Tag: ಗೋಡಂಬಿ

  • ಥೈರಾಯ್ಡ್ ರೋಗಿಗಳು ಮಲಗುವ ಮುನ್ನ ಈ ಆಹಾರ ಸೇವಿಸಿ

    ಥೈರಾಯ್ಡ್ ರೋಗಿಗಳು ಮಲಗುವ ಮುನ್ನ ಈ ಆಹಾರ ಸೇವಿಸಿ

    ತ್ತೀಚಿನ ದಿನಗಳಲ್ಲಿ ಯುವ ಜನರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಧುನಿಕ ಜೀವನಶೈಲಿ ಮತ್ತು ಕೆಲಸದ ಒತ್ತಡದಿಂದಾಗಿ ಅನೇಕರು ಥೈರಾಯ್ಡ್ (Thyroid) ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಆದರೆ ಆಹಾರ ಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಥೈರಾಯ್ಡ್ ಕಡಿಮೆ ಮಾಡಿಕೊಳ್ಳಬಹುದು. ರಾತ್ರಿ ಮಲಗುವ ವೇಳೆ ಈ ಆಹಾರಗಳನ್ನು ಸೇವಿಸುವುದರಿಂದ ಒಳ್ಳೆಯ ನಿದ್ದೆಯೂ ಬರುತ್ತದೆ ಜೊತೆಗೆ ಥೈರಾಯ್ಡ್ ಸಮಸ್ಯೆಯು ಸ್ವಲ್ಪ ಮಟ್ಟಿಗೆ ದೂರವಾಗುತ್ತದೆ.

    4-5 ಗೋಡಂಬಿ ಸೇವಿಸಿ: ಗೋಡಂಬಿಯು (Cashews) ಖನಿಜ ಸೆಲೆನಿಯಮ್ ಹೊಂದಿರುತ್ತದೆ. ಇದು ಥೈರಾಯ್ಡ್  ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ ಆಕ್ಸಿಡೇಟಿವ್ ಒತ್ತಡದಿಂದ ಥೈರಾಯ್ಡ್ ಅಂಗಾಂಶವನ್ನು ರಕ್ಷಿಸುತ್ತದೆ. ಇದರಿಂದಾಗಿ ಪ್ರತಿನಿತ್ಯ ನೆನೆಸಿದ 4-5 ಗೋಡಂಬಿಗಳನ್ನು ಸೇವಿಸಿ.

    ತೆಂಗಿನ ಕಾಯಿ: ಇದರಲ್ಲಿ ಹೆಚ್ಚಿನ ಮಟ್ಟದ ಕೊಬ್ಬಿನಾಮ್ಲಗಳನ್ನು ಹೊಂದಿದೆ. ತೆಂಗಿನ ಕಾಯಿಯು ಚಯಾಪಚಯ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಜೊತೆಗೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಸುಧಾರಿತ ಥೈರಾಯ್ಡ್ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಇದರಿಂದಾಗಿ ಮಲಗುವ ಮುನ್ನ 4 – 5 ತೆಂಗಿನ ಚೂರುಗಳನ್ನು ತಿನ್ನುವುದರಿಂದ ಥೈರಾಯ್ಡ್‌ ನಿಯಂತ್ರಣಕ್ಕೆ ಬರುತ್ತದೆ.

    ಚೀಯಾ ಬೀಜಗಳು: 1 ಚಮಚದಷ್ಟು ನೆನಸಿದ ಚೀಯಾ ಬೀಜಗಳನ್ನು ಸೇವಿಸುವುದರಿಂದ ಥೈರಾಯ್ಡ್ ನಿಯಂತ್ರಣದಲ್ಲಿರುತ್ತದೆ. ಇದರಲ್ಲಿ ಒಮೆಗಾ – 3 ಕೊಬ್ಬಿನಾಮ್ಲಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದರಿಂದಾಗಿ ಥೈರಾಯ್ಡ್ ಗ್ರಂಥಿಯಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಖಿನ್ನತೆಯಿಂದ ಬಳಲುತ್ತಿದ್ದೀರಾ ಹಾಗಾದ್ರೆ ಈ ಆಹಾರ ಸೇವಿಸಿ

