Tag: ಗೋಡೌನ್

  • Kolar | ಅರಣ್ಯ ಇಲಾಖೆ ಗೋಡೌನ್ ಬೀಗ ಒಡೆದು ಕಳ್ಳತನಕ್ಕೆ ಯತ್ನ – ಇಬ್ಬರು ಅರೆಸ್ಟ್

    Kolar | ಅರಣ್ಯ ಇಲಾಖೆ ಗೋಡೌನ್ ಬೀಗ ಒಡೆದು ಕಳ್ಳತನಕ್ಕೆ ಯತ್ನ – ಇಬ್ಬರು ಅರೆಸ್ಟ್

    ಕೋಲಾರ: ಜಿಲ್ಲೆಯಲ್ಲಿ ಅರಣ್ಯ ಇಲಾಖೆ (Forest Department) ಗೋಡೌನ್ (Godown) ಬೀಗ ಒಡೆದು ಕಳ್ಳತನಕ್ಕೆ (Theft) ಯತ್ನಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಕೋಲಾರ (Kolar) ಜಿಲ್ಲೆ ಮುಳಬಾಗಿಲು (Mulabagilu) ತಾಲೂಕು ಕುಮದೇನಹಳ್ಳಿ ಗ್ರಾಮದ ಬಳಿ ಇರುವ ಅರಣ್ಯ ಇಲಾಖೆ ಗೋಡೌನ್ ಬೀಗ ಒಡೆದು ಅದರಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನ ದೋಚಲು ಯತ್ನಿಸಿದ ಹಿನ್ನೆಲೆ, ಆಂದ್ರದ ಮದನಪಲ್ಲಿಯ ಪವನ್ ಹಾಗೂ ಕುರುಡುಮಲೆ ಗೇಟ್‌ನ ಚೇತನ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಈ ಹಿಂದಿನ ಆರ್‌ಎಫ್‌ಓ ಜ್ಯೋತಿ ಅವರ ಹೆಸರು ಹೇಳಿಕೊಂಡು ಬಂದು ಬೀಗ ಒಡೆಯಲು ಯತ್ನಿಸಿದ ಇಬ್ಬರನ್ನ ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಮಹಾಕುಂಭ ಮೇಳದಲ್ಲಿ ಅದಾನಿ ಗ್ರೂಪ್‌, ಇಸ್ಕಾನ್‌ ಸಹಯೋಗದಿಂದ ಮಹಾಪ್ರಸಾದ ಸೇವೆ

    ಇನ್ನೂ ಅರಣ್ಯ ಇಲಾಖೆಯಿಂದ ವಶಪಡಿಸಿಕೊಂಡಿರುವ ಶ್ರೀಗಂಧ, ರಕ್ತ ಚಂದನ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಸಂಗ್ರಹಿಸಿರುವ ಗೋಡೌನ್ ಇದಾಗಿದ್ದು, ಸ್ಥಳಕ್ಕೆ ಮುಳಬಾಗಿಲು ಆರ್‌ಎಫ್‌ಓ ಶಾಲಿನಿ ಭೇಟಿ ನೀಡಿದ್ದಾರೆ. ಸದ್ಯ ಆರೋಪಿಗಳನ್ನು ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಡಾ. ಶಿವಕುಮಾರ್ ಮಹಾಶಿವಯೋಗಿಗಳ ಜೀವನ ಪಯಣ, ಸೇವೆ ಪ್ರತಿಯೊಬ್ಬರಿಗೂ ಸ್ಫೂರ್ತಿ: ಗೆಹ್ಲೋಟ್

  • ಗಣೇಶ ಹಬ್ಬದ ಸಾಮಗ್ರಿ ಇಟ್ಟಿದ್ದ ಗೋಡೌನ್‌ಗೆ ಬೆಂಕಿ

    ಗಣೇಶ ಹಬ್ಬದ ಸಾಮಗ್ರಿ ಇಟ್ಟಿದ್ದ ಗೋಡೌನ್‌ಗೆ ಬೆಂಕಿ

    ಬೆಂಗಳೂರು: ಗಣೇಶ ಹಬ್ಬದ (Ganesha Festival) ಸಾಮಗ್ರಿಗಳನ್ನು (Things) ಇಟ್ಟಿದ್ದ ಗೋಡೌನ್‌ಗೆ (Godown) ಬೆಂಕಿ (Fire) ಹತ್ತಿದ್ದು, ಗೋಡೌನ್ ಹೊತ್ತಿ ಉರಿದ ಘಟನೆ ಟಿಪ್ಪುನಗರದಲ್ಲಿ (Tippu Nagara) ನಡೆದಿದೆ.

