Tag: ಗೋಡಂಬಿ ಬಿಸ್ಕತ್ತು

  • ಚಹಾದೊಂದಿಗೆ ಸವಿಯಿರಿ ಗೋಡಂಬಿ ಬಿಸ್ಕತ್ತು

    ಚಹಾದೊಂದಿಗೆ ಸವಿಯಿರಿ ಗೋಡಂಬಿ ಬಿಸ್ಕತ್ತು

    ಹಾದ ಸಮಯದಲ್ಲಿ ಹೆಚ್ಚಿನವರಿಗೆ ಬಿಸ್ಕತ್ತು (Biscuits) ಬೇಕೇ ಬೇಕು. ಅದೇ ಬಿಸ್ಕತ್ತನ್ನು ಪ್ರತಿ ಬಾರಿ ಅಂಗಡಿಗಳಿಂದಲೇ ತರುತ್ತೀರಾ? ಒಮ್ಮೆ ಈ ಸುಲಭ ವಿಧಾನದಲ್ಲಿ ಮಾಡಬಹುದಾದ ಗೋಡಂಬಿ ಬಿಸ್ಕತ್ತನ್ನು (Cashew Biscuits) ಮನೆಯಲ್ಲಿ ಮಾಡಿ ನೋಡಿ. ನೀವೇ ನಿಮ್ಮ ಕೈಯಾರೆ ಮಾಡಿದ ಬಿಸ್ಕತ್ತನ್ನು ಚಹಾದೊಂದಿಗೆ ಸವಿದರೆ ಇನ್ನಷ್ಟು ಮಜವಾಗಿರುತ್ತದೆ ಅಲ್ವಾ?

    ಬೇಕಾಗುವ ಪದಾರ್ಥಗಳು:
    ತುಪ್ಪ – ಅರ್ಧ ಕಪ್
    ಪುಡಿ ಸಕ್ಕರೆ – ಅರ್ಧ ಕಪ್
    ಹಾಲಿನ ಪುಡಿ – 2 ಟೀಸ್ಪೂನ್
    ಮೈದಾ – ಮುಕ್ಕಾಲು ಕಪ್
    ಕಸ್ಟರ್ಡ್ ಪುಡಿ – 2 ಟೀಸ್ಪೂನ್
    ಬೇಕಿಂಗ್ ಪೌಡರ್ – ಅರ್ಧ ಟೀಸ್ಪೂನ್
    ಉಪ್ಪು – ಕಾಲು ಟೀಸ್ಪೂನ್
    ಗೋಡಂಬಿ ಪುಡಿ – ಕಾಲು ಕಪ್
    ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
    ಹಾಲು – 2 ಟೀಸ್ಪೂನ್
    ಪುಡಿಮಾಡಿದ ಗೋಡಂಬಿ – 4 ಟೀಸ್ಪೂನ್ ಇದನ್ನೂ ಓದಿ: ರುಚಿಕರವಾದ ಆಲೂಗಡ್ಡೆ ಮಂಚೂರಿಯನ್ ಮಾಡಿ ನೋಡಿದ್ದೀರಾ?

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಟ್ಟಲಿನಲ್ಲಿ ಗಟ್ಟಿಯಾದ ತುಪ್ಪ ತೆಗೆದುಕೊಳ್ಳಿ. (ತುಪ್ಪ ಗಟ್ಟಿ ಮಾಡಲು ಸ್ವಲ್ಪ ಹೊತ್ತು ಪ್ರಿಡ್ಜ್‌ನಲ್ಲಿಡಬಹುದು)
    * ಈಗ ತುಪ್ಪವನ್ನು ಚೆನ್ನಾಗಿ ಬೀಟ್ ಮಾಡಿ, ಬಿಳಿಯಾದ ಕ್ರೀಮ್ ನಂತಾಗುವವರೆಗೆ ಬೀಟ್ ಮಾಡಿ.
    * ಈಗ ಪುಡಿ ಸಕ್ಕರೆ ಮತ್ತು ಹಾಲಿನ ಪುಡಿಯನ್ನು ಸೇರಿಸಿ, 2 ನಿಮಿಷ ಚೆನ್ನಾಗಿ ಮಿಕ್ಸ್ ಆಗುವವರೆಗೆ ಬೀಟ್ ಮಾಡಿ.
    * ಈಗ ಒಂದು ಜರಡಿ ಇಟ್ಟು, ಮೈದಾ, ಕಸ್ಟರ್ಡ್ ಪೌಡರ್, ಬೇಕಿಂಗ್ ಪೌಡರ್ ಹಾಗೂ ಉಪ್ಪು ಹಾಕಿ ಗಾಳಿಸಿ.
    * ಗೋಡಂಬಿ ಪುಡಿ ಹಾಗೂ ಏಲಕ್ಕಿ ಪುಡಿಯನ್ನೂ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನೂ ಓದಿ: ಮಂಗಳೂರು ಬನ್ಸ್ ಮಾಡುವುದು ಹೇಗೆ ಗೊತ್ತಾ?

    * ಈಗ ಹಿಟ್ಟನ್ನು ಸಣ್ಣ ಸಣ್ಣ ಭಾಗಗಳನ್ನಾಗಿ ಮಾಡಿ, ನಿಮಗಿಷ್ಟದ ಬಿಸ್ಕತ್ತಿನ ಆಕಾರ ಕೊಡಿ. ಆಕಾರವನ್ನು ಚೆನ್ನಾಗಿ ಹೊಂದಿಸಲು 10 ನಿಮಿಷ ಫ್ರಿಡ್ಜ್‌ನಲ್ಲಿಡಬಹುದು.
    * ಈಗ ಬಿಸ್ಕತ್ತಿನ ಮೇಲೆ ಹಾಲನ್ನು ಬ್ರಷ್ ಮಾಡಿ, ಅದರ ಮೇಲೆ ಪುಡಿ ಮಾಡಿದ ಗೋಡಂಬಿಯನ್ನು ಚದುರಿಸಿ.
    * ಈಗ ಪ್ರೀ ಹೀಟೆಡ್ ಓವನ್‌ನಲ್ಲಿ 180 ಡಿಗ್ರಿ ಸೆಲ್ಸಿಯಸ್ ತಾಪದಲ್ಲಿ 10-12 ನಿಮಿಷಗಳ ಕಾಲ ಬಿಸ್ಕತ್ತನ್ನು ಬೇಯಿಸಿ.
    * ಬಿಸ್ಕತ್ತುಗಳು ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಓವನ್‌ನಿಂದ ತೆಗೆದು, ಆರಲು ಬಿಡಿ.
    * ಇದೀಗ ಗರಿಗರಿಯಾದ ಗೋಡಂಬಿ ಬಿಸ್ಕತ್ತು ತಯಾರಾಗಿದ್ದು, ಚಹಾದೊಂದಿಗೆ ಸವಿಯಿರಿ. ಇದನ್ನು ಗಾಳಿಯಾಡದ ಡಬ್ಬಿಯಲ್ಲಿಟ್ಟರೆ 1 ವಾರಗಳ ವರೆಗೆ ಬೇಕೆಂದಾಗ ಸವಿಯಬಹುದು.

    Live Tv
    [brid partner=56869869 player=32851 video=960834 autoplay=true]