    ಕುಂಬಳಕಾಯಿ ಬೀಜಗಳು: ಹುರಿದ ಕುಂಬಳ ಕಾಯಿ ಬೀಜಗಳು ಝಿಂಕ್‍ನ ಸಮೃದ್ಧ ಮೂಲವಾಗಿದೆ. ಇದು ಥೈರಾಯ್ಡ್ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಕುಂಬಳಕಾಯಿ ಬೀಜಗಳು ಟ್ರಿಪ್ಟೋಫಾನ್‍ನ ನೈಸರ್ಗಿಕ ಮೂಲವಾಗಿದೆ. ಇದರಲ್ಲಿ ನಿದ್ರೆಯನ್ನು ಉತ್ತೇಜಿಸುವ ಅಮೈನೋ ಆಮ್ಲವಿದೆ. ಸರಿಯಾಗಿ ನಿದ್ದೆ ಮಾಡುವುದರಿಂದ ಥೈರಾಯ್ಡ್ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಇದನ್ನೂ ಓದಿ: ಬೇಸಿಗೆಯಲ್ಲಿ ಕಬ್ಬಿನ ಹಾಲನ್ನು ಕುಡಿಯೋದ್ರಿಂದ ಅದ್ಭುತ ಪ್ರಯೋಜನ

  • ಗೋಡಂಬಿ ತಿನ್ನಲು ಎಷ್ಟು ರುಚಿಕರವೋ ಅಷ್ಟೇ ಆರೋಗ್ಯಕ್ಕೂ ಒಳ್ಳೆಯದು

    ಗೋಡಂಬಿ ತಿನ್ನಲು ಎಷ್ಟು ರುಚಿಕರವೋ ಅಷ್ಟೇ ಆರೋಗ್ಯಕ್ಕೂ ಒಳ್ಳೆಯದು

    ಗೋಡಂಬಿಯು ನೋಡಲು ಚಿಕ್ಕದಾಗಿದ್ದರೂ, ಅದನ್ನು ತಿನ್ನಲು ಅಷ್ಟೇ ರುಚಿಕರವಾಗಿರುವಾಗಿರುತ್ತೆ. ಗೋಂಡಬಿಯನ್ನು ಚಿಕ್ಕ ಮಕ್ಕಳಿಂದ ವಯಸ್ಸಾದವರವರೆಗೂ ಇಷ್ಟಪಡುತ್ತಾರೆ ಎಂದರೆ ತಪ್ಪಾಗಲಾರದು. 3-4 ಗೋಡಂಬಿಯನ್ನು ಸೇವಿಸುವುದರಿಂದ ಅನೇಕ ಲಾಭಗಳಿವೆ.

    ತೂಕ ಇಳಿಕೆ: ಪ್ರತಿನಿತ್ಯ ಗೋಡಂಬಿಯನ್ನು ತಿನ್ನುವುದರಿಂದ ತೂಕವನ್ನು ಇಳಿಸಲು ಸಹಾಯವಾಗುತ್ತದೆ. ನಿಯಮಿತವಾಗಿ ಗೋಡಂಬಿಯನ್ನು ಸೇವಿಸಬೇಕು. ಇದರಿಂದಾಗಿ ಚಯಾಪಚಯಯವನ್ನು ವೇಗಗೊಳಿಸಲು ಹಾಗೂ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ತೂಕವನ್ನು ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಇದು ಉತ್ತಮ ತಿಂಡಿಯಾಗಿದೆ.

    ಕಾಂತಿಯುಕ್ತ ಚರ್ಮ: ಗೋಡಂಬಿಯನ್ನು ತಿನ್ನುವುದರಿಂದ ನಿಮ್ಮ ಚರ್ಮದ ಕಾಂತಿ ಹೆಚ್ಚಾಗುತ್ತದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಗೊಂಡಬಿಯನ್ನು ತಿನ್ನುವುದಷ್ಟೇ ಅಲ್ಲದೇ ಗೋಡಂಬಿ ಎಣ್ಣೆಯನ್ನು ಹಚ್ಚುವುದರಿಂದ ನಿಮ್ಮ ಚರ್ಮವು ಕಾಂತಿಯುಕ್ತವಾದ ಹೊಳಪನ್ನು ನೀಡುತ್ತದೆ. ಈ ಎಣ್ಣೆಯಲ್ಲಿ ಮೆಗ್ನೀಷಿಯಮ್, ಕಬ್ಬಿಣ ಹಾಗೂ ರಂಜಕಗಳು ಹೇರಳವಾಗಿದೆ. ಇದನ್ನೂ ಓದಿ: ಅನೇಕ ರೋಗಗಳಿಗೆ ಒಣ ಶುಂಠಿ ರಾಮಬಾಣ