    ಕಾಟನ್ ಪೇಟೆಯ (Cotton Pet) ವಿನಾಯಕ ಥಿಯೇಟರ್‌ನ 10ನೇ ಕ್ರಾಸ್‌ನಲ್ಲಿ ಘಟನೆ ನಡೆದಿದ್ದು, ಗೋದಾಮಿನಲ್ಲಿದ್ದ 2 ಸಿಲಿಂಡರ್ ಬ್ಲಾಸ್ಟ್ (Cylinder Blast) ಆದ ಕಾರಣದಿಂದ ಬೆಂಕಿ ಹೊತ್ತಿಕೊಂಡಿದೆ. ಘಟನೆಯ ಪರಿಣಾಮ ಗೋಡೌನ್ ಪಕ್ಕದಲ್ಲಿದ್ದ 3-4 ಮನೆಗಳಿಗೂ ಬೆಂಕಿ ತಗುಲಿದೆ. ಇದನ್ನೂ ಓದಿ: ಹಳೇ ದ್ವೇಷಕ್ಕೆ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

    ಘಟನೆ ನಡೆದ ಸ್ಥಳಕ್ಕೆ ಎರಡು ಅಗ್ನಿಶಾಮಕ (Fire Engine) ವಾಹನ ದೌಡಾಯಿಸಿದ್ದು, ಅಗ್ನಿಶಾಮಕ ಇಲಾಖೆ ಹಾಗೂ ಕಾಟನ್‌ಪೇಟೆ ಪೊಲೀಸರು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನ ಟೈಯರ್ ಬ್ಲಾಸ್ಟ್ – ಅಪಘಾತದಲ್ಲಿ ಮೂವರು ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಟಾಕಿ ಸಂಗ್ರಹಿಸಿದ್ದ ಗೋಡೌನ್‌ನಲ್ಲಿ ಸ್ಫೋಟ – 4 ಸಾವು, 7 ಜನ ಗಂಭೀರ

    ಪಟಾಕಿ ಸಂಗ್ರಹಿಸಿದ್ದ ಗೋಡೌನ್‌ನಲ್ಲಿ ಸ್ಫೋಟ – 4 ಸಾವು, 7 ಜನ ಗಂಭೀರ

    ಭೋಪಾಲ್: ಅಕ್ರಮವಾಗಿ ಪಟಾಕಿಗಳನ್ನು (Fireworks) ಸಂಗ್ರಹಿಸಿದ್ದ ಗೋಡೌನ್‌ನಲ್ಲಿ (Godown) ಸ್ಫೋಟ (Explosion) ಉಂಟಾಗಿ 4 ಜನರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ (Madhya Pradesh) ಮೊರೆನಾ ಜಿಲ್ಲೆಯ ಬನ್ಮೋರ್ ನಗರದಲ್ಲಿ ಗುರುವಾರ ನಡೆದಿದೆ.

    ದೀಪಾವಳಿ ಹಿನ್ನೆಲೆ ಅಕ್ರಮವಾಗಿ ಪಟಾಕಿ ತುಂಬಿದ್ದ ಗೋಡೌನ್‌ನಲ್ಲಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೂ ಹಲವರು ಅವಶೇಷಗಳಡಿ ಸಿಲುಕಿ ಹೋಗಿರುವ ಶಂಕೆ ವ್ಯಕ್ತವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಗೋಡೌನ್‌ನಲ್ಲಿ ಸ್ಫೋಟ ಸಂಭವಿಸಲು ಗನ್ ಪೌಡರ್ ಅಥವಾ ಗ್ಯಾಸ್ ಸಿಲಿಂಡರ್ ಕಾರಣವಾಗಿರುವ ಸಾಧ್ಯತೆಯಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಗಾಯಗೊಂಡ 7 ಜನರ ಸ್ಥಿತಿಯೂ ಗಂಭೀರವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 23ನೇ ಮಹಡಿಯಿಂದ ಬಿದ್ದು ಮುಂಬೈನ ಖ್ಯಾತ ಬಿಲ್ಡರ್ ಸಾವು

     

