೂರೈಕೆದಾರ ಎಂದೇ ಹೆಸರಾಗಿರುವ ಭಾರತವು ಕಳೆದ ತಿಂಗಳಿಂದ ಗೋಧಿ ರಫ್ತನ್ನು ಸ್ಥಗಿತಗೊಳಿಸಿದೆ. ಪರಿಣಾಮವಾಗಿ ಬಾಂಗ್ಲಾದೇಶವು ಗೋಧಿ ಪೂರೈಕೆಗಾಗಿ ರಷ್ಯಾದೊಂದಿಗೆ ಒಪ್ಪಂದಕ್ಕೆ ಯತ್ನಿಸುತ್ತಿದೆ.

    ವಿಶ್ವದ ಅತಿದೊಡ್ಡ ಗೋಧಿ ರಫ್ತುದಾರ ರಷ್ಯಾದೊಂದಿಗಿನ ಪೂರೈಕೆ ಒಪ್ಪಂದವು ಢಾಕಾಗೆ ಜಾಗತಿಕ ಬೆಲೆಗಳಿಗಿಂತ ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದು ಉದ್ಯಮದ ಅಧಿಕಾರಿಗಳು ತಿಳಿಸಿದ್ದಾರೆ. ಒಪ್ಪಂದವನ್ನು ಅಂತಿಮಗೊಳಿಸಲು ಬಾಂಗ್ಲಾದೇಶವು ಗುರುವಾರ ರಷ್ಯಾದೊಂದಿಗೆ ವರ್ಚುವಲ್ ಸಭೆ ನಡೆಸಲಿದೆ ಎಂದು ಬಾಂಗ್ಲಾದೇಶದ ಆಹಾರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭಾರತ ನೀಡಿದ ಹಣಕಾಸಿನ ನೆರವು ದೇಣಿಗೆಯಲ್ಲ: ಶ್ರೀಲಂಕಾ ಪ್ರಧಾನಿ

    WHEAT EXPORT

    ನಾವು ಆರಂಭದಲ್ಲಿ ರಷ್ಯಾದಿಂದ ಕನಿಷ್ಠ 2,00,000 ಟನ್ ಗೋಧಿಗೆ ಬೇಡಿಕೆ ಇಡುತ್ತೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಂಗ್ಲಾದೇಶವು ಸುಮಾರು 7 ಮಿಲಿಯನ್ ಟನ್ ಗೋಧಿಯನ್ನು ಆಮದು ಮಾಡಿಕೊಳ್ಳುತ್ತದೆ. ಕಳೆದ ವರ್ಷ ಅದರಲ್ಲಿ ಮೂರನೇ ಎರಡರಷ್ಟು ಪ್ರಮಾಣದ ಗೋಧಿ ಭಾರತದಿಂದ ಬಂದಿದೆ.

    ಭಾರತದ ರಫ್ತು ನಿಷೇಧದ ನಂತರ ಬಾಂಗ್ಲಾದೇಶವು ಅಂತರರಾಷ್ಟ್ರೀಯ ಟೆಂಡರ್‌ಗಳ ಮೂಲಕ ಸರಬರಾಜನ್ನು ಪಡೆಯಲು ಪ್ರಯತ್ನಿಸಿತು. ಆದರೆ ಹೆಚ್ಚಿನ ಬೆಲೆ ಕಾರಣದಿಂದಾಗಿ ಸದ್ಯ ಈ ಯೋಜನೆಯನ್ನು ಕೈಬಿಟ್ಟಿದೆ. ಇದನ್ನೂ ಓದಿ: ಆಫ್ಘನ್‌ನಲ್ಲಿ ಭೂಕಂಪ – ಮೃತರ ಸಂಖ್ಯೆ 1,000ಕ್ಕೆ ಏರಿಕೆ; ಸಂತ್ರಸ್ತರಿಗೆ ನೆರವು ನೀಡ್ತೀವಿ ಎಂದ ತಾಲಿಬಾನ್‌

    ಬಾಂಗ್ಲಾದೇಶ ಸರ್ಕಾರವು ಗಗನಕ್ಕೇರುತ್ತಿರುವ ಸರಕುಗಳ ಬೆಲೆಗಳನ್ನು ನಿಯಂತ್ರಿಸಲು ಹೆಣಗಾಡುತ್ತಿದೆ. ಹಣದುಬ್ಬರವು ಮೇ ತಿಂಗಳಲ್ಲಿ ಎಂಟು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಆದರೆ ದೇಶದ ಗೋಧಿ ದಾಸ್ತಾನುಗಳು ಮೂರು ವರ್ಷಗಳಲ್ಲಿ 1,66,000 ಟನ್‌ಗಳಿಗೆ ಕಡಿಮೆಯಾಗಿದೆ.