    ಕಣ್ಣಿಗೆ ಒಳ್ಳೆಯದು: ಗೋಡಂಬಿಯಲ್ಲಿ ಕಂಡು ಬರುವ ಲುಟೀನ್ ಹಾಗೂ ಇತರೆ ಉತ್ಕರ್ಷಣ ನಿರೋಧಕಗಳ ಹೆಚ್ಚಿನ ಸಾಂದ್ರಯತೆಯಿಂದಾಗಿ ಕಣ್ಣುಗಳು ಹಾನಿಯಾಗುವುದನ್ನು ತಪ್ಪಿಸುತ್ತದೆ. ಗೋಡಂಬಿಯನ್ನು ನಿಯಮಿತವಾಗಿ ತಿನ್ನುವುದರಿಂದ ಅದು ಸೂರ್ಯನ ಕಿರಣಗಳ ಪ್ರಭಾವದಿಂದ ನಿಮ್ಮ ಕಣ್ಣನ್ನು ರಕ್ಷಿಸುತ್ತದೆ.

    ಮೈಗ್ರಿನ್ ಕಡಿಮೆ ಆಗುತ್ತೆ: ಮೆಗ್ನೀಷಿಯಮ್ ಕೊರತೆಯಿಂದಾಗಿ ಆರೋಗ್ಯದಲ್ಲಿ ವಿವಿಧ ಸಮಸ್ಯೆಗಳು ಉಂಟಾಗುತ್ತದೆ. ಅದರಲ್ಲೂ ಯುವಜನರು ಹೆಚ್ಚಾಗಿ ರಕ್ತದೊತ್ತಡ ಹಾಗೂ ಮೈಗ್ರಿನ್‍ನಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯನ್ನು ನಿವಾರಿಸಲು ಗೋಡಂಬಿಯನ್ನು ಸೇವಿಸಿ. ಇದರ ಜೊತೆಗೆ ಗೋಡಂಬಿಯು ವಿಟಮಿನ್‍ಗಳ ಮೂಲವಾಗಿದೆ. ಇದನ್ನೂ ಓದಿ: ಬೇಸಿಗೆಯಲ್ಲಿ ಕಾಮಕಸ್ತೂರಿ ಬೀಜ ಬಲು ಆರೋಗ್ಯಕಾರಿ

    ಕ್ಯಾನ್ಸರ್‌ಗೆ ತಡೆ: ಗೋಡಂಬಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯವಾಗಿದೆ. ಗೋಡಂಬಿಯಲ್ಲಿರುವ ಪ್ರೋಆಂಥೋಸಯಾನಿಡಿನ್‍ಗಳು ದೇಹದಲ್ಲಿನ ಕ್ಯಾನ್ಸರ್ ಕೋಶಗಳ ಪುನರಾವರ್ತನೆಯನ್ನು ತಡೆಯಲು ಸಹಾಯ ಮಾಡುತ್ತದೆ.

    ಆರೋಗ್ಯಕರ ಹೃದಯ: ಗೋಡಂಬಿಯಲ್ಲಿರುವ ಮೊನೊಸಾಚುರೇಟೆಡ್ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ರಕ್ತನಾಳಗಳನ್ನು ಆರೋಗ್ಯಕರವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಗೋಡಂಬಿಯಾಕಾರದ ಮೊಟ್ಟೆ ಇಟ್ಟ ಕೋಳಿ

    ಗೋಡಂಬಿಯಾಕಾರದ ಮೊಟ್ಟೆ ಇಟ್ಟ ಕೋಳಿ

    ಮಂಗಳೂರು: ಕೋಳಿಯೊಂದು ಗೋಡಂಬಿಯಾಕಾರದ ಮೊಟ್ಟೆ ಇಟ್ಟಿರುವ ವಿಚಿತ್ರ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯಲ್ಲಿ ನಡೆದಿದೆ.