    ಅವಶೇಷಗಳನ್ನು ತೆರವುಗೊಳಿಸಲು ಯಂತ್ರಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪೊಲೀಸರು ಹಾಗೂ ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಪೊಲೀಸ್ ಮಹಾನಿರೀಕ್ಷಕ ರಾಜೇಶ್ ಚಾವ್ಲಾ ತಿಳಿಸಿದ್ದಾರೆ. ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ

    3 ವರ್ಷಗಳ ಹಿಂದೆ ಇದೇ ರೀತಿಯ ಘಟನೆ ಪಂಜಾಬ್‌ನಲ್ಲಿ ನಡೆದಿತ್ತು. ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

    Live Tv
    [brid partner=56869869 player=32851 video=960834 autoplay=true]

  • ಫ್ಯಾಬ್ರಿಕ್ ಗೋಡೌನ್‍ನಲ್ಲಿ ಬೆಂಕಿ – ಸ್ಥಳಕ್ಕೆ ಆಗಮಿಸಿದ 18 ಅಗ್ನಿ ಶಾಮಕ ವಾಹನ

    ಫ್ಯಾಬ್ರಿಕ್ ಗೋಡೌನ್‍ನಲ್ಲಿ ಬೆಂಕಿ – ಸ್ಥಳಕ್ಕೆ ಆಗಮಿಸಿದ 18 ಅಗ್ನಿ ಶಾಮಕ ವಾಹನ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಓಖ್ಲಾ 2ನೇ ಹಂತದ ಹರ್ಕೇಶ್ ನಗರದಲ್ಲಿರುವ ಫ್ಯಾಬ್ರಿಕ್ ಗೋಡೌನ್‍ನಲ್ಲಿ ಇಂದು ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ ಎಂದು ದೆಹಲಿ ಅಗ್ನಿ ಶಾಮಕ ಸೇವಾ ಅಧಿಕಾರಿಗಳು ತಿಳಿಸಿದ್ದಾರೆ.

    ಬೆಳಗಿನ ಜಾವ ಸುಮಾರು 4 ಗಂಟೆಗೆ ಗೋಡೌನ್‍ನಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಗೋಡೌನ್‍ನ ಫಸ್ಟ್ ಫ್ಲೋರ್ ಹಾಗೂ ಬೇಸ್‍ಮೆಂಟ್‍ನಲ್ಲಿರುವ ಕಾಟನ್, ದಾರ ಮತ್ತು ಬಟ್ಟೆಗಳು ಸುಟ್ಟು ಕರಕಲಾಗಿದೆ. ಘಟನೆ ಕುರಿತಂತೆ ಕರೆ ಬರುತ್ತಿದ್ದಂತೆ ಸ್ಥಳಕ್ಕೆ 18 ಅಗ್ನಿ ಶಾಮಕ ವಾಹನಗಳನ್ನು ಕಳುಹಿಸಲಾಯಿತು ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಬಾಡಿಬಿಲ್ಡರ್ ಸ್ಪರ್ಧೆಯಲ್ಲಿ ಗಿನ್ನೆಸ್ ರೆಕಾರ್ಡ್ ಪಡೆದ ಕುಬ್ಜ ವ್ಯಕ್ತಿ

    ಇದೀಗ ಅಗ್ನಿ ಶಾಮಕ ದಳ ಬೆಂಕಿ ನಾಂದಿಸುವ ಕಾರ್ಯ ನಡೆಸುತ್ತಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಲ್ಲದೇ ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸದ್ಯ ಇದೀಗ ಈ ವಿಚಾರವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ನುಡಿದಿದ್ದಾರೆ.  ಇದನ್ನೂ ಓದಿ: ಉಚಿತವಾಗಿ 120 ದಿನಗಳಲ್ಲಿ 25 ಸಾವಿರ ಮಂದಿಗೆ ಕೋವಿಡ್ ಲಸಿಕೆ- ಶ್ರೀರಾಮ ಸೇವಾ ಮಂಡಳಿ

  • ಸಿಲಿಂಡರ್ ಸ್ಪೋಟ – ನಾಲ್ವರಿಗೆ ಗಂಭೀರ ಗಾಯ

    ಸಿಲಿಂಡರ್ ಸ್ಪೋಟ – ನಾಲ್ವರಿಗೆ ಗಂಭೀರ ಗಾಯ

    ಮುಂಬೈ: ಎಲ್‍ಪಿಜಿ ಸಿಲಿಂಡರ್ ಗಳನ್ನು ಇರಿಸಲಾಗಿದ್ದ ಗೋಡೌನ್‍ನಲ್ಲಿ ಸಿಲಿಂಡರ್ ಸ್ಪೋಟಗೊಂಡು ನಾಲ್ವರು ಗಂಭೀರವಾಗಿ ಗಾಯ ಗೊಂಡಿರುವ ಘಟನೆ ಬುಧವಾರ ಬೆಳಿಗ್ಗೆ ಮುಂಬೈನ ಅಂಧೇರಿಯಲ್ಲಿ ನಡೆದಿದೆ.