    ಬಾಂಗ್ಲಾದೇಶಕ್ಕೆ ಗೋಧಿಯನ್ನು ಪೂರೈಸುವ ಹಲವು ದೇಶಗಳಿವೆ. ಆದರೆ ಪ್ರಮುಖ ವಿಷಯವೆಂದರೆ ಬೆಲೆ. ರಷ್ಯಾ ಜಾಗತಿಕ ಬೆಲೆಗಳಲ್ಲಿ ರಿಯಾಯಿತಿಯನ್ನು ನೀಡಬಹುದು ಎಂದು ಜಾಗತಿಕ ವ್ಯಾಪಾರ ಸಂಸ್ಥೆಯೊಂದರ ನವದೆಹಲಿ ಮೂಲದ ಡೀಲರ್ ಹೇಳಿದ್ದಾರೆ.

    Live Tv

  • ಭಾರತದ ಗೋಧಿ ರಫ್ತನ್ನು 4 ತಿಂಗಳು ಅಮಾನತುಗೊಳಿಸಿದ ಯುಎಇ

    ಭಾರತದ ಗೋಧಿ ರಫ್ತನ್ನು 4 ತಿಂಗಳು ಅಮಾನತುಗೊಳಿಸಿದ ಯುಎಇ

    ದುಬೈ: ಭಾರತದ ಗೋಧಿ ಮತ್ತು ಗೋಧಿ ಹಿಟ್ಟಿನ ರಫ್ತನ್ನು 4 ತಿಂಗಳು ಅಮಾನತುಗೊಳಿಸುವಂತೆ ಸಂಯುಕ್ತ ಅರಬ್‌ ಒಕ್ಕೂಟವು (ಯುಎಇ) ಆದೇಶಿಸಿದೆ ಎಂದು ಸ್ಥಳೀಯ ಸುದ್ದಿ ಸಂಸ್ಥೆ WAM ವರದಿ ಮಾಡಿದೆ.

    ಗಲ್ಫ್‌ ರಾಷ್ಟ್ರಗಳ ಆರ್ಥಿಕ ಸಚಿವಾಲಯವು ಜಾಗತಿಕ ವ್ಯಾಪಾರಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಕ್ರಮವಹಿಸಿದೆ. ಆದರೆ ದೇಶೀಯ ಬಳಕೆಗಾಗಿ ಯುಎಇಗೆ ಗೋಧಿ ರಫ್ತನ್ನು ಭಾರತ ಅನುಮೋದಿಸಿದೆ. ಇದನ್ನೂ ಓದಿ: ಮಂಕಿಪಾಕ್ಸ್ ಹೆಸರು ಬದಲಾವಣೆಗೆ WHO ನಿರ್ಧಾರ

    ಭಾರತವು ಮೇ 14 ರಂದು ಗೋಧಿ ರಫ್ತನ್ನು ನಿಷೇಧಿಸಿತ್ತು. ಈಗಾಗಲೇ ನೀಡಲಾದ ಸಾಲದ ಪತ್ರಗಳು (LC) ಮತ್ತು ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಬಯಸುವ ದೇಶಗಳಿಗೆ ಬೆಂಬಲ ನೀಡಿದೆ. ಅಂದಿನಿಂದ 4,69,202 ಟನ್ ಗೋಧಿಯ ಸಾಗಣೆಗೆ ಅನುಮತಿ ನೀಡಿದೆ.

    ಭಾರತದ ಗೋಧಿ ರಫ್ತಿಗೆ ಅಮಾನತು ವಿಧಿಸಿದ ದಿನದ ಮೊದಲೇ ಯುಎಇಗೆ ಬಂದಿರುವ ಭಾರತೀಯ ಗೋಧಿಯನ್ನು ರಫ್ತು ಮಾಡಲು ಬಯಸುವ ಕಂಪನಿಗಳು ಮೊದಲು ಆರ್ಥಿಕ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ರಕ್ಷಣಾ ಒಪ್ಪಂದ ಬಲಪಡಿಸಲು ಆಸ್ಟ್ರೇಲಿಯಾ ಪ್ಲ್ಯಾನ್‌ – ಜೂನ್ 21, 22 ಭಾರತಕ್ಕೆ ಉಪ ಪ್ರಧಾನಿ ಪ್ರವಾಸ

    ಯುಎಇ ಮತ್ತು ಭಾರತ ಫೆಬ್ರವರಿಯಲ್ಲಿ ವ್ಯಾಪಾರ ಮತ್ತು ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿದವು. ಪರಸ್ಪರರ ಸರಕುಗಳ ಮೇಲಿನ ಎಲ್ಲಾ ಸುಂಕಗಳನ್ನು ಕಡಿತಗೊಳಿಸಲು ಕ್ರಮವಹಿಸಲಾಗಿದೆ. ಜೊತೆಗೆ ಐದು ವರ್ಷಗಳಲ್ಲಿ ತಮ್ಮ ವಾರ್ಷಿಕ ವ್ಯಾಪಾರವನ್ನು 100 ಬಿಲಿಯನ್‌ ಡಾಲರ್‌ಗೆ ಹೆಚ್ಚಿಸುವ ಗುರಿಯನ್ನು ಹೊಂದಿವೆ.

    Live Tv

  • ಕೊರೊನಾ ಲಸಿಕೆಯಂತೆ ಗೋಧಿ ರಫ್ತು ಮಾಡಲಾಗುದಿಲ್ಲ: ಭಾರತ

    ಕೊರೊನಾ ಲಸಿಕೆಯಂತೆ ಗೋಧಿ ರಫ್ತು ಮಾಡಲಾಗುದಿಲ್ಲ: ಭಾರತ

    ಪ್ಯಾರಿಸ್: ಭಾರತದಲ್ಲಿ ಗೋಧಿ ರಫ್ತು ನಿಷೇಧಿಸಿದ ಬೆನ್ನಲ್ಲೇ ವಿಶ್ವ ಮಾರುಕಟ್ಟೆಯಲ್ಲಿ ಗೋಧಿ ಬೆಲೆಯು ದಾಖಲೆ ಪ್ರಮಾಣದಲ್ಲಿ ಏರಿಕೆ ಆಗಿದೆ. ಈ ಹಿನ್ನೆಲೆ ಭಾರತ ವಿಶ್ವಸಂಸ್ಥೆ(ಯುಎನ್)ಯಲ್ಲಿ ಮೊದಲ ಬಾರಿಗೆ ಗೋಧಿ ರಫ್ತು ನಿಷೇಧದ ಬಗ್ಗೆ ಮಾತನಾಡಿದೆ.

    ಮೇ 13ರಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ(ಡಿಜಿಎಫ್‍ಟಿ) ಕಳೆದ ವಾರದ ಅಧಿಸೂಚನೆಯಲ್ಲಿ, ಭಾರತವು ಕೇಂದ್ರ ಸರ್ಕಾರ ನೀಡುವ ಅನುಮತಿಯ ಆಧಾರದ ಮೇಲೆ ಗೋಧಿ ರಫ್ತಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದೆ. ಈ ಹಿನ್ನೆಲೆ ಮೇ ತಿಂಗಳ ಯುಎನ್ ಸೆಕ್ಯುರಿಟಿ ಕೌನ್ಸಿಲ್ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರ ಅಧ್ಯಕ್ಷತೆಯಲ್ಲಿ ನಡೆದ ‘ಜಾಗತಿಕ ಆಹಾರ ಭದ್ರತಾ ಕರೆ ಟು ಆಕ್ಷನ್’ ಕುರಿತು ಸಚಿವರ ಸಭೆ ನಡೆಯಿತು. ಈ ವೇಳೆ ವಿದೇಶಾಂಗ ವ್ಯವಹಾರಗಳ ಸಚಿವ ಮುರಳೀಧರನ್ ಮಾತನಾಡಿದರು. ಇದನ್ನೂ ಓದಿ: ರಫ್ತಿಗೆ ನಿಷೇಧ ಹೇರಿದ ಭಾರತ- ಗೋಧಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ

    ಪಾಶ್ಚಿಮಾತ್ಯ ದೇಶಗಳನ್ನು ಕರೆ ನೀಡಿದ ಭಾರತವು, ಕೋವಿಡ್-19 ಲಸಿಕೆಗಳ ವಿಷಯದಲ್ಲಿ ಭಾರತಕ್ಕೆ ದೊಡ್ಡಮಟ್ಟದಲ್ಲಿ ಖರ್ಚು ಆಗಿದೆ. ಇದನ್ನು ನಾವು ನೋಡಿದ್ದೇವೆ. ಗೋಧಿಯು ಕೋವಿಡ್-19 ಲಸಿಕೆಗಳ ದಾರಿಯಲ್ಲಿ ಹೋಗಬಾರದು. ಕೊರೊನಾ ಲಸಿಕೆಯಂತೆ ಗೋಧಿಯನ್ನು ರಫ್ತು ಮಾಡಲಾಗುವುದಿಲ್ಲ.  ಏಕೆಂದರೆ ಯುಎನ್‍ನಲ್ಲಿ ಆಹಾರದ ಬೆಲೆಗಳಲ್ಲಿ ನ್ಯಾಯಸಮ್ಮತವಲ್ಲದೆ ಹೆಚ್ಚಳವಾಗುತ್ತಿದೆ. ಇದರಿಂದ ಆಹಾರ ಸಂಗ್ರಹಣೆಯಲ್ಲಿ ತಾರತಮ್ಯ ಉಂಟಾಗಬಹುದು ಎಂಬ ಬಗ್ಗೆ ಕಳವಳ ಉಂಟಾಗುತ್ತಿದೆ. ಆಹಾರ ಧಾನ್ಯಗಳ ವಿಷಯಕ್ಕೆ ಬಂದಾಗ ನಾವೆಲ್ಲರೂ ಪ್ರವೇಶದ ಪ್ರಾಮುಖ್ಯತೆಯನ್ನು ಸಮರ್ಪಕವಾಗಿ ತಿಳಿದುಕೊಳ್ಳುವುದು ಅವಶ್ಯಕ ಎಂದು ಹೇಳಿದರು.

    ಕಡಿಮೆ ಆದಾಯ ಹೊಂದಿದ ದೇಶಗಳು ಇಂದು ಹೆಚ್ಚುತ್ತಿರುವ ವೆಚ್ಚ ಮತ್ತು ಆಹಾರ ಧಾನ್ಯಗಳ ತೊಂದರೆಗಳಿಂದ ಹಲವು ಸವಾಲುಗಳನ್ನು ಎದುರಿಸುತ್ತಿವೆ. ಸಾಕಷ್ಟು ದಾಸ್ತಾನುಗಳನ್ನು ಹೊಂದಿರುವ ಭಾರತದಂತಹ ದೇಶಗಳು ಸಹ ಆಹಾರದ ಬೆಲೆಗಳಲ್ಲಿ ಅಸಮರ್ಥನೀಯ ಹೆಚ್ಚಳವನ್ನು ಕಂಡಿವೆ. ಈ ನಿರ್ಧಾರವು ಗೋಧಿ ಮತ್ತು ಗೋಧಿ ಹಿಟ್ಟಿನ ಚಿಲ್ಲರೆ ಬೆಲೆಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ. ಇದು ಕಳೆದ ಒಂದು ವರ್ಷದಲ್ಲಿ ಸರಾಸರಿ 14-20 ಶೇಕಡಾ ಏರಿಕೆಯಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೋಟ್ಯಂತರ ರೂಪಾಯಿ ತೆರಿಗೆ ಕಟ್ಟುವ ಶಾಸಕನ ತಾಯಿ BPL ಹೋಲ್ಡರ್

  • ನೋಂದಾಯಿತ ಪ್ರಮಾಣದ ಗೋಧಿ ರಫ್ತಿಗೆ ಕೇಂದ್ರಸರ್ಕಾರ ನಿರ್ಧಾರ

    ನೋಂದಾಯಿತ ಪ್ರಮಾಣದ ಗೋಧಿ ರಫ್ತಿಗೆ ಕೇಂದ್ರಸರ್ಕಾರ ನಿರ್ಧಾರ

    ನವದೆಹಲಿ: ಉತ್ಪಾದನೆ ಇಳಿಕೆಯಾದ ಹಿನ್ನೆಲೆಯಲ್ಲಿ ಭಾರತವು ಗೋಧಿ ರಫ್ತಿಗೆ ನಿಷೇಧ ಹೇರಿತ್ತು. ಆದರೆ ನಿಷೇಧ ಹೇರುವುದಕ್ಕೂ ಮುನ್ನವೇ ಕಸ್ಟಮ್ಸ್ ಪ್ರಾಧಿಕಾರದಲ್ಲಿ ನೋಂದಾಯಿಸಲಾದ ನಿಗದಿತ ಪ್ರಮಾಣದ ಗೋಧಿಯನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

    ಮೇ 13ಕ್ಕೂ ಮುನ್ನವೇ ಕಸ್ಟಮ್ಸ್ ವ್ಯವಸ್ಥೆಗಳಲ್ಲಿ ನೋಂದಾಯಿಸಲಾಗಿದ್ದು, ಅಂತಹ ಸರಕುಗಳನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿಸಿದೆ ಎಂದು ವಾಣಿಜ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಉಕ್ರೇನ್‌ ಯುದ್ಧ – ಭಾರತದಿಂದ ಈಜಿಪ್ಟ್‌ಗೆ ರಫ್ತು ಆಗಲಿದೆ ಗೋಧಿ