    ಬೆಳ್ತಂಗಡಿ ತಾಲೂಕಿನ ಲಾಯಿಲ ಸಮೀಪ ಘಟನೆ ನಡೆದಿದ್ದು, ಲಾಯಿಲ ಗ್ರಾಮದ ಬೇಲಾಜೆ ಮನೆಯ ಪ್ರಶಾಂತ್ ಮನೆಯಲ್ಲಿ ಕೋಳಿ ಸಾಕಿದ್ದರು. ಈ ಕೋಳಿ ಗೊಡಂಬಿಯಾಕಾರದಲ್ಲಿ ಮೊಟ್ಟೆಗಳನ್ನು ಇಟ್ಟಿದೆ. ಇದನ್ನೂ ಓದಿ: ನಾಯಿ ಕಚ್ಚಿದಕ್ಕೆ 4 ಲಕ್ಷ ರೂ. ದಂಡ ವಿಧಿಸಿದ ಗ್ರಾಹಕರ ವೇದಿಕೆ 

    ಸುದ್ದಿ ತಿಳಿದ ಗ್ರಾಮಸ್ಥರು ಆಶ್ಚರ್ಯಗೊಂಡಿದ್ದು, ಇದನ್ನು ನೋಡಲು ಮುಗಿಬಿದ್ದಿದ್ದಾರೆ. ಕೋಳಿ ಈವೆರಗೂ ಹತ್ತು ಗೋಡಂಬಿ ಆಕಾರದ ಮೊಟ್ಟೆ ಇಟ್ಟಿದೆ.

  • ಬರದನಾಡಿನಲ್ಲಿ ಗೋಡಂಬಿ, ಮಾವು ಬೆಳೆದು ಸೈ ಎನಿಸಿಕೊಂಡ ಪದವೀಧರ ರೈತ

    ಬರದನಾಡಿನಲ್ಲಿ ಗೋಡಂಬಿ, ಮಾವು ಬೆಳೆದು ಸೈ ಎನಿಸಿಕೊಂಡ ಪದವೀಧರ ರೈತ

    ಗದಗ: ಬಂಜರು ಭೂಮಿ, ಅದರಲ್ಲೂ ಬರದ ಬಿಸಿಲುನಾಡಿನಲ್ಲಿ ಗೋಡಂಬಿ ಬೆಳೆ ಬೆಳೆಯುವುದು ತುಂಬಾನೆ ಕಷ್ಟ. ಆದರೆ ಛಲದಂಕ ಮಲ್ಲನಂತೆ ಜಿಲ್ಲೆಯ ಪದವೀಧರ ರೈತರೊಬ್ಬರು ಬರದನಾಡಲ್ಲೂ ಗಿಣಿಯಂತೆ ಗೋಡಂಬಿ, ಮಾಗಿಯ ಮಾವು ಬೆಳೆದು ಸೈ ಎನಿಸಿಕೊಂಡಿದ್ದಾರೆ.

    ಜಿಲ್ಲೆಯ ಹುಲಕೋಟಿ ಗ್ರಾಮದ ರೈತ ಸುಭಾಸಗೌಡ ಆಧಪ್ಪಗೌಡ್ರ ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಆಗದು ಕೆಲಸವು ಮುಂದೆ ಎಂಬ ಮಾತು ಅರೆತು ಕೃಷಿನಲ್ಲಿ ಸಾಧನೆ ಮಾಡುತ್ತಿದ್ದಾರೆ. ಗದಗ ಜಿಲ್ಲೆ ಬರದನಾಡಲ್ಲಿ ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಸಹಾಯದೊಂದಿಗೆ ಹನಿ ನೀರಾವರಿ ಮೂಲಕ ಸುಭಾಸಗೌಡ ಅವರು ಭರ್ಜರಿ ಗೋಡಂಬಿ ಬೆಳೆ ಜೊತೆಗೆ ಹಚ್ಚ ಹಸಿರುನಿಂದ ಕಂಗೊಳಿಸುವ ಮಾಗಿಯ ಮಾವು ಬೆಳೆದಿದ್ದಾರೆ.

