Tag: ಗೋಡಂಬಿ ಪಲಾವ್

  • ಟೇಸ್ಟಿ ಗೋಡಂಬಿ ಪಲಾವ್ ಮಾಡಿ ಕುಟುಂಬದವರೊಂದಿಗೆ ತಿನ್ನಿ

    ಟೇಸ್ಟಿ ಗೋಡಂಬಿ ಪಲಾವ್ ಮಾಡಿ ಕುಟುಂಬದವರೊಂದಿಗೆ ತಿನ್ನಿ

    ಲಾವ್, ವೆಜ್ ಬಿರಿಯಾನಿ, ಟೊಮೆಟೋ ಬಾತ್ ನಿಮಗೆ ಇಷ್ಟವಾಗುತ್ತದೆ. ಆದರೆ ಪ್ರತಿನಿತ್ಯ ಇವೆಲ್ಲವನ್ನು ತಿಂದು ಬೇಸರವಾಗಿದ್ದರೆ. ಇಂದು ಕೊಂಚ ವಿಭಿನ್ನವಾಗಿ ಅಡುಗೆ ಮಾಡಲು ಬಯಸುತ್ತೀರಾ? ಬೇರೆ ಟೇಸ್ಟ್ ಇರುವ ಆಹಾರ ಸವಿಯಲು ಇಷ್ಟ ಪಡುತ್ತಿರ ಎಂದಾದರೆ ನೀವು ಗೋಡಂಬಿ ಪಲಾವ್ ಮಾಡಲು ಟ್ರೈ ಮಾಡಿ. ಮತ್ತೊಮ್ಮೆ ಇದೇ ಅಡುಗೆ ಮಾಡಿ ಸವಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

    ಬೇಕಾಗುವ ಸಾಮಗ್ರಿಗಳು:
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಗೋಡಂಬಿ- 1 ಕಪ್
    * ಈರುಳ್ಳಿ-1
    * ಕ್ಯಾರೆಟ್- 2
    * ಆಲೂಗಡ್ಡೆ – 1
    * ಕ್ಯಾಪ್ಸಿಕಂ -1
    * ಮೊಸರು- ಅರ್ಧ ಕಪ್
    * ಗರಂ ಮಸಾಲಾ- 1 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಪುದೀನ- ಸ್ವಲ್ಪ
    * ಅಕ್ಕಿ- 2 ಕಪ್
    * ಬೀನ್ಸ್ – ಅರ್ಧ ಕಪ್
    * ಬಟಾಣಿ- ಅರ್ಧ ಕಪ್
    * ಶುಂಠಿ- ಸ್ವಲ್ಪ
    * ಬೆಳ್ಳುಳ್ಳಿ- 1
    * ಹಸಿ ಮೆಣಸಿನಕಾಯಿ- 3
    * ತುಪ್ಪ- ಅರ್ಧ ಕಪ್
    * ಅಡುಗೆ ಎಣ್ಣೆ- ಅರ್ಧ ಕಪ್
    * ದಾಲ್ಚಿನ್ನಿ, ಏಲಕ್ಕಿ, ಲವಂಗ, ಜೀರಿಗೆ- ಸ್ವಲ್ಪ

    ಮಾಡುವ ವಿಧಾನ:
    * ಕೊತ್ತಂಬರಿ ಸೊಪ್ಪು, ಶುಂಠಿ, ಬೆಳ್ಳುಳ್ಳಿ, ಮೆಣಸಿನಕಾಯಿಯನ್ನು ರುಬ್ಬಿಕೊಳ್ಳಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ

    * ಒಂದು ಕುಕ್ಕರ್‌ಗೆ ತುಪ್ಪ, ಅಡುಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ದಾಲ್ಚಿನ್ನಿ, ಏಲಕ್ಕಿ, ಲವಂಗ ಜೀರಿಗೆ ಹಾಕಿ ಚೆನ್ನಾಗಿ ಬೇಯಿಸಬೇಕು.

    * ಈಗ ಅದೇ ಪಾತ್ರೆಗೆ ಈರುಳ್ಳಿ, ಗೋಡಂಬಿ, ಕ್ಯಾರೆಟ್, ಆಲೂಗಡ್ಡೆ, ಬೀನ್ಸ್, ಬಟಾಣಿ, ಕ್ಯಾಪ್ಸಿಕಂ, ಮೊಸರು, ಗರಂ ಮಸಾಲಾ, ಉಪ್ಪು ಮತ್ತು 1 ಕಪ್ ಪುದೀನ ಸೇರಿಸಿ ನೀರು ಕುದಿಯುವವರೆಗೂ ಕಾಯಬೇಕು. ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

    * ನಂತರ ಅಕ್ಕಿ ಸೇರಿಸಿ ಚೆನ್ನಾಗಿ ಬೇಯಿಸಿದರೆ ರುಚಿಯಾದ ಗೋಡಂಬಿ ಪಲಾವ್ ಸವಿಯಲು ಸಿದ್ಧವಾಗುತ್ತದೆ.