    Wheat 1

    ಜೊತೆಗೆ ಗೋಧಿ ರಫ್ತು ಮಾಡಲು ತೊಡಗಿರುವ ಮೇರಾ ಇಂಟರ್‌ನ್ಯಾಶನಲ್ ಇಂಡಿಯಾ ಪ್ರೈ.ಲಿ. ಈಜಪ್ಟ್‌ 61,500 ಮೆಟ್ರಿಕ್ ಟನ್ ಲೋಡ್ ಗೋಧಿ ರಫ್ತಿಗೆ ಅನುಮತಿ ನೀಡಿದೆ. ಅದರಲ್ಲಿ 44,340 ಮೆಟ್ರಿಕ್ ಟನ್ ಈಗಾಗಲೇ ಲೋಡ್ ಮಾಡಲಾಗಿದೆ. ಇನ್ನು 17,160 ಮೆಟ್ರಿಕ್ ಟನ್ ಮಾತ್ರ ಬಾಕಿ ಉಳಿದಿದೆ. ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದ ಗೋಧಿಯನ್ನು ಸರಬರಾಜು ಮಾಡಲು ನಿರ್ಧರಿಸಿದೆ ಎಂದು ಹೇಳಿದೆ.

    WHEAT

    ರಫ್ತಿಗೆ ನಿಷೇಧ ಹೇರಿದ್ದು ಏಕೆ?: ಭಾರತದಲ್ಲಿ ಉಷ್ಣತೆಯಲ್ಲಿ ಏರಿಕೆ ಕಂಡಿದ್ದರಿಂದ ಗೋಧಿ ಉತ್ಪಾದನೆಗೆ ಹೊಡೆತ ಬಿದ್ದಿತ್ತು. ಇದರ ಜೊತೆಗೆ ಕಡಿಮೆ ಉತ್ಪಾದನೆ ಮತ್ತು ಜಾಗತಿಕ ಬೆಲೆಗಳು ತೀವ್ರವಾಗಿ ಹೆಚ್ಚಿರುವುದು ಸೇರಿದಂತೆ ತನ್ನದೇ ಆದ 1.4 ಶತಕೋಟಿ ಜನರ ಆಹಾರ ಭದ್ರತೆಯ ಬಗ್ಗೆ ಭಾರತ ಚಿಂತಿಸಿತ್ತು. ಇದರಿಂದಾಗಿ ರಫ್ತು ವ್ಯಾಪಾರಕ್ಕೆ ನಿಷೇಧದ ನಿರ್ಧಾರವನ್ನು ತೆಗೆದುಕೊಂಡಿತ್ತು. ಇದನ್ನೂ ಓದಿ: ರಫ್ತಿಗೆ ನಿಷೇಧ ಹೇರಿದ ಭಾರತ- ಗೋಧಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ

    WHEAT EXPORT

    ಭಾರತದ ಈ ನಿರ್ಧಾರವನ್ನು US, ಕೆನಡಾ, EU ಮತ್ತು ಆಸ್ಟ್ರೇಲಿಯಾ ಸೇರಿದಂತೆ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ತರಾಟೆಗೆ ತೆಗೆದುಕೊಂಡಿದೆ. ಆದರೆ ಭಾರತದಲ್ಲಿ ಗೋಧಿಯ ರಫ್ತು ನಿಷೇಧ ಮಾಡಿರುವುದಕ್ಕೆ ಚೀನಾ ಬೆಂಬಲ ನೀಡಿದೆ. ಅಭಿವೃದ್ಧಿಶೀಲ ರಾಷ್ಟ್ರಗಳನ್ನು ದೂಷಿಸುವುದು ಸರಿಯಲ್ಲ. G7 ರಾಷ್ಟ್ರಗಳು ತಮ್ಮ ರಫ್ತುಗಳನ್ನು ಹೆಚ್ಚಿಸುವ ಮೂಲಕ ಆಹಾರ ಮಾರುಕಟ್ಟೆ ಪೂರೈಕೆಯನ್ನು ಸ್ಥಿರಗೊಳಿಸಲು ಏಕೆ ಮುಂದಾಗುವುದಿಲ್ಲ ಎಂದು ಚೀನಾ ಪ್ರಶ್ನಿಸಿದೆ.