    ರೈತ ಸುಭಾಸಗೌಡ ಅವರು ಬಿ.ಕಾಂ ಪದವೀಧರರಾಗಿದ್ದರೂ ಕೃಷಿನಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಛಲದಿಂದ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ. ಸುಭಾಸಗೌಡ ಅವರು ಒಟ್ಟು 27 ಎಕರೆ ಜಮೀನಿನಲ್ಲಿ ಹನಿ ನೀರಾವರಿ ಅಳವಡಿಸಿಕೊಂಡಿದ್ದು, ಅದರಲ್ಲಿ 19 ಎಕರೆ ಗೋಡಂಬಿ, 8 ಎಕರೆ ಮಾಗಿಯ ಮಾವು ಬೆಳೆದಿದ್ದಾರೆ.

    ಸುಭಾಸಗೌಡ ಅವರು ಮೊದಮೊದಲು ವಾಣಿಜ್ಯ ಹಾಗೂ ಮಿಶ್ರ ಬೆಳೆ ಬೆಳೆದು ಸಮಯಕ್ಕೆ ಸರಿಯಾಗಿ ಮಳೆಯಾಗದೇ ಬರಗಾಲದಿಂದ ಸಾಲಕ್ಕೆ ತುತ್ತಾಗಿದ್ದರು. ಅತಿವೃಷ್ಠಿ, ಅನಾವೃಷ್ಠಿ, ಬರಗಾಲದಿಂದ ಬೆಳೆ ಬಾರದೆ ಕೈ ಸುಟ್ಟುಕೊಳ್ಳುತ್ತಿದ್ದರು. ಈಗ ತೋಟಗಾರಿಕೆ ಬೆಳೆ ಬೆಳೆಯುವ ಮೂಲಕ ಅಧಿಕ ಲಾಭದಿಂದ ಹಸನಾದ ಬದುಕು ಸಾಗಿಸುತ್ತಿದ್ದಾರೆ. ಪರಿಶ್ರಮದಿಂದ ಬೆಳೆದ ಗೋಡಂಬಿ ಬೆಳೆ ಉತ್ತರ ಕರ್ನಾಟಕದ ರೈತರಿಗೆ ಈಗ ಮಾದರಿಯಾಗಿದೆ.

    ಹುಲಕೋಟಿ ಗ್ರಾಮದ ಸುಭಾಸಗೌಡ ಅವರು ಕಳೆದ 4 ವರ್ಷಗಳಿಂದ ಗೋಡಂಬಿ ಹಾಗೂ 11 ವರ್ಷಗಳಿಂದ ಮಾವು ಬೆಳೆಯುತ್ತಿದ್ದಾರೆ. ವಿ.ಎಲ್ ಫೋರ್, ವಂಗೋರ್ಲಾ, ಸಿಲ್ವರ್-ಗೋಲ್ಡ್ ಎಂಬ ಹೊಸ ತಳಿಯ ಗೋಡಂಬಿ ಬೆಳೆಯುತ್ತಿದ್ದಾರೆ. ಕೃಷಿ ಇಲಾಖೆಯಿಂದ 1 ಹೆಕ್ಟೇರ್‍ಗೆ 18 ಸಾವಿರ ರೂ.ದಂತೆ 2 ಹೆಕ್ಟೇರ್‍ಗೆ 36 ಸಾವಿರ ರೂ. ಸಹಾಯ ಧನದಿಂದ ಈ ಬೆಳ ಬೆಳೆಯಲಾರಂಭಿಸಿದ್ದಾರೆ. 19 ಎಕರೆಯಲ್ಲಿ ಒಟ್ಟು 3,600 ಗೋಡಂಬಿ, 8 ಎಕರೆಯಲ್ಲಿ ನಾಲ್ಕು ನೂರಕ್ಕೂ ಅಧಿಕ ಮಾವಿನ ಸಸಿಗಳ ನಾಟಿಮಾಡಿ ಈಗ ಫಸಲು ಪಡೆಯುತ್ತಿದ್ದಾರೆ. ಕಳೆದ ಮೂರ್ನಾಲ್ಕು ವರ್ಷದಲ್ಲಿ ಸುಮಾರು 20 ಲಕ್ಷ ರೂಪಾಯಿ ಖರ್ಚಾಗಿದೆ. ಈಗ ಎಕರೆಗೆ 1 ಲಕ್ಷ ರೂಪಾಯಿ ನಿವ್ವಳ ಲಾಭ ಬರುವ ನಿರೀಕ್ಷೆಯಲ್ಲಿದ್ದಾರೆ.