    ಈ ಕುರಿತಂತೆ ಪೊಲೀಸರು, ಪಶ್ಚಿಮ ಉಪನಗರ ವರ್ಸೋವಾ ಪ್ರದೇಶದ ಯಾರಿ ರಸ್ತೆಯಲ್ಲಿರುವ ಗೋಡೌನ್‍ನಲ್ಲಿ ಬೆಳಗ್ಗೆ ಸುಮಾರು 9:40ಕ್ಕೆ ಸಿಲಿಂಡರ್ ಸ್ಪೋಟದಿಂದ ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ ಬೆಂಕಿ ನಂದಿಸಲು ಅಗ್ನಿಶಾಮಕ ವಾಹನ ಮತ್ತು 7 ನೀರಿನ ಜೆಟ್ಟಿಗಳನ್ನು ಸ್ಥಳಕ್ಕೆ ಕರೆಯಿಸಲಾಗಿದೆ ಎಂದು ತಿಳಿದರು.

    ಘಟನೆಯಲ್ಲಿ ಗಾಯಗೊಂಡ ನಾಲ್ವರನ್ನು ಸ್ಥಳೀಯ ಕೂಪರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • 1 ಕ್ವಿಂಟಾಲ್ ಒಣ ಗಾಂಜಾ ಗಿಡ ನಾಶ – 13 ವರ್ಷದ ದಾಸ್ತಾನಿಗೆ ಅಬಕಾರಿ ಇಲಾಖೆ ಮುಕ್ತಿ

    1 ಕ್ವಿಂಟಾಲ್ ಒಣ ಗಾಂಜಾ ಗಿಡ ನಾಶ – 13 ವರ್ಷದ ದಾಸ್ತಾನಿಗೆ ಅಬಕಾರಿ ಇಲಾಖೆ ಮುಕ್ತಿ

    ಶಿವಮೊಗ್ಗ: ಅಬಕಾರಿ ಇಲಾಖೆಯಲ್ಲಿ ಕಳೆದ 13 ವರ್ಷದಿಂದ ದಾಸ್ತಾನು ಮಾಡಲಾಗಿದ್ದ ಒಂದು ಕ್ವಿಂಟಾಲ್‍ಗೂ ಅಧಿಕ ಒಣ ಗಾಂಜಾ ಗಿಡಗಳನ್ನು ಇಲಾಖೆ ನಾಶಪಡಿಸಿದೆ.

    ಮಾದಕ ವಸ್ತು ಸಾಮಾಗ್ರಿಗಳ ವಿಲೇವಾರಿ ಸಮಿತಿ ಶಿಫಾರಸು ಅನ್ವಯ ಮಾಚೇನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಶುಶೃತ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಗಾಂಜಾ ಗಿಡಗಳನ್ನು ನಾಶಪಡಿಸಲಾಯಿತು.

    ಶಿವಮೊಗ್ಗ ಅಬಕಾರಿ ಇಲಾಖೆಯಲ್ಲಿ 2007ರಿಂದ ಇಲ್ಲಿಯವರೆಗೆ ಒಟ್ಟು 56 ಪ್ರಕರಣಗಳಲ್ಲಿ 1,07,835 ಕೆ.ಜಿ ತೂಕದ 11,358 ಗಿಡಗಳನ್ನು ವಶಪಡಿಸಿಕೊಂಡು ಇಲಾಖೆಯ ಗೋದಾಮಿನಲ್ಲಿ ಸಂಗ್ರಹಿಸಿ ಇಡಲಾಗಿತ್ತು.

    ಮಾದಕ ಸಾಮಾಗ್ರಿಗಳ ವಿಲೇವಾರಿ ಸಮಿತಿ ನಿರ್ಧಾರದಂತೆ ಅಬಕಾರಿ ಇಲಾಖೆ ಮಂಗಳೂರು ವಿಭಾಗದ ಜಂಟಿ ಆಯುಕ್ತರಾದ ಶೈಲಜಾ ಎ.ಕೋಟೆ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಅಬಕಾರಿ ಉಪ ಆಯುಕ್ತ ನಾಗೇಶ್ ಕುಮಾರ್ ಹಾಗೂ ಶಿವಮೊಗ್ಗ ಜಿಲ್ಲೆಯ ಅಬಕಾರಿ ಉಪ ಆಯಕ್ತ ವೈ.ಆರ್ ಮೋಹನ್ ಸಮ್ಮುಖದಲ್ಲಿ ವೈಜ್ಞಾನಿಕವಾಗಿ ನಾಶಪಡಿಸಲಾಯಿತು.

  • ಗದಗದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ

    ಗದಗದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ

    ಗದಗ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ ಜೋರಾಗಿದೆ. ಕಾರಣ ಗದಗ-ಬೆಟಗೇರಿ ನಗರ ಸಭೆಯ ವ್ಯಾಪ್ತಿಯ ಆಸ್ತಿಯನ್ನು ಖಾಸಗಿ ಭೂ ಬಾಡಿಗೆದಾರರಿಂದ ಜಪ್ತಿ ಮಾಡಲಾಗುತ್ತಿದೆ. ಗದಗ ನಗರಸಭೆಗೆ ಸೇರಿದ ಕೋಟ್ಯಂತರ ಮೌಲ್ಯದ 54 ವಕಾರಸಾಲು (ಗೋಡೌನ್) ಗಳನ್ನು ವಾಪಸ್ ಪಡೆಯಲು ನಗರಸಭೆ ಬೆಳಗ್ಗೆ ತೆರವು ಕಾರ್ಯಾಚರಣೆ ನಡೆಸಿದೆ.

    ನ್ಯಾಯಾಲಯದ ಆದೇಶದಂತೆ ಸ್ಥಳ ತೆರವು ಮಾಡುವಂತೆ ಈಗಾಗಲೇ ವಕಾರಸಾಲುಗಳ ನಿವಾಸಿಗಳಿಗೆ ನೋಟಿಸ್ ನೀಡಲಾಗಿತ್ತು. ನಗರದ ಹೃದಯಭಾಗದಲ್ಲಿರುವ ಈ ವಕಾರಸಾಲುಗಳನ್ನು ಹತ್ತಿ, ಅರಳಿ, ಶೇಂಗಾ, ಮೆಣಸಿನಕಾಯಿ ವ್ಯಾಪಾರ ಮಾಡುವ ಸಲುವಾಗಿ 1889 ರಲ್ಲಿ ನೂರು ವರ್ಷಗಳ ಒಪ್ಪಂದದ ಮೇರೆಗೆ ವರ್ತಕರಿಗೆ ಬಾಡಿಗೆಗೆ ನೀಡಲಾಗಿತ್ತು.

    ಲೀಜ್ ಅವಧಿ ಪೂರ್ಣಗೊಂಡು 25 ವರ್ಷ ಕಳೆದಿದ್ದರೂ ಬಾಡಿಗೆದಾರರು ಆಸ್ತಿಯನ್ನು ನಗರಸಭೆಗೆ ವಾಪಸ್ ನೀಡಿರಲಿಲ್ಲ. ಈ ವಿಷಯವಾಗಿ ನಗರಸಭೆ ಮತ್ತು ಬಾಡಿಗೆದಾರರ ನಡುವೆ ದಶಕಗಳಿಂದ ಹಗ್ಗ ಜಗ್ಗಾಟ ಮುಂದುವರಿದಿತ್ತು. ಇಂದಿನಿಂದ 2 ದಿನಗಳ ಕಾಲ ಕಾರ್ಯಾಚರಣೆ ನಡೆಯಲಿದೆ.

    ಕಾರ್ಯಾಚರಣೆ ಹಿನ್ನೆಲೆಯಲ್ಲಿ ನಗರದ ಎಪಿಎಂಸಿಯಿಂದ ಕೆ.ಎಚ್ ಪಾಟೀಲ ವೃತ್ತ, ಗಾಂಧಿ ವೃತ್ತದಿಂದ ಹಳೆಯ ಜಿಲ್ಲಾಧಿಕಾರಿ ಕಚೇರಿ ವೃತ್ತದವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಭದ್ರತೆಗೆ 500 ಪೊಲೀಸರು, 400 ಜನ ಪೌರಕಾರ್ಮಿಕರ ನೆರವು ಪಡೆಯಲಾಗಿದೆ. ಸುಮಾರು 40 ಜೆಸಿಬಿ, 5 ಇಟಾಚಿ, 70ಕ್ಕೂ ಅಧಿಕ ಟ್ರ್ಯಾಕ್ಟರ್ ಗಳನ್ನು ಬಳಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಮ್. ಜಿ ಹಿರೇಮಠ ಹೇಳಿದರು.

  • ಬಟ್ಟೆ ಗೋಡೌನ್‍ನಲ್ಲಿ ಅಗ್ನಿ ಅವಘಡ- ತಾಯಿ, ಇಬ್ಬರು ಮಕ್ಕಳು ಸಾವು

    ಬಟ್ಟೆ ಗೋಡೌನ್‍ನಲ್ಲಿ ಅಗ್ನಿ ಅವಘಡ- ತಾಯಿ, ಇಬ್ಬರು ಮಕ್ಕಳು ಸಾವು

    ಚಂಢಿಗಡ್: ಬಟ್ಟೆ ಗೋಡೌನ್‍ನಲ್ಲಿ ಅಗ್ನಿ ಅವಘಡ ಸಂಭವಿಸಿ ಇಬ್ಬರು ಮಕ್ಕಳು ಸೇರಿದಂತೆ ಮಹಿಳೆ ಮೃತಪಟ್ಟ ಘಟನೆ ಹರ್ಯಾಣದ ಫರಿದಾಬಾದ್‍ನಲ್ಲಿ ನಡೆದಿದೆ.

    ನೀತಾ, ಯಶಿಕಾ ಹಾಗೂ ಲಕ್ಕಿ ಮೃತ ದುರ್ದೈವಿಗಳು. ಅಗ್ನಿ ಅವಘಡದಿಂದ ಉಸಿರುಗಟ್ಟಿ ಒಂದೇ ಕುಟುಂಬದ ತಾಯಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

    ಕೆಳಮಹಡಿಯಲ್ಲಿ ಇದ್ದ ಬಟ್ಟೆಯ ಗೋಡೌನ್‍ನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಈ ಕಟ್ಟಡದ ಮೊದಲ ಹಾಗೂ ಎರಡನೇಯ ಮಹಡಿಯಲ್ಲಿ ಶಾಲೆ ನಡೆಸಲಾಗುತಿತ್ತು. ಅಲ್ಲದೆ ಶಾಲೆಯ ನಿರ್ವಾಹಕ ಎರಡನೇ ಮಹಡಿಯಲ್ಲಿರುವ ಕೋಣೆಯಲ್ಲಿ ವಾಸಿಸುತ್ತಿದ್ದರು.

    ಗ್ರೌಂಡ್ ಫ್ಲೋರ್ ನಲ್ಲಿ ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿದ ಶಾಲೆಯ ನಿರ್ವಾಹಕ ಅದನ್ನು ನಂದಿಸಲು ಕೆಳಗೆ ಬಂದಿದ್ದಾನೆ. ಮೊದಲು ಗೋಡೌನ್‍ನ ಬೀಗ ತೆಗೆದು ಬಳಿಕ ಕೆಳಗಡೆ ನಿಂತಿದ್ದ ತಮ್ಮ ಕಾರನ್ನು ಹೊರಗೆ ನಿಲ್ಲಿಸಿ ಮತ್ತೆ ಮೇಲೆ ಹೋಗಲು ಯತ್ನಿಸಿದ್ದಾನೆ.

    ನೋಡುವಷ್ಟರಲ್ಲಿ ಬೆಂಕಿ ಮೊದಲನೇ ಹಾಗೂ ಎರಡನೇ ಮಹಡಿ ತಲುಪಿದೆ. ಎರಡನೇ ಮಹಡಿಯಲ್ಲಿ ನೀತಾ ಹಾಗೂ ಅವರ ಇಬ್ಬರ ಮಕ್ಕಳು ಯಶಿಕಾ ಹಾಗೂ ಲಕ್ಕಿ ಇದ್ದರು. ಹೊಗೆ ಹರಡಿಕೊಂಡಿದ್ದ ಕಾರಣ ಮೂವರು ಕೆಳಗೆ ಬರಲು ಸಾಧ್ಯವಾಗಲಿಲ್ಲ.

    ಹೊಗೆಯಿಂದ ಮೂವರು ಪ್ರಜ್ಞೆ ಕಳೆದುಕೊಂಡಿದ್ದಾರೆ. ಬಳಿಕ ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದ್ದಾರೆ. ನಂತರ ಮನೆಯಲ್ಲಿ ಸಿಲುಕಿಕೊಂಡಿದ್ದ ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆಸ್ಪತ್ರೆ ತಲುಪುವಷ್ಟರಲ್ಲಿ ಮೂವರು ಮೃತಪಟ್ಟಿದ್ದಾರೆ.

  • ಒಂದೇ ದಿನದಲ್ಲಿ ರೈತ ಸಂಘದ ಜಾಗ ಮಗಳ ಕಂಪನಿಗೆ -ಸಿಪಿ ಯೋಗೇಶ್ವರ್ ದರ್ಬಾರ್!

    ಒಂದೇ ದಿನದಲ್ಲಿ ರೈತ ಸಂಘದ ಜಾಗ ಮಗಳ ಕಂಪನಿಗೆ -ಸಿಪಿ ಯೋಗೇಶ್ವರ್ ದರ್ಬಾರ್!

    ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ರೈತರ ಸಹಕಾರ ಸಂಘಕ್ಕೆ ಸೇರಿದ ಜಾಗ ಹಾಗೂ ಗೋಡೌನನ್ನು ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಅಕ್ರಮವಾಗಿ ಕಬಳಿಸಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

    ಸಿಪಿ ಯೋಗೇಶ್ವರ್ ತಮ್ಮ ಮಗಳು ನಿಶಾ ಒಡೆತನದ ಡೆಕನ್ ಫೀಲ್ಡ್ ಕಂಪನಿಗೆ 30 ವರ್ಷಕ್ಕೆ ಅಕ್ರಮವಾಗಿ ಜಾಗವನ್ನು ಅಗ್ರಿಮೆಂಟ್ ಮಾಡಿಸಿದ್ದಾರೆ ಎನ್ನಲಾಗಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಸಂರಕ್ಷಣೆಗೆ ಕೋಲ್ಡ್ ಸ್ಟೋರೇಜ್‍ಗೆ ಮೀಸಲಿಟ್ಟಿದ್ದ ಜಾಗಕ್ಕೆ ನಿಶಾ ಒಡೆತನದ ಡೆಕನ್ ಕಂಪನಿ ಕಳೆದ ಏಪ್ರಿಲ್ 11 ರಂದು ಟೆಂಡರ್‍ಗೆ ಅರ್ಜಿ ಸಲ್ಲಿಸಿತ್ತು. ಆದರೆ ಒಂದೇ ದಿನದಲ್ಲಿ ಆಡಳಿತ ಮಂಡಳಿ ತುರ್ತು ಸಭೆ ನಡೆಸಿ ಕಂಪನಿಗೆ ಬಾಡಿಗೆ ಕೊಡಲು ತೀರ್ಮಾನಿಸಿದೆ.

    ಪ್ರತಿ ತಿಂಗಳು ಗೋಡೌನ್‍ಗೆ 80 ಸಾವಿರ ರೂಪಾಯಿ ಮತ್ತು ಪ್ರತಿ ವರ್ಷಕ್ಕೆ ಒಂದು ಎಕರೆ ಖಾಲಿ ನಿವೇಶನಕ್ಕೆ 30 ಸಾವಿರ ರೂಪಾಯಿ ಕೊಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರತಿ ವರ್ಷ ಶೇ.10ರಷ್ಟು ಬಾಡಿಗೆ ಹೆಚ್ಚಿಸುವ ಬದಲು ಪ್ರತಿ ಮೂರು ವರ್ಷಕ್ಕೊಮ್ಮೆ ಕೇವಲ ಶೇ.5ರಷ್ಟು ಬಾಡಿಗೆ ಹೆಚ್ಚಿಸುವ ಒಪ್ಪಂದ ಮಾಡಿಕೊಳ್ಳಲಾಗಿದೆ.

    ಆದರೆ ಯಾವುದೇ ಅಕ್ರಮ ನಡೆದಿಲ್ಲ, ನಡೆದಿದ್ದರೆ ಯಾವುದೇ ತನಿಖೆಗೂ ನಾವು ಸಿದ್ಧರಿದ್ದೇವೆ ಎಂದು ಸಂಘದ ನಿರ್ದೇಶಕರು ಹೇಳುತ್ತಾರೆ.