Tag: ಗೋದಾವರಿ ನದಿ

  • ಮಹಿಳೆ, ಮಕ್ಕಳನ್ನು ಸೇತುವೆಯಿಂದ ತಳ್ಳಿದ ಲಿವ್ ಇನ್ ಪಾರ್ಟ್‌ನರ್ – 100ಕ್ಕೆ ಕರೆ ಮಾಡಿ ಪ್ರಾಣ ಉಳಿಸಿಕೊಂಡ ಬಾಲಕಿ

    ಮಹಿಳೆ, ಮಕ್ಕಳನ್ನು ಸೇತುವೆಯಿಂದ ತಳ್ಳಿದ ಲಿವ್ ಇನ್ ಪಾರ್ಟ್‌ನರ್ – 100ಕ್ಕೆ ಕರೆ ಮಾಡಿ ಪ್ರಾಣ ಉಳಿಸಿಕೊಂಡ ಬಾಲಕಿ

    ಅಮರಾವತಿ: ಸೆಲ್ಫಿ ನೆಪದಲ್ಲಿ ಮಹಿಳೆ, 1 ವರ್ಷ ಹಾಗೂ 13 ವರ್ಷದ ಮಕ್ಕಳನ್ನು ಮಹಿಳೆಯ ಲಿವ್ ಇನ್ ಪಾರ್ಟ್‌ನರ್ ತುಂಬಿ ಹರಿಯುತ್ತಿದ್ದ ನದಿಯ ಸೇತುವೆಯಿಂದ ತಳ್ಳಿದ್ದು, ಘಟನೆಯಲ್ಲಿ 13ರ ಬಾಲಕಿ ಪವಾಡಸದೃಶದಂತೆ ತನ್ನ ಪ್ರಾಣ ಉಳಿಸಿಕೊಂಡಿರುವ ಘಟನೆ ಆಂಧ್ರಪ್ರದೇಶದ (Andhra Pradesh) ಗುಂಟೂರಿನಲ್ಲಿ (Guntur) ನಡೆದಿದೆ.

    13 ವರ್ಷದ ಬಾಲಕಿ ಕೀರ್ತನ, ತನ್ನ ತಾಯಿ ಪುಪ್ಪಳ ಸುಹಾಸಿನಿ (36) ಹಾಗೂ ಬಾಲಕಿಯ 1 ವರ್ಷದ ಸಹೋದರಿ ಜರ್ಸಿಯನ್ನು ಭಾನುವಾರ ಮುಂಜಾನೆ ಗೋದಾವರಿ ನದಿಗೆ (Godavari River) ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆಯಿಂದ (Bridge) ತಳ್ಳಲಾಗಿತ್ತು. ಬಾಲಕಿ ಈ ವೇಳೆ ಸೇತುವೆಗೆ ಅಳವಡಿಸಲಾಗಿದ್ದ ಪ್ಲಾಸ್ಟಿಕ್ ಪೈಪ್ ಅನ್ನು ಬಿಗಿಯಾಗಿ ಹಿಡಿದು, ಪೊಲೀಸರ ಸಹಾಯಕ್ಕಾಗಿ ತನ್ನ ಜೇಬಿನಿಂದ ಫೋನ್ ತೆಗೆದುಕೊಂಡು 100ಕ್ಕೆ ಕರೆ ಮಾಡಿದ್ದಾಳೆ.

    ಮಹಿಳೆ ಹಾಗೂ ಮಕ್ಕಳನ್ನು ಸೇತುವೆಗೆ ತಳ್ಳಿದ ಆರೋಪಿ ಉಳವ ಸುರೇಶ್ ಸುಹಾಸಿನಿಯ ಲಿವ್ ಇನ್ ಪಾರ್ಟ್‌ನರ್ ಆಗಿದ್ದ. ಗಂಡನಿಂದ ದೂರವಾಗಿದ್ದ ಸುಹಾಸಿನಿಗೆ ಸುರೇಶ್ ಪರಿಚಯವಾಗಿತ್ತು. ಹೀಗೆ ಸುರೇಶ್ ಹಾಗೂ ಸುಹಾಸಿನಿ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು.

    ಭಾನುವಾರ ಇಬ್ಬರು ಮಕ್ಕಳು ಹಾಗೂ ಸುಹಾಸಿನಿಯನ್ನು ಸುರೇಶ್ ಪಿಕ್‌ನಿಕ್ ಕರೆದುಕೊಂಡು ಹೋಗಿದ್ದ ಮಾತ್ರವಲ್ಲದೇ ಗೆಳತಿ ಹಾಗೂ ಆಕೆಯ ಮಕ್ಕಳನ್ನು ಕೊಲ್ಲುವ ಸಂಚು ರೂಪಿಸಿದ್ದ. ಸೆಲ್ಫಿ ನೆಪದಲ್ಲಿ ಗೋದಾವರಿ ನದಿ ಬಳಿ ಕಾರು ನಿಲ್ಲಿಸಿ, ಮೂವರನ್ನು ಸೇತುವೆ ಅಂಚಿಗೆ ಕರೆದುಕೊಂಡು ಹೋಗಿ ನದಿಗೆ ತಳ್ಳಿದ್ದಾನೆ. ಇದನ್ನೂ ಓದಿ: ‘ಹರ ಹರ ಶಂಭು’ ಗಾಯಕಿಯ ಸಹೋದರನ ಬರ್ಬರ ಹತ್ಯೆ

    ಆದರೆ ಬಾಲಕಿ ಕೀರ್ತನ ಈ ವೇಳೆ ಸೇತುವೆಗೆ ಅಳವಡಿಸಲಾಗಿದ್ದ ಪೈಪ್ ಅನ್ನು ಗಟ್ಟಿಯಾಗಿ ಹಿಡಿದು ತನ್ನ ಪ್ರಾಣ ಉಳಿಸಿಕೊಂಡಿದ್ದಾಳೆ. ತಕ್ಷಣ ತನ್ನ ಜೇಬಿನಿಂದ ಫೋನ್ ತೆಗೆದು ಸಹಾಯಕ್ಕಾಗಿ 100 ನಂಬರ್ ಅನ್ನು ಡಯಲ್ ಮಾಡಿದ್ದಾಳೆ. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಬಾಲಕಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸುಹಾಸಿನಿ ಹಾಗೂ ಆಕೆಯ 1 ವರ್ಷದ ಮಗು ನದಿಯಲ್ಲಿ ನಾಪತ್ತೆಯಾಗಿದೆ. ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಕಾಫಿನಾಡಿನ ಸಹನಾ ಮೊಸೆಸ್- ನಾಲ್ವರಿಗೆ ಪುನರ್ಜನ್ಮ

    ಇದೀಗ ನಾಪತ್ತೆಯಾಗಿರುವ ಸುಹಾಸಿನಿ ಹಾಗೂ ಮಗುವನ್ನು ಹುಡುಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಇತ್ತ ತಲೆಮರೆಸಿಕೊಂಡಿರುವ ಆರೋಪಿ ಸುರೇಶ್‌ನನ್ನು ಬಂಧಿಸಲು ಬಲೆಬೀಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತೆಲಂಗಾಣದ ಮೇಘಸ್ಫೋಟದ ಹಿಂದೆ ವಿದೇಶಿ ಶಕ್ತಿಗಳ ಷಡ್ಯಂತ್ರ – KCR

    ತೆಲಂಗಾಣದ ಮೇಘಸ್ಫೋಟದ ಹಿಂದೆ ವಿದೇಶಿ ಶಕ್ತಿಗಳ ಷಡ್ಯಂತ್ರ – KCR

    ಹೈದರಾಬಾದ್: ದೇಶದಲ್ಲಿ ಮುಂಗಾರು ಮಳೆಯ ಅಬ್ಬರದ ಮಧ್ಯೆ ಮೇಘಸ್ಫೋಟದ ವಿಚಾರವಾಗಿ ತೆಲಂಗಾಣದ ಸಿಎಂ ಕೆ.ಚಂದ್ರಶೇಖರ ರಾವ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಕುಂಭದ್ರೋಣ ಮಳೆಯ ಹಿಂದೆ ಯಾವುದೋ ಷಡ್ಯಂತ್ರ ಇದೆ ಎನ್ನಲಾಗುತ್ತಿದೆ. ಕೆಲ ವಿದೇಶಿ ಶಕ್ತಿಗಳು ಬೇಕಂತಲೇ ನಮ್ಮ ದೇಶದ ಕೆಲವು ಭಾಗಗಳಲ್ಲಿ ಮೇಘ ಸ್ಫೋಟ ಮಾಡ್ತಿದ್ದಾರೆ ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮದರಸಾಗಳಲ್ಲೂ ತ್ರಿವರ್ಣಧ್ವಜ ಹಾರಲೇಬೇಕು – ರಾಜ್ಯ ಸರ್ಕಾರದಿಂದ ಖಡಕ್ ಆದೇಶ

    ಭದ್ರಾಚಲಂ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಅವರು, ವಿದೇಶಿ ಶಕ್ತಿಗಳು ಉದ್ದೇಶ ಪೂರ್ವಕವಾಗಿಯೇ ಆಯ್ದ ಕೆಲವು ಪ್ರದೇಶಗಳಲ್ಲಿ ಮೇಘಸ್ಫೋಟ ಮಾಡುತ್ತಿವೆ. ಆದ್ರೆ ಇದು ಎಷ್ಟರ ಮಟ್ಟಿಗೆ ಸತ್ಯವೋ ಗೊತ್ತಿಲ್ಲ. ಈ ಹಿಂದೆ ಕಾಶ್ಮೀರ, ಲೇಹ್, ಲಡಾಖ್ ಹಾಗೂ ಉತ್ತರಾಖಂಡದಲ್ಲಿ ಈ ರೀತಿ ಆಗಿತ್ತು. ಈಗ ಇಂತಹ ಸಂಚು ಗೋದಾವರಿ ಪ್ರಾಂತ್ಯದಲ್ಲಿ ನಡೆಯುತ್ತಿದೆ ಎಂದು ಕೆಲವು ವರದಿಗಳು ಹೇಳಿವೆ ಎಂದಿದ್ದಾರೆ. ಇದನ್ನೂ ಓದಿ: ಅಯೂಬ್‌ಖಾನ್ ಹತ್ಯೆ – ಎಫ್‌ಬಿಯಲ್ಲಿ ಬಿಲ್ಡಪ್ ಕೊಟ್ಟಿದ್ದ ಆರೋಪಿ ಮತೀನ್ ಖಾನ್ ಬಂಧನ

    ಅಲ್ಲದೆ ಗೋದಾವರಿ ನದಿಗೆ ಶಾಂತಿ ಪೂಜೆ ಮಾಡಿಸಿದ್ದಾರೆ. ಕೆಸಿಆರ್ ಹೇಳಿಕೆಯನ್ನು ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಮಾತನಾಡುತ್ತಾ, ಇದು ಶತಮಾನದ ದೊಡ್ಡ ಜೋಕ್ ಎಂದು ವ್ಯಂಗ್ಯವಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾವೇರಿ ಸೇರಿದಂತೆ 5 ನದಿಗಳ ಜೋಡಣೆ

    ಕಾವೇರಿ ಸೇರಿದಂತೆ 5 ನದಿಗಳ ಜೋಡಣೆ

    ನವದೆಹಲಿ: ಕಾವೇರಿ ಸೇರಿ 5 ನದಿಗಳ ಜೋಡಣೆಗೆ ಯೋಜನೆ ಮಾಡಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ ಎಂದು ಕೇಂದ್ರ ಬಜೆಟ್‍ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ

    ಕೃಷ್ಣ, ಗೋದಾವರಿ, ಕಾವೇರಿ, ಪೆನ್ನಾರ್, ನರ್ಮದಾ ಐದು ನದಿಗಳ ನದಿ ಜೋಡಣೆ ಯೋಜನೆಗಳಿಗೆ ಒತ್ತು ನೀಡಲಾಗುವುದು. ಕೆನ್ ಬೆಟ್ಟಾ ನದಿ ಜೋಡಣೆ ಯೋಜನೆಗೆ 44,000 ಕೋಟಿ ರೂಪಾಯಿ ನೀಡಲಾಗಿದೆ. ರಾಷ್ಟ್ರೀಯ ಯೋಜನೆಯಡಿ 5 ನದಿಗಳನ್ನು ಜೋಡಿಸುವ ಯೋಜನೆಗಳು ಮತ್ತು ಡಿಪಿಆರ್‌ಗಳನ್ನು ಮಾಡಲಾಗಿದೆ. ಗಂಗಾ ನದಿ ಕಾರಿಡಾರ್‌ನಲ್ಲಿ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದ್ದಾರೆ.

    ಕೆನ್ -ಬೆಟ್ಟಾ ಲಿಂಕ್ ಯೋಜನೆ ದೇಶದಲ್ಲಿ ಕೈಗೊಂಡಿರುವ ನದಿಗಳ ಜೋಡಣೆಯ ಮೊದಲ ಯೋಜನೆಯಾಗಿದೆ. ಯಮುನಾದ 2 ಉಪನದಿಗಳಾದ ಬೆಟ್ಟಾ ನದಿಗೆ ಜೋಡೆಣೆ ಮಾಡಲಾಗುತ್ತದೆ. ಈ ಯೋಜನೆಯಿಂದ 9.0 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಪ್ರಯೋಜನಗಳು, 62 ಲಕ್ಷ ಜನರಿಗೆ ಕುಡಿಯುವ ನೀರು, 103 ಮೆಗಾವ್ಯಾಟ್ ಜಲವಿದ್ಯುತ್, 27 MW ಸೌರ ವಿದ್ಯುತ್ ಉತ್ಪಾದನೆಯಾಗಲಿದೆ. ಇದನ್ನೂ ಓದಿ: Budget: 2022-23ರ ಹೊತ್ತಿಗೆ 5G ಮೊಬೈಲ್‌ ಸೇವೆ

    ವಾಜಪೇಯಿ ಸರ್ಕಾರದಿಂದ ಸುಮಾರು 20 ವರ್ಷಗಳ ನಂತರ ಮೊದಲ ಕೆನ್ ಬೆಟ್ಟಾ ನದಿ ಜೋಡನೇ ಯೋಜನೆಗೆ ಹಂಚಿಕೆಯೊಂದಿಗೆ ಇದು ಅತ್ಯಂತ ಮಹತ್ವದ ಘೋಷಣೆಯಾಗಿದೆ. ಇದನ್ನೂ ಓದಿ: Budget 2022: ವರ್ಲ್ಡ್‌ ಕ್ಲಾಸ್‌ ಶಿಕ್ಷಣಕ್ಕೆ ಡಿಜಿಟಲ್‌ ವಿಶ್ವವಿದ್ಯಾಲಯ ಸ್ಥಾಪನೆ

    ಏನಿದು ಯೋಜನೆ?: ಬಂಗಾಳಕೊಲ್ಲಿ ಸಮುದ್ರದ ಪಾಲಾಗುವ ಗೋದಾವರಿ ನದಿಯ ಹೆಚ್ಚುವರಿ ನೀರನ್ನು ಕೊಳವೆ ಮಾರ್ಗದ ಮೂಲಕ ಕಾವೇರಿ ನದಿಗೆ ಜೋಡಣೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಸುಮಾರು 60 ಸಾವಿರ ಕೋಟಿ ರೂ. ಮೊತ್ತದ ಪ್ರಾಜೆಕ್ಟ್‌ ಇದಾಗಿದ್ದು, ದಕ್ಷಿಣ ಭಾರತದ ರಾಜ್ಯಗಳಿಗೆ ಅನುಕೂಲವಾಗಲಿರುವ ಮಹತ್ವಾಕಾಂಕ್ಷೆಯ ನದಿ ಜೋಡಣೆ ಯೋಜನೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಸಮ್ಮತಿ ನೀಡಲಾಗಿದೆ.

    ಬಹುದಿನಗಳ ಬೇಡಿಕೆಯ ಯೋಜನೆಗಳಾದ ಕಾವೇರಿ- ಪೆನ್ನಾರ್‌ ಹಾಗೂ ಗೋದಾವರಿ- ಕೃಷ್ಣಾ ನದಿ ಜೋಡಣೆ ಯೋಜನೆಗಳನ್ನು ನಿರ್ಮಲಾ ಸೀತಾರಾಮನ್‌ 2022ರ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಮೊದಲು ಆಂಧ್ರದಲ್ಲಿ ಪೊಲಾವರಂ ಅಣೆಕಟ್ಟನ್ನು ನಿರ್ಮಾಣ ಮಾಡಲಾಗುತ್ತದೆ. ಅದರ ಹಿನ್ನೀರನ್ನು ಕೃಷ್ಣಾ ನದಿ, ಪೆನ್ನಾರ್‌ (ಪಿನಾಕಿನಿ) ನದಿಗಳ ಮೂಲಕ ಕಾವೇರಿಗೆ ಕೊಳವೆ ಮಾರ್ಗದಲ್ಲಿ ಹರಿಸಲಾಗುತ್ತದೆ. ನೀರು ಆವಿಯಾಗುವುದನ್ನು ತಡೆಗಟ್ಟುವ ಉದ್ದೇಶದಿಂದ ಇಲ್ಲಿ ಕಾಲುವೆಗಳ ಬದಲಿಗೆ ವಿಶೇಷ ತಂತ್ರಜ್ಞಾನದ ಸ್ಟೀಲ್‌ ಕೊಳವೆಗಳ ಮೂಲಕ ನೀರನ್ನು ಹರಿಸುವ ಉದ್ದೇಶ ಹೊಂದಲಾಗಿದೆ.

    ಈ ನದಿ ಜೋಡಣೆಯಲ್ಲಿ ಎರಡು ಪ್ರಮುಖ ಯೋಜನೆಗಳಿವೆ. ಗೋದಾವರಿ ನದಿಯ ಹೆಚ್ಚುವರಿ ನೀರನ್ನು ಕೃಷ್ಣೆಗೆ ಹರಿಸಿ, ಅಲ್ಲಿಂದ ಮುಂದೆ ಪೆನ್ನಾರ್‌(ಉತ್ತರ ಪಿನಾಕಿನಿ) ನದಿಯಿಂದ ಕಾವೇರಿ ನದಿಗೆ ಹರಿಸುವ ಎರಡು ಯೋಜನೆಗಳು ನದಿ ಜೋಡಣೆಯ ಭಾಗವಾಗಿ ಈ ಯೋಜನೆ ಆಗಿದೆ.

    ಪ್ರಾರಂಭಿಕ ಹಂತದಲ್ಲಿ 300 ಟಿಎಂಸಿ ಗೋದಾವರಿ ನದಿ ನೀರನ್ನು ಆಂಧ್ರ ಪ್ರದೇಶದ ನಾಗರ್ಜುನ ಸಾಗರ ಡ್ಯಾಮ್‌ ಮೂಲಕ ಪೋಲಾವರಂ ಯೋಜನೆಗೆ ಬೆಸೆದು ಬಳಿಕ ಕೃಷ್ಣಾ ನದಿಗೆ ತರುವುದು. ಅಲ್ಲಿಂದ ಮುಂದೆ ಪೆನ್ನಾರ್‌ ನದಿಗೆ ನಿರ್ಮಿಸಲಾಗಿರುವ ಸೋಮಸಿಲಾ ಅಣೆಕಟ್ಟೆಗೆ ತಂದು ಶೇಖರಿಸಿ ಅದನ್ನು ಮುಂದೆ ಗ್ರ್ಯಾಂಡ್‌ ಅಣೆಕಟ್‌ ಡ್ಯಾಮ್‌ ಮೂಲಕ ಕಾವೇರಿ ನದಿಗೆ ಸೇರಿಸುವುದು. ಇಲ್ಲಿ ಸ್ಟೀಲ್‌ ಕೊಳವೆ ಮಾರ್ಗದ ಮೂಲಕವೇ ನೀರು ಹರಿದುಬರಲಿದೆ. ಈ ಪ್ರಾಜೆಕ್ಟ್‌ನಿಂದ ಕಾವೇರಿ ನದಿಗೆ ಹೆಚ್ಚುವರಿಯಾಗಿ 100 ಟಿಎಂಸಿ ನೀರು ಸೇರಲಿದ್ದು ಕರ್ನಾಟಕ ಮತ್ತು ತಮಿಳುನಾಡಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.

  • ಗೋದಾವರಿಯಲ್ಲಿ ಮುಳುಗಿದ ಬೋಟ್ – 13 ಮಂದಿ ಸಾವು, 40 ಜನ ನಾಪತ್ತೆ

    ಗೋದಾವರಿಯಲ್ಲಿ ಮುಳುಗಿದ ಬೋಟ್ – 13 ಮಂದಿ ಸಾವು, 40 ಜನ ನಾಪತ್ತೆ

    ಹೈದರಾಬಾದ್: ಆಂಧ್ರ ಪ್ರದೇಶದ ಗೋದಾವರಿ ನದಿಯಲ್ಲಿ ಇಂದು ಮಧ್ಯಾಹ್ನ 63 ಪ್ರಯಾಣಿಕರಿದ್ದ ಪ್ರವಾಸಿ ಬೋಟ್ ಅಪಘಾತಕ್ಕೀಡಾಗಿ, 13 ಜನರು ಸಾವನ್ನಪ್ಪಿದ್ದು, 40 ಮಂದಿ ನಾಪತ್ತೆಯಾಗಿದ್ದಾರೆ.

    ಪೂರ್ವ ಗೋದಾವರಿ ಜಿಲ್ಲೆಯ ದೇವಿಪಟ್ನಂ ಮಂಡಲದ ಕಾಚುಲೂರು ಗ್ರಾಮದ ಬಳಿ ಈ ಘಟನೆ ನಡೆದಿದೆ. ಬೋಟ್ ನಲ್ಲಿ ಒಟ್ಟು 63 ಜನರಿದ್ದು, ಅದರಲ್ಲಿ 50 ಪ್ರವಾಸಿಗರು ಮತ್ತು 13 ಮಂದಿ ಬೋಟ್ ಸಿಬ್ಬಂದಿ ಇದ್ದಾರೆ. ಗೋದಾವರಿ ನದಿಯ ಬಳಿಯಿರುವ ಪಾಪಿಕೊಂಡಲು ಬೆಟ್ಟಗಳನ್ನು ನೋಡಲು ಪ್ರವಾಸಕ್ಕೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ.

    ಈ ಹಡಗಿನಲ್ಲಿದ್ದ 63 ಜನರ ಪೈಕಿ 13 ಮಂದಿಯ ಮೃತ ದೇಹ ಸಿಕ್ಕಿದ್ದು, ಇನ್ನೂ ಸುಮಾರು 40 ಮಂದಿ ನದಿಯಲ್ಲಿ ಕಾಣೆಯಾಗಿದ್ದಾರೆ. ಮೂಲಗಳ ಪ್ರಕಾರ, ದೋಣಿಯಲ್ಲಿದ್ದ ಎಲ್ಲರಿಗೂ ಲೈಫ್ ಜಾಕೆಟ್‍ಗಳು ಇದ್ದು, ಅವರಲ್ಲಿ ಕೆಲವರು ಧರಿಸಿಲ್ಲ ಎಂದು ವರದಿಯಾಗಿದೆ. ವಿಶಾಖಪಟ್ಟಣಂ ಮತ್ತು ಗುಂಟೂರಿನಿಂದ ಎರಡು ಎನ್‍ಡಿಆರ್‍ಎಫ್ ತಂಡಗಳು ಬಂದಿದ್ದು, ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯಚರಣೆ ಮಾಡುತ್ತಿದ್ದಾರೆ.

    ಗೋದಾವರಿ ನದಿಗೆ ಪ್ರವಾಹದ ಸಮಯದಲ್ಲಿ ಸುಮಾರು 5 ಲಕ್ಷ ಕ್ಯೂಸೆಕ್ ನೀರು ಹರಿದು ಬಂದಿತ್ತು. ಅದ್ದರಿಂದ ಅಲ್ಲಿನ ಪ್ರವಾಸೋದ್ಯಮ ಅಧಿಕಾರಿಗಳು ಶನಿವಾರದವರೆಗೆ ನದಿಯಲ್ಲಿ ಪ್ರವಾಸಿಗರ ಸೇವೆಯನ್ನು ನಿಲ್ಲಿಸಿತ್ತು. ಆದರೆ ಇತ್ತೀಚಿಗೆ ನೀರಿನ ಪ್ರಮಾಣ ಕಡಿಮೆಯಾದ ಕಾರಣ ಇಂದು ಬೋಟ್‍ನಲ್ಲಿ ಹೋಗಲು ಅನುಮತಿ ನೀಡಿದ್ದರು ಎಂದು ವರದಿಯಾಗಿದೆ.

    ಈ ವಿಚಾರದ ತಿಳಿದು ತಕ್ಷಣ ಅಧಿಕಾರಿಗಳೊಂದಿಗೆ ಮಾತನಾಡಿದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್ ಜಗಮೋಹನ್ ರೆಡ್ಡಿ, ತಕ್ಷಣವೇ ರಕ್ಷಣಾ ಕಾರ್ಯಚರಣೆ ಕೈಗೊಳ್ಳುವಂತೆ ಸೂಚಿಸಿ, ಮೃತವ್ಯಕ್ತಿಯ ಕುಟುಂಬಕ್ಕೆ 10 ಲಕ್ಷ ಪರಿಹಾರ ಹಣವನ್ನು ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ನೌಕಪಡೆ ಮತ್ತು ಹೆಲಿಕಾಪ್ಟರ್ ಬಳಸಿ ಕಾರ್ಯಚರಣೆ ನಡೆಸುವಂತೆ ಆದೇಶ ನೀಡಿದ್ದಾರೆ.