    ಬಿಸುಲು ನಾಡು, ಬಂಜರು ಭೂಮಿಯಲ್ಲಿ ಗೊಡಂಬಿ ಬೆಳೆಯುವುದು ತುಂಬಾನೆ ವಿರಳ. ಈಗ ಈತ ಬೆಳೆದಿರುವ ಬೆಳೆನೋಡಿ ತೋಟಗಾರಿಕೆ ಹಾಗೂ ಕೃಷಿ ಅಧಿಕಾರಿಗಳಿಗೂ ಹುಬ್ಬೆರುವಂತಾಗಿದೆ. ಗದಗ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರದೀಪ್ ಎಲ್.ಕೆ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿ ಜಮೀನಿಗೆ ಭೇಟಿ ನೀಡಿ ಬೆಳೆ ವಿಕ್ಷಣೆ ಮಾಡಿದರು.

  • 16 ಲಕ್ಷ ರೂ. ಮೌಲ್ಯದ ಗೋಡಂಬಿ ಕದ್ದ ಖರ್ತನಾಕ್ ಕಳ್ಳ ಅರೆಸ್ಟ್

    16 ಲಕ್ಷ ರೂ. ಮೌಲ್ಯದ ಗೋಡಂಬಿ ಕದ್ದ ಖರ್ತನಾಕ್ ಕಳ್ಳ ಅರೆಸ್ಟ್

    ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ ಸುಮಾರು 16 ಲಕ್ಷ ರೂ. ಮೌಲ್ಯದ ಗೋಡಂಬಿ ಕಳ್ಳತನ ಮಾಡಿದ್ದ ಕಳ್ಳನನ್ನು ನಗರದ ವೈಯಾಲಿಕವಲ್ ಪೊಲೀಸರು ಬಂಧಿಸಿದ್ದಾರೆ.

    ಪ್ರಶಾಂತ್ ತಾನಾಜಿ ಪಾಟೀಲ್ ಬಂಧಿತ ಆರೋಪಿ. ಕಳೆದ ಎರಡು ದಿನಗಳ ಹಿಂದೆ ವೈಯಾಲಿಕಾವಲ್‍ನ ಓಂ ಶ್ರೀ ಟ್ರೇಡರ್ಸ್ ಅಂಗಡಿಯ ಮಾಲೀಕನಿಗೆ ಸೇರಿದ್ದ ಗೋಡಂಬಿ ಕಳ್ಳತನ ಮಾಡಿದ್ದ. ಆರೋಪಿ ಪ್ರಶಾಂತ್ ಕದ್ದ ಗೋಡಂಬಿ ಬರೋಬ್ಬರಿ 1,980 ಕೆಜಿ ಹೊಂದಿದ್ದು, ಸುಮಾರು 16 ಲಕ್ಷ ರೂ. ಮೌಲ್ಯ ಹೊಂದಿತ್ತು.

    ಓಂ ಶ್ರೀ ಟ್ರೇಡರ್ಸ್ ಮಾಲೀಕನ ಬಳಿ ಕೆಲಸ ಮಾಡಿಕೊಂಡಿದ್ದ ಆರೋಪಿ ಪ್ರಶಾಂತ್ ತಾನಾಜಿ ನಕಲಿ ಕೀ ಬಳಸಿ ಗೋಡಂಬಿ ಕಳ್ಳತನ ಮಾಡಿದ್ದ. ಬಳಿಕ ಕದ್ದ ಗೋಡಂಬಿಯನ್ನು ಸ್ನೇಹಿತನ ಮನೆಯಲ್ಲಿ ಅಡಗಿಸಿಟ್ಟು ಪರಾರಿಯಾಗಿದ್ದ. ಈ ಕುರಿತು ದೂರು ಸ್ವೀಕರಿಸಿದ ಪೊಲೀಸರು ಅನುಮಾನಗೊಂಡು ತನಿಖೆ ನಡೆಸಿದ ವೇಳೆ ಆರೋಪಿಯ ಕೃತ್ಯ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಸದ್ಯ ವೈಯಾಲಿಕವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv